Author: AIN Author

ಮೈಸೂರು: ಕಾಡಾನೆಯೊಂದು ದಾಳಿ ನಡೆಸಿ ರೈತರೊಬ್ಬರು ಬಲಿಯಾಗಿರುವ ಘಟನೆ ಹುಣಸೂರು ತಾಲೂಕಿನ ಮುದಗನೂರು ಗ್ರಾಮದಲ್ಲಿ ಚಲುವಯ್ಯ (65) ಮೃತ ರೈತ ಎಂದು ಗುರುತಿಸಲಾಗಿದೆ. ಜಮೀನಿನಲ್ಲಿ ರಾಗಿ ಕಟಾವು ಮಾಡುತ್ತಿದ್ದಾಗ ಕಾಡಾನೆ ದಾಳಿ ಮಾಡಿದೆ ಎಂದು ಹೇಳಲಾಗಿದೆ. ಕಾಡಾನೆ ದಾಳಿಯಿಂದ ಸ್ಥಳದಲ್ಲೇ ರೈತ ಚಲುವಯ್ಯ ಮೃತಪಟ್ಟಿದ್ದಾರೆ. ನಿರಂತರ ಕಾಡು ಪ್ರಾಣಿ ಹಾವಳಿಯಿಂದ ರೈತರಲ್ಲಿ ಆತಂಕ ಹೆಚ್ಚಾಗಿದೆ. ಶಾಶ್ವತ ಪರಿಹಾರಕ್ಕಾಗಿ ಗ್ರಾಮಸ್ಥರು, ರೈತರ ಒತ್ತಾಯ ಮಾಡಿದ್ದಾರೆ. ಕಾಡಾನೆಗಳ ಸಹಿತ ಕಾಡು ಪ್ರಾಣಿಗಳ ಹಾವಳಿಯಿಂದ ಮನೆಯಿಂದ ಹೊರಗೆ ಬರಲು ಭಯವಾಗುತ್ತಿದೆ. ಅರಣ್ಯ ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ನಮ್ಮೆಲ್ಲರ ರಕ್ಷಣೆಗೆ ಬರಬೇಕು.

Read More

ವಿಶಾಖಪಟ್ಟಣಂ: ಇಂಗ್ಲೆಂಡ್‌ (England) ವಿರುದ್ಧ ನಡೆದ ಎರಡನೇ ಟೆಸ್ಟ್‌ ಪಂದ್ಯವನ್ನು ಟೀಂ ಇಂಡಿಯಾ (Team India) 106 ರನ್‌ಗಳಿಂದ ಭರ್ಜರಿ ಗೆದ್ದುಕೊಂಡಿದೆ. ಈ ಮೂಲಕ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌  (World Test Championship) ಅಂಕ ಪಟ್ಟಿಯಲ್ಲಿ ಭಾರತ ಎರಡನೇ ಸ್ಥಾನಕ್ಕೆ ಜಿಗಿದಿದೆ. ಗೆಲ್ಲಲು 399 ರನ್‌ಗಳ ಕಠಿಣ ಗುರಿಯನ್ನು ಪಡೆದ ಇಂಗ್ಲೆಂಡ್‌ 69.2 ಓವರ್‌ಗಳಲ್ಲಿ 292 ರನ್‌ಗಳಿಗೆ ಆಲೌಟ್‌ ಆಗಿದೆ. ಈ ಮೂಲಕ 5 ಪಂದ್ಯಗಳ ಸರಣಿ 1-1ರಲ್ಲಿ ಸಮಬಲಗೊಂಡಿದೆ. ಮೂರನೇ ದಿನ 1 ವಿಕೆಟ್‌ ನಷ್ಟಕ್ಕೆ 67 ರನ್‌ಗಳಿಸಿದ್ದ ಇಂಗ್ಲೆಂಡ್‌ ಉಳಿದ 9 ವಿಕೆಟ್‌ಗಳಿಂದ 188 ರನ್‌ಗಳಿಸಿ ಸರ್ವಪತನಗೊಂಡಿತು. ಆರಭಿಕ ಆಟಗಾರ ಝಾಕ್ ಕ್ರಾಲಿ 73 ರನ್‌ (132 ಎಸೆತ, 8 ಬೌಂಡರಿ, 1 ಸಿಕ್ಸರ್)‌ ಹೊಡೆದರೆ ಕೊನೆಯಲ್ಲಿ ಬೆನ್‌ ಫೋಕ್ಸ್‌ 36 ರನ್‌, ಟಾಮ್‌ ಹಾರ್ಟ್ಲಿ 36 ರನ್‌ ಹೊಡೆಯುವ ಮೂಲಕ ಸ್ವಲ್ಪ ಪ್ರತಿರೋಧ ತೋರಿದರು. ಎರಡನೇ ಸ್ಥಾನಕ್ಕೆ ಜಿಗಿತ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಅಂಕ ಪಟ್ಟಿಯಲ್ಲಿ ಭಾರತ ಈಗ…

