Author: AIN Author

ರಾಮನಗರ:- ರಾಜ್ಯದ ಬಿಜೆಪಿ ಸಂಸದರು ಒಬ್ಬರು ಗಂಡಸರಲ್ಲ ಎಂದು ಬಾಲಕೃಷ್ಣ ವಾಗ್ದಾಳಿ ನಡೆಸಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಜೆಪಿಯ ಸಂಸದರೆಲ್ಲರೂ ಶೋಪೀಸ್‌ಗಳು, ಅದರ ನಾಯಕರು ಯಾರೂ ಗಂಡಸರಲ್ಲ ಎಂದು ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ನಮ್ಮ ಹೋರಾಟ ನೋಡಿಯಾದರೂ ಬಿಜೆಪಿಯ ಗಂಡಸರು ಹೋರಾಟ ಮಾಡುತ್ತಾರಾ ನೋಡೋಣ.. ಇದರ ಅರ್ಥ ಬಿಜೆಪಿಯಲ್ಲಿ ಯಾರು ಗಂಡಸರು ಇಲ್ಲ ಅಂತ. ಈಗಿರುವ ಬಿಜೆಪಿ ಎಂಪಿಗಳು ಯಾರು ಗಂಡಸರಲ್ಲ ಎಂದು ಅರ್ಥ ಎಂದು ಬಿಜೆಪಿ ಸಂಸದರ ವಿರುದ್ಧ ವಾಗ್ದಾಳಿ ನಡೆಸಿದರು. ಹೆಚ್ಚು ಟ್ಯಾಕ್ಸ್ ಕಟ್ಟುವ ಎರಡನೇ ರಾಜ್ಯ ನಮ್ಮದು. ನಮಗೆ ಕೊಡಬೇಕಾದ ಅನಯದಾನವನ್ನ ನಮಗೆ ಕೊಡುತ್ತಿಲ್ಲ. ಬಿಜೆಪಿಯ ಸಂಸದರು ನರೇಂದ್ರ ಮೋದಿ ಮುಂದೆ ಕೂರೋದು ಇಲ್ಲ, ಏಳೋದು ಇಲ್ಲ. ಕೇವಲ ಮೋದಿ ಹೆಸರಲ್ಲಿ ಗೆಲ್ಲುತ್ತಾರೆ. ಆದರೆ ವೈಯಕ್ತಿಕ ವರ್ಚಸ್ಸು ಇಲ್ಲ. ಪಕ್ಕದ ತಮಿಳುನಾಡು ತನ್ನ ಹಕ್ಕಿಗಾಗಿ ಮಾಡುವ ಹೋರಾಟವನ್ನ ನೋಡಿ ಕಲಿಯಲಿ. ಬಿಜೆಪಿ ಸಂಸದರೆಲ್ಲಾ ಶೋ ಪೀಸ್ ಗಳು. ಕೇವಲ ದೆಹಲಿಗೆ ಹೋಗೋದು ಟಿಎ-ಡಿಎ ತಕೊಂಡು ಬರೋದು…

