Author: AIN Author

ಭಾರತ ತಂಡದ ಪರ ಸಚಿನ್ ದಾಸ್ ಮತ್ತು ಉದಯ್ ಸಹರಾನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಅಂಡರ್ 19 ಭಾರತ ಮತ್ತು ಸೌತ್ ಆಫ್ರಿಕಾ ತಂಡಗಳ ನಡುವೆ ನಿನ್ನೆ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಎರಡು ವಿಕೆಟ್​ಗಳ ಗೆಲುವು ಸಾಧಿಸಿ ಫೈನಲ್​ ಪ್ರವೇಶಿಸಿದೆ. ಟಾಸ್ ಸೋತು ಬ್ಯಾಟಿಂಗ್ ಮಾಡಿದ ಸೌತ್ ಆಫ್ರಿಕಾ ತಂಡ ನಿಗದಿತ 50 ಓವರ್​ಗಳಲ್ಲಿ 7 ವಿಕೆಟ್​ಗಳನ್ನು ಕಳೆದುಕೊಂಡು 244 ರನ್ ಬಾರಿಸಿದರು. ತಂಡದ ಪರ ಲುಹಾನ್ ಡ್ರೆ ಪ್ರಿಟೋರಿಯಸ್ ಅವರು 3 ಸಿಕ್ಸರ್, 6 ಬೌಂಡಿಗಳೊಂದಿಗೆ 76 ರನ್​ಗಳನ್ನು ಬಾರಿಸಿದರು. ರಿಚರ್ಡ್ ಸೆಲೆಟ್ಸ್ವೇನ್ ಅವರು ಎರಡು ಸಿಕ್ಸ್, 4 ಬೌಂಡರಿಗಳೊಂದಿಗೆ 64 ಬಾರಿಸಿದು. ಆ ಮೂಲಕ ಈ ಇಬ್ಬರು ಆಟಗಾರರು ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು. 245 ರನ್​ಗಳ ಗುರಿ ಬೆನ್ನತ್ತಿದ ಭಾರತ ತಂಡವು 8 ವಿಕೆಟ್​ಗಳನ್ನು ಕಳೆದುಕೊಂಡು 48.5 ಓವರ್​ಗೆ 248 ಬಾರಿಸಿ ಗೆಲುವಿನ ನಗೆ ಬೀರಿತು. ತಂಡದ ಪರ ಸಚಿನ್ ದಾಸ್ ಅವರು 1 ಸಿಕ್ಸ್…

Read More

ಅಂತರಾಷ್ಟ್ರೀಯ ಟೆನ್ನಿಸ್ (Tennis) ಜಗತ್ತಿನ ವರ್ಲ್ಡ್‌‌ ಕಪ್ ಎಂದೇ ಹೆಸರು ಪಡೆದಿರುವ ಟೆನ್ನಿಸ್ ಟೀಮ್ ಇವೆಂಟ್ ಪ್ರತಿಷ್ಠಿತ ಡೇವಿಸ್ ಕಪ್‍ನಲ್ಲಿ (Davis Cup) ಭಾರತವು ಪಾಕಿಸ್ತಾನ (Pakistan) ತಂಡವನ್ನು 4-0 ರಿಂದ ಸೋಲಿಸಿ, ವರ್ಲ್ಡ್‌‌ ಕಪ್ ಗ್ರೂಪ್ 1ರಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ. ಭಾರತ ತಂಡದಲ್ಲಿ ಸ್ಥಾನ ಪಡೆದಿರುವ 28ರ ಹರೆಯದ ಕೊಡಗಿನ ಕಲಿಯಂಡ ನಿಕ್ಕಿ ಪೂಣಚ್ಚ ಅವರು ಕೂಡ ತಂಡದ ವಿಜಯಕ್ಕೆ ಕೈ ಜೋಡಿಸಿದ್ದಾರೆ. 60 ವರ್ಷಗಳ ಬಳಿಕ ಭಾರತ ಡೇವಿಸ್ ಕಪ್ ತಂಡವು ಪಾಕಿಸ್ತಾನಕ್ಕೆ ತೆರಳಿದ್ದು, ಆತಿಥೇಯ ತಂಡವನ್ನು ಭಾನುವಾರ 4 ಪಂದ್ಯಗಳಲ್ಲೂ ಸೋಲಿಸಿ ಡೇವಿಸ್ ಕಪ್‍ನ ವಲ್ರ್ಡ್ ಗ್ರೂಪ್ 1ರಲ್ಲಿ ಸ್ಥಾನ ಪಡೆದುಕೊಂಡಿದೆ. 4ನೇ ಪಂದ್ಯವು ಸಿಂಗಲ್ಸ್ ವಿಭಾಗದಲ್ಲಿ ನಡೆದಿದ್ದು, ಕೊಡಗಿನ ಕಲಿಯಂಡ ನಿಕ್ಕಿ ಪೂಣಚ್ಚ ಅವರು ಎದುರಾಳಿ ಮಹಮ್ಮದ್ ಶೋಯಬ್ ಅವರನ್ನು 6-3, 6-4ರ ನೇರ ಸೆಟ್‍ಗಳಲ್ಲಿ ಮಣಿಸಿ ತಂಡದ ಗೆಲುವಿಗೆ ಸಹಕರಿಸಿದರು ಡಬಲ್ಸ್ ವಿಭಾಗದಲ್ಲಿ ಭಾರತದ ಯುಕಿ ಬಾಂಬ್ರಿ – ಸಾಕೆತ್ ಮೈನೆನಿ ಜೋಡಿ ಗೆಲುವು…

