Author: AIN Author

ಬೆಂಗಳೂರು:- ಕೆಆರ್ ಪುರಂನಲ್ಲಿ ನಡೆದಿದ್ದ ಮಗನಿಂದ ತಾಯಿ ಕೊಲೆಗೆ ಟ್ವಿಸ್ಟ್ ಸಿಕ್ಕಿದೆ. ಪೊಲೀಸರ ತನಿಖೆ ವೇಳೆ ಈ ಕೊಲೆಯಲ್ಲಿ ತಂದೆಯೂ ಶಾಮೀಲಾಗಿದ್ದ ಅಂಶ ಬಯಲಾಗಿದೆ. ಕೊಲೆಗೆ ಬಳಸಲಾಗಿದ್ದ ರಾಡ್​ನಲ್ಲಿ 2 ರೀತಿಯ ಫಿಂಗರ್ ಪ್ರಿಂಟ್ ಪತ್ತೆಯಾಗಿದ್ದು ತಂದೆ-ಮಗ ಸೇರಿಕೊಂಡು ಮಹಿಳೆಯನ್ನು ಕೊಲೆ ಮಾಡಿರುವುದು ಬಯಲಾಗಿದೆ. ಫೆಬ್ರವರಿ 2ರಂದು ಕೆ.ಆರ್.ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೊಲೆ ನಡೆದಿತ್ತು. ಕ್ಷುಲ್ಲಕ ವಿಚಾರಕ್ಕೆ ತಾಯಿಯೊಂದಿಗೆ ಜಗಳವಾಡಿದ ಮಗ ರಾಡಿನಿಂದ ಹೊಡೆದು ಕೊಲೆ ಮಾಡಿದ್ದ. ಕೊಲೆಯ ತನಿಖೆ ನಡೆಸಿದ ಪೊಲೀಸರಿಗೆ ಮತ್ತೋರ್ವ ಕೊಲೆ ಆರೋಪಿ ಇರುವುದು ಬಯಲಾಗಿದೆ. ಕೊಲೆಗೆ ಬಳಸಲಾಗಿದ್ದ ರಾಡ್ ಮೇಲೆ 2 ರೀತಿಯ ಫಿಂಗರ್ ಪ್ರಿಂಟ್​ಗಳು ಪತ್ತೆಯಾಗಿದ್ದವು. ಇದರಿಂದ ಅನುಮಾನಗೊಂಡ ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದರು. ಆಗ ರಾಡ್ ನ ಎಫ್​ಎಸ್​ಎಲ್​ಗೆ ಕಳುಹಿಸಿದಾಗ ರಾಡ್​ ಮೇಲೆ ಇರುವುದು ಮಗ ಹಾಗೂ ತಂದೆಯ ಫಿಂಗರ್ ಪ್ರಿಂಟ್ ಎಂಬುವುದು ಬಯಲಾಗಿದೆ ವಿಚಾರ ತಿಳಿಯುತ್ತಿದ್ದಂತೆ ಕೊಲೆಯಾದ ನೇತ್ರಾಳ ಗಂಡ ಚಂದ್ರಪ್ಪನನ್ನು ಕೆ.ಆರ್. ಪುರಂ ಪೊಲೀಸರು ವಶಕ್ಕೆ ಪಡೆದು ವಿಚಾರಣೆ…

