Author: AIN Author

ಬೆಂಗಳೂರು : ಕಾಂಗ್ರೆಸ್‌ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆ ಜಾರಿಗೆ ಬಂದ ನಂತರ ಮಹಿಳೆಯರು ದೇವಾಲಯಗಳಿಗೆ ಭೇಟಿ ನೀಡುವುದು ಹೆಚ್ಚಾಗಿದೆ. ಹೀಗಾಗಿ, ದೇವಾಲಯಗಳ ಖಜಾನೆಯೂ ತುಂಬಿ ತುಳುಕುತಿದೆ. 2022ರಲ್ಲಿ ದೇಗುಲಗಳಿಂದ ಸರ್ಕಾರಕ್ಕೆ 230 ಕೋಟಿ ಆದಾಯ ಬಂದಿತ್ತು. ಇದೀಗ, 2023ರಲ್ಲಿ 390 ಕೋಟಿ ಆದಾಯ ಬಂದಿದ್ದು, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ 150 ಕೋಟಿ ರೂಪಾಯಿ ಆದಾಯ ಹೆಚ್ಚಳವಾಗಿದೆ. ಹಾಗಾದರೆ, ಯಾವೆಲ್ಲಾ ದೇವಾಲಯಗಳಲ್ಲಿ ಎಷ್ಟು ಆದಾಯ ಬಂದಿದೆ ಎಂಬುದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ದೇವಾಲಯಗಳಿಗೆ ಬಂದ ಆದಾಯ ಕುಕ್ಕೆ ಸುಬ್ರಮ್ಮಣ್ಯ ಕಳೆದ ವರ್ಷದ ಆದಾಯ : 74 ಕೋಟಿ ಈ ವರ್ಷದ ಆದಾಯ : 123 ಕೋಟಿ ಕೊಲ್ಲೂರು ಮೂಕಂಬಿಕಾ ಕಳೆದ ವರ್ಷದ ಆದಾಯ : 31.36 ಕೋಟಿ ಈ ವರ್ಷದ ಆದಾಯ : 59.47 ಕೋಟಿ ಚಾಮುಂಡೇಶ್ವರಿ ದೇಗುಲ ಕಳೆದ ವರ್ಷದ ಆದಾಯ : 21.92 ಕೋಟಿ ಈ ವರ್ಷದ ಆದಾಯ : 52.40 ಕೋಟಿ ಎಡೆಯೂರು ಸಿದ್ದಲಿಂಗೇಶ್ವರ ಕಳೆದ ವರ್ಷದ ಆದಾಯ…

Read More

ಬೆಂಗಳೂರು :  ಅಂತ್ಯಸಂಸ್ಕಾರ ಮಾಡಲು ಜಾಗವಿಲ್ಲದ ಕಾರಣಕ್ಕೆ ಪೊಲೀಸ್ ಮೆಟ್ಟಿಲೇರಿರುವ ಘಟನೆ ಆನೇಕಲ್ ತಾಲೂಕಿನ ಬಹುದೂರ್ ಪುರದಲ್ಲಿ ನಡೆದಿದೆ.. ಬಹದ್ದೂರ್ ಪುರದ ನಿವಾಸಿ ನಾಗರಾಜು ಅನಾರೋಗ್ಯದ ಕಾರಣಕ್ಕಾಗಿ ಇಂದು ಮೃತಪಟ್ಟಿದ್ದರು ಅಂತ್ಯಸಂಸ್ಕಾರ ಮಾಡಲು ಹೋಗಿದ್ದಾಗ ಬಹದ್ದೂರ್ ಪುರ ಗ್ರಾಮದ ರಮೇಶ್ ‌ಎಂಬಾತ ಅಡ್ಡಿಪಡಿಸಿದ ಈ ಜಾಗ ನಮಗೆ ಸೇರಿದ್ದು ಅಂತ ಕಿರಿಕ್ ಮಾಡ್ಕೊಂಡಿದ್ರು ಹೀಗಾಗಿ ಪೊಲೀಸ್ ಮೆಟ್ಟಿಲೇರಿದ್ದಾರೆ.. ಹೌದು ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಬಹುದ್ದೂರ್ ಪುರ ಸರ್ವೆ ನಂಬರ್ ,170 ರಲ್ಲಿ 5 ಎಕರೆ ಜಾಗವನ್ನು ಅಲ್ಲಿನ ಬಹುದೂರ್ ಪುರ ನಿವಾಸಿಗಳಿಗೆ ರುದ್ರಭೂಮಿಗೆ ಅಂತ ಬಿಡಲಾಗಿತ್ತು ಆದರೆ ಅಲ್ಲಿನ ಪ್ರಭಾವಿ ನಾಯಕ ರಮೇಶ್ ಸ್ಮಶಾನ ಜಾಗದಲ್ಲಿ ಅಕ್ರಮ ಬಡಾವಣೆ ಮಾಡಲು ಮುಂದಾಗಿದ್ದಾರೆ ಅಲ್ಲದೆ ಅಂತ್ಯಸಂಸ್ಕಾರಕ್ಕೂ ಕೂಡ ಅಡ್ಡಿಪಡಿಸಿದ್ದಾರೆ ‌‌ಇನ್ನು ಇದೇ ಜಾಗದಲ್ಲಿ ಸುಮಾರು 70 ವರ್ಷಗಳಿಂದ ಅಂತ್ಯ ಸಂಸ್ಕಾರಕ್ಕಾಗಿ ಜಾಗವನ್ನ ಕಾಯ್ದಿರಿಸಲಾಗಿತ್ತು ಇದೇ ಪಕ್ಕದ ಜಾಗದಲ್ಲಿ ಹಿಂದೂ ರುದ್ರ ಭೂಮಿ ಪಕ್ಕದ ಜಾಗದಲ್ಲಿ ರಮೇಶ್ ಅವರಿಗೆ ಒಂದು ಎಕರೆ ಜಾಗವನ್ನು…

