Author: AIN Author

ಬೆಂಗಳೂರು: ಈ ಬಾರಿಯ ಪ್ರೇಮಿಗಳ ದಿನದ ಸಂಭ್ರಮಕ್ಕೆ ಕಾನೂನು ತೊಡಕುಂಟಾಗಲಿದೆ. ಫೆಬ್ರವರಿ 14ರ ಸಂಜೆ 5 ಗಂಟೆಯಿಂದ ಫೆಬ್ರವರಿ 17 ಬೆಳಗ್ಗೆ 6. ಗಂಟೆವರೆಗೆ ಬೆಂಗಳೂರು ಮಹಾ ನಗರದ ಹಲವೆಡೆ ಮದ್ಯ ಮಾರಾಟಕ್ಕೆ ನಿರ್ಬಂಧ ವಿಧಿಸಲಾಗಿದೆ. ಪ್ರೇಮಿಗಳ ದಿನ ಆಚರಿಸಲಾಗುವ ಫೆಬ್ರವರಿ 14ರಂದೇ ಮದ್ಯ ಮಾರಾಟಕ್ಕೆ ನಿರ್ಬಂಧ ಜಾರಿಯಾಗಲಿದೆ. ಬೆಂಗಳೂರು ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಉಪ ಚುನಾವಣೆ ಇರುವ ಕಾರಣ ಫೆಬ್ರವರಿ 16 ರಿಂದ ಬೆಂಗಳೂರಿನಲ್ಲಿ ಮದ್ಯ ಮಾರಾಟಕ್ಕೆ ನಿರ್ಬಂಧ ಜಾರಿಯಲ್ಲಿ ಇರಲಿದೆ. ಪೊಲೀಸ್ ಕಮಿಷನರೇಟ್ ವ್ಯಾಪ್ತಿಗೆ ಹೊರತಾದ ಪ್ರದೇಶಗಳಲ್ಲಿ ಮದ್ಯ ಮಾರಾಟಕ್ಕೆ ನಿರ್ಬಂಧ ಇರಲಿದೆ ಎಂಬ ಮಾಹಿತಿ ಲಭ್ಯವಾಗಿದೆ. 1951ರ ಪ್ರಜಾ ಪ್ರತಿನಿಧಿ ಕಾಯ್ದೆಯ ಸೆಕ್ಷನ್ 135 (ಸಿ) ಹಾಗೂ 1967ರ ಕರ್ನಾಟಕ ಅಬಕಾರಿ ಕಾಯ್ದೆಯ ನಿಯಮ 10 (ಬಿ) ಅಡಿಯಲ್ಲಿ ಈ ನಿರ್ಬಂಧ ಜಾರಿಗೆ ತರಲಾಗಿದೆ ಎಂದು ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಆಯುಕ್ತ ಕೆ. ಎ. ದಯಾನಂದ ಅವರು ಮಾಹಿತಿ ನೀಡಿದ್ಧಾರೆ. ಈ ಚುನಾವಣೆಯ ಮತದಾನ ಪ್ರಕ್ರಿಯೆಯಲ್ಲಿ ಬೆಂಗಳೂರು…

