Author: AIN Author

ವ್ಯಾಲೆಂಟೀನ್ ವಾರದ ಎರಡು ದಿನಗಳು ಕಳೆದಿವೆ. ಇವತ್ತು ಈ ವಾರದ ಮೂರನೇ ದಿನ. ವ್ಯಾಲೆಂಟೀನ್ ವಾರದ ಪ್ರಕಾರ ಇವತ್ತು ಚಾಕೊಲೇಟ್ ಡೇ. ಫೆಬ್ರವರಿ 9 ನೇ ತಾರೀಕನ್ನು ಪ್ರತಿವರ್ಷ ವ್ಯಾಲೆಂಟೀನ್ ವಾರದ ಚಾಕೊಲೇಟ್ ಡೇ ಎಂದು ಆಚರಿಸಲಾಗುತ್ತದೆ. ಮೊದಲ ದಿನ ರೋಸ್ ಡೇ. ಅಂದರೆ, ಗುಲಾಬಿ ಹೂವಿನೊಂದಿಗೆ ತಮ್ಮ ಪ್ರೀತಿಯನ್ನು ಹಂಚಿಕೊಳ್ಳುವ ದಿನ. ಎರಡನೇ ದಿನ ಪ್ರಪೋಸ್ ಡೇ. ಇದು ಅಧಿಕೃತವಾಗಿ ಪ್ರೀತಿಯ ತಿಳಿಸುವ ದಿನ. ಅಂದರೆ, ಇಲ್ಲಿಂದ ಈ ಇಬ್ಬರ ಹೊಸ ಜೀವನ ಶುರುವಾಗುತ್ತದೆ. ಹೇಗೂ ಪ್ರಪೋಸ್ ಮಾಡಿ ಆಗಿದೆ. ಇನ್ನು ಬಾಯಿ ಸಿಹಿ ಮಾಡದಿದ್ದರೆ ಹೇಗೆ…? ಅದಕ್ಕೆಂದೇ ಮೀಸಲಾಗಿರುವುದು ಮೂರನೇ ದಿನ. ಚಾಕೊಲೇಟ್ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ…? ಎಲ್ಲರೂ ಚಾಕೊಲೇಟ್ ಇಷ್ಟಪಡುತ್ತಾರೆ. ಇದೇ ಕಾರಣಕ್ಕೆ ಫೆಬ್ರವರಿ 9ರಂದು ಚಾಕೊಲೇಟ್ ಗಿಫ್ಟ್‌ ಆಗಿ ನೀಡಲಾಗುತ್ತದೆ. ಈ ಮೂಲಕ ಪ್ರೀತಿಯ ದಿನವನ್ನು ಇನ್ನಷ್ಟು ಆಪ್ತವನ್ನಾಗಿಸಲಾಗುತ್ತದೆ. ಚಾಕೊಲೇಟ್ ದಿನಕ್ಕಾಗಿ ಕೆಲವು ಸಾಲುಗಳು : ಜೀವನ  ಬಹಳ ಸುಂದರ – ಸಿಹಿ …

