Author: AIN Author

‘ಬಿಗ್ ಬಾಸ್ ಕನ್ನಡ 10’ರ ಸ್ಪರ್ಧಿ (Bigg Boss Kannada 10) ವರ್ತೂರು ಸಂತೋಷ್ (Varthur Santhosh) ಅವರು ಬಿಗ್ ಬಾಸ್ ಮನೆಯಲ್ಲಿದ್ದಾಗ ಪತ್ನಿ ಜೊತೆಗಿನ ಮನಸ್ತಾಪಗಳ ಬಗ್ಗೆ ಬಾಯ್ಬಿಟ್ಟಿದ್ದರು. ಪತ್ನಿಯ ಕುಟುಂಬಸ್ಥರು ಕೂಡ ವರ್ತೂರು ಸಂತೋಷ್ ಬಗ್ಗೆ ಕಿಡಿಕಾರಿದ್ದರು. ಆದರೆ ದೊಡ್ಮನೆಯಿಂದ ಹೊರ ಬಂದ್ಮೇಲೆ ಅಸಲಿಗೆ ವೈಯಕ್ತಿಕ ಬದುಕಿನಲ್ಲಿ ಏನಾಗಿತ್ತು? ಎಂಬುದರ ಬಗ್ಗೆ ವರ್ತೂರು ಸಂತೋಷ್ ಪ್ರತಿಕ್ರಿಯೆ ನೀಡಲೇ ಇಲ್ಲ. ಇದೀಗ ಸುದ್ದಿಗೋಷ್ಠಿಯೊಂದರಲ್ಲಿ ಪತ್ನಿ ಬಗ್ಗೆ ಕೇಳಿದ್ದಕ್ಕೆ ವರ್ತೂರು ಗರಂ ಆಗಿದ್ದಾರೆ. ಹಳ್ಳಿಕಾರ್ ರೇಸ್ ಕುರಿತು ನಡೆಸಿದ ಮಾಧ್ಯಮಗೋಷ್ಠಿಯಲ್ಲಿ, ಪತ್ನಿ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಸಂತೋಷ್ ಸಿಡಿದೆದ್ದಿದ್ದಾರೆ. ಈ ಬಗ್ಗೆ ವರ್ತೂರು ಸಂತೋಷ್ ಮಾತನಾಡಿ, ಇದು ಪರ್ಸನಲ್ ವಿಚಾರ. ಇದನ್ನು ಪಬ್ಲಿಕ್‌ನಲ್ಲಿ ಹೇಳುವ ಮುಠ್ಠಾಳ ನಾನಲ್ಲ. ಯಾರೋ ಮುಠ್ಠಾಳರು ಅಂಥ ಕೆಲಸ ಮಾಡಿದ್ದಾರೆ ಎಂದರೆ ಅವರ ಮಟ್ಟಕ್ಕೆ ಇಳಿಯಲು ನಾವು ರೆಡಿ ಇಲ್ಲ. ಎಲ್ಲರ ಮನೆಯ ದೋಸೆ ಕೂಡ ತೂತು. ಕೆಲವರ ಮನೆ ಹಂಚೇ ತೂತಾಗಿರುತ್ತದೆ. ನಿಮಗೆ ಅರ್ಥ ಆಗಿದೆ…

