Author: AIN Author

ಬೆಂಗಳೂರು: ಅನಧಿಕೃತ ಶಾಲೆಗಳನ್ನ ಮುಚ್ಚುವಂತೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದ್ದು ಈಗ ಶಿಕ್ಷಣ ಇಲಾಖೆಯ ಸುತ್ತೊಲೆಯ ಬಗ್ಗೆ ಪರ-ವಿರೋಧದ ಚರ್ಚೆ ಶುರುವಾಗಿದೆ.2024-25ನೇ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶಾತಿಗೆ ತಯಾರಿಗಳು ನಡೆಯುತ್ತಿವೆ.ಆದರೆ ಇದೀಗ ಯಾವ ಶಾಲೆಗೆ ಸೇರಿಸಬೇಕೆಂದು ಪೋಷಕರು ಕಂಫ್ಯೂಸ್ ಆಗಿದ್ದಾರೆ.. ಅದ್ಯಾಕೆ ಅಂತೀರಾ ಈ ಸ್ಟೋರಿ ನೋಡಿ.. ರಾಜ್ಯದಲ್ಲಿ 1,600 ಅಕ್ರಮ ಶಾಲೆಗಳಿವೆ ಎಂದು ಕಳೆದ ವರ್ಷ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಬಹಿರಂಗಪಡಿಸಿದ್ದರು. ಇಂತಹ ಅಕ್ರಮ ಶಾಲೆಗಳನ್ನು ಹಂತ ಹಂತವಾಗಿ ಮುಚ್ಚಿ ವಿದ್ಯಾರ್ಥಿಗಳನ್ನು ಬೇರೆ ಶಾಲೆಗಳಿಗೆ ಸ್ಥಳಾಂತರಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದರು. ಆದರೆ ಆದೇಶ ಹೊರಡಿಸಿದ್ದ ಷ್ಟೇ ಅದ್ಯಾವುದೂ ಕೂಡ ಜಾರಿಯಾಗಲಿಲ್ಲ. ಇತ್ತೀಚಿನ ಸುತ್ತೋಲೆಯನ್ನು ಟೀಕಿಸಿದ ಕರ್ನಾಟಕದ ಆಂಗ್ಲ ಮಾಧ್ಯಮ ಶಾಲೆಗಳ ಅಸೋಸಿಯೇಟೆಡ್ ಮ್ಯಾನೇಜ್ಮೆಂಟ್ಸ್ ಇಲಾಖೆಯು ತನ್ನ ಆದೇಶಗಳ ಬಗ್ಗೆ ಯಾವುದೇ ಸ್ಪಷ್ಟತೆಯನ್ನು ಹೊಂದಿಲ್ಲ ಮತ್ತು ಇದು ಶಾಲೆಗಳು ಮತ್ತು ಪೋಷಕರಲ್ಲಿ ಭಯ ಮತ್ತು ಗೊಂದಲವನ್ನು ಮಾತ್ರ ಸೃಷ್ಟಿಸುತ್ತಿದೆ ಎಂದು ಆರೋಪಿಸಿದೆ. ಅಂತೆಯೇ ಈ ಸುತ್ತೋಲೆಯಿಂದ…

