Author: AIN Author

ಮಂಡ್ಯ:- ಬಿಜೆಪಿ-ಜೆಡಿಎಸ್ ಮೈತ್ರಿ ವಿರುದ್ಧ ನಾರಾಯಣಗೌಡ ಸಿಡಿದೆದ್ದಿದ್ದಾರೆ. ಮಂಡ್ಯದಲ್ಲಿ ಪಕ್ಷ ಬಲವರ್ಧನೆಯಾಗುತ್ತಿರುವ ನಡುವೆ ಕ್ಷೇತ್ರವನ್ನು ಜೆಡಿಎಸ್​ಗೆ ಬಿಟ್ಟುಕೊಡದಂತೆ ಹಾಗೂ ಹಾಲಿ ಸಂಸದೆ ಸುಮಲತಾ ಅವರಿಗೇ ಟಿಕೆಟ್ ನೀಡುವಂತೆ ಪಟ್ಟುಹಿಡಿದಿರುವ ಬಿಜೆಪಿಯ ಕೆಸಿ ನಾರಾಯಣಗೌಡ ಅವರು ಮೈತ್ರಿ ವಿರುದ್ಧ ಸಿಡಿದೆದ್ದಿದ್ದಾರೆ. ಸಿದ್ದರಾಮಯ್ಯ ಅವರನ್ನು ರಹಸ್ಯವಾಗಿ ಭೇಟಿಯಾಗಿ ಮಾತುಕತಡೆ ನಡೆಸಿರುವುದು ರಾಜ್ಯ ರಾಜಕೀಯದಲ್ಲಿ ಭಾರೀ ಕುತೂಹಲ ಕೆರಳಿಸಿದೆ. ದಳ-ಕಮಲ ಮೈತ್ರಿ ವಿರುದ್ಧ ಸಿಡಿದೆದ್ದ ನಾರಾಯಣಗೌಡ ಕಮಲ ಬಿಟ್ಟು ಕೈ ಪಾಳಯ ಸೇರಲು ತಯಾರಿ ನಡೆಸುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಮಂಡ್ಯದಲ್ಲಿ ಜೆಡಿಎಸ್ -ಬಿಜೆಪಿ ಮೈತ್ರಿ ವಿರುದ್ಧ ನಾರಾಯಣಗೌಡ ಅಸಮಾಧಾನ ವ್ಯಕ್ತಪಡಿಸಿದ್ದರು. ಮಂಡ್ಯ ಕ್ಷೇತ್ರವನ್ನು ಜೆಡಿಎಸ್​ಗೆ ಬಿಟ್ಟುಕೊಡದಂತೆ ಬಹಿರಂಗವಾಗಿಯೇ ಹೇಳಿಕೆ ನೀಡುತ್ತಾ ಬಂದಿದ್ದಾರೆ. ಆದರೆ, ಮಂಡ್ಯ ಬಿಜೆಪಿ ಕೈ ತಪ್ಪುವುದು ಬಹುತೇಕ ಖಚಿತವಾಗಿರುವ ಹಿನ್ನೆಲೆ ನಾರಾಯಣಗೌಡ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಳ್ಳಲು ಮುಂದಾಗಿರುವಂತೆ ಗೋಚರಿಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸಿದ ನಾರಾಯಣಗೌಡ ಅವರು ಕಾಂಗ್ರೆಸ್ ಟಿಕೆಟ್​ ಕೇಳಿದ್ದಾರೆ ಎನ್ನಲಾಗುತ್ತಿದೆ. ಆದರೆ ಮಂಡ್ಯ ಲೋಕಸಭಾ ಕ್ಷೇತ್ರದ…

