Author: AIN Author

ಬೆಂಗಳೂರು: ಲೋಕಸಭೆ ಚುನಾವಣೆಗಾಗಿ ಮಾಜಿ ಮುಖ್ಯಮಂತ್ರಿಗಳು ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಎಲ್ಲಾ 28 ಕ್ಷೇತ್ರಗಳಿಗೆ ಉಸ್ತುವಾರಿ, ಸಹ ಉಸ್ತುವಾರಿಗಳನ್ನು ನೇಮಕ ಮಾಡಿದ್ದಾರೆ. ಈ ಬಗ್ಗೆ ಅವರು ಪ್ರಕಟಣೆ ಹೊರಡಿಸಿದ್ದಾರೆ. 1.ಚಿಕ್ಕೋಡಿ: ಉಸ್ತುವಾರಿ: ಕೆ.ಪಿ.ಮೇಗಣ್ಣನವರ ಸಹ ಉಸ್ತುವಾರಿ: ಶಹಜಾನ್ ಇಸ್ಮಾಯಿಲ್ ಡೊಂಗರ ಗಾಂವ್, ಪ್ರದೀಪ ಮಾಳಗಿ 2.ಬೆಳಗಾವಿ: ಉಸ್ತುವಾರಿ: ಶಂಕರ ಮಾಡಳಗಿ ಸಹ ಉಸ್ತುವಾರಿ: ನಾಜೀರ್ ಭಗವಾನ್ 3.ಬಾಗಲಕೋಟೆ: ಉಸ್ತುವಾರಿ: ಹನುಮಂತ ಮವಿನಮರದ ಸಹ ಉಸ್ತುವಾರಿ: ಮುಕ್ತುಮ್ ಸಬ್ ಮುದೊಳ್, ಪ್ರದೀಪ ಮಾಳಗಿ 4.ವಿಜಯಪುರ: ಉಸ್ತುವಾರಿ: ಭೀಮನಗೌಡ ಬಸನಗೌಡ ಪಾಟೀಲ್ (ರಾಜುಗೌಡ) ಸಹ ಉಸ್ತುವಾರಿ ದೇವಾನಂದ್ ಚೌಹಾಣ್ , ಸೋಮನಗೌಡ ಪಾಟೀಲ್, ಬಸವರಾಜ್ ಪಾಟೀಲ್ 5.ಕಲಬುರಗಿ: ಉಸ್ತುವಾರಿ: ದೊಡ್ಡಪ್ಪ ಶಿವಲಿಂಗಪ್ಪ ಗೌಡ ಸಹ ಉಸ್ತುವಾರಿ: ಶರಣುಗೌಡ ಕಂದಕೂರು, ಬಂಡೆಪ್ಪ ಕಾಷೆಂಪೂರ್, ಬಾಲರಾಜ್ ಗುತ್ತೇದಾರ್, ಅಶೋಕ್ ಗುತ್ತೇದಾರ್ 6.ರಾಯಚೂರು: ಉಸ್ತುವಾರಿ: ವೆಂಕಟರಾವ್ ನಾಡಗೌಡ ಸಹ ಉಸ್ತುವಾರಿ: ಅಲ್ಕೊಡ್ ಹನುಮಂತಪ್ಪ, ಕರೆಮ್ಮ ನಾಯಕ್, ರಾಜಾ ವೆಂಕಟಪ್ಪ ನಾಯಕ ದೊರೆ, ಗುರುಲಿಂಗಪ್ಪ ಗೌಡ 7.ಬೀದರ್:…

