Author: AIN Author

ನವದೆಹಲಿ: 10 ವರ್ಷಗಳಲ್ಲಿ ಬಿಜೆಪಿಯಿಂದಾದ ಅಭಿವೃದ್ಧಿ ಕಾರ್ಯ ಮಾಡಲು ಕಾಂಗ್ರೆಸ್‌ 100 ವರ್ಷಗಳನ್ನು ತೆಗೆದುಕೊಳ್ಳುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಟೀಕಿಸಿದ್ದಾರೆ. ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಕಾಂಗ್ರೆಸ್‌ ಗುರಿಯಾಗಿಸಿಕೊಂಡು ಲೋಕಸಭೆಯ ಅಧಿವೇಶನದಲ್ಲಿ ಮಾತನಾಡಿದ ಮೋದಿ, ಅವರು (ಕಾಂಗ್ರೆಸ್) ವಿಫಲರಾಗಿದ್ದಾರೆ. ಅವರು ಸಂಸತ್ತು, ಪ್ರತಿಪಕ್ಷಗಳು ಮತ್ತು ದೇಶವನ್ನು ಹಾಳುಮಾಡಿದ್ದಾರೆ. ದೇಶಕ್ಕೆ ಪ್ರಬಲವಾದ ವಿರೋಧ ಪಕ್ಷದ ಅಗತ್ಯವಿದೆ ಎಂದು ನಾನು ನಂಬುತ್ತೇನೆ ಎಂದು ಅವರು ತಮ್ಮ ಪ್ರತಿಸ್ಪರ್ಧಿಗಳನ್ನು ಲೇವಡಿ ಮಾಡಿದ್ದಾರೆ. \ ಪ್ರತಿಪಕ್ಷಗಳ ಸಂಕಲ್ಪವನ್ನು ನಾನು ಶ್ಲಾಘಿಸುತ್ತೇನೆ. ಹಲವು ದಶಕಗಳಿಂದ ನೀವು ಇಲ್ಲಿ (ಸರ್ಕಾರದಲ್ಲಿ) ಕುಳಿತುಕೊಂಡಿರುವ ರೀತಿ, ಅಲ್ಲಿಯೇ (ಪ್ರತಿಪಕ್ಷದಲ್ಲಿ) ಕುಳಿತುಕೊಳ್ಳಲು ನೀವು ನಿರ್ಧರಿಸಿರುವ ರೀತಿ. ಸಾರ್ವಜನಿಕರು ಖಂಡಿತವಾಗಿಯೂ ನೀಡುತ್ತಾರೆ. ಅವರ ಆಶೀರ್ವಾದ ನಿಮ್ಮ ಮೇಲಿರಲಿ ಎಂದು ವ್ಯಂಗ್ಯವಾಡಿದ್ದಾರೆ. ವಿಪಕ್ಷಗಳು ಪ್ರತಿಪಕ್ಷದಲ್ಲಿಯೇ ಉಳಿಯಲು ನಿರ್ಧರಿಸಿವೆ. ಪ್ರತಿಪಕ್ಷವಾಗಿ ತಮ್ಮ ಜವಾಬ್ದಾರಿಯನ್ನು ಪೂರೈಸುವಲ್ಲಿ ಅವರು (ವಿರೋಧ) ವಿಫಲರಾಗಿದ್ದಾರೆ. ದೇಶಕ್ಕೆ ಉತ್ತಮ ಪ್ರತಿಪಕ್ಷ ಬೇಕು ಎಂದು ನಾನು ಯಾವಾಗಲೂ ಹೇಳುತ್ತಿದ್ದೆ ಎಂದು ಚಾಟಿ ಬೀಸಿದ್ದಾರೆ. ಕಾಂಗ್ರೆಸ್…

