Author: AIN Author

ನವದೆಹಲಿ:- ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮ ಎಸಗುವವರಿಗೆ ಗರಿಷ್ಠ 10 ವರ್ಷ ಜೈಲು ಹಾಗೂ ₹1 ಕೋಟಿ ವರೆಗೆ ದಂಡ ವಿಧಿಸುವುದಕ್ಕೆ ಅವಕಾಶ ಕಲ್ಪಿಸುವ ಸಾರ್ವಜನಿಕ ಪರೀಕ್ಷೆ (ಅಕ್ರಮಗಳ ತಡೆ) ಮಸೂದೆ 2024 ಅನ್ನು ಲೋಕಸಭೆ ಮಂಗಳವಾರ ಅಂಗೀಕರಿಸಿದೆ. ವಿರೋಧ ಪಕ್ಷದ ಸದಸ್ಯರು ಪ್ರಸ್ತಾಪಿಸಿದ ಕೆಲವು ತಿದ್ದುಪಡಿಗಳನ್ನು ತಿರಸ್ಕರಿಸಿದ ನಂತರ ಲೋಕಸಭೆಯು ಮಸೂದೆಯನ್ನು ಅಂಗೀಕರಿಸಿತು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಕಲು, ಅಕ್ರಮ ತಡೆಗಾಗಿ ಕೇಂದ್ರ ಸರ್ಕಾರವು ಲೋಕಸಭೆಯಲ್ಲಿ ಮಂಡಿಸಿದ ಸಾರ್ವಜನಿಕ ಪರೀಕ್ಷೆ (ಅಕ್ರಮಗಳ ತಡೆ) ವಿಧೇಯಕಕ್ಕೆ ಅಂಗೀಕಾರ ದೊರೆತಿದೆ. ವಿಧೇಯಕಕ್ಕೆ ಲೋಕಸಭೆಯಲ್ಲಿ ಅಂಗೀಕಾರ ದೊರೆತಿದ್ದು, ಬಳಿಕ ರಾಜ್ಯಸಭೆಯಲ್ಲಿ ಮಂಡಿಸಲಾಗುತ್ತದೆ. ರಾಜ್ಯಸಭೆಯಲ್ಲೂ ಅಂಗೀಕಾರ ದೊರೆತ ನಂತರ ರಾಷ್ಟ್ರಪತಿ ಸಹಿಗೆ ಕಳುಹಿಸಲಾಗುತ್ತದೆ. ರಾಷ್ಟ್ರಪತಿ ಅಂಗೀಕಾರದ ಬಳಿಕ ವಿಧೇಯಕವು ಕಾಯ್ದೆಯಾಗಿ ಜಾರಿಗೆ ಬರಲಿದೆ. ಸ್ಪರ್ಧಾತ್ಮಕ ಪರೀಕ್ಷೆ ನಡೆಯುವ ವೇಳೆ ನಕಲು ಮಾಡಿದವರು, ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದವರು ಸೇರಿ ಹಲವು ರೀತಿಯ ಅಕ್ರಮ ಎಸಗಿದವರಿಗೆ ಕಠಿಣ ಶಿಕ್ಷೆ ವಿಧಿಸುವ ದಿಸೆಯಲ್ಲಿ ವಿಧೇಯಕ ಮಂಡಿಸಲಾಗಿದೆ. ಕರ್ನಾಟಕದಲ್ಲಿ ಭುಗಿಲೆದ್ದ ಪಿಎಸ್‌ಐ ನೇಮಕಾತಿ…