Read More

ಧಾರವಾಡ:- ಬಿಜೆಪಿಯವರದ್ದು ಕೇವಲ ಟಿವಿಯಲ್ಲಿ ದೇವರನ್ನು ತೋರಿಸುವ ಪ್ರವೃತ್ತಿ ಎಂದು ಸಂತೋಷ್ ಲಾಡ್ ಹೇಳಿದ್ದಾರೆ. ಧಾರವಾಡದ ಕೆಸಿಡಿ ಮೈದಾನದಲ್ಲಿ ಗ್ಯಾರಂಟಿ ಫಲಾನುಭವಿಗಳ ಸಮಾವೇಶದಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳನ್ನು ಕೊಟ್ಟ ನಮ್ಮ ಸಿದ್ದರಾಮಯ್ಯ ಪರ ನೀವು ಇರಬೇಕೊ ಬೇಡವೋ? ಅದಕ್ಕೆ ತಾವು ಬೆಂಬಲ ಕೊಡಬೇಕು ಎಂದು ಫಲಾನುಭವಿಗಳಲ್ಲಿ ಮನವಿ ಮಾಡಿದರು. ಬಿಜೆಪಿಯವರು ಕೇವಲ ಟಿವಿಯಲ್ಲಿ ದೇವರನ್ನು ತೋರಿಸುತ್ತಾರೆ. ನಮ್ಮ ಸರ್ಕಾರ ದೇವಸ್ಥಾನಗಳಿಗೆ ಉಚಿತವಾಗಿ ಹೋಗಲು ಅವಕಾಶ ಮಾಡಿಕೊಟ್ಟಿದೆ. ನಿಮಗೆ ಐದು ಕೆಜಿ ಅಕ್ಕಿ ಸಿಗುತ್ತಿದೆ, ಅಕ್ಕಿ ಬದಲಿಗೆ ದುಡ್ಡು ಬರುತ್ತಿದೆ. ಯಾರೂ ಹಸಿವಿನಿಂದ ಬಳಲಬಾರದು ಅಂತಾ ಕಾರ್ಯಕ್ರಮ ತಂದಿದ್ದೇವೆ. ಇದು ಬಿಜೆಪಿ ಗ್ಯಾರಂಟಿ ಅಲ್ಲ, ಕಾಂಗ್ರೆಸ್ ಸರ್ಕಾರದ ಕಾರ್ಯಕ್ರಮ. 9 ವರ್ಷಗಳಿಂದ ಅವರು (ಬಿಜೆಪಿ) ಪ್ರಚಾರ ಮಾಡಲಿಲ್ಲ. ನಮ್ಮ ಗ್ಯಾರಂಟಿಗಳು ಬರುತಿದ್ದಂತೆ ಆ ಹೆಸರು ಕಾಪಿ ಮಾಡಿ ಮೋದಿ ಗ್ಯಾರಂಟಿ ಎನ್ನುತಿದ್ದಾರೆ. ಇತಿಹಾಸವನ್ನು ಸುಳ್ಳು ಹೇಳುವ ಕೆಲಸ ಆರಂಭವಾಗಿದೆ ಎಂದರು. ಬಿಜೆಪಿಯವರು ಹಿಂದೂ ಹಾಗೂ ಹಿಂದುತ್ವದ ಬಗ್ಗೆ ಮಾತನಾಡುತ್ತಾರೆ. ಈ‌ ಪದ…

