Author: AIN Author

ಮುಂಬೈ:- ಸಂಕಷ್ಟದಲ್ಲಿರುವ ಪೇಟಿಎಂ ನನ್ನು ಖರೀದಿ ಮಾಡಲು ಮುಕೇಶ್‌ ಅಂಬಾನಿ ಚಿಂತನೆ ನಡೆಸಿದ್ದಾರೆ. ಮಾರ್ಚ್‌ 1ರಿಂದ ಪೇಟಿಎಂ ಬಳಕೆದಾರರ ಪ್ರಿಪೇಯ್ಡ್‌ ಪೇಮೆಂಟ್‌, ಫಾಸ್ಟ್‌ಟ್ಯಾಗ್‌ಗಳಿಗೆ ಠೇವಣಿ ಸ್ವೀಕರಿಸದಂತೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್‌ಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ ನಿರ್ಬಂಧ ವಿಧಿಸಿದೆ. ಇದರಿಂದಾಗಿ ಪೇಟಿಎಂ ಸಂಕಷ್ಟಕ್ಕೆ ಸಿಲುಕಿದ್ದು, ಷೇರುಗಳ ಮೌಲ್ಯವೂ ಪಾತಾಳಕ್ಕೆ ಕುಸಿದಿದೆ. ಇದರ ಬೆನ್ನಲ್ಲೇ, ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ ಅವರು ಪೇಟಿಎಂ ಖರೀದಿಗೆ ಚಿಂತನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಮಾಧ್ಯಮಗಳಲ್ಲಿ ಈ ಕುರಿತು ವರದಿಯಾದ ಬೆನ್ನಲ್ಲೇ ಜಿಯೋ ಫೈನಾನ್ಶಿಯಲ್‌ ಸರ್ವಿಸಸ್‌ ಷೇರುಗಳ ಮೌಲ್ಯವು ಶೇ.14ರಷ್ಟು ಏರಿಕೆಯಾಗಿದೆ. ಪೇಟಿಎಂ ಮಾತೃಸಂಸ್ಥೆ ಒನ್‌ 97 ಕಮ್ಯುನಿಕೇಷನ್ಸ್‌ ಜತೆ ರಿಲಯನ್ಸ್‌ ಗ್ರೂಪ್‌ನ ಜಿಯೋ ಫೈನಾನ್ಶಿಯಲ್‌ ಸರ್ವಿಸಸ್‌ ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕ್‌ ಮಾತುಕತೆ ನಡೆಸುತ್ತಿವೆ. ಆರ್‌ಬಿಐ ನಿರ್ಬಂಧಕ್ಕೀಡಾಗಿರುವ ಪೇಟಿಎಂ ವ್ಯಾಲೆಟ್‌ ಖರೀದಿಗೆ ಚಿಂತನೆ ನಡೆದಿದೆ. ಹಾಗಾಗಿ, ಜಿಯೋ ಫೈನಾನ್ಶಿಯಲ್‌ ಸರ್ವಿಸಸ್‌ನ ಒಂದು ಷೇರಿನ ಮೌಲ್ಯ ಬಿಎಸ್‌ಇನಲ್ಲಿ 288.75 ರೂಪಾಯಿಗೆ ಏರಿಕೆಯಾಗಿದೆ. ಆದಾಗ್ಯೂ, ಪೇಟಿಎಂ ರಿಲಯನ್ಸ್‌ ತೆಕ್ಕೆಗೆ…