Read More

ಶಿವಮೊಗ್ಗ: ಜನರ ದುಡ್ಡಲ್ಲಿ ದೆಹಲಿಯ ಜಂತರ್ ಮಂತರ್‌ನಲ್ಲಿ ಲೋಕಸಭಾ ಚುನಾವಣೆಯ ಮೊದಲ ಪ್ರಚಾರವನ್ನು ಕಾಂಗ್ರೆಸ್ (Congress) ಆರಂಭ ಮಾಡಿದೆ ಎಂದು ಹೇಳುವ ಮೂಲಕ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ (KS Eshwarappa) ರಾಜ್ಯ ಸರ್ಕಾರದ ಪ್ರತಿಭಟನೆಯನ್ನು ವ್ಯಂಗ್ಯವಾಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ದುಡ್ಡಲ್ಲಿ ಪ್ರಚಾರ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಲೋಕಸಭಾ ಚುನಾವಣೆ ಪ್ರಚಾರ ಆರಂಭಿಸಿದ್ದೇವೆ ಎಂದು ತೋರಿಸಿದ್ದಾರೆ. ಏರ್ ಟಿಕೆಟ್, ಊಟ ತಿಂಡಿ, ರೂಮ್ ಬಾಡಿಗೆಗೆ ಜನರ ತೆರಿಗೆ ದುಡ್ಡು ಬಳಸಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ. ಪ್ರತ್ಯೇಕ ರಾಷ್ಟ್ರ ಕೇಳಬೇಕಾಗುತ್ತದೆ ಎಂದು ವಿನಯ್ ಕುಲಕರ್ಣಿ ವಾದ ಮಂಡಿಸಿದ್ದಾರೆ. ಇದರ ಪೀಠಿಕೆಯನ್ನು ಡಿ.ಕೆ ಸುರೇಶ್ ಹಾಕಿದ್ದರು. ಅಧಿಕಾರಕ್ಕಾಗಿ ದೇಶವನ್ನು ಹಿಂದೂಸ್ತಾನ ಹಾಗೂ ಪಾಕಿಸ್ತಾನ ಎಂದು ಒಡೆದಿದ್ದೀರಿ. ಈ ಬಗ್ಗೆ ನಾನು ಖರ್ಗೆ ಅವರನ್ನು ಪ್ರಶ್ನೆ ಮಾಡುತ್ತೇನೆ. ರಾಜ್ಯಸಭೆಯಲ್ಲಿ ಅಖಂಡ ಭಾರತವನ್ನು ಒಡೆಯಲು ಬಿಡಲ್ಲ ಎಂದು ನೀವು ಹೇಳಿದ್ದೀರಿ. ನಿಮ್ಮ ಮಾತಿಗೆ ಸ್ವಲ್ಪವೂ ಕಿಮ್ಮತ್ತಿಲ್ಲ. ನೀವು ಹೇಳಿದರೂ ನಿಮ್ಮ ಆ ರಾಷ್ಟ್ರ ದ್ರೋಹಿಗಳು…

Read More

ಬೆಂಗಳೂರು:  ನಗರದ  ಪ್ರತಿಷ್ಠಿತ ಅಪಾರ್ಟ್‌ಮೆಂಟ್‌ ನ ಅಡುಗೆ ಕೋಣೆಯಲ್ಲಿ ಕೆಸರು ನೀರು ಕುಡಿಯುವ ನೀರಿನ ನಲ್ಲಿಯಲ್ಲಿ ಕೆಸರು ನೀರು ಬರುತ್ತಿರುವುದನ್ನು ಕಂಡು ಮನೆ ಮಾಲೀಕರು ಕಂಗಾಲಾಗಿರುವ ಘಟನೆ ತಲಘಟ್ಟಪುರದ ಅಪಾರ್ಟಮೆಂಟ್ ನಲ್ಲಿ‌ ನಡೆದಿದೆ. ಕೆಸರು ನೀರು ಬರ್ತಿದೆ ಅಂತ (ಎಕ್ಸ್) ನಲ್ಲಿ ಟ್ವೀಟ್ ಮಾಡಿ ಅಪಾರ್ಟ್‌ ಮೆಂಟ್‌ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದು  ಅಪಾರ್ಟ್‌ಮೆಂಟ್ ನಿವಾಸಿ ಧನಂಜಯ್ ಪದ್ಮನಾಭಾಚಾರ ಎಂಬುವವರಿಂದ ಟ್ವಿಟ್ ಕನಕಪುರ ತಲಘಟ್ಟಪುರದ ನ್ಯಾಯಾಂಗ ಬಡಾವಣೆಯ ಶೋಭಾ ಅರೆನಾ ಅಪಾರ್ಟ್‌ಮೆಂಟ್‌ ನಿವಾಸಿ ಸಿಎಂ, ಡಿಸಿಎಂ ಮತ್ತು ಬೆಂಗಳೂರು ಪೊಲೀಸರು ಸೇರಿ ಹಲವರಿಗೆ ಟ್ಯಾಗ್ ದಯವಿಟ್ಟು ನಮಗೆ ಕಾವೇರಿ ನೀರು ಕೊಡಿ ಅಂತ ನಿವಾಸಿಯ ಆಗ್ರಹ ಅಪಾರ್ಮೆಂಟ್ ನ‌ ಇತರ ನಿವಾಸಿಗಳ ಮನೆಗೂ ಕೆಸರು ನೀರು ಬಂದಿರುವ ಫೋಟೋ ಶೇರ್ ನಿನ್ನೆ ಶೇರ್ ಮಾಡಿರುವ ವಿಡಿಯೋಗೆ ವಿಕ್ಷಿಸಿರುವ 2 ಲಕ್ಷದ 51 ಸಾವಿರ ಜನರು ನಲ್ಲಿಯಲ್ಲಿ ಕೆಸರು ನೀರು “ಶೋಭಾ ಅರೆನಾ ಅಪಾರ್ಟ್ಮೆಂಟ್ನಲ್ಲಿ ಕುಡಿಯಲು ನಾವು ಪಡೆಯುತ್ತಿರುವ ನೀರಿನ ಗುಣಮಟ್ಟವನ್ನು ದಯವಿಟ್ಟು ನೋಡಿ.…