Read More

ಬೆಂಗಳೂರು:- ಡಿ.ಕೆ.ಶಿವಕುಮಾರ್ ವಿರುದ್ಧ ಎಫ್​ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಬೆಂಗಳೂರಿನ ಹೈಗ್ರೌಂಡ್​ ಠಾಣಾ ಪೊಲೀಸರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಿರ್ದೇಶಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಬಿಜೆಪಿ ಮುಖಂಡರ ವಿರುದ್ಧ ತಪ್ಪು ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ.ಶಿವಕುಮಾರ್​ ವಿರುದ್ಧ ಎಫ್​ಐಆರ್​ ದಾಖಲಿಸಿ ತನಿಖೆ ನಡೆಸುವಂತೆ ಹೈಗ್ರೌಂಡ್​ ಠಾಣಾ ಪೊಲೀಸರಿಗೆ ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಿರ್ದೇಶನ ನೀಡಿದೆ. ಬಿಜೆಪಿ ಕಾನೂನು ಪ್ರಕೋಷ್ಟದ ಸಂಚಾಲಕ ಯೋಗೇಂದ್ರ ಹೋಡಘಟ್ಟ ಎಂಬವರು ಸಲ್ಲಿಸಿದ್ದ ಖಾಸಗಿ ದೂರಿನ ವಿಚಾರಣೆ ನಡೆಸಿದ ನಗರದ 42ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರು ಈ ಆದೇಶ ನೀಡಿದ್ದಾರೆ. ಅಲ್ಲದೆ, ಇಂಡಿಯನ್​ ನ್ಯಾಷನಲ್​ ಕಾಂಗ್ರೆಸ್​ ಕರ್ನಾಟಕದ ಸಾಮಾಜಿಕ ಜಾಲತಾಣದ ಮುಖ್ಯಸ್ಥ ಬಿ.ಆರ್.ನಾಯ್ಡು ವಿರುದ್ಧವೂ ಪ್ರಕರಣ ದಾಖಲಿಸಿ, ವಿಚಾರಣೆ ನಡೆಸಿದ ವರದಿ ಸಲ್ಲಿಸುವಂತೆ ಸೂಚನೆ ನೀಡಿ, ವಿಚಾರಣೆಯನ್ನು ಮಾರ್ಚ್ 30ಕ್ಕೆ ಮುಂದೂಡಿದೆ. 2024ರ ಜನವರಿ ಮೊದಲ ವಾರದಲ್ಲಿ ಹುಬ್ಬಳ್ಳಿಯ ಪೊಲೀಸರು 60 ವರ್ಷದ ಹಿಂದೂ ಕಾರ್ಯಕರ್ತ ಶ್ರೀಕಾಂತ್​…

Read More

ಬರ್ನಾವಾ:- ಅರಗಿನ ಮನೆ ಸ್ಥಳ ಹಿಂದೂಗಳಿಗೆ ಸೇರಿದ್ದಾಗಿದ್ದು, ರಾಮಾಯಣ ಬಳಿಕ ಮಹಾಭಾರತ ಕೇಸಲ್ಲೂ ಹಿಂದೂಗಳಿಗೆ ಜಯ ಸಿಕ್ಕಿದೆ. ಉತ್ತರ ಪ್ರದೇಶ ಬರ್ನಾವಾದಲ್ಲಿರುವ ಬದ್ರುದ್ದೀನ್ ಗೋರಿ ಜಾಗವು ಮಹಾಭಾರತದ ಕಾಲದ ಲಕ್ಷಗೃಹ (ಅರಗಿನ ಅರಮನೆ) ಪ್ರದೇಶವಾಗಿದೆ ಎಂಬ ಹಿಂದೂ ಅರ್ಜಿದಾರರ ವಾದವನ್ನು ಜಿಲ್ಲಾ ನ್ಯಾಯಾಲಯ ಎತ್ತಿಹಿಡಿದಿದೆ. ಇದರೊಂದಿಗೆ 53 ವರ್ಷಗಳಿಂದ ಹಿಂದೂ, ಮುಸ್ಲಿಂ ಅರ್ಜಿದಾರರ ನಡುವೆ ಜಾಗದ ವಿಷಯಕ್ಕೆ ನಡೆಯುತ್ತಿದ್ದ ಪ್ರಕರಣ ತಾರ್ಕಿಕ ಅಂತ್ಯ ಕಂಡಂತೆ ಆಗಿದೆ. ತೀರ್ಪು ಹೊರಬಿದ್ದ ಬೆನ್ನಲ್ಲೇ ಹಿಂದೂ ಸಂಘಟನೆಗಳು ಈ ಕುರಿತು ಹರ್ಷ ವ್ಯಕ್ತಪಡಿಸಿವೆ. ಬರ್ನಾವಾದಲ್ಲಿ 36 ಎಕರೆ ಪ್ರದೇಶದಲ್ಲಿ ಶೇಖ್ ಬದ್ರುದ್ದೀನ್ ಗೋರಿ ಮತ್ತು ಬೃಹತ್ ಸ್ಥಶಾನವಿದೆ. ಈ ವಿವಾದಿತ ಜಾಗದಲ್ಲಿನ ಗುರುಕುಲ ನಮಗೆ ಬಿಡಿಸಿ ಕೊಡಬೇಕು. ಇದು ಸಂತ ಶೇಖ್ ಬದ್ರುದ್ದೀನ್ ಅವರ ಗೋರಿ ಸ್ಥಳ, ಇದನ್ನು ಒಡೆದು ಹಾಕಲಾಗಿದೆ ಎಂದು ಮುಸ್ಲಿಮರ ಪರ ಅರ್ಜಿದಾರ ಮುಕೀಂ ಖಾನ್ ವಾದಿಸಿದ್ದರು. ಆದರೆ ಈ ವಾದ ತಿರಸ್ಕರಿಸಿದ್ದ ಬ್ರಹ್ಮಚಾರಿ ಕೃಷ್ಣದತ್ತ ಈ ಜಾಗ ಮಹಾಭಾರತದ ಕಾಲದ್ದು,…