Read More

ನವದೆಹಲಿ: ಉದ್ಯೋಗದಲ್ಲಿ ಮೀಸಲಾತಿ (Reservation in Job) ನೀಡುವುದನ್ನು ಜವಾಹರಲಾಲ್‌ ನೆಹರು (Jawaharlal Nehru) ವಿರೋಧಿಸಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಹೇಳಿದ್ದಾರೆ ಕಾಂಗ್ರೆಸ್ಸಿಗೆ ಅಂಬೇಡ್ಕರ್‌ ಅವರಿಗೆ ಭಾರತರತ್ನ ಕೊಡುವ ಮನಸ್ಸು ಇರಲಿಲ್ಲ. ಅದರೆ ಬಿಜೆಪಿ ಬೆಂಬಲಿತ ಸರ್ಕಾರ ಅಂಬೇಡ್ಕರ್‌ ಅವರಿಗೆ ಭಾರತರತ್ನ ಪ್ರಶಸ್ತಿ ಘೋಷಿಸಿತು ಎಂದು. ದಿನ ದಲಿತರ ನಾಯಕ ಸೀತಾರಾಮ್‌ ಕೇಸರಿ ಅವರಿಗೂ ಕಾಂಗ್ರೆಸ್‌ ಅವಮಾನ ಮಾಡಿತ್ತು ಎಂದು ಕಿಡಿಕಾರಿದರು. ಯುಪಿಎ ಸರ್ಕಾರದ 10 ವರ್ಷಗಳ ಅಧಿಕಾರದ ಬಗ್ಗೆ ದೇಶ ಆಕ್ರೋಶಗೊಂಡಿದ್ದು ಏಕೆ?. ನಾವು ಹೇಳಿದ್ದಕ್ಕೆ ಜನ ಕೋಪಗೊಂಡಿಲ್ಲ. ಕಾಂಗ್ರೆಸ್​ ದೇಶವನ್ನು ಉತ್ತರ-ದಕ್ಷಿಣ ಎಂದು ಇಬ್ಭಾಗ ಮಾಡುತ್ತಿದೆ. ತನ್ನ ಪರಿವಾರದವರಿಗೆ ಭಾರತರತ್ನ ನೀಡಿತ್ತು. ಆದರೆ ಡಾ.ಬಿಆರ್ ಅಂಬೇಡ್ಕರ್​ ಅವರಿಗೆ ಭಾರತ ರತ್ನ ನಿರಾಕರಣೆ ಮಾಡಿತ್ತು. ಈ ಭಾರತದ ಭೂಮಿಯನ್ನು ಶತ್ರುಗಳಿಗೆ ಕಾಂಗ್ರೆಸ್ ನೀಡಿತ್ತು ಎಂದು ಮೋದಿ ರಾಜ್ಯಸಭೆಯಲ್ಲಿ ಹೇಳಿದ್ದಾರೆ. ಆದಿವಾಸಿ ಮಹಿಳೆ ರಾಷ್ಟ್ರಪತಿಯಾಗಿರುವುದನ್ನು ಕಾಂಗ್ರೆಸ್‌ ಸಹಿಸಲಿಲ್ಲ. ಈಗ ಕಾಂಗ್ರೆಸ್ಸಿಗರು ರಾಷ್ಟ್ರಪತಿ ಕುರಿತು ಅಗೌರವದಿಂದ ಮಾತನಾಡುತ್ತಿದ್ದಾರೆ. ಆದಿವಾಸಿ…

Read More

ಡೆಹ್ರಾಡೂನ್‌: ಉತ್ತರಾಖಂಡ (Uttarakhand) ವಿಧಾನಸಭೆಯಲ್ಲಿ ಏಕರೂಪ ನಾಗರಿಕ ಸಂಹಿತೆ (Uniform Civil Code) ಮಸೂದೆ ಮಂಡನೆ ಆಗಿದೆ. ಲಿವ್ ಇನ್ ಸಂಬಂಧಕ್ಕೆ (Live in Relationship) ನೋಂದಣಿ ಕಡ್ಡಾಯ. ಲಿವ್ ಇನ್ ಸಂಬಂಧದಿಂದ ಜನಿಸಿದ ಮಕ್ಕಳಿಗೆ ಕಾನೂನು ಮಾನ್ಯತೆ. ಇದು ಉತ್ತರಾಖಂಡ ಸರ್ಕಾರ ಮಂಡಿಸಿದ ಐತಿಹಾಸಿಕ ಐತಿಹಾಸಿಕ ಏಕರೂಪ ನಾಗರಿಕ ಸಂಹಿತೆ ಮಸೂದೆಯಲ್ಲಿರುವ ಪ್ರಮುಖ ಅಂಶಗಳು. ಮಸೂದೆಯಲ್ಲಿ ಏನಿದೆ? ರಾಜ್ಯದ ಮುಸ್ಲಿಮರು (Muslims) ಸೇರಿದಂತೆ ಎಲ್ಲಾ ಧರ್ಮದವರು ಎರಡನೇ ವಿವಾಹವಾಗುವುದು ಅಪರಾಧ. ಒಂದು ಮದುವೆಗೆ ಮಾತ್ರ ಕಾನೂನಿನ ಮಾನ್ಯತೆ ಇರಲಿದೆ.  ಹಾಲಿ ಷರಿಯಾ ಕಾನೂನಿನಡಿ ಮುಸ್ಲಿಮರು ಕಾನೂನು ಬದ್ಧವಾಗಿಯೇ 3 ವಿವಾಹವಾಗುವ ಅವಕಾಶವಿದೆ. ವಿವಾಹ, ವಿಚ್ಛೇದನ, ಆಸ್ತಿ, ಉತ್ತರದಾಯಿತ್ವ ಎಲ್ಲಾ ವಿಚಾರದಲ್ಲಿ ಎಲ್ಲಾ ಧರ್ಮದ ಜನರಿಗೆ ಒಂದೇ ನಿಯಮ ಅನ್ವಯವಾಗುತ್ತದೆ ಲಿವ್ ಇನ್ ಸಂಬಂಕ್ಕೆ ನೋಂದಣಿ ಕಡ್ಡಾಯ ಮಾಡಲಾಗಿದೆ. ನೋಂದಣಿ 1 ತಿಂಗಳು ತಡವಾದರೆ 3 ತಿಂಗಳು ಜೈಲು, 25ಸಾವಿರ ದಂಡ ವಿಧಿಸಲಾಗುತ್ತದೆ. ನೋಂದಣಿ ಸಂಶಯಾಸ್ಪದ ಆಗಿದ್ದರೆ ತನಿಖೆ ನಡೆಸಲಾಗುತ್ತದೆ. ಲಿವ್ ಇನ್…