Read More

ಬೆಂಗಳೂರು ಗ್ರಾಮಾಂತರ:   ಆನೇಕಲ್ ನಲ್ಲಿ ವೃದ್ದೆ ಕತ್ತು ಕೊಯ್ದು ಚೈನ್ ಸ್ಮ್ಯಾಚಿಂಗ್ ಪ್ರಕರಣ ಇನ್ನಷ್ಟು ಚುರುಕುಗೊಳಿಸಿದ ಪೊಲೀಸರು ಹಾಗೆ ಆರೋಪಿಯ ಪತ್ತೆಗಾಗಿ 5 ತಿಂಗಳಿಂದ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ. ಆರೋಪಿಯ ದೃಶ್ಯಾವಳಿ ಚಹರೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು  ಆನೇಕಲ್ ನ ಲಕ್ಷ್ಮಿ ಚಿತ್ರಮಂದಿರದ ರಸ್ತೆಯಲ್ಲಿ ನಡೆದಿದ್ದ ಘಟನೆಯಾಗಿದ್ದು ನವೆಂಬರ್ 20.2023 ರಂದು ಹಾಡಹಾಗಲೇ ಕತ್ತು ಸೀಳಿ ಚೈನ್ ಕಸಿದು ಪರದೆಯಾಗಿದ್ದ ಕಳ್ಳ ಸುಮಾರು ಐದು ತಿಂಗಳಿಂದ ಆರೋಪಿಯ ಪತ್ತೆಗಾಗಿ ಹುಡುಕಾಟ ನಡೆಸುತ್ತಿರುವ ಪೊಲೀಸರು ಅಕ್ಕಯ್ಯಮ್ಮ ಎಂಬ ವೃದ್ದೆ ಬಳಿ ಚಿನ್ನದ ಸರ ಕದ್ದೊಯ್ದ ಕಳ್ಳ ಒಂಟಿ ಮಹಿಳೆ ಇರುವುದನ್ನ ಹೊಂಚು ಹಾಕಿದ್ದ ಕಳ್ಳ ಏಕಾಏಕಿ ಮನೆಯೊಳಗೆ ನುಗ್ಗಿ ಬಾಗಿಲು ಹಾಕಿದ್ದ ಆಸಾಮಿ ಮನೆಯಲ್ಲಿನ ವೃದ್ಧೆಯ ಕೂಗಾಟ ಕೇಳಿ ಸ್ಥಳಕ್ಕೆ ಧಾವಿಸಿದ ಅಕ್ಕ ನಿವಾಸಿಗಳು

