Author: AIN Author

ಬೆಂಗಳೂರು: KSRTC ವತಿಯಿಂದ ನೂತನ 100 ಅಶ್ವಮೇಧ ಕ್ಲಾಸ್ ಬಸ್ (Ashwamedha Classic Bus) ಲೋಕಾರ್ಪಣೆಗೊಳಿಸಿದರು. ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ನೂತನ ಬಸ್‌ಗಳಿಗೆ ಹಸಿರು ನಿಶಾನೆ ತೋರಿದರು. ಏಪ್ರಿಲ್ ವೇಳೆಗೆ 800 ಅಶ್ವಮೇಧ ಕ್ಲಾಸಿಕ್ ಬಸ್‌ಗಳು ರಸ್ತೆಗೆ ಇಳಿಯಲಿದ್ದು, ಸೋಮವಾರ (ಫೆ.5) ಮೊದಲ ಹಂತದಲ್ಲಿ 100 ಬಸ್‌ಗಳಿಗೆ ಚಾಲನೆ ನೀಡಿದ್ದಾರೆ. ಅಶ್ವಮೇಧ ಕ್ಲಾಸಿಕ್ ಬಸ್ ವಿಶೇಷತೆ ಏನು? * ಎಕ್ಸ್‌ಪ್ರೆಸ್ (Express Bus) ಹೆಸರಿನಲ್ಲಿ ಬಸ್ ಆಪರೇಟ್ ಆಗಲಿದೆ. ವಾಹನದ ಎತ್ತರ 3.4 ಮೀಟರ್ ಇದೆ. 50ಕ್ಕೂ ಹೆಚ್ಚು ಆಸನಗಳನ್ನ ಒಳಗೊಂಡಿದೆ. ಎತ್ತರದ, ಉತ್ತಮ ಗುಣಮಟ್ಟದ ಕುಷನ್ ಮತ್ತು ರೆಕ್ಸಿನ್ ಒಳಗೊಂಡ ಆಸನಗಳಿವೆ. ಪ್ರತಿ ಆಸನದ ಹಿಂಬದಿಯಲ್ಲಿ ಮ್ಯಾಗ್ ಜಿನ್ ಹಾಗೂ ವಾಟರ್ ಪೌಚ್‌ನ ಸೌಲಭ್ಯ ಒಳಗೊಂಡಿದೆ. ವಿಶಾಲವಾದ ವಾಹನದ ಮುಂದಿನ ಹಾಗೂ ಹಿಂದಿನ ಗಾಜು. ವಿಶಾಲವಾದ ಪ್ರಯಾಣಿಕರ ಕಿಟಕಿ ಫ್ರೇಮ್ ಹಾಗೂ ಮೇಲಿನ ಗಾಜು. ಮೇಲ್ಚಾವಣಿಯಲ್ಲಿ 2 ಸಾಲು ಗ್ರಾಬ್ ರೈಲ್. ಬಸ್ಸಿನ ಹಿಂದೆ ಮತ್ತು…