Read More

ಮುಂಬೈ: ಅಯೋಧ್ಯೆಯಲ್ಲಿ (Ayodhya) ನಿರ್ಮಾಣವಾಗಲಿರುವ ಮಸೀದಿಯ ಅಡಿಪಾಯಕ್ಕೆ ಮೆಕ್ಕಾದಿಂದ  (Mecca) ಪವಿತ್ರ ಇಟ್ಟಿಗೆಯನ್ನು  (Brick) ತರಲಾಗಿದೆ. ರಾಮಜನ್ಮಭೂಮಿ ವಿವಾದದಲ್ಲಿ ಸುಪ್ರೀಂ ಕೋರ್ಟ್ (Supreme Court)  ಆದೇಶದ ನಂತರ ಮುಸ್ಲಿಮರಿಗೆ ಪರಿಹಾರವಾಗಿ ನೀಡಿದ ಅಯೋಧ್ಯೆಯ ಭೂಮಿಯಲ್ಲಿ ಹೊಸ ಮಸೀದಿಯ ಅಡಿಪಾಯಕ್ಕೆ ಮೆಕ್ಕಾದಲ್ಲಿ ಪವಿತ್ರಗೊಳಿಸಲ್ಪಟ್ಟಿರುವ ಇಟ್ಟಿಗೆಯನ್ನು ಬಳಸಲಾಗುತ್ತದೆ ಈ ಪವಿತ್ರ ಇಟ್ಟಿಗೆಯನ್ನು ಕಪ್ಪು ಮಣ್ಣಿನಿಂದ ಮಾಡಿದ್ದು, ಅದನ್ನು ಚಿನ್ನದಲ್ಲಿ ಕೆತ್ತಿ ಪವಿತ್ರ ಕುರಾನ್‌ನ ಕೆಲವು ಉಪದೇಶಗಳನ್ನು ಹೊಂದಿದೆ ಎಂದು ಇಂಡೋ-ಇಸ್ಲಾಮಿಕ್ ಸಾಂಸ್ಕೃತಿಕ ಫೌಂಡೇಶನ್ (ಐಐಸಿಎಫ್) ಪಾದಾಧಿಕಾರಿಗಳು ತಿಳಿಸಿದ್ದಾರೆ. ಜೊತೆಗೆ ಈ ಇಟ್ಟಿಗೆಯನ್ನು ಮಾರ್ಚ್ 12 ರಂದು ರಂಜಾನ್ ಈದ್ ನಂತರ ಅಯೋಧ್ಯೆಯ ಮಸೀದಿ ಸ್ಥಳವಿರುವ ಧನ್ನಿಪುರ ಗ್ರಾಮಕ್ಕೆ ಕೊಂಡೊಯ್ಯಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