Read More

ಒಡಿಶಾ ನಟ ಕಮ್ ಸಂಸದ ಅನುಭವ್ ಮೊಹಂತಿ (Anubhav Mohanty) ಅವರು ಪತ್ನಿ ವರ್ಷಾ ಪ್ರಿಯಾದರ್ಶಿನಿ (Varsha Priyadarshini) ಜೊತೆಗಿನ 10 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ್ದಾರೆ. ಇದೀಗ ಈ ಜೋಡಿಗೆ ಅಧಿಕೃತವಾಗಿ ಡಿವೋರ್ಸ್ (Divorce) ಸಿಕ್ಕಿದೆ. ಈ ಬಗ್ಗೆ ನಟ ಅನುಭವ್ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ. ಅನುಭವ್ ಮೊಹಂತಿ ಡಿವೋರ್ಸ್ ಬಗ್ಗೆ ತಮ್ಮ ಎಕ್ಸ್‌ನಲ್ಲಿ ಬರೆದುಕೊಂಡು, ನನಗಾಗಿ ಮತ್ತು ನನ್ನ ಕುಟುಂಬದ ಶಾಂತಿ, ನೆಮ್ಮದಿಗಾಗಿ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದಗಳು. 10 ವರ್ಷ ಪೂರ್ಣಗೊಳ್ಳುವ ಒಂದು ದಿನ ಮುಂಚಿತವಾಗಿ ನಿಷ್ಪ್ರಯೋಜಕ, ಅರ್ಥಹೀನ, ಹೃದಯಹೀನ, ನೋವಿನ ಮತ್ತು ಸುಳ್ಳಿನಿಂದ ಕೂಡಿದ ಈ ದಾಂಪತ್ಯ ಜೀವನಕ್ಕೆ ಅಂತ್ಯ ಸಿಕ್ಕಿದೆ. ವಿಚ್ಛೇದನದ ತೀರ್ಪು ಸಿಕ್ಕಿತು. ನಾನು ಅವಳ ಸಂತೋಷಕ್ಕಾಗಿ ಪ್ರಾರ್ಥಿಸುತ್ತೇನೆ. ಇದರಲ್ಲಿ ಯಾವುದೇ ಅಪರಾಧವಿಲ್ಲ. ಹ್ಯಾಪಿ ರೋಸ್ ಡೇ ಎಂದು ಬರೆದುಕೊಂಡಿದ್ದಾರೆ. ಇದೀಗ ಒಡಿಶಾ, ಬೆಂಗಾಲಿ ನಟಿ ವರ್ಷಾ ಜೊತೆಗಿನ ದಾಂಪತ್ಯ 10 ವರ್ಷ ಪೂರ್ಣಗೊಳ್ಳುವ ಒಂದು ದಿನ ಮುಂಚೆ ನಟ ಅನುಭವ್ ಡಿವೋರ್ಸ್ ಘೋಷಿಸಿರುವುದು…

Read More

ಬೆಂಗಳೂರು: ಬಿಜೆಪಿ (BJP) ವತಿಯಿಂದ ಫೆಬ್ರವರಿ 9, 10, 11ರಂದು 3 ದಿನಗಳ ಕಾಲ ‘ಗ್ರಾಮ ಚಲೋ’ (Grama Chalo) ಅಭಿಯಾನ ನಡೆಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ (BY Vijayendra) ತಿಳಿಸಿದರು. ಹೆಚ್. ಗೊಲ್ಲಹಳ್ಳಿ ಗ್ರಾಮದಲ್ಲಿ ‘ಗ್ರಾಮ ಚಲೋ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ನಮ್ಮ ರಾಷ್ಟ್ರೀಯ ಅಧ್ಯಕ್ಷರಾದ ನಡ್ಡಾಜೀ ಮತ್ತು ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಜೀ (Narendra Modi) ಅವರ ಅಪೇಕ್ಷೆಯಂತೆ ‘ಗ್ರಾಮ ಚಲೋ’ ಅಭಿಯಾನಕ್ಕೆ ಚಾಲನೆ ನೀಡಿದ್ದೇವೆ. ಕರ್ನಾಟಕ ರಾಜ್ಯದಲ್ಲಿ 28 ಸಾವಿರಕ್ಕೂ ಹೆಚ್ಚು ಹಳ್ಳಿಗಳು, 19 ಸಾವಿರ ನಗರ ಬೂತ್‌ಗಳಲ್ಲಿ ಒಟ್ಟಾರೆಯಾಗಿ 42 ಸಾವಿರ ಕಾರ್ಯಕರ್ತರು ಮೂರು ದಿನಗಳ ಕಾಲ ನಿರಂತರವಾಗಿ ಈ ಅಭಿಯಾನದಲ್ಲಿ ಭಾಗವಹಿಸುತ್ತಾರೆ ಎಂದು ವಿವರಿಸಿದರು ನಾನು ಇವತ್ತು ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಬೂತ್ ಸಂಖ್ಯೆ 454, 455ರಲ್ಲಿ ಗ್ರಾಮ ಚಲೋ ಅಭಿಯಾನಕ್ಕೆ ಚಾಲನೆ ನೀಡಿದ್ದೇನೆ. 2047ನೇ ಇಸವಿಗೆ ಭಾರತವು ‘ವಿಕಸಿತ ಭಾರತ’ವಾಗಿ ಪರಿವರ್ತನೆ ಹೊಂದಬೇಕು. ಭಾರತವು…