Read More

ದಾವಣಗೆರೆ:- ಲೋಕಾಯುಕ್ತ ಬಲೆಗೆ ಬಿದ್ದು ಪಕ್ಷದಿಂದ ಉಚ್ಛಾಟನೆಗೊಂಡಿರುವ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಮಲ್ಲಿಕಾರ್ಜುನ ಅವರು ಇಂದು ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಇದರ ಮಧ್ಯೆ ಕಾಂಗ್ರೆಸ್​​ ಮಾಜಿ ಶಾಸಕ ಎಚ್. ಪಿ. ರಾಜೇಶ್ ಬಿಜೆಪಿಯತ್ತ ಮುಖ ಮಾಡಿದ್ದಾರೆ. ಜಿಲ್ಲೆಯ ಜಗಳೂರು ಪರಿಶಿಷ್ಟ ಪಂಗಡ ಮೀಸಲು‌‌ ಕ್ಷೇತ್ರದ ಕಾಂಗ್ರೆಸ್​ನ ಮಾಜಿ ಶಾಸಕ ಎಚ್. ಪಿ. ರಾಜೇಶ್ ಅವರು ಬಿಜೆಪಿ ಸೇರ್ಪಡೆಗೆ ಮುಂದಾಗಿದ್ದಾರೆ. ಆದ್ರೆ, ಯಾವಾಗ ಸೇರ್ಪಡೆ ಎಂದು ದಿನಾಂಕ ನಿಗದಿಯಾಗಿಲ್ಲ. ಎಚ್.ಪಿ.ರಾಜೇಶ್ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಸಿಗದಿದ್ದಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಅಲ್ಪ ಮತಗಳಿಂದ ಸೋಲು ಕಂಡಿದ್ದರು. ರೇಷ್ಮೆ ಇಲಾಖೆಯಲ್ಲಿ ಸಹಾಯಕ ನಿರ್ದೇಶಕ ಆಗಿದ್ದ ಎಚ್ ಪಿ ರಾಜೇಶ್, 2008ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. ಬಳಿಕ 2013ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಬಳಿಕ 2018ರಲ್ಲಿ ಕಾಂಗ್ರೆಸ್​ನಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. ಆದ್ರೆ, 2023ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗದ ಹಿನ್ನಲೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ…

