Author: AIN Author

ಬೆಂಗಳೂರು: ರೈತರ ಸಂಕಷ್ಟವನ್ನು ಹೇಳೋರಿಲ್ಲ ಕೇಳೋರಿಲ್ಲ ಅಂತಾಗಿದೆ ಸರ್ಕಾರಿ ಎಷ್ಟೇ ಬಾರಿ ಮನವಿ ಮಾಡಿದರು ಕೂಡ ತಮ್ಮ ಬೇಡಿಕೆಯನ್ನು ಈಡೇರಿಸಲು ಮುಂದಾಗುತ್ತಿಲ್ಲ ..ಅದಕ್ಕೆ ಇಂದು ಫ್ರೀಡಂ ಪಾರ್ಕ್ ನಲ್ಲಿ ರೈತ ಸಂಘಟನೆಗಳಿಂದ ಬೆಂಗಳೂರು ಚಲೊ ಪ್ರತಿಭಟನೆ ಮಾಡಿದ್ದರು.. ಯೆಸ್.. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ಬೆಂಗಳೂರು ಚಲೋ ಪ್ರತಿಭಟನೆ ನಡೆಸಿದರು. ಕರ್ನಾಟಕ ಪ್ರಾಂತೀಯ ರೈತ ಸಂಘಟನೆಗಳ ಒಕ್ಕೂಟ ಮತ್ತು ರಾಜ್ಯ ಕಬ್ಬು ಬೆಳೆಗಾರರ ​​ಸಂಘ ಜಂಟಿಯಾಗಿ ನಗರದ ಫ್ರೀಡಂ ಪಾರ್ಕ್ ನಲ್ಲಿ ಆಯೋಜಿಸಿದ ಪ್ರತಿಭಟನೆಯಲ್ಲಿ ರಾಜ್ಯದ ವಿವಿಧ ಕಡೆಗಳಿಂದ ಆಗಮಿಸಿದ ಸಾವಿರಾರು ರೈತರು ಪಾಲ್ಗೊಂಡರು. ಕೃಷಿಕರನ್ನು ಮದುವೆಯಾಗುವ ಮಹಿಳೆಯರಿಗೆ ಮೀಸಲಾತಿ, ಕೈಗಾರಿಕೆಗಳ ಅಭಿವೃದ್ಧಿಗಾಗಿ ಕೃಷಿ ಭೂಮಿ ಸ್ವಾಧೀನ ನಿಲ್ಲಿಸುವುದು, ಭೂಮಿಯನ್ನು ಬಿಟ್ಟುಕೊಡುವ ರೈತರನ್ನು ಪಾಲುದಾರರಲ್ಲಿ ಒಬ್ಬರನ್ನಾಗಿ ಮಾಡುವುದು, ಕಾವೇರಿ ಜಲಾನಯನ ಪ್ರದೇಶದ ರೈತರಿಗೆ ತಲಾ 25,000 ರೂ,ಪರಿಹಾರ ನೀಡಬೇಕು ಎಂದು ಪ್ರತಿಭಟನಾನಿರತ ರೈತರು ಆಗ್ರಹಿಸಿದರು. ಪ್ರತಿಭಟನೆ ಕುರಿತು ಮಾತನಾಡಿದ ರಾಜ್ಯ ಕಬ್ಬು ಬೆಳೆಗಾರರ ​​ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ರಾಜ್ಯ…