Read More

ಭಾರತ ಟೆಸ್ಟ್‌ ತಂಡದಲ್ಲಿ ಅವಕಾಶ ಸಿಗದ ಬಗ್ಗೆ ಆಂಧ್ರ ಬ್ಯಾಟ್ಸ್‌ಮನ್‌ ಹನುಮ ವಿಹಾರಿ ಬೇಸರ ವ್ಯಕ್ತಪಡಿಸಿದ್ದಾರೆ. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ 2022ರ ಜುಲೈನಲ್ಲಿ ಕೊನೆಯ ಬಾರಿ ಭಾರತ ತಂಡದಲ್ಲಿ ಆಡಿದ್ದರು. ಅಂದಿನಿಂದ ಇಲ್ಲಿಯವರೆಗೂ ಅವರು ಟೀಮ್‌ ಇಂಡಿಯಾಗೆ ಕಮ್‌ಬ್ಯಾಕ್‌ ಮಾಡಲು ಸಾಧ್ಯವಾಗಿಲ್ಲ. ಪ್ರಸ್ತುತ ಅಂಧ್ರ ಪರ ರಣಜಿ ಟ್ರೋಫಿ ಟೂರ್ನಿಯಲ್ಲಿ ಹನುಮ ವಿಹಾರಿ ಆಡುತ್ತಿದ್ದಾರೆ. ಪ್ರಸಕ್ತ ಆವೃತ್ತಿಯಲ್ಲಿ ಅವರು 7 ಇನಿಂಗ್ಸ್‌ಗಳಿಂದ 365 ರನ್‌ಗಳನ್ನು ದಾಖಲಿಸಿದ್ದಾರೆ. ಬಂಗಾಳ ಎದುರು ಅರ್ಧಶತಕದ ಮೂಲಕ ಶುಭಾರಂಭ ಕಂಡಿದ್ದ ಅವರು, ಛತ್ತೀಸ್‌ಗಢ ವಿರುದ್ಧ 183 ರನ್‌ಗಳನ್ನು ಸಿಡಿಸಿದ್ದರು. “ಇತ್ತೀಚೆಗೆ ನನ್ನ ಬಳಿ ಯಾರೂ ಕೂಡ ಮಾತನಾಡಲಿಲ್ಲ. ಆದರೆ, ಕೊನೆಯ ಬಾರಿ ರಾಹುಲ್ ದ್ರಾವಿಡ್‌ ಅವರು ನನ್ನ ಬಳಿ ಮಾತನಾಡಿ, ನಾನು ಯಾವ ಜಾಗದಲ್ಲಿ ಸುಧಾರಣೆ ಕಾಣಬೇಕು ಎಂಬ ಬಗೆ ತಿಳಿಸಿದ್ದರು. ಇದಾದ ಬಳಿಕ ಇಲ್ಲಿಯವರೆಗೂ ಯಾರು ಕೂಡ ನನ್ನನ್ನು ಸಂಪರ್ಕಿಸಿಲ್ಲ,” ಎಂದು ಆಂಧ್ರ ಬ್ಯಾಟ್ಸ್‌ಮನ್‌ ತಿಳಿಸಿದ್ದಾರೆ. “ಯಾವುದೇ ನಿರೀಕ್ಷೆಗಳು ಇಲ್ಲದ ಒಂದು ಹಂತದಲ್ಲಿ ಇದೀಗ ನಾನಿದ್ದೇನೆ.…