Read More

ಲಕ್ನೋ: ಪಾಕಿಸ್ತಾನದ ಗುಪ್ತಚರ ಸಂಸ್ಥೆ ISI ಪರ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಮಾಸ್ಕೋದಲ್ಲಿರುವ ಭಾರತೀಯ ರಾಜಭಾರಿ ಕಚೇರಿಯ ಉದ್ಯೋಗಿಯೊಬ್ಬನನ್ನ ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ATS) ಬಂಧಿಸಿದೆ. ಬೇಹುಗಾರಿಕೆ ನಡೆಸುತ್ತಿದ್ದ ವ್ಯಕ್ತಿಯನ್ನು ಮೀರತ್‌ನಲ್ಲಿ ಬಂಧಿಸಲಾಗಿದ್ದು, ಸತ್ಯೇದ್ರ ಸಿವಾಲ್, 2021 ರಿಂದ ಮಾಸ್ಕೋದಲ್ಲಿರುವ (Moscow) ಭಾರತೀಯ ರಾಯಭಾರ ಕಚೇರಿಯಲ್ಲಿ ಭಾರತ ಆಧಾರಿತ ಭದ್ರತಾ ಸಹಾಯಕರಾಗಿ ಕೆಲಸ ಮಾಡುತ್ತಿದ್ದ. ಐಎಸ್‌ಐ ಹ್ಯಾಂಡ್ಲರ್‌ಗಳು ಭಾರತೀಯ ವಿದೇಶಾಂಗ ಸಚಿವಾಲಯದ ಉದ್ಯೋಗಿಗಳನ್ನ ತಮ್ಮತ್ತ ಸೆಳೆಯುತ್ತಿದ್ದು, ಅದಕ್ಕಾಗಿ ಹಣದ ಆಮಿಷ ತೋರಿಸುತ್ತಿದ್ದಾರೆ ಎಂಬ ಸೂಕ್ಷ್ಮ ಮಾಹಿತಿ ಭಾರತೀಯ ಸೇನೆ ಹಾಗೂ ಗುಪ್ತಚರ ಇಲಾಖೆಗೆ ಲಭ್ಯವಾಗಿತ್ತು. ಈ ಬಗ್ಗೆ ಮಾಹಿತಿ ಪಡೆದಿದ್ದ ಭಯೋತ್ಪಾದನಾ ನಿಗ್ರಹ ದಳ ರಹಸ್ಯವಾಗಿಯೇ ತನ್ನ ಕಾರ್ಯಾಚರಣೆ ಮುಂದುವರಿಸಿತ್ತು. ಉತ್ತರ ಪ್ರದೇಶ (Uttar Pradesh) ಹಾಪುರ್‌ನ ಶಹಮಹಿಯುದ್ದೀನ್‌ಪುರ ಗ್ರಾಮದ ನಿವಾಸಿಯಾಗಿದ್ದ ಸತೇಂದ್ರ ಸಿವಾಲ್, ಬೇಹುಗಾರಿಕೆ ಜಾಲದ ಪ್ರಮುಖ ರುವಾರಿಯಾಗಿದ್ದ. ಮಾಸ್ಕೋದಲ್ಲಿರುವ ತನ್ನ ಭಾರತೀಯ ರಾಯಭಾರಿ ಕಚೇರಿಯಲ್ಲಿ ತನ್ನ ಸ್ಥಾನವನ್ನು ದುರ್ಬಕೆ ಮಾಡಿಕೊಂಡು ಗೌಪ್ಯ ದಾಖಲೆಗಳನ್ನ ಹೊರ…

Read More

ಬೆಂಗಳೂರು: ಬಿಜೆಪಿ ನಾಯಕರ ವಿರುದ್ಧ ಡಿಸಿಎಂ ಡಿ.ಕೆ.ಶಿವಕುಮಾರ್​ ಕಿಡಿಕಾರಿದ್ದು, ಈ ದೇಶಕ್ಕೆ ವಿದ್ಯಾವಂತರು ಇಲ್ಲದಿದ್ದರೂ‌ ನಡೆಯುತ್ತೆ, ಆದ್ರೆ ಪ್ರಜ್ಞಾವಂತರು ಇರಲೇಬೇಕು. ಈಗ ಕೇಂದ್ರದಲ್ಲಿ ಸರ್ಕಾರ ಬಿಜೆಪಿಯವರದ್ದು ಇದೇ ಪರಿಸ್ಥಿತಿಯಾಗಿದೆ, ನೀವು ರಾಜ್ಯಕ್ಕೆ ಏನ್ ಕೊಟ್ರಿ ಎಂದು ಬಿಜೆಪಿ ನಾಯಕರ ವಿರುದ್ಧ ಡಿಸಿಎಂ ಡಿ.ಕೆ.ಶಿವಕುಮಾರ್​ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, 27 ಸಂಸದರು ಇದ್ದರು ಬರಗಾಲ ಕುರಿತು ಒಂದು ಸಭೆ ಮಾಡಲಿಲ್ಲ. ಮೊದಲ ಸಲ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ರೈತರ ಖಾತೆಗೆ ಎರಡು ಸಾವಿರ ಹಣ ಹಾಕಿದ್ದೀವಿ. ನಾವು ದೆಹಲಿಯಲ್ಲಿ ಪ್ರತಿಭಟನೆ ಮಾಡಲು ಹೋಗೋದನ್ನು ಬಿಜೆಪಿಯವರಿಗೆ ತಡೆದುಕೊಳ್ಳಲು ಆಗ್ತಿಲ್ಲ. ಕರ್ನಾಟಕಕ್ಕೆ ಅನ್ಯಾಯ ಆಗಿರೋದರಲ್ಲಿ ಅನುಮಾನವೇ ಇಲ್ಲ. ನಾವು 51 ಸೀಟು ಗೆದ್ದಿದ್ದೆವು, ನೀವು 300 ಸೀಟು ಗೆದ್ದಿದ್ದೀರಿ, ಈ ರಾಜ್ಯಕ್ಕೆ ಏನು ಮಾಡಿದ್ದೀರಿ? ಬೇರೇನೂ ಬೇಡ ನಮ್ಮ ನೀರಾವರಿ ಇಲಾಖೆಗೆ ಏನ್ ಕೊಟ್ಟಿದ್ದೀರಿ? ನಮ್ಮ ರಾಜ್ಯದ ಪರ ನಾವು ದನಿ ಎತ್ತಲೇಬೇಕು. ಬಿಜೆಪಿ ಸಂಸದರು, ದಳ ಸಂಸದರೂ ಬಂದು ನಮ್ಮ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಿ ಅಂತ…

