Author: AIN Author

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ನಿವೃತ್ತಿಗೆ ಎರಡು ತಿಂಗಳು ಇರುವಾಗ ಹಿರಿಯ ಅಧಿಕಾರಿ ರಾಜೀನಾಮೆ ನೀಡಿದ್ದಾರೆ. ಹೌದು ಕರ್ನಾಟಕದ ಆಂತರಿಕ ಭದ್ರತೆ ವಿಭಾಗದ ಡಿಜಿಪಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದ ಪ್ರತಾಪ್ ರೆಡ್ಡಿ ವೈಯುಕ್ತಿಕ ಕಾರಣ ನೀಡಿ ರಾಜೀನಾಮೆ ನೀಡಿದ್ದಾರೆ. ಅಸಲಿಗೆ ವೈಯುಕ್ತಿಕ ಕಾರಣದಿಂದಲೇ ಆ ಹಿರಿಯ ಅಧಿಕಾರಿ ರಾಜೀನಾಮೆ ನೀಡಿದ್ರಾ…? ಇತ್ತಿಚೆಗೆ ಪೊಲೀಸ್ ಇಲಾಖೆಯಲ್ಲಿ ಆದ ಬದಲಾವಣೆ ಇಂದ ಈ ನಿರ್ಧಾರಕ್ಕೆ ಬಂದ್ರಾ…? ಎಂಬ ಅನುಮಾನಗಳು ಮೂಡಿಬಂದಿದೆ. ಡಿಜಿಪಿ ಆಗಿದ್ದರೂ ಕೆಲವೊಂದು ಬೆಳವಣಿಗಿಂದ ಅವರಿಗೆ ಬೇಸರ ಆಗಿತ್ತು. ಕೆಲವರು ಅವರಿಗೆ ಬೇಸರ ಆಗುವಂತೆ ನಡೆದುಕೊಂಡಿದ್ದರು. ಹೀಗಾಗಿ ರಾಜೀನಾಮೆ ನೀಡಿದ್ದಾರೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ತಿಳಿಸಿದ್ದಾರೆ. https://ainlivenews.com/send-love-messages-to-your-partner-on-chocolate-day/ ಇನ್ನೂ ಪ್ರತಾಪ್ ರೆಡ್ಡಿ ಅವರು 1991ನೇ ಬ್ಯಾಚ್​​ನ ಐಪಿಎಸ್​​ ಅಧಿಕಾರಿಯಾಗಿದ್ದು ಮೂಲತಃ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯವರು. ಬರುವ ಏಪ್ರಿಲ್ 30ಕ್ಕೆ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಈ ಹಿಂದೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿಯೂ ಅವರು ಸೇವೆ ಸಲ್ಲಿಸಿದ್ದರು.…

Read More

ಲಕ್ನೋ: ಮಹಾಭಾರತದಲ್ಲಿ ಶ್ರೀ ಕೃಷ್ಣನು ಪಾಂಡವರಿಗಾಗಿ ಕೇವಲ 5 ಗ್ರಾಮಗಳನ್ನು ಮಾತ್ರ ಕೇಳಿದ್ದ. ಆದರಿಂದು ನಾವು ಪವಿತ್ರ ಮೂರು ಸ್ಥಳಗಳನ್ನು ಮಾತ್ರ ಕೇಳುತ್ತಿದ್ದೇವೆ ಎಂದು ಹೇಳುವ ಮೂಲಕ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ (Yogi Adityanath), ಅಯೋಧ್ಯೆ ಬಳಿಕ ಕಾಶಿ ಮತ್ತು ಮಥುರಾದಲ್ಲಿರುವ ಮಸೀದಿಗಳನ್ನು ಪಡೆದುಕೊಳ್ಳುವ ಸುಳಿವು ನೀಡಿದ್ದಾರೆ. ರಾಜ್ಯ ವಿಧಾನಸಭೆಯಲ್ಲಿ ಮಾತನಾಡುವಾಗ ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠೆ (Ramlalla Pran Pratishtha) ಸಮಾರಂಭದ ಕುರಿತು ಮಾತನಾಡಿದರು. ಇದೇ ವೇಳೆ ಕಾಶಿ ಮತ್ತು ಮಥುರಾ (Mathura And Kashi) ವಿವಾದಿತ ಸ್ಥಳಗಳನ್ನೂ ಉಲ್ಲೇಖಿಸಿದರು.  ಈ ಹಿಂದಿನ ಸರ್ಕಾರದ ಆಳ್ವಿಕೆಯಲ್ಲಿ ಅಯೋಧ್ಯೆಯು (Ayodhya) ಕರ್ಫ್ಯೂ ಮತ್ತು ನಿಷೇಧಗಳನ್ನು ಎದುರಿಸಿತ್ತು. ಶತಮಾನಗಳವರೆಗೆ, ಅಯೋಧ್ಯೆಯು ನೀಚ ಉದ್ದೇಶಗಳಿಗೆ ಬಲಿಯಾಯಿತು, https://ainlivenews.com/send-love-messages-to-your-partner-on-chocolate-day/ ಅನ್ಯಾಯ ಎದುರಿಸಿತ್ತು. ನಾನು ಆ ಅನ್ಯಾಯದ ಬಗ್ಗೆ ಮಾತನಾಡುವಾಗ, 5,000 ವರ್ಷಗಳ ಹಿಂದೆ ನಡೆದ ಅನ್ಯಾಯದ ಬಗ್ಗೆ ಮಾತನಾಡಬೇಕಾಗುತ್ತದೆ. ಆ ಸಮಯದಲ್ಲಿ ಅಯೋಧ್ಯೆ, ಕಾಶಿ ಮತ್ತು ಮಥುರಾದಲ್ಲಿ ಅನ್ಯಾಯ ಸಂಭವಿಸಿದೆ ಎಂದು ಸಿಎಂ ಯೋಗಿ ಆದಿತ್ಯನಾಥ್‌…

