Author: AIN Author

ಕಲಬುರಗಿ: ಶಾಲಾ ವಿದ್ಯಾರ್ಥಿನಿ ಬಸ್ ಕಂಡೆಕ್ಟರ್ ಆಗಿ ಕೆಲಕಾಲ ಟಿಕೆಟ್ ವಿತರಣೆ ಮಾಡಿದ ಆದ ಅಪರೂಪದ ಪ್ರಸಂಗ ಕಲಬುರಗಿಯಲ್ಲಿ ಬೆಳಕಿಗೆ ಬಂದಿದೆ. ಅಫಜಲಪುರ ತಾಲೂಕಿನ‌ ಘತ್ತರಗಿ ಕಡೆ ಸಂಚರಿಸುತ್ತಿದ್ದ ಬಸ್ಸಲ್ಲಿ ಟಿಕೆಟ್ ವಿತರಿಸಿ ಎಲ್ಲರ ಗಮನ ಸೆಳೆದಿದ್ದಾಳೆ ಘತ್ತರಗಾ ಸರ್ಕಾರಿ ಶಾಲಾ ವಿದ್ಯಾರ್ಥಿನಿ ವಿದ್ಯಾ. ಅಂದಹಾಗೆ ಕಂಡಕ್ಟರ್ ಬಳಿ ಮನವಿ ಮಾಡಿಕೊಂಡು ETM ಮಷೀನ್ ಪಡೆದಿದ್ದಾಳೆ.ನಂತ್ರ ಥೇಟ್ ಕಂಡಕ್ಟರ್ ಶೈಲಿಯಲ್ಲಿ ಟಿಕೆಟ್ ವಿತರಿಸಿ ಬಸ್ಸಲ್ಲಿದ್ದವರ ಗಮನ ಸೆಳೆದಿದ್ದಾಳೆ

Read More

ಗದಗ: ಭಾರತೀಯ ಸೇನೆಯಲ್ಲಿ 22 ವರ್ಷಗಳ ಕಾಲ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿ‌ ಗದಗ ಜಿಲ್ಲೆಗೆ ಆಗಮಿಸಿದ ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ರುದ್ರಪ್ಪ ಮಾರನಬಸರಿ ಅವರಿಗೆ ಗದಗ ರೈಲ್ವೇ ನಿಲ್ದಾಣದಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಗದಗ ಜಿಲ್ಲಾ ಘಟಕದ ವತಿಯಿಂದ ಭವ್ಯ ಸ್ವಾಗತವನ್ನು ಕೋರಲಾಯಿತು. ಹೂಮಳೆ ಗೈದು, ಹೂಮಾಲೆ ಹಾಕಿ ರಾಷ್ಟ್ರ ಧ್ವಜ ಹಿಡಿದು ನಿವೃತ್ತ ಯೋಧ ರುದ್ರಪ್ಪ ಹಾಗೂ ಕುಟುಂಬವರ್ಗವನ್ನ ಸನ್ಮಾನಿಸಲಾಯಿತು. ನಂತರ ಗದಗ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮುಖಾಂತರ ಕರೆದೊಯ್ದು ನಿವೃತ್ತಿ ಜೀವನ ಸುಖವಾಗಿರಲೆಂದು ಹಾರೈಸಿದ್ರು. ಈ ಸಂದರ್ಭದಲ್ಲಿ ಮಾಜಿ ಸೈನಿಕರು, ವೀರನಾರಿಯರು ಸೇರಿದಂತೆ ದೇಶಭಕ್ತರು ಇದ್ರು