Read More

ನವದೆಹಲಿ: ಕಳೆದ ವರ್ಷ ರಾಹುಲ್‌ ಗಾಂಧಿ (Rahul Gandhi) ನಡೆಸಿದ್ದ ಭಾರತ್‌ ಜೋಡೋ (Bharat Jodo) ಯಾತ್ರೆಗೆ ಕಾಂಗ್ರೆಸ್‌ ಬರೋಬ್ಬರಿ 71.8 ಕೋಟಿ ರೂ. ಖರ್ಚು ಮಾಡಿದೆ. ಕಾಂಗ್ರೆಸ್‌ (Congress) ಪಕ್ಷ ಚುನಾವಣಾ ಆಯೋಗಕ್ಕೆ 2022-23ನೇ ಹಣಕಾಸು ವರ್ಷದ ವಾರ್ಷಿಕ ಲೆಕ್ಕಪರಿಶೋಧನಾ ವರದಿ ಸಲ್ಲಿಸಿದೆ. 2022- 23ನೇ ಸಾಲಿನಲ್ಲಿ ಕಾಂಗ್ರೆಸ್‌ 452 ಕೋಟಿ ರೂ. ಆದಾಯಗಳಿಸಿದ್ದರೆ 467 ಕೋಟಿ ರೂ. ಖರ್ಚು ಮಾಡಿದೆ. ತಮಿಳುನಾಡಿನ ಕನ್ಯಾಕುಮಾರಿಯಿಂದ 2022ರ ಸೆಪ್ಟೆಂಬರ್ 7 ರಂದು ಆರಂಭಗೊಂಡ ಯಾತ್ರೆ 4 ಸಾವಿರ ಕಿಲೋಮೀಟರ್‌ ಕ್ರಮಿಸಿ ಜನವರಿ 30 ರಂದು ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಕೊನೆಗೊಂಡಿತ್ತು. ಒಟ್ಟು 145 ದಿನಗಳ ಯಾತ್ರೆಯ ವೆಚ್ಚವನ್ನು ಪರಿಗಣಿಸಿದರೆ ದಿನಕ್ಕೆ ಅಂದಾಜು 50 ಲಕ್ಷ ರೂ. ಮತ್ತು ಪ್ರತಿ ಕಿ.ಮೀಗೆ ಅಂದಾಜು 1.59 ಲಕ್ಷ ರೂ. ಹಣವನ್ನು ಕಾಂಗ್ರೆಸ್‌ ಖರ್ಚು ಮಾಡಿದೆ. ಜೋಡೋ ಯಾತ್ರೆಯ ಒಟ್ಟು ವೆಚ್ಚವು ಕಾಂಗ್ರೆಸ್ ಒಟ್ಟು ಆದಾಯದ 15.3% ರಷ್ಟಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ, 2022-23ರಲ್ಲಿ ‘ಆಡಳಿತ…