Read More

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರಿಗೆ ನಾಚಿಕೆಯೇ ಆಗುವುದಿಲ್ಲವೇ? ಬರೀ ಸುಳ್ಳು ಸುಳ್ಳು ಸುದ್ದಿಗಳನ್ನು ಹರಿ ಬಿಡುತ್ತಿದ್ದಾರೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್‌ ಜೋಶಿ (Pralhad Joshi) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು OBC ಜಾತಿಯಲ್ಲಿ ಹುಟ್ಟಿಲ್ಲ ಮತ್ತು ಅವರು ಗುಜರಾತ್‌ ಸಿಎಂ ಆದ ಮೇಲೆ OBC ಜಾತಿಯನ್ನು ಸೂಚಿಸಿದ್ದಾರೆ ಎಂದಿರುವ ರಾಹುಲ್ ಗಾಂಧಿ ಆರೋಪಕ್ಕೆ ಸಚಿವ ಜೋಶಿ ಅವರು ತಿರುಗೇಟು ನೀಡಿದ್ದು, ತಮ್ಮ X ಖಾತೆಯಲ್ಲಿ ಆಕ್ರೋಶ ಹೊರ ಹಾಕಿದ್ದಾರೆ.  ಕಾಂಗ್ರೆಸ್‌ನ (Congress) ಸುಳ್ಳಿನ ಬುತ್ತಿಯನ್ನು ಎಳೆ ಎಳೆಯಾಗಿ ಬಿಚ್ಚಿಡುವ ಸಮಯ ಬಂದಿದೆ. ವಾಸ್ತವ ಬೇರೆಯೇ ಇರುವಾಗ ಕಾಂಗ್ರೆಸ್ ಬರೀ ಸುಳ್ಳುಗಳನ್ನೇ ಹೆಣೆದು ಜನರ ಕಿವಿಗೆ ಹೂವಿನ ಗೊಂಚಲೇ ಇಡುತ್ತಿದೆ ಎಂದು ಕಿಡಿ ಕಾರಿದ್ದಾರೆ.