Read More

ನವದೆಹಲಿ: ಪ್ರತಿಪಕ್ಷಗಳ ಚಿಂತನೆ ಹಳೆಯದಾಗಿದೆ ಮತ್ತು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ (Congress) 40 ಸ್ಥಾನಗಳನ್ನಾದರೂ ಉಳಿಸಿಕೊಳ್ಳಲಿ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ವ್ಯಂಗ್ಯವಾಡಿದ್ದಾರೆ. ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯ ಭಾಷಣ ಮಾಡಿದ ಅವರು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ತಮ್ಮ ಭಾಷಣದಲ್ಲಿ ಭಾರತದ ಸಾಮರ್ಥ್ಯ, ಶಕ್ತಿ ಮತ್ತು ಉಜ್ವಲ ಭವಿಷ್ಯದ ಬಗ್ಗೆ ಮಾತನಾಡಿದರು. ಅಧ್ಯಕ್ಷೆ ದ್ರೌಪದಿ ಮುರ್ಮು ಅವರಿಗೆ ನಾನು ಧನ್ಯವಾದ ಹೇಳುತ್ತೇನೆ ಎಂದರು. ಕಾಂಗ್ರೆಸ್ ರಾಜ್ಯಸಭಾ ನಾಯಕ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಬಿಜೆಪಿ 400 ಸ್ಥಾನ ಗೆಲ್ಲಲಿದೆ ಎಂಬ ಮಾತನ್ನು ಉಲ್ಲೇಖಿಸಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 40 ಸ್ಥಾನಗಳನ್ನು ದಾಟುವುದಿಲ್ಲ ಎಂಬ ತೃಣಮೂಲ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರ ಇತ್ತೀಚಿನ ಹೇಳಿಕೆಯನ್ನು ಪ್ರಸ್ತಾಪಿಸಿ ಕಾಲೆಳೆದರು. ಅತ್ತ ಕಾಂಗ್ರೆಸ್‌ 40 ಸ್ಥಾನಗಳಲ್ಲಿ ಮಾತ್ರ ಗೆಲ್ಲುತ್ತದೆ ಎಂದು ಮಮತಾ ಬ್ಯಾನರ್ಜಿ (Mamata Banerjee) ಹೇಳಿದ್ದಾರೆ. ಆದರೆ ಕಾಂಗ್ರೆಸ್‌ ಈ ಬಾರಿ ಕನಿಷ್ಠ 40…

Read More

ಓದಿನ ಕಡೆ ಗಮನ ಕೊಡು ಎಂದು ಪೋಷಕರು ಹೇಳಿದ್ದಕ್ಕೆ ಯುವಕನೋರ್ವ ತನ್ನ ಪ್ರಾಣವನ್ನೇ ಕಳೆದುಕೊಂಡ ಘಟನೆ ಧಾರವಾಡದಲ್ಲಿ (Dharwad) ನಡೆದಿದೆ. ಮೃತನನ್ನು ಚೇತನ್ ತೊಂಡಿಹಾಳ ಎಂದು ಗುರುತಿಸಲಾಗಿದೆ. ಈತ ಧಾರವಾಡದ ಸಾಧನಕೇರಿಯ ನಿವಾಸಿಯೇ ನಗರದ ಕಲಗೇರಿ ಕೆರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಒಳ್ಳೆಯ ಫುಟ್ಬಾಲ್ ಪ್ಲೇಯರ್ (FootBall Player) ಆಗಿದ್ದ ಈತನಿಗೆ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದನು ನಾಲ್ಕು ವರ್ಷಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಚೇತನ್, ಅದರಿಂದ ಹೊರ ಬರಲಾಗದೇ ಒದ್ದಾಡುತ್ತಿದ್ದನು. ಆತನ ಕುಟುಂಬಸ್ಥರು ಆತನಿಗೆ ಬೆಂಗಳೂರಿನ ಮಾನಸಿಕ ಆಸ್ಪತ್ರೆಯಲ್ಲೂ ಚಿಕಿತ್ಸೆ ಕೊಡಿಸಿದ್ದರು. ಆದರೆ ಖಿನ್ನತೆಯಿಂದ ಹೊರಬರಲಾಗದೇ ಚೇತನ್ ಕೊನೆಗೆ ಕೆಲಗೇರಿ ಕೆರೆಗೆ ಹಾರಿ ತನ್ನ ಪ್ರಾಣ ಕಳೆದುಕೊಂಡಿದ್ದಾನೆ. ಚೇತನ್ ತನಗಿಷ್ಟ ಬಂದಂತೆ ಇರಲಿ ಎಂದು ನಾವು ಒತ್ತಡ ಹಾಕಿರಲಿಲ್ಲ. ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಆತನಿಗೆ ಚಿಕಿತ್ಸೆ ಸಹ ಕೊಡಿಸಿದ್ದೆವು. ಆದರೆ ಆತ ಮನೆ ಬಿಟ್ಟು ಹೊರಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಚೇತನ್ ಪೋಷಕರು ಇದೀಗ ಕಣ್ಣೀರು ಹಾಕುತ್ತಿದ್ದಾರೆ.

