Author: AIN Author

ಮುಂಬೈ:- ಬೀಗ ಹಾಕಿದ ಮನೆಯಲ್ಲಿ ಮೂರು ಕೊಳೆತ ದೇಹಗಳು ಪತ್ತೆಯಾದ ಘಟನೆ ಇಲ್ಲಿನ ವಸಾಯಿ ಬಳಿ ಜರುಗಿದೆ. ಹಣ್ಣು ಮಾರಾಟ ಮಾಡುತ್ತಿದ್ದ ಮೋ ಅಜಮ್, ರಾಜು ಮತ್ತು ಛೋಟ್ಕು ಎಂದು ಗುರುತಿಸಲಾಗಿದೆ. ಬೀಗ ಹಾಕಿದ ಮನೆಯಿಂದ ಕೆಟ್ಟ ವಾಸನೆ ಬರುತ್ತಿದ್ದನ್ನು ಗಮನಿಸಿದ ಅಲ್ಲಿನ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲಿಸಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಈ ಮೂವರ ಸಾವಿಗೆ ಆಮ್ಲಜನಕ ಕೊರತೆಯಾಗಿರಬೇಕು ಅಥವಾ ಯಾರಾದರೂ ವಿಷಕಾರಕ ಅನಿಲವನ್ನು ಬಿಟ್ಟಿರಬಹುದು ಎಂದು ಆರಂಭಿಕ ತನಿಖೆಯಲ್ಲಿ ತಿಳಿದುಬಂದಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ತನಿಖೆ ನಂತರವಷ್ಟೇ ನಿಖರ ಕಾರಣ ತಿಳಿಯಲಿದೆ

Read More

ಐಫೋನ್ ಬಳಕೆದಾರರಿಗೆ ಫೋನ್ ಬಿದ್ದರೆ ಹೃದಯವೇ ಕಳಚಿ ಬಿದ್ದಂತೆ. ಇದರಿಂದ ಪಾರಾಗಲು, ಹೆಚ್ಚಿನ ಜನರು ತಮ್ಮ ಫೋನ್ ಬಿದ್ದರೆ ಸುರಕ್ಷಿತವಾಗಿ ಉಳಿಯಲು ಬಲವಾದ ಕವರ್ ಅನ್ನು ಖರೀದಿಸಲು ಯೋಚಿಸುತ್ತಾರೆ. ಆದರೆ, ಈಗ ಅಂತಹ ಕವರ್ ಮರೆತು ಬಿಡಿ. ಯಾಕೆಂದರೆ ಇಂದು ನಾವು ನಿಮಗೆ ಕಾರಿನಂತಹ ಸುರಕ್ಷತೆಯನ್ನು ಪಡೆಯುವ ಕವರ್ ಬಗ್ಗೆ ಹೇಳುತ್ತೇವೆ. ಕಾರು ಮಾತ್ರವಲ್ಲ, ಈಗ ಫೋನ್‌ಗೆ ಬಲವಾದ ಸುರಕ್ಷತೆಯೂ ಸಿಗಲಿದೆ, ಬಿದ್ದರೆ ಏರ್‌ಬ್ಯಾಗ್ ತೆರೆದುಕೊಳ್ಳುತ್ತದೆ. Nio ಫೋನ್‌ನ ಬಿಡುಗಡೆ – ಚೈನೀಸ್ ಸಂಸ್ಥೆಯಿಂದ ಮಾರಾಟವಾದ ಮೊದಲ ಕಾರು-ನಿರ್ದಿಷ್ಟ ಫೋನ್, ವಿಶ್ವದ ಅತಿದೊಡ್ಡ ವಾಹನ ಮಾರುಕಟ್ಟೆಯಲ್ಲಿ EV ತಂತ್ರಜ್ಞಾನಗಳ ಮುಂದುವರಿದ ಸ್ಥಿತಿಯನ್ನು ಎತ್ತಿ ತೋರಿಸುತ್ತದೆ, ಅಲ್ಲಿ ಎಲೆಕ್ಟ್ರಿಕ್ ಕಾರುಗಳು ಈಗ ಮೂರನೇ ಒಂದು ಭಾಗದಷ್ಟು ವಾಹನ ಮಾರಾಟವನ್ನು ಹೊಂದಿವೆ. ನಿಯೋ ಚಾಲಕನು ತನ್ನ ಕಾರನ್ನು ತನ್ನ ಸ್ಥಳಕ್ಕೆ (ಚೀನಾದಲ್ಲಿ ನಿರ್ಬಂಧಿತ ಸ್ಥಳಗಳಲ್ಲಿ ಮತ್ತು ಕಡಿಮೆ ವೇಗದಲ್ಲಿ ಅನುಮತಿಸಲಾಗಿದೆ) ಚಾಲನೆ ಮಾಡಲು ಮತ್ತು ಫೋನ್ ಸ್ವಿಚ್ ಆಫ್ ಆಗಿರುವಾಗಲೂ ಕಾರನ್ನು ಅನ್‌ಲಾಕ್ ಮಾಡಲು…