Read More

ಬೆಳ್ಳುಳ್ಳಿಯ 2 ಎಸಳನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವ ಬಗ್ಗೆ ಕೇಳಿರಬೇಕು, ಆದರೆ ಬೆಳ್ಳುಳ್ಳಿಯನ್ನು ತಿನ್ನುವುದರ ಜೊತೆಗೆ ಕುಡಿಯುವ ನೀರಿನ ಪ್ರಯೋಜನಗಳು ಇನ್ನೂ ಹೆಚ್ಚು. ಬೆಳ್ಳುಳ್ಳಿ ತುಂಬಾ ಆರೋಗ್ಯಕರ ಮೂಲಿಕೆ. ರೋಗಗಳಿಂದ ದೂರವಿರಲು ಬಯಸಿದರೆ, ಬೆಳಿಗ್ಗೆ 2 ಬೆಳ್ಳುಳ್ಳಿ ಎಸಳನ್ನು ಒಂದು ಲೋಟ ನೀರಿನೊಂದಿಗೆ ತಿನ್ನಲು ಪ್ರಾರಂಭಿಸಿ.   ಬೆಳ್ಳುಳ್ಳಿಯನ್ನು ಸಾದಾ ನೀರಿನ ಜೊತೆ ಕುಡಿಯಬಹುದು. ಉಗುರು ಬಿಸಿ ನೀರೇ ಆಗಬೇಕು ಎಂದೇನಿಲ್ಲ. ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಲು ಬೆಳ್ಳುಳ್ಳಿ ಸೇವಿಸಬಹುದು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ನೀರಿನೊಂದಿಗೆ ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ಏನು ಪ್ರಯೋಜನ ತಿಳಿಯೋಣ.  ಜೀರ್ಣಕಾರಿ ಶಕ್ತಿ ಬಲವಾಗಿರುತ್ತದೆ ಎರಡು ಎಸಳು ಬೆಳ್ಳುಳ್ಳಿಯನ್ನು ಒಂದು ಲೋಟ ನೀರಿನೊಂದಿಗೆ ಖಾಲಿ ಹೊಟ್ಟೆಯಲ್ಲಿ ಅಗಿಯುವಾಗ, ಜೀರ್ಣಕ್ರಿಯೆ ಚುರುಕುಗೊಳ್ಳುತ್ತದೆ. ಜೀರ್ಣಾಂಗ ವ್ಯವಸ್ಥೆಯು ತನ್ನ ಕೆಲಸವನ್ನು ಚೆನ್ನಾಗಿ ಮಾಡುತ್ತದೆ. ಉತ್ತಮ ಬ್ಯಾಕ್ಟೀರಿಯಾ ಮಟ್ಟವನ್ನು ಹೊಟ್ಟೆಯಲ್ಲಿ ನಿರ್ವಹಿಸಲಾಗುತ್ತದೆ.  ಬೆಳ್ಳುಳ್ಳಿ ನೀರು ಸೇವಿಸಿ ಏನೇ ಆಹಾರ ಸೇವಿಸಿದರೂ, ಅದು ಚೆನ್ನಾಗಿ ಜೀರ್ಣವಾಗುತ್ತದೆ. ಬೌಲ್ ಚಲನೆಗಳು ಸರಿಯಾಗಿ ಆಗುತ್ತವೆ. ಇದು…

