Author: AIN Author

ಚಿತ್ರದುರ್ಗ: ಹೊಳಲ್ಕೆರೆ ರಾಷ್ಟ್ರೀಯ ಹೆದ್ದಾರಿ 13 ರ ದುಮ್ಮಿ ಗ್ರಾಮದ ಬಳಿ ಇಕೋ ಕಾರು ಪಲ್ಟಿ ಹೊಡೆದ  ಘಟನೆ ನಡೆದಿದ್ದು, ಕಾರಿನಲ್ಲಿದ್ದ ಐವರು ಪ್ರಯಾಣಿಕರು ಸಣ್ಣಪುಟ್ಟ ಪೆಟ್ಟು ಬಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.  ಇವರೆಲ್ಲರು ಶಿವಮೊಗ್ಗದಿಂದ ಹಿರಿಯೂರಿಗೆ ಹೊರಟಿದ್ದು, ಕಾರು ದುಮ್ಮಿ ಗ್ರಾಮದ ಹಳ್ಳದ ಬಳಿ ಬಂದಾಗ ಚಾಲಕನ ನಿಯಂತ್ರಣ ತಪ್ಪಿ ಕಾರು ಪಕ್ಕದ ಹಳ್ಳಕ್ಕೆ ಪಲ್ಟಿ ಹೊಡೆದು ಬಿದ್ದಿದೆ. ಘಟನಾ ಸ್ಥಳಕ್ಕೆ ಹೊಳಲ್ಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

ಬೆಳಗಾವಿ: 22 ಸಾವಿರ ಲಂಚಕ್ಕ ಬೇಡಿಕೆ ಇಟ್ಟಿದ್ದ ಹೊರಗುತ್ತಿಗೆ ನೌಕರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಡಾಟಾ ಎಂಟ್ರಿ ಆಪರೇಟರ್ ಆಗಿರುವ ಸೋಮಶೇಖರ ಮಾಸ್ತಮರಡಿ ಬೆಳಗಾವಿ ಜಿಲ್ಲಾ ನೋಂದಣಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಸೇಲ್ಡಿಡ್ ಚಲನ್ ನೀಡಲು 22 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದರು.  ಈ ಸಂಬಂಧ ಅವಿನಾಶ್ ಧಾಮನೆಕರ ಲೋಕಾಯುಕ್ತ  ಠಾಣೆಗೆ ದೂರು ನೀಡಿದ್ದರು. 22 ಸಾವಿರ ಲಂಚ ಪಡೆಯುವಾಗ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾರೆ.  

Read More

ಪ್ರತಿಷ್ಠಿತ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಚುನಾವಣೆಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡುವವರು ಬ್ಯಾಲೆನ್ಸ್ ಶೀಟ್ ನೀಡಬೇಕೆಂದು HKE ಸೊಸೈಟಿ ಅಧ್ಯಕ್ಷ ಡಾ.ಭೀಮಾಶಂಕರ್ ಬಿಲಗುಂದಿ ಹೇಳಿದ್ದಾರೆ. ನನ್ನ ಅವಧಿಯಲ್ಲಿ ನಾನು ಶಿಕ್ಷಣ ಸಂಸ್ಥೆಯ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಕೊವಿಡ್ ವೇಳೆಯೂ ಸಿಬ್ಬಂದಿಗಳಿಗೆ ಸಂಬಳವನ್ನ ನೀಡಿದ್ದೇನೆ. ಮಾತ್ರವಲ್ಲ ಶೀಘ್ರದಲ್ಲಿಯೇ ಬೀದರ್ ದಲ್ಲಿ ಸೈನಿಕ ಶಾಲೆ ತೆರೆಯಲಾಗುತ್ತಿದೆ ಅಂತ ತಮ್ಮ ಅವಧಿಯ ಕಾರ್ಯ ಚಟುವಟಿಕೆಗಳ ಬಗ್ಗೆ ಹೇಳಿದ್ರು.ಒಟ್ಟಾರೆ ಶೀಘ್ರದಲ್ಲಿ ನಡೆಯಲಿರುವ HKE ಎಲೆಕ್ಷನ ಕಾವು ಪಡೆಯುತ್ತಿದೆ..