Read More

ಬೆಳಗಾವಿ:- ಖಾನಾಪುರದ ಲಿಂಗನಮಠದಲ್ಲಿ ಬಡತನದಿಂದ ಕಂಗೆಟ್ಟಿದ್ದ ಯುವಕನೊಬ್ಬ ಹಸಿವಿನಿಂದ ತಾಯಿ ನರಳುತ್ತಿರುವುದನ್ನು ನೋಡಲಾರದೇ ಆತ್ಮಹತ್ಯೆಗೆ ಶರಣಾಗಿರುವ ವಿದ್ರಾವಕ ಘಟನೆ ಜರುಗಿದೆ. ಬಸವರಾಜ ವೆಂಕಟ (30) ಮೃತ ಯುವಕನಾಗಿದ್ದು, ತಾಯಿ ಶಾಂತವ್ವನೊಡನೆ ಈತ ಕೂಲಿ ಕೆಲಸ ಮಾಡುತ್ತಿದ್ದ. ಕೆಲದಿನಗಳ ಹಿಂದಷ್ಟೇ ಕೂಲಿ ಕೆಲಸವನ್ನು ಅರಸಿಕೊಂಡು ತಾಯಿ ಮಗ ಇಬ್ಬರೂ ಗೋವಾಗೆ ತೆರಳಿದ್ದರು. ಆದರೆ ಅಲ್ಲಿ ಸೂಕ್ತವಾದ ಕೆಲಸ ದೊರಕಿರಲಿಲ್ಲ. ಹೀಗಾಗಿ ರಾಜ್ಯಕ್ಕೆ ವಾಪಸಾಗುತ್ತಿದ್ದಾಗ ರೈಲಿನಲ್ಲಿ ಟಿಕೆಟ್‌ ಇಲ್ಲದ ಕಾರಣ ಇವರನ್ನು ಅಳ್ನಾವರದಲ್ಲಿ ಇಳಿಸಲಾಗಿತ್ತು. ಮೃತ ಬಸವವರಾಜ್‌ ನ ಶವವನ್ನು ಸ್ವಯಂ ಸೇವಾ ಸಂಸ್ಥೆ ಸಂಸ್ಕಾರ ನಡೆಸಿದ್ದು. ತಾಯಿಯನ್ನು ಅನಾಥಾಶ್ರಮವೊಂದಕ್ಕೆ ದಾಖಲಿಸಲಾಗಿದೆ. ಖಾನಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ರಾಜ್ಯ ಸರ್ಕಾರವು ಭರ್ಜರಿ ಗುಡ್‌ನ್ಯೂಸ್‌ವೊಂದನ್ನು ನೀಡಿದೆ. ಕಳೆದ ಮೂರು ವರ್ಷಗಳಿಗೂ ಹೆಚ್ಚು ಅವಧಿಯಿಂದ ರಾಜ್ಯದಲ್ಲಿ ವೇತನ ಹೆಚ್ಚಳಕ್ಕೆ ಬೇಡಿಕೆ ಇದೆ. ಕರ್ನಾಟಕದಲ್ಲಿ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಮಾಡಬೇಕು ಹಾಗೂ ಏಳನೇ ವೇತನ ಆಯೋಗದ ವರದಿ ಜಾರಿ ಮಾಡಬೇಕು ಎಂದು ಹಲವು ದಿನಗಳಿಂದ ನಿರಂತರವಾಗಿ ಪ್ರತಿಭಟನೆಗಳು ನಡೆದಿವೆ. ಇದೀಗ ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಆದರೆ, ಇದಕ್ಕೆ ಹಲವರು ವಿರೋಧವನ್ನೂ ವ್ಯಕ್ತಪಡಿಸಿದ್ದಾರೆ. ಹಳೇ ಪಿಂಚಣಿ ಯೋಜನೆ ಜಾರಿ ರಾಜ್ಯ ಸರ್ಕಾರವು 2006 ಏಪ್ರಿಲ್‌ ಪೂರ್ವ ನೇಮಕಾತಿ ಅಧಿಸೂಚನೆಯಾಗಿ 2006 ರ ನಂತರ ನೇಮಕಾತಿಗೊಂಡ ರಾಜ್ಯ ಸರ್ಕಾರದ ಅಂದಾಜು 13,000 ಸರ್ಕಾರಿ ನೌಕರರಿಗೆ ಹಳೇ ಪಿಂಚಣಿ ಯೋಜನೆ ವ್ಯಾಪ್ತಿಗೆ ಒಳಪಡಿಸಿ ಆದೇಶ ಹೊರಡಿಸಿದೆ. ಚುನಾವಣೆಗೂ ಪೂರ್ವದಲ್ಲಿ ಎನ್.ಪಿ.ಎಸ್ ನೌಕರರು ಮುಷ್ಕರು ಮಾಡುವ ವೇಳೆ ಸ್ಥಳಕ್ಕೆ ಭೇಟಿ ನೀಡಿ ನಾವು ಅಧಿಕಾರಕ್ಕೆ ಬಂದ ನಂತರ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದೆ, ಕೊಟ್ಟ ಮಾತಿನಂತೆ ಬೇಡಿಕೆ ಈಡೇರಿಸಿದೆ ಆದೇಶದಲ್ಲಿ ಏನಿದೆ ? ಪ್ರಸ್ತಾವನೆಯಲ್ಲಿ ವಿವರಿಸಿದ…