Read More

ಕ್ಯಾನ್ಬೆರಾ: 2023ರ ಏಕದಿನ ವಿಶ್ವಕಪ್‌ ಫೈನಲ್‌(World Cup 2023) ರೋಚಕ ಹಣಾ-ಹಣಿಯಲ್ಲಿ ಆಸ್ಟ್ರೇಲಿಯಾ ತಂಡ ಭಾರತವನ್ನು ಮಣಿಸಿ ವಿಶ್ವಕಪ್‌ ಟ್ರೋಫಿ ಎತ್ತಿ ಹಿಡಿದಿತ್ತು. ಇದೀಗ ಅಂಡರ್‌-19 ವಿಶ್ವಕಪ್‌ (Under-19 World Cup )ಟೂರ್ನಿಯಲ್ಲೂ ಮತ್ತೆ ಭಾರತಕ್ಕೆ ಆಸೀಸ್‌ ಎದುರಾಳಿಯಾಗಿದ್ದು, ವಿಶ್ವಕಪ್‌ ಕ್ಷಣಗಳನ್ನು ನೆನಪಿಸುವಂತೆ ಮಾಡಿದೆ. ಇಲ್ಲಿನ ಬೆನೋನಿಯಲ್ಲಿರುವ ವಿಲೋಮೂರ್ ಪಾರ್ಕ್‌ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ (Australia Under 19s) ತಂಡ ಒಂದು ವಿಕೆಟ್‌ಗಳಿಂದ ಪಾಕ್ ತಂಡವನ್ನು ಸೋಲಿಸಿ, ಫೈನಲ್‌ ಪ್ರವೇಶಿಸಿದೆ. ಭಾನುವಾರ (ಫೆ.11)‌ ಮಧ್ಯಾಹ್ನ 1:30ರ ವೇಳೆಗೆ ಆಸ್ಟ್ರೇಲಿಯಾ ಸಹಾರಾ ಪಾರ್ಕ್ ವಿಲೋಮೂರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಫೈನಲ್‌ ಪಂದ್ಯ ನಡೆಯಲಿದ್ದು, ಭಾರತ – ಆಸೀಸ್‌ ಯುವಕರ ತಂಡ ಸೆಣಸಲಿವೆ. ಆಸೀಸ್‌ ವಿರುದ್ಧ ಟಾಸ್‌ ಸೋತು ಮೊದಲು ಕ್ರೀಸ್‌ಗಿಳಿದ ಪಾಕಿಸ್ತಾನ ತಂಡ 48.5 ಓವರ್‌ಗಳಲ್ಲಿ ಕೇವಲ 179 ರನ್‌ಗಳಿಗೆ ಸರ್ವಪತನ ಕಂಡಿತು. 180 ರನ್‌ಗಳ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡ 49.1 ಓವರ್‌ಗಳಲ್ಲಿ 9 ವಿಕೆಟ್‌ನಷ್ಟಕ್ಕೆ 181 ರನ್‌ ಗಳಿಸಿ…

Read More

ಮುಂಬೈ: ಶಿವಸೇನೆಯ ಉದ್ಧವ್‌ ಠಾಕ್ರೆ ಬಣದ ನಾಯಕರೊಬ್ಬರ ಪುತ್ರನಿಗೆ ಸೋಷಿಯಲ್‌ ಮೀಡಿಯಾವೊಂದರ ‘ಲೈವ್‌’ನಲ್ಲೇ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಶಿವಸೇನೆಯ UBT ನಾಯಕನ ಮಗ ಅಭಿಷೇಕ್ ಘೋಸಲ್ಕರ್ ಅವರೊಂದಿಗೆ ಲೈವ್ ಮಾಡುವಾಗ ವ್ಯಕ್ತಿಯೊಬ್ಬ ಗುಂಡು ಹಾರಿಸಿದ್ದಾನೆ. ನಂತರ ದಾಳಿಕೋರ ತನ್ನ ಮೇಲೆಯೇ ಬಂದೂಕನ್ನು ತಿರುಗಿಸಿದ್ದಾನೆ. ಫೇಸ್‌ಬುಕ್ ಲೈವ್‌ನಲ್ಲಿ ಚಿತ್ರೀಕರಣದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘೋಸಲ್ಕರ್ ಮತ್ತು ಅವರ ಮೇಲಿನ ದಾಳಿಕೋರ ಇಬ್ಬರೂ ಮೃತಪಟ್ಟಿದ್ದಾರೆ. ದಹಿಸರ್ ಪ್ರದೇಶದ MHB ಕಾಲೊನಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುಂಡಿನ ದಾಳಿ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೆಲವು ಭಿನ್ನಾಭಿಪ್ರಾಯಗಳ ನಂತರ ಇಬ್ಬರು ಇತ್ತೀಚೆಗೆ ಹೊಂದಾಣಿಕೆ ಮಾಡಿಕೊಂಡಿದ್ದರು. ವೆಬ್‌ಕಾಸ್ಟ್ ಆಗುತ್ತಿರುವ ಕಾರ್ಯಕ್ರಮಕ್ಕಾಗಿ ಘೋಸಲ್ಕರ್ ಅವರನ್ನು ಅವರ ಕಚೇರಿಗೆ ಆಹ್ವಾನಿಸಲಾಯಿತು. ಗುಂಡಿನ ದಾಳಿಯ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Read More