Read More

ಬೆಂಗಳೂರು: ಪತಿಯೊಂದಿಗೆ ಅಕ್ರಮ ಸಂಬಂಧ (Illicit Relationship ) ಹೊಂದಿದ್ದಕ್ಕೆ ಗೆಳತಿಯ ಮನೆಗೆ ನುಗ್ಗಿ ಪತ್ನಿ ಮತ್ತು ಸಂಬಂಧಿಕರು ದಾಂಧಲೆ ನಡೆಸಿದ ಘಟನೆ ಮಾರುತಿ ಲೇಔಟ್ ಬಿಳೇಶಿವಾಲೆ ದೊಡ್ಡಗುಬ್ಬಿ ಮುಖ್ಯ ರಸ್ತೆಯಲ್ಲಿ ನಡೆದಿದೆ. ಪ್ರತಿಮಾ(ಹೆಸರು ಬದಲಾಯಿಸಲಾಗಿದೆ) ಕಳೆದ ಮೂರು ವರ್ಷಗಳ ಹಿಂದೆ ತನಗೆ ಆತ್ಮೀಯರಾಗಿದ್ದ ಶರಣ್ ಎಂಬುವರ ಬಳಿ ಮನೆ (House) ಕಟ್ಟಿಸುವಾಗ ಜಲ್ಲಿ, ಎಂ ಸ್ಯಾಂಡ್, ಬ್ಲಾಕ್ಸ್‌ಗಳನ್ನು ಖರೀದಿ ಮಾಡಿದ್ದಾರೆ. ಖರೀದಿ ಮಾಡುವಾಗ ನಗದು ರೂಪದಲ್ಲಿ ಶರಣ್ ಅವರಿಗೆ ಹಣವನ್ನು ಕೊಟ್ಟಿದ್ದಾರೆ. ನಂತರ ಇವರಿಬ್ಬರ ನಡುವೆ ಉತ್ತಮ ಸಂಬಂಧ ಬೆಳೆದಿದೆ. ಇವರಿಬ್ಬರ ಮಾತುಕತೆ ನೋಡಿ ಶರಣ್‌ ಪತ್ನಿ ಸಮಂತಾ ನನ್ನ ಗಂಡನ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ಯಾ ಎಂದು ಪ್ರಶ್ನಿಸಿ ಪ್ರತಿಮಾ ಜೊತೆ ಗಲಾಟೆ ಮಾಡಿದ್ದರು. ಈ ಗಲಾಟೆಯ ನಂತರ ಶರಣ್‌ ಮತ್ತು ಪ್ರತಿಮಾ ಮಾತನಾಡುವುದನ್ನು ಬಿಟ್ಟಿದ್ದಾರೆ. ಕೆಲ ದಿನಗಳ ಹಿಂದೆ ಮಾಲ್‌ ಒಂದರಲ್ಲಿ ಪ್ರತಿಮಾ ಜೊತೆ ಶರಣ್‌ ಇರುವುದನ್ನು ಪತ್ನಿ ಸಮಂತಾ ನೋಡಿದ್ದಾಳೆ. ಮತ್ತೆ ಸಂಬಂಧ ಉತ್ತಮಗೊಂಡಿರುವುದನ್ನು ನೋಡಿ…