Read More

ಬೆಂಗಳೂರು:- ಗಂಗಮ್ಮನ ಗುಡಿ ಠಾಣಾ ವ್ಯಾಪ್ತಿಯಲ್ಲಿ ಮಿಲಿಟರಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಪರಶುರಾಮ್ ಎಂಬ ವ್ಯಕ್ತಿ ಎಣ್ಣೆ ಮತ್ತಿನಲ್ಲಿ ಪರಿಚಿತರ ಮನೆಗೆ ಹೋಗಿದ್ದು ಮನೆಯಲ್ಲಿದ್ದ ಯುವಕನ ಮೇಲೆ ಗುಂಡು ಹಾರಿಸಿದ ಘಟನೆ ಜರುಗಿದೆ. ಮನೆಗೆ ಎಂಟ್ರಿ ಕೊಟ್ಟ ಪರಶುರಾಮ್ ಅವರನ್ನು ಮನೆಯೊಳಗೆ ಬರದಂತೆ ಸೂರಜ್ ತಡೆದಿದ್ದು ಕೋಪಗೊಂಡ ಪರಶುರಾಮ್ ತಮ್ಮ ಕೈಯಲ್ಲಿದ್ದ ಗನ್​ನಿಂದ ಸೂರಜ್ ಮೇಲೆ ಗುಂಡು ಹಾರಿಸಿದ್ದಾರೆ. ಸದ್ಯ ಅದೃಷ್ಟವಶಾತ್ ಗುಂಡು ಗೋಡೆಗೆ ತಾಕಿದ್ದು ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ನಿನ್ನೆ ಮಧ್ಯರಾತ್ರಿ 12ಗಂಟೆ ಸುಮಾರಿಗೆ ಗಂಗಮ್ಮನ ಗುಡಿ ಠಾಣಾ ವ್ಯಾಪ್ತಿಯಲ್ಲಿ ಗುಂಡಿನ ದಾಳಿ ನಡೆದಿದೆ. ಕುಡಿದ ಮತ್ತಿನಲ್ಲಿದ್ದ ಪರಶುರಾಮ್ ಏಕಾ ಏಕಿ‌ ಪರಿಚಿತರ ಮನೆಗೆ ಎಂಟ್ರಿ ಕೊಟ್ಟಿದ್ದು ಮನೆಯೊಳಗೆ ಬಿಟ್ಟಿಲ್ಲ ಎಂದ ಯುವಕನ ಮೇಲೆ ಗುಂಡು ಹಾರಿಸಿದ್ದಾರೆ. ಮಿಲಿಟರಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಪರಶುರಾಮ್ ಬಳಿ ಲೈಸೆನ್ಸ್ ಇದ್ದ ಗನ್ ಇತ್ತು. ಪರಶುರಾಮ್ ತನ್ನ ಜೊತೆ ಗನ್ ತಂದಿದ್ದರು. ಮಧ್ಯರಾತ್ರಿ ಸೂರಜ್​ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಈ ವೇಳೆ ಸೂರಜ್…

Read More

ಇತ್ತೀಚಿನ ದಿನಗಳಲ್ಲಿ ಯಾರೂ ಕೂಡ ದಪ್ಪ ಆಗಲು ಇಷ್ಟ ಪಡುವುದಿಲ್ಲ ಯಾಕೆಂದರೆ ಸ್ಲಿಮ್‌ ಬ್ಯೂಟಿ ಆಗಿರಲು ಹೆಚ್ಚು ಇಷ್ಟ ಪಡುತ್ತಾರೆ ಆದರೆ ಯಾರಾದ್ರೂ ದಪ್ಪ ಆದ್ರೆ ಅವರಿಗೇ ಅವರಷ್ಠ ಬೈದುಕೊಳ್ಳುತ್ತು ಊಟ ಬಿಡುತ್ತಾ ಒಂದು ಮಾಡಲು ಹೋಗಿ ಇನ್ನೋದು ಮಾಡಿಕೊಳ್ಳುವವರೇ ಹೆಚ್ಚು ಆದರೆ ದಪ್ಪ ಆಗುತ್ತಿರುವವರಿಗೆ ದೇಹದ ತೂಕ ಇಳಿಕೆಗೆ ಸಿಂಪಲ್  ಈ ಮನೆ ಮದ್ದನ್ನಯ ಟ್ರೈ ಮಾಡಿ * ಇಂಗು ನೀರು ಕುಡಿಯುವುದರಿಂದ ಹೊಟ್ಟೆ ಮತ್ತು ಸೊಂಟದ ಕೊಬ್ಬು ಕಡಿಮೆಯಾಗಿ ತೂಕ ಇಳಿಕೆಯಾಗುತ್ತದೆ. * ಅತಿಯಾದ ತೂಕವನ್ನು ಹೊಂದಿದವರು ಪ್ರತಿದಿನ ಒಂದೆರಡು ಚಮಚ ಜೇನುತುಪ್ಪವನ್ನು ಸೇವಿಸಿದರೆ ಶರೀರದ ಅನವಶ್ಯಕ ತೂಕ ಕಡಿಮೆ ಆಗುವುದು.  ಹಾಲಿನ ಸ್ನಾನದಿಂದ ಚರ್ಮವು ಮೃದುವಾಗುವುದರ ಜೊತೆಗೆ ದೇಹ ಹಗುರವಾಗಿ ತೂಕ ಇಳಿಕೆಯಾಗುತ್ತದೆ. * ಕರಿಬೇವಿನ ಸೊಪ್ಪಿನ ಚಟ್ನಿಯನ್ನು ದಿನವೂ ಮಿತವಾಗಿ ಉಪಯೋಗ ಮಾಡುವುದರಿಂದ ಬೊಜ್ಜು ಕರಗಿ ದೇಹದ ತೂಕ ಕಡಿಮೆಯಾಗುತ್ತದೆ. * ಕುಂಬಳಕಾಯಿ ಸೇವನೆಯಿಂದ ಬೊಜ್ಜು ಕರಗಿ ತೂಕ ಇಳಿಕೆಯಾಗುತ್ತದೆ. * ರಾಗಿ ಹಿಟ್ಟಿನಲ್ಲಿ ಮುದ್ದೆ…