Read More

ಬೆಂಗಳೂರು : ರಾಜ್ಯ ಕಾಂಗ್ರೆಸ್​ ಸರ್ಕಾರ ಕೇವಲ ಜನತೆಗೆ ಮಾತ್ರವಲ್ಲ, ಜಾನುವಾರುಗಳಿಗೂ ಶಾಕ್‌ ನೀಡುವ ಸರ್ಕಾರ ಎಂದು ರಾಜ್ಯ ಬಿಜೆಪಿ ಲೇವಡಿ ಮಾಡಿದೆ. ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ಹಾಲು ಉತ್ಪಾದಕರಿಗೆ ಸಬ್ಸಿಡಿ ಹೆಚ್ಚಳ, ಹಸು-ಎಮ್ಮೆ ಖರೀದಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಎಂಬಿತ್ಯಾದಿ ಕಲರ್‌ ಕಲರ್‌ ಹೂವುಗಳನ್ನು ಕಿವಿ ಮೇಲೆ ಇಟ್ಟು ಕಾಂಗ್ರೆಸ್​ ಅಧಿಕಾರಕ್ಕೆ ಬಂದಿದೆ ಎಂದು ಟೀಕಿಸಿದೆ. ಈಗ ಸಾಲವನ್ನು ನೀಡುತ್ತಿಲ್ಲ, ಸಬ್ಸಿಡಿಯನ್ನು ಹೆಚ್ಚಿಸದೆ, 716 ಕೋಟಿ ರೂ. ಸಬ್ಸಿಡಿ ಬಾಕಿ ಉಳಿಸಿಕೊಂಡಿದೆ. ಇದರ ಪರಿಣಾಮ ರಾಜ್ಯದಲ್ಲಿ ಹಾಲಿನ ಉತ್ಪಾದನೆ ದಯನೀಯವಾಗಿ ಕುಂಠಿತವಾಗಿದೆ. ಜನತೆಯ ಜೊತೆ ಜಾನುವಾರುಗಳ ಶಾಪವೂ ಸಹ ಸಿಎಂ ಸಿದ್ದರಾಮಯ್ಯ ನವರ ಸರ್ಕಾರಕ್ಕೆ ತಟ್ಟುವುದು ಖಚಿತ-ನಿಶ್ಚಿತ-ಖಂಡಿತ ಎಂದು ಛೇಡಿಸಿದೆ. ಹಾಲು ಉತ್ಪಾದಕರಿಗೆ 7 ರೂ. ಸಬ್ಸಿಡಿ ಎಲ್ಲಿ? ಸುಳ್ಳು ಎಂದರೆ ಕಾಂಗ್ರೆಸ್, ಕಾಂಗ್ರೆಸ್ ಎಂದರೆ ಸುಳ್ಳು. ಸಿಎಂ ಸಿದ್ದರಾಮಯ್ಯ ಅವರೇ, ನುಡಿದಂತೆ ನಡೆದ ಸರ್ಕಾರ ಮಣಗಟ್ಟಲೆ ಜಾಹೀರಾತು ನೀಡುವ ಮುನ್ನ ಹಾಲು ಉತ್ಪಾದಕರಿಗೆ 7 ರೂ. ಸಬ್ಸಿಡಿಯನ್ನು ಎಲ್ಲಿ? ಯಾವಾಗ? ನೀಡಲಾಗಿದೆ…

