Author: AIN Author

ಬೆಂಗಳೂರು: 40% ಕಮಿಷನ್ ಕಾಂಗ್ರೆಸ್ ಸರ್ಕಾರದಲ್ಲಿಯೂ ಮುಂದುವರಿದಿದೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪ ಮಾಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆಂಪಣ್ಣ, ನಿಮಗೆ ಕೆಲಸ ಬೇಕು ಅಂದ್ರೆ ಅಧಿಕಾರಿಗಳೇ ಹಣ ಕೇಳುತ್ತಿದ್ದಾರೆ. ಹಣ ಕೊಡಿ ಅಂತ ಶಾಸಕರು ಸಚಿವರು ಯಾರು ಕೇಳಿಲ್ಲ. ಆದ್ರೆ ಈ ಸರ್ಕಾರದಲ್ಲಿ ಹಣ ಕೊಡುವಂತೆ ಅಧಿಕಾರಿಗಳೇ ನೇರವಾಗಿ ಕೇಳುತ್ತಿದ್ದಾರೆ. ಸದ್ಯದಲ್ಲೇ ಅಧಿಕಾರಿಗಳ ಹೆಸರುಗಳನ್ನ ದಾಖಲೆ ಸಮೇತ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದರು. ತಕ್ಷಣ ಪ್ಯಾಕೇಜ್ ಸಿಸ್ಟಮ್ ಸ್ಟಾಪ್ ಮಾಡಿ ಪ್ರತ್ಯೇಕ ಟೆಂಡರ್ ಕರೆಯಬೇಕು. ಕೋಲಾರದಲ್ಲಿ ಪ್ಯಾಕೇಜ್ ಟೆಂಡರ್ ಕರೆದಿದ್ದಾರೆ ಬೇರೆ ಜಿಲ್ಲೆಗಳಲ್ಲೂ ಕರೆದಿದ್ದಾರೆ. ಅಧಿಕಾರಿಗಳಿಂದಲೇ ಭ್ರಷ್ಟಾಚಾರ ಶುರುವಾಗಿದೆ. ಅಧಿಕಾರಿಗಳು ದುಡ್ಡು ಕಲೆಕ್ಟ್ ಮಾಡಿ ರಾಜಕಾರಣಿಗಳಿಗೆ ಕೊಡುತ್ತಿದ್ದಾರೆ. ಈ ಹಿಂದೆ ರಾಜಕಾರಣಿಗಳು ನೇರವಾಗಿ ಕಮಿಷನ್ ತೆಗೆದುಕೊಳ್ಳುತ್ತಿದ್ದರು. ಈಗ ಅಧಿಕಾರಿಗಳು ಕಮಿಷನ್ ತೆಗೆದುಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ 40% ಕಮಿಷನ್ ಈಗಲೂ ಮುಂದುವರಿದಿದೆ ಎಂದು ದೂರಿದ್ದಾರೆ ಪೊಲೀಸ್ ವಸತಿ ಗೃಹ ಅಭಿವೃದ್ಧಿ ನಿಗಮ, ಬಿಬಿಎಂಪಿ. ವಸತಿ ಶಿಕ್ಷಣ ಸಂಸ್ಥೆ ಸೇರಿ ಹಲವು ಇಲಾಖೆಗಳಲ್ಲಿ…