Read More

ರಾಜ್ಯದಲ್ಲಿ ಎಲ್ಲ ಹಳೆಯ ವಾಹನಗಳಿಗೆ (Old Vehicles) ಅತಿ ಸುರಕ್ಷಿತ ನೋಂದಣಿ ಫಲಕ (ಹೈ ಸೆಕ್ಯುರಿಟಿ ರಿಜಿಸ್ಪ್ರೇಷನ್‌ ನಂಬರ್‌ ಪ್ಲೇಟ್‌-High Security Registration Number Plate- HSRP) ಕಡ್ಡಾಯವಾಗಿ ಅಳವಡಿಸಬೇಕು ಎಂದು ಈಗಾಗಲೇ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಹೀಗಾಗಿ ಈ ಗಡುವಿನೊಳಗೆ ವಾಹನ ಮಾಲೀಕರು ಹೊಸ ಮಾದರಿಯ ನಂಬರ್‌ ಪ್ಲೇಟ್‌ ಅಳವಡಿಸಿಕೊಳ್ಳಬೇಕು, ಇಲ್ಲದಿದ್ದರೆ 500ರಿಂದ 1000 ರೂ. ದಂಡವನ್ನು ಕಟ್ಟಬೇಕಾಗುತ್ತದೆ. ಸಾರಿಗೆ ಇಲಾಖೆಯಿಂದ ಬಂದ ಮಾಹಿತಿಯ ಪ್ರಕಾರ 2019ಕ್ಕಿಂತ ಮೊದಲು ಖರೀದಿಸಿರುವ ವಾಹನಗಳಿಗೆ 17 ಫೆಬ್ರವರಿ 2024ರ ಒಳಗೆ ವಾಹನ ಮಾಲೀಕರು ತಪ್ಪದೇ HSRP ನಂಬರ್ ಪ್ಲೇಟ್ ( High Security Registration Plate ) ಅನ್ನು ತಮ್ಮ ತಮ್ಮ ವಾಹನಗಳಿಗೆ ಅವಳಡಿಸಿಕೊಳ್ಳುವುದು ಕಡ್ಡಾಯ ಎಂದು ತಿಳಿಸಿದ್ದಾರೆ. ಈ ಒಂದು ಸೂಚನೆ ಮೀರಿದಲ್ಲಿ ಮುಂದಿನ ದಿನಗಳಲ್ಲಿ ದಂಡ ಪಾವತಿ ಮಾಡಬೇಕಾಗುತ್ತದೆ ಎಂದು ಕೂಡ ತಿಳಿಸಲಾಗಿದೆ. ಈಗ ಎಲ್ಲರಲ್ಲೂ ಇಂದು ಪ್ರಶ್ನೆ ಕಾಡುತ್ತಿದೆ ಅಲ್ಲವೇ ಏನಿದು HSRP ನಂಬರ್ ಪ್ಲೇಟ್ ಗಳು ಎಂದು…

Read More

ಸೂರ್ಯೋದಯ: 06:49, ಸೂರ್ಯಾಸ್ತ : 06:11 ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಪುಷ್ಯಮಾಸ,ಕೃಷ್ಣ ಪಕ್ಷ, ಉತ್ತರಾಯಣಂ, ಹೇಮಂತ ಋತು, ತಿಥಿ: ಚತುರ್ದಶಿ /ಅವರಾತ್ರಿ ಅಮಾವಾಸ್ಯೆ ನಕ್ಷತ್ರ: ಶ್ರವಣ, ರಾಹು ಕಾಲ: 10:30 ನಿಂದ 12:00 ತನಕ ಯಮಗಂಡ:03:00 ನಿಂದ 04:30 ತನಕ ಗುಳಿಕ ಕಾಲ: 07:30 ನಿಂದ 09:00 ತನಕ ಅಮೃತಕಾಲ: ಮ.2:16 ನಿಂದ ಮ.3:41 ತನಕ ಅಭಿಜಿತ್ ಮುಹುರ್ತ: ಮ.12:07 ನಿಂದ ಮ.12:52 ತನಕ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ. ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು. Mob. 93534 88403 ಮೇಷ ರಾಶಿ ನಿಮ್ಮ ವ್ಯಾಪಾರ ಉತ್ತಮವಾಗಿರುವುದು, ಆರ್ಥಿಕ ಚೇತರಿಕೆ ಇಂದ ಉತ್ಸಾಹ ಮೂಡುವುದು, ಸಾಲದ ಋಣ ಬಾಧೆ ತೀರಿಸುವ ಹಂತದಲ್ಲಿ ಇದ್ದೀರಿ, ಹುಟ್ಟೂರಿನಲ್ಲಿ ಮನೆ ನಿರ್ಮಾಣ ಮಾಡುವ ಚಿಂತನೆ ಮಾಡುವಿರಿ, ಕೃಷಿ ಭೂಮಿ ಖರೀದಿಸುವ ಸಾಧ್ಯತೆ, ಶಿಕ್ಷಕರು ನಗರ ಪ್ರದೇಶದಲ್ಲಿ ಗೃಹನಿರ್ಮಾಣ ಮಾಡುವಿರಿ ಅಥವಾ ನಿವೇಶನ ಖರೀದಿಸುವಿರಿ,…