Read More

ಬೆಂಗಳೂರು:- ಕುಂಬಾರಪೇಟೆಯಲ್ಲಿ ನಡೆದಿದ್ದ ಜೋಡಿ ಕೊಲೆ ಕೇಸ್ ಗೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದೆ. ನ್ಯಾಯಾಲಯದಲ್ಲಿದ್ದ ಕಟ್ಟಡದ ಕೇಸ್ ಎದುರಾಳಿಯ ಪರವಾಗಿ ಆದೇಶ ಹೊರಬಿದ್ದ ಕೋಪ ಹಾಗೂ ಕೊಲೆಯಾಗಿರುವ ವ್ಯಕ್ತಿಯ ಮಾತನ್ನು ಕೇಳಿ ಪತ್ನಿ ತನ್ನನ್ನು ತೊರೆದಿದ್ದಾಳೆ ಎಂದು ಕೋಪಗೊಂಡಿದ್ದ ಆರೋಪಿತನು ಎದುರಾಳಿಯನ್ನು ಕೊಲ್ಲಲು ಹೋಗಿ ಇಬ್ಬರನ್ನು ಕೊಂದಿದ್ದಾನೆ ಎಂದು ತಿಳಿದುಬಂದಿದೆ. ಕೊಲೆಯಾದ ಸುರೇಶ್ ಹಾಗೂ ಸಂಬಂಧಿಕನಾಗಿರುವ ಆರೋಪಿತ ಬದ್ರಿಯ ನಡುವೆ ಕಟ್ಟಡದ ವಿಚಾರವಾಗಿ ಹಲವಾರು ವರ್ಷಗಳಿಂದ ಕಲಹವಿತ್ತು. ನ್ಯಾಯಾಲಯದಲ್ಲಿ ಕೇಸ್ ಸಹ ಇತ್ತು. ಕೇಸ್ ಮೃತನ ಪರವಾಗಿ ಆಗಿದ್ದ ಕಾರಣ ಬದ್ರಿ ಕೋಪ ಗೊಂಡಿದ್ದನು. ಆದಾದ ಮೇಲು ಮೂರು ನಾಲ್ಕು ಬಾರಿ ಜಗಳ ಮಾಡಿಕೊಂಡು ಹಲಸೂರು ಗೇಟ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಈ ವೇಳೆ ಸಿಆರ್​ಪಿಸಿ 107 ಅನ್ವಯ ಬಾಂಡ್ ಬರೆಸಿಕೊಂಡಿದ್ದ ಪೊಲೀಸರು ಇಬ್ಬರಿಗೂ ವಾರ್ನ್ ಮಾಡಿದ್ದರು. ಮುಂದೆ ಗಲಾಟೆ ಮಾಡಿಕೊಂಡರೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದರು. ಈ ನಡುವೆ ಅರೋಪಿತ ಬದ್ರಿಯನ್ನು ಪತ್ನಿ ತೊರೆದಿದ್ದಾಳೆ. ಸುರೇಶ್ ಮಾತು ಕೇಳಿಯೇ…

Read More

ಎಳನೀರು ಅನೇಕ ಪೌಷ್ಟಿಕಾಂಶಗಳ ಆಗರವಾಗಿದೆ. ಇದು ದೇಹವನ್ನು ಹೈಡ್ರೇಟ್ ಆಗಿಡುತ್ತದೆ. ಆದರೆ, ಈ ಎಳನೀರಿಗೆ ಎಂದಾದರೂ ನೀವು ಕಾಮಕಸ್ತೂರಿ ಬೀಜ ಹಾಕಿಕೊಂಡು ಕುಡಿದಿದ್ದೀರಾ? ಇದರಿಂದ ಆರೋಗ್ಯಕ್ಕೆ ಆಗುವ ಪ್ರಯೋಜನಗಳೇನು? ಎಳನೀರು ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಎಲೆಕ್ಟ್ರೋಲೈಟ್‌ಗಳಂತಹ ಪೋಷಕಾಂಶಗಳಿಂದ ತುಂಬಿರುತ್ತದೆ. ಅದಕ್ಕೆ ಕಾಮಕಸ್ತೂರಿ ಬೀಜಗಳನ್ನು ಸೇರಿಸಿದಾಗ ಅದು ದೇಹಕ್ಕೆ ನೈಸರ್ಗಿಕ ಶೀತಕವಾಗುತ್ತದೆ. ಇದು ನಿಮ್ಮ ದೇಹವು ಆಮ್ಲೀಯತೆಯಂತಹ ಸಮಸ್ಯೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಎಳನೀರಿನಲ್ಲಿ ಕರಗುವ ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಹೀಗಾಗಿ, ನಿರ್ಜಲೀಕರಣದಿಂದ ಬಳಲುತ್ತಿರುವ ಜನರಿಗೆ ಇದು ಉತ್ತಮ ಪಾನೀಯವಾಗಿದೆ. ಕಡಿಮೆ ಕ್ಯಾಲೋರಿಗಳಿರುವುದರಿಂದ ಎಳನೀರನ್ನು ಮಧುಮೇಹಿಗಳು ಕೂಡ ಸೇವಿಸಬಹುದು. ಕಾಮಕಸ್ತೂರಿ ಬೀಜಗಳು ನೈಸರ್ಗಿಕ ಶೀತಕವಾಗಿ ಕಾರ್ಯನಿರ್ವಹಿಸುತ್ತವೆ. ಇದರಲ್ಲಿ ಫೈಬರ್ ಸಮೃದ್ಧವಾಗಿದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸುಧಾರಿಸುತ್ತದೆ ಮತ್ತು ಮಲಬದ್ಧತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಕಾಮಕಸ್ತೂರಿ ಬೀಜಗಳು ದೇಹದಲ್ಲಿನ ಅಧಿಕ ಶಾಖವನ್ನು ನಿಭಾಯಿಸಲು ಸಹಾಯ ಮಾಡುತ್ತದೆ. ಎಳನೀರಿನೊಂದಿಗೆ ಕಾಮಕಸ್ತೂರಿ ಬೀಜವನ್ನು ಹಾಕಿಕೊಂಡು ಕುಡಿಯುವುದರಿಂದ ಆಮ್ಲೀಯತೆಯನ್ನು ನಿವಾರಿಸಬಹುದು. ಇದು ದೇಹದಲ್ಲಿ…