Read More

ತುಮಕೂರು:- ರ‍್ಯಾಲಿಗಳನ್ನು ಬ್ಯಾನ್ ಮಾಡುವ ತಾಕತ್ತು ಸಿದ್ದರಾಮಯ್ಯ ಅವರಿಗೆದೆಯೇ!? ಎಂದು ಜೆಸಿ ಮಾಧುಸ್ವಾಮಿ ಸವಾಲ್ ಹಾಕಿದ್ದಾರೆ. ರಾಮಮಂದಿರ ಪ್ರಾಣ ಪ್ರತಿಷ್ಠೆಯ ದಿನ ಕರ್ನಾಟಕದಲ್ಲಿ ರ‍್ಯಾಲಿಗಳನ್ನು ಬ್ಯಾನ್ ಮಾಡಿದ್ದ ವಿಷಯಕ್ಕೆ ಸಂಬಂಧಿಸಿದಂತೆ ಅವರು ಬೆಳಕು ಚೆಲ್ಲಿದರು. ಅಸಲಿಗೆ ಅವತ್ತು ಮೆರವಣಿಗೆಗಳನ್ನು ಬ್ಯಾನ್ ಮಾಡಬೇಕೆನ್ನುವುದು ಸಮಗ್ರ ಕರ್ನಾಟಕಕ್ಕೆ ಅನ್ವಯಿಸುವ ಆದೇಶವಾಗಿರಲಿಲ್ಲ. ಧಾರವಾಡದಲ್ಲಿ ವ್ಯಕ್ತಿಯೊಬ್ಬರು ರ‍್ಯಾಲಿ ನಡೆಸಲು ಅನುಮತಿ ಕೋರಿ ಹೈಕೋರ್ಟ್ ಗೆ ಮನವಿ ಸಲ್ಲಿಸಿದ್ದರು, ಅವರ ಅರ್ಜಿಯನ್ನಷ್ಟೇ ಕೋರ್ಟ್ ತಿರಸ್ಕರಿಸಿತ್ತು ಎಂದು ಹೇಳಿದ ಮಾಧುಸ್ವಾಮಿ, ತಮ್ಮ ಕಾರ್ಯಕರ್ತರು ರ‍್ಯಾಲಿಗೆ ಯಾಕೆ ಅನುಮತಿ ನೀಡುತ್ತಿಲ್ಲ ಅಂತ ತಮ್ಮನ್ನು ಕೇಳಿದಾಗ ಅವರು ತುಮಕೂರು ಪೊಲೀಸ್ ವರಿಷ್ಠಾಧಿಕಾರಿಗೆ ಫೋನಾಯಿಸಿ ವಿಚಾರಿಸಿದರಂತೆ. ಎಸ್ ಪಿ ಅವರು ಅವರ ಮೇಲಿಂದ ಆದೇಶ ಬಂದಿದೆ ಅಂತ ತಿಳಿಸಿದರು ಅಂತ ಮಾಧುಸ್ವಾಮಿ ಹೇಳಿದರು. ಅಸಲಿಗೆ, ಐಜೆಪಿಯವರು ಧಾರವಾಡ ಹೈಕೋರ್ಟ್ ಆದೇಶವನ್ನು ಎಲ್ಲ ಪೊಲೀಸರಿಗೆ ವಾಟ್ಸ್ಯಾಪ್ ಮಾಡಿದ್ದರು. ಹಾಗಾಗಿ ಎಲ್ಲ ಕಡೆ ರ‍್ಯಾಲಿಗಳನ್ನು ತಡೆಯಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಹೀಗೆ ಮುಚ್ಚುಮರೆಯಿಂದ ರ‍್ಯಾಲಿಗಳನ್ನು ಬ್ಯಾನ್ ಮಾಡುವ ಬದಲು…