Read More

ಮದುವೆಯ ನಂತರ ಪ್ರತಿ ಮಹಿಳೆ ಈ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ತಜ್ಞರು ಸಲಹೆ ಕೊಟ್ಟಿದ್ದಾರೆ. ಅದು ಯಾವ ಪರೀಕ್ಷೆ, ಏಕೆ ಮಾಡಿಸಿಕೊಳ್ಳಬೇಕು ಎಂಬುವ ವಿವರ ತಿಳಿಯಲು ಸುದ್ದಿ ಪೂರ್ತಿ ಓದಿ. ಮದುವೆಯ ನಂತರ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಪ್ರತೀ ಮಹಿಳೆ ಮದುವೆಯ ನಂತರ ಕಡ್ಡಾಯವಾಗಿ ಪ್ಯಾಪ್ ಸ್ಮೀಯರ್ ಪರೀಕ್ಷೆ ಮಾಡಿಸಿಕೊಳ್ಳಬೇಕು ಡಾ.ಸುಷ್ಮಾ ಎನ್ನುತ್ತಾರೆ. ಪ್ರಪಂಚದಾದ್ಯಂತ ಗರ್ಭಕಂಠದ ಕ್ಯಾನ್ಸರ್ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ.ಈ ಕ್ಯಾನ್ಸರ್ ಮಹಿಳೆಯರ ಸಾವಿಗೆ ಪ್ರಮುಖ ಕಾರಣವಾಗುತ್ತಿದೆ. ಗರ್ಭಕಂಠದ ಕ್ಯಾನ್ಸರ್ HPV ವೈರಸ್‌ನಿಂದ ಉಂಟಾಗುತ್ತದೆ. ಈ ವೈರಸ್ ಲೈಂಗಿಕ ಸಂಪರ್ಕದ ಸಮಯದಲ್ಲಿ ಹರಡುವ ಸೋಂಕು.ಇದು ಗರ್ಭಾಶಯದ ಕೆಳಗಿನ ಭಾಗದಲ್ಲಿ, ಗರ್ಭಕಂಠದಲ್ಲಿ ನೆಲೆಗೊಂಡಿರುವುದರಿಂದ ಇದನ್ನು ಗರ್ಭಕಂಠದ ಕ್ಯಾನ್ಸರ್ ಎಂದು ಕರೆಯಲಾಗುತ್ತದೆ. ಗರ್ಭಕಂಠದ ಕ್ಯಾನ್ಸರ್ ಅನ್ನು ಪತ್ತೆಹಚ್ಚಲು ಯಾವ ಪರೀಕ್ಷೆ ಅಗತ್ಯ, ಮದುವೆಯ ಬಳಿಕ ಮಹಿಳೆಯರು ಮಾಡಿಸಬೇಕಾದ ಪರೀಕ್ಷೆ ಯಾವುದು? ಎಂಬುದರ ಕುರಿತು ನವದೆಹಲಿಯ AIIMS ನಲ್ಲಿ ಕ್ಯಾನ್ಸರ್ ವಿಭಾಗದ ತಜ್ಞರಾದ ಡಾ. ಸುಷ್ಮಾ ಭಟ್ನಾಗರ್ ಸಲಹೆ ನೀಡುತ್ತಾರೆ. ಅನೇಕ ಜನರೊಂದಿಗೆ ಲೈಂಗಿಕತೆಯನ್ನು…