Read More

ಬೆಂಗಳೂರು: ಫೆಬ್ರವರಿ 9 ಮತ್ತು 10 ರಂದು ಎರಡು ದಿನ ಕೇಂದ್ರ ಸಚಿವ ಅಮಿತ್ ಶಾ ಮೈಸೂರು ಮತ್ತು ದಾವಣಗೆರೆಗೆ ಭೇಟಿ ನೀಡಲಿದ್ದಾರೆ. ಇದೆ ವೇಳೆ ಸುತ್ತೂರು ಜಾತ್ರಾ ಮಹೋತ್ಸವದಲ್ಲೂ ಭಾಗಿಯಾಗಲಿದ್ದಾರೆ. ಕಾರ್ಯಕ್ರಮದ ಬಳಿಕ ಅಮಿತ್​ ಶಾ ರಾಜ್ಯ ನಾಯಕರ ಜೊತೆ ಸರಣಿ ಸಭೆ ನಡೆಸಲಿದ್ದಾರೆ. ತಮ್ಮ ಭೇಟಿಯ ಸಂದರ್ಭದಲ್ಲಿ ಅವರು ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಹಿರಿಯ ನಾಯಕರೊಂದಿಗೆ ಸಭೆ ನಡೆಸಲಿದ್ದಾರೆ. ಅಲ್ಲದೆ, ಲೋಕಸಭೆ ಚುನಾವಣೆಯ ಸಿದ್ಧತೆ, ಅಭ್ಯರ್ಥಿಗಳ ಆಯ್ಕೆ, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಹಿನ್ನೆಲೆಯಲ್ಲಿ ಸ್ಥಾನಗಳ ಹಂಚಿಕೆ, ಪಕ್ಷದಲ್ಲಿನ ಆಂತರಿಕ ಶಮನ ಯತ್ನ ಮಾಡುವ ಸಾಧ್ಯತೆ ಇದೆ.

Read More

ಬೆಂಗಳೂರು: ನಮ್ಮ ರಾಜ್ಯಕ್ಕೆ ನಿರಂತರವಾಗಿ ಆಗುತ್ತಿರುವ ಅನ್ಯಾಯ, ತಾರತಮ್ಯ, ಮಲತಾಯಿ ಧೋರಣೆ ವಿರೋಧಿಸಿ ರಾಜ್ಯದ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ವಿರುದ್ದ ಫೆಬ್ರವರಿ 07 ರಂದು ನವದೆಹಲಿಯ ಜಂತರ್ ಮಂತರ್ ನಲ್ಲಿ ಬೆಳಿಗ್ಗೆ 11.00 ಗಂಟೆಗೆ ಪ್ರತಿಭಟನೆ ಹಮ್ಮಿಕೊಳ್ಳಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯದ ಜನತೆ ನಮಗೆ ಕೊಟ್ಟ ಅವಕಾಶಕ್ಕೆ ನ್ಯಾಯ ಒದಗಿಸಬೇಕಾದುದ್ದು ನಮ್ಮ ಕರ್ತವ್ಯ. ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ನ್ಯಾಯ ಒದಗಿಸಿಕೊಡಲಿದೆ ಎಂದು ಇಲ್ಲಿಯವರೆಗೂ ತಾಳ್ಮೆ ಯಿಂದ ಕಾಯುತ್ತಿದ್ದೆವು. ಕಳೆದ ಸಾಲಿನ ಬಜೆಟ್ ನಲ್ಲಿ ಹೇಳಿದಂತೆ ನಡೆದುಕೊಳ್ಳುತ್ತಾರೆ ಎಂದು ಕಾದಿದ್ದೆವು. ಆದರೆ ಇದುವರೆಗೂ ಅನ್ಯಾಯ ಸರಿ ಪಡಿಸಿಲ್ಲ. ಇದರ ವಿರುದ್ಧ ಧ್ವನಿ ಎತ್ತಲೇಬೇಕಾಗಿದೆ. ಹೋರಾಟಕ್ಕೆ ಜೊತೆ ನೀಡಲು ಇಡೀ ಸರ್ಕಾರ ಪಕ್ಷ ಭೇದ ಮರೆತು ಆಹ್ವಾನ ನೀಡಿದ್ದೇವೆ. ಕನ್ನಡಿಗರಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕಿದೆ. ಕೇಂದ್ರದ ಕಿವಿಯನ್ನು ತೆರೆಸಲು ಹೋರಾಡುತ್ತಿದ್ದೇವೆ ಎಂದರು.…

