Author: AIN Author

ಬೆಂಗಳೂರು:- ಇಡಿ ಅಧಿಕಾರಿಗಳ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ತಡೆ ನೀಡಿದೆ. ಕಾಂಗ್ರೆಸ್ ಶಾಸಕ ನಂಜೇಗೌಡ ವಿರುದ್ಧ ಜಾರಿ ನಿರ್ದೇಶನಾಲಯ ಪ್ರಕರಣದಲ್ಲಿ ತನಿಖಾಧಿಕಾರಿ ವಿರುದ್ಧ ದಾಖಲಾಗಿದ್ದ ಎಫ್‍ಐಆರ್ ಗೆ ಹೈಕೋರ್ಟ್ ತಡೆ ನೀಡಿದೆ. ಕೋಚಿಮೂಲ್ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ನಿರ್ದೇಶಕ ಅಶ್ವಥ್ ನಾರಾಯಣ್ ಅವರನ್ನು ಇಡಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದರು. ಅಶ್ವಥ್ ನಾರಾಯಣ್ ಮೇಲೆ 80 ಲಕ್ಷ ಹಣ ಪಡೆದ ಆರೋಪ ಇತ್ತು. ಹೀಗಾಗಿ ಇಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಾ ಇದ್ದರು. ಈ ಸಂದರ್ಭದಲ್ಲಿ ಇಡಿ ಅಧಿಕಾರಿಗಳು ಒತ್ತಡ ಹೇರಿದ್ರು, ತಮಗೆ ಬೇಕಾದ ಹೇಳಿಕೆ ನೀಡುವಂತೆ ಒತ್ತಡ ಹೇರುತ್ತಾ ಇದ್ದಾರೆ ಎಂದು ವಿಲ್ಸನ್ ಗಾರ್ಡ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ರು. ಈ ಪ್ರಕರಣಕ್ಕೆ ತಡೆಕೋರಿ ಹೈಕೋರ್ಟಿಗೆ ಇಡಿ ಅಧಿಕಾರಿಗಳು ಅರ್ಜಿ ಸಲ್ಲಿಕೆ ಮಾಡಿದರು. ಅರ್ಜಿ ವಿಚಾರಣೆ ನಡೆಸಿದ ನ್ಯಾ. ನಟರಾಜನ್ ಪೀಠ ಪ್ರಕರಣಕ್ಕೆ ಮಧ್ಯಂತರ ತಡೆ ನೀಡಿದೆ. ಈ ಮೂಲಕ ಇಡಿ ತನಿಖೆಗೆ ಬಲ ಸಿಕ್ಕಂತಾಗಿದೆ

Read More

ಶಿವಮೊಗ್ಗ:- ದೇಶ ವಿಭಜನೆ ಕಾಂಗ್ರೆಸ್ ನಾಯಕರಿಗೆ ಹೊಸತೇನಲ್ಲ ಎಂದು ಮಾಜಿ ಸಚಿವ ಈಶ್ವರಪ್ಪ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ದೇಶ ವಿಭಜನೆ ಕಾಂಗ್ರೆಸ್ ನಾಯಕರಿಗೆ ಹೊಸತೇನಲ್ಲ, ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗ ದೇಶವನ್ನು ಕೇವಲ ಅಧಿಕಾರದ ದಾಹಕ್ಕಾಗಿ ಹಿಂದೂಸ್ತಾನ ಮತ್ತು ಪಾಕಿಸ್ತಾನ ಅಂತ ಒಡೆದಿದ್ದು ಅವರೇ ಎಂದರು. ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭೆಯಲ್ಲಿ ವೀರಾವೇಶದಿಂದ, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ ಒಂದೇ, ಅಖಂಡ ಭಾರತ ಒಡೆಯುವ ಮಾತನ್ನು ಯಾವತ್ತೂ ಸಹಿಸಲ್ಲ ಅಂತ ಹೇಳುತ್ತಾರೆ ಎಂದ ಈಶ್ವರಪ್ಪ, ಖರ್ಗೆ ಅವರು ಹಾಗೆ ಎಚ್ಚರಿಕೆ ಕೊಟ್ಟ ನಂತರವೂ ಸುರೇಶ್ ಮತ್ತು ವಿನಯ್ ಕುಲಕರ್ಣಿ ದೇಶ ವಿರೋಧಿ ಹೇಳಿಕೆ ನೀಡುವುದನ್ನು ಮುಂದುವರಿಸುತ್ತಾರೆ ಅಂದರೆ ಪಕ್ಷದ ಅಧ್ಯಕ್ಷ ಹೇಳುವ ಮಾತಿಗೆ ಯಾವುದೇ ಕಿಮ್ಮತ್ತಿಲ್ಲ ಅನ್ನೊದು ಸ್ಪಷ್ಟವಾಗುತ್ತದೆ, ಅವರ ವಿರುದ್ಧ ಕ್ರಮ ಜರುಗಿಸಲಾಗದಿದ್ದರೆ ಖರ್ಗೆ ತಮ್ಮ ಸ್ಥಾನ ತ್ಯಜಿಸಿಬೇಕು ಎಂದು ಈಶ್ವರಪ್ಪ ಹೇಳಿದರು.