Read More

ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ನೀಡುವ ಸಲುವಾಗಿ ಕೇಂದ್ರ ಸರ್ಕಾರ ಇ-ಶ್ರಮ ಯೋಜನೆ ಜಾರಿಗೆ ತಂದಿದೆ. ಇ-ಶ್ರಮ ಕಾರ್ಡ್ ಮೂಲಕ ಅಸಂಘಟಿತ ವಲಯದ ಕಾರ್ಮಿಕರಿಗೆ ಸರ್ಕಾರಗಳ ಕಲ್ಯಾಣ ಯೋಜನೆಗಳನ್ನು ತಲುಪಿಸಿ, ಸಾಮಾಜಿಕ ಭದ್ರತೆ ಕಲ್ಪಿಸಲಾಗುತ್ತಿದೆ. ರಾಜ್ಯದಲ್ಲೂ ಇ-ಶ್ರಮ ಕಾರ್ಡ್ ನೀಡಲಾಗುತ್ತಿದ್ದು, ಯೋಜನೆಯ ವಸ್ತುಸ್ಥಿತಿಯ ಕುರಿತು ಸಮಗ್ರ ವರದಿ ಇಲ್ಲಿದೆ. ಇ-ಶ್ರಮ ಕಾರ್ಡ್ ಎಂಬುದು ಅಸಂಘಟಿತ ಕಾರ್ಮಿಕರ ಸಮಗ್ರ ರಾಷ್ಟೀಯ ದತ್ತಾಂಶವಾಗಿದೆ. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಈ ಯೋಜನೆ ಅಸಂಘಟಿತ ವಲಯದ ಕಾರ್ಮಿಕರ ಶ್ರೇಯೋಭಿವೃದ್ಧಿ ಮೂಲ ಉದ್ದೇಶ ಹೊಂದಿದೆ. ಇ-ಶ್ರಮ್ ಕಾರ್ಡ್ ಅಸಂಘಟಿತ ವಲಯದ ಕಾರ್ಮಿಕರಿಗೆ ವಿವಿಧ ಪ್ರಯೋಜನಗಳನ್ನು ಒದಗಿಸಲು ಭಾರತ ಸರ್ಕಾರ ಪ್ರಾರಂಭಿಸಿದ ಡಿಜಿಟಲ್ ವೇದಿಕೆಯಾಗಿದೆ. ದೇಶದ ಎಲ್ಲಾ ಕಾರ್ಮಿಕರಿಗೆ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಒದಗಿಸಲು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು e-SHRAM ಹೆಸರಿನ ಪೋರ್ಟಲ್ ಅನ್ನು ಪ್ರಾರಂಭಿಸಿದೆ. ಪೋರ್ಟಲ್ ವಿಶೇಷವಾಗಿ ಕಾರ್ಮಿಕರಿಗೆ, ಶ್ರಮದ ಕೆಲಸ ನಿರ್ವಹಿಸುವ ಕೆಲಸಗಾರರಿಗೆ ಎಂದೇ ಹಲವು ಸೌಲಭ್ಯಗಳನ್ನು ಒದಗಿಸಲಿದೆ. ಕಾರ್ಮಿಕರು ಇ-ಶ್ರಾಮ್ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬಹುದು…