Read More

ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಯಲ್ಲಿ  ಚಿಕ್ಕಬಳ್ಳಾಪುರದಿಂದ ಮಾಜಿ ಸಚಿವ ಸುಧಾಕರ್ ಸ್ಪರ್ಧೆ ವಿಚಾರ ಬಗ್ಗೆ  ಯಲಹಂಕ ಶಾಸಕ ವಿಶ್ವನಾಥ್  ಪ್ರತಿಕ್ರಿಯೆ ನೀಡಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು,    ತಮ್ಮ ಮಗ ಅಲೋಕ್‌ಗೂ ಲೋಕಸಭೆ ಟಿಕೆಟ್ ಬಯಸಿರುವ ಶಾಸಕ ವಿಶ್ವನಾಥ್ ನಿನ್ನೆ ನಮ್ಮ ಪಕ್ಷದ, ಮಾಜಿ ಸಚಿವ ಸುಧಾಕರ್ ಹೇಳಿಕೆ ನೀಡಿದ್ದಾರೆ. ನಾನು ಮಾಧ್ಯಮದ ಮೂಲಕ ನೋಡಿದೆ. ಜೆಡಿಎಸ್ ವರಿಷ್ಠರಾದ ದೇವೇಗೌಡರು ಹಾಗೂ ಕುಮಾರಸ್ವಾಮಿ ಹೇಳಿದ್ದಾರೆ. ಅದಕ್ಕಾಗಿ ದೇವಮೂಲೆಯಿಂದ ಪೂಜೆ ಆರಂಭಿಸಿ ಪ್ರಚಾರ ಮಾಡ್ತಿದ್ದೀನಿ ಅಂತ. ಈವರೆಗೂ ಬಿಜೆಪಿ ಇಂದ ಯಾವುದೇ ಅಭ್ಯರ್ಥಿ ಹೆಸರು ಅಧಿಕೃತವಾಗಿ ಘೋಷಣೆ ಮಾಡಿಲ್ಲ. ನಮ್ಮ ರಾಷ್ಟ್ರೀಯ ಪಾರ್ಲಿಮೆಂಟರಿ ಬೋರ್ಡಲ್ಲಿ ನಿರ್ಧಾರ ಆಗಲಿದೆ. ಸುಧಾಕರ್ ಅವರು ಕಾಂಗ್ರೆಸ್ ಇಂದ ಹೊಸದಾಗಿ ಬಂದಿರೋದ್ರಿಂದ ಅವರಿಗೆ ತಿಳಿದಿಲ್ಲ. ನಮ್ಮ ಕೆಲ ಸಿಸ್ಟಮ್ ತಿಳಿದುಕೊಳ್ಳಬೇಕಿದೆ. ಯಾವುದೇ ಸಣ್ಣ ಚುನಾವಣೆ ಆದ್ರೂ ಹೈಕಮಾಂಡ್ ನಿರ್ಧಾರ ಮಾಡಬೇಕು. ನನ್ನ ಮಗ ಅಲೋಕ್ ಕೂಡ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಆಕಾಂಕ್ಷಿನಾನೇ ಅಭ್ಯರ್ಥಿ ಅಂತ ಹೇಳಿಲ್ಲ.…