Read More

ಬೆಂಗಳೂರು: ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರು ಗುಜರಾತ್ ರಾಜ್ಯಕ್ಕೆ ಕೇಂದ್ರದ ತೆರಿಗೆ ಹಂಚಿಕೆಯಲ್ಲಿ‌ ಅನ್ಯಾಯವಾಗುತ್ತಿದೆ ಎಂದು ಧ್ವನಿ ಎತ್ತಿದ್ದಾಗ ದೇಶದ ಏಕತೆ ಮತ್ತು ಭದ್ರತೆಗೆ ಎದುರಾಗದ ಬೆದರಿಕೆ ನಾವು ಕನ್ನಡಿಗರಿಗೆ ನ್ಯಾಯಯುತ ಪಾಲು ಕೊಡಿ ಎಂದು ಕೇಳುವಾಗ ಯಾಕೆ ಎದುರಾಗುತ್ತದೆ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೋದಿಯವರ ವಿರುದ್ಧ ಪ್ರಶ್ನೆಯೆತ್ತಿದ್ದಾರೆ. ಜೊತೆಗೆ ಈಗ ನಾಡಿಗೆ ಅನ್ಯಾಯ ಆಗುತ್ತಿಲ್ಲ ಎಂದು ಮಾತನಾಡುತ್ತಿರುವ ಬೊಮ್ಮಾಯಿ ಅವರು ಹಾಗೂ ಹೆಚ್.ಡಿ ಕುಮಾರಸ್ವಾಮಿ ಅವರು ಹಿಂದೆ ಆಡಿದ ಮಾತುಗಳ ಪುರಾವೆ ನೀಡಿ ಅವುಗಳನ್ನು ಒಮ್ಮೆ ನೋಡಿ ಎಂದು ಕುಟುಕಿದ್ದಾರೆ. ಈ ಸಂಬಂಧ ತಮ್ಮ ಫೇಸ್ ಬುಕ್ ಹಾಗು ಎಕ್ಸ್ ( ಟ್ವಿಟ್ಟರ್ ) ನಲ್ಲಿ ಬರೆದಿರುವ ಅವರು ಮೋದಿ ಅವರ ಎರಡು ಮುಖಗಳನ್ನು ಸಾಕ್ಷಿ ಸಮೇತ ತೆರೆದಿಟ್ಟಿದ್ದು ಹೀಗೆ; ತೆರಿಗೆ ಹಂಚಿಕೆಯೂ ಸೇರಿದಂತೆ ಕನ್ನಡಿಗರಿಗೆ ಕೇಂದ್ರ ಸರ್ಕಾರದಿಂದ ಆಗುತ್ತಿರುವ ಅನ್ಯಾಯವನ್ನು ಪ್ರತಿಭಟಿಸಿ ನಮ್ಮ ಸರ್ಕಾರ ನಡೆಸಿದ್ದ ‘’ದೆಹಲಿ ಚಲೋ’’ ಹೋರಾಟ ದೇಶದ ಏಕತೆ ಮತ್ತು ಭದ್ರತೆಗೆ…

Read More

ಬೆಳಗಾವಿ: ವಿವಾಹಿತ ಪುರುಷನೊಂದಿಗೆ ಅಕ್ರಮ ಸಂಬಂಧ ಹೊಂದುವುದು ಕಾನೂನು ಬಾಹಿರವಾಗಿತ್ತು. ಆದ್ರೆ ಇತ್ತೀಚೆಗೆ ಸುಪ್ರೀಂ ಕೋರ್ಟ್‌ ಪತ್ನಿಗೆ ಪತಿಯೇ ಮಾಲೀಕನಲ್ಲ. ಇದು ಅಸಂವಿಧಾನಿಕ ಎಂದು ತೀರ್ಪು ನೀಡಿತ್ತು. ಈ ಹಿನ್ನಲೆಯಲ್ಲಿ ಬೆಳಗಾವಿಯಲ್ಲೊಂದು ವಿವಾಹಿತ ಜೋಡಿ ತಮ್ಮ ಸಂಗಾಂತಿಗಳಿಗೆ ದ್ರೋಹ ಮಾಡಿ ಓಡಿಹೋಗಿರುವ ಘಟನೆಯೊಂದು ನಡೆದಿದೆ. ಈ ಕುರಿತಂತೆ ಒಂದು ವರದಿ ಇಲ್ಲಿದೆ ನೋಡಿ..! ಹೌದು… ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಜಿನರಾಳ ಗ್ರಾಮದ ವಿವಾಹಿತ ಮಹಿಳೆ ಹಾಗೂ ವಿವಾಹಿತ ಪುರುಷ ಓಡಿಹೋಗಿರುವ ಘಟನೆ ನಡೆದಿದೆ.  ಕಳೆದ ಎರಡು ದಿನಗಳ ಹಿಂದೆ ಈ ಘಟನೆ ನಡೆದಿದೆ. ರೇಣುಕಾ ವಾಲೀಕರ್ ಹಾಗೂ ಲಗಮ ವಾಲೀಕರ್ ಎಂಬ ವಿವಾಹಿತ ಜೋಡಿಯೊಂದು ಹೊಸ ಜೀವನ ಬಯಸಿ ತಮ್ಮ ಮನೆಯಿಂದ ಓಡಿಹೋಗಿದ್ದಾರೆ. ರೇಣುಕಾ ವಾಲೀಕಾರ್ ಎಂಬುವವರಿಗೆ 10 ವರ್ಷಗಳ ಹಿಂದೆ ಮದುವೆ ಆಗಿತ್ತು. ತಮ್ಮ ಮನೆಯ ಸಮೀಪದಲ್ಲಿದ್ದ ವಿವಾಹಿತ ಪುರುಷ ಲಗಮ ವಾಲೀಕಾರ್ ಎಂಬ ವ್ಯಕ್ತಿಯೊಂದಿಗೆ ಪ್ರೇಮಾಂಕುರವಾಗಿದೆ. ಬರುಬರುತ್ತಾ ಇಬ್ಬರ ನಡುವೆ ಆತ್ಮೀಯತೆ ಹೆಚ್ಚಾಗಿ ಇಬ್ಬರ ನಡುವೆ ಅನೈತಿಕ…

