Author: AIN Author

ಚಿನ್ನದ ಬೆಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಭರ್ಜರಿ ಇಳಿಕೆ ಆಗಿದೆ.ಆದರೆ, ಕಳೆದ ಎರಡು ವಾರದ ಅವಧಿಯಲ್ಲಿ ಚಿನ್ನದ (Gold price) ಬೆಲೆಯನ್ನು ನೋಡಿದರೆ, ಚಿನ್ನದ ಬೆಲೆಯಲ್ಲಿ ರೂಪಾಯಿಯವರೆಗೆ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಆಗಿದೆ. ಈ ಮೂಲಕ ಚಿನ್ನವು ದೀರ್ಘಕಾಲಿಕ ಹೂಡಿಕೆಗೆ ಸೂಕ್ತ ಹಾಗೂ ದೀರ್ಘಕಾಲದಲ್ಲಿ ಚಿನ್ನ ಲಾಭವನ್ನೇ ತರಲಿದೆ ಎನ್ನುವುದು ಸಾಬೀತಾದಂತಾಗಿದೆ. ಸಾಮಾನ್ಯವಾಗಿ ಜನ ದೀರ್ಘಕಾಲದಲ್ಲಿ ಲಾಭ ತಂದು ಕೊಡಲಿದೆ ಎನ್ನುವ ಉದ್ದೇಶದಿಂದಲೇ ಚಿನ್ನದ ಮೇಲೆ ಹೂಡಿಕೆಯನ್ನು ಮಾಡುತ್ತಾರೆ. ಚಿನ್ನದಲ್ಲಿ ಹೂಡಿಕೆ ಮಾಡಿದರೆ ಇಂದಲ್ಲ ನಾಳೆ ಲಾಭವನ್ನು ತಂದುಕೊಡಲಿದೆ ಎನ್ನುವುದು ಒಂದು ನಂಬಿಕೆ.ಆ ನಂಬಿಕೆ ಇಂದೂ ಸಹ ಹುಸಿಯಾಗಿಲ್ಲ. ಬೆಳ್ಳಿಯಿಂದ ನಿರೀಕ್ಷಿತ ಲಾಭ ಸಿಗದೆ ಇದ್ದರೂ ಚಿನ್ನದಿಂದ ನಷ್ಟವಾಗುವುದೇ ಇಲ್ಲ ಎನ್ನುವಷ್ಟು ಚಿನ್ನ ಲಾಭವನ್ನೇ ತಂದುಕೊಡುತ್ತದೆ. ಮಾರುಕಟ್ಟೆಯಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ ಭಾರತದ ಮಾರುಕಟ್ಟೆಯಲ್ಲಿ (Today Gold price) ನೀವು ಚಿನ್ನದ ಬೆಲೆಯನ್ನು ನೋಡುವುದೇ ಆದರೆ, ಚಿನ್ನದ ಬೆಲೆಯು ಭಾರತದಲ್ಲಿ ಚಿನ್ನದ ದರ 22K ಚಿನ್ನ /g. ₹ 5,740. 24K…