ಇಂದು ಒಟಿಟಿಯಲ್ಲಿ ಧಮಾಕ ಏರ್ಪಟ್ಟಿದೆ. ಮಿನಿ ಸಂಕ್ರಾಂತಿ ಎಂದೇ ಹೇಳಿದರೂ ತಪ್ಪಾಗಲಾರದು. ಏಕೆಂದರೆ ಒಟ್ಟೊಟ್ಟಿಗೆ ಹಲವು ಸಿನಿಮಾಗಳು ರಿಲೀಸ್ ಆಗಿವೆ ಕ್ಯಾಪ್ಟನ್ ಮಿಲ್ಲರ್ ಧನುಷ್ ಹಾಗೂ ಶಿವರಾಜ್​ಕುಮಾರ್ ನಟನೆಯ ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾ ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ರಿಲೀಸ್ ಆಗಿದೆ. ಸ್ವತಂತ್ರಪೂರ್ವದ ಕಥೆಯನ್ನು ಈ ಸಿನಿಮಾದಲ್ಲಿ ಹೇಳಲಾಗಿದೆ. ಶಿವರಾಜ್​ಕುಮಾರ್ ಅವರು ತೆರೆ ಮೇಲೆ ಹೆಚ್ಚು ಹೊತ್ತು ಕಾಣಿಸಿಕೊಳ್ಳಲಿಲ್ಲ ಎನ್ನುವ ಬೇಸರ ಅಭಿಮಾನಿಗಳಿಗೆ ಇದೆ. ಈ ಸಿನಿಮಾ ಕೂಡ ಸಂಕ್ರಾತಿ ಸಂದರ್ಭದಲ್ಲಿ ರಿಲೀಸ್ ಆಗಿತ್ತು. ‘ಅಯಲಾನ್’ ಶಿವಕಾರ್ತಿಕೇಯ ಮಾಡುವ ಸಿನಿಮಾಗಳು ಭಿನ್ನವಾಗಿ ಇರುತ್ತವೆ. ಈ ಮೊದಲು ಹಲವು ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ. ಅವರ ನಟನೆಯ ‘ಅಯಲಾನ್’ ಸಿನಿಮಾ ಸನ್ ಎನ್​ಎಕ್ಸ್​ಟಿ ಒಟಿಟಿಯಲ್ಲಿ ಪ್ರಸಾರ ಆರಂಭಿಸಿದೆ.  ಇದರ ಜೊತೆಗೆ ‘ಬಬ್ಲಗಮ್’ ಸಿನಿಮಾ ಕೂಡ ಒಟಿಟಿಯಲ್ಲಿ ರಿಲೀಸ್ ಆಗಿದೆ. ‘ಕಾಟೇರ’ ದರ್ಶನ್ ನಟನೆಯ, ತರುಣ್ ಸುಧೀರ್ ನಿರ್ದೇಶನದ ‘ಕಾಟೇರ’ ಸಿನಿಮಾ ಕಳೆದ ಡಿಸೆಂಬರ್ 29ರಂದು ಥಿಯೇಟರ್​ನಲ್ಲಿ ಬಿಡುಗಡೆ ಆಯಿತು. ಈ ಚಿತ್ರ ಬಾಕ್ಸ್…