Read More

ಬೆಂಗಳೂರು: ಶಕ್ತಿ ಯೋಜನೆಯಲ್ಲಿ(Shakti Scheme) ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. 5 ವರ್ಷ ಯೋಜನೆ ಮುಂದುವರೆಯಲಿದೆ. ಮುಂದಿನ ಅವಧಿಯಲ್ಲಿ ಕಾಂಗ್ರೆಸ್ (Congress) ಮತ್ತೆ ಅಧಿಕಾರಕ್ಕೆ ಬರುತ್ತದೆ ಅಗಲೂ ಶಕ್ತಿ ಯೋಜನೆ ಅನುಷ್ಠಾನ ಮಾಡುತ್ತೇವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ತಿಳಿಸಿದ್ದಾರೆ. ಅಶ್ವಮೇಧ ಕ್ಲಾಸಿಕ್ ಬಸ್‌ಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಎಸ್‌ಆರ್‌ಟಿಸಿಯಿಂದ(KSRTC)100 ಹೊಸ ಬಸ್ ಗೆ ಚಾಲನೆ ನೀಡ್ತಿದ್ದೇವೆ, ಏಪ್ರಿಲ್ ಹೊತ್ತಿದೆ 1000 ಬಸ್ ಬರಲಿದೆ. ಶಕ್ತಿ ಯೋಜನೆ ಬಂದಾಗಿನಿಂದ 1 ಕೋಟಿ 10 ಲಕ್ಷ ಜನ ನಿತ್ಯ 4 ನಿಗಮದಿಂದ ಓಡಾಡುತ್ತಿದ್ದಾರೆ. ಶಾಲಾ ಮಕ್ಕಳಿಗೆ ಶಕ್ತಿಯಿಂದ ಸಮಸ್ಯೆ ಆಗುತ್ತಿದೆ. ಸಮಸ್ಯೆ ಪರಿಹಾರಕ್ಕೆ ಹೊಸ ಬಸ್ ಖರೀದಿ ‌ಮಾಡುತ್ತಿದ್ದೇವೆ. ಆದಷ್ಟು ಬೇಗ ಸಮಸ್ಯೆ ಪರಿಹಾರ ಮಾಡುತ್ತೇವೆ ಎಂದರು 4 ವರ್ಷಗಳಿಂದ ಒಂದು ಬಸ್ ಖರೀದಿ ಮಾಡಿರಲಿಲ್ಲ. ನಾವು ಈಗ ಸುಮಾರು 5 ಸಾವಿರ ಬಸ್ ಗಳು ಖರೀದಿಗೆ ನಿರ್ಧಾರ ಮಾಡುತ್ತಿದ್ದೇವೆ. ಹಿಂದಿನ ಸರ್ಕಾರದಲ್ಲಿ ಖಾಲಿ ಹುದ್ದೆ ನೇಮಕಾತಿ ಆಗಿರಲಿಲ್ಲ. ನಮ್ಮ ಸರ್ಕಾರ…

Read More

ಬೆಂಗಳೂರು: ಕೇಂದ್ರ ಸರ್ಕಾರ ಮಾರಾಟ ಮಾಡಲು ತೀರ್ಮಾನಿಸಿರುವ ಭಾರತ್ ಬ್ರ್ಯಾಂಡ್‌‌ (Bharath Brand) ಅಕ್ಕಿ ಗ್ರಾಹಕರಿಗೆ ಆನ್‌ಲೈನ್‌ಲೂ (Online) ಸಹ ಸಿಗಲ್ಲಿದ್ದು, ನಗರದಲ್ಲಿಯೂ ಅಕ್ಕಿ ಸಿಗಲಿದೆ ದಿನಸಿ, ಧಾನ್ಯ ಎಲ್ಲಾ ವಸ್ತುಗಳ ಬೆಲೆಗಳು ಗಗನಕ್ಕೇರಿದ್ದು, ಜನ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದಾರೆ. ಈ ಹಣದುಬ್ಬರಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ನಾನಾ ಪ್ರಯತ್ನಗಳನ್ನು ನಡೆಸುತ್ತಿದ್ದು, ಸರ್ಕಾರ ಈಗಾಗಲೇ ಭಾರತ್ ಬ್ರ್ಯಾಂಡ್‌ ಅಡಿಯಲ್ಲಿ ಗೋಧಿ ಮತ್ತು ಬೇಳೆ ಕಾಳುಗಳನ್ನು ಮಾರಾಟ ಮಾಡುತ್ತಿದೆ. ಈ ಹಿಂದೆ ಕೇಂದ್ರ ಸರ್ಕಾರದಿಂದ ತಂದತಹ ಭಾರತ್ ಅಟ್ಟಾ ಹಾಗೂ ಕಡಲೆ ಬೇಳೆಗೆ ಸಿಲಿಕಾನ್ ಸಿಟಿಯ ಜನರಿಂದ ಭರ್ಜರಿ ಪ್ರಿತಿಕ್ರಿಯೆ ಬಂದಿತ್ತು. ನಗರದಲ್ಲಿ 2,81,572 ಕೆ.ಜಿ ಭಾರತ್ ದಾಲ್ ಮತ್ತು 1,22,190 ಕೆ.ಜಿ ಗೋಧಿ ವ್ಯಾಪಾರವಾಗಿತ್ತು. ಇದೀಗ ಭಾರತ್ ಬ್ರ‍್ಯಾಂಡ್ ಅಡಿಯಲ್ಲಿ ಅಕ್ಕಿಯನ್ನು ಮಾರಾಟ ಮಾಡಲು ಸರ್ಕಾರ ನಿರ್ಧರಿಸಿದೆ. ಅದರಂತೆ ಬೆಂಗಳೂರಿನಲ್ಲಿ ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (ಎನ್‌ಸಿಸಿಎಫ್) ಮೂಲಕ ಮಾರಾಟ ಮಾಡಲು ಪ್ಲಾನ್ ಮಾಡಿದೆ. ಈ ಅಕ್ಕಿಯ ವಿತರಣೆ ಮಂಗಳವಾರ (ಫೆ.6)…