Read More

ಇಂದಿನ ದಿನಗಳಲ್ಲಿ ನಾವೆಲ್ಲರೂ ಗಮನಿಸಿರುವ ಹಾಗೆ, ಹೆಚ್ಚಿನವರು ಕೊಲೆಸ್ಟ್ರಾಲ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಅನುಸರಿಸುತ್ತಿರುವ ಜೀವನ ಶೈಲಿ ಹಾಗೂ ಅನಾರೋಗ್ಯಕಾರಿ ಆಹಾರ ಪದ್ಧತಿ ನೇರ ಕಾರಣ ಎಂದು ಹೇಳಬಹುದು. ನಿಮಗೆ ಗೊತ್ತಿರಲಿ ದೇಹದ ರಕ್ತದಲ್ಲಿ ಒಮ್ಮೆ ಕೊಲೆಸ್ಟ್ರಾಲ್ ಅಂಶ ಹೆಚ್ಚಾದರೆ ಹಲವಾರು ಆರೋಗ್ಯ ರೀತಿಯಲ್ಲಿ ಆರೋಗ್ಯ ಸಮಸ್ಯೆಗಳು ಶುರುವಾ ಗುತ್ತವೆ. ಪ್ರಮುಖವಾಗಿ ಹೃದಯದ ಆರೋಗ್ಯಕ್ಕೆ, ಸರಾಗವಾಗಿ ರಕ್ತ ಸಂಚಾರವನ್ನು ಪೂರೈಸಲು ಆಗದೇ, ಹೃದಯಘಾತದಂತಹ ಸಮಸ್ಯೆಗಳು ಎದು ರಾಗುವ ಸಾಧ್ಯತೆ ಹೆಚ್ಚಿರುತ್ತದೆ. ಆರೋಗ್ಯ ತಜ್ಞರು ಕೂಡ ಎಚ್ಚರಿಸುತ್ತಾರೆ! ಈ ಬಗ್ಗೆ ಆರೋಗ್ಯ ತಜ್ಞರು ಕೂಡ ಹೇಳುವ ಪ್ರಕಾರ, ಇಂದಿನ ದಿನಗಳಲ್ಲಿ ಸಣ್ಣ-ವಯಸ್ಸಿನವರಿಗೂ ಕೂಡ ಕೆಟ್ಟ ಕೊಲೆಸ್ಟ್ರಾಲ್ ಅಂಶ ಹೆಚ್ಚಾಗಿ, ಬಹಳ ಬೇಗನೆ ಹೃದಯಾಘಾತದಿಂದ ತಮ್ಮ ಪ್ರಾಣ ಕಳೆದು ಕೊತ್ತಿದ್ದಾರೆ ಎಂದು ಎಚ್ಚರಿಕೆಯನ್ನು ನೀಡುತ್ತಾರೆ. ಹೀಗಾಗಿ ಯಾವುದೇ ಕಾರಣಕ್ಕೂ ಕೂಡ, ಕೆಟ್ಟಕೊಲೆ ಸ್ಟ್ರಾಲ್ ಅಂಶ ಹೆಚ್ಚಾಗದಂತೆ ನೋಡಿಕೊಳ್ಳಬೇಕು. ಇದ ಕ್ಕಾಗಿ ಸರಿಯಾದ ಆಹಾರ ಪದ್ಧತಿ ಹಾಗೂ ಆರೋಗ್ಯ ಕಾರಿ ಜೀವನ ಶೈಲಿಯನ್ನು…

