Author: AIN Author

ಗದಗ:-ಸ್ವೀಟ್ ಅಂಗಡಿಯಲ್ಲಿ ಕಳ್ಳ ತನ್ನ ಕೈ ಚಳಕ ತೋರಿರುವ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ಜರುಗಿದೆ. ಪಟ್ಟಣದ ಮಿಶ್ರ ಪೇಡಾ ಸ್ವೀಟ್ ಅಂಗಡಿಯಲ್ಲಿ ಕಳ್ಳ ತನ್ನ ಕರಾಮತ್ತು ತೋರಿದ್ದಾನೆ. ಬುಧವಾರ ಬೆಳಗಿನ ಜಾವ ಮೇಲ್ಚಾವಣಿ ಮೂಲಕ ಅಂಗಡಿಗೆ ನುಗ್ಗಿದ್ದ ಕಳ್ಳ, ಕೃತ್ಯ ಎಸಗಿದ್ದಾನೆ. ಕಳ್ಳನ ಕೈಚಳಕದ ದೃಶ್ಯ ಸಿ.ಸಿ.ಟಿವಿಯಲ್ಲಿ ಸೆರೆಯಾಗಿದೆ. ಎರೆಡೆರೆಡು ಬಾರಿ ಅಂಗಡಿಗೆ ನುಗ್ಗಿ‌ ಹಣಕ್ಕಾಗಿ ಕಿಲಾಡಿ ಕಳ್ಳ ಜಾಲಾಡಿದ್ದಾನೆ. ಅಂಗಡಿಯಲ್ಲಿ 7000 ರೂ ನಗದು ಎಗರಿಸಿಕೊಂಡು ಪರಾರಿ ಆಗಿದ್ದಾನೆ. ಲಕ್ಷ್ಮೇಶ್ವರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ಕಳ್ಳನಿಗಾಗಿ ಪೋಲಿಸ ರ ಹುಡುಕಾಟ ನಡೆದಿದೆ.

Read More

ಬೆಳಗಾವಿ :- ಜಿಲ್ಲೆಯ ಅಥಣಿ ತಾಲೂಕಾ ತಹಶೀಲ್ದಾರ್ ಕಚೇರಿಯ ಆವರಣದಲ್ಲಿ ಇಂದು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ರೈತ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆಯನ್ನ ನಡೆಸಿ ತಹಶೀಲ್ದಾರ್ ಮುಖಾಂತರ ಮನವಿ ಪತ್ರವನ್ನು ಸಲ್ಲಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾ ಪ್ರಭಾರಿಯಾದ ಬಸವರಾಜ ಯಂಕ್ಕಚ್ಚಿ ಮಾತನಾಡಿ ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಸಾಕಷ್ಟು ರೈತ ಪರ ಯೋಜನೆಗಳನ್ನ ಜಾರಿಗೆ ತಂದಿತ್ತು,ಅವುಗಳನೆಲ್ಲ ಕಾಂಗ್ರೆಸ್ ಪಕ್ಷ ಹಿಂಪಡೆದು ರೈತ ವಿರೋಧಿ ನೀತಿ ಅನುಸರಿಸುತ್ತಾ ಬಂದಿದೆ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ಕಿಡಿಕಾರಿದರು. ರೈತರ ಹಾಲಿಗೆ ಪ್ರೋತ್ಸಾಹ ಧನ 7 ರೂಪಾಯಿ ಕೊಡುತ್ತೇವೆ ಎಂದು ಹೇಳಿ ರೈತರಿಗೆ ಮೋಸ ಮಾಡಿದೆ,ಅಷ್ಟೇ ಅಲ್ಲದೆ ಬೊಮ್ಮಾಯಿ ಅವರ ಆಡಳಿತದ ಅವಧಿಯಲ್ಲಿ ರೈತರ ಮಕ್ಕಳಿಗೆ ಅನುಕೂಲವಾಗಲಿ ಎಂದು ರೈತನಿಧಿ ಯೋಜನೆಯನ್ನು ಜಾರಿಗೆ ತಂದಿತ್ತು ಅದನ್ನು ಸಹ ಕಾಂಗ್ರೆಸ್ ಸರ್ಕಾರ ಹಿಂಪಡೆದಿದೆ.ಕಾಂಗ್ರೆಸ್ ಪಕ್ಷದವರು ತಂದ ಐದು ಗ್ಯಾರಂಟಿ ಯೋಜನೆಗಳು ಯಾರಿಗೂ ಸಹ‌‌ ಸರಿಯಾಗಿ ತಲುಪಲಿಲ್ಲ ಎಂದು ಕಾಂಗ್ರೆಸ್ ಪಕ್ಷದ ತ್ರೀವವಾದ ವಾಗ್ದಾಳಿ ನಡೆಸಿದರು,…