Read More

ಹೀರೋ ಅಂದ್ರೆ ಹ್ಯಾಂಡ್ಸಮ್ ಆಗಿ ಇರಬೇಕು..ಜಿಮ್ ಮಾಡಿ ಫಿಟ್ ಆಗಿ ಇರಬೇಕು. ಈ ಗುಣಗಳಿದ್ದವನೂ ಮಾತ್ರ ಹೀರೋ ಆಗೋದಿಕ್ಕೆ ಸಾಧ್ಯ ಎಂಬ ಕಾಲವೆಲ್ಲಾ ಹೋಗಿ ಆಯ್ತು. ಈಗ ಯಾರ್ ಬೇಕಾದ್ರೂ ಹೀರೋ ಆಗಬಹುದು..ಆದ್ರೆ ನಟನಾ ಪ್ರತಿಭೆ ಇರಬೇಕು ಅಷ್ಟೇ. ಈಗ ಯಾಕೆ ಈ ಮಾತು ಅಂತೀರಾ? ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಮುರುಗನಾಗಿ ಖಳನಾಯಕನ ಪಾತ್ರ ಮಾಡಿ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದ ಮುನಿಕೃಷ್ಣ ಮತ್ತೊಮ್ಮೆ ನಿಮ್ಮ ಮುಂದೆ ಬರ್ತಿದ್ದಾರೆ. ಕೊಡೆಮುರುಗ ಎಂಬ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಅವರೀಗ ಸತ್ಯಮಂಗಳ ಸಿನಿಮಾದಲ್ಲಿ ಹೀರೋ ಆಗಿ ಬಣ್ಣ ಹಚ್ಚಿದ್ದಾರೆ. ಮುನಿಕೃಷ್ಣಅವರನ್ನು ಹೀರೋ ಆಗಿ ಆಯ್ಕೆ ಮಾಡಿದ್ದಕ್ಕೆ ಕಾರಣ ಏನು ಅನ್ನೋದನ್ನು ನಿರ್ದೇಶಕರು ತಿಳಿಸಿದ್ದಾರೆ. ಪ್ರತಿ ಸೂಪರ್ ಸ್ಟಾರ್ ಅವರ ಮೊದಲ ಸಿನಿಮಾ ಬೆಂಬಲ ಕೊಟ್ಟಿದ್ದಕ್ಕೆ ಸ್ಟಾರ್ ಆಗಿರ್ತಾರೆ. ಅದೇ ರೀತಿ ಮುನಿಕೃಷ್ಣಅವರ ಸಿನಿಮಾ ಮೇಲಿನ ಪ್ರೀತಿ, ಡೆಡಿಕೇಷನ್ ದೊಡ್ಡದಿದೆ ಅನ್ನೋದು ನಿರ್ದೇಶಕರ ಮಾತು. ಸತ್ಯಮಂಗಳ ಸಿನಿಮಾದ ಟೈಟಲ್ ಬಿಡುಗಡೆಯಾಗಿದೆ. ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿಯ ಚಿಕ್ಕ ಹಳ್ಳಿಯೊಂದರಲ್ಲಿ ನಡೆದ ಈ…