Read More

ಬಳ್ಳಾರಿ: ಜಿಲ್ಲೆಯಲ್ಲಿ “ಸಂವಿಧಾನ ಜಾಗೃತಿ ಜಾಥಾ” ಸಂಚಾರ ಮುಂದುವರೆದ ಹಿನ್ನಲೆಯಲ್ಲಿ ಬುಧವಾರ ಸಿರುಗುಪ್ಪ ತಾಲ್ಲೂಕಿನ ಕೆಂಚನಗುಡ್ಡ, ನಡಿವಿ, ಎಂ.ಸೂಗೂರು, ಮುದ್ದಟನೂರು ಹಾಗೂ ಸಿರಿಗೇರಿ ಗ್ರಾಮಗಳ ಗ್ರಾಮ ಪಂಚಾಯಿತಿಗಳ ಮಾರ್ಗದಲ್ಲಿ ಸಂಚರಿಸಿತು.       ಕೆಂಚನಗುಡ್ಡ ಗ್ರಾಮದಲ್ಲಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಲಂಬಾಣಿ ನೃತ್ಯದ ಮೂಲಕ ಹಾಗೂ ಗ್ರಾಮಸ್ಥರು ಪಟಾಕಿಗಳನ್ನು ಸಿಡಿಸುವ ಮೂಲಕ ಜಾಥಾವನ್ನು ಸ್ವಾಗತಿಸಿದ್ದು ವಿಶೇಷವಾಗಿತ್ತು. ಗ್ರಾಮ ಪಂಚಾಯಿತಿಯ ವತಿಯಿಂದ ಬಲೂನುಗಳನ್ನು ಹಾರಿಸಲಾಯಿತು. ಮಾರ್ಗದಲ್ಲಿ ಹೆರಕಲ್ಲು, ನಿಟ್ಟೂರು ಹಾಗೂ ಉಡೇಗೋಳ ಗ್ರಾಮಗಳಲ್ಲಿ ಜಾಥಾವನ್ನು ಸ್ವಾಗತಿಸಿ ಡಾ.ಬಿ.ಆರ್.ಅಂಬೇಡ್ಕರ್ ರವರ ಪ್ರತಿಮೆಗೆ ಪೂಜೆ ಸಲ್ಲಿಸಲಾಯಿತು.       ನಡಿವಿ ಗ್ರಾಮದಲ್ಲಿ ಜಾಥಾಗೆ ವಿಶೇಷವಾಗಿ ಎತ್ತಿನ ಬಂಡಿಗಳು, ಪೂರ್ಣ ಕುಂಭ ಹಾಗೂ ಕಳಶ ಹಿಡಿದ ಮಹಿಳೆಯರು ಸ್ವಾಗತಿಸಿದರು. ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯ ವಿದ್ಯಾರ್ಥಿನಿಯರು ಲೇಜಿಮ್ ಹಾಗೂ ಡೊಳ್ಳು ಬಾರಿಸುವ ಮೂಲಕ ಜನ ಮನ ಸೆಳೆಯುವ ಪ್ರದರ್ಶನ ನೀಡಿದರು. ಮೊರಾರ್ಜಿ ದೇಸಾಯಿ ಶಾಲೆಯ ವಿದ್ಯಾರ್ಥಿನಿಯರು ಸೈನಿಕರ ವೇಷದಲ್ಲಿ ಅತ್ಯುತ್ತಮವಾಗಿ ಪಥ ಸಂಚಲನ ಮಾಡಿದರು.…