Read More

ಬೆಂಗಳೂರು:- ರಾಜ್ಯ ಸರ್ಕಾರದ ಉಚಿತ ಬಸ್ ಯೋಜನೆಯಿಂದ ಅನುಕೂಲ ಎಷ್ಟಿದೆಯೋ ಅಷ್ಟೇ ಅನಾನುಕೂಲ ಇದೆ. ತುಂಬಿ ತುಳುಕುತ್ತಿರುವ ಬಸ್ ನಲ್ಲಿ ಕಿಟಕಿ ಓಪನ್ ಮಾಡೋ‌ ವಿಚಾರಕ್ಕೆ ಚಪ್ಪಲಿಯಿಂದ ಮಹಿಳೆಯರು ಹೊಡೆದಾಡಿದ್ದಾರೆ. ಬೆಂಗಳೂರಿನ ರಾಜಾಜಿನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ. ಮೆಜೆಸ್ಟಿಕ್ ಟು ಪೀಣ್ಯಾ ಬಸ್ ನಲ್ಲಿ ನಡೆದಿರೋ ಘಟನೆ ಇದಾಗಿದ್ದು, ಮೆಜೆಸ್ಟಿಕ್ ನಿಂದ‌ ಪೀಣ್ಯಾ ಕಡೆ ಬಸ್ ಹೋಗ್ತಿತ್ತು. ರಾಜಾಜಿನಗರ ಠಾಣಾ ವ್ಯಾಪ್ತಿಯ ಮೂಲಕ ಹೋಗ್ತಿತ್ತು. ಈ ವೇಳೆ ಕಿಟಕಿ ತೆಗೆಯೋ ವಿಚಾರಕ್ಕೆ ಇಬ್ಬರು ಮಹಿಳೆಯರ ಮಧ್ಯೆ ಕಿರಿಕ್ ಉಂಟಾಗಿದೆ. ಈ ವೇಳೆ ಚಪ್ಪಲಿ, ಶೂ ನಿಂದ ಪರಸ್ಪರ ಇಬ್ಬರು ಮಹಿಳೆಯರು ಹೊಡೆದಾಡಿಕೊಂಡಿದ್ದಾರೆ.