Read More

ಪ್ರತಿ ವರ್ಷವೂ ಜಗತ್ತಿನಾದ್ಯಂತ ಗಂಡು- ಹೆಣ್ಣು ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ಮೂಲಕ ಮತ್ತು ತಮ್ಮ ಪ್ರೀತಿಪಾತ್ರರಿಗೆ ಪ್ರಪೋಸ್ ಮಾಡುವ ಮೂಲಕ ಈ ದಿನವನ್ನು ಆಚರಿಸುತ್ತಾರೆ. ಪ್ರೀತಿಯನ್ನು ವ್ಯಕ್ತಪಡಿಸಲು ಇಂತಹದೇ ಸಂದರ್ಭ ಬೇಕು ಎಂದೇನಿಲ್ಲ ಯಾರಿಗೆ ಯಾರ ಮೇಲೆ ಯಾವುದೇ ಸಮಯದಲ್ಲಿ ಪ್ರೀತಿ ಹುಟ್ಟಬಹುದು. ಆದರೆ ಮನಸ್ಸಿನಲ್ಲಿ ಬಚ್ಚಿಟ್ಟುಕೊಂಡಿರುವ ಪ್ರೀತಿಯನ್ನು ಆದಷ್ಟು ಬೇಗನೆ ನಿಮ್ಮ ಸಂಗಾತಿಗೆ ಇಷ್ಟವಾಗುವ ಹಾಗೆ ಹೇಳುವುದರಲ್ಲಿ ನಿಮ್ಮ ಜಾಣತನ ಅಡಗಿದೆ. ಕೆಲವು ಸಂಗಾತಿಗಳು ತಮ್ಮ ಪ್ರೇಮಿ ವ್ಯಕ್ತಪಡಿಸುವ ಪ್ರೀತಿಯ ನಿವೇದನೆಯನ್ನು ಮೊದಲ ಬಾರಿಗೆ ಒಪ್ಪಿಕೊಳ್ಳುತ್ತಾರೆ. ಇನ್ನು ಕೆಲವರು ಇದಕ್ಕೆ ಸಮಯ ತೆಗೆದುಕೊಳ್ಳುತ್ತಾರೆ. ಇಂದು ಪ್ರಪೋಸ್ ಡೇ ಆಗಿರುವ ಕಾರಣ ಪ್ರೀತಿಸುವ ವಿಚಾರವನ್ನು ನಿಮ್ಮ ಸಂಗಾತಿಗೆ ಹೇಳಲು ಅತ್ಯಂತ ಒಳ್ಳೆಯ ಸಮಯ ಎಂದು ತಿಳಿದು ಈ ಕೆಳಗಿನ ಟಿಪ್ಸ್ ಗಳನ್ನು ಅನುಸರಿಸಿ ನಿಮ್ಮ ಪ್ರೀತಿಯ ವಿಚಾರವನ್ನು ನಿಮ್ಮ ಸಂಗಾತಿಯ ಬಳಿ ಹಂಚಿಕೊಳ್ಳಿ. ​ನೀವು ನೀವಾಗಿರಿ ನೀವು ನಿಮ್ಮ ಹುಡುಗಿಯನ್ನು ಪ್ರಪೋಸ್ ಮಾಡಲು ಹೊರಟಿದ್ದೀರಿ ಎಂದಾದರೆ ನಿಮ್ಮ ಮನಸ್ಸಿನಲ್ಲಿನ ಭಾವನೆಯನ್ನು ಆಕೆಯ…