Read More

ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಅವರ ಪತ್ನಿ ಬುಶ್ರಾ ಖಾನ್ ಅವರ ವಿವಾಹವು ಕಾನೂನುಬಾಹಿರ ಎಂದು ತೀರ್ಪು ನೀಡಿರುವ ನ್ಯಾಯಾಲಯವು, ಅವರಿಗೆ ಏಳು ವರ್ಷಗಳ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿದೆ. ಅಲ್ಲದೇ ರಾಷ್ಟ್ರೀಯ ಚುನಾವಣೆಗೆ ಸ್ಪರ್ಧಿಸದಂತೆ ನಿರ್ಬಂಧಿಸಲಾಗಿದೆ. ಈಗಾಗಲೇ ಜೈಲಿನಲ್ಲಿರುವ ಇಮ್ರಾನ್ ಖಾನ್ ಅವರಿಗೆ ಕೆಲವು ದಿನಗಳ ಹಿಂದೆಯಷ್ಟೇ ರಾಜ್ಯದ ರಹಸ್ಯಗಳನ್ನು ಸೋರಿಕೆ ಮಾಡಿದ್ದಕ್ಕಾಗಿ 10 ವರ್ಷಗಳು ಮತ್ತು ಅಕ್ರಮವಾಗಿ ರಾಜ್ಯದ ಉಡುಗೊರೆಗಳನ್ನು ಮಾರಾಟ ಮಾಡಿದ್ದಕ್ಕಾಗಿ ಅವರ ಪತ್ನಿಯೊಂದಿಗೆ 14 ವರ್ಷಗಳ ಶಿಕ್ಷೆಯನ್ನು ವಿಧಿಸಲಾಗಿತ್ತು. ಇಬ್ಬರಿಗೂ ತಲಾ 5,00,000 ರೂ. (ಪಾಕಿಸ್ತಾನ ರೂಪಾಯಿ) ದಂಡ ವಿಧಿಸಲಾಗಿದೆ. ಬುಶ್ರಾ ತನ್ನ ಹಿಂದಿನ ಪತಿಗೆ ವಿಚ್ಛೇದನ ನೀಡಿದ ನಂತರ ಮತ್ತು ಖಾನ್ ಅವರನ್ನು ವಿವಾಹವಾದ ನಂತರ `ಇದ್ದತ್’ ಎಂದು ಕರೆಯಲ್ಪಡುವ ಇಸ್ಲಾಂನಿಂದ ಕಡ್ಡಾಯವಾದ ಕಾಯುವ ಅವಧಿಯನ್ನು ಪೂರ್ಣಗೊಳಿಸಲಿಲ್ಲ ಎಂದು ಆರೋಪಿಸಲಾಗಿತ್ತು. ಈ ಆರೋಪಗಳನ್ನು ಖಾನ್ ದಂಪತಿ ನಿರಾಕರಿಸಿದ್ದರು. ವಿಚಾರಣೆ ವೇಳೆ ಇದೀಗ ಆರೋಪ ಸಾಬೀತಾಗಿದೆ. ಇಮ್ರಾನ್ ಖಾನ್ ಅವರು…

Read More