Read More

ಬೆಂಗಳೂರು: ನೀವು ನೌಕರಿ Job ಹುಡುಕತಾ ಇದ್ದಿರಾ. SSLC / PUC ಯಾವುದೇ ಪದವಿ ಆಗಿದ್ರೆ ಕೂಡಲೆ ಇಲ್ಲಿ ಭೇಟಿ ಕೊಡಿ. ಇಲ್ಲಿ ವಾಕ್ ಇನ್ ಸಂದರ್ಶನವಿದ್ದು, ಪುರುಷರು ಮತ್ತು ಮಹಿಳೆಯರಿಗೆ ನೇಮಕಾತಿ ಆರಂಭವಾಗಿದೆ. ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ನಲ್ಲಿ ಮ್ಯಾನೇಜರ್, ಸಹಾಯಕ ಮ್ಯಾನೇಜರ್, ಎಚ್.ಆರ್ ಮ್ಯಾನೇಜರ್, ಮೇಲ್ವಿಚಾರಕ, ಕ್ಯಾಷಿಯರ್, ಸೇಲ್ಸ್ ಎಕ್ಚಿಕ್ಯೂಟಿವ್, ಬಿಲ್ಲಿಂಗ್ ಎಕ್ಸಿಕ್ಯೂಟಿವ್, ಸೆಕ್ಯೂರಿಟಿ.ಸೇರಿದಂತೆ ಅನೇಕ ಹುದ್ದೇಗಳಿಗೆ ಇಲ್ಲಿ ಅವಕಾಶವಿದೆ. SSLC /PUC ಯಾವುದೇ ಪದವಿ ಮಾಡಿದ್ರು ಇಲ್ಲಿ ಕೆಲಸವಿದ್ದು. ಜೊತೆಗೆ ವಸತಿ + ಸ್ಥಿರ ಮತ್ತು ಆಕರ್ಷಕ ಸಂಬಳ + PF + ಪ್ರೋತ್ಸಾಹ ಧನ ಕೊಡಲಾಗುತ್ತದೆ. Job alert ದಿನಾಂಕ- 09-02-2024 ರಂದು ಮಧ್ಯಾಹ್ನ 12 ಗಂಟೆಯಿಂದ 1 ಗಂಟೆವರೆಗೆ ಸಂದರ್ಶನವಿದ್ದು, ನೌಕರಿ ಹುಡುಕುತ್ತಿರುವವರು ಸಂದರ್ಶನಕ್ಕೆ ಹಾಜರಾಗಬಹುದು. ಸಂದರ್ಶನ ನಡೆಯುವ ಸ್ಥಳ: #41 ಡಿ.ವಿ.ಜಿ ರಸ್ತೆ ಬಸವನಗುಡಿ, ಬೆಂಗಳೂರು- 04 ಹೆಚ್ಚಿನಮಾಹಿತಿಗಾಗಿಇಲ್ಲಿರುವನಂಬರಿಗೆಸಂಪರ್ಕಿಸಬಹುದಾಗಿದೆ. 9740626853 ಜೊತೆಗೆನಿಮ್ಮರೆಸ್ಯೂಮ್ನ್ನುಮೇಲ್ಮಾಡಬಹುದು.. ಇಮೇಲ್- [email protected]