Read More

ನಾಳೆ (ಫೆ.07) ಹೆಸರಾಂತ ನಿರ್ದೇಶಕ ಆರ್.ಚಂದ್ರು (R. Chandru) ಅವರ ಹುಟ್ಟು ಹಬ್ಬ (Birthday). ಈ ದಿನದಂದು ಅವರ ನಿರ್ದೇಶನದ, ನಿರ್ಮಾಣದ ಸಿನಿಮಾಗಳ ಅಪ್ ಡೇಟ್ ಜೊತೆಗೆ ಹೊಸದೊಂದು ಯೋಜನೆಯನ್ನು ಅವರ ಅಭಿಮಾನಿಗಳು ಲಾಂಚ್ ಮಾಡಲಿದ್ದಾರೆ. ನಾಳೆಯೇ  ಅಖಿಲ ಭಾರತ ಆರ್.ಚಂದ್ರು ಅಭಿಮಾನಿಗಳ (Fans club)ಸಂಘ ಉದ್ಘಾಟನೆ ಆಗಲಿದ್ದು, ಆ ಸಂಘದ ಮೂಲಕ ಜನಪರ ಕೆಲಸಗಳನ್ನು ಮಾಡಲಾಗುತ್ತದೆಯಂತೆ. ತಮ್ಮ ಚೊಚ್ಚಲ ನಿರ್ದೇಶನದ ತಾಜ್ ಮಹಲ್ ಚಿತ್ರದ ಮೂಲಕ ರಾಜ್ಯಾದಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದ ಚಂದ್ರು,  ಕಬ್ಜ ಎಂಬ ಪ್ಯಾನ್ ಇಂಡಿಯಾ ಚಿತ್ರದ ಮೂಲಕ ಈಗ ದೇಶದೆಲ್ಲೆಡೆ ಗುರುತಿಸಿಕೊಂಡಿದ್ದಾರೆ. ತಮ್ಮದೇ ಆದ ರೀತಿಯಲ್ಲಿ ಸಿನಿಮಾ ಮಾಡುವ ಮೂಲಕ ಗಮನ ಸೆಳೆದರೆ, ತಮ್ಮೊಂದಿಗೆ ಕೆಲಸ ಮಾಡುವವರಿಗೂ ಉತ್ತೇಜಿಸಿದ್ದಾರೆ. ಅವರಿಗಾಗಿ ಸಿನಿಮಾ ನಿರ್ಮಾಣವನ್ನೂ ಮಾಡಿದ್ದಾರೆ. ಈ ಬಾರಿಯ ಚಂದ್ರು ಹುಟ್ಟು ಹಬ್ಬದಂದು ರಾಜ್ಯಾದ್ಯಂತ ಇರುವ ಅವರ ಅಭಿಮಾನಿಗಳು, ಮೈಲಾರಿ ಆರ್ ಚಂದ್ರು ಅಭಿಮಾನಿಗಳು, ಜಿಲ್ಲಾಧ್ಯಕ್ಷರು, ರಾಜ್ಯಾಧ್ಯಕ್ಷರು ಸೇರಿ ಅಭಿಮಾನಿಗಳ ಸಂಘ ಸ್ಥಾಪನೆಗೆ ಮುಂದಾಗಿದ್ದು, ‘ಅಖಿಲ ಕರ್ನಾಟಕ…