Read More

ನವದೆಹಲಿ: ಈಗ ಲೋಕಸಭಾ ಚುನಾವಣೆ (Lok Sabha Election) ನಡೆದರೆ ಬಿಜೆಪಿ (BJP) ನೇತೃತ್ವದ ಎನ್‌ಡಿಎ (NDA) 366 ಸ್ಥಾನ ಗಳಿಸಿದರೆ ಕರ್ನಾಟಕದಲ್ಲಿ (Karnataka) ಬಿಜೆಪಿ-ಜೆಡಿಎಸ್‌ (BJP-JDS) ಮೈತ್ರಿಕೂಟ 23 ಸ್ಥಾನ ಗೆಲ್ಲಲಿದೆ ಎಂದು ಟೈಮ್ಸ್‌ ನೌ ಸಮೀಕ್ಷೆ ತಿಳಿಸಿದೆ. ಸಮೀಕ್ಷೆ ಏನು ಹೇಳಿದೆ? ಗುಜರಾತ್‌, ಛತ್ತೀಸ್‌ಗಢ, ದೆಹಲಿಯ ಎಲ್ಲ ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದ್ದು ಒಟ್ಟು 366 ಸ್ಥಾನಗಳನ್ನು ಎನ್‌ಡಿಎ ಒಕ್ಕೂಟ ಗಳಿಸಲಿದೆ. INDIA ಒಕ್ಕೂಟ 104, ಇತರರು 73 ಸ್ಥಾನ ಗಳಿಸಲಿದೆ.   ಶೇಕಡಾವಾರುಮತ ಪ್ರಮಾಣದಲ್ಲಿ ಎನ್‌ಡಿಎ 41.8% ಮತ ಪಡೆದರೆ INDIA ಒಕ್ಕೂಟ 28.6% ಮತ ಪಡೆಯಲಿದ್ದಾರೆ. ಇತರರು 29.6% ಮತ ಗಳಿಸಲಿದ್ದಾರೆ ಎಂದು ಹೇಳಿದೆ. ಉತ್ತರ ಪ್ರದೇಶದ 80 ಸ್ಥಾನಗಳ ಪೈಕಿ ಬಿಜೆಪಿ 77 ಸ್ಥಾನಗಳನ್ನು ಗೆಲ್ಲಲಿದೆ. ನಿತೀಶ್‌ಕುಮಾರ್‌ ಸೇರ್ಪಡೆಯಿಂದ ಬಿಹಾರದಲ್ಲಿ ಎನ್‌ಡಿಎ 35 ಸೀಟುಗಳನ್ನು ಗೆಲ್ಲಲಿದ್ದು, ಇತರ ಪಕ್ಷಗಳು 5 ಸ್ಥಾನಗಳಿಗೆ ತೃಪ್ತಿಪಡಬೇಕಾಗುತ್ತದೆ. ಪಶ್ಚಿಮ ಬಂಗಾಳದ ಒಟ್ಟು 42 ಸ್ಥಾನಗಳಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ (TMC) 26…

Read More

ದಾವಣಗೆರೆ: ರಾಜ್ಯದಲ್ಲಿ ಬಿಜೆಪಿಯಿಂದ 28ಕ್ಕೆ 28ಸ್ಥಾನ ಗೆಲ್ಲುವ ಸಂಕಲ್ಪ ಮಾಡಿದೆ, ಸಂಸದ ಜಿಎಂ ಸಿದ್ದೇಶ್ವರ್ ದಾವಣಗೆರೆ ಮಾತ್ರವಲ್ಲದೇ ರಾಜ್ಯದಲ್ಲಿ ಒಳ್ಳೆಯ ಕೆಲಸ ಮಾಡಿದ್ದಾರೆ, ಈ ಹಿನ್ನಲೆ ಬಿಜೆಪಿ ಅಭ್ಯರ್ಥಿಯನ್ನ ಗೆಲ್ಲಿಸಬೇಕಿದೆ ಎಂದು ಪರೋಕ್ಷವಾಗಿ ಸಿದ್ದೇಶ್ವರ್ ರನ್ನ ಗೆಲ್ಲಿಸಿ ಎಂದು ದಾವಣಗೆರೆಯಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿಕೆ ನೀಡಿದ್ದು ವಿರೋಧಿ ಬಣಕ್ಕೆ ಶಾಕ್ ನೀಡಿ. ದಾವಣಗೆರೆ ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪದಲ್ಲಿ ನೂತನ ಜಿಲ್ಲಾಧ್ಯಕ್ಷ ರಾಜಶೇಖರ್ ಅವರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಬಿಎಸ್ ವೈ, ಸಂಸದ ಜಿಎಂ ಸಿದ್ದೇಶ್ವರ್ ಈ ಸಮಾರಂಭಕ್ಕೆ ಗೈರಾಗಿದ್ದಾರೆ ಎಂದು ತಪ್ಪು ತಿಳಿಯಬೇಡಿ, ಅವರು ದೆಹಲಿ ಸಂಸತ್ ಸಭೆಯಲ್ಲಿದ್ದಾರೆ, ಜಿಲ್ಲೆಯಲ್ಲಿ ಒಗ್ಗಟ್ಟಾಗಿ ಕೆಲಸ ಮಾಡಿ ಬಿಜೆಪಿ ಗೆಲ್ಲಿಸಬೇಕು, ಸಿದ್ದೇಶ್ವರ್ ಉತ್ತಮವಾಗಿ ಕೆಲಸ ಮಾಡಿದ್ದಾರೆ, ಸಿದ್ದೇಶ್ವರ್ ಜೊತೆ ದೂರವಾಣಿ ಕರೆ ಮೂಲಕ ಮಾತನಾಡಿ ಬಂದಿದ್ದೇನೆ, ದೆಹಲಿಯಲ್ಲಿ ಇರುವ ಕಾರಣ ಗೈರಾಗಿದ್ದಾರೆ, ಮತ್ತೊಮ್ಮೆ ನರೇಂದ್ರ ಮೋದಿಯವರೇ ಪ್ರದಾನಿ ಅನ್ನೋ ಮಾತು ಎಲ್ಲೆಲ್ಲೂ ಕೇಳಿ ಬರುತ್ತಾ ಇದೆ, ಬರುವ…

