Author: AIN Author

ಯಾದಗಿರಿ:- ಚಟ್ನಳ್ಳಿ ಸರ್ಕಾರಿ ಶಾಲೆಯು ದನದ ಕೊಟ್ಟಿಗೆಯಂತಾಗಿದೆ. ಚಟ್ನಳ್ಳಿ ಸರ್ಕಾರಿ ಶಾಲೆ, ಕಿಡಿಗೇಡಿಗಳು ರಾತ್ರಿ ಎಣ್ಣೆ ಪಾರ್ಟಿ ಮಾಡೋದು ಇಲ್ಲೇ ಆಗಿದೆ. ಶಾಲೆಯ ಕಟ್ಟಡ ಶಿಥಿಲಾವಸ್ಥೆ ತಲುಪಿದ್ದು ಇವತ್ತೋ ನಾಳೆಯೋ ಬೀಳುವ ಹಂತದಲ್ಲಿದೆ. ಮೇಲ್ಛಾವಣಿ ಕುಸಿದು ಬೀಳ್ತಾಯಿದ್ದು ಮಕ್ಕಳನ್ನ ಶಾಲೆಗೆ ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಅಷ್ಟಕ್ಕೂ ಆ ಡೆಂಜರ್ ಶಾಲೆಯಾದರೂ ಯಾವುದು ಅಂತೀರಾ ಈ ಸ್ಟೋರಿ ನೋಡಿ. ಯಾದಗಿರಿ ಜಿಲ್ಲೆಯ ಶಹಾಪುರ‌ ತಾಲೂಕಿನ ಚಟ್ನಳ್ಳಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಈಗ ಅವಘಡಕ್ಕೆ ಆಹ್ವಾನ ನೀಡುತ್ತಿದೆ. ಯಾಕೆಂದ್ರೆ ಶಾಲೆಯ ಕಟ್ಟಡ ಶಿಥಿಲಾವಸ್ಥೆಗೆ ಬಂದಿದ್ದು, ಮಕ್ಕಳ ಬಲಿಗಾಗಿ ಕಾಯುತ್ತಿದೆಯಾ ಎಂಬ ಅನುಮಾನ ಕಾಡ್ತಾಯಿದೆ. ಒಂದರಿಂದ ಎಂಟನೇ ತರಗತಿ ವರೆಗೆ ಇರುವ ಈ ಶಾಲೆಯಲ್ಲಿ ಸುಮಾರು 433 ಜನ ಮಕ್ಕಳು ದಾಖಲಾತಿ ಪಡೆದಿದ್ದಾರೆ. ಇಷ್ಟು ಮಕ್ಕಳಿರುವ ಶಾಲೆಗೆ ನಾಲ್ಕು ಜನ ಮಾತ್ರ ಖಾಯಂ ಶಿಕ್ಷಕರಿದ್ದಾರೆ. ಉಳಿದರೆಲ್ಲರೂ ಅತಿಥಿ ಶಿಕ್ಷಕರಾಗಿದ್ದಾರೆ. ಇದು ಹೇಗೋ ನಡೆದು ಹೋಗುತ್ತೆ. ಆದ್ರೆ ಶಾಲೆಯ ಕೋಣೆಗಳು ಸ್ಥಿತಿ ನೋಡಿದರೆ…

Read More

ಬೆಂಗಳೂರು:- ಮಾಜಿ ರೌಡಿಶೀಟರ್ ಆಗಿರುವ ಜೆಕೆ ಅಲಿಯಾಸ್ ಜೇಡರಹಳ್ಳಿ ಕೃಷ್ಣಪ್ಪನನ್ನು ನನ್ನು ನಕಲಿ ದಾಖಲೆ ಸೃಷ್ಟಿಸಿ 16 ಎಕರೆ ಜಮೀನು ಕಬಳಿಸಿದ ಆರೋಪ ಸಂಬಂಧ ಬ್ಯಾಡರಹಳ್ಳಿ ಠಾಣಾ ಪೊಲೀಸರು ಆರ್​ಟಿ ನಗರದಲ್ಲಿ ಬಂಧಿಸಿದ್ದಾರೆ. ಜೇಡರಹಳ್ಳಿ ಕೃಷ್ಣಪ್ಪ ವಿರುದ್ಧ ಬಸವರಾಜ್​ ಎಂಬವರು ಠಾಣೆಗೆ ದೂರು ನೀಡಿದ್ದರು. ದೂರಿನ ಅನ್ವಯ ಇದೀಗ ಅರೆಸ್ಟ್ ಮಾಡಲಾಗಿದೆ.