Read More

ಬೆಂಗಳೂರು: ₹1000 ಕೋಟಿ ಬೆಲೆಬಾಳುವ 25 ಎಕರೆ ಜುನ್ನಸಂದ್ರ ಕೆರೆ ಸಂಪೂರ್ಣ ಭೂಮಾಫಿಯಾಗಳ ಹಿಡಿತಕ್ಕೆ ಸಿಕ್ಕಿದೆ. ಮಾಜಿ ಮುಖ್ಯಮಂತ್ರಿ ಬಿಜೆಪಿಯ ಬಸವರಾಜ ಬೊಮ್ಮಾಯಿ , ಮಾಜಿ ಕಂದಾಯ ಸಚಿವ ಆರ್. ಅಶೋಕ್ , ಮಹದೇವಪುರ ಮಾಜಿ ಶಾಸಕ ಅರವಿಂದ ಲಿಂಬಾವಳಿ ಅವರು ಈ ಬೃಹತ್ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಂಚಾಲಕರಾದ ಮೋಹನ್ ದಾಸರಿ ಆರೋಪಿಸಿದ್ದಾರೆ. ನಗರದ ಪ್ರೆಸ್‌ ಕ್ಲಬ್‌ನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಜುನ್ನಸಂದ್ರ ಕೆರೆ ಅಕ್ರಮ ಒತ್ತುವರಿ ಬಗ್ಗೆ ಪೂರಕವಾದ ದಾಖಲೆಗಳನ್ನು ಆಮ್‌ ಆದ್ಮಿ ಪಾರ್ಟಿ ಬಿಡುಗಡೆ ಮಾಡಿದೆ. ಈ ಸಂದರ್ಭದಲ್ಲಿ ಮಾತನಾಡಿದ ಮೋಹನ್ ದಾಸರಿ, ಇಡೀ ಜಗತ್ತಿನಲ್ಲೇ ಭೂಮಾಫಿಯಾದಲ್ಲಿ ಬೆಂಗಳೂರಿನ ರಾಜಕಾರಣಿಗಳು ಮೊದಲ ಸ್ಥಾನ ಪಡೆಯುತ್ತಾರೆ ಎಂದರು. ಆರ್‌ಟಿಸಿ ಸರ್ವೆ ನಂ. 32 ರ ಅಡಿ 24.33 ಎಕರೆ ಸರ್ಕಾರಿ ಕೆರೆ ಅಂಗಳವನ್ನು ನಕಲಿ ದಾಖಲೆಗಳನ್ನು ಸಲ್ಲಿಸಿ ಖಾಸಗಿಯವರು ಒತ್ತುವರಿ ಮಾಡಿಕೊಂಡಿದ್ದಾರೆ. 1930ರಲ್ಲಿ ಜೋಡಿದಾರ ಅಕ್ಕಮ್ಮ ಎಂಬುವವರಿಗೆ ಜುನ್ನಸಂದ್ರ ಕೆರೆಯನ್ನು ನಿರ್ವಹಣೆ ಸಲುವಾಗಿ ಅಂದಿನ ಮೈಸೂರು…

Read More

ಉತ್ತಮ ಹಣ್ಣುಗಳಲ್ಲಿ ಸೀಬೆಹಣ್ಣು ಕೂಡ ಒಂದು. ಅಗತ್ಯವಾಗಿ ಬೇಕಾಗಿರುವ ಪ್ರಮುಖ ಪೌಷ್ಟಿಕಾಂಶಗಳನ್ನು ಹೊಂದಿರುವ ಹಣ್ಣು ಇದು. ಈ ಹಣ್ಣು ಸಾಮಾನ್ಯವಾಗಿ ಒಣ ಉಷ್ಣಾಂಶವಿರುವ ಹಾಗೂ ತಂಪು ಪ್ರದೇಶಗಳಲ್ಲಿ ಬೆಳೆಯುತ್ತದೆ. ಇದಕ್ಕೆ ಆರೈಕೆಯ ಅಗತ್ಯ ಇಲ್ಲ. ಸಾಮಾನ್ಯವಾಗಿ ಕೆಂಪು ಹಾಗೂ ಬಿಳಿ ಬಣ್ಣಗಳಲ್ಲಿ ಈ ಹಣ್ಣು ಸಿಗುತ್ತದೆ. ಪೌಷ್ಠಿಕಾಂಶದಲ್ಲಿ ಎರಡರಲ್ಲಿ ಅಂತಹ ವ್ಯತ್ಯಾಸವೇನಿಲ್ಲ. ಪೌಷ್ಠಿಕಾಂಶದ ವಿಷಯದಲ್ಲಿ ಸೀಬೆಹಣ್ಣಿನಲ್ಲಿ ಉತ್ತಮ ವಿಟಮಿನ್‌ ಸಿ ಅಂಶವಿರುತ್ತದೆ. ಒಂದು ಮಧ್ಯಮ ಗಾತ್ರದ ಸೀಬೆಹಣ್ಣಿನಲ್ಲಿ 200 ಮಿಲಿ ಗ್ರಾಂ ನಷ್ಟು ವಿಟಮಿನ್‌ ಸಿ ದೊರಕುತ್ತದೆ. ವಿಟಮಿನ್‌ ಸಿ ದೇಹ ಬೆಳವಣಿಗೆಗೆ, ಮುಖ್ಯವಾಗಿ ರೋಗ ನಿರೋಧಕ ಹಾಗೂ ದೇಹದ ಜೀವ ರಸಾಯನ ಕ್ರಿಯೆಗಳಿಗೆ ಅತ್ಯಗತ್ಯ ಅಂಶ. ಹಲವು ಹಾರ್ಮೋನುಗಳ ಉತ್ಪಾದನೆಯು ವಿಟಮಿನ್‌ ಸಿ ಯ ಲಭ್ಯತೆಯನ್ನು ಅವಲಂಬಿಸಿದೆ. ಜೀವಕೋಶಗಳನ್ನು ಛಿದ್ರಗೊಳಿಸಿ ಕ್ಯಾನ್ಸರ್‌ ತರಿಸುವ ಫ್ರೀ ರಾಡಿಕಲ್ಸ್‌ ಎಂಬ ಅಡ್ಡ ಪರಿಣಾಮಕಾರಿ ಕಣಗಳ ಉತ್ಪಾದನೆಯನ್ನು ತಡೆಯಬಲ್ಲ ವಿಟಮಿನ್‌ ಸಿ ಅತ್ಯಂತ ಪ್ರಬಲ ಆಯಂಟಿ ಆಕ್ಸಿಡೆಂಟ್‌. ಸೀಬೆಹಣ್ಣಿನಿಂದ ಶೀತ, ನೆಗಡಿ ಉಂಟಾಗುವುದಿಲ್ಲ. ಬದಲಿಗೆ…