Read More

ಬೆಂಗಳೂರು: ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ: ಕೇಂದ್ರ ಬಿಜೆಪಿ ಸರ್ಕಾರದ ಅಭಿವೃದ್ದಿ ಸಾಧನೆಗಳ ಮತ್ತು ಮೋದಿ ಮತ್ತೊಮ್ಮೆ ಎಂಬ ಗೋಡೆ ಬರಹ ಬರೆಯುವ ಮೂಲಕ ರಾಜ್ಯ ಬಿಜೆಪಿ ಯುವ ಮುಖಂಡರಾದ ಡಾ||ಅರುಣ್ ಸೋಮಣ್ಣರವರು ಚಾಲನೆ ನೀಡಿದರು. ಗೋವಿಂದರಾಜನಗರ ಮಂಡಲ ಬಿಜೆಪಿ ಅಧ್ಯಕ್ಷರಾದ ವಿಶ್ವನಾಥಗೌಡ, ಬಿಬಿಎಂಪಿ ಮಾಜಿ ಸದಸ್ಯರುಗಳಾದ ಮೋಹನ್ ಕುಮಾರ್, ದಾಸೇಗೌಡರವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಡಾ||ಅರುಣ್ ಸೋಮಣ್ಣರವರು ಮಾತನಾಡಿ ಮಾಜಿ ಸಚಿವರಾದ ವಿ.ಸೋಮಣ್ಣರವರ ನೇತೃತ್ವದಲ್ಲಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರದ ಅಭಿವೃದ್ದಿ ಸಾಧನೆಗಳು ಮತ್ತು ಮೋದಿ ಮತ್ತೊಮ್ಮೆ ಎಂಬ ಗೋಡೆ ಬರಹಕ್ಕೆ ಚಾಲನೆ ನೀಡಲಾಗಿದೆ. ಕಳೆದ 10ವರ್ಷಗಳಲ್ಲಿ ಕೇಂದ್ರದಲ್ಲಿ ಪ್ರಧಾನಿ ನರೇಂದ್ರಮೋದಿರವರ ನೇತೃತ್ವದಲ್ಲಿ ಪಾರದರ್ಶಕ ಆಡಳಿತ ನೀಡಿದೆ. ದೇಶದ ಐಕ್ಯತೆ ಮತ್ತು ಸಮಗ್ರತೆ ಅಭಿವೃದ್ದಿಗೆ ನರೇಂದ್ರಮೋದಿ ಸಂಕೇತವಾಗಿದ್ದಾರೆ. ಕೇಂದ್ರ ಸರ್ಕಾರ ದೇಶದಲ್ಲಿ ಆರ್ಥಿಕವಾಗಿ ಹಿಂದುಳಿದವರು ಸಮಾಜದ ಮುಖ್ಯವಾಹಿನಿ ಬರಬೇಕು ಎಂದು ಹಲವು ಮಹತ್ವಪೂರ್ಣ ಯೋಜನೆಗಳು ದೇಶದ ಜನರಿಗೆ ಕೊಡುಗೆಯಾಗಿ ನೀಡಿದ್ದಾರೆ. ಮುದ್ರ ಯೋಜನೆ 40ಕೋಟಿ ಜನರು ಇದರ ಫಲಾನುಭವಿಗಳು ಇದ್ದಾರೆ,…

Read More

ಕಲಬುರಗಿಯಲ್ಲೂ ಆರಂಭವಾಯ್ತಾ ದೇಗುಲ ದಂಗಲ್..ಹೌದು ನಗರದ ಬಹಮನಿ ಕೋಟೆಯೊಳಗೆ ಪತ್ತೆಯಾಗಿರುವ ಸ್ವಯಂಭೋ ಸೋಮೇಶ್ವರ ದೇಗುಲ ಜಿರ್ಣೊದ್ಧಾರಕ್ಕೆ ಹಿಂದೂ ಜಾಗೃತಿ ಸೇನೆ ಆಗ್ರಹ ಮಾಡಿದೆ..ಈ ಕುರಿತು ಇವತ್ತು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡಿದ ಸೇನೆ ಕಾರ್ಯಕರ್ತರು ಸೋಮೇಶ್ವರ ದೇಗುಲ ಜೀರ್ಣೋದ್ಧಾರ ಜೊತೆ ಹೊಸ ಲಿಂಗ ಪ್ರತಿಷ್ಠಾಪನೆಗೆ ಅನುಮತಿ ನೀಡಲು ಆಗ್ರಹಿಸಿದ್ದಾರೆ. ಶಿವರಾತ್ರಿಯೊಳಗೆ ಲಿಂಗ ಪ್ರತಿಷ್ಠಾಪಿಸಿ ಪೂಜೆ ಮಾಡಲು ಅವಕಾಶಕ್ಕೆ ನೀಡುವಂತೆ ಸರ್ಕಾರಕ್ಕೆ ಡೆಡ್‌ಲೈನ್ ಕೊಟ್ಟಿದ್ದಾರೆ.. ಮಾತ್ರವಲ್ಲ ಜಿಲ್ಲಾಡಳಿತ ಅನುಮತಿ ನೀಡದಿದ್ದರೆ ಸ್ವಯಂಪ್ರೇರಿತವಾಗಿ ನಾವೇ ಪೂಜೆ ಮಾಡುತ್ತೇವೆ ಅಂತ ಎಚ್ಚರಿಕೆ ಕೊಟ್ಟಿದ್ದಾರೆ.