Read More

ಬೆಳಗಾವಿ : ನಾವು ಸೇತುವೆಯನ್ನೂ ಕಟ್ಟಿದ್ದೇವೆ, ಮಂದಿರವನ್ನೂ ಕಟ್ಟಿದ್ದೇವೆ. ಬಡ ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಯೂ ಮಾಡಿದ್ದೇವೆ. ನಮ್ಮ ಗ್ಯಾರಂಟಿಗಳನ್ನು ಟೀಕಿಸುವ ಬಿಜೆಪಿಯವರು ಗ್ಯಾರಂಟಿ ಯೋಜನೆಗಳ ಉಪಯೋಗ ಮಾಡಿಕೊಳ್ಳುತ್ತಿದ್ದಾರೋ, ಇಲ್ಲವೋ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಸಚಿವರಾದ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಪ್ರಶ್ನಿಸಿದ್ದಾರೆ. ಬೆಳಗಾವಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳು ಇವರ ಆಶ್ರಯದಲ್ಲಿ ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಹಮ್ಮಿಕೊಂಡಿದ್ದ ಗ್ಯಾರಂಟಿ ಸಮಾವೇಶ ಸಮಾರಂಭದಲ್ಲಿ ಮಾತನಾಡಿದ ಸಚಿವರು, ಚುನಾವಣೆಗೂ ಮುನ್ನ ನಿಮ್ಮ ಕಷ್ಟಕ್ಕೆ ಸ್ಪಂದಿಸುವ ಭಾಷೆ ಕೊಟ್ಟಿದ್ದೆವು. ಬೆಳಗಾವಿ ಜಿಲ್ಲೆಯಲ್ಲಿ ನೀವು 11 ಸ್ಥಾನಗಳನ್ನು ಗೆಲ್ಲಿಸಿಕೊಟ್ಟಿದ್ದೀರಿ. ನುಡಿದಂತೆ ನಡೆಯುವ ಪಕ್ಷ ಕಾಂಗ್ರೆಸ್ ಪಕ್ಷ. ಭಾಗ್ಯಗಳ ಸರದಾರ ಖ್ಯಾತಿಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಟ್ಟಿರುವ ಮಾತಿನಂತೆ ವಿಶ್ವಾಸ ಉಳಿಸಿಕೊಂಡಿದ್ದಾರೆ. ನಿಮ್ಮ ಸ್ವಾಭಿಮಾನ, ಗೌರವ ಎತ್ತಿ ಹಿಡಿಯುವ ಆರ್ಥಿಕವಾಗಿ ಸ್ವಾವಲಂಬಿಯಾಗಿಸಲು ಕ್ರಮ ತೆಗೆದುಕೊಂಡಿದ್ದೇವೆ. ಕೆಲವರು…

Read More

ವೆಂಕಟ್ ಭಾರದ್ವಾಜ್ ನಿರ್ದೇಶನದ `ನಗುವಿನ ಹೂಗಳ ಮೇಲೆ’ ಚಿತ್ರ ಇದೇ ಫೆಬ್ರವರಿ 9ರಂದು ತೆರೆಗಾಣಲಿದೆ. ಅಭಿ ದಾಸ್ ಮತ್ತು ಶರಣ್ಯಾ ಶೆಟ್ಟಿ ನಾಯಕ ನಾಯಕಿಯರಾಗಿ ನಟಿಸಿರುವ ಈ ಚಿತ್ರ ಈಗಾಗಲೇ ಹಾಡುಗಳು, ಟ್ರೈರಲ್ ಸೇರಿದಂತೆ ನಾನಾ ರೀತಿಯಲ್ಲಿ ಪ್ರೇಕ್ಷಕರನ್ನು ಸೆಳೆದುಕೊಂಡಿದೆ. ಭಿನ್ನ ಪ್ರೇಮಕಥಾನಕದ ಸ್ಪಷ್ಟ ಸುಳಿವಿನೊಂದಿಗೆ ಭರವಸೆ ಮೂಡಿಸಿರುವ ನಗುವಿನ ಹೂಗಳ ಮೇಲೆ ಸಾಕಷ್ಟು ಹೊಸತನಗಳ ಪರಾಗ ಮೆತ್ತಿಕೊಂಡಂತಿದೆ. ಈ ಹಿಂದೆ ಆಮ್ಲೆಟ್, ಕೆಂಪಿರ್ವೆ ಮುಂತಾದ ಸಿನಿಮಾಗಳನ್ನು ನಿರ್ದೇಶನ ಮಾಡಿ ಗಮನ ಸೆಳೆದಿರುವವರು ವೆಂಕಟ್ ಭಾರದ್ವಾಜ್. ಅವರು ನಗುವಿನ ಹೂಗಳ ಮೇಲೆ ಚಿತ್ರದ ಮೂಲಕ, ಎಲ್ಲ ವಯೋಮಾನದವರನ್ನೂ, ಎಲ್ಲ ತೆರನಾದ ಅಭಿರುಚಿಯ ಪ್ರೇಕ್ಷಕರನ್ನೂ ಅಚ್ಚರಿಗೀಡುಮಾದಲು ಸಜ್ಜಾಗಿದ್ದಾರೆ. ಕನ್ನಡ ಭಾಷೆ ಮೇಲೆ ಅಭಿಮಾನವಾಗಿ ಈ ಚಿತ್ರವನ್ನು ತೆಲುಗಿನ ಖ್ಯಾತ ನಿರ್ಮಾಪಕ ಕೆ.ಕೆ ರಾಧಾ ಮೋಹನ್ ಶ್ರೀ ಸತ್ಯಸಾಯಿ ಆಟ್ರ್ಸ್ ಬ್ಯಾನರಿನಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಬಲ ರಾಜವಾಡಿ, ಆಶಾ ಸುಜಯ್, ಗಿರೀಶ್ ನಂಜಪ್ಪ, ಹರ್ಷಿತ್ ಗೌಡ, ಅಭಿಷೇಕ್ ಐಯಂಗಾರ್, ಹರೀಶ್ ಚೌಹಾಣ್, ಹರ್ಷ ಗೋ…