Read More

ನವದೆಹಲಿ: ತಾಯಿ ತನ್ನ ಸಹೋದರಿಯನ್ನೇ ಹೆಚ್ಚು ಪ್ರೀತಿಸುತ್ತಾರೆ ಎಂದು ಹಿರಿಯ ಮಗಳು ಬುರ್ಕಾ (Burqa) ಧರಿಸಿ ಸ್ವಂತ ಮನೆಗೆ ಕನ್ನ ಹಾಕಿರುವ ಘಟನೆ ದೆಹಲಿಯ ಉತ್ತಮ್ ನಗರದಲ್ಲಿ ನಡೆದಿದೆ. ಶ್ವೇತ (31) ಕಳ್ಳತನ ಮಾಡಿದ ಪುತ್ರಿ. ಜನವರಿ 30 ರಂದು ಕಮಲೇಶ್ ಎಂಬ ಮಹಿಳೆ, ದೆಹಲಿಯ ಉತ್ತಮ್ ನಗರದಲ್ಲಿರುವ ತನ್ನ ಸೇವಕ್ ಪಾರ್ಕ್ ಮನೆಯಲ್ಲಿ ದರೋಡೆಯಾಗಿರುವುದಾಗಿ ಪೊಲೀಸರಿಗೆ ತಿಳಿಸಿದ್ದಳು. ಮಧ್ಯಾಹ್ನ ಮನೆಯಲ್ಲಿದ್ದ ಲಕ್ಷಾಂತರ ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳು ಮತ್ತು 25,000 ರೂ. ನಗದನ್ನು ಕಳವು ಮಾಡಲಾಗಿದೆ ಎಂದು ದೂರು ನೀಡಿದ್ದರು. ಪೊಲೀಸರು ಶೋಧ ಕಾರ್ಯ ನಡೆಸಿದ್ದಾಗ ಪ್ರಕರಣ ಬಯಲಾಗಿದೆ.  ಸ್ಥಳೀಯ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದಾಗ ಬುರ್ಕಾದಲ್ಲಿ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಮನೆಗೆ ಪ್ರವೇಶಿಸಿರುವುದು ಗಮನಕ್ಕೆ ಬಂದಿದೆ. ಬಳಿಕ ತನಿಖೆ ಮಾಡಿದ್ದಾಗ ಕಮಲೇಶ್ ಅವರ ಹಿರಿಯ ಮಗಳು ಶ್ವೇತಾ ಕಳ್ಳತನ ಮಾಡಿರುವುದು ತಿಳಿದು ಬಂದಿದೆ. ಶ್ವೇತ ತಾಯಿ ಆಕೆಯ ತಂಗಿಯನ್ನು ಹೆಚ್ಚು ಪ್ರೀತಿಸುತ್ತಿದ್ದರು. ತಂಗಿ ಹಾಗೂ ತಾಯಿ ಮೇಲಿದ್ದ ಅಸೂಯೆ ಮತ್ತು ದ್ವೇಷದ ಭಾವನೆಗಳಿಂದ…

Read More

ನವದೆಹಲಿ:- ಹೂಕೋಸು ನಿಂದ ಮಾಡುವ ಈ ಆಹಾರವನ್ನು ಗೋಬಿ ಮಂಚೂರಿಯನ್ ಎಂದು ಕರೆಯಲಾಗುತ್ತದೆ. ಭಾರತದ ಒಂದು ನಗರದಲ್ಲಿ ಗೋಬಿ ಮಂಚೂರಿ ಮಾರಾಟ ಮಾಡುವಂತೆ ಇಲ್ಲ. ಯಾಕೆ ಎನ್ನುವ ಸಂಪೂರ್ಣವಾದ ಮಾಹಿತಿ ಇಲ್ಲಿದೆ… ಭಾರತದ ಯಾವುದೇ ನಗರ, ಪಟ್ಟಣಕ್ಕೆ ತೆರಳಿದರೂ ಗೋಬಿ ಮಂಚೂರಿಯನ್ ಬಾರಿ ಬೇಡಿಕೆ ಇದೆ. ಆದರೆ ಭಾರತದ ಜನಪ್ರಿಯ ಪ್ರವಾಸಿ ನಗರ ಗೋಬಿ ಮಂಚೂರಿಯನ್ ಮಾರಾಟ ನಿಷೇಧಿಸಿದೆ. ಗೋವಾದ ಮಪುಸಾ ನಗರದಲ್ಲಿ ಯಾರೂ ಗೋಬಿ ಮಂಚೂರಿಯನ್ ಮಾರಾಟ ಮಾಡುವಂತಿಲ್ಲ ಗೋವಾದ ಮಪುಸಾ ಮುನ್ಸಿಪಲ್ ಕಾರ್ಪೋರೇಶನ್ ಈ ಕಠಿಣ ನಿರ್ಧಾರ ತೆಗೆದುಕೊಂಡಿದೆ. ಗೋಬಿ ನಿಷೇಧಿಸಲು ಕಾರಣ: ನಗರದ ಆಡಳಿತ ವಿಭಾಗವೇ ಈ ಆದೇಶ ಹೊರಡಿಸಿದೆ. ಗೋವಾದ ಮಪುಸಾ ನಗರ ಪ್ರವಾಸಿಗರಿಂದ ತುಂಬಿ ತುಳುಕುತ್ತಿರುವ ನಗರ. ಕಳೆದ ಹಲವು ವರ್ಷಗಳಿಂದ ಮಪುಸಾ ಆಹಾರ ಇಲಾಖೆ ಫಾಸ್ಟ್ ಫುಡ್ ಸೆಂಟರ್, ಸ್ಟಾಲ್‌ಗಳಿಗೆ ನೋಟಿಸ್ ನೀಡುತ್ತಲೇ ಬಂದು, ಇದೀಗ ಗೋಬಿ ಮಂಚೂರಿಯನ್ ನಿಷೇಧಿಸಿದೆ. ಗೋಬಿಗೆ ಬಳಸುತ್ತಿರುವ ರಾಸಾಯನಿಕ, ಬಣ್ಣ ಹಾಗೂ ಶುಚಿತ್ವ, ನೈರ್ಮಲ್ಯದ ಬಗ್ಗೆ ಹಲವು…