Read More

ಮಂಡ್ಯ: ಕೆರಗೋಡು ಹನುಮ ಧ್ವಜ ತೆರವು ವಿರೋಧಿಸಿ ನಾಳೆ ಸಮಾನ ಮನಸ್ಕರ ವೇದಿಕೆ ಕರೆ ನೀಡಿದ್ದ ಮಂಡ್ಯ ಬಂದ್​​​ನ್ನು ಜಿಲ್ಲಾಡಳಿತದ ಮನವಿಗೆ ಸ್ಪಂದಿಸಿ ​ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ. ಕೆರಗೋಡು ಹನುಮ ಧ್ವಜ ತೆರವು ವಿರೋಧಿಸಿ ಫೆ.9ಕ್ಕೆ ಭಜರಂಗದಳ ಬಂದ್ ಗೆ ಕರೆ ಕೊಟ್ಟಿದೆ. ಮತ್ತೊಂದೆಡೆ ಭಜರಂಗದಳ ಬಂದ್ ಕರೆ ವಿರೋಧಿಸಿ ಫೆ.7 ಕ್ಕೆ ಸಮಾನ ಮನಸ್ಕರ ವೇದಿಕೆ ಬಂದ್​ಗೆ ಕರೆ ಕೊಟ್ಟಿತ್ತು. ಸಮಾನ ಮನಸ್ಕರ ವೇದಿಕೆಗೆ ದಲಿತ ಪರ ಸಂಘಟನೆ, ಪ್ರಗತಿಪರರು, ಸಿಐಟಿಯು ಸೇರಿ ಹಲವು ಸಂಘಟನೆಗಳು ಬೆಂಬಲ ನೀಡಿದ್ದರು. ಆದರೆ ಇದೀಗ ಜಿಲ್ಲಾಡಳಿತ ಮನವಿ ಮೇರೆಗೆ ಸಮಾನ ಮನಸ್ಕರ ವೇದಿಕೆ ಬಂದ್ ಹಿಂಪಡೆದಿದೆ. ಮಂಡ್ಯ ಡಿಸಿ ಡಾ.ಕುಮಾರ್, ಎಸ್ಪಿ ಎನ್.ಯತೀಶ್ ನೇತೃತ್ವದಲ್ಲಿ ಸಭೆ ನಡೆಸಿ, ಬಂದ್ ನಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಮಸ್ಯೆ ಆಗುತ್ತೆ. ಅಂಗಡಿ ಮುಂಗಟ್ಟುಗಳ ವ್ಯಾಪಾರಕ್ಕೂ, ಜನ ಸಾಮಾನ್ಯರಿಗೆ ತೊಂದರೆಯಾಗುತ್ತೆ. ಹೀಗಾಗಿ ಸಂಘಟನೆಗಳು ಬಂದ್ ಹಿಂಪಡೆಯಬೇಕು ಎಂದು ಜಿಲ್ಲಾಡಳಿತ ಮನವಿ ಮಾಡಿದೆ. ಜಿಲ್ಲಾಡಳಿತದ ಮನವಿಗೆ ಸಮಾನ ಮನಸ್ಕರ ವೇದಿಕೆ ಸ್ಪಂದಿಸಿದ್ದು…