Read More

ಬೆಂಗಳೂರು: ಕಾಂಗ್ರೆಸ್ ಮನೆಯಲ್ಲಿ ಮತ್ತೆ ಬ್ರೇಕ್ ಫಾಸ್ಟ್ ಮೀಟಿಂಗ್ ಶುರುವಾಗಿದೆ.ಸಚಿವರು ಪ್ರತ್ಯೇಕವಾಗಿ ಸಭೆ ಮಾಡೋದು ಬೇಡ ಎಂದು ಎಐಸಿಸಿ ಸೂಚನೆ ನೀಡಿದ್ದರೂ,ಕೆಲ ಸಚಿವರು ಡೋಂಟ್ ಕ್ಯಾರ್ ಎಂದಿದ್ದಾರೆ. ಸಚಿವ ಕೆ ಎಚ್ ಮುನಿಯಪ್ಪ ನಿವಾಸದಲ್ಲಿ ಇಂದು ಅಹಿಂದ ಸಚಿವರು ಮತ್ತೆ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಸಿ,ಮುಂಬರುವ ಪರಿಷತ್ ಹಾಗು ರಾಜ್ಯಸಭಾ ಚುನಾವಣೆಯಲ್ಲಿ ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸಲು ಸರ್ಕಸ್ ನಡೆಸಿದ್ದಾರೆ. ಯೆಸ್, ಹೆಚ್ಚುವರಿ ಡಿಸಿಎಂಗಾಗಿ ಕಾಂಗ್ರೆಸ್ ಸರ್ಕಾರದಲ್ಲಿ ಶುರುವಾಗಿದ್ದ ಅಹಿಂದ ಸಚಿವರ ಬ್ರೇಕ್ ಫಾಸ್ಟ್ ಮೀಟಿಂಗ್ ಗಳಿಗೆ ಹೈಕಮಾಂಡ್ ಬ್ರೇಕ್ ಹಾಕಿತ್ತು.ಪದೇ ಪದೇ ಈ ರೀತಿ ಸಭೆ ಮಾಡಿದ್ರೆ, ಪಕ್ಷಕ್ಕೆ ಡ್ಯಾಮೇಜ್ ಆಗುತ್ತೆ.ಇನ್ಮುಂದೆ ಯಾರು ಈ ರೀತಿ ಮೀಟಿಂಗ್ ಮಾಡಬೇಡಿ ಎಂದು ಎಐಸಿಸಿ ನಾಯಕರು ಸೂಚನೆ ನೀಡಿದ್ದರು.ಆದ್ರೆ ಮತ್ತೆ ಇವತ್ತು ಆಹಾರ ಸಚಿವ ಕೆ ಎಚ್ ಮುನಿಯಪ್ಪ‌‌ ನಿವಾಸದಲ್ಲಿ ಅಹಿಂದ ಸಚಿವರು ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಸಿ,ಮತ್ತೆ ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಇನ್ನು ಜಗದೀಶ್ ಶೆಟ್ಟರ್ ಪರಿಷತ್ ಸ್ಥಾನಕ್ಕೆ ರಾಜೀನಾಮೆ‌…