Read More

ನಮ್ಮಲ್ಲಿ ಅನೇಕರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ತುಂಬಾ ಸಾಹಸ ಮಾಡುತ್ತಿದ್ದಾರೆ. ಇನ್ನಿಲ್ಲದ  ಸರ್ಕಸ್ ಗಳನ್ನು ನಾವು ಮಾಡುತ್ತೇವೆ. ಆದರೆ ಇದನೆಲ್ಲ ಮಾಡುವ ಬದಲು ಮನೆಯಲ್ಲಿಯೇ ಆಹಾರ ಆಯ್ಕೆಗಳಿವೆ, ಉತ್ತಮ ಅದಕ್ಕಾಗಿ ಹೆಚ್ಚು ದಂಡಿಸಬೇಕಿಲ್ಲ. ನಮ್ಮ ಆರೋಗ್ಯದ ಗುಟ್ಟು ನಮ್ಮ ಕೈಯಲ್ಲಿಯೇ  ಇದೆ. ಆದರೆ ಅವು ಆರೋಗ್ಯವನ್ನು ಹಾಳುಮಾಡಬಹುದು. ಯಾಕಂದ್ರೆ ಚಳಿಗಾಲದಲ್ಲಿ ನಾವು ಸ್ವಲ್ಪ ಯಾಮಾರಿದರೂ ಆರೋಗ್ಯದ ಮೇಲೆ ಭಾರಿ ಪರಿಣಾಮ ಬೀರುತ್ತೆ. ಆದ್ದರಿಂದ ಆರೋಗ್ಯಕರವಾಗಿರಲು ಪ್ರತಿದಿನ ಪಾಲಕ್-ಟೊಮೆಟೊ ಜ್ಯೂಸ್ ಸೇವಿಸಿ.  ಪಾಲಕ್ (Palak) ಮತ್ತು ಟೊಮೆಟೊ ಜ್ಯೂಸ್ ಅನೇಕ ಅಗತ್ಯ ವಿಟಮಿನ್ಸ್ ಮತ್ತು ಮಿನರಲ್ಸ್ ಗಳಿಂದ ಸಮೃದ್ಧವಾಗಿದೆ, ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಗ್ರೀನ್ ವೆಜೆಟೇಬಲ್ಸ್ನಲ್ಲಿ ಒಂದಾದ ಪಾಲಕ್ ಸೊಪ್ಪು ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ನಿವಾರಿಸಲು ಬೆಸ್ಟ್ ತರಕಾರಿಯಾಗಿದೆ. ಇದರಲ್ಲಿ ಪೊಟ್ಯಾಸಿಯಮ್, ಮ್ಯಾಂಗನೀಸ್, ವಿಟಮಿನ್ ಎ, ವಿಟಮಿನ್ ಕೆ ಮತ್ತು ವಿಟಮಿನ್ ಬಿ -2 ನಂತಹ ಪೋಷಕಾಂಶಗಳಿವೆ.  ಟೊಮೆಟೋ (Tomato) ಕೂಡ ಆರೋಗ್ಯಕ್ಕೆ ಉತ್ತಮವಾಗಿದೆ. ಟೊಮೆಟೊದಲ್ಲಿ ಲೈಕೋಪೀನ್, ವಿಟಮಿನ್ ಸಿ, ವಿಟಮಿನ್…

Read More

ಸೂರ್ಯೋದಯ: 06:50, ಸೂರ್ಯಾಸ್ತ : 06:10 ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಪುಷ್ಯಂ, ಕೃಷ್ಣ ಪಕ್ಷ, ಉತ್ತರಾಯಣಂ, ಹೇಮಂತ ಋತು, ನಕ್ಷತ್ರ:ಮೂಲ, ತಿಥಿ: ದ್ವಾದಶಿ, ರಾಹು ಕಾಲ: 12:00 ನಿಂದ 01:30 ತನಕ ಯಮಗಂಡ: 07:30 ನಿಂದ 09:00 ತನಕ ಗುಳಿಕ ಕಾಲ: 10:30 ನಿಂದ 12:00 ತನಕ ಅಮೃತಕಾಲ: ರಾ .12:11 ನಿಂದ ರಾ .1:40 ತನಕ ಅಭಿಜಿತ್ ಮುಹುರ್ತ: ಇಲ್ಲ ಮೇಷ: ಸಹೋದರರಿಂದ ಧನ ಸಹಾಯ, ಪ್ರೀತಿಯಲ್ಲಿ ಸಣ್ಣ ವಿಷಯಕ್ಕೆ ಕಲಹ, ಉದ್ಯೋಗದಲ್ಲಿ ಶತ್ರು ಪೀಡೆ ಮತ್ತು ಅಪಮಾನ ಸಂಭವ, ರಿಯಲ್ ಎಸ್ಟೇಟ್ ಮತ್ತು ಏಜೆಂಟರಿಗೆ ಅಪಾರ ಧನ ಹಾನಿ ಸಂಭವ,ಟ್ರಾವೆಲ್ಸ್ ನವರಿಗೆ ಅಪಾರ ಹಾನಿ, ನಿಮಗೆ ಮಕ್ಕಳ ಬಗ್ಗೆ ಚಿಂತೆ, ಮದುವೆ ಕಾರ್ಯಗಳಲ್ಲಿ ನಿರಾಶೆ, ಸಂಗಾತಿ ಜೊತೆ ಪುನರ್ಮಿಲನೆಯ ದಿನ,ಮದುವೆ ಸಾಲಾವಳಿ ಕೇಳುವ ಸಮಯ ಬಂದಿದೆ,ವಿವಾಹ ಸಮಸ್ಯೆಗಳಿಗೆ ಬಂಧುಗಳ ನೆರವಿನಿಂದ ಪರಿಹಾರ, ಮದುವೆಗಾಗಿ ಕಲ್ಯಾಣ ಮಂಟಪ ಬುಕಿಂಗ್ ಮಾಡುವಿರಿ, ಹಣಕಾಸು ಪರಿಸ್ಥಿತಿ ಉತ್ತಮ. ಮಾನಸಿಕ…