Read More

ದಾವಣಗೆರೆ:- ನಗರದ ನಿಟ್ಟುವಳ್ಳಿ 60 ಅಡಿ ರಸ್ತೆಯ ಆಂಜನೇಯ ದೇವಸ್ಥಾನದ ಬಳಿ ನಡುರಸ್ತೆಯಲ್ಲಿ ನೆಟ್ಟ ಕಂಬಕ್ಕೆ ಬೈಕ್ ಸವಾರ ಬಲಿಯಾದ ಘಟನೆ ಜರುಗಿದೆ. ಗಣೇಶ್ (40) ಸಾವನ್ನಪ್ಪಿದ ವ್ಯಕ್ತಿ. ರಸ್ತೆ ನಡುವೆ ಬ್ಯಾನರ್ ಕಟ್ಟಲು ಕಂಬ ಹಾಕಲಾಗಿತ್ತು. ಅದನ್ನು ಗಮನಿಸಿದೆ ಬಂದ ಟಿಟಿ ವಾಹನ, ಕಂಬಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಂಬ ಮುರಿದು ಎದುರಿನಿಂದ ಬೈಕ್ ಸವಾರನ ತಲೆಯ ಮೇಲೆ ಬಿದ್ದಿದೆ. ಕೂಡಲೇ ಬೈಕ್​ ಸವಾರನನ್ನು ಆಸ್ಪತ್ರೆಗೆ ಸೇರಿಸಲಾದರೂ, ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ನಡು ರಸ್ತೆಯಲ್ಲಿ‌ಕಂಬ ನೆಟ್ಟವರ ವಿರುದ್ದ ಜನರು ಆಕ್ರೋಶ ಹೊರ ಹಾಕಿದ್ದು, ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಇನ್ನು ಘಟನೆ ಕುರಿತು ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ರಣ ರೋಚಕ ಪಂದ್ಯದಲ್ಲಿ ಪಾಕ್ ಮಣಿಸಿ ಆಸ್ಟ್ರೇಲಿಯಾ ತಂಡ ಫೈನಲ್ ತಲುಪಿದೆ. ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಅಂಡರ್ 19 ವಿಶ್ವಕಪ್‌ ಅಂತಿಮ ಹಂತಕ್ಕೆ ಬಂದು ನಿಂತಿದೆ. ಇಂದು ನಡೆದ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ರೋಚಕ ಸೆಮಿಫೈನಲ್‌ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಕೊನೆಯ 1 ವಿಕೆಟ್​ನಿಂದ ಮಣಿಸಿದ ಆಸ್ಟ್ರೇಲಿಯಾ ತಂಡ ಫೈನಲ್ ಪ್ರವೇಶಿದೆ. ಇದರೊಂದಿಗೆ ಪ್ರಶಸ್ತಿ ಸುತ್ತಿನಲ್ಲಿ ಮುಖಾಮುಖಿಯಾಗಲಿರುವ ಎರಡು ತಂಡಗಳು ಯಾವುವು ಎಂಬುದು ಖಚಿತವಾಗಿದೆ. ಈ ಪಂದ್ಯಕ್ಕೂ ಮುನ್ನ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿದ್ದ ಭಾರತ ಯುವಪಡೆ ದಾಖಲೆಯ ಒಂಬತ್ತನೇ ಬಾರಿಗೆ ವಿಶ್ವಕಪ್ ಫೈನಲ್ ಪ್ರವೇಶಿಸಿತ್ತು. ಇದೀಗ ಪಾಕಿಸ್ತಾನ ತಂಡವನ್ನು ಮಣಸಿರುವ ಆಸ್ಟ್ರೇಲಿಯಾ ತಂಡ ಆರನೇ ಬಾರಿಗೆ ಅಂಡರ್ 19 ವಿಶ್ವಕಪ್ ಫೈನಲ್​ಗೆ ಟಿಕೆಟ್ ಪಡೆದುಕೊಂಡಿದೆ. ಫೆಬ್ರವರಿ 11 ರಂದು ನಡೆಯಲ್ಲಿರುವ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಹಾಗೂ ಭಾರತ ಮುಖಾಮುಖಿಯಾಗಲಿವೆ. ಪಾಕಿಸ್ತಾನ ನೀಡಿದ 180 ರನ್​ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಒಂಬತ್ತು…