Read More

ಬೆಂಗಳೂರು:- ರಾಜ್ಯದಲ್ಲಿ ಹೆಣ್ಣುಮಕ್ಕಳ ಅಭಿವೃದ್ಧಿ ಆಗಬೇಕು ಎನ್ನುವ ಕಾರಣಕ್ಕೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅಂಥ ಯೋಜನೆಗಳಲ್ಲಿ ಒಂದು ಭಾಗ್ಯಲಕ್ಷ್ಮಿ ಯೋಜನೆ ಆಗಿದೆ. ಈ ಯೋಜನೆಯನ್ನು ನಿಮಗೆ ಹೆಣ್ಣುಮಗು ಹುಟ್ಟಿದ ತಕ್ಷಣವೇ ಮಾಡಿಸಬಹುದು. ಮಗು ಹುಟ್ಟಿದ ಬಳಿಕ ಮಗುವಿಗೆ 50 ಸಾವಿರ ರೂಪಾಯಿಯ ಬಾಂಡ್ ಕೊಡಲಾಗುತ್ತದೆ. ಹೀಗೆ ಪ್ರತಿ ಹೆಣ್ಣು ಮಗುವಿಗೆ 21 ವರ್ಷಗಳು ತುಂಬಿದ ನಂತರದಲ್ಲಿ ಅ ಮಗುವಿಗೆ 2 ಲಕ್ಷ ರೂಪಾಯಿಯನ್ನು ನೀಡಲಾಗುತ್ತದೆ. ಇದರಿಂದ ವಿವಿಧ ಹಂತದಲ್ಲಿ ಹೆಣ್ಣುಮಕ್ಕಳಿಗೆ ಭಾಗ್ಯಲಕ್ಷ್ಮಿ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳ ಬಹುದಾಗಿದೆ. ಮಗುವಿನ ಶಿಕ್ಷಣಕ್ಕೆ ಹಣ ಕೊಡಲಾಗುತ್ತದೆ. 6ನೇ ತರಗತಿಯನ್ನು ಓದುತ್ತಿರುವ ಮಗುವಿಗೆ ಶಾಲೆಗೆ ಸೇರಿಸಲು 3000 ರೂ, ಮತ್ತು 8ನೇ ತರಗತಿ ಮಗುವಿಗೆ 5000, 10ನೇ ತರಗತಿಯನ್ನು ಮಗುವಿಗೆ 7000 ರೂ., 12ನೇ ತರಗತಿ ವಿದ್ಯಾರ್ಥಿನಿಗೆ 8 ಸಾವಿರ. ಒಟ್ಟಾರೆಯಾಗಿ ಶಿಕ್ಷಣಕ್ಕೆ 23,000ರೂ. ಸಿಗುತ್ತದೆ. ಹೆಣ್ಣು ಮಗುವು ಚೆನ್ನಾಗಿ ಓದಿ ಅಭಿವೃದ್ಧಿಯಾಗಬೇಕು ಹಾಗೂ ಹೆಣ್ಣುಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಸಿಗಬೇಕು. ಹೆಣ್ಣು ಮಗುವು…