Read More

ಟೀಮ್‌ ಇಂಡಿಯಾ ಆಟಗಾರರಾದ ವಿರಾಟ್‌ ಕೊಹ್ಲಿ ಮತ್ತು ರೋಹಿತ್‌ ಶರ್ಮಾ ಅವರನ್ನು ಹಿರಿಯ ವೇಗಿ ಮೊಹಮ್ಮದ್‌ ಶಮಿ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ವಿರಾಟ್‌ ಕೊಹ್ಲಿ ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್‌ ಎಂದು ಬಣ್ಣಿಸಿದ ಶಮಿ, ನಾಯಕ ರೋಹಿತ್‌ ಶರ್ಮಾ ಅವರನ್ನು ಅಪಾಯಕಾರಿ ಬ್ಯಾಟ್ಸ್‌ಮನ್ ಎಂದು ಹೇಳಿದ್ದಾರೆ. .ಅಂದ ಹಾಗೆ ವೈಯಕ್ತಿಕ ಕಾರಣಗಳಿಂದ ವಿರಾಟ್‌ ಕೊಹ್ಲಿ ಆರಂಭಿಕ ಎರಡು ಟೆಸ್ಟ್‌ ಪಂದ್ಯಗಳನ್ನು ವಿಥ್‌ಡ್ರಾ ಮಾಡಿಕೊಂಡಿದ್ದರು. ಆದರೆ, ತಮ್ಮ ಪತ್ನಿ ಎರಡನೇ ಮಗುವಿನ ಜನ್ಮ ನೀಡುವ ಸನಿಹದಲ್ಲಿದ್ದಾರೆ. ಹಾಗಾಗಿ ಕೊಹ್ಲಿ ಮುಂದಿನ ಪಂದ್ಯಗಳಲ್ಲಿ ಆಡುವ ಬಗ್ಗೆ ಇನ್ನೂ ಯಾವುದೇ ಸ್ಪಷ್ಟತೆ ಇಲ್ಲ. ಕಳೆದ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಮೊಹಮ್ಮದ್‌ ಶಮಿ 24 ವಿಕೆಟ್‌ಗಳನ್ನು ಕಬಳಿಸಿದ್ದರು. ಆ ಮೂಲಕ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಬೌಲರ್‌ ಎನಿಸಿಕೊಂಡಿದ್ದರು. ಅಷ್ಟೇ ಅಲ್ಲದೆ ಏಕದಿನ ವಿಶ್ವಕಪ್‌ ಇತಿಹಾಸದಲ್ಲಿಯೇ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಭಾರತೀಯ ಬೌಲರ್‌ ಎಂಬ ಸಾಧನೆ ಮಾಡಿದ್ದರು. ಇದೀಗ ಅವರು ಭಾರತ ತಂಡದ ಫಾಸ್ಟ್‌ ಬೌಲಿಂಗ್‌ ವಿಭಾಗವನ್ನು…

Read More

ತಮಿಳುನಾಡು ಪ್ರೀಮಿಯರ್ ಲೀಗ್ 8ನೇ ಆವೃತ್ತಿಗಾಗಿ ಎಲ್ಲಾ ತಂಡಗಳನ್ನು ಘೋಷಿಸಲಾಗಿದೆ. ಬುಧವಾರ ಚೆನ್ನೈನಲ್ಲಿ ನಡೆದ ಹರಾಜು ದುಬಾರಿ ಮೊತ್ತದಲ್ಲಿ ಆಟಗಾರರು ಸೇಲ್‌ ಆಗಿದ್ದಾರೆ. ಯಾವ್ಯಾವ ಆಟಗಾರರು ಎಷ್ಟಕ್ಕೆ ಸೇಲ್‌ ಆಗಿದ್ದಾರೆ ನೋಡೋಣ. ಸಾಯಿ ಸುದರ್ಶನ್ ಹೆಸರಿನಲ್ಲಿತ್ತು. 2023 ರಲ್ಲಿ ಸಾಯಿ 21.6 ಲಕ್ಷ ರೂ. ಗೆ ಹರಾಜಾಗಿದ್ದರು. ಇದೀಗ 22 ಲಕ್ಷ ರೂ.ನೊಂದಿಗೆ ಸಾಯಿ ಕಿಶೋರ್ ದೊಡ್ಡ ಮೊತ್ತದಲ್ಲಿ ಸೇಲ್‌ ಆಗಿದ್ದಾರೆ. ಹಾಗೆ 22 ಲಕ್ಷ ರೂ.ನೊಂದಿಗೆ  ಸಂಜಯ್ ಸೇಲ್‌ ಆಗಿ   ಹೊಸ ಇತಿಹಾಸ ನಿರ್ಮಿಸಿದ್ದಾರೆ ತಿರುಚಿ ಗ್ರ್ಯಾಂಡ್ ಚೋಳಸ್ ತಂಡ: ಆಂಥೋನಿ ದಾಸ್, ಅತಿಶಯರಾಜ್ ಡೇವಿಡ್ಸನ್, ಈಶ್ವರನ್ ಕೆ, ಫ್ರಾನ್ಸಿಸ್ ರೋಕಿನ್ಸ್, ಗಂಗಾ ಶ್ರೀಧರ್ ರಾಜು, ಗಾಡ್ಸನ್ ಜಿ, ಜಾಫರ್ ಜಮಾಲ್, ಮಣಿ ಬಾರತಿ ಕೆ, ರಾಜ್‌ಕುಮಾರ್ ಕೆ, ರಾಜ್‌ಕುಮಾರ್ ಆರ್, ವಿನೋದ್ ಎಸ್ಪಿ, ಸಂಜಯ್ ಯಾದವ್, ಸರ್ವಣ ಕುಮಾರ್ ಪಿ, ವಿಘ್ನೇಶ್ ಕೆ, ನಿರ್ಮಲ್ ಕುಮಾರ್ ಪಿ, ಶ್ಯಾಮ್ ಸುಂದರ್ ಎಸ್, ಮೊಹಮ್ಮದ್ ಆಶಿಕ್, ಅರ್ಜುನ್ ಪಿ ಮೂರ್ತಿ,…