Read More

ಬೆಂಗಳೂರು:- ಅನ್ಯಾಯದ ವಿರುದ್ಧ ಧ್ವನಿ ಎತ್ತುವುದು ದೇಶದ್ರೋಹ ಹೇಗಾಗುತ್ತದೆ ಎಂದು ದಿನೇಶ್ ಗುಂಡೂರಾವ್ ಪ್ರಶ್ನೆ ಮಾಡಿದ್ದಾರೆ. ನಮ್ಮ ತೆರಿಗೆ ನಮ್ಮ ಹಕ್ಕು’ ಎಂಬುದು ದೇಶ ವಿಭಜನೆಯ ಭಾಷೆ ಎಂದು ಮೋದಿ ರಾಜ್ಯಸಭೆಯಲ್ಲಿ ಹೇಳಿದ್ದಾರೆ. ಅಂದರೆ ಕೇಂದ್ರ ಎಷ್ಟೇ ಅನ್ಯಾಯ ಮಾಡಿದರೂ ರಾಜ್ಯ ಬಿಜೆಪಿ ಕೂಡ ತೆಪ್ಪಗಿರಬೇಕು ಎಂದು ಮೋದಿ ಬಯಸುತ್ತಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ. ಅನ್ಯಾಯ ಹಾಗೂ ತಾರತಮ್ಯದ ವಿರುದ್ಧ ಧ್ವನಿಯೆತ್ತುವುದಕ್ಕೆ ಮೋದಿಯವರು ದೇಶದ್ರೋಹದ ಹೊಸ ವ್ಯಾಖ್ಯಾನ ಬರೆಯಲು ಹೊರಟಿದ್ದಾರೆ. ಮೋದಿಯವರೆ, ನಿಮ್ಮ ಈ ಕಲ್ಪಿತ ನರೆಟೀವ್‍ಗಳು ಆ ಕ್ಷಣಕ್ಕೆ ನಿಮ್ಮ ಮನಸ್ಸಿಗೆ ಖುಷಿ ಕೊಡಬಹುದಷ್ಟೇ. ಇಂತಹ ಹೇಳಿಕೆಗಳಿಂದ ನಮ್ಮ ರಾಜ್ಯಕ್ಕೆ ನೀವು ಎಸಗಿರುವ ಅನ್ಯಾಯದ ಪಾಪ ಕಿಂಚಿತ್ತೂ ಕಡಿಮೆಯಾಗುವುದಿಲ್ಲ ಎಂದು ಅವರು ಹೇಳಿದ್ದಾರೆ. ನಮ್ಮ ರಾಜ್ಯಕ್ಕೆ ಬರಬೇಕಾದ ನ್ಯಾಯಯುತ ಪಾಲಿಗಾಗಿ ಪ್ರತಿಭಟಿಸಿದ ಮಾತ್ರಕ್ಕೆ ನಾವು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಿದ್ದೇವೆ ಎಂದು ಬಿಂಬಿಸುವುದೇ ಮಹಾಪರಾಧ. ಕರ್ನಾಟಕದ ಅಸ್ಮಿತೆಯ ಪರವಾಗಿ ನಮ್ಮ ಧ್ವನಿ ಎಷ್ಟು ಗಟ್ಟಿಯಾಗಿದೆಯೋ ಭಾರತದ ಅಖಂಡತೆಯ ವಿಚಾರದಲ್ಲೂ ನಮ್ಮ ಧ್ವನಿ ಅಷ್ಟೇ…

Read More

ದೆಹಲಿ:- ರಾಹುಲ್ ಗಾಂಧಿ ನಿಜವಾಗಿಯೂ ಅಜ್ಞಾನಿಯೋ ಅಥವಾ ಸುಳ್ಳುಗಾರನೋ ಎಂದು ಧರ್ಮೇಂದ್ರ ಪ್ರಧಾನ್ ಪ್ರಶ್ನೆ ಮಾಡಿದ್ದಾರೆ. ರಾಹುಲ್ ಗಾಂಧಿ ಜೀ ಅವರು ಮೊದಲು ಸ್ವಂತವಾಗಿ ನ್ಯಾಯ ಒದಗಿಸಿಕೊಳ್ಳಬೇಕು, ಅವರು ಪ್ರತಿದಿನ ಸುಳ್ಳನ್ನು ಹಬ್ಬಿಸಿ ಮಾರಾಟ ಮಾಡಿದರೆ ಕೇವಲ ಹಾಸ್ಯ, ವಿಡಂಬನೆ ಮತ್ತು ಮನರಂಜನೆಗೆ ಸೀಮಿತವಾಗುವ ದಿನ ದೂರವಿಲ್ಲ ಎಂದರು. ಸತ್ಯ ಏನೆಂದು ಇಲ್ಲಿ ಕೇಳಿ, ನರೇಂದ್ರ ಮೋದಿ ಹುಟ್ಟಿದಾಗಿನಿಂದ ಒಬಿಸಿ ಅಲ್ಲ, ಅವರನ್ನು ಗುಜರಾತ್ ಸರ್ಕಾರ ಒಬಿಸಿ ಮಾಡಿದೆ. ಅಂಥವರು ಹಿಂದುಳಿದವರ ಹಕ್ಕು ಮತ್ತು ನ್ಯಾಯಕ್ಕಾಗಿ ಸಾಥ್ ನೀಡಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್, ಪ್ರಧಾನಿ ಮೋದಿಯವರ ಜಾತಿ ಬಗ್ಗೆ ಹೇಳಿರುವ ವಿಡಿಯೊವನ್ನು ಶೇರ್ ಮಾಡಿ ಪ್ರಧಾನ್ ಈ ರೀತಿ ಟ್ವೀಟ್ ಮಾಡಿದ್ದಾರೆ.