Read More

ಮಕ್ಕಳ ತೂಕ ಅವರ ವಯಸ್ಸಿಗಿಂತ ಕಡಿಮೆಎ ಇರುತ್ತದೆ. ಇದು ಎಲ್ಲಾ ಪೋಷಕರಿಗೂ ಸಮಸ್ಯೆಯಾಗಿ ಪರಿಣಮಿಸಿದೆ. ಮಕ್ಕಳು ಒಳ್ಳೆ ತೂಕ ಮತ್ತು ಎತ್ತರ ಹೊಂದಬೇಕೆಂದರೆ 1-3 ವರ್ಷದಲ್ಲಿಯೇ ಉತ್ತಮ ಪೋಷಣೆ ನೀಡಬೇಕು. ಬೆಳವಣಿಗೆಯ ಪ್ರಾರಂಭಿಕ ಹಂತದಲ್ಲಿ ಮಕ್ಕಳ ತೂಕ ಮತ್ತು ಎತ್ತರವನ್ನು ಪರೀಕ್ಷಿಸಿ ಅವಶ್ಯಕತೆಗೆ ತಕ್ಕಂತೆ ಪೋಷಣೆ ನೀಡಿದರೆ ಮುಂದೆ ಮಕ್ಕಳು ಆರೋಗ್ಯ ಸಮಸ್ಯೆಗಳಿಂದ ಬಳಲುವುದನ್ನು ತಡೆಯಬಹುದು. ಮಕ್ಕಳ ಎತ್ತರ ಮತ್ತು ತೂಕ ಹೆಚ್ಚಿಸಲು ಹೀಗೆ ಮಾಡಿ: 1. ನಿಮ್ಮ ಮಗುವಿನ ತೂಕ ತುಂಬಾ ಕಡಿಮೆ ಇದ್ದರೆ ಮೊದಲು ವೈದ್ಯರನ್ನು ಸಂಪರ್ಕಿಸಿ. ವೈದ್ಯರು ಮಗುವಿನ ತೂಕ ಮತ್ತು ಎತ್ತರವನ್ನು ಪರೀಕ್ಷಿಸಿ, ಈ ಸಮಸ್ಯೆ ವಂಶವಾಹಿಯೋ ಅಥವಾ ಆಹಾರ ಕ್ರಮದಿಂದ ಹೀಗಾಗಿರುವುದೋ ಎಂದು ನಿಖರವಾಗ ತಿಳಿಸಿ ಉತ್ತಮ ಆಹಾರ ಕ್ರಮದ ಸಲಹೆ ನೀಡುತ್ತಾರೆ. 2. ಮಕ್ಕಳಿಗೆ ಒಟ್ಟಿಗೆ ಹೆಚ್ಚು ಆಹಾರ ನೀಡುವುದಕ್ಕಿಂತ 2-3 ಗಂಟೆಯ ಅಂತರದಲ್ಲಿ ಸ್ವಲ್ಪ ಸ್ವಲ್ಪ ಆಹಾರ ನೀಡಬೇಕು. ಹಾಲು ಕುಡಿಯುವ ಮಗುವಾದರೆ ದಿನಕ್ಕೆ 6 ಬಾರಿ ಹಾಲುಣಿಸಬೇಕು. ‘3. ಮಕ್ಕಳ…