ಬೆಂಗಳೂರು:- ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇದ್ದು, ರಾಜ್ಯ ನಾಯಕರ ಮಧ್ಯೆ ಟಿಕೆಟ್​ಗಾಗಿ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ತುಮಕೂರು ಲೋಕಸಭೆ ಟಿಕೆಟ್​​ಗಾಗಿ ಮಾಜಿ ಸಚಿವರ ಮಧ್ಯೆ ಪೈಪೋಟಿ ಶುರುವಾಗಿದೆ. ಸ್ಪರ್ಧೆಗಿಳಿಯಲು ವಿ.ಸೋಮಣ್ಣ ಈಗಾಗಲೇ ಸಿದ್ಧತೆ ನಡೆಸಿದ್ದು, ಕ್ಷೇತ್ರದಲ್ಲಿ ಓಡಾಟ ಆರಂಭಿಸಿದ್ದಾರೆ. ಆದರೆ, ಸೋಮಣ್ಣಗೆ ಟಿಕೆಟ್ ಬೇಡ ಎಂದು ಮಾಜಿ ಸಚಿವ ಮಾಧುಸ್ವಾಮಿ ಬಣ ಅಡ್ಡಗಾಲಿಟ್ಟಿದೆ. ಮಾಜಿ ಸಚಿವ ಮಾಧುಸ್ವಾಮಿ, ನಾನು ಕೂಡ ಟಿಕೆಟ್ ಆಕಾಂಕ್ಷಿ ಎಂದಿದ್ದಾರೆ. ಇತ್ತ ತುಮಕೂರಲ್ಲಿ ಈ ರೀತಿಯ ಬೆಳವಣಿಗೆಗಳೆಲ್ಲ ನಡೆಯುತ್ತಿದ್ದರೆ, ಅತ್ತ ದೆಹಲಿಯಲ್ಲಿರುವ ವಿ.ಸೋಮಣ್ಣ ತಮ್ಮದೇ ಕಾರ್ಯ ತಂತ್ರದಲ್ಲಿದ್ದಾರೆ. ತುಮಕೂರು ಟಿಕೆಟ್ ಬಗ್ಗೆ ಹೈಕಮಾಂಡ್ ನಿರ್ಧರಿಸುತ್ತದೆ ಎಂದಿದ್ದಾರೆ. ಚಿಕ್ಕಬಳ್ಳಾಪುರ ಲೋಕಸಭೆ ಟಿಕೆಟ್​ಗಾಗಿ ಮಾಜಿ ಆರೋಗ್ಯ ಸಚಿವ ಡಿ. ಸುಧಾಕರ್ ಮತ್ತು ಯಲಹಂಕ ಶಾಸಕ ಎಸ್​​.ಆರ್.ವಿಶ್ವನಾಥ್ ಮಧ್ಯೆ ಜಿದ್ದಾಜಿದ್ದಿ ನಡೆಯುತ್ತಿದೆ. ಪುತ್ರ ಅಲೋಕ್​​ಗೆ ಟಿಕೆಟ್ ಕೊಡಿಸಲು ವಿಶ್ವನಾಥ್ ಹೋರಾಡುತ್ತಿದ್ದಾರೆ. ಡಿ.ಸುಧಾಕರ್ ನಾನೇ ಅಭ್ಯರ್ಥಿ ಎಂದುಕೊಂಡು ಓಡಾಡುತ್ತಿದ್ದಾರೆ. ಬಹಿರಂಗವಾಗಿಯೇ ವಾಗ್ಯುದ್ಧ ನಡೆಸಿದ್ದಾರೆ. ಇತ್ತ ಮಾಜಿ ಸಿಎಂ ಬಿಎಸ್​​ ಯಡಿಯೂರಪ್ಪನವರ…