Read More

ನವದೆಹಲಿ:- ಅನುದಾನ ಹಂಚಿಕೆಯಲ್ಲಿ ರಾಜ್ಯಗಳ ನಡುವೆ ತಾರತಮ್ಯ ಸಾಧ್ಯವಿಲ್ಲ ಎಂದು ನಿರ್ಮಲಾ ಸೀತಾರಾಮನ್ ಸ್ಪಷ್ಟನೆ ನೀಡಿದ್ದಾರೆ. ಕೆಲವು ರಾಜ್ಯಗಳು ಮಾಡುತ್ತಿರುವ ತೆರಿಗೆ ತಾರತಮ್ಯ ರಾಜಕೀಯವಾಗಿ ದೂಷಣೆಯಾಗಿದ್ದು, ಇದು ಸತ್ಯವಲ್ಲ. ಕೇಂದ್ರ ಹಣಕಾಸು ಆಯೋಗದ ಶಿಫಾರಸು ಅನ್ವಯ ಅನುದಾನ ನೀಡುತ್ತಿದೆ ಎಂದರು. ಹಣಕಾಸು ಆಯೋಗವು ಎಲ್ಲಾ ರಾಜ್ಯಗಳಿಗೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಗಳನ್ನು ಪರಿಶೀಲಿಸಿ ಶಿಫಾರಸು ಮಾಡುತ್ತದೆ. ಇದು ರಾಜ್ಯ ಸರ್ಕಾರಗಳಿಗೂ ಗೊತ್ತು. ಈ ಸತ್ಯಾಂಶ ಬಿಟ್ಟು ರಾಜಕೀಯ ಆರೋಪ ಮಾಡಲಾಗುತ್ತಿದೆ ಎಂದರು. ಮುಂದುವರಿದು ಬೇಕಾಬಿಟ್ಟಿ ಹಣ ಖರ್ಚು ಮಾಡಿ ನಿಮ್ಮ ರಾಜ್ಯದ ಬಜೆಟ್ ಅನ್ನು ಉಳಿಸಿಕೊಳ್ಳಲು ಸಾಧ್ಯವಾಗದೇ ಕೇಂದ್ರ ಸರ್ಕಾರವನ್ನು ದೂಷಿಸಬೇಡಿ ಎಂದು ಕಿಡಿಕಾರಿದರು. ಯಾವುದೇ ಕೇಂದ್ರ ಹಣಕಾಸು ಸಚಿವರು ಹಣಕಾಸು ಆಯೋಗದ ಶಿಫಾರಸುಗಳೊಂದಿಗೆ ಆಟವಾಡಲು ಸಾಧ್ಯವಿಲ್ಲ. ನನಗೆ ಈ ರಾಜ್ಯ ಇಷ್ಟವಿಲ್ಲ. ತೆರಿಗೆ ಮರುಪಾವತಿಯನ್ನು ನಿಲ್ಲಿಸಿ ಎಂದು ಹೇಳಲು ಯಾವುದೇ ಹಣಕಾಸು ಸಚಿವರಿಗೆ ಅಧಿಕಾರ ಇಲ್ಲ. ಸಚಿವರು ಮಧ್ಯಪ್ರವೇಶಿಸಲು ಸಾಧ್ಯವಿಲ್ಲ. ಈ ವ್ಯವಸ್ಥೆ ಉತ್ತಮವಾಗಿದೆ ಎಂದು ಅಭಿಪ್ರಾಯಪಟ್ಟರು.

Read More

ಬೆಂಗಳೂರು:- ಬಿಜೆಪಿ ಸಂಸದರು ಗಂಡಸರಲ್ಲ ಎಂದ ಬಾಲಕೃಷ್ಣಗೆ ಇಂದಿರಾ ಫೋಟೋ ಮೂಲಕ ವಿಜಯೇಂದ್ರ ಟಾಂಗ್ ಕೊಟ್ಟಿದ್ದಾರೆ. ಇಂದಿರಾ ಗಾಂಧಿ ಅವರು ಒಬ್ಬರೇ ಕುರ್ಚಿ ಮೇಲೆ ಕುಳಿತುಕೊಂಡಿದ್ದು, ಇನ್ನುಳಿದ ಕಾಂಗ್ರೆಸ್​ ನಾಯಕರು ಅವರ ಮುಂದೆ ಕೈಕಟ್ಟಿಕೊಂಡು ನಿಂತಿರುವ ಫೋಟೋವನ್ನು ಹಂಚಿಕೊಳ್ಳುವ ಮೂಲಕ ವಿಜಯೇಂದ್ರ ಅವರು ಬಾಲಕೃಷ್ಣ ಅವರಿಗೆ ಟಾಂಗ್ ಕೊಟ್ಟಿದ್ದಾರೆ. ಬ್ರಿಟಿಷರು ದೇಶಬಿಟ್ಟು ತೊಲಗಿದರೂ ನೆಹರೂ ಕುಟುಂಬದ ಗುಲಾಮಗಿರಿಯ ನೆರಳಲ್ಲೇ ಇರುವ ಶಾಸಕ ಬಾಲಕೃಷ್ಣನವರಂತಹ ಕಾಂಗ್ರೆಸ್ಸಿಗರು ಇಂದು ನಮ್ಮ ಪಕ್ಷದ ಸಂಸದರುಗಳನ್ನು ಕುರಿತು ನೀಡಿರುವ ಕೀಳುಮಟ್ಟದ ಹೇಳಿಕೆಗೆ ಈ ಚಿತ್ರವೇ ಉತ್ತರ ಹೇಳುತ್ತದೆ ಎಂದು ಟಾಂಗ್​ ಕೊಟ್ಟಿದ್ದಾರೆ. https://x.com/BYVijayendra/status/1754482298739954127?s=20