Read More

ಬೆಂಗಳೂರು:- 2023 ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಹಲವು ಕಾರಣಗಳಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ. ನಗರದ ಮಲ್ಲೇಶ್ವರಂನಲ್ಲಿ ಆಯೋಜಿಸಿದ್ದ ಮಾಡಾಳು ಮಲ್ಲಿಕಾರ್ಜುನ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ರಾಜ್ಯದಲ್ಲಿ ಇದ್ದಂತಹ ವಾತಾವರಣ ಮತ್ತು ಈಗ ಇರುವ ವಾತಾವರಣಕ್ಕೂ ವ್ಯತ್ಯಾಸ ಇದೆ ಎಂದು ಹೇಳಿದ್ದಾರೆ. ಮೂರು ತಿಂಗಳ ಹಿಂದೆ ಕಾಂಗ್ರೆಸ್ ಪಕ್ಷ ಲೋಕಸಭೆ ಚುನಾವಣೆಯಲ್ಲಿ 20-22 ಕ್ಷೇತ್ರ ಗೆಲ್ಲುವ ವಿಶ್ವಾಸ ಇಟ್ಟುಕೊಂಡಿದ್ದರು. ನಾಲ್ಕು ತಿಂಗಳ ಬಳಿಕ ಈಗ ಎರಡು ಕ್ಷೇತ್ರ ಗೆಲ್ಲುತ್ತದೆ ಅಂತ ಕಾಂಗ್ರೆಸ್ ಮುಖಂಡರೇ ಮಾತಾಡಿಕೊಳ್ಳುತ್ತಿದ್ದಾರೆ. ಇವತ್ತು ಬದಲಾವಣೆ ಗಾಳಿ ಬೀಸಿ ಬಿಜೆಪಿ ಪರವಾದ ವಾತಾವರಣ ಇದೆ ಎಂದರು. ನರೇಂದ್ರ ಮೋದಿ ಪರವಾದ ಅಲೆ ನೋಡುತ್ತಿದ್ದೇವೆ. ಇವತ್ತು ರಾಜ್ಯದಲ್ಲಿ ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿ ಒಂದು ಸೀಟು ಗೆಲ್ಲಲೂ ತಡಕಾಡುವ ಪರಿಸ್ಥಿತಿ ಇದೆ. ಯಾವುದೇ ಒಂದು ಕ್ಷೇತ್ರ ಗೆಲ್ಲುತ್ತೇವೆ ಎಂಬ ವಿಶ್ವಾಸವೇ ಅವರಲ್ಲಿಲ್ಲ. ಪಂಚರಾಜ್ಯಗಳ ಚುನಾವಣೆ, ಬಾಲರಾಮನ ಪ್ರತಿಷ್ಠಾಪನೆ…