Read More

ಟೀಮ್ ಇಂಡಿಯಾದಿಂದ ನಾಪತ್ತೆಯಾದ್ದ ಇಶಾನ್ ಕಿಶನ್ ಬರೋಡಾದಲ್ಲಿ ಪತ್ತೆಯಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಇಶಾನ್ ಕಿಶನ್ ಎಲ್ಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಭಾರತ ತಂಡಕ್ಕೂ ಆಯ್ಕೆ ಆಗದ ಇವರು, ಕೋಚ್ ರಾಹುಲ್ ದ್ರಾವಿಡ್ ರಣಜಿ ಆಡಿ ಎಂದು ಹೇಳಿದರು ಅಲ್ಲೂ ಕಾಣಿಸಿಕೊಂಡಿಲ್ಲ. ಹೀಗಿರುವಾಗ ಇದೀಗ ಕಿಶನ್ ಬರೋಡದಲ್ಲಿ ಕಾಣಿಸಿಕೊಂಡಿದ್ದಾರೆ. ಟೀಮ್ ಇಂಡಿಯಾದ ಮ್ಯಾನೇಜ್‌ಮೆಂಟ್ ಮತ್ತು ಇಶಾನ್ ಕಿಶನ್ ನಡುವೆ ಎಲ್ಲವೂ ಸರಿಯಿಲ್ಲ ಎಂಬುದು ಎದ್ದು ಕಾಣುತ್ತಿದೆ. ಈ ನಡುವೆ ಕೋಚ್ ರಾಹುಲ್ ದ್ರಾವಿಡ್ ಕೂಡ ಇಶಾನ್ ಕಿಶನ್ ಬಗ್ಗೆ ಹಲವು ಮಾತುಗಳನ್ನು ಹೇಳಿದ್ದರು, ಈ ಎಲ್ಲಾ ಊಹಾಪೋಹಗಳ ಹೊರತಾಗಿ ಇಶಾನ್ ಕಿಶನ್ ಬಗ್ಗೆ ಇದೀಗ ಹಲವು ವಿಷಯಗಳು ಬೆಳಕಿಗೆ ಬಂದಿವೆ. ಕ್ರಿಕ್‌ಬಜ್ ವರದಿಯ ಪ್ರಕಾರ, ಇಶಾನ್ ಕಿಶನ್ ಪ್ರಸ್ತುತ ಬರೋಡಾದಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ಅವರೊಂದಿಗೆ ಅಭ್ಯಾಸ ನಡೆಸುತ್ತಿದ್ದಾರೆ. ಇಶಾನ್ ಕಿಶನ್ ಐಪಿಎಲ್ ಸೀಸನ್ ಆರಂಭಕ್ಕೂ ಮುನ್ನ ಇಲ್ಲಿ ಬೆವರು ಹರಿಸುತ್ತಿದ್ದಾರೆ. ಅಚ್ಚರಿ ವಿಷಯ ಎಂದರೆ ಅವರು ಈ…

Read More

ಮಂಡ್ಯ:- ಜಿಲ್ಲೆಯ ಕೆರಗೋಡು ಹನುಮ ಧ್ವಜ ತೆರವು ಖಂಡಿಸಿ ನಾಳೆ ಮಂಡ್ಯ ಬಂದ್ ಮಾಡಲು ಹಿಂದೂ ಮುಖಂಡರು ನಿರ್ಧರಿಸಿದ್ದು, ಇಂದು ಬಿಜೆಪಿ ನಿಲುವು ಪ್ರಕಟಗೊಳ್ಳಲಿದೆ. ಜಿಲ್ಲಾಡಳಿತ ಬಂದ್ ಕೈಬಿಡುವಂತೆ ಮನವಿ ಮಾಡಿದರೂ ಖ್ಯಾರೆ ಎನ್ನದ ಹಿಂದೂಪರ ಸಂಘಟನೆಗಳು ನಾಳೆ ಬಂದ್ ನಡೆಸಲು ಮುಂದಾಗಿವೆ. ಈ ಹಿನ್ನೆಲೆ, ಇಂದು ಮಧ್ಯಾಹ್ನ ಜಿಲ್ಲಾ ಬಿಜೆಪಿ ಸಭೆ ಕರೆದಿದ್ದು, ಚರ್ಚೆ ನಡೆಸಿ ತೀರ್ಮಾನ ಪ್ರಕಟಿಸುವ ಸಾಧ್ಯತೆ ಇದೆ. ಆದರೆ, ಪ್ರತಿಭಟನೆಯಲ್ಲಿ ಕೈಜೋಡಿಸಿದ್ದ ಮೈತ್ರಿ ಪಕ್ಷ ಜೆಡಿಎಸ್ ಮಂಡ್ಯ ಬಂದ್​ನಿಂದ ಅಂತರ ಕಾಯ್ದುಕೊಂಡಿದೆ. ವಿವಾದ ಪ್ರಾರಂಭದಲ್ಲಿ ಬಿಜೆಪಿ, ಹಿಂದೂಪರ ಸಂಘಟನೆಗಳಿಗೆ ಜೆಡಿಎಸ್ ಸಾಥ್ ನೀಡಿತ್ತು. ಜೊತೆಗೆ ದಳ ನಾಯಕರು ಪಾದಯಾತ್ರೆ ಮಾಡಿದ್ದರು. ಆನಂತರ ಹೋರಾಟದಿಂದ ಜೆಡಿಎಸ್ ಹಿಂದೆ ಸರಿದಿದೆ. ಅದಾಗ್ಯೂ, ಬಿಜೆಪಿ ಜೆಡಿಎಸ್ ಬಿಟ್ಟು ಮನೆ ಮನೆಗೆ ಹನುಮ ಧ್ವಜ ಕಟ್ಟುವ ಅಭಿಯಾನ ನಡೆಸುತ್ತಿದೆ. ಫೆಬ್ರವರಿ 9 ರ ಬಂದ್ ಬೆಂಬಲದ ಬಗ್ಗೆ ಜೆಡಿಎಸ್ ಅಭಿಪ್ರಾಯ ತಿಳಿಸಿಲ್ಲ. ಮಾಜಿ ಪ್ರಧಾನಿಯೂ ಆಗಿರುವ ಜೆಡಿಎಸ್ ವರಿಷ್ಠ ಹೆಚ್​ಡಿ ದೇವೇಗೌಡ…