Read More

ಕ್ರೇಜಿಸ್ಟಾರ್ ರವಿಚಂದ್ರನ್ (Ravichandran) ಅಂದಾಕ್ಷಣ ಥಟ್ಟನೆ ನೆನಪಾಗುವ ಸಿನಿಮಾ ಪ್ರೇಮಲೋಕ. ಈ ಸಿನಿಮಾ ಸೃಷ್ಟಿದ ದಾಖಲೆಗಳು ಒಂದಲ್ಲ, ಎರಡಲ್ಲ. ಈ ಹೊತ್ತಿಗೂ ಎವರ್ ಗ್ರೀನ್ ಸಿನಿಮಾಗಳ ಸಾಲಿನಲ್ಲಿ ಪ್ರೇಮಲೋಕ ಯಾವತ್ತಿಗೂ ಕಾಣಿಸಿಕೊಳ್ಳತ್ತೆ. ಈ ಸಿನಿಮಾದ ಪಾರ್ಟ್ 2 (Premaloka 2) ಮಾಡುವ ಕುರಿತು ರವಿಚಂದ್ರನ್ ಹೇಳಿದ್ದಾರೆ. ಹಂಪಿ ಉತ್ಸವದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದ ರವಿಚಂದ್ರನ್, ತಮ್ಮ ಪ್ರೇಮಲೋಕ 2 ಚಿತ್ರದ ಕನಸನ್ನು ಅಭಿಮಾನಿಗಳ ಮುಂದೆ ಹಂಚಿಕೊಂಡರು. ಜೊತೆಗೆ ಈ ಸಿನಿಮಾದಲ್ಲಿ ಬರೋಬ್ಬರಿ 25 ಹಾಡುಗಳು ಇರಲಿವೆ ಎಂದು ಅಚ್ಚರಿಕೆಯ ಹೇಳಿಕೆಯನ್ನೂ ನೀಡಿದರು. 25 ಹಾಡುಗಳು ಇರಲಿವೆ ಎನ್ನುವ ಮಾತು ಕೇಳುತ್ತಿದ್ದಂತೆಯೇ ಸ್ವತಃ ಸಚಿವರಾದ ಜಮೀರ್ ಅಚ್ಚರಿ ವ್ಯಕ್ತ ಪಡಿಸಿದರು. ಹೌದು, ಪ್ರೇಮಲೋಕ ಸಿನಿಮಾದ ಅಷ್ಟೂ ಹಾಡುಗಳು ಹಿಟ್ ಆಗಿದ್ದವು. ಈ ಹೊತ್ತಿಗೂ ಈ ಹಾಡುಗಳು ಟ್ರೆಂಡಿಂಗ್ ನಲ್ಲಿವೆ. ಅಂಥದ್ದೇ ಮತ್ತಷ್ಟು ಹಾಡುಗಳನ್ನು ಪ್ರೇಮಲೋಕ 2 ಚಿತ್ರಕ್ಕೆ ಅಳವಡಿಸಲಿದ್ದಾರಂತೆ ರವಿಚಂದ್ರನ್. ಈ ಹಾಡುಗಳು ಕಥೆಯ ರೂಪದಲ್ಲೂ ಬರಲಿವೆ ಎನ್ನುವುದು ವಿಶೇಷ.