Read More

ಅನೇಕರಿಗೆ ಪದೇ ಪದೇ ತಲೆನೋವು ಕಾಣಿಸುತ್ತಿರುತ್ತದೆ. ಸಾಮಾನ್ಯ ತಲೆನೋವು ಎಲ್ಲರಿಗೂ ಕಾಣಿಸಿಕೊಳ್ಳುತ್ತದೆ. ಆದರೆ ಈ ತಲೆನೋವನ್ನು ಸಹಿಸಿಕೊಳ್ಳುವುದು ಕಷ್ಟವಾದಾಗ ಜನರು ಪೈನ್ ಕಿಲ್ಲರ್ ಗಳನ್ನು ತೆಗೆದುಕೊಳ್ಳುತ್ತಾರೆ. 2-4 ತಿಂಗಳಿಗೊಮ್ಮೆ ನೋವು ನಿವಾರಕಗಳನ್ನು ಸೇವಿಸಿದರೆ, ಏನೂ ತೊಂದರೆಯಾಗುವುದಿಲ್ಲ. ಆದರೆ ಪ್ರತಿದಿನ ನೋವು ನಿವಾರಕಗಳನ್ನು ಸೇವಿಸಿದರೆ ತೊಂದರೆಯಾಗುತ್ತದೆ. ನೋವು ನಿವಾರಕಗಳು ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಆದರೆ ಇದು ನಿಮ್ಮ ಆರೋಗ್ಯಕ್ಕೆ ಅಪಾಯಕಾರಿಯಾಗಿದೆ. ಈ ಔಷಧಿಗಳ ದುಷ್ಪರಿಣಾಮಗಳಿಂದ ದೇಹದಲ್ಲಿ ನಾನಾ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳಲಾರಂಭಿಸುತ್ತವೆ. ನಿಮಗೂ ತಲೆನೋವಿನ ಸಮಸ್ಯೆ ಕಾಡುತ್ತಿದ್ದರೆ 5 ಮನೆಮದ್ದುಗಳಿಂದ ಪರಿಹಾರ ಪಡೆಯಬಹುದು. ತಲೆನೋವಿಗೆ ಮನೆಮದ್ದು : 1. ಶುಂಠಿ ಮತ್ತು ತುಳಸಿ ರಸ : ತೀವ್ರ ತಲೆನೋವಿನಿಂದ ತೊಂದರೆಗೀಡಾಗಿದ್ದರೆ, ತುಳಸಿ ಮತ್ತು ಶುಂಠಿಯ ರಸವನ್ನು ಬಳಸಬಹುದು. ಇದಕ್ಕಾಗಿ 10-15 ತುಳಸಿ ಎಲೆಗಳು ಮತ್ತು ಸ್ವಲ್ಪ ಶುಂಠಿಯನ್ನು ತೆಗೆದುಕೊಂಡು ಪುಡಿಮಾಡಬೇಕು. ನಂತರ ಅದರ ರಸವನ್ನು ತೆಗೆದು ಹಣೆಯ ಮೇಲೆ ಹಚ್ಚಬೇಕು. ಈ ರಸದ ಪೇಸ್ಟ್ ಅನ್ನು ಹಣೆಯ ಮೇಲೆ ಹಚ್ಚುವುದರಿಂದ ನೋವು…