Read More

ಮಂಡ್ಯ:- ಕಳೆದ ಲೋಕಸಭಾ ಚುನಾವಣೆ ತೋರಿಸಿಕೊಟ್ಟಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರ, ದೇಶದಲ್ಲಿಯೇ ಅತೀ ಹೆಚ್ಚು ಸೌಂಡ್ ಮಾಡಿತ್ತು. ಇದಕ್ಕೆ ಕಾರಣವಾಗಿದ್ದು ನಿಖಿಲ್ ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ಅಂಬರೀಶ್ ಅವರ ನಡುವಿನ ಸ್ಪರ್ಧೆ. ಇವರಿಬ್ಬರ ನಡುವೆ ನಡೆದ ಲೋಕಸಭಾ ಕುರುಕ್ಷೇತ್ರದಲ್ಲಿ ಸಂಸದೆ ಸುಮಲತಾ ಅಂಬರೀಶ್ ಗೆದ್ದು ಬೀಗಿದ್ದರು. ಇನ್ನು ಮಂಡ್ಯ ಲೋಕಸಭಾ ಕುರುಕ್ಷೇತ್ರದ ಚಕ್ರವ್ಯೂಹವನ್ನು ಬೇಧಿಸಲಾಗದೆ ನಿಖಿಲ್ ಕುಮಾರಸ್ವಾಮಿ ಸೋಲು ಅನುಭವಿಸಿದ್ದರು. ಅಂದಹಾಗೆ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸೋತ ಬಳಿಕ ನಿಖಿಲ್, ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಮನಗರದಿಂದ ಕಣಕ್ಕಿಳಿದು ಅಲ್ಲಿಯೂ ಕೂಡ ಸೋಲು ಕಂಡಿದ್ದರು. ಇದೀಗ ಮೊದಲು ಸೋತ ಜಾಗದಲ್ಲೇ ಗೆಲುವು ಕಾಣಬೇಕೆಂದು ನಿಖಿಲ್ ಮತ್ತೆ ಮಂಡ್ಯದಿಂದ ಲೋಕಸಭಾ ಕ್ಷೇತ್ರದಿಂದ ಅಗ್ನಿ ಪರೀಕ್ಷೆ ಎದುರಿಸಲು ಮುಂದಾಗುತ್ತಿದ್ದಾರೆ ಎನ್ನಲಾಗುತ್ತಿದೆ‌. ಇದಕ್ಕೆ ಪೂರಕ ಎಂಬಂತೆ ನಿಖಿಲ್ ಕುಮಾರಸ್ವಾಮಿ ಅವರು ಇದೇ ತಿಂಗಳು ಮಂಡ್ಯ ಲೋಕಸಭಾ ಕ್ಷೇತ್ರದ ಪ್ರವಾಸಕ್ಕೆ ಮುಂದಾಗಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರ 8 ವಿಧಾನಸಭಾ ಕ್ಷೇತ್ರಗಳ ರೌಂಡ್‌ಗೆ ನಿಖಿಲ್ ಮುಂದಾಗಿದ್ದಾರೆ.…