Read More

ಚಾಮರಾಜನಗರ: ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಟಿಕೆಟ್ ಆಕಾಂಕ್ಷಿಯೊಬ್ಬರು ಆಪ್ತರ ಬಳಗಕ್ಕೆ ಭರ್ಜರಿ ಬಾಡೂಟ ಆಯೋಜನೆ ಮಾಡಿದ್ದಾರೆ. ಚಾಮರಾಜನಗರ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಡಿ‌.ಎನ್.ನಟರಾಜು ಅವರು ಬಿಳಿಗಿರಿರಂಗನ ಬೆಟ್ಟದ ತಪ್ಪಲಿನ ವಡ್ಡಗೆರೆಯ ಖಾಸಗಿ ಸಭಾಂಗಣದಲ್ಲಿ ಭರ್ಜರಿ ಔತಣಕೂಟ ನಡೆಸಿದ್ದಾರೆ. ಇನ್ನು,,ಈ ಔತಣಕೂಟದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು, ಪಕ್ಷದ ಮುಖಂಡರು, ಅಭಿಮಾನಿ ಬಳಗ ಹಾಗೂ ಸಮುದಾಯಗಳ ಮುಖಂಡರು ಸೇರಿದಂತೆ ಸಹಸ್ರಾರು ಮಂದಿ ಭಾಗಿಯಾಗಿದ್ದಾರೆ. ಮಟನ್,ಚಿಕನ್, ಮೊಟ್ಟೆ, ಮುದ್ದೆ, ಅನ್ನ- ಸಾರು ಸೇರಿದಂತೆ ವಿವಿಧ ಬಗೆಯ ಮಾಂಸ ಭಕ್ಷ್ಯಗಳನ್ನು ಉಣಬಡಿಸಲಾಗಿದೆ. ಕೆಲ ತಿಂಗಳುಗಳ ಹಿಂದೆಯಷ್ಟೇ ಕವಲಂದೆಯಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ತಮಗೆ ಈ ಬಾರಿ ಟಿಕೆಟ್ ಕೊಡಬೇಕೆಂದು ಪ್ರಬಲವಾಗಿ ಒತ್ತಾಯಿಸಿದ್ದರು.