Read More

ಭೋಪಾಲ್: ಮಧ್ಯಪ್ರದೇಶದ (Madhya Pradesh) ಹರ್ದಾ ಜಿಲ್ಲೆಯ ಬೈರಾಗರ್ ಪ್ರದೇಶದಲ್ಲಿ ಮಂಗಳವಾರ ಬೆಳಿಗ್ಗೆ ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದ ಪರಿಣಾಮ 11 ಮಂದಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಸುಮಾರು 60 ಮಂದಿ ಗಾಯಗೊಂಡಿದ್ದಾರೆ. ಪಟಾಕಿ ಕಾರ್ಖಾನೆಯ ಸ್ಫೋಟದ ತೀವ್ರತೆಗೆ ಸುಮಾರು ಅರವತ್ತು ಮನೆಗಳು ನಾಶವಾಗಿವೆ. ಕಾರ್ಖಾನೆಯಲ್ಲಿ ನಿರಂತರ ಸ್ಫೋಟಗಳು ಸಂಭವಿಸಿದ ಕಾರಣ 100ಕ್ಕೂ ಹೆಚ್ಚು ಮನೆಗಳಲ್ಲಿದ್ದ ಜನರನ್ನು ಅಧಿಕಾರಿಗಳು ಸ್ಥಳಾಂತರಿಸಿದ್ದಾರೆ. ಘಟನೆಯಲ್ಲಿ ಹಲವಾರು ವಾಹನಗಳು ಬೆಂಕಿಗೆ ಆಹುತಿಯಾಗಿವೆ (Fire Accident) ಎಂದು ವರದಿಯಾಗಿದೆ. ಆರಂಭದಲ್ಲಿ ಅಗ್ನಿ ಅವಘಡದಲ್ಲಿ ಆರು ಜನರು ಸಾವನ್ನಪ್ಪಿದ್ದರು. ಇದೀಗ ಸಾವಿನ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ.

Read More

ಬೆಂಗಳೂರು ಗ್ರಾಮಾಂತರ:   ತಮಿಳುನಾಡಿನ ಹೊಸೂರು (Hosur) ಸಮೀಪದ ಸಣ್ಣಪಲ್ಲಿ ಗ್ರಾಮ ಪಂಚಾಯಿತಿಯ ಕೂರಕ್ಕನ ಹಳ್ಳಿ ಗ್ರಾಮದಲ್ಲಿ ಮಾಲೀಕರೊಬ್ಬರು ಅವರ ನಾಯಿಗೆ (Dog) ಸೀಮಂತ  (Baby Shower )ಮಾಡಿ ಗಮನಸೆಳೆದಿದ್ದಾರೆ. ಗ್ರಾಮದ ನಾರಾಯಣ ಎಂಬವರ ಮನೆಯಲ್ಲಿದ್ದ ನಾಯಿ ಗರ್ಭ ಧರಿಸಿದೆ. ಹಾಗಾಗಿ ತಮ್ಮ ನಾಯಿ ಮೊದಲ ಗರ್ಭ ಧರಿಸಿದೆ ಎಂದು ಸೀಮಂತ ಮಾಡಿದ್ದಾರೆ. ಸೀಮಂತದಲ್ಲಿ ನಾಯಿಗೆ ಹೊಸ ಬಟ್ಟೆ ಸಹ ಹಾಕಿಸಿದ್ದಾರೆ. ಬಳಿಕ ಹೊವು, ಹಣ್ಣು, ಅರಿಶಿನ-ಕುಂಕುಮ ಇಟ್ಟು ಪೂಜೆ ಕಾರ್ಯ ನೆರವೇರಿಸಿದ್ದಾರೆ. ಜೊತೆಗೆ ನಾಯಿಗೆ ಇಷ್ಟವಾಗುವ ಬಿರಿಯಾನಿ ಮತ್ತು ಬಿಸ್ಕತ್ತು ಇಟ್ಟು ಸೀಮಂತ ಮಾಡಿದ್ದಾರೆ ಗರ್ಭಾವಸ್ಥೆಯಲ್ಲಿದ್ದ ನಾಯಿಗೆ ನಾರಾಯಣ ಅವರು ಸೀಮಂತ ಮಾಡಿದ್ದು, ಸೀಮಂತಕ್ಕೆ ಗ್ರಾಮಸ್ಥರನ್ನು ಸಹ ಆಹ್ವಾನಿಸಲಾಗಿತ್ತು. ಸೀಮಂತಕ್ಕೆ ಬಂದ ಗ್ರಾಮಸ್ಥರಿಗೆ ಭರ್ಜರಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು

Read More

ಬೆಂಗಳೂರು:  ನಾನು ಕಾಂಗ್ರೆಸ್ ಬಿಡಲ್ಲ ಬಿಜೆಪಿ ಸೇರಲ್ಲ ಲೋಕಸಭಾ ಚುನಾವಣೆಯಲ್ಲಿಯೂ ಸ್ವರ್ಧಿಸುವುದಿಲ್ಲ ಎಂದು ಅಥಣಿ ಶಾಸಕ ಲಕ್ಷ್ಮಣ್ ಸವದಿ ಸ್ಪಷ್ಟಪಡಿಸಿದರು. ಕಾಂಗ್ರೆಸ್‌ಗೆ ಕೈಕೊಟ್ಟು ಜಗದೀಶ್‌ ಶೆಟ್ಟರ್‌ ಬಿಜೆಪಿ ಸೇರಿದ ಬಳಿಕ, ಶಾಸಕ ಲಕ್ಷ್ಮಣ್‌ ಸವದಿ ಕೂಡ ಬಿಜೆಪಿಗೆ ಹೋಗುತ್ತಾರೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ. ವದಂತಿಗಳ ಬಗ್ಗೆ ಸ್ಪಷ್ಟನೆ ನೀಡಿರುವ ಲಕ್ಷ್ಮಣ್ ಸವದಿ, ‘ನಾನು ಯಾವುದೇ ಕಾರಣಕ್ಕೂ ಬಿಜೆಪಿಗೆ ಹೋಗುವುದಿಲ್ಲ’ ಎಂದು ಹೇಳಿದ್ದಾರೆ. ಅಲ್ಲದೆ, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬಿಜೆಪಿಗೆ ಮರುಳುತ್ತೇನೆ. ಬೀದರ್‌ನಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂಬ ಮಾತುಗಳು ಹರಿದಾಡುತ್ತಿವೆ. ಆದರೆ, ನಾನು ಕಾಂಗ್ರೆಸ್ ಬಿಡುವುದಿಲ್ಲ. ಬಿಜೆಪಿಗೆ ಹೋಗಲ್ಲ. ಯಾವ ಚುನಾವಣೆಗೂ ಸ್ಪರ್ಧಿಸುವುದಿಲ್ಲ” ಎಂದಿದ್ದಾರೆ.