Read More

ಬೆಂಗಳೂರು: ತೆರಿಗೆ ಹಂಚಿಕೆಯಲ್ಲಿ ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯ ಖಂಡಿಸಿ ಕನ್ನಡಿಗರು ನಡೆಸುತ್ತಿರುವ ‘ನನ್ನ ತೆರಿಗೆ ನನ್ನ ಹಕ್ಕು’ ಅಭಿಯಾನಕ್ಕೆ ಸಿಎಂ ಸಿದ್ದರಾಮಯ್ಯ ಬೆಂಬಲ ಸೂಚಿಸಿದ್ದಾರೆ. ಸಾಮಾಜಿಕ ಜಾಲತಾಣ X ಖಾತೆಯಲ್ಲಿ ಪೋಸ್ಟ್​ ಮಾಡುವ ಮೂಲಕ ‘ನನ್ನ ತೆರಿಗೆ ನನ್ನ ಹಕ್ಕು’ ಟ್ವಿಟ್ಟರ್ ಅಭಿಯಾನಕ್ಕೆ ಪೂರ್ಣ ಬೆಂಬಲವಿದೆ ಎಂದು ಎಂದು ಸೂಚಿಸಿದ್ದಾರೆ. ಕನ್ನಡಿಗರು ಬೆವರು ಸುರಿಸಿ ಕಟ್ಟುವ ತೆರಿಗೆ ನಮ್ಮವರ ಕಷ್ಟಕಾಲಕ್ಕೆ ಉಪಯೋಗಕ್ಕೆ ಬರದೆ ಉತ್ತರದ ರಾಜ್ಯಗಳ ಪಾಲಾಗುತ್ತಿದೆ. ದಕ್ಷಿಣ ಭಾರತದ ರಾಜ್ಯಗಳ ತೆರಿಗೆಯ ಋಣದಲ್ಲಿರುವ ಉತ್ತರದ ರಾಜ್ಯಗಳು ಎಂದಿಗೂ ನಮಗೆ ಮಾಡೆಲ್ ಆಗಲಾರವು. ಈ ಹುಸಿ ಕಲ್ಪನೆಯಿಂದ ಎಲ್ಲರೂ ಹೊರಬರಬೇಕು. ಶ್ರಮದಿಂದ ಸದೃಢ ರಾಷ್ಟ್ರ ಕಟ್ಟುತ್ತಿರುವ ಕರ್ನಾಟಕವೇ ಭಾರತಕ್ಕೆ ಮಾಡೆಲ್. ಕೂತು ತಿನ್ನುವವನಿಗೆ ಮೃಷ್ಟಾನ್ನ ಕೊಟ್ಟು, ದುಡಿಯುವ ಮಗನಿಗೆ ಬರೆ ಎಳೆದರು ಎಂಬಂತಿದೆ ದೇಶದಲ್ಲಿ ಕನ್ನಡಿಗರ ಸ್ಥಿತಿ. ಇದು ಬದಲಾಗಲೇಬೇಕು. ನ್ಯಾಯಕ್ಕಾಗಿ ಧ್ವನಿಯೆತ್ತಿರುವ ನಾಡಿನ ಪ್ರಜ್ಞಾವಂತರಿಗೆ ನನ್ನ ಧನ್ಯವಾದಗಳು. ನಿಮ್ಮ ಜೊತೆ ನಾನಿದ್ದೇನೆ, ನಮ್ಮೆಲ್ಲರ ಧ್ವನಿ ಒಟ್ಟಾದರೆ ದಿಲ್ಲಿವರೆಗೆ…

Read More

ಲಕ್ನೋ: ಸಾಮೂಹಿಕ ವಿವಾಹ (Mass Marriage) ಕಾರ್ಯಕ್ರಮದ ಹೆಸರಿನಲ್ಲಿ ಸ್ಥಳೀಯ ನಿವಾಸಿಗಳಿಗೆ ಹಣ ನೀಡಿ ದಂಪತಿಗಳಾಗಿ ನಟಿಸಲು ಸೂಚಿಸಿದ ಇಬ್ಬರು ಅಧಿಕಾರಿ ಸೇರಿ 15 ಮಂದಿಯನ್ನು ಉತ್ತರ ಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶದ (Uttar Pradesh) ಉತ್‌ನ ಬಾಲಿಯಾ ಜಿಲ್ಲೆಯಲ್ಲಿ ಜನವರಿ 25 ರಂದು ಸಮೂಹಿಕ ವಿವಾಹವನ್ನು ಆಯೋಜಿಸಲಾಗಿತ್ತು. 568 ಜೋಡಿಗಳ ಮದುವೆ ಸಮಾರಂಭಕ್ಕೆ ಬಿಜೆಪಿ (BJP) ಶಾಸಕ ಕೇತ್ಕಿ ಸಿಂಗ್ ಮುಖ್ಯ ಅತಿಥಿಯಾಗಿದ್ದರು.  ಈ ವಿವಾಹ ಕಾರ್ಯಕ್ರಮದಲ್ಲಿ ವಧುಗಳು ತಮಗೆ ತಾವೇ ಹಾರ ಹಾಕಿಕೊಂಡಿದ್ದರು. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ ತನಿಖೆ ನಡೆಸಿ 15 ಮಂದಿಯನ್ನು ಬಂಧಿಸಿದೆ. ಕೆಲವು ಪುರುಷರು ಅವರ ಮುಖಗಳನ್ನು ಮರೆಮಾಚಿ ವರರಂತೆ ಉಡುಪುಗಳನ್ನು ಧರಿಸಿ ನಟಿಸಿದ್ದರು. ಸ್ಥಳೀಯ ನಿವಾಸಿಗಳಿಗೆ ವಧು-ವರರಂತೆ ನಟಿಸಲು 500 ರಿಂದ 2,000 ರೂ. ಹಣವನ್ನು ನೀಡಲಾಗಿತ್ತು. ಸರ್ಕಾರವು ಸಾಮೂಹಿಕ ವಿವಾಹ ಯೋಜನೆಯಡಿ 51,000 ಸಾವಿರ ರೂಪಾಯಿ ನೀಡುತ್ತದೆ. ಅದರಲ್ಲಿ 35,000 ರೂ. ವಧುವಿಗಾಗಿ ಮತ್ತು 10,000 ರೂ. ಮದುವೆ…