Read More

ಕಲಬುರ್ಗಿ:- ಯುವ ಸಮೂಹದ ಮೂಲಕ ಪಕ್ಷವನ್ನ ಬಲಗೊಳಿಸಲು ಮುಂದಾಗಿರುವ ಜೆಡಿಎಸ್ ಇದೀಗ ಯುವನಾಯಕ ಬಾಲರಾಜ್ ಗುತ್ತೇದಾರ್ ಗೆ ಕಲಬುರಗಿ ಜಿಲ್ಲಾಧ್ಯಕ್ಷ ಸ್ಥಾನ ನೀಡಿ ಮಾಜಿ ಸಿಎಂ ಕುಮಾರಸ್ವಾಮಿ ಆದೇಶ ಹೊರಡಿಸಿದ್ದಾರೆ. ಕಳೆದ ಬಾರಿ ಸೇಡಂ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದ ಬಾಲರಾಜ್ ಗೆ ಇದೀಗ ಜಿಲ್ಲಾಧ್ಯಕ್ಷ ಸ್ಥಾನ ಸಿಕ್ಕಿದ್ದು ಯುವಜನತೆಯಲ್ಲಿ ಹುರುಪು ತಂದಿದೆ.ಹೀಗಾಗಿ ಪಕ್ಷ ಸಂಘಟನೆ ಮಾಡಲು ನನಗೆ ಮತ್ತಷ್ಟು ಶಕ್ತಿ ಬಂದಂತಾಗಿದೆ ಅಂತ ಬಾಲರಾಜ್ ಗುತ್ತೇದಾರ್ ತಿಳಿಸಿದ್ದಾರೆ…

Read More

ಧಾರವಾಡ- ಕಳೆದ ಜನೆವರಿ 24 ರಂದು ಧಾರವಾಡ ತಾಲೂಕಿನ ತಡಕೋಡ್ ಗ್ರಾಮದಲ್ಲಿ ಸಂಭವಿಸಿದ್ದ ಹಿಂದೂ ಮುಸ್ಲಿಂ ಗಲಾಟೆ ಒ್ರಕರಣಕ್ಕೆ ಸಂಬಂಧಿಸಿದಂತೆ, ಬಂಧಿರಾಗಿ ಜೈಲಿನಲ್ಲಿದ್ದ ಹಿಂದೂ ಯುವಕರಿಗೆ ಜಾಮೀನು ಮಂಜೂರಾಗಿ ಬಿಡುಗಡೆಯಾಗಿದ್ದು, ಮಾಜಿ ಶಾಸಕ ಅಮೃತ ದೇಸಾಯಿ ಅವರು ಬಿಡುಗಡೆಗೊಂಡ ಯುವಕರನ್ನು ಸ್ವಾಗತ ಮಾಡಿಕೊಂಡರು. ತಡಕೋಡ ಗ್ರಾಮದ ಸದ್ದಾಂಹುಸೇನ್ ಎಂಬಾತ ಅಯೋಧ್ಯೆ ರಾಮಮಂದಿರದ ಫೋಟೋದ ಮೇಲೆ ಹಸಿರು ಧ್ವಜ, ಓವೈಸಿ ಫೋಟೋ ಹಾಕಿ ಇದು ಇಸ್ಲಾಮಿಕ್ ಪವ‌ರ್ ಎಂಬ ಸಂದೇಶ ಹಾಕಿ ಎಡಿಟ್ ಮಾಡಿದ್ದ ಫೋಟೋವನ್ನು ತನ್ನ ವಾಟ್ಸಪ್ ಸ್ಟೇಟಸ್‌ ಹಾಕಿಕೊಂಡಿದ್ದ. ಇದರಿಂದ ಕೆರಳಿದ್ದ ಹಿಂದೂ ಕಾರ್ಯಕರ್ತರು ನಂತರ ತಡಕೋಡ ಗ್ರಾಮದ ಈದ್ದಾ ಕಟ್ಟಡದ ಗುಂಬಜ್ ಒಡೆದು ಆಕ್ರೋಶ ಹೊರ ಹಾಕಿದ್ದರು. ಅಂದು ಗರಗ ಠಾಣೆ ಪೊಲೀಸರು ಕೆಲ ಹಿಂದೂ ಕಾರ್ಯಕರ್ತರನ್ನೂ ಬಂಧಿಸಿ ಕೇಂದ್ರ ಕಾರಾಗೃಹದಲ್ಲಿಟ್ಟಿದ್ದರು. ಇಂದು ಎಲ್ಲ ಹಿಂದೂ ಕಾರ್ಯಕರ್ತರಿಗೆ ಜಾಮೀನು ಮಂಜೂರಾಗಿದ್ದು, ಮಾಜಿ ಶಾಸಕ ಅಮೃತ ದೇಸಾಯಿ ಅವರು ಸ್ವತಃ ಕೇಂದ್ರ ಕಾರಾಗೃಹಕ್ಕೆ ತೆರಳಿ ಜೈಲಿನಿಂದ ಬಿಡುಗಡೆಗೊಂಡ ಹಿಂದೂ ಕಾರ್ಯಕರ್ತರನ್ನು…