Read More

ಸಾಮಾನ್ಯವಾಗಿ ಕಂಕುಳಿನ ಬಣ್ಣವು ನಮ್ಮ ಉಳಿದ ಚರ್ಮದ ಬಣ್ಣಕ್ಕೆ ಹೊಂದಿಕೆಯಾಗುತ್ತದೆ. ಆದರೆ ಕೆಲವೊಮ್ಮೆ, ನಮ್ಮ ತೋಳುಗಳ ಚರ್ಮವು ಕಪ್ಪು ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತದೆ. ಡಾರ್ಕ್ ಅಂಡರ್ ಆರ್ಮ್ಸ್ ಯಾವುದೇ ಗಂಭೀರ ಕಾಯಿಲೆಯನ್ನು ಸೂಚಿಸದಿದ್ದರೂ, ಅವುಗಳಿಂದಾಗಿ ಜನರು ಬಹಳಷ್ಟು ಮುಜುಗರ ಎದುರಿಸಬೇಕಾಗುತ್ತದೆ. ವಿಶೇಷವಾಗಿ ಮಹಿಳೆಯರು ಬೇಸಿಗೆಯ ದಿನಗಳಲ್ಲಿ ತೋಳಿಲ್ಲದ ಬಟ್ಟೆಗಳನ್ನು ಧರಿಸಲು ಇಷ್ಟ ಪಡುತ್ತಾರೆ. ತೋಳಿಲ್ಲದ ಬಟ್ಟೆ ಧರಿಸಿದಾಗ ಕಾಣುವ  ಡಾರ್ಕ್ ಅಂಡರ್ ಆರ್ಮ್ಸ್  ಸಾಕಷ್ಟು ಮುಜುಗರ ಉಂಟು ಮಾಡುತ್ತದೆ.  ಈ ಮನೆಮದ್ದು ನಿಮ್ಮ ಕಂಕುಳಿನ ಸತ್ತ ಚರ್ಮವನ್ನು ತೆಗೆದುಹಾಕುವುದಲ್ಲದೆ ಚರ್ಮದ ಬಣ್ಣವನ್ನು ಬೆಳ್ಳಗಾಗಿಸುವುದು. ಆಪಲ್ ಸೈಡರ್ ವಿನೆಗರ್​ ಆಪಲ್ ಸೈಡರ್ ವಿನೆಗರ್ ಕೊಬ್ಬನ್ನು ಕಡಿಮೆ ಮಾಡುವುದು ಮಾತ್ರವಲ್ಲದೆ ಸತ್ತ ಜೀವಕೋಶಗಳನ್ನು ತೆಗೆದುಹಾಕುತ್ತದೆ. ಅಡಿಗೆ ಸೋಡಾವನ್ನು ಆಪಲ್ ಸೈಡರ್ ವಿನೆಗರ್‌ ನೊಂದಿಗೆ ಬೆರೆಸಿ ಮತ್ತು ಅದನ್ನು ನಿಮ್ಮ ಕಂಕುಳಿಗೆ ಹಚ್ಚಿ. ಸ್ವಲ್ಪ ಸಮಯ ಒಣಗಲು ಬಿಡಿ ಮತ್ತು ನಂತರ ನೀರಿನಿಂದ ಸ್ವಚ್ಛಗೊಳಿಸಿ. ಆಲೂಗಡ್ಡೆ​ ಆಲೂಗಡ್ಡೆಯ ತುಂಡನ್ನು ನಿಮ್ಮ ಕಂಕುಳಿಗೆ ಉಜ್ಜಿಕೊಳ್ಳಿ. ನೀವು ಆಲೂಗಡ್ಡೆಯನ್ನು…