Read More

ಬೆಂಗಳೂರು: ವಿಧಾನಸೌಧದ ಮುಂದೆ ನಡೆಯುತ್ತಿರುವ ರಾಜ್ಯಮಟ್ಟದ ಜನಸ್ಪಂದನ ಕಾರ್ಯಕ್ರಮ ಅದೇನೋ ಮಹಾ ದೊಡ್ಡ ಸಾಧನೆ ಅಂತ ಮೆರೆಯುತ್ತಿದ್ದೀರಲ್ಲ ಸಿಎಂ ನವರೇ, ಅಸಲಿಗೆ ಅದು ರಾಜ್ಯದಲ್ಲಿ ಸಂಪೂರ್ಣವಾಗಿ ಕುಸಿದಿರುವ ಆಡಳಿತ ಯಂತ್ರಕ್ಕೆ ಜೀವಂತ ನಿದರ್ಶನ ಎಂದು ಬಿಜೆಪಿ ಟೀಕೆ ಮಾಡಿದೆ. ರಾಜ್ಯದಲ್ಲಿ 34 ಸಂಪುಟ ಸಚಿವರಿದ್ದಾರೆ. ಪ್ರತೀ ಜಿಲ್ಲೆಗೆ ಒಬ್ಬ ಉಸ್ತುವಾರಿ ಸಚಿವರಿದ್ದಾರೆ. ಸಂಪುಟ ದರ್ಜೆ ಸ್ಥಾನಮಾನದ 34 ನಿಗಮ ಮಂಡಳಿಗಳ ಅಧ್ಯಕ್ಷರಿದ್ದಾರೆ. ಜಿಲ್ಲಾಧಿಕಾರಿಗಳು, ಜಿ.ಪಂ. ಸಿಇಒಗಳು ಇದ್ದಾರೆ. ವಿಕೇಂದ್ರೀಕೃತ ಆಡಳಿತ ವ್ಯವಸ್ಥೆಯಲ್ಲಿ ಜಿಲ್ಲಾ, ತಾಲ್ಲೂಕು ಮಟ್ಟದಲ್ಲಿ ಪಂಚಾಯಿತಿಗಳು ಇವೆ. ಇಷ್ಟೆಲ್ಲಾ ವ್ಯವಸ್ಥೆ ಇದ್ದರೂ ಒಬ್ಬ ಬಡ ವ್ಯಕ್ತಿ ತನ್ನ ಸಮಸ್ಯೆ ಬಗೆಹರಿಸಿಕೊಳ್ಳಲು ದೂರದ ಊರುಗಳಿಂದ ಬಸ್ಸು, ರೈಲು ಚಾರ್ಜು ಕೊಟ್ಟು ಅರ್ಜಿ ಹಿಡಿದುಕೊಂಡು ವಿಧಾನಸೌಧಕ್ಕೆ ಬಂದು ದಿನವೆಲ್ಲಾ ಕಾದು ಸಿಎಂ ಮುಂದೆ ಕೈಚಾಚಬೇಕಾದ ಪರಿಸ್ಥಿತಿ ಇದೆ ಎಂದರೆ ಅದು ನಿಮ್ಮ ಸರ್ಕಾರದ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿ. ಅರ್ಜಿ ಹಿಡಿದು ಕೈಚಾಚುವ ಜನರ ಗೋಳನ್ನು ನಿಮ್ಮ ಬಿಟ್ಟಿ ಪ್ರಚಾರದ ಗೀಳಿಗೆ ಬಳಸಿಕೊಳ್ಳುತ್ತಿದ್ದೀರಲ್ಲ ಸಿಎಂ…