Read More

ಒಣದ್ರಾಕ್ಷಿ ತಯಾರಾಗುವ ಸಂದರ್ಭದಲ್ಲೇ ಅದರ ದರ ಕುಸಿದು ರೈತರು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಭಾರಿ ಇಳುವರಿ ಬಂದರೂ ಸಮರ್ಪಕ ಬೆಲೆ ಸಿಗದೇ ದ್ರಾಕ್ಷಿ ಬೆಳೆಗಾರ ಕಂಗಾಲಾಗಿದ್ದಾನೆ. ಒಣದ್ರಾಕ್ಷಿ ದರದಲ್ಲಿ ಭಾರಿ ಕುಸಿತದಿಂದ ಬೆಳೆಗಾರರು ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ. ಮಧ್ಯವರ್ತಿಗಳ ಹಾವಳಿಗೆ ತತ್ತರಿಸಿ ಹೋಗಿದ್ದಾರೆ. ಪ್ರತಿ ವರ್ಷ 170ರಿಂದ 220 ರೂ.ಗಳವರೆಗೆ ಒಣ ದ್ರಾಕ್ಷಿ ಮಾರಾಟವಾಗುತ್ತಿತ್ತು. ಆದರೆ, ಪ್ರಸಕ್ತ ಸಾಲಿನಲ್ಲಿಕೇವಲ 30ರಿಂದ 100 ರೂ. ಪ್ರತಿ ಕೆಜಿಗೆ ಒಣ ದ್ರಾಕ್ಷಿ ಮಾರಾಟವಾಗುತ್ತಿದೆ. ಹೀಗಾಗಿ ಈ ಬಾರಿಯೂ ದ್ರಾಕ್ಷಿ ಬೆಳೆದ ರೈತ ಕೈ ಸುಟ್ಟುಕೊಳ್ಳುವಂತಾಗಿದೆ. ಒಣದ್ರಾಕ್ಷಿ ದರ ಪಾತಾಳಕ್ಕೆ ಹೋಗಿದ್ದರಿಂದ ಅನಿವಾರ್ಯವಾಗಿ ಕೋಲ್ಡ್‌ ಸ್ಟೋರೇಜ್‌ನಲ್ಲಿ ಇಡುವಂತಾಗಿದ್ದು, ಅದರ ಬಾಡಿಗೆ ಪಾವತಿಸಬೇಕಿದೆ. ವರ್ಷವಿಡಿ ಕಷ್ಟಪಟ್ಟು ದುಡಿದು ಬೆಳೆದ ದ್ರಾಕ್ಷಿ ಬೆಳೆಗೆ ಸಮರ್ಪಕ ದರ ಸಿಗದೆ ಅದನ್ನು ರಕ್ಷಿಸಲು ಕೋಲ್ಡ್‌ ಸ್ಟೋರೇಜ್‌ಗಳಿಗೆ ಮೊರೆ ಹೋಗುವುದರಿಂದ ಬಂದ ಅಲ್ಪಸ್ವಲ್ಪ ಲಾಭ ಕೂಡ ಬೇರೆಯೊಬ್ಬರ ಪಾಲಾಗುವಂತಾಗಿದೆ. ಹಾನಿಯಾದ ಬೆಳೆಗೆ ವಿಮೆ ಕಂಪನಿಗಳು ಹೆಚ್ಚಿನ ಪರಿಹಾರ ನೀಡುತ್ತೇವೆ ಎಂದು ಹೇಳಿ ರೈತರಿಗೆ ವಿಮೆ…

Read More

ಇತ್ತೀಚೆಗೆ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯ ಎರಡನೇ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್‌ ಭರ್ಜರಿ ದ್ವಿಶತಕ ಬಾರಿಸಿದರು. ವೈಝಾಗ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತದ ಪರ ಮೊದಲ ಇನಿಂಗ್ಸ್‌ನಲ್ಲಿ ಏಕಾಂಗಿ ಹೋರಾಟ ನಡೆಸಿ 209 ರನ್‌ ಬಾರಿಸುವ ಮೂಲಕ ಯಶಸ್ವಿ ಜೈಸ್ವಾಲ್‌ ಭಾರಿ ಮೆಚ್ಚುಗೆ ಗಿಟ್ಟಿಸಿದ್ದರು. ಕ್ರಿಕೆಟ್‌ ಫೀಲ್ಡ್‌ನಲ್ಲಿ ತಮ್ಮ ಅಮೋಘ ಪ್ರದರ್ಶನಗಳ ಮೂಲಕ ಯಶಸ್ವಿ ಜೈಸ್ವಾಲ್‌ ಭಾರಿ ಸುದ್ದಿಯಲ್ಲಿದ್ದಾರೆ. ಅಂದಹಾಗೆ ಆಫ್‌ ದಿ ಫೀಲ್ಡ್‌ನಲ್ಲೂ ಅವರು ಬೆಳೆದು ಬಂದ ಹಾದಿ ಬಗ್ಗೆ ಅಷ್ಟೇ ರೋಚಕ ಕಥೆಯೇ ಇದೆ. ಉತ್ತರ ಪ್ರದೇಶ ಒಂದು ಪುಟ್ಟ ಗ್ರಾಮದಿಂದ ತನ್ನ 10ನೇ ವಯಸ್ಸಿಗೆ ಮುಂಬೈಗೆ ಬಂದ ಯಶಸ್ವಿ ಜೈಸ್ವಾಲ್‌, ಕ್ರಿಕೆಟ್‌ನಲ್ಲಿ ವೃತ್ತಿಬದುಕು ಕಟ್ಟಿಕೊಳ್ಳಲು ಪ್ರಸಿದ್ಧ ಆಝಾದ್‌ ಮೈದಾನದಲ್ಲಿ ಬೀಡುಬಿಟ್ಟು, ಇಂದು ಇಡೀ ಜಗತ್ತು ಸಲ್ಯೂಟ್‌ ಹೊಡೆಯುವ ಮಟ್ಟಿಗೆ ಬೆಳೆದು ನಿಂತಿದ್ದಾರೆ. “ಕೆಲವೊಮ್ಮೆ ನನಗೆ ಬಹಳಾ ಬೇಸರವಾಗುತ್ತದೆ. ಏಕೆಂದರೆ ಯಶಸ್ವಿ ಜೈಸ್ವಾಲ್‌ ಅವರ ತಂದೆ ಮತ್ತು ಆತ ಹೊಟ್ಟೆ ಹೊರೆಯಲು ಪಾನಿಪುರಿ ಮಾರುತ್ತಿದ್ದರು ಎಂದೆಲ್ಲಾ ಹೇಳಲಾಗಿದೆ. ಇದನ್ನು ಕೇಳಿ…