Read More

ಬೆಂಗಳೂರು : ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಬೆಂಗಳೂರು ಮಹಾನಗರ ಪಾಲಿಕೆ ಗುಡ್ ನ್ಯೂಸ್ ಕೊಟ್ಟಿದೆ. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಕಟ್ಟಡ ಮಾಲೀಕರಿಗೆ ಶೇ.50 ರಷ್ಟು ತೆರಿಗೆ ಪಾವತಿಗೆ ಪಾಲಿಕೆ ಆಫರ್ ನೀಡಿದೆ. ಆರ್ಥಿಕ ವರ್ಷ ಮುಗಿಯುವುದರೊಳಗೆ ಆದಾಯ ಗುರಿ ತಲುಪಲು ಬಿಬಿಎಂಪಿ ಪ್ಲ್ಯಾನ್ ಮಾಡಿದ್ದು ರಿಯಾಯಿತಿ ನೀಡಿದೆ. ಬಾಕಿ ಇರೋ ತೆರಿಗೆಯಲ್ಲಿ ಅರ್ಧದಷ್ಟು ತೆರಿಗೆ ಪಾವತಿ ಮಾಡಿ ಅಪೀಲು ಸಲ್ಲಿಸಿದವರಿಗೆ ಮಾತ್ರ ತೆರಿಗೆ ರಿಯಾಯಿತಿ ನೀಡಲಾಗುತ್ತೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ. ಸ್ಥಳೀಯ ಪಾಲಿಕೆ ಕಂದಾಯ ಕಚೇರಿಯಲ್ಲಿ ಅರ್ಧ ತೆರಿಗೆ ಕಟ್ಟಿ, ಉಳಿದರರ್ಧ ತೆರಿಗೆ ಮನ್ನಾಕೆ ಮನವಿ ಸಲ್ಲಿಸಬೇಕು. ನೋಟಿಸ್ ಪಡೆದ ತೆರಿಗೆದಾರರು ಅರ್ಧದಷ್ಟು ತೆರಿಗೆ ಪಾವತಿಸಿ ನಂತರ ಪಾಲಿಕೆಗೆ ಅಪೀಲ್ ಸಲ್ಲಿಸಬೇಕು. ಸರ್ಕಾರ ಆಸ್ತಿ ತೆರಿಗೆ ಸಂಗ್ರಹದಲ್ಲಿ ತಿದ್ದುಪಡಿ ಮಾಡಿದ್ರೆ ಅರ್ಧದಷ್ಟು ತೆರಿಗೆ ವಿನಾಯಿತಿಯಾಗುವ ಸಾಧ್ಯತೆ ಇದೆ. ಸದ್ಯ ಬಾಕಿ ಇರೋ ತೆರಿಗೆಯಲ್ಲಿ ಅರ್ಧದಷ್ಟು ತೆರಿಗೆ ಪಾವತಿ ಮಾಡಿ ಅಪೀಲು ಸಲ್ಲಿಸಿದವರಿಗೆ ಮಾತ್ರ ತೆರಿಗೆ…