Read More

ಬೆಂಗಳೂರು: ಕಾಂಗ್ರೆಸ್ ಸರ್ಕಾರದಲ್ಲೂ 40% ಕಮೀಷನ್ ಮುಂದುವರೆದಿದೆ ಎಂಬ ಕೆಂಪಣ್ಣ ಆರೋಪ ವಿಚಾರ ಸಂಬಧಿಸಿದಂತೆ   ಶಾಸಕ‌ ಮುನಿರತ್ನ ಪ್ರತಿಕ್ರಿಯೆ ನೀಡಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು,  ನಮ್ಮ ಅವಧಿಯಲ್ಲಿ ಕೆಂಪಣ್ಣ ಕಮೀಷನ್ ಆರೋಪ ಮಾತ್ರ ಮಾಡಿದ್ರು, ಆದ್ರೆ ಅದರಲ್ಲಿ ಸ್ಪಷ್ಟತೆ ಇರಲಿಲ್ಲ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಿದಾಗಲೂ ಅವರು ದಾಖಲೆ ಕೊಟ್ಟಿರಲಿಲ್ಲ ಕೆಂಪಣ್ಣ ಅವರು ಈ ಬಾರಿ ಸತ್ಯ ಹೇಳಿದ್ದಾರೆ ಈ ಬಾರಿ ಒಳ್ಳೇ ವಿಷಯವೇ ಅವರ ಗಮನಕ್ಕೆ ಈಗಲಾದರೂ ಬಂದಿದೆಯಲ್ಲ ಎಂದರು. ಕಾಂಗ್ರೆಸ್ ಪರ ಇದ್ದಂತಹ ವ್ಯಕ್ತಿ ಕಾಂಗ್ರೆಸ್ ವಿರುದ್ಧವೇ 40% ಕಮೀಷನ್ ಆರೋಪ‌ ಮಾಡ್ತಿದ್ದಾರೆ ಅಂದರೆ ಅವರ ಬಳಿ ಮಾಹಿತಿ ಮತ್ತು ದಾಖಲೆಗಳು ಸೂಕ್ತವಾಗಿ ಸಿಕ್ಕಿರುತ್ತವೆ ಅವರೊಬ್ಬ ಕಾಂಗ್ರೆಸ್ ಸದಸ್ಯರಾಗಿದ್ದವರು, ಒಳ್ಳೇ ದಾಖಲೆಗಳನ್ನೇ ಬಿಡುಗಡೆ ಮಾಡಬಹುದೇನೋ? ಅಧಿಕಾರಿಗಳೇ ಕಮೀಷನ್ ಸಂಗ್ರಹ ಮಾಡಿ ರಾಜಕಾರಣಿಗಳಿಗೆ ಕೊಡ್ತಿದ್ದಾರೆ ಅಂತ ಹೇಳಿದ್ದಾರೆ ಯಾವೆಲ್ಲ ಅಧಿಕಾರಿಗಳು ಕಮೀಷನ್ ಏಜೆಂಟ್‌ಗಳಾಗಿದ್ದಾರೆ ಅಂತ ಹೇಳಲಿ ವಿನಾಕಾರಣ ಆರೋಪ ಮಾಡೋದು ಬೇಡ ಕೆಂಪಣ್ಣ ಆ ಅಧಿಕಾರಿಗಳು ಯಾರು…