Read More

ಬೆಂಗಳೂರು:- CM ಸಿದ್ದರಾಮಯ್ಯ ಅವರು ಇಂದು ವಿಧಾನಸೌಧದಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಸಲಿದ್ದಾರೆ. ಸಾರ್ವಜನಿಕರು ತಮ್ಮ ಗುರುತಿನ ಚೀಟಿಯೊಂದಿಗೆ ಅಂದರೆ ಆಧಾರ್ ಅಥವಾ ಪಡಿತರ ಕಾರ್ಡ್ ನೊಂದಿಗೆ ಬಂದು ರಿಜಿಸ್ಟರ್ ಮಾಡಿಕೊಳ್ಳಬೇಕು. ರಿಜಿಸ್ಟರ್ ಮಾಡಿಕೊಳ್ಳುವಾಗ ಯಾವ ಇಲಾಖೆಗೆ ಸಂಬಂಧಿಸಿದ ಸಮಸ್ಯೆ ಎಂದು ನೋಡಿ ಆ ಇಲಾಖೆಯ ಕೌಂಟರ್ ನಂಬರ್ ಕೊಡಲಾಗುತ್ತೆ. ಆ ಕೌಂಟರ್ ನಂಬರ್ ಬಳಿ ಹೋಗಿ ತಮ್ಮ ಮನವಿಯನ್ನ ಸಾರ್ವಜನಿಕರು ಕೊಡಬಹುದು‌. ಇದಕ್ಕಾಗಿ 36 ವಿವಿಧ ಇಲಾಖೆಯ ಕೌಂಟರ್ ಗಳನ್ನ ತೆರೆಯಲಾಗಿದೆ. ಕೌಂಟರ್ ಗಳಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳೇ ಖುದ್ದು ಸಾರ್ವಜನಿಕ ಮನವಿ ಸ್ವೀಕರಿಸಲಿದ್ದಾರೆ. ಬಳಿಕ ಸಿಎಂ‌ ಸಿದ್ದರಾಮಯ್ಯನವರೇ ಖುದ್ದು ಆ ಕೌಂಟರ್ ಗಳಿಗೆ ತೆರಳಿ ಅರ್ಜಿಯನ್ನ ನೋಡಲಿದ್ದಾರೆ. ಇದಕ್ಕಾಗಿ ಈಗಾಗಲೇ ಎಲ್ಲಾ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸ್ಥಳದಲ್ಲೇ ಇರುಲು ಸೂಚಿಸಲಾಗಿದೆ. ಇನ್ನೂ ಆನ್ ಲೈನ್ ನಲ್ಲೂ ನೊಂದಣಿ ಮಾಡಿಕೊಳ್ಳಬಹುದು. ಸಿಎಂ ಜನಸ್ಪಂದನಕ್ಕೆ ಅಹವಾಲು ಸಲ್ಲಿಸಲು 1902 ಸಂಖ್ಯೆ ಗೆ ಕರೆ ಮಾಡಿ ನೊಂದಾಯಿಸಬಹುದು. ಜನಸ್ಪಂದನ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರಿಗೆ ಲಘು…