Read More

ಎಚ್ ಡಿ ಕೋಟೆ:- ಪತ್ನಿ ಶೀಲ ಶಂಕಿಸಿ 12ವರ್ಷದಿಂದ ಮನೆ ಬಾಗಿಲಿಗೆ ಮೂರು ಬೀಗ ಜಡಿದು ಪತ್ನಿಯನ್ನ ದಿಬ್ಬಂದನಲ್ಲಿರಿಸಿದ ಪತಿರಾಯನ ಅಮಾನವೀಯ ಪ್ರಕರಣವೊಂದು ಎಚ್.ಡಿ.ಕೋಟೆಯಲ್ಲಿ ಬೆಳಕಿಗೆ ಬಂದಿದೆ. ಮನೆಯಿಂದ ಹೊರಬರಲಾಗದೆ ಮನೆಯೊಳಗೇ ಅಜ್ಞಾತವಾಸ ಅನುಭವಿಸಿದ ಪತ್ನಿಯನ್ನ ರಕ್ಷಿಸಲಾಗಿದೆ. ಎಚ್‌.ಡಿ.ಕೋಟೆ ತಾಲೋಕಿನ ಎಚ್‌.ಮಟಕೆರೆ ಗ್ರಾಮದಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ಸಣ್ಣಾಲಯ್ಯ ಎಂಬಾತತನ್ನ ಪತ್ನಿ ಸುಮಾಳನ್ನ ಗೃಹಬಂಧನದಲ್ಲಿರಿಸಿದ್ದ ಕಟುಕ.ಎಚ್.ಡಿ.ಕೋಟೆ ತಾಲೋಕಿನ ಹೈರಿಗೆ ಗ್ರಾಮದ ಸುಮಾ 12ವರ್ಷದ ಹಿಂದೆ ವಿವಾಹವಾಗಿದ್ದರು. 3ನೇ ಪತ್ನಿಯಾಗಿ ವಿವಾಹವಾದ ಸುಮಾಗೆ ಇಬ್ಬರು ಮಕ್ಕಳಿದ್ದಾರೆ.ಇಬ್ಬರು ಪತ್ನಿಯರು ಸಣ್ಣಾಲಯ್ಯನ ಕಾಟದಿಂದ ಬೇಸೆತ್ತು ದೂರಾಗಿದ್ದಾರೆ.ಮದುವೆ ಆದ ದಿನದಿಂದಲೂ ಮನೆ ಬಾಗಿಲಿಗೆ ಮೂರು ಬೀಗ ಹಾಕಿ ಬಂಧನದಲ್ಲಿರಿಸಿದ್ದ. ಮನೆಯ ಕಿಟಕಿಗಳನ್ನೂ ಸಹ ಭದ್ರ ಪಡಿಸಿ ಮನೆಯಿಂದ ಯಾರೊಂದಿಗೂ ಮಾತನಾಡದಂತೆ ಎಚ್ಚರಿಕೆ ನೀಡಿದ್ದ. ಮನೆಯೊಳಗೆ ಶೌಚಾಲಯ ಇಲ್ಲದಿದ್ದರೂ ಬಕೇಟ್ ಒಂದೆನ್ನು ಮನೆಯೊಳಗಿರಿಸಿ ಮಲಮೂತ್ರ ವಿಸರ್ಜಿಸಿ ರಾತ್ರಿ ಹೊರಗೆ ಸುರಿಯುತ್ತಿದ್ದ.ಸುಮಾರವರ ಸಂಬಂಧಿಕರೊಬ್ಬರಿಂದ ಅಮಾನವೀಯ ಪ್ರಕರಣ ಬೆಳಕಿಗೆ ಬಂದಿದೆ.ವಿಷಯ ತಿಳಿದು ವಕೀಲರಾದ ಸಿದ್ದಪ್ಪಾಜಿ ಎಂಬುವರು ಹಾಗೂ ಸಾಂತ್ವನ ಕೇಂದ್ರದ ಜಶೀಲ…