Read More

ನವದೆಹಲಿ:- ಫೆಬ್ರವರಿ 7 ರಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ಪ್ರೊಟೆಸ್ಟ್ ನಡೆಸಲಿದ್ದು, ಹೀಗಾಗಿ ಪ್ರತಿಭಟನಾ ಸ್ಥಳ ದೆಹಲಿಯ ಜಂತರ್ ಮಂತರ್​ಗೆ ಡಿಸಿಎಂ ಡಿಕೆ ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಸಂಸದ ಡಿ.ಕೆ.ಸುರೇಶ್​, ಕಾಂಗ್ರೆಸ್ ನಾಯಕ ಮೊಹಮ್ಮದ್ ನಲಪಾಡ್​ ಇದ್ದರು. ಬಳಿಕ ಮಾತನಾಡಿದ ಡಿಕೆ ಶಿವಕುಮಾರ್, ಇದು‌ ಸರ್ಕಾರದ ಹೋರಾಟ, ಕಾಂಗ್ರೆಸ್, ಬಿಜೆಪಿಗೆ ಸಂಬಂಧವಿಲ್ಲ. ಕೇಂದ್ರದ ಗಮನ ಸೆಳೆಯಲು ಹೋರಾಟ ಮಾಡುತ್ತಿದ್ದೇವೆ. ನಮ್ಮ ಅನುದಾನ ನಮ್ಮ ಹಕ್ಕು, ಜನರಿಗೆ ಮನದಟ್ಟು ಮಾಡಬೇಕು. ನಮಗೆ ಸಿಗಬೇಕಾದ ಪಾಲು ಕೊಡಿಸುವುದು ನಮ್ಮ ಕರ್ತವ್ಯ. ಜನ ವೋಟ್ ಕೊಟ್ಟು ಗೆಲ್ಲಿಸಿದ್ದಾರೆ, ನ್ಯಾಯ ಸಲ್ಲಿಸಬೇಕಲ್ಲವೇ? ಕೇಂದ್ರ ಸರ್ಕಾರದ ಬಳಿ ಬಿಜೆಪಿ ಸಂಸದರು ಬಾಯಿ ಬಿಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು. ಸ್ಟಂಟ್ ಮಾಡಲು ನಾನು ಸಿನಿಮಾ ನಟನಲ್ಲ. ಕೇಂದ್ರ ಬಳಿ ಅನುದಾನ ಕೇಳಲು ನಿಮಗೆ ಬಾಯಿ ಇಲ್ಲ ಅಂದರೆ ನಮಗೆ ಇಲ್ವಾ? ನೀವು ಇದ್ದಾಗ ಏನೂ ಮಾಡಿಲ್ಲ. ಬರ ಪರಿಹಾರಕ್ಕೆ ನಮ್ಮ ಸಚಿವರು ಬೇಡಿಕೆ ಇಟ್ಟಿದ್ದಾರೆ.…