Read More

ರಂಗಿತರಂಗ’ ಸಿನಿಮಾದ ಯಶಸ್ವಿ ಜೋಡಿ ನಿರೂಪ್ ಭಂಡಾರಿ ಮತ್ತು ಸಾಯಿ ಕುಮಾರ್ ವಿಬಿನ್ನ ಕಥಾವಸ್ತುವನ್ನು ಹೊಂದಿದ ಸಿನಿಮಾದಲ್ಲಿ ಮತ್ತೆ ಒಂದಾಗಿದ್ದಾರೆ.‘ಅಂಕಿತ್ ಸಿನಿಮಾಸ್’ ನಿರ್ಮಾಣದ ಈ ಚಿತ್ರದ ಟೈಟಲ್ ಮತ್ತು ಮೊದಲ ಲುಕ್ ಇಂದು ಬಿಡುಗಡೆಯಾಗಿದೆ. “ಸತ್ಯ ಸನ್ ಆಫ್ ಹರಿಶ್ಚಂದ್ರ” ಈ ಚಿತ್ರದ ಶೀರ್ಷಿಕೆ. ಇಂದು ಬಿಡುಗಡೆಯಾದ ಫಸ್ಟ್ ಲುಕ್ ಪೋಸ್ಟರ್ ಹಿತವಾದ ವರ್ಣ ಸಂಯೋಜನೆಯೊಂದಿಗೆ ಸುಂದರವಾಗಿ ಮೂಡಿ ಬಂದಿದೆ. ಮಗನಾಗಿ ನಿರೂಪ್ ಭಂಡಾರಿಯವರ ಫಸ್ಟ್ ಲುಕ್ ಆಕರ್ಷಕವಾಗಿದೆ. ಅಪ್ಪನಾಗಿ ಸಾಯಿ ಕುಮಾರ್ ಅವರ ಗತ್ತು ರಾಜಗಾಂಭೀರ್ಯದಿಂದ ಕೂಡಿದೆ.ಈ ಫಸ್ಟ್ ಲುಕ್ ನಲ್ಲಿರುವ “ನನ್ನ ತಂದೆಯೇ ನನ್ನ ವಿಲನ್” ಘೋಷವಾಕ್ಯ ದೊಂದಿಗೆ ನಿರ್ದೇಶಕ ಸಚಿನ್ ವೀಕ್ಷಕರಲ್ಲಿ ಕುತೂಹಲ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಂದೆ ಮತ್ತು ಮಗನ ಕಥಾ ಹಂದರವನ್ನು ಹೊಂದಿರುವುದರಿಂದ ಈ ಚಿತ್ರದ ಫಸ್ಟ್ ಲುಕ್ಕನ್ನು ನಾಯಕ ಮತ್ತು ನಿರ್ಮಾಪಕರ ತಂದೆಯರು ಜಂಟಿಯಾಗಿ ಬಿಡುಗಡೆ ಮಾಡಿದ್ದು ಔಚಿತ್ಯಪೂರ್ಣವಾಗಿತ್ತು. ಸತ್ಯ ಮತ್ತು ಸುಳ್ಳಿನ ಮಧ್ಯ ನಡೆಯುವ ಸಂಘರ್ಷದ ಕಥಾ ಹಂದರ ಹೊಂದಿರುವ ಸತ್ಯ ಸನ್…

Read More

ಬೆಂಗಳೂರು: ನಗರದ  ಪ್ರಮುಖ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಒಂದಾಗಿರುವ ಕೆ.ಸಿ ಜನರಲ್‌ ಆಸ್ಪತ್ರೆ ಅಭಿವೃದ್ಧಿಗೆ ಸರ್ಕಾರ ಮುಂದಾಗಿದೆ. ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ 150 ಕೋಟಿ ರೂಪಾಯಿ ವೆಚ್ಚದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ. ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ತಾಯಿ ಮಕ್ಕಳ ಆಸ್ಪತ್ರೆ ಯಾಗಿದ್ದು  ಶವಾಗಾರ, ಅಡುಗೆ ಮನೆ, ಜೈವಿಕ ತ್ಯಾಜ್ಯ ಕೊಠಡಿ ಹಾಗೂ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ  ನಿಟ್ಟಿನಲ್ಲಿ ಅಭಿವೃದ್ಧಿಗೆ ಸರ್ಕಾರ ಮುಂದಾಗಿದೆ. ನಿಟ್ಟಿನಲ್ಲಿ 150 ಕೋಟಿ ಅನುದಾನ ಮೀಸಲಿಡಲಾಗುವುದು. ಇದನ್ನು ಸಚಿವ ಸಂಪುದಲ್ಲಿಟ್ಟು ಒಪ್ಪಿಗೆ ಪಡೆಯಲಾಗುವುದು ಎಂದಿದ್ದಾರೆ.