Read More

ಬಳ್ಳಾರಿ:- ಸರ್ಕಾರ ಬಾಕಿ ಬಿಲ್ ಪಾವತಿಸದ ಹಿನ್ನೆಲೆ ಬಳ್ಳಾರಿ ನಗರದಲ್ಲಿ 5 ಇಂದಿರಾ ಕ್ಯಾಂಟೀನ್‍ಗಳು ಬಂದ್ ಆಗಿದೆ. ಬಡವರಿಗೆ ಕಡಿಮೆ ದರದಲ್ಲಿ ಆಹಾರ ನೀಡುವ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿತ್ತು. ಈಗ ಅದೇ ಸರ್ಕಾರದ ಆಡಳಿತಾವಧಿಯಲ್ಲಿ ಅನುದಾನ ಕೊರತೆಯಿಂದ ಇಂದಿರಾ ಕ್ಯಾಂಟೀನ್ ಯೋಜನೆ ಹಳ್ಳ ಹಿಡಿದಂತಾಗಿದೆ. ನಿರ್ವಾಹಣೆ ಪಡೆದ ಏಜೆನ್ಸಿಗಳಿಗೆ ಕಳೆದ ಮೂರು ವರ್ಷಗಳಿಂದಲೂ ಅನುದಾನವೇ ಬಿಡುಗಡೆಯಾಗಿಲ್ಲ. 2019 ಅಕ್ಟೋಬರ್‍ನಿಂದ ಈ ವರೆಗೂ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ಸುಮಾರು 3.38 ಕೋಟಿ ರೂ. ಬಾಕಿ ಮೊತ್ತವನ್ನ ಸರ್ಕಾರ ಇರಿಸಿಕೊಂಡಿದೆ. ಈ ಕುರಿತು ಸಾಕಷ್ಟು ಬಾರಿ ಏಜೆನ್ಸಿಗಳು ಸರ್ಕಾರಕ್ಕೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಒಟ್ಟು ಎಂಟು ಕ್ಯಾಂಟೀನ್‍ಗಳು ಸೇರಿದಂತೆ 4.5 ಕೋಟಿ ರೂ. ಬಿಲ್ ಬಾಕಿ ಇದೆ. ಪ್ರತಿ ತಿಂಗಳ ಕ್ಯಾಂಟಿನ್ ನಿರ್ವಹಣೆಗೆ ಸುಮಾರು 10 ಲಕ್ಷ ರೂ.ಗಳಿಗೂ ಅಧಿಕ ಹಣ ವ್ಯಯಿಸಬೇಕಿದೆ. ಇದೇ ಕಾರಣಕ್ಕೆ, ಇಂದಿರಾ ಕ್ಯಾಂಟಿನ್ ನಿರ್ವಹಣೆ ವಹಿಸಿಕೊಂಡಿದ್ದ ಎಜೆನ್ಸಿಗಳು ತರಕಾರಿ, ಗ್ಯಾಸ್, ಸಿಬ್ಬಂದಿಗೂ…