Read More

ನಿರ್ದೇಶಕ ಜೋಗಿ ಪ್ರೇಮ್ (Jogi Prem) ಕುರಿತಾಗಿ ಮತ್ತೊಂದು ಹೊಸ ಸುದ್ದಿ ಬಂದಿದೆ. ಸದ್ಯ ಪ್ರೇಮ್ ಕೆಡಿ ಸಿನಿಮಾದ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆಯೇ ಅವರು ಸಲ್ಮಾನ್ ಖಾನ್ (Salman Khan) ಗಾಗಿ ಸಿನಿಮಾವೊಂದನ್ನು ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಕನ್ನಡದ ಮತ್ತೋರ್ವ ನಿರ್ದೇಶಕ ಬಾಲಿವುಡ್ (Bollywood) ಬಾಗಿಲು ತಟ್ಟಿದಂತಾಗುತ್ತದೆ. ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ಸಲ್ಮಾನ್ ಖಾನ್ ಅವರಿಗಾಗಿ ಸುದೀಪ್ ಸಿನಿಮಾವೊಂದನ್ನು ನಿರ್ದೇಶನ ಮಾಡಬೇಕಿತ್ತು. ಕಥೆಯನ್ನು ಸಲ್ಮಾನ್ ಖಾನ್ ಗೆ ಒಪ್ಪಿಸಿರುವ ಕುರಿತು ಕಿಚ್ಚ ಈ ಹಿಂದೆಯೇ ಹೇಳಿಕೊಂಡಿದ್ದರು. ಆದರೆ, ಸುದೀಪ್ ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿ ಹೋದರು. ಹಾಗಾಗಿ ಸದ್ಯಕ್ಕೆ ಸಲ್ಮಾನ್ ಜೊತೆಗಿನ ಸಿನಿಮಾ ಅನುಮಾನ ಎನ್ನಲಾಗುತ್ತಿದೆ. ಕಿಚ್ಚ ಸುದೀಪ್ ಅವರಿಗೆ ಸಿಕ್ಕಿದ್ದ ಅವಕಾಶವೇ ಪ್ರೇಮ್ ಅವರಿಗೆ ವರ್ಗಾವಣೆ ಆಗಿದ್ಯಾ? ಗೊತ್ತಿಲ್ಲ. ಆದರೆ, ಪ್ರೇಮ್ ನಿರ್ದೇಶನ ಮಾಡುತ್ತಾರೆ ಎನ್ನಲಾದ ಚಿತ್ರವನ್ನು ಸಜೀಸ್ ನಡಿಯಾಲ್ ಅನ್ನುವವರು ನಿರ್ಮಾಣ ಮಾಡಲಿದ್ದಾರಂತೆ. ಇದಿಷ್ಟು ವಿಷಯಗಳು ಗಾಂಧಿನಗರದಲ್ಲಿ ಭಾರೀ ಗಿರಿಕಿ ಹೊಡೆಯುತ್ತಿವೆ.