Read More

ಬೆಂಗಳೂರು:- ನಗರದಲ್ಲಿ ಸಂಚಾರಿ ನಿಯಮಗಳ ಕುರಿತು ಮಕ್ಕಳಿಗೆ ಅರಿವು ಮೂಡಿಸುವುದು ಅತಿ ಮುಖ್ಯವಾಗಿದೆ. ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಶಾಲಾ ಮಕ್ಕಳಿಗೆ Traffic park ವೀಕ್ಷಣೆ ಮೂಲಕ ಸಾರಿಗೆ ನಿಯಮಗಳ ಬಗ್ಗೆ ತಿಳುವಳಿಕೆ ಮೂಡಿಸಲು ಮುಂದಾಗಿದೆ. ಈ ಕುರಿತು ಸುತ್ತೋಲೆಯೊಂದನ್ನು ಹೊರಡಿಸಲಾಗಿದೆ. ವಿಶ್ವದಲ್ಲೇ ಅತಿ ಹೆಚ್ಚು ಸಂಚಾರ ದಟ್ಟಣೆ ಹೊಂದಿರುವ ಟಾಪ್‌ 10 ನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೆ ಯಾವ ಸ್ಥಾನ? ಈ ಕುರಿತು ನಿರ್ದೇಶಕರು, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ, ಬೆಂಗಳೂರು ಸುತ್ತೋಲೆಯೊಂದನ್ನು ಹೊರಡಿಸಿದ್ದಾರೆ. ಜಂಟಿ ಪೊಲೀಸ್ ಆಯುಕ್ತರು, ಸಂಚಾರ ಬೆಂಗಳೂರು ನಗರ ಇವರ ಪತ್ರವನ್ನು ಉಲ್ಲೇಖ ಮಾಡಿದ್ದಾರೆ. ಸಂಚಾರಿ ಪೋಲಿಸರ ದಂಡದ ಮೊತ್ತದ ರಿಯಾಯಿತಿ, ವಿವರಗಳು ಸುತ್ತೋಲೆಯ ವಿವರ ರಸ್ತೆ ಸುರಕ್ಷತೆಯು ಅತ್ಯವಶ್ಯಕವಾಗಿದ್ದು, ಶಾಲಾ ಹಂತದಲ್ಲಿ ಮಕ್ಕಳಲ್ಲಿ ಈ ಕುರಿತು ಅರಿವು ಮೂಡಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಾರಿಗೆ ಇಲಾಖೆಯು ಹಲವಾರು ಕ್ರಮಗಳನ್ನು ಅಳವಡಿಸಿಕೊಂಡಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ ಟ್ರಾಫಿಕ್ ನಿಯಂತ್ರಣಕ್ಕೆ ಕೃತಕ ಬುದ್ಧಿಮತ್ತೆ…