Read More

ಚಿಕ್ಕೋಡಿ(ಬೆಳಗಾವಿ): ತಡರಾತ್ರಿ ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿ ಐದು ಮನೆಗಳು ಹಾಗೂ ಒಂದು ಅಂಗಡಿ ಸಂಪೂರ್ಣ ಸುಟ್ಟಿರುವ ಘಟನೆ ಸಂಭವಿಸಿದೆ. ರಾತ್ರಿ ಒಂದು ಗಂಟೆ ಆಸುಪಾಸಿನಲ್ಲಿ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಪಕ್ಕದಲ್ಲಿ ಇರುವ ಮನೆಗಳಿಗೂ ಹಬ್ಬಿ ಇಷ್ಟೊಂದು ನಷ್ಟಕ್ಕೆ ಕಾರಣವಾಗಿದೆ. ಘಟನಾ ಸ್ಥಳಕ್ಕೆ ಚಿಕೋಡಿ ಅಗ್ನಿಶಾಮಕ ಸಿಬ್ಬಂದಿಗಳು ಬಂದು ನಾಲ್ಕು ಪೈರ್ ಎಂಜಿನ್ ಗಳ ಮೂಲಕ ಯಶಸ್ವಿಯಾಗಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚಿದಾನಂದ ಮೆದಾರ ಮತ್ತು ಮಹಾದೇವ ಮೆದಾರ ಕುಟುಂಬಕ್ಕೆ ಸೇರಿದ 5 ಮನೆಗಳು ಮತ್ತು ದತ್ತಾತ್ರೇಯ ಪರಿಟ್ ಅವರಿಗೆ ಸೇರಿದ ಅಂಗಡಿ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ. ಸ್ಥಳಕ್ಕೆ ಚಿಕ್ಕೋಡಿ ಡಿವೈಎಸ್ಪಿ ಗೋಪಾಲ ಗೌಡರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಯಾವ ಕಾರಣಕ್ಕೆ ಬೆಂಕಿ ತಗುಲಿದೆ ಎಂಬುದು ನಿಖರವಾಗಿ ತಿಳಿದು ಬಂದಿಲ್ಲ. ಸದ್ಯ ಅಂಕಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Read More

ಗದಗ: ಹಾಲು ಉತ್ಪಾದಕರ ಪ್ರೋತ್ಸಾಹ ಧನ ಬಿಡುಗಡೆಗೆ ಆಗ್ರಹಿಸಿ ಬಿಜೆಪಿ ರೈತ ಮೋರ್ಚಾದಿಂದ ಪ್ರೊಟೆಸ್ಟ್ ನಡೆಸಲಾಯಿತು ಗದಗ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಬೀದಿಗಿಳಿದು  ಬಿಜೆಪಿ ಕಾರ್ಯಕರ್ತರ ಧರಣಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ರೈತರಿಗೆ ಪ್ರತಿ ಲೀಟರ್ ಗೆ ಸಿಗುವ ಎರಡು ರೂಪಾಯಿ ಸಬ್ಸಿಡಿ ಸಿಗ್ತಿಲ್ಲ ಬಿಎಸ್ ಯಡಿಯೂರಪ್ಪ ಅವಧಿಯಲ್ಲಿ ಹಾಲು ಉತ್ಪಾದಕನಿಗೆ ಸಹಾಯಧನ ‌ನೀಡುತ್ತಿದ್ದರು.. 25 ಲಕ್ಷ ರೈತರಿಗೆ ಸಿಗಬೇಕಾದ 7,18 ಕೋಟಿ ರೂಪಾಯಿ ಸಬ್ಸಿಡಿ ಬಂದ್ ಆಗಿದೆ ಹಾಲು ಉತ್ಪಾದಕರ ಸಹಾಯಧನ ಬಿಡುಗಡೆಗೆ ಆಗ್ರಹ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ ಬಿಜೆಪಿ ಕಾರ್ಯಕರ್ತರು..