Read More

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಡಬಲ್ ಮರ್ಡರ್ (Double Murder) ನಡೆದಿದ್ದು, ಮತ್ತೆ ಸ್ಥಳೀಯರನ್ನು ಬೆಚ್ಚಿ ಬೀಳುವಂತೆ ಮಾಡಿದೆ. ಬೆಂಗಳೂರಿನ ಕುಂಬಾರಪೇಟೆಯ ಹರಿ ಮಾರ್ಕೆಟಿಂಗ್ (Kumbarapete Hari Marketing) ಒಳಗೆ ಹತ್ಯೆ ನಡೆದಿದ್ದು, ಮೃತರನ್ನು ಸುರೇಶ್ (55) ಹಾಗೂ ಮಹೇಂದ್ರ (68) ಎಂದು ಗುರುತಿಸಲಾಗಿದೆ. ಕೊಲೆಗೈದ ಆರೋಪಿ ಭದ್ರ ಎಂದು ಹೇಳಲಾಗಿದೆ ಆಸ್ತಿ ವಿಚಾರಕ್ಕೆ ಗಲಾಟೆ ನಡೆದಿದ್ದು, ಸಂಬಂಧಿ ಭದ್ರ ಎಂಬಾತ ಚಾಕುವಿನಿಂದ ಇರಿದು, ಬರ್ಬರವಾಗಿ ಹತ್ಯೆಗೈದಿದ್ದಾನೆ. ಬಳಿಕ ತಾನೇ ಪೊಲೀಸರಿಗೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ತನಿಖೆ ವೇಳೆ ಎರಡು ಅಂಶಗಳ ಬಗ್ಗೆ ಮಾಹಿತಿ. ೧) ಕಟ್ಟಡದ ವಿಚಾರವಾಗಿ ಹಲವಾರು ವರ್ಷಗಳಿಂದ ಕಲಹ ಇತ್ತು ನ್ಯಾಯಾಲಯದಲ್ಲಿ ಕೇಸ್ ಸಿವಿಲ್ ಸಹ ಇತ್ತು ಕೇಸ್ ಮೃತ ಸುರೇಶ್ ಪರವಾಗಿ ಆಗಿದ್ದ ಕಾರಣ ಕೋಪಗೊಂಡಿದ್ದ ಅರೋಪಿ ಭದ್ರ ಆದಾದ ಮೇಲು ಮೂರು ನಾಲ್ಕು ಬಾರಿ ಜಗಳ ಮಾಡಿಕೊಂಡು ಹಲಸೂರು ಗೇಟ್ ಪೊಲೀಸ್ ಠಾಣೆಗೆ ಹೋಗಿದ್ದಾರೆ ಈ ವೇಳೆ ಸಿ ಆರ್ ಪಿ ಸಿ…

Read More

ದೊಡ್ಮನೆ ಕುಡಿ ವಿನಯ್ ರಾಜ್ಕುಮಾರ್ ನಟನೆಯ ‘ಒಂದು ಸರಳ ಪ್ರೇಮಕಥೆ’ ಸಿನಿಮಾ ನಾಳೆ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಅದ್ಧೂರಿಯಾಗಿ ಪ್ರಚಾರ ನಡೆಸಿರುವ ಚಿತ್ರತಂಡ ನಿನ್ನೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಪ್ರೀ-ರಿಲೀಸ್ ಕಾರ್ಯಕ್ರಮ ಏರ್ಪಡಿಸಿತ್ತು. ಕಾರ್ಯಕ್ರಮಕ್ಕೆ ದೊಡ್ಮನೆಯ ಹಲವು ಅತಿಥಿಗಳು ಆಗಮಿಸಿದ್ದರು. ಅಶ್ವಿನಿ ಪುನೀತ್ ರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್ ಹಾಗೂ ಅವರ ಪತ್ನಿ. ವಿನಯ್ ರಾಜ್ಕುಮಾರ್ ಸಹೋದರ ಯುವ ರಾಜ್ಕುಮಾರ್, ಶ್ರೀಮುರಳಿ, ಧಿರೇನ್ ರಾಮ್ ಕುಮಾರ್ ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಶ್ರೀಮುರಳಿ ಮಾತನಾಡಿ, ಒಂದು ಸರಳ ಪ್ರೇಮಕಥೆಯಲ್ಲಿ ವಿನು ಬಹಳ ಚೆನ್ನಾಗಿ ಕಾಣಿಸಿದ ಎನಿಸುತ್ತಿದೆ. ವಿನು ಕ್ಯಾರೆಕ್ಟರ್ ಬಿಟ್ಟು ಕಿಂಚಿತ್ತು ಅಲ್ಲಾಡದೆ, ಪಾತ್ರವನ್ನು ಬಹಳ ತೂಕದಿಂದ, ಜವಾಬ್ದಾರಿಯಿಂದ ನಿಭಾಯಿಸಿದ್ದಾರೆ ಎಂಬ ನಂಬಿಕೆ ಇದೆ. ಈ ಬಗ್ಗೆ ಹೆಮ್ಮೆ ಇದೆ. ಈ ಚಿತ್ರದಲ್ಲಿ ಪ್ರತಿಯೊಂದು ಕ್ಯಾರೆಕ್ಟರ್ಸ್, ಆಕ್ಟರ್ಸ್ ತುಂಬಾ ಅಚ್ಚುಕಟ್ಟಾಗಿ ಕಾಣಿಸಿದ್ರಿ. ಇಬ್ಬರು ಹೀರೋಯಿನ್ ಇಬ್ಬರು ಮುದ್ದಾಗಿ ಕಾಣಿಸ್ತಾರೆ. ಸುನಿ ಅವರ ಮೇಕಿಂಗ್ ಸ್ಟೈಲ್ ಸೂಪರ್. ಅವರು ಚೆನ್ನಾಗಿ ಪ್ರಿಪೇರ್ ಆಗ್ತಾರೆ.…