Read More

ಬೆಂಗಳೂರು : ಕೇಂದ್ರ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ‘ಚಲೋ ದಿಲ್ಲಿ’ ಅಭಿಯಾನ ಆರಂಭಿಸಿದೆ. ಇದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿರುಗೇಟು ನೀಡಿದ್ದಾರೆ. ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಕಾಂಗ್ರೆಸ್ ಪಕ್ಷದ ಅಸಲೀ ಮುಖವಾಡ ಕನ್ನಡಿಗರ ಮುಂದೆ ಕಳಚಿಡಲಿದ್ದೇವೆ ಎಂದು ಕುಟುಕಿದ್ದಾರೆ. ಕಾಂಗ್ರೆಸ್ ಸರ್ಕಾರ ಉಚಿತ ಗ್ಯಾರಂಟಿ ಯೋಜನೆಗಳನ್ನು ನಿಭಾಯಿಸಲು ಸಾಧ್ಯವಾಗದೇ, ಆರ್ಥಿಕ ಸಮತೋಲನ ಕಾಯ್ದು ಕೊಳ್ಳುವಲ್ಲಿ ವಿಫಲವಾಗಿ ಬೊಕ್ಕಸ ಬರಿದು ಮಾಡಿಕೊಂಡಿದೆ. ತನ್ನ ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ತೆರಿಗೆ ಬಾಕಿಯ ನೆಪ ಮಾಡಿಕೊಂಡು ಕೇಂದ್ರ ಸರ್ಕಾದ ವಿರುದ್ಧ ಪ್ರತಿಭಟಿಸಲು ಹೊರಟಿದೆ ಎಂದು ಛೇಡಿಸಿದ್ದಾರೆ. ಸುಮಾರು 60 ವರ್ಷಗಳ ಕಾಲ ಈ ದೇಶವನ್ನಾಳಿದ ಕಾಂಗ್ರೆಸ್ ‘ಒಂದು ಕಣ್ಣಿಗೆ ಸುಣ್ಣ, ಮತ್ತೊಂದು ಕಣ್ಣಿಗೆ ಬೆಣ್ಣೆ’ ಎನ್ನುವಂತೆ ನಿರಂತರವಾಗಿ ಕರ್ನಾಟಕಕ್ಕೆ ಮಲತಾಯಿ ಧೋರಣೆ ಅನುಸರಿಸಿದೆ. ರಾಜ್ಯಕ್ಕೆ ಬಹುದೊಡ್ಡ ಅನ್ಯಾಯಗಳನ್ನು ಎಸಗಿರುವುದಕ್ಕೆ ಇತಿಹಾಸದ ಪುಟಗಳಲ್ಲಿ ದಾಖಲೆ ಇದೆ. ಇದನ್ನೆಲ್ಲ ಇಷ್ಟರಲ್ಲೇ ಪುಂಖಾನುಪುಂಖವಾಗಿ ನಾವೂ ಬಿಚ್ಚಿಟ್ಟು ಕಾಂಗ್ರೆಸ್ ಅಸಲೀ ಮುಖ ಕಳಚುತ್ತೇವೆ…

Read More

ಬೆಂಗಳೂರು : ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಬೆಂಗಳೂರು ಮಹಾನಗರ ಪಾಲಿಕೆ ಗುಡ್ ನ್ಯೂಸ್ ಕೊಟ್ಟಿದೆ. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಕಟ್ಟಡ ಮಾಲೀಕರಿಗೆ ಶೇ.50 ರಷ್ಟು ತೆರಿಗೆ ಪಾವತಿಗೆ ಪಾಲಿಕೆ ಆಫರ್ ನೀಡಿದೆ. ಆರ್ಥಿಕ ವರ್ಷ ಮುಗಿಯುವುದರೊಳಗೆ ಆದಾಯ ಗುರಿ ತಲುಪಲು ಬಿಬಿಎಂಪಿ ಪ್ಲ್ಯಾನ್ ಮಾಡಿದ್ದು ರಿಯಾಯಿತಿ ನೀಡಿದೆ. ಬಾಕಿ ಇರೋ ತೆರಿಗೆಯಲ್ಲಿ ಅರ್ಧದಷ್ಟು ತೆರಿಗೆ ಪಾವತಿ ಮಾಡಿ ಅಪೀಲು ಸಲ್ಲಿಸಿದವರಿಗೆ ಮಾತ್ರ ತೆರಿಗೆ ರಿಯಾಯಿತಿ ನೀಡಲಾಗುತ್ತೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ. ಸ್ಥಳೀಯ ಪಾಲಿಕೆ ಕಂದಾಯ ಕಚೇರಿಯಲ್ಲಿ ಅರ್ಧ ತೆರಿಗೆ ಕಟ್ಟಿ, ಉಳಿದರರ್ಧ ತೆರಿಗೆ ಮನ್ನಾಕೆ ಮನವಿ ಸಲ್ಲಿಸಬೇಕು. ನೋಟಿಸ್ ಪಡೆದ ತೆರಿಗೆದಾರರು ಅರ್ಧದಷ್ಟು ತೆರಿಗೆ ಪಾವತಿಸಿ ನಂತರ ಪಾಲಿಕೆಗೆ ಅಪೀಲ್ ಸಲ್ಲಿಸಬೇಕು. ಸರ್ಕಾರ ಆಸ್ತಿ ತೆರಿಗೆ ಸಂಗ್ರಹದಲ್ಲಿ ತಿದ್ದುಪಡಿ ಮಾಡಿದ್ರೆ ಅರ್ಧದಷ್ಟು ತೆರಿಗೆ ವಿನಾಯಿತಿಯಾಗುವ ಸಾಧ್ಯತೆ ಇದೆ. ಸದ್ಯ ಬಾಕಿ ಇರೋ ತೆರಿಗೆಯಲ್ಲಿ ಅರ್ಧದಷ್ಟು ತೆರಿಗೆ ಪಾವತಿ ಮಾಡಿ ಅಪೀಲು ಸಲ್ಲಿಸಿದವರಿಗೆ ಮಾತ್ರ…