Read More

ಬೆಂಗಳೂರು: ಶಾರ್ಟ್‌ ಸರ್ಕ್ಯೂಟ್‌ʼನಿಂದ ಸೋಪಾ ಸೆಟ್ ತಯಾರಿಕಾ ಗೋದಾಮಿಗೆ  ಕಾಣಿಸಿಕೊಂಡ ಬೆಂಕಿ ಧಗ ಧಗ ಹೊತ್ತಿ ಉರಿಯುತ್ತಿರುವ ಬೆಂಕಿ ಈ ಹಿನ್ನೆಲೆಯಲ್ಲಿ ಅಪಾರ ಪ್ರಂಆಣದ ನಷ್ಟ ಉಂಟಾಗಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿ ಸಮೀಪದ ರಾಯಸಂದ್ರ ಬಳಿ ನಡೆದ ಘಟನೆಯಾಗಿದೆ. ಗೋದಾಮಿನಲ್ಲಿದ್ದ ಹತ್ತಿ ಸೇರಿದಂತೆ ಮಿಷನ್ಗಳು ಬೆಂಕಿಗಾಹುತಿ ಆಗಿದ್ದು  ಎಲೆಕ್ಟ್ರಾನಿಕ್ ಸಿಟಿ ಸಮೀಪದ ರಾಯಸಂದ್ರ ಬಳಿ ಮಧ್ಯಾಹ್ನ 12 ಗಂಟೆ ಸುಮಾರಿಗೆ ನಡೆದಿರುವ ಘಟನೆಯಾಗಿದ್ದು  ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ಕ್ಷಣಾರ್ಧದಲ್ಲಿ ಇಡೀ ಗೋದಾಮಿಗೆ ವ್ಯಾಪಿಸಿದ ಬೆಂಕಿ ಬೆಂಕಿ ನಂದಿಸಿದ ಎಲೆಕ್ಟ್ರಾನಿಕ್ ಸಿಟಿ ಅಗ್ನಿಶಾಮಕ ಠಾಣೆ ಸಿಬ್ಬಂದಿ ಬೆಂಕಿಗಾಹುತಿಯಾದ ಲಕ್ಷಾಂತರ ಮೌಲ್ಯದ ಹತ್ತಿ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಮಾಲೀಕ ಪರಾರಿಯಾಗಿದ್ದಾನೆ . ಈ ಬಗ್ಗೆ ಪೊಲೀಸರು ಮುಂದುವರೆದ ತನಿಖೆ ನಡೆಸುತ್ತಿದ್ದಾರೆ.

Read More

ಬೆಂಗಳೂರು : ಕೆಂದ್ರ ಬಿಜೆಪಿ ಸರ್ಕಾರ ತೆರಿಗೆ ಅಂಕಿ ಅಂಶ ಬಿಟ್ಟಿಲ್ಲ ಎಂಬ ವಿಚಾರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ನಮ್ಮ ರಾಜ್ಯಕ್ಕೆ ಕೇವಲ 80 ಸಾವಿರ ಕೋಟಿ ಕೊಟ್ಟಿದೆ. ಸಿಎಂ ಸಿದ್ದರಾಮಯ್ಯ ಯಾಕಾದ್ರು ಸಿಎಂ ಆದ್ರು ಅಂತಾ ತಲೆ ಚಚ್ಚಿಕೊಳ್ತಿದ್ದಾರೆ. ಸುಳ್ಳು ಹೇಳಿ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಬೇಕಂತಾ ಅಂದುಕೊಂಡಿದ್ದಾರೆ ಎಂದು ಕುಟುಕಿದ್ದಾರೆ. ರಾಜ್ಯ ಸರ್ಕಾರ ಆಡಳಿತ ನಡೆಸುವ ಪಕ್ಷ ನೀವು ಮೊದಲು ರೈತರಿಗೆ ಹಣ ಬಿಡುಗಡೆ ಮಾಡಿ. ಉತ್ತರ ಕೊಡೋದಕ್ಕೆ ಆಗೊಲ್ಲ ಅಂತ ಬೂಟಾಟಿಕೆ ಆಡ್ತಿದ್ದಾರೆ. ಕೇಂದ್ರ ಸರ್ಕಾರದ ಅನುದಾನ ಕಾಯದೆ ನಾವು ಈ ಹಿಂದೆ ಅನುದಾನ ಕೊಟ್ಟಿದ್ವು. ಮೇಕೆದಾಟು ಬಗ್ಗೆ ಹೋರಟ ಮಾಡ್ತಿದ್ದ ಡಿಸಿಎಂ ಡಿ.ಕೆ ಶಿವಕುಮಾರ್ ಎಲ್ಲಿ ಹೋಗಿದ್ದಾರೆ. ಕಾಗೆ ಹಾರಿಸುವ ಕೆಲಸ ಮಾಡ್ತಿದ್ದಾರೆ ಕಾಂಗ್ರೆಸ್ ನವರು ಎಂದು ವಾಗ್ದಾಳಿ ನಡೆಸಿದ್ದಾರೆ.