Read More

ಬೆಂಗಳೂರು:- ರಾಜ್ಯ ಬಿಜೆಪಿ ನಾಯಕರಿಗೆ ಮಾನ ಮರ್ಯಾದೆ ಇಲ್ಲ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಕಾಂಗ್ರೆಸ್ ಸರ್ಕಾರ ನಾಳೆ ದೆಹಲಿಯಲ್ಲಿ ಅನುದಾನ ಹಂಚಿಕೆ ವಿಷಯದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ನಡೆಸಲಿರುವ ಪ್ರತಿಭಟನೆ ವಿರುದ್ಧ ಟೀಕೆ ಮಾಡುತ್ತಿರುವ ರಾಜ್ಯ ಬಿಜೆಪಿ ನಾಯಕರಿಗೆ ಮಾನ ಮರ್ಯಾದೆ ಇಲ್ಲ, ತಮ್ಮ ಧರಣಿಯನ್ನು ಪ್ರಶ್ನಿಸುವ ಅವರಿಗೆ ನಾಚಿಕೆಯಾಗಬೇಕು ಎಂದು ಗುಡುಗಿದರು. ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ಇವರಿಗೆ ಕಾಣುತ್ತಿಲ್ಲವೇ? 236 ತಾಲ್ಲೂಕುಗಳ ಪೈಕಿ 223 ತಾಲ್ಲೂಕುಗಳು ಬರಪೀಡಿತ ಅಂತ ಘೋಷಿಸಲಾಗಿದೆ. ಕರ್ನಾಟಕದಿಂದ 4.5 ಲಕ್ಷ ಕೋಟಿ ರೂ. ತೆರಿಗೆ ಸಂಗ್ರಹದ ಹಣ ಹೋಗುತ್ತದೆ. ಆದರೆ ರಾಜ್ಯಕ್ಕೆ ಸಿಗುತ್ತಿರುವ ಅನುದಾನ ತೀರ ಕಡಿಮೆ ಅನ್ನೋದು ಬಿಜೆಪಿಯವರಿಗೆ ಗೊತ್ತಿಲ್ಲವೇ? ಎಂದು ರೆಡ್ಡಿ ಕೇಳಿದರು. ರಾಜ್ಯದ ರೈತರು ಮತ್ತು ಜನರ ಬಗ್ಗೆ ಅವರಿಗೆ ಕಿಂಚಿತ್ತಾದರೂ ಕಾಳಜಿ ಇದ್ದರೆ ತಮ್ಮೊಂದಿಗೆ ಕೈ ಜೋಡಿಸುತ್ತಿದ್ದರು. ಅದರೆ, ರಾಜ್ಯ ಸರ್ಕಾರಕ್ಕೆ ಅನುದಾನ ಸಿಗದಿರುವುದು ಕಂಡು ಅವರು ವಿಕೃತಾನಂದ ಅನುಭವಿಸುತ್ತಿದ್ದಾರೆ. ರಾಜ್ಯ ಬಿಜೆಪಿ ನಾಯಕರು…