Read More

ಬೆಂಗಳೂರು: ಆತ ನೆನ್ನೆ ತನ್ನ ಕಚೇರಿಲಿ ಸ್ನೇಹಿತನ ಜೊತೆ ಮಾತನಾಡಿಕೊಂಡು ಕೂತಿದ್ದ.. ಈ ವೇಳೆ ಏಕಾ ಏಕಿ ಚಾಕು ಇಡಿದು ಬಂಧವ್ನು ಇಬ್ಬರ ಎದೆಗೆ ಇರಿದು ಬರ್ಬರವಾಗಿ ಕೊಲೆ ಮಾಡಿಬಿಟ್ಟಿದ್ದಾನೆ.ಗೆಳೆಯ ನಾ ಮೀಟ್ ಮಾಡಲು ಬಂದವನು ಬಾರದ ಲೋಕಕ್ಕೆ ಹೋಗಿದಾನೆ ಹಾಗಾದ್ರೆ ಡಬಲ್ ಮರ್ಡರ್ ಇಂದಿನ ರೋಚಕ ಸ್ಟೋರಿ ತೋರಿಸ್ತೀವಿ ನೋಡಿ…. ಹೌದು.. ನೆನ್ನೆ ಸಂಜೆ ಎಂಟು ಗಂಟೆ ಸುಮಾರಿಗೆ ಬೆಂಗಳೂರಿನಲ್ಲಿ ಡಬಲ್ ಮರ್ಡರ್ ನಡೆದು ಹೋಗಿದೆ.. ಹಲಸೂರ್ ಗೇಟ್ ಠಾಣಾ ವ್ಯಾಪ್ತಿಯ ಕುಂಬಾರ ಪೇಟೆಯಲ್ಲಿ ಘಟನೆ ನಡೆದಿದ್ದು ಶ್ರೀ ಹರಿ ಮಾರ್ಕೆಟಿಂಗ್ ನ ಕಚೇರಿಯಲ್ಲಿ ಸುರೇಶ್ ಎಂಬ 55ವರ್ಷದ ವ್ಯಕ್ತಿ ಹಾಗೂ 68ವರ್ಷದ ಮಹೇಂದ್ರ ಎಂಬುವರನ್ನ ಬರ್ಬರವಾಗಿ ಹತ್ಯೆ ಮಾಡಿರೋ ಆರೋಪಿ ಪೊಲೀಸರ ಮುಂದೆ ಶರಣಾಗಿದ್ದಾನೆ.. ಅಂದ್ಹಾಗೆ ಈ ಡಬಲ್ ಮರ್ಡರ್ ಆಗಿರೋದು ಆಸ್ತಿ ವಿಚಾರಕ್ಕೆ ಅನ್ನೋದು ಪ್ರಾಥಮಿಕ ತನಿಖೆ ವೇಳೆ ಗೊತ್ತಾಗಿರೋ ವಿಚಾರ.. ಇಲ್ಲಿ ಕೊಲೆಯಾಗಿರೋ ಸುರೇಶ್ ಹಾಗೂ ಆರೋಪಿ ಭದ್ರಾ ಇಬ್ಬರೂ ದೂರದ‌ ಸಂಬಂಧಿಕರು.. ಮೂರು ಅಂತಸ್ಥಿನ…

Read More

ದೆಹಲಿ, ಫೆ.08: “ಸಂಸತ್ತಿನಲ್ಲಿ ಸಂಸದ ಡಿ.ಕೆ.ಸುರೇಶ್ ಅವರಿಗೆ ಮಾತನಾಡಲೂ ಅವಕಾಶ ಕೊಡದೆ, ನಮ್ಮ ಧ್ವನಿ ಅಡಗಿಸುವ ಯತ್ನ ನಡೆದಿದೆ. ಜತೆಗೆ ಕೇಂದ್ರ ಸರ್ಕಾರ ರಾಜ್ಯದ ಪ್ರತಿ ಬಡವನ ಹೊಟ್ಟೆ ಮೇಲೆ ಹೊಡೆಯುತ್ತಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಆಕ್ರೋಶ ವ್ಯಕ್ತಪಡಿಸಿದರು. ದೆಹಲಿಯಲ್ಲಿ ಮಾಧ್ಯಮಗಳಿಗೆ ಗುರುವಾರ ಪ್ರತಿಕ್ರಿಯೆ ನೀಡಿದ ಅವರು “ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರ ಮಾತಿನ ನಂತರ ಕಲಾಪ ಅಂತ್ಯಗೊಳಿಸಿ, ರಾಜ್ಯದ ಪರ ಸುರೇಶ್ ಅವರ ಧ್ವನಿ ಎತ್ತಲು ಅವಕಾಶ ಕೊಡದೆ ಅನ್ಯಾಯ ಮಾಡಲಾಗಿದೆ. ಬಿಜೆಪಿ ಸಂಸದ ತೇಜಸ್ವಿ ಸೂರ್ಯ ರಾಜ್ಯದ ಪರವಾಗಿ ಮಾತನಾಡದೆ ಪಕ್ಷಪಾತಿಯಾಗಿ ಮಾತನಾಡುತ್ತಿದ್ದರು. ನಮ್ಮ ಪಕ್ಷದ ಎಲ್ಲಾ ಮಂತ್ರಿಗಳು, ಶಾಸಕರು, ಸಂಸದರು ದೆಹಲಿಗೆ ಬಂದು ರಾಜ್ಯದ ಪರ ದನಿ ಎತ್ತಿದರು. ಈ ಬಗ್ಗೆ ಬಿಜೆಪಿ ಎಂಪಿಗಳಿಗೆ ನಾಚಿಕೆಯಾಗಬೇಕು. ನಾವು ರಾಜ್ಯದ ಕೂಲಿ ಕಾರ್ಮಿಕರ ಪರವಾಗಿ ಹೋರಾಡುತ್ತೇವೆ. ಉದ್ಯೋಗ ಖಾತ್ರಿ ಯೋಜನೆ ಹಾಗೂ ರಾಜ್ಯದ ಅಭಿವೃದ್ದಿಗೆ ಬೇಕಾದ ಅನುದಾನಕ್ಕಾಗಿ ಹೋರಾಡುತ್ತೇವೆ. ಕರ್ನಾಟಕ ಸರ್ಕಾರ ನೀಡಿರುವ ಅಂಕಿ-ಅಂಶಗಳು ಸುಳ್ಳು…