Read More

ನವದೆಹಲಿ:- ಆರ್​ಬಿಐ ಗವರ್ನರ್ ರಿಂದ ಇಂದು ಬೆಳಿಗ್ಗೆ 10 ಗಂಟೆಗೆ ಸುದ್ದಿಗೋಷ್ಠಿ ನಡೆಯಲಿದೆ. ಆರ್​ಬಿಐನ ಮಾನಿಟರಿ ಪಾಲಿಸಿ ಕಮಿಟಿಯ ಮೂರು ದಿನಗಳ ಸಭೆ ಇಂದು ಅಂತ್ಯವಾಗುತ್ತಿದೆ. ಇದರ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಯುತ್ತಿದೆ. ಇಂದು ಬೆಳಗ್ಗೆ ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಸಭೆಯ ನಿರ್ಧಾರ ಮತ್ತು ಚರ್ಚಿತ ಸಂಗತಿಗಳನ್ನು ಬಹಿರಂಗಪಡಿಸಲಿದ್ದಾರೆ. ಫೆಬ್ರುವರಿ 6ರಂದು ಆರಂಭಗೊಂಡ ಎಂಪಿಸಿ ಸಭೆಯಲ್ಲಿ ರೆಪೋ ಸೇರಿದಂತೆ ವಿವಿಧ ದರಗಳನ್ನು ಎಷ್ಟು ಇಡಬೇಕು ಎಂಬಿತ್ಯಾದಿ ವಿಚಾರಗಳ ಚರ್ಚೆಯಾಗಿದೆ. ಶಕ್ತಿಕಾಂತ ದಾಸ್ ಸುದ್ದಿಗೋಷ್ಠಿ ಬೆಳಗ್ಗೆ 10 ಗಂಟೆ ಗೆ ಆರಂಭವಾಗುತ್ತದೆ. ಸುದ್ದಿಗೋಷ್ಠಿ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಲಿದ್ದಾರೆ ಕೆಲ ವರದಿಗಳ ಪ್ರಕಾರ, ರೆಪೋ ದರ ಅಥವಾ ಬಡ್ಡಿದರವನ್ನು ಶೇ. 6.5ರಲ್ಲಿ ಮುಂದುವರಿಸುವ…

Read More

ಚಿನ್ನದ ಬೆಲೆ ಎಲ್ಲೆಡೆ ಹೆಚ್ಚಳವಾಗಿದ್ದು, ಬೆಳ್ಳಿ ಬೆಲೆ ಯಥಾಸ್ಥಿತಿ ಕಾದುಕೊಂಡಿದೆ. ಚಿನ್ನದ ಬೆಲೆ ಗ್ರಾಮ್​ಗೆ 25 ರೂನಷ್ಟು ಹೆಚ್ಚಳಗೊಂಡಿದೆ. ಬೆಳ್ಳಿ ಬೆಲೆ ಬೆಂಗಳೂರು ಮೊದಲಾದ ಕೆಲವೇ ನಗರಗಳಲ್ಲಿ ಮಾತ್ರ ತುಸು ಇಳಿಕೆಯಾಗಿದೆ. ಉಳಿದಂತೆ ಯಥಾಸ್ಥಿತಿಯಲ್ಲಿದೆ. ಚಿನ್ನದ ಬೆಲೆ ಭಾರತದಲ್ಲಿ ಎಲ್ಲೆಡೆ ಏರಿದರೆ, ಕೆಲ ದೇಶಗಳಲ್ಲಿ ಕಡಿಮೆಯೂ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 58,000 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 63,230 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,450 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 58,000 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 7,200 ರುಪಾಯಿಯಲ್ಲಿ ಇದೆ. ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಫೆಬ್ರುವರಿ 8ಕ್ಕೆ) 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 58,000 ರೂ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 63,230 ರೂ ಬೆಳ್ಳಿ ಬೆಲೆ…