Read More

ಬೆಂಗಳೂರು:  ಬೆಂಗಳೂರು ಮಹಾನಗರದ ಹೆಗ್ಗುರುತುಗಳಲ್ಲಿ ಒಂದಾಗಿರುವ ರವೀಂದ್ರ ಕಲಾಕ್ಷೇತ್ರಕ್ಕೆ  ‘ ವಜ್ರ’ದ ಹೊಳಪು ಹೊಂದಿರುವ ಕಲಾಕ್ಷೇತ್ರಕ್ಕೆ ಹೊಸ ಸ್ಪರ್ಶ ನೀಡಿದ್ದು  ವಜ್ರ ಮಹೋತ್ಸವದ ಸಂಭ್ರಮದಲ್ಲಿರುವ ಕಲಾ ಕ್ಷೇತ್ರಕ್ಕೆ ನ್ಯೂ ಲುಕ್ ತಂದಿದ್ದು  ಆಧುನಿಕ ಟಚ್ ಕೊಡಲ ಕನ್ನಡ & ಸಂಸ್ಕೃತಿ ಇಲಾಖೆ ಪ್ಲ್ಯಾನ್ ಮಾಡಿದ್ದು  ₹24 ಕೋಟಿ ವೆಚ್ಚದಲ್ಲಿ ಕಲಾಕ್ಷೇತ್ರದ ಅಭಿವೃದ್ಧಿಗೆ ಪ್ಲ್ಯಾನ್  ಆದರೆ ಇದಕ್ಕೆ  ಸಂಸ್ಕೃತಿ ಇಲಾಖೆಯ ಕ್ರಮಕ್ಕೆ ಸಾಂಸ್ಕೃತಿಕ ವಲಯದಲ್ಲಿ ವಿರೋಧ ವ್ಯಕ್ತವಾಗಿದೆ. ಇಲಾಖೆಯಿಂದ ಪ್ರಸ್ತಾವನೆ ಕಲೆಗಳು, ಪೌರಾಣಿಕ ನಾಟಕಗಳು ಪ್ರದರ್ಶನವಾಗುವಾಗುವ ಜಾಗ ಇಂತಹ ರವೀಂದ್ರ ಕಲಾಕ್ಷೇತ್ರ ವಜ್ರ ಮಹೋತ್ಸವದ ಸಂಭ್ರಮದಲ್ಲಿದೆ ಕೇಂದೀಕೃತ ಹವಾನಿಯಂತ್ರ ವ್ಯವಸ್ಥೆ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳ ಅಳವಡಿಕೆಗೆ ಚಿಂತನೆ ಇದಕ್ಕೆ ಕನ್ನಡ & ಸಂಸ್ಕೃತಿ ಇಲಾಖೆ ಮುಂದಾಗಿದ್ದು, ₹24 ಕೋಟಿ ವೆಚ್ಚವಾಗಬಹುದೆಂದು ಅಂದಾಜು ಈ ಬಗ್ಗೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವ ಇಲಾಖೆ ಸಚಿವ ಸಂಪುಟದಲ್ಲಿ ಅನುಮೋದನೆ ಸಿಕ್ಕ ಬಳಿಕ ನವೀಕರಣ ಪ್ರಕ್ರಿಯೆ ಪ್ರಾರಂಭ ನವೀಕರಣ ಯಾಕೆ? ಸಭಾಂಗಣದಲ್ಲಿ ರಂಗಕಲಾವಿದರಿಗೆ ಬೇಕಾದ…