Read More

ಸ್ತನ ಕ್ಯಾನ್ಸರ್ ಎನ್ನುವುದು ಇತ್ತೀಚೆಗೆ ಸಾಮಾನ್ಯವಾಗಿ ಹೆಚ್ಚು ಕಂಡುಬರುತ್ತಿರುವ ಕ್ಯಾನ್ಸರ್​ನ ವಿಧವಾಗಿದೆ. ಎದೆಹಾಲಿನ ನಾಳಗಳು ಮತ್ತು ಸ್ತನದ ಹಾಲು ಉತ್ಪಾದಿಸುವ ಲೋಬ್ಲುಗಳಲ್ಲಿ ಬೆಳವಣಿಗೆಯಾಗುವ ಕ್ಯಾನ್ಸರ್ ಇದಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಹೇಳುವಂತೆ ಸ್ತನ ಕ್ಯಾನ್ಸರ್ ವಿಶ್ವದಲ್ಲೇ ಅತ್ಯಂತ ಪ್ರಚಲಿತದಲ್ಲಿರುವ ಕ್ಯಾನ್ಸರ್ ಆಗಿದ್ದು, 2.3 ಮಿಲಿಯನ್ ಮಹಿಳೆಯರು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. 2020ರಲ್ಲಿ ಜಾಗತಿಕವಾಗಿ 6,85,000 ಜನರು ಸ್ತನ ಕ್ಯಾನ್ಸರ್​ನಿಂದ ಸಾವನ್ನಪ್ಪಿದ್ದಾರೆ. ಸ್ತನ ಕ್ಯಾನ್ಸರ್ ಆರಂಭಿಕ ಹಂತದಲ್ಲೇ ಪತ್ತೆಯಾದರೆ ಅದನ್ನು ಗುಣಪಡಿಸಬಹುದು. ಆದರೆ, ಸೂಕ್ತ ಸಮಯಕ್ಕೆ ಚಿಕಿತ್ಸೆ ನೀಡದಿದ್ದರೆ ಅದು ಇತರ ಅಂಗಾಂಶಗಳು ಮತ್ತು ಅಂಗಗಳಿಗೆ ಹರಡಿ, ಜೀವಕ್ಕೆ ಆಪತ್ತು ಉಂಟುಮಾಡಬಹುದು. ಆರಂಭಿಕ ಹಂತದಲ್ಲಿ ಸ್ತನ ಕ್ಯಾನ್ಸರ್ ಪತ್ತೆಹಚ್ಚಲು ಅದರ ಲಕ್ಷಣಗಳ ಬಗ್ಗೆ ನಮಗೆ ತಿಳಿದಿರಬೇಕು. ಡಿಂಪ್ಲಿಂಗ್ ಸೇರಿದಂತೆ ನಿಮ್ಮ ಸ್ತನ ಪ್ರದೇಶದಲ್ಲಿ ಅಥವಾ ಅದರ ಸುತ್ತಲೂ ಚರ್ಮದ ವಿನ್ಯಾಸದಲ್ಲಿನ ಬದಲಾವಣೆಯು ನೀವು ನೋಡಬಹುದಾದ ಬದಲಾವಣೆಗಳಲ್ಲಿ ಒಂದಾಗಿದೆ. ಚರ್ಮದ ಡಿಂಪ್ಲಿಂಗ್ ಸ್ತನದಲ್ಲಿನ ಸಣ್ಣ ಚಾನಲ್‌ಗಳನ್ನು ದುಗ್ಧರಸ ನಾಳಗಳು ಎಂದು ಸೂಚಿಸುತ್ತದೆ. ಇದು ತ್ಯಾಜ್ಯ…

Read More

ಬೆಂಗಳೂರು:- ಬೆಲೆ ಏರಿಕೆಯಿಂದ ತತ್ತರಿಸುವ ಜನರಿಗೆ ಪರಿಹಾರ ನೀಡಲು ಕೇಂದ್ರ ಸ್ರಕರಾ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಆಹಾರ ಧಾನ್ಯಗಳನ್ನು ಕಡಿಮೆ ಬೆಲೆಯಲ್ಲಿ ಜನ ಸಾಮಾನ್ಯರಿಗೆ ಒದಗಿಸುವ ನಿಟ್ಟಿನಲ್ಲಿಯೂ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಭಾರತ್ ದಾಲ್, ಭಾರತ್ ಗೋಧಿ ಹಿಟ್ಟಿನ ಬಳಿಕ ಇದೀಗ ಭಾರತ್ ಅಕ್ಕಿ ಮಾರಾಟಕ್ಕೆ ಸರ್ಕಾರ ಮುಂದಾಗಿದೆ. ಈ ಯೋಜನೆ ಅಡಿಯಲ್ಲಿ ಕೇವಲ 29 ರೂಪಾಯಿಗೆ ಜನ ಸಾಮಾನ್ಯರಿಗೆ ಅಕ್ಕಿ ಮಾರಾಟ ಮಾಡಲಾಗುವುದು. ಅದರಂತೆ ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರು ಈ ಭಾರತ್ ಬ್ರಾಂಡ್ ಅಕ್ಕಿ ಯೋಜನೆಗೆ ಮಂಗಳವಾರ ಚಾಲನೆ ನೀಡಿದರು. ಮತ್ತೊಂದೆಡೆ ವಸಂತ ನಗರದ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ನೆಫೆಡ್ ಕಚೇರಿ ಮುಂಭಾಗದಲ್ಲಿ ಭಾರತ್ ಅಕ್ಕಿ ಮಾರಟ ವಾಹನಗಳಿಗೆ ಚಾಲನೆ ನೀಡಲಾಗಿದೆ. ಎಫ್‌ಸಿಐ ಚೆರ್ಮನ್ ಭೂಪೇಂದ್ರ ಸಿಂಗ್ ಬಾಟಿ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಒಟ್ಟು 7 ವಾಹನಗಳಿಗೆ ಚಾಲನೆ ನೀಡಿದರು. ಭಾರತ್ ಅಕ್ಕಿ ಯೋಜನೆಗೆ ಚಾಲನೆ ನೀಡದ ಬಳಿಕ…