Read More

ಕೃತಕ ಗರ್ಭಧಾರಣೆ ಮೂಲಕ ಕಲ್ಯಾಣ ಕರ್ನಾಟಕದಲ್ಲಿ ಬಂಜೆತನ ನಿವಾರಣೆಗೆ ಶ್ರಮಿಸಿದ ದೇವಿಕಾ ಆಸ್ಪತ್ರೆಯ ವೈದ್ಯರಾದ ಡಾ.ಆಶಾ ಗಂಗಾಣೆಯವರಿಗೆ ISAR ನೀಡುವ ದ್ರೋಣಾಚಾರ್ಯ ಪ್ರಶಸ್ತಿ ಲಭಿಸಿದೆ. ಈ ಬಗ್ಗೆ ಮಾಹಿತಿ ನೀಡಿದ ಡಾ.ಆಶಾ ಇಂಡಿಯನ್ ಸೊಸೈಟಿ ಫಾರ್ ಅಸಿಸ್ಟೆಡ್ ರಿಪ್ರೊಡೆಕ್ಷನ್ ಸಂಸ್ಥೆ ತಮ್ಮ ಸಾಧನೆ ಗುರುತಿಸಿ ಈ ಪ್ರಶಸ್ತಿ ನೀಡಿದೆ ಅಂದ್ರು.ವಿಶೇಷ ಅಂದ್ರೆ ದೇಶದಲ್ಲಿ 20 ಜನರಿಗೆ ಈ ಪ್ರಶಸ್ತಿ ಲಭಿಸಿದ್ದು ಕಲ್ಯಾಣ ಕರ್ನಾಟಕದಲ್ಲಿ ನನಗೆ ಸಿಕ್ಕಿದ್ದು ತುಂಬಾ ಖುಷಿ ತಂದಿದೆ ಅಂತ ಹೇಳಿದ್ರು.

Read More

ಬೆಂಗಳೂರು: ಬಿಗ್‍ಬಾಸ್ (Bigg Boss) ಸ್ಪರ್ಧಿ ತನಿಷಾಗೆ (Tanisha Kuppanda) ಬಿಗ್ ರಿಲೀಫ್ ಸಿಕ್ಕಿದೆ. ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಅವರ ಮೇಲೆ ಅಟ್ರಾಸಿಟಿ ದೂರು (Atrocity Case) ದಾಖಲಾಗಿತ್ತು. ಇದೀಗ ಅಟ್ರಾಸಿಟಿ ಕೇಸ್‍ನಲ್ಲಿ ತನಿಷಾಗೆ ಕ್ಲೀನ್‍ಚಿಟ್ ಕೊಡಲಾಗಿದೆ. ಬೆಂಕಿ ತನಿಷಾ ಈಗ ಬಿಸೋ ದೊಣ್ಣೆಯಿಂದ ಪಾರಾಗಿದ್ದಾರೆ ಎನ್ನುತ್ತಿದೆ ಪೊಲೀಸ್ ಮೂಲಗಳು ತನಿಷಾ ಕುಪ್ಪಂಡ ಬಿಗ್ ಬಾಸ್ ಶೋನಲ್ಲಿ ಭೋವಿ ಸಮುದಾಯದ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ ಆರೋಪದ ಮೇಲೆ ತನಿಷಾ ವಿರುದ್ಧ ಭೋವಿ ಸಮಾಜದ ಮಹಿಳಾ ಘಟಕ ರಾಜ್ಯಾಧ್ಯಕ್ಷೆ ಪದ್ಮ ಕುಂಬಳುಗೋಡು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ಸಂಬಂಧ ಕುಂಬಳಗೋಡು ಪೊಲೀಸರು ಜಾತಿನಿಂದನೆ ಆರೋಪದಡಿ ತನಿಷಾ ಕುಪ್ಪಂಡ ವಿರುದ್ಧ ಎಫ್‍ಐಆರ್ ದಾಖಲಾಸಿದ್ದರು. ಈ ಪ್ರಕರಣದಲ್ಲಿ ತನಿಷಾ ಮೇಲೆ ಕ್ರಮ ತೆಗೆದುಕೊಳ್ಳಲೇಬೇಕು ಎಂದು ಒತ್ತಡ ಹೇರಲಾಗಿತ್ತು. ಈ ಕುರಿತಂತೆ ತನಿಷಾ ತಾನು ಆ ರೀತಿ ಮಾತನಾಡಿಲ್ಲ ಎಂದು ಹೇಳಿಕೆ ಕೊಟ್ಟಿದ್ದರು. ಆದರೂ, ಕ್ರಮಕ್ಕೆ ಒತ್ತಾಯ ಮಾಡಲಾಗಿತ್ತು. ಸದ್ಯ ಅವರಿಗೆ ಬಿಗ್ ರಿಲೀಫ್…