Read More

ಉಡುಪಿ: ಅಯೋಧ್ಯೆ ಬಾಲರಾಮ ಪ್ರತಿಷ್ಠಾಪನೆಯ ಮಂಡಲೋತ್ಸವ ಕಾರ್ಯಕ್ರಮ ನಡೆದಿದೆ. ಉಡುಪಿಯ ಮಾಜಿ ಶಾಸಕ ಕೆ. ರಘುಪತಿ ಭಟ್ ಅವರು ಅಯೋಧ್ಯೆಯ ಶ್ರೀರಾಮನ ತೊಟ್ಟಿಲು ಸೇವೆಗೆ ಕೊಡುಗೆಯಾಗಿ ನೀಡಿದ ಕಾಷ್ಠಶಿಲ್ಪದಲ್ಲಿ ನಿರ್ಮಿಸಲಾದ ತೊಟ್ಟಿಲು ಫೆ. 7ರಂದು ಸಂಜೆ ನಡೆದ ಉತ್ಸವದಲ್ಲಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥರು ರಾಮನಿಗೆ ಅರ್ಪಿಸಿದರು. ನೂತನ ತೊಟ್ಟಿಲಿನಲ್ಲಿ ಶ್ರೀ ಬಾಲರಾಮ ದೇವರಿಗೆ ತೊಟ್ಟಿಲು ಸೇವೆ ನೆರವೇರಿಸಿ ಶ್ರೀ ರಾಮ ದೇವರ ಮೂರ್ತಿಯನ್ನು ತೊಟ್ಟಿಲಲ್ಲಿ ತೂಗಿ ಅಷ್ಟಾವಧಾನ ಸೇವೆ ಸಲ್ಲಿಸಲಾಯಿತು. ಪೇಜಾವರ ಶ್ರೀಗಳ ಮಾರ್ಗದರ್ಶನದಲ್ಲಿ ದೈವಿಕ ವಿಧಿವಿಧಾನಗಳು ನೆರವೇರಿದವು. ಇದೇ ವೇಳೆ ಶ್ರೀ ಕಾಶೀ ಮಠಾಧೀಶರ ಕೊಡುಗೆಯಾಗಿ ಅಯೋಧ್ಯಾ ಬಾಲರಾಮನಿಗೆ ರಜತ ಪಲ್ಲಕ್ಕಿ ಅರ್ಪಿಸಲಾಯಿತು. ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಅವರು ಕಲಶ ಸೇವೆ ನೀಡಿದರು. ಮೂರು ಲಕ್ಷಕ್ಕೂ ಅಧಿಕ ಭಕ್ತರು ಬಾಲರಾಮನ ದರ್ಶನ ಪಡೆದು ಈ ವೈಭವಕ್ಕೆ ಸಾಕ್ಷಿಯಾದರು.

Read More

ಬೆಂಗಳೂರು: ನಾಸಾ ಐದು ವರ್ಷಗಳ ಹಿಂದೆ ಸೌರಮಂಡಲದ ಆಚೆ ಇರುವ ಗ್ರಹದ ಬಗ್ಗೆ ತಿಳಿದುಕೊಳ್ಳಲು ಒಂದು ಉಪಗ್ರಹ ಉಡಾವಣೆ ಮಾಡಿದ್ದು ಇದೀಗಾ ಆ ರಾಕೆಟ್ ಭೂಮಿಯಂತಿರುವ ಮತ್ತೊಂದು ಗ್ರಹದ ಮಾಹಿತಿ ನೀಡಿದೆ.‌ ಭೂಮಿಯಂತಿರುವ ಮತ್ತೊಂದು ಗ್ರಹ ಪತ್ತೆಯಾಗಿದ್ದು ನಾಸಾ ಅನ್ವೇಷಣೆಯಲ್ಲಿ ಪತ್ತೆಯಾಗಿರುವ ವಿಶೇಷ ಗ್ರಹವಾಘಿದೆ. ಖಗೋಳ ಲೋಕದಲ್ಲಿ ಅಚ್ಚರಿ ಮೂಡಿಸುತ್ತಿರುವ ವಿಜ್ಞಾನಿಗಳು ಈಗ ಸದ್ಯ ಎಲ್ಲಾರಲ್ಲಿ ಭಾರಿ ಕುತೂಹಲ ಮೂಡಿದೆ ಚಂದ್ರಯಾನ 3 ಉಡಾವಣೆಯ ನಂತರ ನಮ್ಮ ವಿಜ್ಞಾನ ಲೋಕದದಲ್ಲಿ ಅಚ್ಚರಿಗಳೇ ಆಗುತ್ತಿವೆ.ಚಂದ್ರಯಾನ 3 , ಆಧಿತ್ಯ ಎಲ್ ಒನ್ ಉಡಾವಣೆಯ ನಂತರ ಎಲ್ಲರೂ ವಿಜ್ಞಾನ ಲೋಕದತ್ತ ಮುಖ ಮಾಡ್ತಿದ್ದಾರೆ. ನಮ್ಮ ಭೂಮಿ ಗ್ರಹಕ್ಕಿಂತ ಒಂದುವರೆ ಪಟ್ಟು ದೊಡ್ಡದಾಗಿದಾಗಿರುವ Toi715B ಎನ್ನುವ ಗ್ರಹವನ್ನ‌ ಪತ್ತೆ ಮಾಡಿದ್ದು, ಇಲ್ಲಿ ವಾಸಿಸಲು ಯೋಗ್ಯವಾಗಿರುವ ಜಾಗ ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಕಳೆದ ಐದು ವರ್ಷದ ಹಿಂದೆ ನಾಸಾ ಟೆಸ್ ಎನ್ನುವ ಉಪಗ್ರಹವನ್ನ 2018 ರಲ್ಲಿ ಉಡಾವಣೆ ಮಾಡಿತ್ತು. ಇದೀಗಾ 6 ವರ್ಷದ ಬಳಿಕ TOi715B ಗ್ರಹಕ್ಕೆ…