Read More

ಬೆಂಗಳೂರು: ಬೆಂಗಳೂರು ಸೇರಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮುಂದಿನ 2 ದಿನಗಳಲ್ಲಿ ಸೆಕೆ ಹೆಚ್ಚಾಗಲಿದೆ ಎಂದು ಭಾರತೀಯ ಹವಮಾನ ಇಲಾಖೆ ಮಾಹಿತಿ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಬಳ್ಳಾರಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಒಣಹವೆ ಮುಂದುವರೆದಿದೆ. ಎಚ್​ಎಎಲ್​ನಲ್ಲಿ 30.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 15.0 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ನಗರದಲ್ಲಿ 31.4 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 18.3 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ಕೆಐಎಎಲ್​ನಲ್ಲಿ 30.7 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 17.2 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ಜಿಕೆವಿಕೆಯಲ್ಲಿ 30.8 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 19.0 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಬೆಳಗಾವಿಯಲ್ಲಿ 31.5 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 19.0 ಡಿಗ್ರಿ…

Read More

ರಾಯಚೂರು: ಎರಡು ವಿಷ್ಣು ಅವತಾರದ ವೆಂಕಟೇಶ್ವರ ಸ್ವಾಮಿ ಮೂರ್ತಿಗಳು ಹಾಗೂ ಶಿವಲಿಂಗ ಪತ್ತೆಯಾಗಿರುವ ಘಟನೆ ಜಿಲ್ಲೆಯ ದೇವಸುಗೂರು ಬಳಿಯ ಕೃಷ್ಣಾ ನದಿಯಲ್ಲಿ ನಡೆದಿದೆ.  ವೆಂಕಟೇಶ್ವರನ ಮೂರ್ತಿಯೊಂದು ಅಯೋಧ್ಯ (Ayodhya) ಬಾಲರಾಮನ (BalaRama) ವಿನ್ಯಾಸವನ್ನ ಹೊಂದಿರುವುದು ಅಚ್ಚರಿ ಮೂಡಿಸಿದೆ. ನದಿಯಲ್ಲಿ ನೀರು ಬತ್ತಿದ್ದು ಮೀನುಗಾರರು ಇದ್ದ ನೀರಿನಲ್ಲೇ ಮೀನು ಹಿಡಿಯುತ್ತಿದ್ದ ವೇಳೆ ಮೂರ್ತಿಗಳು ಪತ್ತೆಯಾಗಿವೆ. ಅಲ್ಲದೆ ಕೃಷ್ಣಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಕಾರ್ಯ ನಡೆದಿದ್ದು ಅಲ್ಲಲ್ಲಿ ಮಣ್ಣು ಅಗೆಯಲಾಗಿತ್ತು. ಭೂಮಿಯಲ್ಲಿ ಹೂತು ಹೋಗಿದ್ದ ಮೂರ್ತಿಗಳು ಈಗ ಹೊರಗೆ ಬಂದಿರಬಹುದು ಎನ್ನಲಾಗಿದೆ. ಸಿಕ್ಕಿರುವ ಮೂರು ಮೂರ್ತಿಗಳು ವಿಭಿನ್ನವಾಗಿವೆ.  ಮೂರುವರೆ ಅಡಿಯ ಒಂದು ಏಕಶಿಲಾ ಮೂರ್ತಿಯಂತೂ ಅಯೋಧ್ಯ ಬಾಲರಾಮನ ವಿನ್ಯಾಸವನ್ನು ಹೋಲುತ್ತದೆ. ವಿಷ್ಣುವಿನ (Vishnu) ದಶವತಾರಗಳನ್ನ ಮೂರ್ತಿಯಲ್ಲಿ ಕೆತ್ತಲಾಗಿದೆ. ಇನ್ನೊಂದು ಮೂರ್ತಿ ಎರಡೂವರೆ ಅಡಿಯಷ್ಟಿದೆ. ವಿಷ್ಣು ಮೂರ್ತಿಗಳಲ್ಲಿ ಸಾಮಾನ್ಯವಾಗಿ ಕೆಳಗಡೆ ಜಯವಿಜಯ ಚಿತ್ರ ಕಾಣಲಾಗುತ್ತೆ. ಆದರೆ ಇಲ್ಲಿ ಲಕ್ಷ್ಮಿ ಪದ್ಮಾವತಿ ಚಿತ್ರಗಳಿವೆ. ಈ ಮೂರ್ತಿಗಳನ್ನು ಕಂಡ ಸ್ಥಳೀಯರು ಅಚ್ಚರಿ ವ್ಯಕ್ತಪಡಿಸಿದ್ದು, ಸಾವಿರಾರು ವರ್ಷಗಳ ಹಳೆಯ ಮೂರ್ತಿಗಳು…