Read More

ಧಾರವಾಡ: ಇಂಡಿಯನ್ ಟಿಬೆಟಿಯನ್ ಬಾರ್ಡರ್ ಫೋರ್ಸ್ʼನಲ್ಲಿ ಅ್ಯಂಕರ್- ಇಡಿಯಮ್ ಟಿಬೆಟಿಯನ್ ಬಾರ್ಡರ್ ಪೋರ್ಸನಲ್ಲಿ 22ವರ್ಷ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತಿಯಾದ, ಧಾರವಾಡ ತಾಲ್ಲೂಕಿನ ವೇಕಂಟಾಪುರ ಗ್ರಾಮದ ನಿವೃತ ಯೋಧನಿಗೆ ಗ್ರಾಮಸ್ಥರೆಲ್ಲರು ಸೇರಿ ಸನ್ಮಾನ ಮಾಡುವ ಮೂಲಕ ಯೋಧನಿಗೆ ಗೌರವಿಸಿದರು. ‌ವೇಂಕಟಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಉರ್ದು ಆವರಣದಲ್ಲಿ ನಿವೃತ ಯೋಧರಿಗೆ ಸನ್ಮಾನ‌ ಕಾರ್ಯಕ್ರಮ ನಡೆಸಲಾಯಿತು. 22 ವರ್ಷ ಐಟಿಬಿಪಿ ಪೋರ್ಸನಲ್ಲಿ ಭಾರತೀಯ ಸೈನಿಕನಾಗಿ ಮೆಹಬೂಬ್ ಸುಬಾನಿ ಮಕ್ತುಮ ಸಾಬ್ ಸೈದನವರ ಅವರು ನಿವೃತಿ ಹೊಂದಿ ಕಳೆದೆರಡು ದಿನಗಳ ಹಿಂದೆಯಷ್ಟೇ ಸ್ವಗ್ರಾಮಕ್ಕೆ ಆಗಮಿಸಿದರು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರೆಲ್ಲರು ಸೇರಿ ಮೆಹಬೂಬ್ ಸುಬಾನಿ ಮಕ್ತುಮ ಸಾಬ್ ಸೈದನವರ ಹಾಗೂ ಗ್ರಾಮದಲ್ಲಿ ಈ ಹಿಂದೆ ನಿವೃತಿ ಹೊಂದಿದ್ದ ಮೆಹಬೂಬ್ ಸುಬಾನಿ ಸೈದನವರ, ಫಕ್ಕಿರೇಶ ಹವಾಲ್ದರ್, ಕುತ್ಬುದೀನ್ ನಗಾರ್ತಿಯರಿಗೆ ಹೂವಿನ ಹಾರದ ಜೊತೆಗೆ ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿದರು. ಜೊತೆಗೆ ಇದೇ ವೇಳೆ ಮಾತನಾಡಿದ ಗ್ರಾಮದ ಹಿರಿಯರು ನಾಲ್ಕು ಯೋಧರು ನಮ್ಮ ಗ್ರಾಮದ ಹೆಮ್ಮೆಯಾಗಿದ್ದಾರೆ. ಭಾರತೀಯ…

Read More

ಬೆಂಗಳೂರು: ರಾಜ್ಯದ ಶಾಲಾ ಮಕ್ಕಳಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ, ಇದುವರೆಗೆ ಶಾಲಾ ಮಕ್ಕಳಿಗೆ ವಾರದಲ್ಲಿ ಎರಡು ದಿನ ಮೊಟ್ಟೆ, ಚಿಕ್ಕಿ ನೀಡಲಾಗುತ್ತಿತ್ತು, ಆರು ದಿನ ಕ್ಷೀರ ಭಾಗ್ಯ ಹಾಲು ನೀಡಲು ಕ್ರಮ ವಹಿಸಲಾಗಿತ್ತು,  ಇದೀಗ ಮೂರು ದಿನ ಹಾಲಿಗೆ ರಾಗಿಮಾಲ್ಟ್ ಮಿಕ್ಸ್ ಮಾಡಿ ನೀಡಲು ಕ್ರಮ ವಹಿಸಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಮಕ್ಕಳಿಗೆ ರಾಗಿ ಮಾಲ್ಟ್ ಮಿಕ್ಸ್ ನೀಡುವ ಸಂಬಂಧ ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ)ಯಿಂದ ಪರೀಕ್ಷೆ ಮಾಡಿಸಲಾಗಿದ್ದು, ಮಕ್ಕಳಿಗೆ ನೀಡಬಹುದೆಂಬ ವರದಿ ಬಂದಿದೆ. ಹೀಗಾಗಿ, ಶೀಘ್ರದಲ್ಲೇ ಮಕ್ಕಳಿಗೆ ರಾಗಿ ಮಾಲ್ಟ್ ನೀಡಲಾಗುವುದು ಎಂದರು. ಸರ್ಕಾರಿ ಶಾಲೆಗಳಿಗೆ ಉಚಿತವಾಗಿ ವಿದ್ಯುತ್ ಹಾಗೂ ನೀರನ್ನು ನವೆಂಬರ್‌ನಿಂದ ಪೂರೈಸಲಾಗುತ್ತಿದೆ. ಇದರಿಂದ ಶಾಲೆಗಳಲ್ಲಿ ಮುಕ್ತವಾಗಿ ಎಲ್ಲಾ ವ್ಯವಸ್ಥೆ ಬಳಸಿಕೊಳ್ಳಬಹುದು. ಎಷ್ಟೋ ಶಾಲೆಗಳಿಗೆ ವಿದ್ಯುತ್ ಬಿಲ್ ಕಟ್ಟಲು ಸಾಧ್ಯವಾಗುತ್ತಿಲ್ಲ. ಉಚಿತವಾಗಿ ವಿದ್ಯುತ್ ಹಾಗೂ ನೀರು ನೀಡಿದ ಮೇಲೆ ಎಲ್ಲಾ ಸರ್ಕಾರಿ ಶಾಲೆಗಳಿಗೆ ಅನುಕೂಲವಾಗಿದೆ. ಎಷ್ಟೋ ಶಾಲೆಗಳು ವಿದ್ಯುತ್…