Read More

ಬೆಂಗಳೂರು: “ನಮ್ಮ ಮೆಟ್ರೋ ದೇಶದ ಇತರೇ ಭಾಗಗಳ ಮೆಟ್ರೋಗಳಿಗಿಂತ ಗುಣಮಟ್ಟದಲ್ಲಿ ಅತ್ಯುತ್ತಮವಾಗಿದ್ದು, 2ನೇ ಹಂತದ ರೀಚ್- 6 ಮೆಟ್ರೋ ಮಾರ್ಗ 2025 ರ ವೇಳೆಗೆ ಲೋಕಾರ್ಪಣೆಯಾಗಲಿದೆ”  ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು. ನಾಗವಾರ ಮುಖ್ಯರಸ್ತೆಯ ಕೆ. ಜಿ. ಹಳ್ಳಿ ಮೆಟ್ರೋ ಸ್ಟೇಷನ್ ಬಳಿ ಸುರಂಗ ಕೊರೆದು ಯಂತ್ರ ಹೊರಬರುವ ಪ್ರಕ್ರಿಯೆಯನ್ನು ವೀಕ್ಷಿಸಿದ ನಂತರ ಮಾಧ್ಯಮಗಳಿಗೆ ಅವರು ಹೇಳಿದ್ದಿಷ್ಟು; “ಈ ಮಾರ್ಗದಲ್ಲಿ ಒಟ್ಟು 13.76 ಕಿ.ಮೀ ಉದ್ದ ಸುರಂಗ ಇರಲಿದ್ದು. ಡೈರಿ ವೃತ್ತದಿಂದ ನಾಗಾವರದ ತನಕ 12 ನಿಲ್ದಾಣಗಳು ಬರಲಿವೆ. ಕಾಳೇನ ಅಗ್ರಹಾರದಿಂದ ನಾಗಾವರದ ತನಕ ಈ ಮಾರ್ಗವು ಒಟ್ಟು 21.26 ಕಿಮೀ ಉದ್ದವಿದೆ. 9 ಸುರಂಗ ಕೊರೆಯುವ ಯಂತ್ರಗಳು ಈಗ ಕಾರ್ಯನಿರ್ವಹಿಸುತ್ತಿದ್ದು, 7 ಕಡೆಗಳಲ್ಲಿ ಕೆಲಸ ಮುಗಿಯುವ ಹಂತಕ್ಕೆ ಬಂದಿದೆ. ಒಟ್ಟು 12 ನಿಲ್ದಾಣಗಳಿದ್ದು, ಶೇ 75 ರಷ್ಟು ಕಾಮಗಾರಿ ಮುಗಿದಿದೆ. ಈ ಹಂತದ ಮೆಟ್ರೋ ಕಾಮಗಾರಿ ಜವಾಬ್ದಾರಿಯನ್ನು ಅಬ್‌ಕಾಮ್, ಎಲ್‌ ಅಂಡ್ ಟಿ ಮತ್ತು ಐಟಿಡಿ ಸಂಸ್ಥೆಗಳು ಗುತ್ತಿಗೆ ತೆಗೆದುಕೊಂಡಿವೆ.…

Read More