Read More

ಬೆಳಗಾವಿ: ತಮ್ಮ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿರುವುದಕ್ಕೆ ನ್ಯಾಯಾಲಯದಲ್ಲಿ ಮಾತ್ರ ಹೋರಾಟ ಮಾಡುತ್ತೇನೆ. ಅದನ್ನು ಬಿಟ್ಟು ಹೊರಗಡೆ ಯಾವುದೇ ರೀತಿ ಹೋರಾಟ ಇಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಹಿಂದೂ ಪದದ ಬಗ್ಗೆ ಅವಹೇಳನಕಾರಿ ಹೇಳಿಕೆ ಕುರಿತು ನಿಮ್ಮ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಕೋರ್ಟ್ ಆದೇಶ ನೀಡಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಬೆಳಗಾವಿಯಲ್ಲಿ ಅವರು ಪ್ರತಿಕ್ರಿಯಿಸಿದರು. ಹಿಂದೆ ಹಿಂದೂ ಪದದ ಹೇಳಿಕೆ ಚರ್ಚೆಗೆ ಗ್ರಾಸವಾಗಿತ್ತು. ಮೊದಲು ಯಾರೋ ಕೇಸ್ ಹಾಕಿದ್ರು. ಕೆಳ ನ್ಯಾಯಾಲಯದಲ್ಲಿ ಅದು ರಿಜೆಕ್ಟ್ ಆಗಿತ್ತು. ಈಗ ನೋಡಬೇಕು ಅದರಲ್ಲಿ ಏನಿದೆ ಅಂತ. ಈಗ ಕೋರ್ಟ್ ಏನು ಆದೇಶ ಮಾಡಿದೆ ಅಂತ ನೋಡೋಣ ಎಂದರು. ಹಿಂದೂ ಪದದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರ ಬಗ್ಗೆ ನನ್ನ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ವಿಚಾರಣೆ ನಡೆಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ಆದೇಶ ಹೊರಡಿಸಲಾಗಿದೆ. ಆದರೆ ಅದರ ಪ್ರತಿ ನನಗೆ ಇನ್ನೂ ಸಿಕ್ಕಿಲ್ಲ. ಪ್ರತಿ ಸಿಕ್ಕ ನಂತರ ಕಾನೂನು ಹೋರಾಟ…

Read More

ಬೆಂಗಳೂರು:- ಜೇಡರಹಳ್ಳಿ ಕೃಷ್ಣಪ್ಪ ವಿರುದ್ದ ನಕಲಿ ದಾಖಲೆ ಸೃಷ್ಟಿಸಿ ವಂಚನೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಜೇಡರಹಳ್ಳಿ ಕೃಷ್ಣಪ್ಪ ಸೇರಿ ಎಂಟು ಜನರ ವಿರುದ್ಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಬ್ಯಾಡರಹಳ್ಳಿ ಠಾಣೆಗೆ ಶಂಕ್ರಪ್ಪ ಎಂಬಾತ ದೂರು ನೀಡಿದ್ದ. ದೂರಿನ ಅನ್ವಯ 506, 341, 34, 504, 406, 420, 465, 468, 471, 323 ಸೆಕ್ಷನ್ ಗಳ ಅಡಿ ಎಫ್ಐಆರ್ ದಾಖಲಾಗಿದೆ. ಜಮೀನೊಂದರ ಮಾಲೀಕರಾಗಿರೋ ಶಂಕ್ರಪ್ಪ, ಬೆಂಗಳೂರು ಉತ್ತರ ತಾಲೂಕಿನ ಹೇರೋಹಳ್ಳಿ ಗ್ರಾಮದ ಜಮೀನಿನ ಮಾಲೀಕ. 16ಎಕರೆ 37ಗುಂಟೆ ಜಮೀನು ಹೊಂದಿದ್ದ. ಶಂಕರಪ್ಪ ಪಿತ್ರಾರ್ಜಿತ ಆಸ್ತಿಯಾಗಿದ್ದು, ಇತ್ತೀಚೆಗೆ ಭೂ ಕಬಳಿಸಿದ ಆರೋಪ ಕೇಳಿ ಬಂದಿತ್ತು. ತಮ್ಮ ಪಾಲಿನ ನಾಲ್ಕು ಎಕರೆ 13ಗುಂಟೆ ಜಾಗವನ್ನ ಶಂಕರಪ್ಪ ಅಭಿವೃದ್ಧಿ ಮಾಡಿಸ್ತಿದ್ದ. ಈ ನಡುವೆ ಅಲ್ಲಿಗೆ ಬಂದಿದ್ದ ಕೃಷ್ಣಮೂರ್ತಿ, ಗೋವಿಂದರಾಜು ಹಾಗೂ ಇತರರಿಂದ ಜೀವ ಬೆದರಿಕೆ ಆರೋಪ ಕೇಳಿ ಬಂದಿದೆ. ನಮ್ಮ ಹೆಸ್ರಲ್ಲಿ ಜಮೀನಿದೆ.. ಅಭಿವೃದ್ಧಿ ಕೆಲಸ ನಿಲ್ಲಿಸಿ, ಜಾಗ ಖಾಲಿ‌ ಮಾಡುವಂತೆ ಬೆದರಿಕೆ…