Read More

ಚಿತ್ರರಂಗದಲ್ಲಿ ಅವಕಾಶಕ್ಕಾಗಿ, ಗೆಲುವಿಗಾಗಿ ಹಾತೊರೆಯುವವರೇ ಹೆಚ್ಚು. ಅಂತಹ ಆಕರ್ಷಣೆ ಈ ರಂಗಕ್ಕಿದೆ. ಹೀಗಿದ್ದರೂ ಇಲ್ಲಿ ಯಶಸ್ಸು ಸಿಕ್ಕಿಯೂ ಈ ಕ್ಷೇತ್ರ ಬಿಟ್ಟು ಯುಪಿಎಸ್ಸಿ ಸಿಎಸ್‌ಇ ಪರೀಕ್ಷೆ ಬರೆದು.. ಮೊದಲ ಪ್ರಯತ್ನದಲ್ಲೇ ಐಪಿಎಸ್‌ ಆದ ಮಹಿಳಾ ಮಣಿಯ ಸಕ್ಸಸ್ ಸ್ಟೋರಿ ಇದು. ಅವರೇ 2010 ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ಸಿಮಲಾ ಪ್ರಸಾದ್. ಹೆಸರಾಂತ ಐಎಎಸ್‌ ಅಧಿಕಾರಿ ಭಾಗೀರಥ್ ಪ್ರಸಾದ್ ಮತ್ತು ಪ್ರಸಿದ್ಧ ಲೇಖಕಿ ಮೆಹರುನ್ನಿಸಾ ಪರ್ವೇಜ್ ದಂಪತಿಗೆ ಜನಿಸಿದ ಸಿಮಲಾ ಅವರ ಆರಂಭಿಕ ಒಲವು ಪ್ರದರ್ಶನ ಕಲೆಗಳತ್ತ, ವಿಶೇಷವಾಗಿ ನಟನೆ ಮತ್ತು ನೃತ್ಯದತ್ತ ವಾಲಿತ್ತು. ಮಧ್ಯ ಪ್ರದೇಶ ಮೂಲದ ಸಿಮಲಾ ರವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಭೂಪಾಲ್‌ನ ಸೇಂಟ್ ಜೋಸೆಫ್ ಸ್ಕೂಲ್‌ನಲ್ಲಿ ಪಡೆದರು. ನಂತರ ಪದವಿ ಶಿಕ್ಷಣವನ್ನು ಕಾಮರ್ಸ್‌ನಲ್ಲಿ ಪಡೆದಿದ್ದರು. ಸ್ನಾತಕೋತ್ತರ ಪದವಿಯಲ್ಲಿ ಸಮಾಜಶಾಸ್ತ್ರ ವಿಷಯವನ್ನು ಭೂಪಾಲ್‌ನಲ್ಲಿಯ ಬರ್ಕಾತುಲ್ಲಾಹ್‌ ವಿಶ್ವವಿದ್ಯಾಲಯದಲ್ಲಿ ಮುಗಿಸಿದರು. ತಂದೆ ಐಎಎಸ್‌ ಅಧಿಕಾರಿಯಾಗಿದ್ದರು ಸಹ ನಾಗರೀಕ ಸೇವೆಯ ಮಾರ್ಗವು ಅವರನ್ನು ಆಕರ್ಷಿಸಿರಲಿಲ್ಲ. ಸ್ನಾತಕೋತ್ತರ ಪದವಿ ಮುಗಿಸಿದ ನಂತರ ನಟನೆಯತ್ತ…