Read More

ಇಷ್ಟು ದಿನ ಮಲೆನಾಡಿನಲ್ಲಿ ಆನೆ ಕಾಟದಿಂದ ಸುಸ್ತಾಗಿ ಹೋಗಿದ್ದು ಆದರೆ ಈಗ ಕರಡಿ ಕಾಟವೂ ಆರಂಭವಾಗಿದೆ. ಮಲೆನಾಡು ಪ್ರದೇಶಗಳಲ್ಲಿ ಜೇನು ಸಾಕಾಣಿಕೆ ಒಂದು ಪ್ರಮುಖ ಕಸುಬು. ಕರಡಿಗಳಿಗೆ ಜೇನುತಪ್ಪ ಅಂದರೆ ಪಂಚಪ್ರಾಣ. ಜಿಲ್ಲೆಯ ಹಲವಾರು ಗ್ರಾಮಗಳ ಜನ ನಿಜಕ್ಕೂ ಶಾಪಗ್ರಸ್ತರು. ಕಾಡಾನೆ, ಚಿರತೆ ಮೊದಲಾದ ಕಾಡುಮೃಗಳು ಪದೇಪದೆ ಜಮೀನು-ತೋಟ ಮತ್ತು ಜನವಸತಿ ಪ್ರದೇಶಗಳಿಗೆ ನುಗ್ಗಿ ಬೆಳೆ ಹಾಳುನಾಡುತ್ತಿವೆ ಮತ್ತು ಗ್ರಾಮಸ್ಥರನ್ನು ಆತಂಕಕ್ಕೀಡು ಮಾಡುತ್ತಿವೆ. ಆನೆ   ನಂತರ ಈಗ ಕರಡಿ ಕಾಟವನ್ನೂ (bear menace) ಸಹಿಸಬೇಕಾದ ಸ್ಥಿತಿ ಗ್ರಾಮಸ್ಥರಿಗೆ ಎದುರಾಗಿದೆ.ನಿನ್ನೆ ರಾತ್ರಿ ವಾಹನವೊಂದರ ಮುಂಭಾಗದಲ್ಲಿ ಕರಡಿಯೊಂದು ರಸ್ತೆಗುಂಟ ಹೆಡ್ ಲೈಟ್ ಬೆಳಕು ಅನುಸರಿಸಿಕೊಂಡು ಓಡುತ್ತಿರುವುದನ್ನು ನೋಡಬಹುದು. ವಿಡಿಯೋ ನೋಡುತ್ತಿದ್ದರೆ, ಕರಡಿಗೆ ರಸ್ತೆ ಕಾಣಿಸಲು ಕಾರಿನ ಹೆಡ್ ಲೈಟ್ ಬೆಳಕು ತೋರಿದಂತಿದೆ! ತನ್ನ ಎದುರುನಿಂದಲೂ ವಾಹನವೊಂದು ಬರುತ್ತಿರೋದು ಗೊತ್ತಾದ ಕೂಡಲೇ ಕರಡಿ ರಸ್ತೆಬಿಟ್ಟು ಅರಣ್ಯಪ್ರದೇಶದೊಳಗೆ ಓಡುತ್ತದೆ. ಚಿಕ್ಕಮಗಳೂರು ತಾಲ್ಲೂಕಿನ ಮಲ್ಲಂದೂರು ಹೊನ್ನಾಳ ಗ್ರಾಮಗಳು ಮತ್ತು ತರೀಕೆರೆಯಲ್ಲಿ ಬಯಲುಸೀಮೆ ಗ್ರಾಮಗಳ ರೈತರು ಜೇನುಕೃಷಿ ಮಾಡುತ್ತಿರುವ ತೋಟಗಳಿಗೆ ನುಗ್ಗಿ…