Read More

ಉತ್ತರ ಪ್ರದೇಶ:- ಪ್ರಿಯ ಓದುಗರೆ IAS, IPS ಪಾಸ್ ಮಾಡುವುದು ಅಷ್ಟು ಸುಲಭವಲ್ಲ ಎಂಬುವುದು ಎಲ್ಲರಿಗೂ ತಿಳಿದ ವಿಷಯ. ಅನೇಕ ವಿದ್ಯಾರ್ಥಿಗಳು ಈ UPSC ಪರೀಕ್ಷೆಗಳನ್ನು ಭೇದಿಸಲು ವರ್ಷಗಳ ಕಾಲ ತಯಾರಿ ನಡೆಸುತ್ತಾರೆ ಮತ್ತು ಅದರ ನಂತರವೂ ಹೆಚ್ಚಿನವರು ಬಯಸಿದ ಶ್ರೇಣಿಯನ್ನು ಪಡೆಯಲು ವಿಫಲರಾಗಿ ಬೇರೆ ಬದುಕಿನತ್ತ ಹೊರಳಿಕೊಳ್ಳುತ್ತಾರೆ. ಆದರೆ, ಈ ಕಬ್ಬಿಣದ ಕಡಲೆಯಂಥ ಪರೀಕ್ಷೆಯನ್ನು ನೀರು ಕುಡಿದಷ್ಟು ಸಲೀಸಾಗಿ ಪಾಸ್ ಮಾಡಿಕೊಳ್ಳುತ್ತಾರೆ ಉತ್ತರ ಪ್ರದೇಶದ ಮಾಧೋಪಟ್ಟಿ ಎಂಬ ಹಳ್ಳಿಯ ಜನರು. ಅರೆ, ಈ ಹಳ್ಳಿಯ ನೀರು, ಗಾಳಿಯಲ್ಲೇನೋ ಮ್ಯಾಜಿಕ್ ಇರಬೇಕು. ಇಲ್ಲದಿದ್ದಲ್ಲಿ ಕೇವಲ 75 ಮನೆಗಳ ಹಳ್ಳಿಯಲ್ಲಿ 51ಕ್ಕೂ ಹೆಚ್ಚು ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳಿರಲು ಹೇಗೆ ಸಾಧ್ಯ?! ಹೌದು, ಈ ಊರಿನಲ್ಲಿ ಮನೆಗೊಬ್ಬ ಐಎಎಸ್, ಐಪಿಎಸ್ ಇರುವುದರಿಂದಲೇ ಈ ಊರನ್ನು ಹಳ್ಳಿಯಲ್ಲ- ಇದೊಂದು ಐಎಎಸ್ ಫ್ಯಾಕ್ಟರಿ ಎಂದು ಕರೆಯಲಾಗುತ್ತದೆ. ಇದು ಮಾಧೋಪಟ್ಟಿಯನ್ನು ಭಾರತದಲ್ಲಿ ನಾಗರಿಕ ಸೇವೆಗಳಲ್ಲಿ ಅತಿ ಹೆಚ್ಚು ಅಭ್ಯರ್ಥಿಗಳನ್ನು ಹೊಂದಿರುವ ಗ್ರಾಮವನ್ನಾಗಿ ಮಾಡಿದೆ. ಐಎಎಸ್ ಫ್ಯಾಕ್ಟರಿ’ ಎಂಬ…

Read More