Read More

ಬೆಂಗಳೂರು:- ಬೆಂಗಳೂರಿನಲ್ಲಿ ಸರಣಿ ಬಾಂಬ್‌ ಸ್ಫೋಟಕ್ಕೆ ಸಂಚು ಮಾಡಿದ್ದ 6 ಮಂದಿ ವಿರುದ್ಧ ಎನ್‌ಐಎ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಲಾಗಿದೆ. ಕಳೆದ ಕಳೆದ ಜುಲೈನಲ್ಲಿ ಆರ್‌ಟಿ ನಗರದ ಮನೆ ಮೇಲೆ ದಾಳಿ ಮಾಡಿದ ಬೆಂಗಳೂರು ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ಈ ವೇಳೆ ಜೀವಂತ ಗ್ರೆನೇಡ್‌ ಪತ್ತೆಯಾಗಿತ್ತು. ನಂತರ ಈ ಪ್ರಕರಣ ಎನ್‌ಐಎಗೆ ವರ್ಗಾವಣೆಯಾಗಿತ್ತು. ಶೋಧ ಕಾರ್ಯದ ವೇಳೆ ಆರೋಪಿಗಳ ಬಳಿ 7 ನಾಡ ಪಿಸ್ತೂಲ್, 45 ಜೀವಂತ ಗುಂಡು, ಗ್ರೆನೇಡ್ ಹಾಗೂ ವಾಕಿಟಾಕಿಗಳು ಸಿಕ್ಕಿದ್ದವು. ವಿಚಾರಣೆ ಸಂದರ್ಭದಲ್ಲಿ ಆರೋಪಿಗಳು ಬೆಂಗಳೂರಿನಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಮುಂದಾಗಿದ್ದರು ಎಂಬ ವಿಚಾರ ತನಿಖೆಯಿಂದ ಬಯಲಾಗಿತ್ತು. ಈ ಎಲ್ಲಾ ಅಂಶಗಳನ್ನು ಒಳಗೊಂಡು ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದೆ ಪೌಡರ್ ರೂಪದ ಕೆಮಿಕಲ್ ಬಳಸಿ ಪೆಟ್ಟಿಗೆಯೊಂದರಲ್ಲಿ ಆರೋಪಿಗಳು ಅಡಗಿಸಿಟ್ಟಿದ್ದರು. ಈ ಬಗ್ಗೆ ಮಾಹಿತಿ ಪಡೆದ ನಂತರ ತನಿಖಾಧಿಕಾರಿಗಳು ಬಾಂಬ್ ನಿಷ್ಟ್ರೀಯ ದಳ ಮತ್ತು FSL ಅಧಿಕಾರಿಗಳ ಜೊತೆಯಲ್ಲಿ ಕಾರ್ಯಾಚರಣೆ ನಡೆಸಿ ಸಜೀವ ಗ್ರೇನೆಡ್‌ಗಳನ್ನ…