Read More

ಚಿಕ್ಕೋಡಿ : ಬೀದ‌ರ್ ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಪಕ್ಷದಿಂದ ಸ್ಪರ್ಧೆ ಮಾಡುತ್ತೇನೆ ಎಂದು ಊಹಾಪೋಹಗಳು ಕೇಳಿ ಬರುತ್ತಿವೆ. ನಾನು ಯಾವುದೇ ಕಾರಣಕ್ಕೂ ಬಿಜೆಪಿ ಪಕ್ಷಕ್ಕೆ ಹೋಗುವುದಿಲ್ಲ, ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಅಥಣಿ ಶಾಸಕ ಲಕ್ಷ್ಮಣ್‌ ಸವದಿ ಸ್ಪಷ್ಟನೆ ನೀಡಿದ್ದಾರೆ. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಯಕ್ಕಂಚ್ಚಿ ಗ್ರಾಮದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, ನಾನು ಬೀದ‌ರ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ ಎಂದು ಕೇಳಿ ಬರುತ್ತಿವೆ.ಈ ಸುದ್ದಿ ನನಗೆ ಅಚ್ಚರಿ ಮೂಡಿಸಿದೆ. ಎತ್ತನ ಮಾಮರ ಎತ್ತನ ಕೋಗಿಲೆ ಎತ್ತಿಂದ ಎತ್ತ ಸಂಬಂಧವಯ್ಯಾ, ಎಲ್ಲಿಂದ ಎಲ್ಲಿಗೆ ಸಂಬಂಧ ಆ ಸುದ್ದಿಗಳು ಎಲ್ಲವೂ ಸುಳ್ಳು ನಾನು ಯಾವುದೇ ಕಾರಣಕ್ಕೂ ಲೋಕಸಭಾ ಚುನಾವಣೆ ಸ್ವರ್ಧೆ ಮಾಡುವುದಿಲ್ಲ ಎಂದು ಹೇಳಿದರು. ಇನ್ನು, ನಾನು ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಹೋಗಿಲ್ಲ, ನನಗೆ ಅಥಣಿ ಕ್ಷೇತ್ರದ ಜನರು ಆಶೀರ್ವಾದ ಮಾಡಿದ್ದಾರೆ. ಅಥಣಿ ಕ್ಷೇತ್ರದ ಜನರು ಶಾಸಕರಾಗಿ ಇರುವಂತೆ ಆದೇಶವನ್ನು ಮಾಡಿದ್ದಾರೆ ನಾನು ಶಾಸಕನಾಗಿ ಇರುತ್ತೆನೆ ಎಂದು…

Read More

ಹುಬ್ಬಳ್ಳಿ:- ರಾಜ್ಯದಲ್ಲೇ ಕ್ರಾಂತಿ ನೆಲ ಕಿತ್ತೂರು ಯಾರಿಗೆ ಗೊತ್ತಿಲ್ಲಾ ಹೇಳ್ರಿ, ಇಂತಹ ಕ್ರಾಂತಿ ನೆಲ ಕಿತ್ತೂರು ತಾಲ್ಲೂಕಿನಲ್ಲಿ ಅತ್ಯಂತ ವೇಗವಾಗಿ ದಿನೇ ದಿನೇ ಬೆಳೆಯುತ್ತಿರುವ ಪಟ್ಟಣ ಅಂದ್ರೆ ಇದೇ ನೋಡ್ರಿ Mk ಹುಬ್ಬಳ್ಳಿ ಪಟ್ಟಣ, ರಾಷ್ಟ್ರೀಯ ಹೆದ್ದಾರಿಯಲ್ಲಿ ಬರೋದ್ರಿಂದ ದಿನನಿತ್ಯ ಅಪಘಾತಗಳು ಸೇರಿದಂತೆ ಹಲವಾರು ಪ್ರಕರಣಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿವೆ. ಇನ್ನೂ ಪ್ರಾದೇಶಿಕವಾಗಿ ಸಹ ಈ ಉಪ ಪೊಲೀಸ್ ಠಾಣೆ ತುಂಬಾ ದೊಡ್ಡದಿದ್ದು, ಮೊದಲಿನಿಂದಲೂ ಕಿತ್ತೂರು ಪೊಲೀಸ್ ವ್ಯಾಪ್ತಿಗೆ ಬರುತ್ತಿದ್ದು, ಅಪರಾಧ ಪ್ರಕರಣಗಳು ಸಂಭವಿಸಿದರೇ 18 ಕಿಲೋಮೀಟರ್ ದೂರದಲ್ಲಿರುವ ಕಿತ್ತೂರು ಪೊಲೀಸ್ ಠಾಣೆಗೆ ಹೋಗಿ ಪ್ರಕರಣ ದಾಖಲಿಸಬೇಕಾಗುತ್ತದೆ. ಇನ್ನೂ ಮಲಪ್ರಭಾ ನದಿಯು ಈ ಪಟ್ಟಣದ ವ್ಯಾಪ್ತಿಯಲ್ಲಿ ಬರುವದರಿಂದ ಇಲ್ಲಿಯವರೆಗೂ ಸಹ ಹಲವಾರು ಅನಾಹುತಗಳು ದಿನನಿತ್ಯ ಸಂಭವಿಸುತ್ತಿವೆ, ಇನ್ನೂ ಸರ್ಕಾರ ಇತ್ತೀಚೆಗೆ ರಾಮದುರ್ಗ ತಾಲ್ಲೂಕಿನ ಸುರೇಬಾನ ಉಪ ಪೊಲೀಸ್ ಠಾಣೆಯನ್ನು ಮೇಲ್ದರ್ಜೆಗೆ ಏರಿಸಿ ಪೊಲೀಸ್ ಠಾಣೆಯನ್ನಾಗಿ ಮಾಡಿದೆ. ಆದ್ರೆ ಕಳೆದ 6 ವರ್ಷಗಳಿಂದ ಈ mk ಹುಬ್ಬಳ್ಳಿ ಉಪ ಪೊಲೀಸ್ ಠಾಣೆಯನ್ನು…