Read More

ಬೆಂಗಳೂರು:  ಮನೆಯಲ್ಲಿದ್ದ ಬಾಲಕ ಸಿದ್ದರಾಮಪ್ಪ ಇದ್ದಕ್ಕಿದ್ದಂತೆ ನಾಪತ್ತೆಯಾಗಿರುವ ಘಟನೆ ರಾಮಮೂರ್ತಿನಗರದಲ್ಲಿ ನಡೆದಿದೆ. ನಿರಂತರ ಹುಡುಕಾಟ ನಡೆಸಿದ್ರು ಪತ್ತೆಯಾಗದ ಬಾಲಕ ಜನವರಿ‌ 24 ರ ಸಂಜೆ 6.30 ಕ್ಕೆ ಕಾಣೆಯಾಗಿರೊ ಬಾಲಕ ಸಿದ್ದರಾಮಪ್ಪ ಮಗನ ನೆನೆದು ಕಣ್ಣೀರು ಹಾಕ್ತಿರೊ ಪೋಷಕರು ಗಾರೆ ಕೆಲಸ ಮಾಡಿಕೊಂಡಿರೊ ತಾರಮ್ಮ ಹಾಗೂ ಭೀಮ್ಸಪ್ಪ ದಂಪತಿ ಪುತ್ರ ರಾಮಮೂರ್ತಿನಗರದ ಮನೆಯಿಂದ ಕಾಣೆಯಾಗಿರೊ ಬಾಲಕ ಘಟನೆ ಸಂಬಂಧ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Read More

ದಾವಣಗೆರೆ: ದೇಶ ವಿಭಜನೆ ಬಗ್ಗೆ ಮಾತನಾಡುವ ಸಂಸದ ಡಿ. ಕೆ. ಸುರೇಶ್, ಶಾಸಕ ವಿನಯ್ ಕುಲಕರ್ಣಿ ಅವರು ದೇಶದ್ರೋಹಿಗಳು. ಇಂಥವರನ್ನು ಗುಂಡಿಕ್ಕಿ ಕೊಲ್ಲುವ ಕಾನೂನನ್ನು ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೊಳಿಸಬೇಕು ಎಂದು ಮಾಜಿ ಡಿಸಿಎಂ ಕೆ. ಎಸ್. ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ನೀಡಿದರು. ದಾವಣಗೆರೆಯಲ್ಲಿ ಆಯೋಜಿಸಿದ್ದ ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಈಶ್ವರಪ್ಪ, ಇಂಥ ರಾಷ್ಟ್ರದ್ರೋಹಿಗಳನ್ನು ಪಕ್ಷದಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ತಾಕತ್ತಿದ್ದರೆ ಕಿತ್ತು ಹಾಕಲಿ ಎಂದು ಸವಾಲು ಹಾಕಿದರು. ಮಲ್ಲಿಕಾರ್ಜುನ್ ಖರ್ಗೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಅಖಂಡ ಭಾರತ ಇರುತ್ತದೆ. ಇದನ್ನು ವಿಭಜಿಸಲು ಸಾಧ್ಯವಿಲ್ಲ, ನಮ್ಮ ಸಹಕಾರವೂ ಇಲ್ಲ ಎಂದಿದ್ದಾರೆ. ಆದ್ರೆ, ದಕ್ಷಿಣ ಭಾರತ ಪ್ರತ್ಯೇಕ ಮಾಡಬೇಕು ಎಂದಿರುವ ಡಿ. ಕೆ. ಸುರೇಶ್ ಹಾಗೂ ವಿನಯ್ ಕುಲಕರ್ಣಿ ಅವರಂಥವರಿಗೆ ತಕ್ಕ ಶಿಕ್ಷೆಯಾಗಬೇಕು. ಇನ್ನೊಂದು ಬಾರಿ ಈ ರೀತಿ ಮಾತನಾಡುವವರನ್ನು ಗುಂಡಿಕ್ಕಿ ಕೊಲ್ಲುವ ಕಾನೂನು ಜಾರಿಗೆ ತರಬೇಕು ಎಂದು ಪ್ರಧಾನಿ ಮೋದಿ ಅವರಲ್ಲಿ…