Read More

ನಮೀಬಿಯಾ: ನಮೀಬಿಯಾದ ಅಧ್ಯಕ್ಷ ಹಗೆ ಜಿಂಗೋಬ್ ಅವರು ಕ್ಯಾನ್ಸರ್‌ಗೆ ಬರಲಿಯಾಗಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿದ್ದು, ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದಾಗಲೇ ಹಗೆ ಜಿಂಗೋಬ್ ಇಹಲೋಕ ತ್ಯಜಿಸಿದ್ದಾರೆ ಎಂದು ಅವರ ಕಚೇರಿ ಘೋಷಣೆ ಮಾಡಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣ ಟ್ವಿಟ್ಟರ್‌ಲ್ಲಿ ನಮೀಬಿಯಾ ಅಧ್ಯಕ್ಷರ ಅಧಿಕೃತ ಖಾತೆಯಿಂದ ಪೋಸ್ಟ್ ಮಾಡಲಾಗಿದ್ದು,  ಜಿಂಗೋಬ್ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ಲೇಡಿ ಪೊಹಂಬಾ ವೈದ್ಯಕೀಯ ತಂಡವೂ ಜಿಂಗೋಬ್ ಅವರ ಚೇತರಿಕೆಗಾಗಿ ಸಾಕಷ್ಟು ಪ್ರಯತ್ನಿಸಿತ್ತು. ಆದರೆ ಚಿಕಿತ್ಸೆಫಲಕೊಡದ ಹಿನ್ನೆಲೆಯಲ್ಲಿ ಜಿಂಗೋಬ್ ಪತ್ನಿ ಮೋನಿಕಾ ಜಿಂಗೋಬ್ ಮತ್ತು ಮಕ್ಕಳು ಜೊತೆಗಿದ್ದಾಗಲೇ ನಿಧನರಾದರು ಎಂದು ಈ ಪೋಸ್ಟ್ ಮಾಹಿತಿ ನೀಡಿದೆ.  

Read More

ಮಂಡ್ಯ: ಲೋಕಸಭಾ ಚುನಾವಣೆಗೆ ಹಾಸನ ಹಾಗೂ ಮಂಡ್ಯ  ಎರಡು ಕ್ಷೇತ್ರಗಳು ಬಿಜೆಪಿಗೆ ಸಿಗಲಿದೆ. ಈ ಮೂಲಕ ಪ್ರತಿ ಗ್ರಾಮದಲ್ಲೂ ಬಿಜೆಪಿ ಪಕ್ಷ ಕಟ್ಟೋಣ. ಒಂದು ವೇಳೆ ಜೆಡಿಎಸ್‍ಗೆ ಕ್ಷೇತ್ರ ಬಿಟ್ಟು ಕೊಟ್ಟರೆ, ಅಭ್ಯರ್ಥಿ ಆಯ್ಕೆಗೆ ನಮ್ಮ ಕಾರ್ಯಕರ್ತರ ಒಪ್ಪಿಗೆ ತೆಗೆದುಕೊಳ್ಳಬೇಕು ಎಂದು ಮಾಜಿ ಶಾಸಕ ಪ್ರೀತಮ್‍ ಗೌಡ (Preetham Gowda) ಹೇಳಿದ್ದಾರೆ. ಪಾಂಡವಪುರದ ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿದ ಅವರು, ಗೌಡರಿಗೆ ಮಂಡ್ಯದಲ್ಲೂ ನೆಂಟರಿದ್ದಾರೆ, ಹಾಸನದಲ್ಲೂ ನೆಂಟರು ಇರ್ತಾರೆ, ನಮ್ಮ ಸಂಕಲ್ಪ ಕುಟುಂಬ ರಾಜಕೀಯದ ವಿರುದ್ಧ ಇರಬೇಕು. ನೆಂಟಸ್ಥಿಕೆ ಎಲ್ಲವನ್ನೂ ಬಿಡಬೇಕು ಎಂದರು. ರಾಷ್ಟ್ರ, ರಾಜ್ಯ ಸೇರಿದಂತೆ ಮಂಡ್ಯದಲ್ಲೂ ಕುಟುಂಬ ರಾಜಕೀಯ ಇದೆ. ಎಲ್ಲಾ ರಾಜ್ಯದಲ್ಲೂ ಒಂದೊಂದು ಕುಟುಂಬ ರಾಜಕೀಯ ಇದೆ. ಇನ್ನೂ ರಾಜ್ಯದ ಕುಟುಂಬ ರಾಜಕೀಯದ ಬಗ್ಗೆ ಮಾತನಾಡುವುದೇ ಬೇಡ. ಅವರು ಆಯ್ತು, ಮಕ್ಕಳು ಆಯ್ತು, ಮೊಮ್ಮಕ್ಕಳು ಆಯ್ತು, ಈಗ ಮರಿ ಮಕ್ಕಳು ಎಂದು ಅವರು ವ್ಯಂಗ್ಯವಾಡಿದ್ದಾರೆ.

Read More