Read More

ಹಾಸನ:- ಕೇಂದ್ರ ಸರ್ಕಾರ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಹೋರಾಟಕ್ಕೆ ಸಜ್ಜಾಗಿದೆ. ಅನುದಾನ ಹಂಚಿಕೆ ವಿಚಾರವಾಗಿ ಸದ್ಯ ಕರ್ನಾಟಕ ರಕ್ಷಣಾ ವೇದಿಕೆ ಕೂಡ ಪ್ರತಿಭಟನೆಗೆ ಸಜ್ಜಾಗುತ್ತಿರುವುದಾಗಿ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರ್ನಾಟಕ ರಕ್ಷಣಾ ವೇದಿಕೆ ಮುಂದೆ ಹೋರಾಟ ಮಾಡಲಿದೆ. ರಾಜ್ಯಕ್ಕೆ ಕೇಂದ್ರದಿಂದ ಬರಬೇಕಾದ ಅನುದಾನ, ನಮ್ಮ ತೆರಿಗೆ ನಮಗೆ ಕೊಡಿ ಎಂದು ದೊಡ್ಡ ಹೋರಾಟಕ್ಕೆ ಸಜ್ಜಾಗುತ್ತೇವೆ. ಕರ್ನಾಟಕ ಭಾರತದ ಒಕ್ಕೂಟದಲ್ಲಿ ಇದೇ ಅನ್ನುವುದನ್ನು ಕೇಂದ್ರ ಸರ್ಕಾರ ಮರೆಯಬಾರದು, ಯಾರೂ ಮರೆಯಬಾರದು ಎಂದು ಹೇಳಿದ್ದಾರೆ. ನೀವು ತಾರತಮ್ಯ ಮಾಡಬೇಡಿ, ನಮ್ಮ ಹಣವನ್ನು ತೆಗೆದುಕೊಂಡು ಹೋಗಿ ಉತ್ತರ ಭಾರತದ ಯಾವುದೋ ರಾಜ್ಯಗಳಿಗೆ ಕೊಡುವ ಕೆಲಸ ಮಾಡಬೇಡಿ. ನಮಗೆ ಹೆಚ್ಚು ಅನುದಾನ ಕೊಡಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿಸುತ್ತೇವೆ ಎಂದಿದ್ದಾರೆ. ಸರ್ಕಾರ ಮಾಡುವ ಹೋರಾಟಗಳು ರಾಜಕೀಯ ಪ್ರೇರಿತವಾದವು. ಇವತ್ತು ಕರ್ನಾಟಕ ಸರ್ಕಾರದ ಜೊತೆ ಯಾರೂ ಇಲ್ಲ. ಯಾವ ಕನ್ನಡಪರ, ರೈತಪರ, ದಲಿತಪರ ಚಳುವಳಿಗಾರರು ಇಲ್ಲ ಅವರಿಗೆ ಗೊತ್ತಾಗಿದೆ. ಚುನಾವಣೆ…

Read More

ಚಿಕ್ಕಮಗಳೂರು:- ಚಕ್ರವರ್ತಿ ಸೂಲಿಬೆಲೆ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಕಪ್ಪು ಪಟ್ಟಿ ಪ್ರದರ್ಶಿಸಿದರು. ನಮೋ ಭಾರತ್’ ಕಾರ್ಯಕ್ರಮದಲ್ಲಿ ಕಾಂಗ್ರೆಸ್​​ ಕಾರ್ಯಕರ್ತರು ಕಪ್ಪು ಪಟ್ಟಿ ಪ್ರದರ್ಶನಕ್ಕೆ ಯತ್ನಿಸಿದ್ದಾರೆ. ಇದೇ ವೇಳೆ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಯುವ ಕಾಂಗ್ರೆಸ್​ನಿಂದ ಪ್ರತಿಭಟನೆ ನಡೆಸಿದ್ದು, ಪುಂಗಿದಾಸ ಚಕ್ರವರ್ತಿ ಎಂದು ಘೋಷಣೆ ಕೂಗಿದ್ದಾರೆ. ಇನ್ನು ಏಕಾಏಕಿ 2 ತಂಡವಾಗಿ ಕಾರ್ಯಕ್ರಮಕ್ಕೆ ನುಗ್ಗಲು ಯತ್ನಿಸಿದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ಕರೆದೊಯ್ದಿದ್ದಾರೆ. ಇದರಿಂದ ರೊಚ್ಚಿಗೆದ್ದ ಬಿಜೆಪಿ ಕಾರ್ಯಕರ್ತರು, ಕಾಂಗ್ರೆಸ್​ ಕಾರ್ಯಕರ್ತರಿದ್ದ ಕಟ್ಟಡದ ಮೇಲೆ ಕಲ್ಲು ತೂರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Read More