Read More

ಬೆಂಗಳೂರು: ಇತ್ತೀಚೆಗೆ ಕೆಆರ್​​ಪುರಂ ಠಾಣಾ ವ್ಯಾಪ್ತಿಯಲ್ಲಿ ತಿಂಡಿ ಮಾಡಿಲ್ಲ ಅಂತಾ ತಾಯಿಯನ್ನ ಮಗನೇ ಹತ್ಯೆಗೈದ ಪ್ರಕರಣ ಬೆಳಕಿಗೆ ಬಂದಿತ್ತು. ಅಂದ್ರೆ ಇದೀಗ ಕೊಲೆ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್​ ಸಿಕ್ಕಿದೆ. ಹೌದು,ನೇತ್ರಾ ಎಂಬಾಕೆಯನ್ನು ಮಗ ಪವನ್​ ಕೊಲೆ ಮಾಡಿದ್ದನು. ರಾಡ್​ನಿಂದ ಹೊಡೆದು ಸಾಯಿಸಿದ್ದನು. ಹೀಗಾಗಿ ಅಪ್ರಾಪ್ತನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆದರೆ ಮಗನ ವಿಚಾರಣೆ ವೇಳೆ ಸತ್ಯ ಹೊರಬಿದ್ದಿದೆ. ಗಂಡ, ಮಗ ಸೇರಿ ಕೊಲೆ ನೇತ್ರಾ ಪಾರ್ಟಿಗೀರ್ಟಿ, ಐಷಾರಾಮಿ ಹುಚ್ಚಿಗೆ ಬಿದ್ದು ಗಂಡ, ಮಗನಿಂದಲೇ ಕೊಲೆಯಾಗಿದ್ದಾಳೆ. ಕೊಲೆ ನಡೆದ ಕೂಡಲೇ ಮಗ ಪವನ್ ಪೊಲೀಸರಿಗೆ ಕರೆ ಮಾಡಿ ಶರಣಾಗಿದ್ದನು. ಆದ್ರೆ ತನಿಖೆ ವೇಳೆ ನೇತ್ರಾಳನ್ನು ಗಂಡ, ಮಗ ಸೇರಿಕೊಂಡು ಕೊಲೆ ಮಾಡಿದ್ದಾರೆ ಎಂಬುದು ಬೆಳಕಿಗೆ ಬಂದಿದೆ. ಐಷಾರಾಮಿ ಹುಚ್ಚಿಗೆ ಬಿದ್ದಿದ್ದ ನೇತ್ರಾ ರಾಡ್ ನಿಂದ ಹೊಡೆದು ನೇತ್ರಾಳನ್ನು ಕೊಲೆ ಮಾಡಲಾಗಿತ್ತು. ಹಾಗಾಗಿ ಎಫ್ ಎಸ್ ಎಲ್ ಪರಿಶೀಲನೆ ವೇಳೆ ಮಹಿಳೆ ಪತಿಯ ಕೈವಾಡವೂ ಬೆಳಕಿಗೆ ಬಂದಿದೆ. ವೆಪನ್ ವಶಪಡೆದು ಎಫ್ ಎಸ್ ಎಲ್ ಗೆ ಕಳಿಸಿದ್ದಾಗ ರಾಡ್…