Read More

ನವದೆಹಲಿ:- ದೇಶವನ್ನ ಇನ್ನೆಷ್ಟು ಭಾಗವಾಗಿ ಒಡೆಯುತ್ತೀರಿ ಎಂದು ಹೇಳುವ ಮೂಲಕ ಡಿ.ಕೆ.ಸುರೇಶ್‌ ಹೇಳಿಕೆಗೆ ಮೋದಿ ಕಿಡಿಕಾರಿದ್ದಾರೆ. ಕರ್ನಾಟಕಕ್ಕೆ ಅನುದಾನ ನೀಡದಿದ್ದರೆ ಪ್ರತ್ಯೇಕ ರಾಷ್ಟ್ರದ ಬೇಡಿಕೆ ಇಡಬೇಕಾಗುತ್ತದೆ ಎಂಬ ಸಂಸದ ಡಿ.ಕೆ.ಸುರೇಶ್‌ ಹೇಳಿಕೆಗೆ ಲೋಕಸಭೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಬಹಿರಂಗವಾಗಿ ದೇಶ ಒಡೆಯುವ ಮಾತನಾಡುತ್ತಾರೆ. ಒಗ್ಗೂಡಿಸುವುದು ಇರಲಿ ಒಡೆಯುವುದು ಮಾತನಾಡುತ್ತಾರೆ. ಇಷ್ಟು ಒಡೆದಿರುವುದು ಸಾಕಾಗಿಲ್ವ, ಇನ್ನು ಎಷ್ಟು ಭಾಗವಾಗಿ ಒಡೆಯುತ್ತೀರಿ ಎಂದು ಪ್ರಶ್ನಿಸಿದ್ದಾರೆ. ನೆಹರೂ ಅವರ ತಪ್ಪಿನಿಂದ ಕಾಶ್ಮೀರದ ಜನರು ಬಹುದೊಡ್ಡ ಬೆಲೆ ತೆರಬೇಕಾಯಿತು ಎಂದು ಕಿಡಿಕಾರಿದ್ದಾರೆ.