Read More

ಬೆಂಗಳೂರು: ಕೇಂದ್ರದಿಂದ ಅನುದಾನ ತಾರತಮ್ಯ ಆರೋಪಿಸಿ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್  ಸಜ್ಜಾಗಿದ್ದು ನಾಳೆ ದೆಹಲಿಯ ಜಂತರ್‌ ಮಂತರ್‌ʼನಲ್ಲಿ ಪ್ರತಭಟನೆ ನಡೆಸಲು ಮುಂದಾಗಿದೆ. ಕೇಂದ್ರದ ವಿರುದ್ಧ ರಾಜ್ಯದ ಸಿದ್ದರಾಮಯ್ಯ ಸರ್ಕಾರ ಅನುದಾನ ಸಮರ ಸಾರಿದೆ. ಕೇಂದ್ರಕ್ಕೆ ಬಿಸಿ ಮುಟ್ಟಿಸಲು ದೆಹಲಿ ಚಲೋ ಹಮ್ಮಿಕೊಂಡಿದ್ದು, ನಾಳೆ ನವದೆಹಲಿಯಲ್ಲಿ ಬೃಹತ್ ಪ್ರತಿಭಟನೆಗೆ ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ  ದಿಢೀರನೆ ದೆಹಲಿಗೆ ಭೇಟಿ ಕೊಟ್ಟ ಡಿಸಿಎಂ ಡಿ.ಕೆ.ಶಿವಕುಮಾರ್​, ರಾತ್ರೋರಾತ್ರಿ ಪ್ರತಿಭಟನೆ ನಡೆಸಲಿರುವ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ರು. ಪ್ರತಿಭಟನೆಗೆ ವೇದಿಕೆ ಹಾಕುವ ಬಗ್ಗೆ ಸಲಹೆ ಸೂಚನೆ ಕೊಟ್ರು.. ಈ ವೇಳೆ ಸಂಸದ ಡಿ.ಕೆ.ಸುರೇಶ್​, ಕಾಂಗ್ರೆಸ್ ನಾಯಕ ಮೊಹಮ್ಮದ್ ನಲಪಾಡ್​ ಡಿ.ಕೆ.ಶಿವಕುಮಾರ್​ಗೆ ಸಾಥ್​ ನೀಡಿದ್ರು. ನಾವು ಕಟ್ಟುವ ತೆರಿಗೆಯಲ್ಲಿ ಅರ್ಧ ಕೊಡಿ ಸಾಕು ಎಂದು ಆಗ್ರಹಿಸಿದ ಡಿಕೆಶಿ, ಪ್ರಧಾನಿ ಭೇಟಿಗೆ ಸಮಯ ಕೇಳಿದ್ದೇವೆ ಎಂದು ಹೇಳಿದ್ರು. ರಾಜ್ಯದ ಎಲ್ಲ ಸಂಸದ, ಶಾಸಕರಿಗೂ ಪ್ರತಿಭಟನೆಗೆ ಭಾಗಿಯಾಗುವಂತೆ ಮನವಿ ಮಾಡಿದ್ದೇವೆ. ನರ್ಮತೆಯಿಂದ ತಲೆಬಾಗಿ ಕೇಳಿಕೊಳ್ಳುತ್ತೇನೆ ಎಂದು ಡಿಕೆ ಶಿವಕುಮಾರ್‌ ತಿಳಿಸಿದರು.