Read More

ದೆಹಲಿ: ಕೇಂದ್ರ ಬಜೆಟ್‌ನಲ್ಲಿ (Budget) ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಕೇಂದ್ರದ ಗಮನ ಸೆಳೆಯಲು, ನಮ್ಮ ಪಾಲಿನ ಅನುದಾನದ ಬಗ್ಗೆ ಜನರಿಗೆ ಮನದಟ್ಟು ಮಾಡಲು ರಾಜ್ಯ ಸರ್ಕಾರ ದೆಹಲಿಯಲ್ಲಿ (New Delhi) ಹೋರಾಟ ನಡೆಸುತ್ತಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಅವರು ತಿಳಿಸಿದರು. ಫೆ.7ರಂದು ರಾಜ್ಯ ಸರ್ಕಾರದ ವತಿಯಿಂದ ನಡೆಯಲಿರುವ ಪ್ರತಿಭಟನೆಯ ಸ್ಥಳ ಜಂತರ್ ಮಂತರ್‌ನಲ್ಲಿ ಪರಿಶೀಲನೆ ನಡೆಸಿ, ಸೋಮವಾರ ರಾತ್ರಿ ಮಾಧ್ಯಮಗಳಿಗೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದರು. ಇಂದು ರಾಜ್ಯ ಸರ್ಕಾರ ನಡೆಸಲಿರುವ ಪ್ರತಿಭಟನಾ ಸ್ಥಳ ಪರಿಶೀಲಿಸಿದ್ದೇನೆ. ಕರ್ನಾಟಕ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆಯಲು ರಾಜ್ಯ ಸರ್ಕಾರ ನಡೆಸುತ್ತಿರುವ ಹೋರಾಟ ಇದಾಗಿದ್ದು, ಇದು ಪಕ್ಷದ ಹೋರಾಟವಲ್ಲ. ನಮ್ಮ ತೆರಿಗೆ ನಮ್ಮ ಹಕ್ಕು. ನಮ್ಮ ಅನುದಾನ ನಮ್ಮ ಹಕ್ಕು. ನಮ್ಮ ಅಭಿವೃದ್ಧಿ ನಮ್ಮ ಜವಾಬ್ದಾರಿ. ಈ ವಿಚಾರವಾಗಿ ಜನರಿಗೆ ಮನದಟ್ಟು ಮಾಡಬೇಕು. ನಮ್ಮ ಪಾಲಿನ ಅನುದಾನ ಕೊಡಿಸುವುದು ನಮ್ಮ ಜವಾಬ್ದಾರಿ. ಜನ ನಮಗೆ ಮತ…

Read More

ಕಲಘಟಗಿ: ರಸ್ತೆಯಲ್ಲಿ ದಲಿತ ಮುಖಂಡನ ಕಾರು ತಡೆದು ದೌರ್ಜನ್ಯ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಆರೋಪಿಗಳನ್ನು ಬಂಧಿಸಿದ ಜೈಲಿಗೆ ಕಳಿಸಿದ ಪೊಲೀಸರು ನ್ಯಾಯಾಲಯದಿಂದ ಪತ್ರ ಕರ್ತರಾದ ಮಾರುತಿ ಲಮಾಣಿ ಮುದ್ದತ್ ಹಾಜರಾಗಿ ಮುಂದಿನ ದಿನಾಂಕ ಮುದ್ದತ್ ಬಿದ್ದಿದ್ದರಿಂದ ತಾವು ತಂದಿದ್ದ ಕಾರಿನಲ್ಲಿ ತಾಯಿ ಮಗ ವಾಪಸ್ಸು ಊರಿಗೆ ಹೋಗುತ್ತಿರುವುದು ಕಂಡ ದುಷ್ಕರ್ಮಿಗಳು ತಾಲೂಕಿನ ಹುಲಿಕಟ್ಟಿ ಗ್ರಾಮದಾಟಿ ಗ್ರಾಮದ ಮಸ್ಮಾಣಗಟ್ಟಿ ಗಟ್ಟಿ ಹತ್ತಿರ ರಸ್ತೆಯಲ್ಲಿ ಬೈಕ್ ಅಡ್ಡ ಹಚ್ಚಿ ಮಾರುತಿ ಲಮಾಣಿ ಕಾರನ್ನು ತರುಬಿ ಹತ್ತಿರ ಬಂದು ಡ್ರೈವರ್ ಸೈಡ್ ಡೋರ್ ನ್ನು ಜಗ್ಗಿ ಮುರಿದು ಕಾರಿನ ಒಳಗೆ ಬಂದು ಮಾರುತಿ ಲಮಾಣಿ ಮೇಲೆ ಹಲ್ಲೆ ಮಾಡಿ ಕಿಸೆಯಲ್ಲಿ ಇದ್ದ ಮೊಬೈಲ್ ಫೋನ್ ಕಿತ್ತುಕೊಂಡು ಪಕ್ಕದ ಸಿಟ್ಟಿನಲ್ಲಿ ಕುಳಿತುಕೊಂಡಿದ 70 ವರ್ಷ ವಯಸ್ಸಿನ ಮಾರುತಿ ಲಮಾಣಿ ತಾಯಿಯನ್ನು ಎಳೆದು ಬಿಸಾಕಿ ಕಾರಿನಲ್ಲಿದ್ದ ಮಾರುತಿಯನ್ನು ಎಳೆದು ತಂದು ನೆಲಕ್ಕೆ ಕೇಡವಿ ಮಾರಣಾಂತಿಕವಾಗಿ ಹಲ್ಲೆ ಮಾಡಿ ತಾಯಿ ಲಭಾ ಲಭಾ ಹೊಯಕುಳ್ಳುತ್ತಾ ಚಿರಾಡುತ್ತೀದ್ದರು ಬಿಡದೇ…