Read More

ಬೆಂಗಳೂರು: ಕಿಯೋನಿಕ್ಸ್ ಹಗರಣದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಅವರೇ ಹೇಳಬೇಕು. 3% ಆಡಿಟ್​​ನಲ್ಲಿ 430 ಕೋಟಿ ಅಕ್ರಮ ಆಗಿದೆ ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಿಯೋನಿಕ್ಸ್​​ನಲ್ಲಿ ಪೇಮೆಂಟ್ ಆಗ್ತಾ ಇಲ್ಲ. ದಾಖಲೆ ಕೊಟ್ರು ಹಣ ಕೊಡ್ತಾ ಇಲ್ಲ. ದಾಖಲೆಗಳನ್ನು ಇಲಾಖೆಯವರು ಸಂಗ್ರಹ ಮಾಡ್ತಾ ಇದ್ದಾರೆ ಅಂತಾ ಕೆಲವರು ಬಂದು ಹೇಳಿದ್ದರು. ಬಿಜೆಪಿ ನಾಯಕರು ಇದಕ್ಕೆ ಉತ್ತರ ನೀಡಬೇಕು. ಎಲ್ಲವೂ ಬಿಜೆಪಿ ಸರ್ಕಾರದಲ್ಲೆ ಆಗಿರುವುದು. ಕಳೆದ ನಾಲ್ಕು ವರೆ ವರ್ಷದಲ್ಲಿ ಆದಂತಹ ಪ್ರೊಕ್ಯೂರ್ಮೆಂಟ್​ ಬಗ್ಗೆ ನಾವು ಅದನ್ನು ಮುಂದಿಟ್ಟುಕೊಂಡು ಆಡಿಟ್​ ಮಾಡಿಸಿದಾಗ ಮೇಲ್ನೋಟಕ್ಕೆ 400 ಕೋಟಿಗಳಿಗಿಂದ ಹೆಚ್ಚು ದುಡ್ಡಿನ ಅವ್ಯವಹಾರ ಕಂಡುಬಂದಿದೆ. ಇದರ ಸಮಗ್ರ ತನಿಖೆಯಾಗಬೇಕು, ಇದರ ಹಿಂದೆ ಯಾರಿದ್ದಾರೆ ಎನ್ನುವ ಬಗ್ಗೆ ಅಧಿಕಾರಿಗಳಿರಬಹುದು ರಾಜಕಾರಣಿಗಳಿರಬಹುದು ಅದೆಲ್ಲವನ್ನು ಕೂಡ ಇಂದು ನಿವೃತ್ತ ಐಎಎಸ್​ ಅಧಿಕಾರಿಗಳಿಂದ ಆಡಿಟ್​ ಮಾಡಿಸಿ ತನಿಖೆಯನ್ನು ಮಾಡಿಸಲು ತೀರ್ಮಾನಿಸಿದ್ದೇವೆ ಎಂದರು. ಯಾರದ್ದೋ ದುಡ್ಡು ಬಿಜೆಪಿ ಜಾತ್ರೆ ಮಾಡಿದ್ದಾರೆ. ಈ ಹಣದಲ್ಲಿ ಆಪರೇಷನ್ ಕಮಲ ಮಾಡಿದ್ದಾರೆ. ಈಗ…

Read More

ವಿಜಯಪುರ: ರಾಜ್ಯದಲ್ಲಿ ನೂರು ರಾಮಮಂದಿರ ಪುನಶ್ಚೇಚೇತನ ಮಾಡುವ ಸರಕಾರದ ತೀರ್ಮಾನವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಸ್ವಾಗತಿಸಿದರು. ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಮನ ಅಸ್ತಿತ್ವವನ್ನು ಪ್ರಶ್ನೆ ಮಾಡುತ್ತಿರುವ ಕಾಂಗ್ರೆಸ್ ರಾಮಮಂದಿರ ಪುನಶ್ಚೇತನಕ್ಕೆ ಮುಂದಾಗಿರುವುದು ಸ್ವಾಗತಾರ್ಹವಾಗಿದೆ. ಒಳ್ಳೆಯ ಕೆಲಸ ಮಾಡುತ್ತಿರುವವರಿಗೆ ನಾವು ಹಾರೈಸುತ್ತೇವೆ. ಭಗವಾನ್ ರಾಮನನ್ನು ಅವರು ಒಪ್ಪಿಕೊಂಡಿರುವುದು ತುಂಬಾ ಸಂತೋಷಕರ ಸಂಗತಿಯಾಗಿದೆ ಎಂದು ಹೇಳಿದರು.  ಇನ್ನೂ ಕಾಯಕಯೋಗಿ ಸಿದ್ಧಗಂಗಾ ಮಠದ ಹಿಂದಿನ ಪೀಠಾಧ್ಯಕ್ಷ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿಯವರಿಗೆ ಭಾರತ ರತ್ನ ಪುರಸ್ಕಾರ ನೀಡಲು ಕಾಲ ಕೂಡಿ ಬರಬೇಕು, ಹಿಂದಿನಿಂದಲೂ ಈ ಕುರಿತು ಚರ್ಚೆ ನಡೆಯುತ್ತದೆ. ಎಲ್ಲದಕ್ಕೂ ಸಮಯ ಕೂಡಿ ಬರಬೇಕು. ಮುಂಬರುವ ದಿನಗಳಲ್ಲಿ ಒಳ್ಳೆಯದಾಗುತ್ತದೆ ಎಂದರು.  

Read More