Read More

ದೀರ್ಘಕಾಲ ಕುಳಿತುಕೊಳ್ಳುವುದು, ವಿಶೇಷವಾಗಿ ಒಂದೇ ಸ್ಥಳದಲ್ಲಿ ಕುಳಿತು ಕೆಲಸ ಮಾಡುವುದು, ದೈಹಿಕ ನಿಷ್ಕ್ರಿಯತೆ ಇವೆಲ್ಲವೂ ಬೆನ್ನು ನೋವಿಗೆ ಕಾರಣವಾಗಬಹುದು. ಯಾರಾದರೂ ಈ ಸಮಸ್ಯೆಯಿಂದ ಬಳಲುತ್ತಿದ್ದರೆ, ಎದ್ದೇಳುವುದು ಮತ್ತು ಕುಳಿತುಕೊಳ್ಳುವುದು ಸೇರಿದಂತೆ ದೈನಂದಿನ ಜೀವನದ ಸಾಮಾನ್ಯ ಚಟುವಟಿಕೆಗಳನ್ನು ಮಾಡಲು ಸಹ ಕಷ್ಟವಾಗುತ್ತದೆ. ಒಂದು ವೇಳೆ ಈ ಸಮಸ್ಯೆಯಿಂದ ಪರಿಹಾರ ಪಡೆಯಬೇಕು ಎಂದು ಅಂದುಕೊಂಡಿದ್ದರೆ, ನಾವಿಂದು ಕೆಲ ಮನೆಮದ್ದುಗಳನ್ನು ನಿಮಗೆ ತಿಳಿಸಿಕೊಡಲಿದ್ದೇವೆ. ಹೀಟಿಂಗ್ ಪ್ಯಾಡ್: ಹೀಟಿಂಗ್ ಪ್ಯಾಡ್ ಅನ್ನು ಬಳಸುವುದು ಬೆನ್ನು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೀಟಿಂಗ್ ಪ್ಯಾಡ್ ಅನ್ನು ಸೊಂಟದ ಮೇಲೆ ಇರಿಸಿ. ಇದರಿಂದ ರಕ್ತ ಪರಿಚಲನೆ ಹೆಚ್ಚಾಗುತ್ತದೆ ಮತ್ತು ಸ್ನಾಯುಗಳು ರಿಲೀಫ್ ಪಡೆಯುತ್ತವೆ. ಇದು ಚಳಿಗಾಲದಲ್ಲಿ ಅಥವಾ ಸ್ನಾಯುಗಳಲ್ಲಿನ ಸಂಧಿವಾತಕ್ಕೆ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ. ಹರ್ಬಲ್ ಟೀ ಹರ್ಬಲ್ ಟೀ ಬೆನ್ನು ನೋವನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ. ಶುಂಠಿ, ನಿಂಬೆ ಮತ್ತು ಜೇನುತುಪ್ಪವನ್ನು ಬಿಸಿ ನೀರಿನಲ್ಲಿ ಬೆರೆಸಿ ಕುಡಿದರೆ ತುಂಬಾ ಒಳ್ಳೆಯದು. ಆಯುರ್ವೇದ ಚಿಕಿತ್ಸೆ ಬೆನ್ನು ನೋವನ್ನು ಕಡಿಮೆ ಮಾಡಲು…