Read More

ಬೆಂಗಳೂರು: 2024ರ ದಕ್ಷಿಣ ಭಾರತದ ಗೋಲ್ಡನ್ ಫೇಸ್ ಪೇಜೆಂಟ್ ಕಾರ್ಯಕ್ರಮ ಇತ್ತೀಚೆಗಷ್ಟೇ ಚೆನ್ನೈನ ಖಾಸಗಿ ಹೋಟೆಲ್ ನಲ್ಲಿ ಅದ್ಧೂರಿಯಾಗಿ ನಡೆದಿದೆ. ಆಸಿಡ್ ದಾಳಿಯ ಸಂತ್ರಸ್ತರಿಗೆ ಚರ್ಮದಾನದ ಬಗ್ಗೆ ಜಾಗೃತಿ ಮೂಡಿಸುವ ಗುರಿಯೊಂದಿಗೆ, ವಿಂಡೋ ಎಂಟರ್‌ಟೈನ್‌ಮೆಂಟ್‌ಗಳ ಸಂಸ್ಥಾಪಕರಾದ ಗೋಪಿನಾಥ್ ರವಿ ಮತ್ತು ಸರವಣನ್, ಎಸಿಟಿಸಿ ಸ್ಟುಡಿಯೋ ಸಂಸ್ಥಾಪಕ ಮತ್ತು ಸಿಇಒ ಹೇಮಂತ್ ಪ್ರಾರಂಭಿಸಿದ್ದಾರೆ. ಕಾರ್ಯಕ್ರಮಕ್ಕೆ ಖ್ಯಾತ ನಟಿ ಆಮಿ ಜಾಕ್ಸನ್ ಮುಖ್ಯ ಅತಿಥಿ ಭಾಗಿಯಾಗಿದ್ದು, ವಿವಿಧ ಭಾಗಗಳಲ್ಲಿ ಆಯ್ಕೆಯಾದ ಗೋಲ್ಡ್ ಪೇಸ್ ಸೌತ್ ಇಂಡಿಯಾ ಕಿರೀಟವನ್ನು ದಕ್ಷಿಣ ಭಾರತದ ಖ್ಯಾತ ನಟಿ ಶ್ರೇಯಾ ಶರಣ್ ಸ್ಪರ್ಧಿಗಳಿಗೆ ಅಲಂಕರಿಸಿದ್ರು. ವಿಂಡೋ ಎಂಟರ್‌ಟೈನ್‌ಮೆಂಟ್‌ನ ಬ್ರಾಂಡ್ ಅಂಬಾಸಿಡರ್ ಪಾರ್ವತಿ ನಾಯರ್ ಕಾರ್ಯಕ್ರಮಕ್ಕೆ ಸಾಥ್ ಕೊಟ್ಟರು. ತಮಿಳುನಾಡು, ಕರ್ನಾಟಕ, ತೆಲಂಗಾಣ ಮತ್ತು ಕೇರಳದ ನಾಲ್ಕು ರಾಜ್ಯಗಳಿಂದ 1000 ಕ್ಕೂ ಸ್ಪರ್ಧಿಗಳು ಈ ಕಾರ್ಯಕ್ರಮಕ್ಕೆ ನೋಂದಣಿ ಮಾಡಿಕೊಂಡಿದ್ದರು. 1000 ಸ್ಪರ್ಧಿಗಳಲ್ಲಿ ಅಳೆದು ತೂಗಿ 51 ಕಂಟೆಸ್ಟೆಂಟ್ ಸ್ಪರ್ಧಿಸುವ ಅವಕಾಶ ನೀಡಲಾಯಿತು. ಈ ಪೈಕಿ ಗೋಲ್ಡನ್ ಪೇಸ್ ಆಫ್ ಬೆಂಗಳೂರು ಕಿರೀಟವನ್ನು…