Read More

ಚೆನ್ನೈ ಸೂಪರ್​ ಕಿಂಗ್ಸ್ ತಂಡದ​ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಐಪಿಎಲ್​-2024ಗಾಗಿ ಅಭ್ಯಾಸ ಆರಂಭಿಸಿದ್ದಾರೆ. ಧೋನಿ ಅವರು ರಾಂಚಿಯಲ್ಲಿ ಬ್ಯಾಟಿಂಗ್​ ಅಭ್ಯಾಸ ನಡೆಸುತ್ತಿರುವುದು ಕಂಡುಬಂದಿದೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಅಲ್ಲದೆ, ನಿನ್ನೆ ರಾಂಚಿಯ ದೇವ್ರಿ ದೇವಸ್ಥಾನಕ್ಕೆ ಧೋನಿ ಅವರು ಭೇಟಿ ನೀಡಿದ್ದರು. ಕೂಲ್ ಕ್ಯಾಪ್ಟನ್ ಧೋನಿ ಯಾವುದೇ ಪ್ರಮುಖ ಕಾರ್ಯಗಳನ್ನು ಕೈಗೊಳ್ಳುವ ಮೊದಲು ಈ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಮಾಡಿ, ಆಶೀರ್ವಾದ ಪಡೆಯುತ್ತಾರೆ ಎನ್ನುವುದು ವಿಶೇಷ. ಚೆನ್ನೈ ಸಂಭಾವ್ಯ ಪ್ಲೇಯಿಂಗ್ XI ಎಂ.ಎಸ್ ಧೋನಿ (ನಾಯಕ/ವಿ.ಕೀ), ಡೆವೊನ್ ಕಾನ್ವೆ, ಋತುರಾಜ್ ಗಾಯಕ್ವಾಡ್, ಡೇರಿಲ್ ಮಿಚೆಲ್, ಅಜಿಂಕ್ಯ ರಹಾನೆ, ರಚಿನ್ ರವೀಂದ್ರ / ಮಿಚೆಲ್ ಸ್ಯಾಂಟ್ನರ್, ಶಿವಂ ದುಬೆ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ದೀಪಕ್ ಚಾಹರ್, ಮತೀಶ ಪತಿರಾನಾ / ಮುಸ್ತಫಿಜುರ್ ರೆಹಮಾನ್