Read More

ಬೆಳಗಾವಿ: ಕಾಂಗ್ರೆಸ್ (Congress)  ಸರ್ಕಾರದ ವಿರುದ್ಧ ಕುಂದಾನಗರಿ ಬೆಳಗಾವಿಯಲ್ಲಿ ಬಿಜೆಪಿ (BJP) ಕಾರ್ಯಕರ್ತರು ಪ್ರತಿಭಟನೆ ನಡೆಸಿ ನಗರದ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು  (Police) ವಶಕ್ಕೆ ಪಡೆದಿದ್ದಾರೆ. ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿರುವ ಕಾಂಗ್ರೆಸ್ ಕಚೇರಿಗೆ ಏಕಾಏಕಿ ನುಗ್ಗಲು ಯತ್ನಿಸಿದರು. ಈ ವೇಳೆ ಪೊಲೀಸರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ನೂಕಾಟ, ತಳ್ಳಾಟ ಕೂಡ ನಡೆಯಿತು. ಬಳಿಕ 30ಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ ಇದಕ್ಕೂ ಮೊದಲು ನಗರದ ಚೆನ್ನಮ್ಮ ವೃತ್ತದಲ್ಲಿ ಎಮ್ಮೆಗಳನ್ನು ರಸ್ತೆಗೆ ತಂದು ಬಿಜೆಪಿಯ ರಾಜ್ಯ ಉಪಾಧ್ಯಕ್ಷ ಅನಿಲ್ ಬೆನಕೆ (Anil Benake) ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Read More

ಬೆಂಗಳೂರು : ಸರ್ಕಾರದ ವಿವಿಧ ಇಲಾಖೆಗಳಲ್ಲಿ 1.37 ಲಕ್ಷಕ್ಕೂ ಹೆಚ್ಚು ಕಡತಗಳ ವಿಲೇವಾರಿ ಬಾಕಿ ವಿಚಾರ ಕುರಿತು ಸಿಎಂ ಸಿದ್ದರಾಮಯ್ಯ ಹಾಗೂ ಬಿಜೆಪಿ ನಡುವೆ ಟ್ವೀಟ್​ ಸಮರ ನಡೆದಿದೆ. ಇದು ನೀವು ಬಿಟ್ಟು ಹೋದ ಬಳುವಳಿ ಎಂದು ಸಿದ್ದರಾಮಯ್ಯ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ರಾಜ್ಯ ಬಿಜೆಪಿ ‘ಸ್ಲೀಪಿಂಗ್‌ ಸರ್ಕಾರ’ ಎಂದು ಸಿಎಂಗೆ ತಿರುಗೇಟು ಕೊಟ್ಟಿದೆ. ಸಿದ್ದರಾಮಯ್ಯ ಅವರ ಸ್ಲೀಪಿಂಗ್‌ ಸರ್ಕಾರ ಕಳೆದ 9 ತಿಂಗಳಿಂದಲೂ ನಿದ್ದೆ ಮಾಡುತ್ತಲೇ ಇದೆ. ಎಚ್ಚರಿಸುವ ಕೆಲಸ ಮಾಡಿದರೆ ಸಿದ್ದರಾಮಯ್ಯ ಅವರಿಗೆ ಇರಿಸು ಮುರಿಸಾಗುತ್ತದೆ. ಸ್ವಾಮಿ ಸಿದ್ದರಾಮಯ್ಯರವರೇ, ನಿಮ್ಮ ಸಾಧನೆ ಏನು ಹೇಳಿ ಎಂದು ಜನತೆ ಕೇಳಿದರೆ, ನಿಮ್ಮ ಬಳಿ ಉತ್ತರವಿಲ್ಲ ಎಂದು ಕುಟುಕಿದೆ. ರಾಜೀನಾಮೆ ಕೊಟ್ಟು ಮನೆಗೆ ಹೊರಡಿ ಬೇರೆಯವರ ಮೇಲೆ ಗೂಬೆ ಕೂರಿಸಲು ನೀವು ಕೊಡುವ ಸಮಯವನ್ನೇನಾದರೂ ರಾಜ್ಯದ ಅಭಿವೃದ್ಧಿಗೆ ಕೊಟ್ಟಿದ್ದರೆ, ಬಹುಶಃ ಇಂದು ನೀವು ಈ ರೀತಿ ಬೊಗಳೆ ಬಿಡುವ ಪರಿಸ್ಥಿತಿ ಬರುತ್ತಿರಲಿಲ್ಲ. ನಿಮ್ಮಿಂದ ಆಡಳಿತ ಮಾಡಲು ಆಗದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ…