Read More

ನಿನ್ನೆ ಗ್ರ್ಯಾಮಿ ಪ್ರಶಸ್ತಿಯನ್ನು ಸ್ವೀಕರಿಸಿದ ಭಾರತದ ಸಂಗೀತಗಾರರಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅಭಿನಂದನೆ ಸಲ್ಲಿಸಿದ್ದಾರೆ. ಸಾಧಕರ ಸಾಧನೆಯನ್ನು ಪ್ರಧಾನಿ ಸ್ಮರಿಸಿದ್ದಾರೆ. ಕಳೆದ ವರ್ಷವೂ ಪ್ರಶಸ್ತಿ ಪಡೆದಿದ್ದ ರಿಕ್ಕಿ ಕೇಜ್ ಗೂ ಪ್ರಧಾನ ಅಭಿನಂದನೆ (congratulations) ಸಲ್ಲಿಸಿದ್ದರು. ನಿನ್ನೆಯಷ್ಟೇ 66ನೇ ಸಾಲಿನ ಗ್ರ್ಯಾಮಿ ಅವಾರ್ಡ್ (Grammy Award) ಪ್ರಶಸ್ತಿ ಪ್ರಕಟವಾಗಿದ್ದು, ಭಾರತಕ್ಕೆ ಮೂರು ಪ್ರಶಸ್ತಿಗಳು ಸಂದಿವೆ. ದಿ ಮೂಮೆಂಟ್ ಆಲ್ಬಂಗಾಗಿ ಖ್ಯಾತ ಸಂಗೀತಗಾರ ಜಾಕಿರ್ ಹುಸೇನ್ (Zakir Hussain) ಅವರ ಬ್ಯಾಂಡ್ ಶಕ್ತಿಗೆ ಪ್ರಶಸ್ತಿ ಬಂದಿದ್ದು, ಬೆಸ್ಟ್ ಗ್ಲೋಬಲ್ ಮ್ಯೂಸಿಕ್ ಆಲ್ಬಂನಲ್ಲಿ ಈ ಪ್ರಶಸ್ತಿ ಸಂದಿದೆ. ರಾಕೇಶ್ ಚೌರಾಸಿಯಾಗೆ (Rakesh Chaurasi) ಎರಡು ಗ್ರ್ಯಾಮಿ ಅವಾರ್ಡ್ ದೊರಕಿದ್ದು, ಗ್ಲೋಬಲ್ ಮ್ಯೂಸಿಕ್ ಪರ್ಫಾರ್ಮೆನ್ಸ್ ಹಾಗೂ ವಾದ್ಯಗಳ ವಿಭಾಗದಲ್ಲಿ ಈ ಎರಡು ಪ್ರಶಸ್ತಿಗಳನ್ನು ಅವರು ತಮ್ಮದಾಗಿಸಿಕೊಂಡಿದ್ದಾರೆ. ಇದರ ಜೊತೆಗೆ ಇನ್ನೂ ಹಲವಾರು ಪ್ರಶಸ್ತಿಗಳು ಬೇರೆ ಬೇರೆ ಸಂಗೀತಗಾರರು ಪಡೆದುಕೊಂಡಿದ್ದಾರೆ.

Read More

ಕಲಬುರಗಿ: ಮುಟೇಷನ್ ಮಾಡಿ ಕೊಡಲು ಲಂಚ ಕೇಳಿದ ಗ್ರಾಮ ಪಂಚಾಯತ್ ಸೆಕ್ರೆಟ್ರಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಕಲಬುರಗಿಯಲ್ಲಿ ನಡೆದಿದೆ ಮರತೂರು ಗ್ರಾಮ ಪಂಚಾಯ್ತಿ ಸೆಕ್ರೆಟರಿ ಅಶೋಕ್ ಹೋಟಲಿನಲ್ಲಿ 20 ಸಾವಿರ ಹಣ ಡೀಲ್ ಮಾಡುವಾಗಲೇ ಬಲೆಗೆ ಬಿದ್ದಿದ್ದಾನೆ. ಪರಶುರಾಮ್ ರಾಥೋಡ್ ಎಂಬುವರಿಂದ ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದು ಲೋಕಾ DYSP ಗೀತಾ ಬೆನಹಳ್ಳಿ ನೇತೃತ್ವದ ತಂಡ ಪರಿಶೀಲನೆ ನಡೆಸುತ್ತಿದೆ…