Read More

ಶಿವಮೊಗ್ಗ: ತೆರಿಗೆ ಪಾಲು ಹಾಗೂ ಅನುದಾನ ಕಡಿತ ವಿಚಾರವಾಗಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುವ ಮೂಲಕ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ಅವರು ಕರ್ನಾಟಕದ ಮಾನವನ್ನು ಹರಾಜು ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಕಿಡಿಕಾರಿದರು. ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಕೇಂದ್ರದಿಂದ ಅನುದಾನ ವಿಚಾರವಾಗಿ ತಾರತಮ್ಯ ಮಾಡಲಾಗಿದೆ ಎಂದು ಆರೋಪ ಮಾಡುತ್ತಿರುವ ಸಿಎಂ ಸಿದ್ದರಾಮಯ್ಯ ಅವರು, ಲೋಕಸಭೆ ಚುನಾವಣೆ ವರೆಗೂ ಶ್ವೇತಪತ್ರ ಹೊರಡಿಸಲ್ಲ ಎಂದರು. ಯುಪಿಎ ಅವಧಿ ಮತ್ತು ಎನ್‌ಡಿಎ ಅವಧಿಯಲ್ಲಿ ಕರ್ನಾಟಕಕ್ಕೆ ಎಷ್ಟೆಷ್ಟು ಅನುದಾನ ಬಂತು ಎಂಬುವುದರ ಬಗ್ಗೆ ಶ್ವೇತಪತ್ರ ಹೊರಡಿಲಿ. ಅದರ ಬದಲಾಗಿ,ದೆಹಲಿಯಲ್ಲಿ ಪ್ರತಿಭಟನೆಗೆ ಹೋಗುವ ಮೂಲಕ ಕರ್ನಾಟಕದ ಮಾನವನ್ನು ಸಿದ್ದರಾಮಯ್ಯ ಹರಾಜು ಮಾಡ್ತಿದ್ದಾರೆ ಎಂದು ಕಿಡಿಕಾರಿದರು. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಸುಳ್ಳುಗಳನ್ನು ಹೇಳುವ ಮೂಲಕ ರಾಜ್ಯದ ಜನರ ದಾರಿ ತಪ್ಪಿಸುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರದ ಬರಗಾಲ ಪೀಡಿತ ತಾಲ್ಲೂಕುಗಳಿಗೆ ಎಷ್ಟು ಕೊಟ್ಟಿದ್ದಾರೆ? ಬೆಳೆ ಪರಿಹಾರಕ್ಕೆ ಯಾವ…

Read More

ಬೆಂಗಳೂರು: ಚಿನ್ನದ ಸರ ಸುಲಿಗೆ ಮಾಡಿ ಪರಾರಿಯಾಗಿದ್ದ ಓರ್ವನನ್ನು ಪೊಲೀಸರು ವಶಕ್ಕೆ ಪಡೆದಿದ್ದು  ಬಂಧಿತನಿಂದ 1 ಲಕ್ಷ ಬೆಲೆಬಾಳುವ ಚಿನ್ನದ ಸರ ವಶಪಡಿಸಿಕೊಂಡಿದ್ದಾರೆ. ಕೆಆರ್ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಘಟನೆಯಾಗಿದ್ದು  ಬೆಳಗ್ಗಿನ ಜಾವ ಮೂರು ಘಂಟೆ ಸುಮಾರಿಗೆ ಬೈಕ್ ಸವಾರನನ್ನ ಅಡ್ಡಗಟ್ಟಿ ಕೃತ್ಯ ಎಸಗಿದ್ದ ಆರೋಪಿ ಬಂಧಿತನಿಂದ  16 ಗ್ರಾಂ ತೂಕದ ಚಿನ್ನಾಭರಣ ವಶಕ್ಕೆ ಪಡೆದು  ತೀವ್ರ ವಿಚಾರಣೆ ಮಾಡ್ತಿರುವ ಪೊಲೀಸರು ಹಾಗೆ  ಇನ್ನೊಂದು ಕಡೆ  ಕಾರು ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಮೂವರು ಆರೋಪಿಗಳ ಬಂಧನ ಮಾಡುರುವ ಪೊಲೀಸರು  5 ,ಕಾರು, 2 ದ್ವಿಚಕ್ರ ಮೌಲ್ಯದ 10. 65 ಲಕ್ಷ ಹಣ ವಶಪಡಿಸಿಕೊಂಡಿದ್ದಾರೆ. ಮನೆ ಮತ್ತು ಪಾರ್ಕಿಂಗ್ ಸ್ಥಳದಲ್ಲಿ ಕಾರು ,ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಗಳು ಸಿಸಿಟಿವಿ, ವಿಡಿಯೋ ದೃಶ್ಯವಾಳಿ ಆಧಾರಿಸಿ ಬಂಧನ ಮಾಡಲಾಗಿದೆ. ಈ ಸಂಬಂಧ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹೆಚ್ಚಿನ ವಿಚಾರಣೆ ನಡೆಯುತ್ತಿದೆ.

Read More