Read More

ಇತ್ತೀಚಿನ ದಿನಗಳಲ್ಲಿ ರಕ್ತದೊತ್ತಡ ಸಮಸ್ಯೆ ಎಲ್ಲರಲ್ಲೂ ಕಂಡುಬರುತ್ತಿದೆ. ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರು ಯಾವ ಆಹಾರ ಸೇವಿಸಬೇಕು? ಯಾವುದನ್ನು ಸೇವಿಸಬಾರದು ಎಂಬುದನ್ನು ತಿಳಿದುಕೊಳ್ಳಿ. ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರು ಅದನ್ನು ನಿಯಂತ್ರಣದಲ್ಲಿಡಲು ಅನೇಕ ವಿಧದ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಬೇಕು. ಹಾಗಾಗಿ ಅಧಿಕ ರಕ್ತದೊತ್ತಡ ನಿಯಂತ್ರಣದಲ್ಲಿಡಲು ಗೋಧಿ, ಹೆಸರು ಬೇಳೆ, ಮಸೂರ, ಟೊಮೆಟೊ, ಸೋರೆಕಾಯಿ, ಹುಣಸೆಹಣ್ಣು, ಹಾಗಲಕಾಯಿ, ಕುಂಬಳಕಾಯಿ, ಹಸಿರು ಸೊಪ್ಪುಗಳು, ತರಕಾರಿ, ಹಣ್ಣುಗಳನ್ನು ಸೇವಿಸಿ ಜೊತೆಗೆ ಜೀರಿಗೆಯನ್ನು ನಿಮ್ಮ ಆಹಾರದಲ್ಲಿ ಸೇರಿಸಿದರೆ ಉತ್ತಮ. ಆದರೆ ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರು ಆಹಾರದಲ್ಲಿ ಉಪ್ಪು, ಸಕ್ಕರೆ ಮತ್ತು ಅಧಿಕ ಕೊಬ್ಬಿನ ಆಹಾರಗಳನ್ನು ಸೇವಿಸಬಾರದು. ಮೊಟ್ಟೆ,ಬೆಣ್ಣೆ,ಎಣ್ಣೆಯುಕ್ತ ಆಹಾರ, ಮಸಾಲೆಯುಕ್ತ ಆಹಾರ, ಮಾಂಸ, ತುಪ್ಪ, ಕೇಕ್, ಪಿಜ್ಜಾ. ಪ್ಯಾಕೆಟ್ ಆಹಾರ, ಜಂಕ್ ಫುಡ್ ಇಂತಹ ಆಹಾರಗಳಿಂದ ದೂರವಿರಿ.

Read More

ಚಿಕ್ಕಮಗಳೂರು:- ಹೊರನಾಡು ಭದ್ರಾ ನದಿ ತೀರದಲ್ಲಿ ವಾಮಾಚಾರ ನಡೆದಿದ್ದು, ನದಿ ದಡದಲ್ಲಿ ಪೂಜೆ-ಪುನಸ್ಕಾರ ಮಾಡಿ ನಾಲ್ಕು ಕುರಿಗಳನ್ನು ಕಿಡಿಗೇಡಿಗಳು ಬಲಿ ಕೊಟ್ಟಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಹೊರನಾಡು ಭದ್ರಾ ನದಿಯ ತೀರದಲ್ಲಿ ವಾಮಾಚಾರ ಮಾಡಿಸಲಾಗಿದೆ. ನದಿ ದಡದಲ್ಲಿ ಪೂಜೆ-ಪುನಸ್ಕಾರಗಳನ್ನು ಮಾಡಿ ರಾತ್ರೋರಾತ್ರಿ ನಾಲ್ಕು ಕುರಿಗಳ ರುಂಡ-ಮುಂಡ ಬೇರ್ಪಡಿಸಿ ಮಾಟ ಮಂತ್ರ ಮಾಡಿಸಿದ್ದಾರೆ. ಕಳಸ ಹೊರನಾಡು ಸಂಪರ್ಕಿಸುವ ಹೆಬ್ಬಾಳೆ ಸೇತುವೆ ಬಳಿ ಕಳೆದ ಎರಡು ದಿನದಿಂದ ನಿರಂತರವಾಗಿ ಭದ್ರಾ ನದಿಯ ತೀರದಲ್ಲಿ ವಾಮಾಚಾರ ಮಾಡಲಾಗುತ್ತಿದೆ. ಭದ್ರಾ ನದಿಯಲ್ಲಿ ನಾಲ್ಕು ಕುರಿಗಳು ತೇಲುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿವೆ. ದಂಡೆಯಲ್ಲಿ ಅರಿಶಿನ ಕುಂಕುಮ ಬಟ್ಟೆ ಪತ್ತೆಯಾಗಿದೆ. ವಾಮಾಚಾರಕ್ಕಾಗಿ ಪೂಜೆ ನಡಿಸಿ ಕುರಿ ಬಲಿ ನೀಡಿರುವ ಶಂಕೆ ವ್ಯಕ್ತವಾಗಿದೆ. ಕಿಡಿಗೇಡಿಗಳು ನದಿ ದಂಡೆಯಲ್ಲಿ ಕುರಿ ಕಡಿದು ನದಿಗೆ ಎಸೆದಿದ್ದಾರೆ. ಭದ್ರಾ ನದಿಯ ದಂಡೆಯಲ್ಲಿ ನಡೆಯುತ್ತಿರುವ ವಾಮಾಚಾರದಿಂದ ಸ್ಥಳೀಯರು, ಪ್ರವಾಸಿಗರು ಬೆಚ್ಚಿಬಿದ್ದಿದ್ದಾರೆ. ಸ್ಥಳಕ್ಕೆ ಕಳಸ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