Read More

ಬೆಂಗಳೂರು ಗ್ರಾಮಾಂತರ:  ಲವ್ ಹೆಸರಿನಲ್ಲಿ ಯುವತಿಯ ಮಹಾದೋಖಾ ನಡೆದಿದ್ದು  ಅಮಾಯಕ ಹುಡುಗರನ್ನ ಬುಟ್ಟಿಗೆ ಹಾಕಿಕೊಂಡು ಲವ್ ದೋಖಾ ನಡೆಸಿರುವ ಘಟನೆ  ಸೂರ್ಯಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ.ಮಾವನ ಜೊತೆ ಮದುವೆಗೂ ಮೊದಲು ಮತ್ತೊಬ್ಬನ ಜೊತೆ ಲವ್ವಿಡವ್ವಿ ಇದು ನಾಟಿ ಬ್ಯೂಟಿಯ ಲವ್ ಕಹಾನಿ ದೋಖಾ ಹೌದು.. ಅವ್ರುದು ಏಳು ವರ್ಷಗಳ ಟೂ ಸೈಡ್ ಲವ್ ಅಕ್ಕನ‌ ಮಗಳ ಜೊತೆ ಮಾವನ ಏಳು ವರ್ಷಗಳ ಲವ್ ಆಗಿದ್ದು ಏಳು ವರ್ಷಳಲ್ಲಿ ಮಾವನ ಮಗನ ಜೊತೆ ಮೂರು ಬಾರಿ ಮದುವೆ ಮಾಡಲಾಗಿದ್ದು  ಆದರೆ ಮೂರನೇ ಬಾರಿ ಮದುವೆಯಾದ ಮೂರೇ ದಿನಕ್ಕೆ ಮತ್ತೊಬ್ಬನ ಜೊತೆ ಜೂಟ್ ಆದ ಖತರ್ನಾಕ್‌ ಹುಡುಗಿ ಮೂಲತಃ ಬೆಂಗಳೂರಿನ ದೊಡ್ಡಕಲ್ಲಸಂದ್ರದ ನಿವಾಸಿಗಳಾದ ಮಂಜುನಾಥ್ ಮತ್ತು ಮನುಜಾ ಏಳು ವರ್ಷಗಳಿಂದ ಮನುಜಾ ಮತ್ತು ಮಂಜುನಾಥ್ ಪರಸ್ಪರ ಲವ್ ಮಾಡುತ್ತಿದ್ದು  ಮನೆಯವರ ವಿರೋಧದ ನಡುವೆ ಎರಡು ಬಾರಿ ಮದುವೆ ಆದರೂ ಎರಡು ಬಾರಿಯು ಯುವತಿಯನ್ನು ಕರೆದೊಯ್ದಿದ್ದ ಪೋಷಕರು  ಹಿರಿಯರ ಸಮ್ಮುಖದಲ್ಲಿ ಮದುವೆ ಮಾಡುವುದಾಗಿ…

Read More

ಬೆಂಗಳೂರು: ಜಮೀನು ವ್ಯಾಜ್ಯ (Land Grabbing) ಸಂಬಂಧ ಮಾಜಿ ಡಾನ್ (Ex Don) ಜೇಡರಹಳ್ಳಿ ಕೃಷ್ಣಪ್ಪನನ್ನು (Jedarahalli Krishnappa) ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬ್ಯಾಡರಹಳ್ಳಿ ಪೊಲೀಸರು ಜೇಡರಹಳ್ಳಿ ಕೃಷ್ಣಪ್ಪನನ್ನು ಅರೆಸ್ಟ್ ಮಾಡಿದ್ದಾರೆ. ಜಮೀನು ವ್ಯಾಜ್ಯ ಸಂಬಂಧ ಕೃಷ್ಣಪ್ಪ ವಿರುದ್ಧ ದೂರು ದಾಖಲಾಗಿತ್ತು. ಈ ಹಿನ್ನೆಲೆ ಕೃಷ್ಣಪ್ಪನನ್ನು ಬಂಧಿಸಲಾಗಿದೆ. 16 ಎಕರೆ ಜಮೀನು ಕಬಳಿಸಿದ ಆರೋಪದಡಿ ಅರೆಸ್ಟ್ ಮಾಡಲಾಗಿದೆ. ಬೇರೆಯವರ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ ಕಬಳಿಕೆ ಮಾಡಿದ್ದ ಆರೋಪದಡಿ ಮಾಜಿ ಡಾನ್ ಕೃಷ್ಣಪ್ಪನನ್ನು ಬಂಧಿಸಲಾಗಿದೆ.

Read More