Read More

ದೇಶ ವಿಭಜನೆಯ ಹೇಳಿಕೆ ನೀಡಿದ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಲೋಕಸಭಾ ಸದಸ್ಯ ಡಿಕೆ ಸುರೇಶ್ ರವರ ವಿರುದ್ಧ ಇಂದು ಗುಂಡ್ಲುಪೇಟೆ ಪಟ್ಟಣದಲ್ಲಿ ಬಿಜೆಪಿ ವತಿಯಿಂದ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು KSRTC ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿ ಡಿ ಕೆ ಸುರೇಶ್ ಪ್ರತಿಕೃತಿ ದಯಿಸಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರಣಯ್ ದೇಶ ವಿಭಜನೆ ಎಂಬ ಪಿಡುಗು ಕಾಂಗ್ರೆಸ್ಸ್ ನವರ ಡಿಎನ್ಎ ದಲ್ಲೇ ಬಂದಿದೆ,ಸ್ವಾತಂತ್ರದ ದಿನದಿಂದಲೂ ದೇಶವನ್ನ ಹೊಡೆದು ಆಳುವ ನೀತಿಯನ್ನ ಕಾಂಗ್ರೆಸ್ಸ್ ನವರು ಮಾಡಿಕೊಂಡು ಬಂದಿದ್ದಾರೆ ಇದರ ಮುಂದುವರೆದ ಭಾಗವಾಗಿ ಇಂದಿನ ಕಾಂಗ್ರೆಸ್ಸ್ ನವರು ನಡೆದುಕೊಳ್ಳುತ್ತಿದ್ದಾರೆ. ಇಂತಹ ಹೇಳಿಕೆ ಕೊಡಲು ಡಿ ಕೆ ಸುರೇಶ್ ರವರಿಗೆ ನಾಚಿಕೆಯಾಗಬೇಕು ಹಾಗು ಇವರ ಹೇಳಿಕೆ ಗಳನ್ನ ಸಮರ್ಥನೆ ಮಾಡಿಕೊಳ್ಳುತ್ತಿರುವ ಕಾಂಗ್ರೆಸ್ಸ್ ನಾಯಕರುಗಳ ವರ್ತನೆಯು ಅದೇ ರೀತಿಯಾಗಿದೆ ಎಂದು ಕಿಡಿಕಾರಿದರು, ಕೂಡಲೇ ಡಿ ಕೆ ಸುರೇಶ್ ರವರನ್ನ ಸಂಸತ್ ಸದ್ಯಸ್ಯ ಸ್ಥಾನದಿಂದ ವಜಾ ಮಾಡಬೇಕೆಂದು ಆಗ್ರಹ ಆಗ್ರಹಿಸಿದರು.…