Read More

ಪೋಷಕಾಂಶಗಳಿಂದ ಕೂಡಿರುವ ಡ್ರೈ ಫ್ರೂಟ್ಸ್‌ಗಳಿಂದ ನಮ್ಮ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನವಿದೆ. ಡ್ರೈ ಪ್ರೂಟ್ಸ್‌ಗಳಲ್ಲಿ ಗೋಡಂಬಿ ಎಂದರೆ ಬಹಳಷ್ಟು ಜನರು ಇಷ್ಟ ಪಟ್ಟು ತಿನ್ನುತ್ತಾರೆ. ಕ್ಯಾಶ್ಯೂ, ಕಾಜು ಎಂದೆಲ್ಲಾ ಕರೆಯುವ ಗೋಡಂಬಿಯನ್ನು ಬೆಳಗ್ಗಿನ ತಿಂಡಿಯಲ್ಲಿ, ಸಂಜೆಯ ಸ್ನಾಕ್ಸ್‌ನಲ್ಲಿ ತಿನ್ನುವವರಿದ್ದಾರೆ. ಫುಲಾವ್‌, ಘೀ ರೈಸ್‌ಗಳಲ್ಲಿ ಸೇರಿಸುತ್ತಾರೆ. ನೀವು ಗೋಡಂಬಿಯನ್ನು ಖರೀದಿಸಲು ಅಂಗಡಿಗೆ ಹೋದರೆ ಅಲ್ಲಿ ಹಲವಾರು ಬಗೆಯ ಉತ್ಪನ್ನಗಳನ್ನು ಕಾಣಬಹುದು. ಕಲಬೆರಕೆಯ ಯುಗದಲ್ಲಿ ಗೋಡಂಬಿಗೂ ಅದರ ಪ್ರಭಾವ ಬೀರಿದೆ. ನೀವು ಖರೀದಿಸುವ ಗೋಡಂಬಿ ಅಸಲಿಯೋ ಅಥವಾ ನಕಲಿಯೋ ಎಂದು ತಿಳಿಯುವುದಾದರೂ ಹೇಗೆ? ಈ ಗೊಂದಲ ನಿಮ್ಮಲ್ಲಿದ್ದರೆ ಅದಕ್ಕೆ ಸುಲಭದ ಮಾರ್ಗಗಳಿವೆ. ಉತ್ತಮ ಗೋಡಂಬಿ ತಿನ್ನುವುದರಿಂದ ಆರೋಗ್ಯಕ್ಕೆ ಎಷ್ಟು ಪ್ರಯೋಜನವಿದೆಯೋ ಅದೇ ರೀತಿ ನಕಲಿ ಗೋಡಂಬಿ ತಿನ್ನುವುದರಿಂದ ಆರೋಗ್ಯದ ಮೇಲೆ ಅಷ್ಟೇ ಕೆಟ್ಟ ಪರಿಣಾಮವಾಗುತ್ತದೆ. ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಗೋಡಂಬಿ ಸಿಗುತ್ತದೆ ಎಂದು ಖರೀದಿಸಿ ತಂದರೆ ಅದರಿಂದ ತೊಂದರೆ ತಪ್ಪಿದ್ದಲ್ಲ. ಗೋಡಂಬಿಯ ಶುದ್ಧತೆಯನ್ನು ಗುರುತಿಸುವುದು ಹೇಗೆ? ಇಲ್ಲಿ ಕೆಲವು ಸಲಹೆಗಳನ್ನು ನೀಡಲಾಗಿದೆ. ಅದರ ಮುಖಾಂತರ ನೀವು…