Read More

ಗದಗ:- ಸಿಕ್ಕಿಂನ ಬಾಂಗ್ ಡೋಂಗ್ರೆಯಲ್ಲಿ ಕರ್ತವ್ಯ ನಿರತ ಯೋಧರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ರಾಮನಗೌಡ ಚಂದ್ರಗೌಡರ (40) ಎಂಬವರು ಮೃತಪಟ್ಟ ಯೋಧರಾಗಿದ್ದಾರೆ. ಬಾಂಗ್ ಡೋಂಗ್ರೆಯಲ್ಲಿ ಕರ್ತವ್ಯದಲ್ಲಿದ್ದಾಗ ಹಿಮಪಾತದ ನಡುವೆ ರಕ್ತದೊತ್ತಡ ಏರುಪೇರಾಗಿ ಹೃದಯಾಘಾತವಾಗಿದೆ ಎಂದು ತಿಳಿದು ಬಂದಿದೆ. ಇವರು 2002 ರಲ್ಲಿ ಐಟಿಬಿಪಿಗೆ ನೇಮಕವಾಗಿದ್ದರು. ಕಳೆದ 22 ವರ್ಷಗಳಿಂದ ಸೇನೆಯಲ್ಲಿ ಇವರು ಸೇವೆ ಸಲ್ಲಿಸುತ್ತಿದ್ದರು. ಉತ್ತರಾಖಂಡ, ಅಸ್ಸಾಂ, ಮಿಜೋರಾಂ, ಚಂಡೀಗಢ, ಸಿಕ್ಕಿಂ ಸೇರಿದಂತೆ ಅನೇಕ ಕಡೆಗಳಲ್ಲಿ ಇವರು ಕರ್ತವ್ಯ ನಿರ್ವಹಿಸಿದ್ದಾರೆ. ಬರುವ ಏಪ್ರಿಲ್‍ನಲ್ಲಿ ಸೇವಾ ನಿವೃತ್ತಿ ಹೊಂದಿ ಸ್ವಗ್ರಾಮಕ್ಕೆ ಮರಳಲಿದ್ದರು. ಅಷ್ಟರಲ್ಲೇ ಅವರು ವಿಧಿಯಾಟಕ್ಕೆ ಬಲಿಯಾಗಿದ್ದಾರೆ. ನಾಳೆ ಯೋಧನ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.

Read More

ಬೆಂಗಳೂರು:- ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಕ್ಕರೆ ಕಾರ್ಖಾನೆ ಬಂದ್ ಆಗಿದ್ದು ಅನುಮತಿ ಪಡೆಯುವರೆಗೂ ಕಾರ್ಖಾನೆ ನಡೆಸಲಾಗದು ಎಂದು ಕೋರ್ಟ್ ಹೇಳಿದೆ. ಯತ್ನಾಳ್ ಕುಟುಂಬದ ಒಡೆತನದಲ್ಲಿರುವ ಸಕ್ಕರೆ ಹಾಗೂ ಎಥೆನಾಲ್ ಘಟಕದ ಕಾರ್ಯಾಚರಣೆ ಸ್ಥಗಿತಗೊಳಿಸುವ ಕುರಿತು ಮಾಹಿತಿ ಪಡೆದು ತಿಳಿಸುವಂತೆ ಅರ್ಜಿದಾರರ ಪರ ವಕೀಲರಿಗೆ ಹೈಕೋರ್ಟ್ ಸೂಚನೆ ನೀಡಿದೆ. ಯತ್ನಾಳ್ ಪುತ್ರ ಹಾಗೂ ಸಂಸ್ಥೆಯ ನಿರ್ದೇಶಕ ರಮಣಗೌಡ ಬಿ.ಪಾಟೀಲ್ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಎಸ್ ದಿನೇಶ್ ಕುಮಾರ್ ಮತ್ತು ನ್ಯಾಯಮೂರ್ತಿ ಟಿ.ಜಿ ಶಿವಶಂಕರೇಗೌಡ ಅವರ ನೇತೃತ್ವದ ವಿಭಾಗೀಯ ಪೀಠ ಈ ಸೂಚನೆ ನೀಡಿ ವಿಚಾರಣೆ ಮುಂದೂಡಿದೆ ವಿಚಾರಣೆ ವೇಳೆ ಅರ್ಜಿದಾರರ ವಕೀಲರು, ಘಟಕವನ್ನು ರಾಜಕೀಯ ಉದ್ದೇಶದಿಂದ ಸ್ಥಗಿತಗೊಳಿಸಲು ಒತ್ತಾಯಿಸಲಾಗುತ್ತಿದೆ ಎಂದು ವಾದಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಕಾರ್ಖಾನೆ ನಿಯಮದ ಪ್ರಕಾರ ನಡೆಯುತ್ತಿಲ್ಲ. ಇದರಿಂದಾಗಿ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದು ನ್ಯಾಯಾಲಯದ ಮುಂದೆ ವಿವರಿಸಿದ್ದಾರೆ ಬಳಿಕ…