Read More

ಮುಂಬೈ: ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕ್ ಅವರು 48 ವರ್ಷಗಳ ಬಳಿಕ ಇದೀಗ ದಿಢೀರ್‌ ಆಗಿ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಈ ಸಂಬಂಧ ತಮ್ಮ ಎಕ್ಸ್‌ ಪೋಸ್ಟ್‌ನಲ್ಲಿ ಬರೆದುಕೊಂಡ ಅವರು, ನಾನು ಹದಿಹರೆಯದವನಾಗಿದ್ದಾಗ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದೇನೆ. ಇದು 48 ವರ್ಷಗಳ ನನ್ನ ಮಹತ್ವದ ಪ್ರಯಾಣವಾಗಿದೆ. ಇಂದು ನಾನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ ಎಂದಿದ್ದಾರೆ. ನಾನು ಹೇಳಿಕೊಳ್ಳಲು ಬಹಳಷ್ಟು ಸಂಗತಿಗಳಿವೆ. ಆದರೆ ಕೆಲವೊಂದು ವಿಷಯಗಳನ್ನು ಹೇಳದೆ ಬಿಡುವುದು ಉತ್ತಮ. ಈ ಪ್ರಯಾಣದ ಭಾಗವಾಗಿರುವ ಎಲ್ಲರಿಗೂ ನಾನು ಧನ್ಯವಾದಗಳು ಎಂದು ಸಿದ್ದಿಕ್‌ ತಿಳಿಸಿದ್ದಾರೆ.  https://twitter.com/BabaSiddique/status/1755456516746850437?ref_src=twsrc%5Etfw%7Ctwcamp%5Etweetembed%7Ctwterm%5E1755456516746850437%7Ctwgr%5E5fc00e7a2bd10a93c3036c81f4d2e69e68afe6ad%7Ctwcon%5Es1_&ref_url=https%3A%2F%2Fpublictv.in%2Fex-maharashtra-minister-baba-siddique-quits-congress-after-48-years%2F ಬಾಬಾ ಸಿದ್ದಿಕ್ ಯಾರು?: ಬಾಂದ್ರಾ (ವಂದ್ರೆ) ಪಶ್ಚಿಮ ಕ್ಷೇತ್ರದಿಂದ ಬಾಬಾ ಸಿದ್ದಿಕ್ ಮೂರು ಬಾರಿ ಶಾಸಕರಾಗಿದ್ದಾರೆ. ಆಹಾರ ಮತ್ತು ನಾಗರಿಕ ಸರಬರಾಜು ರಾಜ್ಯ ಸಚಿವರಾಗಿದ್ದರು ಮತ್ತು ಮಹಾರಾಷ್ಟ್ರ ವಸತಿ ಮತ್ತು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಮುಂಬೈ ವಿಭಾಗದ ಅಧ್ಯಕ್ಷರಾಗಿದ್ದರು. ವಿದ್ಯಾರ್ಥಿ ನಾಯಕರಾಗಿ ನಾಯಕಕತ್ವ ಪ್ರಾರಂಭಿಸಿದ…