Read More

ನವದೆಹಲಿ:- ಬಿಜೆಪಿಯ ಹಿರಿಯ ನಾಯಕ, ಮಾಜಿ ಉಪ ಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನ ಘೋಷಿಸಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಇತ್ತೆಹಾದ್ ಮಿಲ್ಲತ್ ಕೌನ್ಸಿಲ್’ ಮುಖ್ಯಸ್ಥ ಮೌಲಾನಾ ತೌಕೀರ್ ರಝಾ ವಿಷ ಕಾರಿದ್ದಾರೆ. ಈ ಸಂಬಂಧ ಹೇಳಿಕೆ ನೀಡಿರುವ ಅವರು, ಅಡ್ವಾಣಿಯವರಿಗೆ ಭಾರತ ರತ್ನ ನೀಡಿರುವುದರಿಂದ, ಆ ಪ್ರಶಸ್ತಿಗೆ ಮಾಡಿದ ಘೋರ ಅವಮಾನವಾಗಿದೆ. ಭಾಜಪದ ಹಿರಿಯ ನಾಯಕ ಹಾಗೂ ಮಾಜಿ ಉಪ ಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ‘ಭಾರತ ರತ್ನ’ ನೀಡಿ ಗೌರವಿಸುವ ಹಿನ್ನೆಲೆಯಲ್ಲಿ ಅವರು ಮೇಲಿನ ಹೇಳಿಕೆಗಳನ್ನು ನೀಡಿದ್ದಾರೆ. ಭಾರತದಲ್ಲಿ ದ್ವೇಷ, ಅಪ್ರಾಮಾಣಿಕತೆ, ಅನ್ಯಾಯ ಮತ್ತು ನಿರುದ್ಯೋಗ ಹೆಚ್ಚಾಗಿದೆ. ಇದಕ್ಕೆ ಅಡ್ವಾಣಿ ಜವಾಬ್ದಾರರಾಗಿದ್ದಾರೆ. ಮುಸಲ್ಮಾನರಿಗೆ ದೇಶದಲ್ಲಿ ಮತಾಂಧತೆ ಮತ್ತು ಯುದ್ಧದ ವಾತಾವರಣ ಬೇಕಾಗಿಲ್ಲ. ಮಸೀದಿಗಳನ್ನು ಕೆಡವಬೇಕು, ಮುಸ್ಲಿಮರನ್ನು ಕೊಲ್ಲಬೇಕು, ಅವರನ್ನು ಅವಮಾನಿಸಬೇಕು, ಅವರ ಹೆಣ್ಣುಮಕ್ಕಳ ದಾರಿ ತಪ್ಪಿಸಬೇಕು ಇದು ನಮಗೆ ಅಪೇಕ್ಷಿತವಿಲ್ಲ. ಜಮಾತೆ ಇಸ್ಲಾಮಿ ಹಿಂದ’ನ ಕಾರ್ಯದರ್ಶಿ ಮಲಿಕ ಮೊಹತಸೀಮ…

Read More

ಬೆಂಗಳೂರು:- ಸುಮಾರು 55 ವರ್ಷದ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿರುವ ಘಟನೆ ನಗರದ ಮಲ್ಲೇಶ್ವರಂ ರೈಲ್ವೆ ಟ್ರ್ಯಾಕ್​ ಬಳಿ ಘಟನೆ ಜರುಗಿದೆ. ಘಟನಾ ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆಗಾಗಿ ಶವವನ್ನು ರವಾನಿಸಲಾಗಿದೆ. ಪೊಲೀಸರಿಂದ ತನಿಖೆ ಮುಂದುವರಿದಿದೆ.

Read More

ಬೆಂಗಳೂರು:- ಕೇಂದ್ರದ ಗೂಬೆ ಕೂರಿಸುವ ಕೆಲಸವನ್ನು ಸಿದ್ದರಾಮಯ್ಯ ನಿಲ್ಲಿಸಲಿ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ರಾಜ್ಯದಲ್ಲಿ ಈಗ ರೈತವಿರೋಧಿ ಮತ್ತು ಜನ ವಿರೋಧಿ ಸರ್ಕಾರ ಅಧಿಕಾರದಲ್ಲಿದೆ. ಅಧಿಕಾರಕ್ಕೆ ಬಂದು 9 ತಿಂಗಳು ಕಳೆದರೂ ಒಂದು ಚಿಕ್ಕ ಅಭಿವೃದ್ಧಿ ಕಾಮಗಾರಿಯನ್ನೂ ಸರ್ಕಾರ ಕೈಗೆತ್ತಿಕೊಂಡಿಲ್ಲ. ಬರದಿಂದ ಕಂಗಾಲಾಗಿರುವ ರೈತರಿಗೆ ಪರಿಹಾರ ರೂಪದಲ್ಲಿ ಒಂದು ನಯಾ ಪೈಸೆಯನ್ನೂ ಇದುವರೆಗೆ ಕೊಟ್ಟಿಲ್ಲ. ಆರ್ಥಿಕ ಸದೃಢವಾಗಿದ್ದ ರಾಜ್ಯವನ್ನು ದೈನೇಸಿ ಸ್ಥಿತಿಗೆ ತಂದು ಅದನ್ನು ಮುಚ್ಚಿಹಾಕಲು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ ಎಂದು ಬೊಮ್ಮಾಯಿ ಹೇಳಿದರು. 14ನೇ ಹಣಕಾಸು ವರ್ಷಕ್ಕಿಂತ 15 ನೇ ಹಣಕಾಸು ವರ್ಷದಲ್ಲಿ ರಾಜ್ಯಕ್ಕೆ ಕಡಿಮೆ ಸಿಕ್ಕಿದೆ ಅಂತ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಆದರೆ ಅವರು ಅರ್ಥಮಾಡಿಕೊಳ್ಳಬೇಕಿರುವ ಅಂಶವೆಂದರೆ, ಹಣಕಾಸು ಅಯೋಗ ಒಂದು ಸ್ವಾಯತ್ತ ಸಂಸ್ಥೆ ಎಂದು ಬೊಮ್ಮಾಯಿ ಹೇಳಿದರು.