Read More

ಹಾವೇರಿ:- ತಾಯಿ ಹಸಿವು ನೋಡಲಾಗದೆ ಯುವಕ ಸೂಸೈಡ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ತಾಯಿ ನಿಲಮ್ಮ ಮಗನ ನೆನದು ಕಣ್ಣೀರು ಹಾಕಿದ್ದಾರೆ. ಅನೈತಿಕ ಸಂಬಂಧವೇ ಮಗನ ಸಾವಿಗೆ ಕಾರಣ. ನನ್ನ ಮಗನಿಗೆ ತಾಯಿ ವಯಸ್ಸಿನ ಹೆಂಗಸಿನ ಜೊತೆ ಅನೈತಿಕ ಸಂಬಂಧ ಇತ್ತು. ಅವಳಿಗೆ ಮದುವೆಯಾಗಿ ಮಕ್ಕಳ್ಳಿದ್ದರೂ ನನ್ನ ಮಗನನ್ನು ಮದುವೆಯಾಗು ಎಂದು ದುಂಬಾಲು ಬಿದ್ದಿದ್ದಳು ಎಂದು ತಿಳಿಸಿದ್ದಾರೆ. ಪದೇ ಪದೇ ನಮ್ಮ ಊರಿಗೆ ಬಂದು ತೊಂದರೆ ಕೊಡುತ್ತಿದ್ದಳು. ಹೀಗಾಗಿ ನಾವು ನೀವು ಎಲ್ಲಿಯಾದರು ಇರಿ ಚೆನ್ನಾಗಿ ಇರುವಂತೆ ಹೇಳಿದ್ದೆವು. ನಿತ್ಯ ಆ ಹೆಂಗಸು ಮದ್ಯಪಾನ ಮಾಡುತ್ತಿದ್ದಳು. ಅವಳಿಗೆ ಮದ್ಯ ತಂದು ಕೊಡದಿದ್ದರೆ ಗಲಾಟೆ ಮಾಡುತ್ತಿದ್ದಳು. ಅವಳಿಗೆ ತಕ್ಕ ಶಿಕ್ಷಿಯಾಗಬೇಕು ಎಂದು ನೊಂದ ತಾಯಿ ಹೇಳಿದ್ದಾರೆ. ಬೆಳಗಾವಿ ಜಿಲ್ಲೆಯ ನಂದಗಡ ಠಾಣೆ ಪೊಲೀಸರಿಂದ ಸತ್ಯಾಂಶ ಬಯಲಾಗಿದ್ದು, ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ್ ಪ್ರತಿಕ್ರಿಯಿಸಿದ್ದು, ತಾಯಿಯ ಹಸಿವಿನ ಪರದಾಟ ನೋಡಲಾರದೇ ಆತ್ಮಹತ್ಯೆ ಎಂಬುದು ಸುಳ್ಳು. ಆತ್ಮಹತ್ಯೆ ಮಾಡಿಕೊಂಡ ಬಸವರಾಜ್ ಮತ್ತು ಮಹಿಳೆ ತಾಯಿ, ಮಗ…