Read More

ರಾಂಚಿ: ಜಾರ್ಖಂಡ್ ನೂತನ ಮುಖ್ಯಮಂತ್ರಿ ಚಂಪೈ ಸೊರೇನ್ (Champai Soren) ಸೋಮವಾರ ವಿಧಾನಸಭೆಯಲ್ಲಿ ವಿಶ್ವಾಸ ಮತದ ಪರೀಕ್ಷೆಯಲ್ಲಿ ಗೆದ್ದಿದ್ದಾರೆ. 81 ಶಾಸಕರ ಪೈಕಿ 47 ಶಾಸಕರ ಬೆಂಬಲ ಪಡೆಯುವ ಮೂಲಕ ಅವರು ಯಶಸ್ವಿಯಾಗಿ ಬಹುಮತ ಸಾಬೀತುಪಡಿಸಿದ್ದಾರೆ. ಹೊಸ ಸರ್ಕಾರಕ್ಕೆ ಬಹುಮತವಿದೆ ಎಂದು ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಘೋಷಿಸಿದ ಬೆನ್ನಲ್ಲೇ ಶಾಸಕರು ಹರ್ಷೋದ್ಗಾರಗಳೊಂದಿಗೆ ಮುಖ್ಯಮಂತ್ರಿಯನ್ನು ಅಭಿನಂದಿಸಿದರು. ಜಾರ್ಖಂಡ್ (Jharkhand) ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಮುಖ್ಯಮಂತ್ರಿ ಚಂಪೈ ಸೊರೇನ್ ಮೊದಲು ವಿಶ್ವಾಸಮತ ಯಾಚನೆ ಮಂಡಿಸಿದರು. ಬಳಿಕ ಮಾತನಾಡಿದ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಬಿಜೆಪಿ ಚುನಾಯಿತ ರಾಜ್ಯ ಸರ್ಕಾರವನ್ನು “ಅಸ್ಥಿರಗೊಳಿಸಲು” ಪ್ರಯತ್ನಿಸಿದೆ ಎಂದು ಹೇಳಿದರು. ಈ ಮೂಲಕ ಅವರು ಬಂಧಿತ ಮತ್ತು ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರಿಗೆ ಕ್ಲೀನ್ ಚಿಟ್ ನೀಡಿದರು.  ಹೇಮಂತ್ ಸೂರೇನ್ ಅವರು ಮಾಡದ ಅಪರಾಧಕ್ಕಾಗಿ ಅವರನ್ನು ಎಳೆಯಲಾಗುತ್ತಿದೆ. ಹೇಮಂತ್ ಸೊರೇನ್ (Hemant Soren) ಅವರನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಲು ಬಿಜೆಪಿ ಕೇಂದ್ರೀಯ ಸಂಸ್ಥೆಗಳನ್ನು ಬಳಸಿಕೊಂಡಿದೆ ಎಂದು ಚಂಪೈ…

Read More

ಚಾಮರಾಜನಗರ: ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಟಿಕೆಟ್ ಆಕಾಂಕ್ಷಿ ಯೊಬ್ಬರು ಆಪ್ತರ ಬಳಗಕ್ಕೆ ಭರ್ಜರಿ ಬಾಡೂಟ ಆಯೋಜನೆ ಮಾಡಿದ್ದಾರೆ. ಚಾಮರಾಜನಗರ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಡಿ‌.ಎನ್.ನಟರಾಜು ಅವರು ಬಿಳಿಗಿರಿರಂಗನಬೆಟ್ಟದ ತಪ್ಪಲಿನ ವಡ್ಡಗೆರೆಯ ಖಾಸಗಿ ಸಭಾಂಗಣದಲ್ಲಿ ಭರ್ಜರಿ ಔತಣಕೂಟ ನಡೆಸಿದ್ದಾರೆ. ಇನ್ನು,,ಈ ಔತಣಕೂಟದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು, ಪಕ್ಷದ ಮುಖಂಡರು, ಅಭಿಮಾನಿ ಬಳಗ ಹಾಗೂ ಸಮುದಾಯಗಳ ಮುಖಂಡರು ಸೇರಿದಂತೆ ಸಹಸ್ರಾರು ಮಂದಿ ಭಾಗಿಯಾಗಿದ್ದಾರೆ. ಮಟನ್,ಚಿಕನ್, ಮೊಟ್ಟೆ, ಮುದ್ದೆ, ಅನ್ನ- ಸಾರು ಸೇರಿದಂತೆ ವಿವಿಧ ಬಗೆಯ ಮಾಂಸ ಭಕ್ಷ್ಯಗಳನ್ನು ಉಣಬಡಿಸಲಾಗಿದೆ. ಕೆಲ ತಿಂಗಳುಗಳ ಹಿಂದೆಯಷ್ಟೇ ಕವಲಂದೆಯಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ತಮಗೆ ಈ ಬಾರಿ ಟಿಕೆಟ್ ಕೊಡಬೇಕೆಂದು ಪ್ರಬಲವಾಗಿ ಒತ್ತಾಯಿಸಿದ್ದರು.