Read More

ತರಕಾರಿಗಳ ಸೇವನೆಯಲ್ಲಿ ಭಾರತೀಯರು ಸದಾ ಮುಂದು ಎಂದು ಹೇಳುತ್ತಾರೆ. ಏಕೆಂದರೆ ಇಲ್ಲಿನ ಪ್ರದೇಶಗಳಲ್ಲಿ ತರಕಾರಿಗಳನ್ನು ಹೆಚ್ಚಾಗಿ ಬೆಳೆಯುತ್ತಾರೆ ಮತ್ತು ಜನ ಸಹ ಅದೇ ರೀತಿ ಯಾವುದೇ ಮುಲಾಜಿಲ್ಲದೆ ಕಡಿಮೆ ಖರ್ಚಿನಲ್ಲಿ ಸೇವನೆ ಮಾಡುತ್ತಾರೆ. ಆರೋಗ್ಯದ ವಿಚಾರ ಬಂದಾಗ ನಮಗೆ ಅನುಕೂಲವಾಗಿ ಇರುವಂತಹ ತರಕಾರಿಗಳನ್ನು ಮಾತ್ರ ನಾವು ನೋಡುತ್ತೇವೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ಅದು ಸುವರ್ಣಗೆಡ್ಡೆ. ಇದರಲ್ಲಿ ಅನೇಕ ಆರೋಗ್ಯಕಾರಿ ಗುಣಗಳು ಅಡಗಿದ್ದು, ಅನೇಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಮಧುಮೇಹದಿಂದ ಬಳಲುತ್ತಿರುವವರು ಸುವರ್ಣ ಗೆಡ್ಡೆಯನ್ನು ತಮ್ಮ ಆಹಾರದಲ್ಲಿ ಸೇರಿಸುವುದರಿಂದ ಉತ್ತಮ ಫಲಿತಾಂಶವನ್ನು ಕಾಣಬಹುದು. ಸುವರ್ಣ ಗೆಡ್ಡೆ ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದ್ದು, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಸುವರ್ಣ ಗೆಡ್ಡೆ ತಿಂದರೆ ದೇಹದಲ್ಲಿರುವ ಕಲ್ಮಶಗಳು, ವಿಷಕಾರಿ ಅಂಶಗಳು ಹೊರ ಹೋಗುತ್ತವೆ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ನಿತ್ಯವೂ ಸುವರ್ಣ ಗೆಡ್ಡೆ ತಿಂದರೆ ಕರುಳು, ಯಕೃತ್, ಹೊಟ್ಟೆ ಸ್ವಚ್ಛವಾಗಿದ್ದು, ಜೀರ್ಣಕ್ರಿಯೆ ಸರಾಗವಾಗುತ್ತದೆ. ಅನೇಕ ಜನರು ಹೆಚ್ಚಿದ ಕೊಲೆಸ್ಟ್ರಾಲ್ ಸಮಸ್ಯೆಯಿಂದ ಬಳಲುತ್ತಿರುತ್ತಾರೆ.…