Read More

ಬೆಂಗಳೂರು: ಕೇಂದ್ರ ಸರ್ಕಾರದ ಭಾರತ್  ಬ್ರ್ಯಾಂಡ್ ಅಕ್ಕಿ (Bharat Brand Rice)ಯೋಜನೆಗೆ ಇಂದು ಚಾಲನೆ‌ ಸಿಕ್ಕಿದೆ. ಕೇಂದ್ರದಲ್ಲಿ ಅಮಿತ್ ಶಾ ಭಾರತ್ ಅಕ್ಕಿ ಗೆ ಚಾಲನೆ ಕೊಟ್ಟ ಹಿನ್ನೆಲೆ  ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ (BS Yediyurappa) ಅವರು ಈ ಭಾರತ್ ಬ್ರಾಂಡ್ ಅಕ್ಕಿ ಯೋಜನೆಗೆ ಚಾಲನೆ ನೀಡಿದರು. ಇಂದಿನಿಂದ 29 ರೂಪಾಯಿಗೆ ಸಿಲಿದೆ ಒಂದು ಕೆಜಿ ಅಕ್ಕಿ ದೊರೆಯಲಿದ್ದು  ನಾಫೆಡ್ಸ್ ನಿಂದ 29 ರೂಪಾಯಿ ಅಕ್ಕಿ ವಿತರಣೆಗೆ ಸಿದ್ಧತೆ ನಡೆದಿದೆ. ಜನರಿಗೆ ಕಡಿಮೆ ದರದಲ್ಲಿ ಅಕ್ಕಿ ನೀಡುವ ಹಿನ್ನೆಲೆ ರೈತರಿಂದ ನೇರವಾಗಿ ಅಕ್ಕಿ ಖರೀದಿಸಿ ಕಡಿಮೆ ಬೆಲೆಗೆ ವಿತರಣೆ ಒಟ್ಟು 25 ಮೊಬೈಲ್ ವ್ಯಾನ್ ಗಳ ಮೂಲಕ ಅಕ್ಕಿ ವಿತರಣೆ ಬೆಂಗಳೂರಿನಲ್ಲಿ 5 ಕಡೆಗಳಲ್ಲಿ ಮೊಬೈಲ್ ವ್ಯಾನ್ಸ್ ಸೇವೆ ಇದನ್ನ ಹೊರತುಪಡಿಸಿ ರಾಜ್ಯಾದ್ಯಂತ ಸಂಚರಿಸಲಿರೋ 20 ಮೊಬೈಲ್ ವಾನ್ ಗಳು ಈಗಾಗಲೇ ಕಡ್ಲೇಬೇಳೆ, ಹಾಗೂ ಗೋಧಿ ಹಿಟ್ಟನ್ನ ಕಡಿಮೆ ಬೆಲೆಗೆ ನೀಡಲಾಗ್ತಿದೆ ಎಲ್ಲಾ ರಿಲಾಯನ್ಸ್ ಮಾರ್ಟ್ ನಲ್ಲೂ ಮುಂದಿನ…

Read More

ದೆಹಲಿ: ನೇಮಕಾತಿ ಪರೀಕ್ಷೆಗಳಲ್ಲಿನ ಅಕ್ರಮಗಳಿಗೆ ಬ್ರೇಕ್ ಹಾಕಲು ಕೇಂದ್ರ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ. ಕೇಂದ್ರ ಸರ್ಕಾರದ ನೇಮಕಾತಿ ಪರೀಕ್ಷೆಗಳಲ್ಲಿ (Central Exams) ಅಕ್ರಮ ಎಸಗಿದರೆ 3 ರಿಂದ 10 ವರ್ಷಗಳ ಜೈಲು ಶಿಕ್ಷೆ ಮತ್ತು 1 ಕೋಟಿ ರೂ.ವರೆಗೆ ದಂಡ ವಿಧಿಸುವ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದೆ. ಕೇಂದ್ರೀಯ ನೇಮಕಾತಿ ಮತ್ತು ಪ್ರವೇಶ ಪರೀಕ್ಷೆ, ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC), ಸ್ಟಾಫ್ ಸೆಲೆಕ್ಷನ್ ಕಮಿಷನ್, ರೈಲ್ವೆ ನೇಮಕಾತಿ ಮಂಡಳಿಗಳು, ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಮತ್ತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗಳಿಗೆ ಈ ಕೇಂದ್ರ ನೇಮಕಾತಿ ಪರೀಕ್ಷೆಗಳ ಅಕ್ರಮ ತಡೆ ಮಸೂದೆ 2024 (Public Examinations (Prevention of Unfair Means) Bill, 2024) ಅನ್ವಯವಾಗುತ್ತದೆ ಎಂಜಿನಿಯರಿಂಗ್‍ಗಾಗಿ ಜಂಟಿ ಪ್ರವೇಶ ಪರೀಕ್ಷೆ, ವೈದ್ಯಕೀಯ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ, ಮತ್ತು ಪದವಿಪೂರ್ವ ಮತ್ತು ಸ್ನಾತಕೋತ್ತರ ಅಧ್ಯಯನಗಳಿಗೆ ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ, ಈ ಗೊತ್ತುಪಡಿಸಿದ ಸಾರ್ವಜನಿಕ ಪರೀಕ್ಷಾ ಪ್ರಾಧಿಕಾರಗಳ ಹೊರತಾಗಿ ಎಲ್ಲಾ ಕೇಂದ್ರ…