Read More

ಲಂಡನ್: ಬ್ರಿಟನ್‌ನ ( Great Britain) ರಾಜ 3ನೇ ಚಾರ್ಲ್ಸ್  ಕ್ಯಾನ್ಸರ್‌ನಿಂದ (Cancer) ಬಳಲುತ್ತಿದ್ದು, ಅವರು ಬೇಗ ಗುಣಮುಖರಾಗಲಿ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಹಾರೈಸಿದ್ದಾರೆ. ಕಿಂಗ್ ಚಾರ್ಲ್ಸ್ 3 (King Charles  III. ) ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎಂದು ಬಕಿಂಗ್ಹ್ಯಾಮ್‌ ಅರಮನೆ (Buckingham  Palace) ಸ್ಪಷ್ಟಪಡಿಸಿದೆ. ಅವರಿಗೆ ಕ್ಯಾನ್ಸರ್ ಇರುವುದರಿಂದ ಅವರು ಯಾವುದೇ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳದೇ ಇರುವಂತೆ ವೈದ್ಯರು ತಿಳಿಸಿದ್ದಾರೆ. ಹೀಗಿದ್ದರೂ ಈ ಅವಧಿಯಲ್ಲಿ ಅಧಿಕೃತ ಕೆಲಸವನ್ನು ಮುಂದುವರಿಸುತ್ತಾರೆ ಎಂದು ಬಕಿಂಗ್ಹ್ಯಾಮ್‌ ಅರಮನೆ ಸ್ಪಷ್ಟಪಡಿಸಿದೆ. ಈ ವಿಷಯದ ಬಗ್ಗೆ ತಿಳಿದ ಪ್ರಧಾನಿ ನರೇಂದ್ರ ಮೋದಿ ಅವರು ಹಾರೈಸಿದ್ದಾರೆ. “3 ಚಾರ್ಲ್ಸ್ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ. ಅವರಿಗೆ ಒಳ್ಳೆ ಆರೋಗ್ಯ ಸಿಗಲಿ. ಅದಕ್ಕೆ ನಾನು ಭಾರತದ ಜನರೊಂದಿಗೆ ಸೇರಿ ಹಾರೈಸುತ್ತೇನೆ” ಎಂದು ಅವರ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.

Read More

ಗದಗ:  ರೈತರ ವಿವಿಧ ಬೇಡಿಕೆಗೆ ಆಗ್ರಹಿಸಿ ರಸ್ತೆಯಲ್ಲಿ  ತರಕಾರಿ ಚೆಲ್ಲಿ ಪ್ರತಿಭಟನೆ ನಡೆಸಿದ ರೈತರು . ಇದು  ಚಳ್ಳಕೆರೆಯ ಅರಭಾವಿ ರಾಜ್ಯ ಹೆದ್ದಾರಿಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ಪ್ರತಿಭಟನೆ ನಡೆಸಿದ್ದು  ಸರ್ಕಾರ ಈರುಳ್ಳಿ ಮತ್ತು ತರಕಾರಿ ಬೆಲೆ ನಿಗದಿ ಮಾಡಬೇಕು ಕೋಲ್ಡ್ ಸ್ಟೋರೇಜ್ ಘಟಕ ಮಾಡಬೇಕು ಮುಂಡರಗಿ ಎಪಿಎಂಸಿ ಯಲ್ಲಿ ರೈತ ಭವನ ಮತ್ತು ರೈತ ವಸತಿ ಗೃಹ ನಿರ್ಮಾಣ ಮಾಡಬೇಕು ಹಾಗೆ  ಎಲ್ಲಾ ರೈತರಿಗೂ ಬರ ಪರಿಹಾರ ಕೊಡಬೇಕು ಗೋಶಾಲೆ ಮಾಡಬೇಕು ರೈತರ ಕೃಷಿ ಸಾಲ ಮನ್ನಾ ಮಾಡಲು ಆಗ್ರಹಿಸಿ ಪ್ರತಿಭಟನೆ ನಡೆಸಲಾಗುತ್ತಿದೆ.

Read More