Read More

ತುಮಕೂರು:- ಉದ್ಘಾಟನೆ ದಿನವೇ ತುಮಕೂರು KSRTC ಹೈಟೆಕ್‌ ಬಸ್ ನಿಲ್ದಾಣ ಬಾಗಿಲು ಮುಚ್ಚಿದೆ. ಕೇಂದ್ರದ ಯೋಜನೆಯ ಈ ಕಾಮಗಾರಿ ತಮ್ಮದೆಂದು ಬಿಂಬಿಸಿಕೊಳ್ಳಲು ಹೋದ ರಾಜ್ಯ ಸರ್ಕಾರ ಎಡವಟ್ಟು ಮಾಡಿ ಮುಜುಗರ ಅನುಭವಿಸಿದೆ. ತುಮಕೂರಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಉದ್ಘಾಟನೆಯಾದ ದಿನವೇ ಬಾಗಿಲು ಹಾಕಿದೆ. ಕಳೆದ ಜನವರಿ 29ರಂದು ಸಿಎಂ ಸಿದ್ದರಾಮಯ್ಯ ಉದ್ಘಾಟನೆ ಮಾಡಿದ್ದರು. ವಿಪರ್ಯಾಸ ಅಂದರೆ ಈವೆರಗೂ ಒಂದು ಬಸ್ಸು ಓಡಾಡಿಲ್ಲ. ಉದ್ಘಾಟನೆಯಾಗಿ 10 ದಿನ ಕಳೆದರೂ ಜನ ಸೇವೆಗೆ ಮುಕ್ತವಾಗಿಲ್ಲ. ಜನವರಿ 29ರಂದು ಸಿಎಂ ಸಿದ್ದರಾಮಯ್ಯ, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಜಿಲ್ಲಾ ಉಸ್ತುವಾರಿ ಸಚಿವ ಪರಮೇಶ್ವರ್ ಸೇರಿದಂತೆ ಅನೇಕ ನಾಯಕರು ಹೈಟೆಕ್ ಬಸ್ ನಿಲ್ದಾಣಕ್ಕೆ ನಿಶಾನೆ ತೋರಿದರು. ತುಮಕೂರಿನ ಅಶೋಕ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ನೂತನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣವನ್ನು ಉದ್ಘಾಟನೆ ಮಾಡಿದ್ದರು. ಆದರೆ ಅದೇ ದಿನ ಸಂಜೆ ಸೂರ್ಯಾಸ್ತವಾಗುವ ಮೊದಲೇ ಬಸ್ ನಿಲ್ದಾಣದ ಬಾಗಿಲು ಮುಚ್ಚಲಾಗಿದೆ. ಬಸ್ ನಿಲ್ದಾಣಕ್ಕೆ ತಾತ್ಕಾಲಿಕವಾಗಿ ನಿರ್ಮಿಸಿದ ಎರಡೂ ಗೇಟಿಗೆ ಬೀಗ ಹಾಕಲಾಗಿದೆ. ಬಸ್‌ಗಳ…

Read More