Read More

ಕಾರವಾರ: ಪ್ರವಾಸಕ್ಕೆಂದು (Tour) ಆಗಮಿಸಿದ್ದ ಜಪಾನ್ (Japan) ಮೂಲದ ಮಹಿಳೆ (Woman) ನಾಪತ್ತೆಯಾದ ಘಟನೆ ಗೋಕರ್ಣದಲ್ಲಿ (Gokarna) ನಡೆದಿದೆ. ಎಮಿ ಯಮಾಝಕಿ (40) ನಾಪತ್ತೆಯಾದ ಜಪಾನ್ ಮೂಲದ ಮಹಿಳೆ. ಫೆಬ್ರವರಿ 05 ರಂದು ಮಹಿಳೆ ತನ್ನ ಪತಿಯೊಂದಿಗೆ ಗೋಕರ್ಣದ ಬಂಗ್ಲೆಗುಡ್ಡದ ನೇಚರ್ ಕ್ಯಾಂಪಸ್‌ನಲ್ಲಿ ತಂಗಿದ್ದರು. ಮರುದಿನ ಮುಂಜಾನೆ 10:30ರ ಸುಮಾರಿಗೆ ನೇಚರ್ ಕ್ಯಾಂಪಸ್‌ನಿಂದ ಹೊರಹೋಗಿದ್ದ ಮಹಿಳೆ ನಾಪತ್ತೆಯಾಗಿದ್ದಾರೆ. ನಾಪತ್ತೆ ಹಿನ್ನೆಲೆ ಮಹಿಳೆಯ ಪತಿ ದೈ ಯಮಾಝಕಿ ಗೋಕರ್ಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಕುರಿತು ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು: ಫೆಬ್ರವರಿ 17, 18ರಂದು ರಾಷ್ಟ್ರೀಯ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯಲಿದ್ದುಎಲ್ಲಾ ರಾಜ್ಯಗಳ ಬಿಜೆಪಿ ಶಾಸಕರು, ಸಂಸದರು, ಎಂಎಲ್‌ಸಿಗಳು, ಮಾಜಿ ಸಂಸದರು, ಶಾಸಕರು ಹಾಗೂ ಪದಾಧಿಕಾರಿಗಳಿಗೆ ಆಹ್ವಾನ ದೆಹಲಿಯ ಭಾರತ ಮಂಟಪದಲ್ಲಿ ನಡೆಯುವ ಬಿಜೆಪಿ ಕಾರ್ಯಕಾರಿಣಿ ಸಭೆಯಾಗಿರುತ್ತದೆ ಗಾಂವ್ ಚಲೋ ಅಭಿಯಾನ ಆರಂಭಿಸಿದ ರಾಜ್ಯ ಬಿಜೆಪಿ ನಾಯಕರು ಲೋಕಸಭಾ ಚುನಾವಣೆ ಹಿನ್ನೆಲೆ ಬಿಜೆಪಿಯಿಂದ ನೂತನ ಅಭಿಯಾನ ‘ಮನೆ ಮನೆಗೆ ಬಿಜೆಪಿ, ಮನ ಮನಕ್ಕೆ ಮೋದಿ’ ಎಂಬ ಕಾರ್ಯಕ್ರಮ ಗಾಂವ್ ಚಲೋ ಅಭಿಯಾನಕ್ಕೆ ಚಾಲನೆ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ಯಶವಂತಪುರದ H.ಗೊಲ್ಲಹಳ್ಳಿಯಲ್ಲಿ ಬಿ.ವೈ.ವಿಜಯೇಂದ್ರ ಚಾಲನೆ