Read More

ವಾಷಿಂಗ್ಟನ್: ಭಾರತೀಯ ಮೂಲದ ವಿದ್ಯಾರ್ಥಿಯೊಬ್ಬನ (Student)  ಮೃತದೇಹ ಅಮೆರಿಕಾದಲ್ಲಿ (America) ಪತ್ತೆಯಾಗಿದೆ. ಶ್ರೇಯಸ್ ರೆಡ್ಡಿ ಬೆನಿಗರ್ ಮೃತ ವಿದ್ಯಾರ್ಥಿ. ಓಹಿಯೋದ ಲಿಂಡರ್ ಸ್ಕೂಲ್ ಆಫ್ ಬ್ಯುಸಿನೆಸ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದನು. ರೆಡ್ಡಿಯ ಪೋಷಕರು ಹೈದರಾಬಾದ್‌ನಲ್ಲಿ ನೆಲೆಸಿದ್ದು, ಅವರು ಅಮೆರಿಕಾದ ಪಾಸ್‌ಪೋರ್ಟ್ ಹೊಂದಿದ್ದಾರೆ. ಈ ವಾರದ ಆರಂಭದಲ್ಲಿ ಪರ್ಡ್ಯೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ನೀಲ್ ಆಚಾರ್ಯ ಶವವಾಗಿ ಪತ್ತೆಯಾಗಿದ್ದರು. ಮಗನ ನಾಪತ್ತೆ ಕುರಿತು ತಾಯಿ ದೂರು ನೀಡಿ, ಮಗನನ್ನು ಹುಡುಕಿ ಕೊಡುವಂತೆ ಸಾಮಾಜಿಕ ಜಾಲತಾಣದ ಮೊರೆ ಹೋಗಿದ್ದರು. ಬಳಿಕ ಕಾಲೇಜಿನ ಕ್ಯಾಂಪಸ್‌ನಲ್ಲಿ ನೀಲ್ ಶವ ಪತ್ತೆಯಾಗಿತ್ತು. ಇದೇ ರೀತಿ ಹರಿಯಾಣ ಪಂಚಕುಲದ ನಿವಾಸಿ ವಿವೇಕ್ ಸೈನಿ. ಜಾರ್ಜಿಯಾದ ಲಿಥೋನಿಯಾದಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದರು. ಸೈನಿ ಕನ್ವೀನಿಯನ್ಸ್ ಸ್ಟೋರ್‌ನಲ್ಲಿ ಅರೆಕಾಲಿಕ ಕೆಲಸ ಮಾಡುತ್ತಿದ್ದರು. ಸೈನಿ ಆ ವ್ಯಕ್ತಿಗೆ ಆಶ್ರಯ ನೀಡಿದ್ದರು. ನಂತರ ಅಲ್ಲಿಂದ ಹೋಗುವಂತೆ ಹೇಳಿದ್ದಾಗ ಆ ವ್ಯಕ್ತಿ 50 ಬಾರಿ ಹೊಡೆದು ಕೊಲೆ ಮಾಡಿದ್ದರು.  ಇನ್ನೊಬ್ಬ ಭಾರತೀಯ ವಿದ್ಯಾರ್ಥಿ ಅಕುಲ್ ಧವನ್ ಜನವರಿಯಲ್ಲಿ ಇಲಿನಾಯ್ಸ್ ಅರ್ಬಾನಾ-ಚಾಂಪೇನ್ ವಿಶ್ವವಿದ್ಯಾಲಯದ…

Read More

ಬೆಂಗಳೂರು:- ರಾಜ್ಯ ಸರ್ಕಾರ ತಪ್ಪು ಮಾಹಿತಿ ನೀಡಿ ಜನರ ದಾರಿ ತಪ್ಪಿಸುತ್ತಿದೆ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಕೇಂದ್ರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ತನ್ನ ತಪ್ಪು ಮುಚ್ಚಿಕೊಳ್ಳಲು ದೆಹಲಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುವ ರಾಜಕೀಯ ಸ್ಟಂಟ್ ಮಾಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಹಳೆ ಚಾಳಿ ಬಿಟ್ಟಿಲ್ಲ. ತಮ್ಮ ತಪ್ಪು ಮುಚ್ಚಿಕೊಳ್ಳಲು ಕೇಂದ್ರದ ಮೇಲೆ ಆರೋಪ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ರೈತ ವಿರೋಧಿ ಸರ್ಕಾರ ರಾಜ್ಯದಲ್ಲಿದೆ. ಒಂಬತ್ತು ತಿಂಗಳಿನಿಂದ ಒಂದು ರೂ. ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಿಲ್ಲ. 14ನೇ ಹಣಕಾಸಿಗಿಂತ 15ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಹಣ ಕಡಿಮೆ ಆಗಿದೆ ಎಂದು ಹೇಳಿದ್ದಾರೆ. 15ನೇ ಹಣಕಾಸು ಆಯೋಗದ ಸಮಿತಿ ಬಂದಾಗ ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಇತ್ತು. ಆಗ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಆಯೋಗಕ್ಕೆ ಸರಿಯಾಗಿ ಮಾಹಿತಿ ನೀಡಿಲ್ಲ. ಹೀಗಾಗಿ 15ನೇ ಹಣಕಾಸು ಆಯೋಗದಲ್ಲಿ 4.7% ನಿಂದ 3.6%…