Read More

ಹುಬ್ಬಳ್ಳಿ: ಪತಂಜಲಿ ಯೋಗ ಸಮಿತಿ, ಹುಬ್ಬಳ್ಳಿ ವತಿಯಿಂದ ಇಂದು ಬೆಳಿಗ್ಗೆ ಹುಬ್ಬಳ್ಳಿಯ ಬಿಡ್ನಾಳದ ಆರ್ ಕೆ ಪಾಟೀಲ್ ಹೈಸ್ಕೂಲಿನಲ್ಲಿ ವಿಶೇಷ ಯೋಗ ಶಿಬಿರ ಮತ್ತು ಅಗ್ನಿಹೋತ್ರ ಕಾರ್ಯಕ್ರಮ ಆಯೋಜಿಸಲಾಯಿತು. ಯೋಗ ಮಾರ್ಗದರ್ಶನ ಮತ್ತು ಪವಿತ್ರ ಅಗ್ನಿಹೋತ್ರ ಕಾರ್ಯಕ್ರಮ ನೆರವೇರಿಸಿ ಮಾತನಾಡಿದ ಭಾರತೀಯ ಯೋಗ ಸಂಸ್ಥೆ, ಕರ್ನಾಟಕದ ಅಧ್ಯಕ್ಷರು ಮತ್ತು ಪತಂಜಲಿ ಯೋಗ ಪೀಠ, ಹರಿದ್ವಾರದ ಅಂತರರಾಷ್ಟ್ರೀಯ ಯೋಗ ಗುರು ಭವರಲಾಲ್ ಆರ್ಯ ಅವರು, ” ಜನವರಿ 22 ರಂದು ಅಯೋಧ್ಯೆಯಲ್ಲಿ ಶ್ರೀ ರಾಮ ದೇವರ ಪ್ರಾಣ ಪ್ರತಿಷ್ಠಾಪನೆಯ ನಂತರದಲ್ಲಿ ನಾಸ್ತಿಕರು ಕೂಡಾ ಆಸ್ತಿಕರಾಗಿದ್ದಾರೆ, ದೇವರನ್ನು ಪೂಜಿಸುತ್ತಿದ್ದಾರೆ, ಮಠ ಮಂದಿರ ದೇವಸ್ಥಾನಗಳಿಗೆ ಹೋಗುತ್ತಿದ್ದಾರೆ, ಹೋಮ – ಹವನಗಳನ್ನು ಮಾಡುತ್ತಿದ್ದಾರೆ. ಅಯೋಧ್ಯೆಯ ರಾಮ ಮಂದಿರ ಲೋಕಾರ್ಪಣೆಯಿಂದಾಗಿ ಭಾರತದಲ್ಲಿ ರಾಮರಾಜ್ಯದ ಪರ್ವಕಾಲ ಶುರುವಾಗಿದೆ, ಸಂಪೂರ್ಣ ಭಾರತದಾದ್ಯಂತ ಜೊತೆಗೆ ವಿಶ್ವದ ಅನೇಕಾನೇಕ ದೇಶಗಳಲ್ಲಿ ಎಲ್ಲಾ ಕಡೆ ಶ್ರೀ ರಾಮ ದೇವರ ಬಗೆಗಿನ ವಾತಾವರಣ ಸೃಷ್ಟಿಯಾಗಿದೆ. ನಾವೆಲ್ಲರೂ ಮರ್ಯಾದಾ ಪುರುಷೋತ್ತಮ ಶ್ರೀ ರಾಮ ದೇವರ ಪೂಜೆ, ಧ್ಯಾನದೊಂದಿಗೆ ಪ್ರತಿ…

Read More