Read More

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯ ಮಂಚಹಳ್ಳಿ ಗ್ರಾಮದಲ್ಲಿ ಕೊಟ್ಟಿಗೆಯಲ್ಲಿದ್ದ ಸುಮಾರು 21 ಮೇಕೆಗಳನ್ನ ಕಳ್ಳರು ಕದ್ದೊಯ್ದಿರುವ ಘಟನೆ ಬುಧವಾರ ರಾತ್ರಿ ನಡೆದಿದೆ. ಮಂಚಹಳ್ಳಿ ಗ್ರಾಮದ ನಾಗೇಶ್ ಎಂಬವರ ಮನೆಯ ಕೊಟ್ಟಿಗೆಯಲ್ಲಿ 21 ಮೇಕೆಗಳಿದ್ದವು. ಎಂದಿನಂತೆ ಇಂದು ಬೆಳೆಗ್ಗೆ ನಾಗೇಶ್ ಕೊಟ್ಟಿಗೆಗೆ ತೆರಳಿದಾಗ ಮೇಕೆಗಳನ್ನು ಕದ್ದೊಯ್ದಿರುವುದು ಬೆಳಕಿಗೆ ಬಂದಿದೆ. ಜೀವನಕ್ಕಾಧಾರವಾಗಿದ್ದ ಮೇಕೆಗಳನ್ನ ಕಳೆದುಕೊಂಡ ರೈತ ನಾಗೇಶ್ ಕಂಗಾಲಾಗಿದ್ದಾರೆ. ಈ ಬಗ್ಗೆ ಬೇಗೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

Read More

ತುಮಕೂರು: ಶಾಲೆಯಲ್ಲಿ ಊಟ ಸೇವಿಸಿ ಇಬ್ಬರು ಶಿಕ್ಷಕರು ಸೇರಿ 30 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಆರೋಗ್ಯದಲ್ಲಿ ಏರುಪೇರಾಗಿರುವ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಸೀನಪ್ಪನಹಳ್ಳಿ ನಲ್ಲಿರುವ ಶ್ರೀ ಅಂಬಾ ಭವಾನಿ ಅನುದಾನಿತ ಪ್ರೌಢಶಾಲೆಯಲ್ಲಿ ನಡೆದಿದೆ. ನಿನ್ನೆ ಮಧ್ಯಾಹ್ನ ಶಾಲೆಯಲ್ಲಿ ಮೊಸರನ್ನ ಸೇವಿಸಿದ್ದ ವಿದ್ಯಾರ್ಥಿಗಳು. ಮನೆಗೆ ಹೋದಾಗ ವಿದ್ಯಾರ್ಥಿಗಳ ಆರೋಗ್ಯದಲ್ಲಿ ಏರುಪೇರಾಗಿದ್ದು, ಕೂಡಲೇ ರಾತ್ರೋರಾತ್ರಿ ಮಕ್ಕಳನ್ನ ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಕುಣಿಗಲ್ ತಾಲ್ಲೂಕಿನ ಹಿಪ್ಪಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಅದರಲ್ಲಿ 12 ಮಕ್ಕಳಿಗೆ ಹೆಚ್ಚಿನ ಚಿಕಿತ್ಸೆಗೆ ಕುಣಿಗಲ್ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಶ್ರೀ ಅಂಬಾ ಭವಾನಿ ಅನುದಾನಿತ ಪ್ರೌಢಶಾಲೆಯಲ್ಲಿ ಒಟ್ಟು 80 ವಿದ್ಯಾರ್ಥಿಗಳಿದ್ದು, ಸ್ಥಳಕ್ಕೆ ಕುಣಿಗಲ್ ಟಿಹೆಚ್ ಓ ಹಾಗೂ ಆರೋಗ್ಯಾಧಿಕಾರಿಗಳು ಭೇಟಿ, ಪರಿಶೀಲನೆ ನಡೆಸಿದ್ದಾರೆ.  

Read More