Read More

ನವದೆಹಲಿ: ನಾಯಿ ತಿನ್ನದ ಬಿಸ್ಕತ್ತನ್ನು ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ತನ್ನ ಕಾರ್ಯಕರ್ತನಿಗೆ ನೀಡಿರುವ ವೀಡಿಯೋ ಸಮಾಜಕ ಜಾಲತಾಣಗಳಲ್ಲಿ  (Social Media) ವೈರಲ್ ಆಗಿದ್ದು ಭಾರೀ ಟೀಕೆಗೆ ಗುರಿಯಾಗಿದೆ. https://x.com/amitmalviya/status/1754551446475882528?s=20 ಭಾರತ ಜೋಡೋ ನ್ಯಾಯ ಯಾತ್ರೆ (Bharth Jodo Nyay yatra) ಸಂದರ್ಭದಲ್ಲಿ ರಾಹುಲ್ ಗಾಂಧಿ ನಾಯಿಗೆ (Dog) ಬಿಸ್ಕತ್ತನ್ನು (Biscuit )ನೀಡಿದ್ದಾರೆ. ಆದರೆ ನಾಯಿ ತಿನ್ನಲು ನಿರಾಕರಿಸಿದೆ. ಅದೇ ಸಮಯದಲ್ಲಿ ಅವರನ್ನು ಮಾತನಾಡಿಸಲು ಪಕ್ಷದ ಕಾರ್ಯಕರ್ತರು ಬಂದಿದ್ದಾರೆ. ಆಗ ನಾಯಿಗೆ ಹಾಕಿದ ಬಿಸ್ಕತ್ತಲ್ಲೇ ಒಂದು ಬಿಸ್ಕತ್ತನ್ನು ತೆಗೆದು ಕಾರ್ಯಕರ್ತನಿಗೆ ನೀಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಟೀಕೆ ವ್ಯಕ್ತವಾಗಿದೆ. ಘಟನೆ ಕುರಿತು ಬಿಜೆಪಿ ನಾಯಕಿ ಪಲ್ಲವಿ ಪ್ರತಿಕ್ರಿಯಿಸಿ, ರಾಹುಲ್ ಗಾಂಧಿ ಪಕ್ಷದ ಕಾರ್ಯಕರ್ತನಿಗೆ, ನಾಯಿ ತಿರಸ್ಕರಿಸಿದ ಬಿಸ್ಕತ್ತನ್ನು ನೀಡಿದ್ದಾರೆ. ಇದು ಅವರ ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಮತ್ತು ಮತದಾರರಿಗೆ ನೀಡುವ ಗೌರವವೇ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ

Read More