Read More

ಬೆಂಗಳೂರು : ಕಾಂಗ್ರೆಸ್‌ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆ ಜಾರಿಗೆ ಬಂದ ನಂತರ ಮಹಿಳೆಯರು ದೇವಾಲಯಗಳಿಗೆ ಭೇಟಿ ನೀಡುವುದು ಹೆಚ್ಚಾಗಿದೆ. ಹೀಗಾಗಿ, ದೇವಾಲಯಗಳ ಖಜಾನೆಯೂ ತುಂಬಿ ತುಳುಕುತಿದೆ. ಹಾಗಾದರೆ, ಯಾವೆಲ್ಲಾ ದೇವಾಲಯಗಳಲ್ಲಿ ಎಷ್ಟು ಆದಾಯ ಬಂದಿದೆ ಎಂಬುದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ದೇವಾಲಯಗಳಿಗೆ ಬಂದ ಆದಾಯ ಕುಕ್ಕೆ ಸುಬ್ರಮ್ಮಣ್ಯ ಕಳೆದ ವರ್ಷದ ಆದಾಯ : 74 ಕೋಟಿ ಈ ವರ್ಷದ ಆದಾಯ : 123 ಕೋಟಿ ಕೊಲ್ಲೂರು ಮೂಕಂಬಿಕಾ ಕಳೆದ ವರ್ಷದ ಆದಾಯ : 31.36 ಕೋಟಿ ಈ ವರ್ಷದ ಆದಾಯ : 59.47 ಕೋಟಿ ಚಾಮುಂಡೇಶ್ವರಿ ದೇಗುಲ ಕಳೆದ ವರ್ಷದ ಆದಾಯ : 21.92 ಕೋಟಿ ಈ ವರ್ಷದ ಆದಾಯ : 52.40 ಕೋಟಿ ಎಡೆಯೂರು ಸಿದ್ದಲಿಂಗೇಶ್ವರ ಕಳೆದ ವರ್ಷದ ಆದಾಯ : 31.74 ಕೋಟಿ ಈ ವರ್ಷದ ಆದಾಯ : 36.48 ಕೋಟಿ ಕಟೀಲು ದುರ್ಗಾಪರಮೇಶ್ವರಿ ಕಳೆದ ವರ್ಷದ ಆದಾಯ : 19.57 ಕೋಟಿ ಈ ವರ್ಷದ ಆದಾಯ : 32.10 ಕೋಟಿ…

Read More

ಬೆಂಗಳೂರು: ಈ ಬಾರಿಯ ಪ್ರೇಮಿಗಳ ದಿನದ ಸಂಭ್ರಮಕ್ಕೆ ಕಾನೂನು ತೊಡಕುಂಟಾಗಲಿದೆ. ಫೆಬ್ರವರಿ 14ರ ಸಂಜೆ 5 ಗಂಟೆಯಿಂದ ಫೆಬ್ರವರಿ 17 ಬೆಳಗ್ಗೆ 6. ಗಂಟೆವರೆಗೆ ಬೆಂಗಳೂರು ಮಹಾ ನಗರದ ಹಲವೆಡೆ ಮದ್ಯ ಮಾರಾಟಕ್ಕೆ ನಿರ್ಬಂಧ ವಿಧಿಸಲಾಗಿದೆ. ಪ್ರೇಮಿಗಳ ದಿನ ಆಚರಿಸಲಾಗುವ ಫೆಬ್ರವರಿ 14ರಂದೇ ಮದ್ಯ ಮಾರಾಟಕ್ಕೆ ನಿರ್ಬಂಧ ಜಾರಿಯಾಗಲಿದೆ. ಬೆಂಗಳೂರು ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಉಪ ಚುನಾವಣೆ ಇರುವ ಕಾರಣ ಫೆಬ್ರವರಿ 16 ರಿಂದ ಬೆಂಗಳೂರಿನಲ್ಲಿ ಮದ್ಯ ಮಾರಾಟಕ್ಕೆ ನಿರ್ಬಂಧ ಜಾರಿಯಲ್ಲಿ ಇರಲಿದೆ. ಪೊಲೀಸ್ ಕಮಿಷನರೇಟ್ ವ್ಯಾಪ್ತಿಗೆ ಹೊರತಾದ ಪ್ರದೇಶಗಳಲ್ಲಿ ಮದ್ಯ ಮಾರಾಟಕ್ಕೆ ನಿರ್ಬಂಧ ಇರಲಿದೆ ಎಂಬ ಮಾಹಿತಿ ಲಭ್ಯವಾಗಿದೆ. 1951ರ ಪ್ರಜಾ ಪ್ರತಿನಿಧಿ ಕಾಯ್ದೆಯ ಸೆಕ್ಷನ್ 135 (ಸಿ) ಹಾಗೂ 1967ರ ಕರ್ನಾಟಕ ಅಬಕಾರಿ ಕಾಯ್ದೆಯ ನಿಯಮ 10 (ಬಿ) ಅಡಿಯಲ್ಲಿ ಈ ನಿರ್ಬಂಧ ಜಾರಿಗೆ ತರಲಾಗಿದೆ ಎಂದು ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಆಯುಕ್ತ ಕೆ. ಎ. ದಯಾನಂದ ಅವರು ಮಾಹಿತಿ ನೀಡಿದ್ಧಾರೆ. ಈ ಚುನಾವಣೆಯ ಮತದಾನ ಪ್ರಕ್ರಿಯೆಯಲ್ಲಿ ಬೆಂಗಳೂರು…

Read More