Read More

ಮಡಿಕೇರಿ:- ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಜರುಗಿದೆ. ಮೈಸೂರು ರಸ್ತೆಯಲ್ಲಿರುವ ಸಾಜಿದ್ ಶ್ರೀನಿಧಿ ಎಂಬವರ ಸರ್ವಿಸ್ ಸ್ಟೇಷನ್​ಗೆ ಬೈಕ್ ಸರ್ವಿಸ್​ ಮಾಡಲೆಂದು ಸಾಜೀದ್ ಆಗಮಿಸಿದ್ದನು. ಈ ವೇಳೆ ಇಬ್ಬರ ನುಡವೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿದೆ. ಜಗಳದ ವೇಳೆ ಶ್ರೀನಿಧಿ ಹರಿತವಾದ ಆಯುಧದಿಂದ ಸಾಜಿದ್​ಗೆ ಇರಿದಿದ್ದಾನೆ. ಕೂಡಲೇ ಸಾಜಿದ್​ನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಕೃತ್ಯ ಸಂಬಂಧ ಪ್ರಕರಣ ದಾಖಲಿಸಿಕೊಂಡ ಕುಶಾಲನಗರ ಟೌನ್ ಠಾಣಾ ಪೊಲೀಸರು ಆರೋಪಿ ಶ್ರೀನಿಧಿನನ್ನು ಬಂಧಿಸಿದ್ದಾರೆ.

Read More

ಇಂಡಿಯನ್ ರೈಲ್ವೇ ಕನ್‌ಸ್ಟ್ರಕ್ಷನ್ ಕಂಪನಿ ಲಿಮಿಟೆಡ್ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅಸಿಸ್ಟೆಂಟ್ ಮ್ಯಾನೇಜರ್, ಅಸಿಸ್ಟೆಂಟ್ ಪೋಸ್ಟ್‌ಗಳನ್ನು IRCON ಅಧಿಕೃತ ಅಧಿಸೂಚನೆಯ ಮೂಲಕ ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ ಜನವರಿ 2024.  ಭಾರತ ಸರ್ಕಾರದಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 09-Feb-2024 ರಂದು ಅಥವಾ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. IRCON ಹುದ್ದೆಯ ಅಧಿಸೂಚನೆ ಸಂಸ್ಥೆಯ ಹೆಸರು: ಇಂಡಿಯನ್ ರೈಲ್ವೇ ಕನ್ಸ್ಟ್ರಕ್ಷನ್ ಕಂಪನಿ ಲಿಮಿಟೆಡ್ (IRCON) ಹುದ್ದೆಗಳ ಸಂಖ್ಯೆ: 33 ಉದ್ಯೋಗ ಸ್ಥಳ: ಅಖಿಲ ಭಾರತ ಹುದ್ದೆಯ ಹೆಸರು: ಸಹಾಯಕ ವ್ಯವಸ್ಥಾಪಕ, ಸಹಾಯಕ ವೇತನ: ರೂ.19000-140000/- ಪ್ರತಿ ತಿಂಗಳು IRCON ಹುದ್ದೆಯ ವಿವರಗಳು ಸಹಾಯಕ ವ್ಯವಸ್ಥಾಪಕ/ಸಿವಿಲ್: 28 A.O.S./ಹಣಕಾಸು: 2 ಸಹಾಯಕ/ಹಣಕಾಸು: 3 IRCON ನೇಮಕಾತಿ 2024 ಅರ್ಹತಾ ವಿವರಗಳು ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಸಹಾಯಕ ವ್ಯವಸ್ಥಾಪಕ/ಸಿವಿಲ್ ಪದವಿ A.O.S./ಫೈನಾನ್ಸ್ CA ಇಂಟರ್ ಅಥವಾ ICWA ಇಂಟರ್, M.Com ಸಹಾಯಕ/ಹಣಕಾಸು ಬಿ.ಕಾಂ, ಎಂ.ಕಾಂ ವಯಸ್ಸಿನ ಮಿತಿ: ಇಂಡಿಯನ್…

Read More