Read More

ಹಾಸನ:- ಕೇಂದ್ರವನ್ನು ದೂರುವುದು ರಾಜ್ಯ ಕಾಂಗ್ರೆಸ್ ಗೆ ಶೋಭೆ ತರಲ್ಲ ಎಂದು ಪ್ರಜ್ವಲ್ ರೇವಣ್ಣ ಹೇಳಿದ್ದಾರೆ ಈ ಸಂಬಂಧ ಮಾತನಾಡಿದ ಅವರು, ಕೇಂದ್ರ ಸರ್ಕಾರವನ್ನು ರಾಜ್ಯ ಸರ್ಕಾರದವರು ದೂರುವುದು ಸರಿಯಲ್ಲ. ಅಗತ್ಯ ಇದ್ದಾಗಲೆಲ್ಲ ನೆರವು ನೀಡಿದೆ ಎಂದರು. ಹಾಗಿದ್ದರೆ ಜನರ ತೆರಿಗೆ ಹಣವನ್ನು ಇವರ ಉಚಿತ ಗ್ಯಾರಂಟಿಗೆ ಬಳಸಿದ್ದಾರೆ. ಮುಂದೆ ತೆರಿಗೆ ಪಾವತಿದಾರರು ನಮ್ಮ ತೆರಿಗೆ ನಮ್ಮ ಹಕ್ಕು ಎಂದು ಹೋರಾಟ ಮಾಡಿದರೆ ಏನು ಮಾಡೋದು ಎಂದು ಪ್ರಶ್ನಿಸಿದ್ದಾರೆ. ಕೇಂದ್ರ ಸರ್ಕಾರ ಅಗತ್ಯ ಇದ್ದಾಗಲೆಲ್ಲ ನೆರವು ನೀಡಿದೆ. ಕೇಂದ್ರದಿಂದ ಅನುದಾನ ಬಂದೇ ಇಲ್ಲ ಎಂಬ ಭಾವನೆ ಮೂಡಿಸುವುದು ತಪ್ಪು ಎಂದು ವಾಗ್ದಾಳಿ ನಡೆಸಿದ್ದಾರೆ ದಕ್ಷಿಣ ಭಾರತ ಪ್ರತ್ಯೇಕವಾಗಬೇಕು ಎಂಬ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಹೇಳಿಕೆಯನ್ನು ಖಂಡಿಸಿ, ದೇಶ ಒಡೆಯುವ ಹೇಳಿಕೆ ಯಾರೂ ಕೊಡಬಾರದು. ಭಾರತ ಒಂದಾಗಿರುತ್ತದೆ. ಭಾರತೀಯರು ಎಂದು ಹೇಳಿಕೊಳ್ಳಲು ನಮಗೆ ಹೆಮ್ಮೆ ಇದೆ. ಈ ರೀತಿಯ ಹೇಳಿಕೆ ಅವರಿಗೆ ಶೋಭೆ ತರಲ್ಲ ಎಂದು ತಿರುಗೇಟು ನೀಡಿದ್ದಾರೆ.

Read More