Read More

ಹೈದರಾಬಾದ್: ತಂದೆ ಜೊತೆ ಗುಡಿಸಲಿನಲ್ಲಿ (Hut)  ಮಲಗಿದ್ದ ಒಂದು ವರ್ಷ ಮಗು ಮೇಲೆ ಬೀದಿ ನಾಯಿಗಳು  (Street Dogs) ದಾಳಿ ಮಾಡಿ ತಿಂದಿರುವ ಘಟನೆ ತೆಲಂಗಾಣದ (Telangana)  ಶಂಶಾಬಾದ್‌ನಲ್ಲಿ ನಡೆದಿದೆ. ಕೆ. ನಾಗರಾಜು (1) ಮೃತಪಟ್ಟ ಮಗು. ಮಗುವಿನ ತಂದೆ ಸೂರ್ಯಕುಮಾರ್ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದಾನೆ. ಶಂಶಾಬಾದ್‌ನ ರಾಜೀವ್ ಗೃಹಕಲ್ಪ ಸಂಕೀರ್ಣದ ಬಳಿ ಗುಡಿಸಲಿನಲ್ಲಿ ಹಿರಿಯ ಮಗನಾದ ನಾಗರಾಜು ಮತ್ತು 20 ದಿನದ ಮಗುವಿನ ಜೊತೆ ಮಲಗಿದ್ದ. ಈ ವೇಳೆ ಬೀದಿ ನಾಯಿಗಳ ಗುಂಪು ಗುಡಿಸಲಿಗೆ ನುಗ್ಗಿ ಮಕ್ಕಳ ಮೇಲೆ ದಾಳಿ ನಡೆಸಿವೆ. ತಡರಾತ್ರಿ 1:30 ರ ಹೊತ್ತಿಗೆ ಸೂರ್ಯಕುಮಾರ್‌ನನ್ನು ಸ್ಥಳೀಯರು ಎಬ್ಬಿಸಿ ಬೀದಿ ನಾಯಿಗಳ ಗುಂಪು ಮಗುವಿನ ಮೇಲೆ ದಾಳಿ ನಡೆಸಿ ತಿನ್ನುತ್ತಿದ್ದವು ಎಂದು ತಿಳಿಸಿದ್ದಾರೆ. ವಿಷಯ ತಿಳಿದ ಸೂರ್ಯ ಹೋಗಿ ನೋಡಿದಾಗ ಮಗು ನಾಯಿಗಳ ಪಾಲಾಗಿತ್ತು. ಈವರೆಗೂ ಮಕ್ಕಳ ಮೇಲೆ ನಡೆದ ದಾಳಿಯಲ್ಲಿ ಇದು ಒಂಬತ್ತನೇ ಗಂಭೀರ ಪ್ರಕರಣವಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Read More