Read More

ಕೆಲವೊಂದು ಸಿನಿಮಾಗಳು ಸೆಟ್ಟೇರುವುದಕ್ಕೂ ಮುನ್ನವೇ ಭರ್ಜರಿ ಸೌಂಡು ಮಾಡುತ್ತವೆ. ಮೇಕಿಂಗ್‌, ಬಜೆಟ್‌, ಬೃಹತ್‌ ತಾರಾಗಣ, ನೂರಾರು ದಿನಗಳ ಚಿತ್ರೀಕರಣ, ಸ್ಟಾರ್‌ ಮಟ್ಟದ ತಾಂತ್ರಿಕ ಬಳಗ… ಹೀಗೆ ನಾನಾ ಕಾರಣಗಳಿಂದಾಗಿ ಪ್ರೇಕ್ಷಕರ ಗಮನ ಸೆಳೆಯುತ್ತವೆ. ಈಗ ‘ ಐವಿ ರಿಟರ್ನ್ಸ್’ (IV Returns) ಸಿನಿಮಾ ಹೆಸರಾಂತ ತಾಂತ್ರಿಕ ಬಳಗದ ಕಾರಣದಿಂದ ಸುದ್ದಿಯಲ್ಲಿದೆ. ದೊಡ್ಮನೆ ಕುಡಿ ಲಕ್ಕಿ ಗೋಪಾಲ್ (Lucky Gopal) ಚೊಚ್ಚಲ ಪ್ರಯತ್ನದ ಐವಿ ರಿಟರ್ನ್ಸ್ ಸಿನಿಮಾದಲ್ಲಿ ಹೆಸರಾಂತ ಟೆಕ್ನಿಷಿಯನ್‌ ಕೆಲಸ ಮಾಡಲಿದ್ದಾರೆ.  ಹೀಗಾಗಿ ಈ ಸಿನಿಮಾ ತಾಂತ್ರಿಕವಾಗಿ ಶ್ರೀಮಂತಿಕೆಯಿಂದ ಕೂಡಿರಲಿದೆ. ತಮಿಳಿನ ಹೆಸರಾಂತ ಸಂಗೀತ ನಿರ್ದೇಶಕ ಅಮ್ರಿಷ್ ಈ ಸಿನಿಮಾದ ಹಾಡುಗಳನ್ನು ಕಂಪೋಸ್‌ ಮಾಡಿದ್ದು, ರುಸ್ತುಂ, ಘೋಸ್ಟ್ ಚಿತ್ರದ ಖ್ಯಾತಿಯ ಮಹೇನ್ ಸಿಂಹ ಸಿನಿಮಾಟೋಗ್ರಫಿಯಲ್ಲಿ ಐವಿ ರಿಟರ್ನ್ಸ್ ಸಿನಿಮಾ ಮೂಡಿ ಬರಲಿದೆ. ಸೂರಿ ಅವರ ಚಿತ್ರಗಳಿಗೆ ಕತ್ತರಿ ಪ್ರಯೋಗ ಮಾಡಿರುವ ದೀಪು ಎಸ್ ಕುಮಾರ್ ಚಿತ್ರಕ್ಕೆ ಸಂಕಲನಕಾರರಾಗಿ ಕೆಲಸ ಮಾಡಿದ್ದಾರೆ. ವಿದ್ಯಾಧರಣ್ ಕಥೆ, ಮಾಸ್ತಿ ಪಂಚಿಂಗ್ ಮಾತು, ಚೇತನ್ ಡಿಸೋಜಾ ಅವರ…