Read More

ಬೆಂಗಳೂರು: ಈ ಬಾರಿಯ ಪ್ರೇಮಿಗಳ ದಿನದ ಸಂಭ್ರಮಕ್ಕೆ ಕಾನೂನು ತೊಡಕುಂಟಾಗಲಿದೆ. ಫೆಬ್ರವರಿ 14ರ ಸಂಜೆ 5 ಗಂಟೆಯಿಂದ ಫೆಬ್ರವರಿ 17 ಬೆಳಗ್ಗೆ 6. ಗಂಟೆವರೆಗೆ ಬೆಂಗಳೂರು ಮಹಾ ನಗರದ ಹಲವೆಡೆ ಮದ್ಯ ಮಾರಾಟಕ್ಕೆ ನಿರ್ಬಂಧ ವಿಧಿಸಲಾಗಿದೆ. ಪ್ರೇಮಿಗಳ ದಿನ ಆಚರಿಸಲಾಗುವ ಫೆಬ್ರವರಿ 14ರಂದೇ ಮದ್ಯ ಮಾರಾಟಕ್ಕೆ ನಿರ್ಬಂಧ ಜಾರಿಯಾಗಲಿದೆ. ಬೆಂಗಳೂರು ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಉಪ ಚುನಾವಣೆ ಇರುವ ಕಾರಣ ಫೆಬ್ರವರಿ 16 ರಿಂದ ಬೆಂಗಳೂರಿನಲ್ಲಿ ಮದ್ಯ ಮಾರಾಟಕ್ಕೆ ನಿರ್ಬಂಧ ಜಾರಿಯಲ್ಲಿ ಇರಲಿದೆ. ಪೊಲೀಸ್ ಕಮಿಷನರೇಟ್ ವ್ಯಾಪ್ತಿಗೆ ಹೊರತಾದ ಪ್ರದೇಶಗಳಲ್ಲಿ ಮದ್ಯ ಮಾರಾಟಕ್ಕೆ ನಿರ್ಬಂಧ ಇರಲಿದೆ ಎಂಬ ಮಾಹಿತಿ ಲಭ್ಯವಾಗಿದೆ. 1951ರ ಪ್ರಜಾ ಪ್ರತಿನಿಧಿ ಕಾಯ್ದೆಯ ಸೆಕ್ಷನ್ 135 (ಸಿ) ಹಾಗೂ 1967ರ ಕರ್ನಾಟಕ ಅಬಕಾರಿ ಕಾಯ್ದೆಯ ನಿಯಮ 10 (ಬಿ) ಅಡಿಯಲ್ಲಿ ಈ ನಿರ್ಬಂಧ ಜಾರಿಗೆ ತರಲಾಗಿದೆ ಎಂದು ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಆಯುಕ್ತ ಕೆ. ಎ. ದಯಾನಂದ ಅವರು ಮಾಹಿತಿ ನೀಡಿದ್ಧಾರೆ. ಈ ಚುನಾವಣೆಯ ಮತದಾನ ಪ್ರಕ್ರಿಯೆಯಲ್ಲಿ ಬೆಂಗಳೂರು…

Read More