Read More

ಚೆನ್ನೈ: ಬಹುನಿರೀಕ್ಷಿತ ಚಾಲಕ ರಹಿತ ಹಳದಿ ಮೆಟ್ರೋ ರೈಲು ಚೀನಾದಿಂದ ಹೊರಟು ಮಂಗಳವಾರ ಚೆನ್ನೈ ಬಂದರು (Chennai Port) ತಲುಪಿದೆ. ಬೆಳಗ್ಗೆ ಬೋಗಿಗಳು ಚೆನ್ನೈ ಬಂದರಿಗೆ ಆಗಮಿಸಿದ್ದು, ಎಲೆಕ್ಟ್ರಾನಿಕ್ ಸಿಟಿ ಮೆಟ್ರೋ ಮಾರ್ಗಕ್ಕಾಗಿ ಈ ಬೋಗಿಗಳನ್ನು ಚೀನಾದಿಂದ ತರಿಸಲಾಗಿದೆ. ಚೆನ್ನೈ ಬಂದರಿನಲ್ಲಿ ಕಾರ್ಗೋ ಶಿಪ್‌ನಿಂದ (Cargo Ship) ಬೋಗಿಗಳನ್ನು ಅನ್‌ಲೋಡ್ ಮಾಡಲಾಗಿದೆ. ಇದಾದ ಬಳಿಕ ಬೆಂಗಳೂರಿನ ಹೆಬ್ಬಗೋಡಿ ಡಿಪೋಗೆ ರೈಲು ಆಗಮಿಸಲಿದೆ. https://ainlivenews.com/this-card-is-enough-if-you-have-it-get-2-lakh-insurance-from-the-government-3000-thousand-rupees-per-month/ ಚೀನಾದಿಂದ ರವಾನೆಯಾದ ಮೊದಲ ಚಾಲಕ ರಹಿತ ರೈಲು ಚೆನ್ನೈ ಬಂದರಿಗೆ ಆಗಮಿಸಿರುವ ಕುರಿತು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ (BMRCL) ಖಚಿತಪಡಿಸಿದೆ. ಕಸ್ಟಮ್ಸ್ ಕ್ಲಿಯರೆನ್ಸ್ ಬಳಿಕ ಈ ಬೋಗಿಗಳನ್ನು ರಸ್ತೆ ಮೂಲಕ ಬೆಂಗಳೂರಿಗೆ (Bengaluru) ಸಾಗಿಸಲಾಗುತ್ತದೆ. ಕಸ್ಟಮ್ ಕ್ಲಿಯರೆನ್ಸ್ ಸುಮಾರು 5 ದಿನಗಳನ್ನು ತೆಗೆದುಕೊಳ್ಳಬಹುದು. ಫೆಬ್ರವರಿ 18ರ ಒಳಗೆ ರೈಲು ಬೆಂಗಳೂರಿಗೆ ತಲುಪುವ ಸಾಧ್ಯತೆಯಿದೆ ಎಂದು ಬಿಎಂಆರ್‌ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿಎಲ್ ಯಶವಂತ ಚವ್ಹಾಣ್ ತಿಳಿಸಿದ್ದಾರೆ.

Read More