Read More

ಈರುಳ್ಳಿ ಸಾಮಾನ್ಯವಾಗಿ ದ್ವೈವಾರ್ಷಿಕ ಅಥವಾ ವರ್ಷವಿಡಿ ಬೆಳೆಯುವ ಸಸ್ಯವಾಗಿದೆ. ಸಾಮಾನ್ಯವಾಗಿ ವರ್ಷವಿಡಿ ಲಭ್ಯವಿರುತ್ತದೆ. ವಸಂತ ಮತ್ತು ಶರತ್ಕಾಲದ ನಡುವೆ ಬೆಳೆಯಲಾಗುತ್ತದೆ. ಉಳಿದ ತಿಂಗಳುಗಳಲ್ಲಿ ಸಂಗ್ರಹಿಸಲಾಗುವುದು.ಈರುಳ್ಳಿಯ ವೈಜ್ಞಾನಿಕ ಹೆಸರು ಅಲಿಯಮ್ ಸೆಫಾ(Allium sepa). ಪ್ರಪಂಚದಲ್ಲಿ ಸಾಮಾನ್ಯವಾಗಿ ಈರುಳ್ಳಿಯನ್ನು ಮೂರು ಬಣ್ಣಗಳಲ್ಲಿ ಬೆಳೆಯಲಾಗುತ್ತದೆ ಇದರ ಸಿಪ್ಪೆ ಗುಲಾಬಿ(ಹಳದಿ) / ಕಂದು ಅಥವಾ ತಿಳಿ ಚಿನ್ನದ ಬಣ್ಣವನ್ನು ಹೊಂದಿರುತ್ತದೆ.ಇದು ಬಿಳಿ ಮತ್ತು ಕೆಂಪು ಈರುಳ್ಳಿಗಿಂತ ಬಲವಾದ, ತೀಕ್ಷಣವಾದ ಪರಿಮಳವನ್ನು ಹೊಂದಿರುತ್ತದೆ.ಇದಕ್ಕೆ ಕಾರಣ ಇದು ಹೆಚ್ಚಿನ ಸಲ್ಫರ್ (ಗಂಧಕ) ಅಂಶವನ್ನು ಹೊಂದಿರುತ್ತದೆ. ಹಳದಿ ಅಥವಾ ಗುಲಾಬಿ ಈರುಳ್ಳಿಯನ್ನು ಉತ್ತರ ಯುರೋಪಿನಲ್ಲಿ ಜಾಸ್ತಿ ಬೆಳೆಯಲಾಗುತ್ತದೆ. ಇವುಗಳನ್ನು ತಂಪಾದ ಕೋಣೆಯ ಉಷ್ಣಾಂಶದಲ್ಲಿ ಕತ್ತಲು ಸ್ಥಳದಲ್ಲಿ ಸಂಗ್ರಹಿಸಲಾಗುತ್ತದೆ. ಶೇಕರಣೆಗಾಗಿ ಅವುಗಳನ್ನು ಕಾಗದದಲ್ಲಿ ಸುತ್ತಿ ಶೀತಲಿಕರಣದಲ್ಲಿ (ರೆಫ್ರಿಜರೇಟರ್) ಇರಿಸಲಾಗುತ್ತದೆ.ಕತ್ತರಿಸಿದ ಅಥವಾ ಸಿಪ್ಪೆ ಸುಲಿದ ಈರುಳ್ಳಿಯನ್ನು ರೆಫ್ರಿಜರೇಟರ್ ನಲ್ಲಿ ಪ್ಲಾಸ್ಟಿಕ್ ನಲ್ಲಿ ಇರಿಸಬೇಕಾಗುತ್ತದೆ.ಆದರೆ ಅವು ಕೆಲವು ದಿನಗಳವರೆಗೆ ಮಾತ್ರ ಇರುತ್ತವೆ. ಇವುಗಳು ಪ್ರೆಂಚ್ ಈರುಳ್ಳಿ ಸೂಪ್,ಇತರ ಸೂಪ್ ಗಳು,ಸ್ಟ್ರೂಗಳು, ಬ್ರೈಸ್ ಗಳು,ಸಾಟಿಡ್ ಭಕ್ಷಗಳು ಮತ್ತು…

Read More