Read More

ಬೆಂಗಳೂರು: ಜಯದೇವ ಆಸ್ಪತ್ರೆಯ ಮಾಜಿ ನಿರ್ದೇಶಕ ಡಾ. ಸಿ.ಎನ್ ಮಂಜುನಾಥ್ ಗೆ ಹೆಚ್ಚಿದ ಡಿಮ್ಯಾಂಡ್ ಅದೇನಪ್ಪಾ ಅಂದ್ರೆ ಜಯದೇವ ಹೃದ್ರೋಗ ಆಸ್ಪತ್ರೆಯ ಮಾಜಿ ನಿರ್ದೇಶಕರ ಡಾ. ಮಂಜುನಾಥ್ ಅವರು ಈ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ(praveen shetty) ಅವರು ಒತ್ತಾಯಿಸಿದ್ದಾರೆ. ಜಯದೇವ ಆಸ್ಪತ್ರೆಯ ಮಾಜಿ ನಿರ್ದೇಶಕ ಡಾ. ಸಿ.ಎನ್ ಮಂಜುನಾಥ್  ಅವರು ಈ ಬಾರಿ ಲೋಕಸಭಾ ಎಲೆಕ್ಷನ್ ನಲ್ಲಿ ಸ್ಪರ್ಧಿಸುವಂತೆ ಒತ್ತಾಯ ಕರವೇ ಪ್ರವೀಣ್ ಶೆಟ್ಟಿಯಿಂದ ಡಾ. ಸಿಎನ್ ಮಂಜುನಾಥ್ ಗೆ ಒತ್ತಾಯ ದೇಶದಲ್ಲಿ ಈ ಬಾರಿ ಲೋಕಸಭಾ ಚುನಾವಣೆ ಹತ್ತಿರ ಬರ್ತಿದೆ ಈ ಸಂದರ್ಭದಲ್ಲಿ ಎಂತಹವರನ್ನು ಸಂಸತ್ ಗೆ ಕಳಿಸಬೇಕೆಂದು ನಾವು ತೀರ್ಮಾನ ಮಾಡಬೇಕು ಜಯದೇವ ಆಸ್ಪತ್ರೆಯ ನಿರ್ದೇಶಕರಾಗಿ ಸಲ್ಲಿಸಿ ಡಾ. ಸಿಎನ್ ಮಂಜುನಾಥ್ ನಿವೃತ್ತರಾಗಿದ್ದಾರೆ ಜಯದೇವ ಆಸ್ಪತ್ರೆಯನ್ನು ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ್ದಾರೆ ದೇಶದ ಹಿತದೃಷ್ಟಿಯಿಂದ ಸೂಕ್ತವಾದ ಸಲಹೆಗಳನ್ನು ನಿಮ್ಮಂತವರು ಬೇಕುಪ್ರಧಾನ ಮಂತ್ರಿಗಳಿಗೆ ಮತ್ತು ಸಂಸದರಿಗೆ ನೀಡಲು ಈ…

Read More