Read More

ನವದೆಹಲಿ:- ಪ್ರತ್ಯೇಕ ರಾಷ್ಟ್ರ ಹೇಳಿಕೆಗೆ ಡಿಕೆ ಸುರೇಶ್​ ಹೇಳಿಕೆ ಪ್ರಸ್ತಾಪಿಸಿ ಲೋಕಸಭೆಯಲ್ಲಿ PM ಮೋದಿ ಅವರು ಹಿಗ್ಗಾಮುಗ್ಗಾ ಜಾಡಿಸಿದ್ದಾರೆ. ಬಹಿರಂಗವಾಗಿ ದೇಶ ಒಡೆಯುವ ಬಗ್ಗೆ ಮಾತನಾಡುತ್ತಿದ್ದಾರೆ. ಒಗ್ಗೂಡಿಸುವುದು ಇರಲಿ. ಒಡೆಯುವ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಈ ಬಾರಿಯ ಲೋಕಸಭೆಯ ಕೊನೆಯ ಭಾಷಣವನ್ನು ಇಂದು ಸಂಸತ್​ನಲ್ಲಿ ಮಾಡಿರುವ ಮೋದಿ, ಇನ್ನೂ ಭಾರತ ದೇಶವನ್ನು ಎಷ್ಟು ತುಂಡು ಗಳನ್ನಾಗಿ ಮಾಡುತ್ತಿರಾ? ಇಷ್ಟು ಒಡೆದಿರುವುದು ಸಾಕಾಗಿಲ್ವಾ. ದೇಶವನ್ನು ಇನ್ನೆಷ್ಟು ತುಂಡು ಮಾಡಬೇಕು ಅಂದುಕೊಂಡಿದ್ದೀರಿ. ಕಾಂಗ್ರೆಸ್​​ನವರು ಎಂದೂ ಕೂಡ ದೇಶವನ್ನು ಜೋಡಿಸಿಲ್ಲ. ಜವಾಹರಲಾಲ್ ನೆಹರು ತಪ್ಪಿನಿಂದ ಕಾಶ್ಮೀರ ಸಮಸ್ಯೆ ಸೃಷ್ಟಿಯಾಯಿತು. ನೆಹರು ಹೊರಟು ಹೋದ್ರು, ಆದ್ರೆ ದೇಶ ನೋವು ಅನುಭವಿಸುತ್ತಿದೆ. ಇಂದು ನಾವು ಜಮ್ಮು-ಕಾಶ್ಮೀರ ಅಭಿವೃದ್ಧಿ ಮಾಡಿದ್ದೇವೆ ಎಂದು ಟಾಂಗ್ ಕೊಟ್ಟರು. ಇನ್ನು ಸಂಸದ ಡಿ.ಕೆ.ಸುರೇಶ್ ಇತ್ತೀಚೆಗೆ ಬಜೆಟ್ ಕುರಿತು ಟೀಕಿಸುತ್ತಾ ಆಡಿದ ಪ್ರತ್ಯೇಕ ರಾಷ್ಟ್ರದ ಮಾತು ಕಾಂಗ್ರೆಸ್ ಬಿಜೆಪಿ ಮಧ್ಯೆ ಮತ್ತೊಂದು ಜಟಾಪಟಿಗೆ ಕಾರಣವಾಗಿದೆ. ಪ್ರತ್ಯೇಕ ರಾಷ್ಟ್ರದ ಬೇಡಿಕೆ ಕುರಿತು ಡಿಕೆ ಸುರೇಶ್​…

Read More