Read More

ಚಿಕ್ಕಮಗಳೂರು: ಕರಾವಳಿ, ಉಡುಪಿ ಜಿಲ್ಲೆಯಲ್ಲಿ ನಕ್ಸಲರು ಓಡಾಡಿದ್ದಾರೆಂಬ ಮಾಹಿತಿ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಎಎನ್ ಎಫ್ ಹೈಲಿಲರ್ಟ್ ಆಗಿದೆ. ಜಿಲ್ಲೆಯಲ್ಲಿ ನಕ್ಸಲ್ ಚಟುವಟಿಕೆ ಸಂಪೂರ್ಣವಾಗಿ ಕ್ಷೀಣಿಸಿದ್ದು, ಉಡುಪಿ ಜಿಲ್ಲೆಯಲ್ಲಿ ನಕ್ಸಲರು ಓಡಾಡಿದ್ದಾರೆಂಬ ಸುದ್ದಿ, ಹರಿದಾಡುತ್ತಿದ್ದಂತೆ ಜಿಲ್ಲೆಯ ಶೃಂಗೇರಿ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಎಎನ್ಎಎಫ್ ತಂಡ ಕಟ್ಟೆಚ್ಚರ ವಹಿಸಿದೆ ಎನ್ನಲಾಗುತ್ತಿದೆ. ಆದರೆ ಈ ಸಂಬಂಧ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ನಕ್ಸಲ್ ನಾಯಕ ಸಾಕೇತ್ ರಾಜನ್ ಸಾವಿಗೆ ರೆಡ್ ಸೆಲ್ಯೂಟ್ ದಿನ ಆಚರಿಸಬಹುದೆಂಬ ಹಿನ್ನೆಲೆಯಲ್ಲಿ ಮಲೆನಾಡು ಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎನ್ನಲಾಗುತ್ತಿದೆ.

Read More

ಬೆಂಗಳೂರು : ಕಾಂಗ್ರೆಸ್‌ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆ ಜಾರಿಗೆ ಬಂದ ನಂತರ ಮಹಿಳೆಯರು ದೇವಾಲಯಗಳಿಗೆ ಭೇಟಿ ನೀಡುವುದು ಹೆಚ್ಚಾಗಿದೆ. ಹೀಗಾಗಿ, ದೇವಾಲಯಗಳ ಖಜಾನೆಯೂ ತುಂಬಿ ತುಳುಕುತಿದೆ. 2022ರಲ್ಲಿ ದೇಗುಲಗಳಿಂದ ಸರ್ಕಾರಕ್ಕೆ 230 ಕೋಟಿ ಆದಾಯ ಬಂದಿತ್ತು. ಇದೀಗ, 2023ರಲ್ಲಿ 390 ಕೋಟಿ ಆದಾಯ ಬಂದಿದ್ದು, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ 150 ಕೋಟಿ ರೂಪಾಯಿ ಆದಾಯ ಹೆಚ್ಚಳವಾಗಿದೆ. ಹಾಗಾದರೆ, ಯಾವೆಲ್ಲಾ ದೇವಾಲಯಗಳಲ್ಲಿ ಎಷ್ಟು ಆದಾಯ ಬಂದಿದೆ ಎಂಬುದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ದೇವಾಲಯಗಳಿಗೆ ಬಂದ ಆದಾಯ ಕುಕ್ಕೆ ಸುಬ್ರಮ್ಮಣ್ಯ ಕಳೆದ ವರ್ಷದ ಆದಾಯ : 74 ಕೋಟಿ ಈ ವರ್ಷದ ಆದಾಯ : 123 ಕೋಟಿ ಕೊಲ್ಲೂರು ಮೂಕಂಬಿಕಾ ಕಳೆದ ವರ್ಷದ ಆದಾಯ : 31.36 ಕೋಟಿ ಈ ವರ್ಷದ ಆದಾಯ : 59.47 ಕೋಟಿ ಚಾಮುಂಡೇಶ್ವರಿ ದೇಗುಲ ಕಳೆದ ವರ್ಷದ ಆದಾಯ : 21.92 ಕೋಟಿ ಈ ವರ್ಷದ ಆದಾಯ : 52.40 ಕೋಟಿ ಎಡೆಯೂರು ಸಿದ್ದಲಿಂಗೇಶ್ವರ ಕಳೆದ ವರ್ಷದ ಆದಾಯ…

Read More