Read More

ಬೆಂಗಳೂರು: ಕಂಠಪೂರ್ತಿ ಕುಡಿದು ಮದ್ಯದ ನಶೆಯಲ್ಲಿ ಕಾರು ಚಲಾಯಿಸಿ ಎಂಟು (Eight) ಬೈಕ್‌ಗಳು (Bike) ಸಂಪೂರ್ಣ ಜಖಂಗೊಂಡಿರುವ ಘಟನೆ ಉಲ್ಲಾಳು (Ullal) ಬಳಿಯ ಕೆಎಲ್‌ಇ ಲಾ ಕಾಲೇಜು ಬಳಿ ನಡೆದಿದೆ. ಭರತ್ ಎಂಬ ಯುವಕ ತನ್ನ ಕಾರಿನಲ್ಲಿ ನಾಲ್ವರು ಸ್ನೇಹಿತರನ್ನ ಕರೆದುಕೊಂಡು ಹೋಗಿ ಪಾರ್ಟಿ ಮಾಡಿದ್ದಾನೆ. ಸ್ನೇಹಿತ ಗುರುದೀಪ್‌ಗೆ ಕಾರು ಚಲಾಯಿಸಲು ಕೊಟ್ಟು ಡ್ರೈವ್‌ ಹೋಗಿದ್ದಾರೆ. ಪೋಷಕರು ತಮ್ಮ ಮಕ್ಕಳು ಚೆನ್ನಾಗಿ ಇರಲಿ ಎಂದು ಒಡಾಡಲು ಕಾರು ಕೊಡಿಸಿದ್ದರು. ಪಾಕೆಟ್ ಮನಿ ಅದೂ ಇದು ಅಂತಾ ಉಳಿಸಿದ್ದರಲ್ಲಿ ಕಂಠಪೂರ್ತಿ ಕುಡಿದು ಕಾರಿನಲ್ಲಿ ಮೋಜಿನ ರೈಡ್ ಹೋಗಿ ಈ ಅಪಘಾತವೆಸಗಿದ್ದಾರೆ. ಮದ್ಯದ ನಶೆಯಲ್ಲಿ ಕೆಎಲ್‌ಇ ಲಾ ಕಾಲೇಜಿನ ಬಳಿ ವೇಗವಾಗಿ ಕಾರು ಚಲಾಯಿಸಿಕೊಂಡು ಗುರುದೀಪ್ ಬಂದಿದ್ದಾನೆ. ಬಳಿಕ ಕಾರು ನಿಯಂತ್ರಣ ತಪ್ಪಿ ಬೇಕರಿ ಬಳಿ ನಿಂತಿದ್ದ ಬೈಕ್‌ಗಳ ಮೇಲೆ ಹರಿದಿದೆ. ಕಾರು ಗುದ್ದಿದ ರಭಸಕ್ಕೆ ಎಂಟು ಬೈಕುಗಳು ಸಂಪೂರ್ಣವಾಗಿ ಜಖಂಗೊಂಡಿವೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ

Read More

ಬೆಂಗಳೂರು: ಕಿಮ್ಸ್ ಆಸ್ಪತ್ರೆಯಲ್ಲಿ (KIMS) ಮಹಿಳಾ ವೈದ್ಯೆಯೊಬ್ಬರಿಗೆ ಜೂನಿಯರ್ ವೈದ್ಯ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಜೂನಿಯರ್ ವೈದ್ಯ ಡಾ.ರಾಜು ಎಂಬವರ ವಿರುದ್ಧ ನನ್ನನ್ನು ಹಿಂಬಾಲಿಸುತ್ತಾರೆ, ಮೈ ಕೈ ಮುಟ್ಟುತ್ತಾರೆ. ಕಾಲೇಜಿನಲ್ಲಿ ನನ್ನ ಬಗ್ಗೆ ಕೆಟ್ಟದಾಗಿ ಹೇಳಿಕೊಂಡು ಬರುತ್ತಿದ್ದಾರೆ. ಅಲ್ಲದೇ ಎದೆಯ ಮೇಲಿನ ಬಟ್ಟೆ ಎಳೆದಿದ್ದಾರೆ ಎಂದು ವೈದ್ಯೆ ಆರೋಪಿಸಿದ್ದಾರೆ. ಈ ಸಂಬಂಧ ಬನಶಂಕರಿ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Read More

ಬೆಂಗಳೂರು: ಎಸ್‍ಎಸ್‍ಎಲ್‍ಸಿ (SSLC) ಹಾಗೂ ದ್ವಿತೀಯ ಪಿಯುಸಿ (PUC) ಎಕ್ಸಾಂಗೆ ಇನ್ನೊಂದು ತಿಂಗಳು ಬಾಕಿ ಇದೆ. ಮಾರ್ಚ್ 1 ರಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಲಿದೆ. ಈ ವರ್ಷ ಪಬ್ಲಿಕ್ ಪರೀಕ್ಷೆ ವೇಳೆ ಹಿಜಬ್‍ಗೆ ಅವಕಾಶ ಇರುತ್ತಾ..? ಇಲ್ವಾ ಅನ್ನೋ ಪ್ರಶ್ನೆ ಮೂಡಿದೆ. ಕಳೆದ ಡಿಸೆಂಬರ್ 22 ರಂದು ಮೈಸೂರಿನಲ್ಲಿ ಹಿಜಬ್ ನಿಷೇಧ ವಾಪಸ್ ತೆಗೆಯೋದಾಗಿ ಸಿಎಂ ಘೋಷಣೆ ಮಾಡಿದ್ದರು. ವಿವಾದದ ಕಿಡಿ ಹೊತ್ತಿಕೊಳ್ಳುತ್ತಿದ್ದಂತೆಯೇ ತಮ್ಮ ಹೇಳಿಕೆ ಬಗ್ಗೆ ಸಿದ್ದರಾಮಯ್ಯ (Siddaramaiah) ಯೂಟರ್ನ್ ಹೊಡೆದಿದ್ದರು. ಸದ್ಯ ಸಿಎಂ ಈ ಹೇಳಿಕೆಯಿಂದ ಶಿಕ್ಷಣ ಇಲಾಖೆ ಗೊಂದಲದಲ್ಲಿದೆ. ಪರೀಕ್ಷೆ ಹತ್ತಿರ ಬರುತ್ತಿರುವುದರಿಂದ ಹಿಜಬ್ ಕುರಿತು ಚರ್ಚೆ ನಡೆಯುತ್ತಿದೆ. ಬಿಜೆಪಿ ಸರ್ಕಾರದಲ್ಲಿ ಶಾಲಾ-ಕಾಲೇಜುಗಳಲ್ಲಿ ಹಿಜಬ್ (Hijab) ನಿಷೇಧ ಮಾಡಲಾಗಿತ್ತು. ತರಗತಿಗಳ ಜೊತೆಗೆ ಎಸ್‍ಎಸ್‍ಎಲ್‍ಸಿ ಹಾಗೂ ದ್ವಿತೀಯ ಪಿಯುಸಿ ಎಕ್ಸಾಂಗೆ ಹಿಜಬ್ ನಿಷೇಧ ಮಾಡಲಾಗಿತ್ತು. ಹೈಕೋರ್ಟ್‍ನಲ್ಲಿ ಸರ್ಕಾರದ ಆದೇಶಕ್ಕೆ ಜಯ ಕೂಡ ಸಿಕ್ಕಿತ್ತು. ಇದಾದ ಬಳಿಕ ಹೈಕೋರ್ಟ್ (Highcourt) ಆದೇಶದ ವಿರುದ್ಧ ಸುಪ್ರೀಂಕೋರ್ಟ್‍ನಲ್ಲಿ (Supreme Court) ಮೇಲ್ಮನವಿ ಸಲ್ಲಿಕೆ…

Read More