Read More

ಬೆಂಗಳೂರು:- ಮದುವೆ ಆದ ಮೂರೇ ದಿನದಲ್ಲಿ ಯುವತಿ ಇನ್ನೊಬ್ಬನ ಜೊತೆ ಎಸ್ಕೇಪ್ ಆಗಿದ್ದು, ಎಸ್ಕೇಪ್ ಆದ ಯುವತಿಯ, ಯುವಕರ ಜೊತೆಗಿನ ಚೆಲ್ಲಾಟ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಅವರಿಬ್ಬರೂ ಅತ್ತೆ ಮಾವನ ಮಕ್ಕಳು ಇಬ್ಬರು ಏಳು ವರ್ಷದಿಂದ ಪ್ರೀತಿಸಿ ಮದುವೆನೂ ಆಯ್ತು. ಆದರೆ ಇದೀಗ ಇವರ ಪ್ರೇಮಕ್ಕೆ ಯಾರದ್ದೋ ದೃಷ್ಟಿ ಬಿದ್ದಂತಾಗಿದೆ. ಬೆಂಗಳೂರಿನ ದೊಡ್ಡಕಲ್ಲಸಂದ್ರದ ನಿವಾಸಿಗಳಾದ ಮಂಜುನಾಥ್ ಮತ್ತು ಮನುಜಾ ಕಳೆದ ಏಳು ವರ್ಷಗಳಿಂದ ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದರು. ಮನೆಯವರ ವಿರೋಧದ ನಡುವೆ ಎರಡು ಬಾರಿ ಮದುವೆ ಆಗಿದ್ದರು. ಮದುವೆಯಾದ ಬಳಿಕ ಮನುಜಳನ್ನು ಪೋಷಕರು ಹಿರಿಯರ ಸಮ್ಮುಖದಲ್ಲಿ ಮದುವೆ ಮಾಡುವುದಾಗಿ ನಂಬಿಸಿ ಕರೆದೊಯ್ದಿದ್ದರು. ಆದರೆ ನಾಲ್ಕೈದು ವರ್ಷ ಕಳೆದರೂ ಮದುವೆ ಮಾಡಿಕೊಟ್ಟಿರಲಿಲ್ಲ. ಕಳೆದೊಂದು ವಾರದ ಹಿಂದೆ ಉಟ್ಟ ಬಟ್ಟೆಯಲ್ಲಿ ಮಂಜುನಾಥ್ ಕುಟುಂಬದ ಜೊತೆ ಮನುಜ ಬಂದಿದ್ದಳು. ಹಿರಿಯರ ಸಮ್ಮುಖದಲ್ಲಿ ಜನವರಿ 26ರಂದು ಮದುವೆ ಮಾಡಲಾಗಿತ್ತು. ಇತ್ತ ಮನುಜಾ ಪೋಷಕರಿಂದ ತಲಘಟ್ಟಪುರ ಠಾಣೆಯಲ್ಲಿ ಮಿಸ್ಸಿಂಗ್ ದೂರು ದಾಖಲಾಗಿದ್ದು, ಈ ವೇಳೆ ತಲಘಟ್ಟಪುರ ಠಾಣೆಯಲ್ಲಿ ತಾನು…

Read More

ಬೆಳಗಾವಿ:- ಕಾಂಗ್ರೆಸ್ ಭವನಕ್ಕೆ ನುಗ್ಗಿದ 27 ಬಿಜೆಪಿ ಕಾರ್ಯಕರ್ತರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿದ ಬಳಿಕ ಇಲ್ಲಿನ ಕಾಂಗ್ರೆಸ್ ಭವನಕ್ಕೆ ನುಗ್ಗಿದ 27 ಬಿಜೆಪಿ ಕಾರ್ಯಕರ್ತರ ವಿರುದ್ಧ ಎಫ್ಐಆರ್ ದಾಖಲಾಗಿದೆ. ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿರುವ ಕಾಂಗ್ರೆಸ್ ಭವನಕ್ಕೆ ಅತಿಕ್ರಮಣ ಪ್ರವೇಶ ಹಾಗೂ ಸಂಚಾರಕ್ಕೆ ಅಡ್ಡಿಪಡಿಸಿದ ಆರೋಪದಡಿ 27 ಬಿಜೆಪಿ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿದೆ. ಬೆಳಗಾವಿ ಬಿಜೆಪಿ ಘಟಕದ ನಗರ ಅಧ್ಯಕ್ಷೆ ಗೀತಾ ಉಮಾಕಾಂತ ಸುತಾರ್, ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುರಗೇಂದ್ರಗೌಡ ಪಾಟೀಲ ಸೇರಿ 27 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಐಪಿಸಿ ಸೆಕ್ಷನ್ 143, 147, 341, 283, 448 ಹಾಗೂ 149 ಅಡಿ 27 ಕಾರ್ಯಕರ್ತರ ವಿರುದ್ಧ ಕೇಸ್ ದಾಖಲಾಗಿದೆ

Read More