Read More

ಮಂಗಳೂರು: ಕೇಂದ್ರ ಸರ್ಕಾರದ ನಿವೃತ್ತ ನೌಕರರ ಬಹುದಿನ ಬೇಡಿಕೆಯಾದ ಸೆಂಟ್ರಲ್ ಗವರ್ನ್‌ ಮೆಂಟ್ ಹೆಲ್ತ್ ಸ್ಕೀಮ್‌ (CGHS) ವೆಲ್ ನೆಸ್ ಸೆಂಟರ್ ಅನ್ನು ಮಂಗಳೂರಿನಲ್ಲಿ ತೆರೆಯಲು ಪ್ರಧಾನಿ ನರೇಂದ್ರ ಮೋದಿ (Narendra Modi)  ನೇತೃತ್ವದ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಸಂಸದ ನಳಿನ್ ಕುಮಾರ್ (Nalin Kumar Kateel) ಪ್ರಯತ್ನದಿಂದ ಬಹುದಿನದ ಬೇಡಿಕೆ ಈಡೇರಿದ್ದು, ಕಳೆದ ಬಾರಿ ಕೇಂದ್ರ ಆರೋಗ್ಯ ಸಚಿವರಿಗೆ ಭೇಟಿಯಾಗಿ ಮಂಗಳೂರಿನಲ್ಲಿ CGHS ವೆಲ್ ನೆಸ್ ಸೆಂಟರ್ ನ್ನು ತೆರೆಯುವಂತೆ ಮನವಿ ಮಾಡಿದ್ದರು. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಡಾ. ಮನ್ ಸುಖ್ ಮಾಂಡವೀಯ ಅವರು ನಳಿನ್ ಕುಮಾರ್ ರವರಿಗೆ ಪತ್ರ ಬರೆದು ಮಂಗಳೂರು (Mangaluru) ಸೇರಿದಂತೆ ದೇಶದ 20 ನಗರಗಳಲ್ಲಿ CGHS ವೆಲ್ ನೆಸ್ ಸೆಂಟರ್ ಗಳನ್ನು ತೆರೆಯುತ್ತಿರುವುದಾಗಿ ತಿಳಿಸಿದ್ದಾರೆ. https://ainlivenews.com/send-love-messages-to-your-partner-on-chocolate-day/ ದಕ್ಷಿಣ ಕನ್ನಡ ಹಾಗೂ ನೆರೆಯ ಜಿಲ್ಲೆಗಳ 50ಕ್ಕೂ ಅಧಿಕ ಕೇಂದ್ರ ಸರ್ಕಾರದ ಇಲಾಖೆಗಳ ಸುಮಾರು 5,500 ಉದ್ಯೋಗಿಗಳಿದ್ದು, 29,000 ಕ್ಕೂ ಅಧಿಕ ನಿವೃತ್ತ…

Read More

ಡೆಹ್ರಾಡೂನ್: ಉತ್ತರಾಖಂಡದ  ಹಲ್ದ್ವಾನಿಯಲ್ಲಿ  ಅನಧಿಕೃತ ಮದರಸಾ ಮತ್ತು ಮಸೀದಿಯ ತೆರವು ವಿಚಾರವಾಗಿ ನಡೆಯುತ್ತಿರುವ ಹಿಂಸಾಚಾರದಲ್ಲಿ ನಾಲ್ವರು ಸಾವನ್ನಪ್ಪಿದ್ದು, 250 ಮಂದಿ ಗಾಯಗೊಂಡಿದ್ದಾರೆ. ನಗರದಲ್ಲಿ ಕರ್ಫ್ಯೂ ವಿಧಿಸಲಾಗಿದ್ದು, ಗಲಭೆಕೋರರ ವಿರುದ್ಧ ಕಂಡಲ್ಲಿ ಗುಂಡು ಆದೇಶ ಹೊರಡಿಸಲಾಗಿದೆ. ಹಿಂಸಾಚಾರ ವ್ಯಾಪಿಸದಂತೆ ತಡೆಯಲು ಇಂಟರ್ನೆಟ್ ಸೇವೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಹಿಂಸಾಚಾರದ ಹಿನ್ನೆಲೆಯಲ್ಲಿ ಶಾಲೆಗಳನ್ನೂ ಮುಚ್ಚಲಾಗಿದೆ ಎಂದು ವರದಿಯಾಗಿದೆ. ನ್ಯಾಯಾಲಯದ ಆದೇಶದ ನಂತರ ಗುರುವಾರ ಪೊಲೀಸರ ಸಮ್ಮುಖದಲ್ಲಿ ಅಧಿಕಾರಿಗಳ ತಂಡ, ಮದರಸಾ ಮತ್ತು ಮಸೀದಿಯ ಕಟ್ಟಡಗಳನ್ನು ನೆಲಸಮಗೊಳಿಸಲು ಪ್ರಯತ್ನಿಸಿದಾಗ ಹಿಂಸಾಚಾರ ಆರಂಭವಾಯಿತು. ಈ ಕ್ರಮಕ್ಕೆ ಹಲ್ದ್ವಾನಿಯ ವನ್ಭುಲ್ಪುರ ಪ್ರದೇಶದಲ್ಲಿ ಜನಸಮೂಹದಿಂದ ತೀವ್ರ ಪ್ರತಿರೋಧ ವ್ಯಕ್ತವಾಯಿತು. ಗಲಭೆಕೋರರು ನಡೆಸಿದ ಕಲ್ಲು ತೂರಾಟದಲ್ಲಿ 50ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದು, ಹಲವಾರು ಆಡಳಿತ ಅಧಿಕಾರಿಗಳು, ಪುರಸಭೆಯ ಕಾರ್ಯಕರ್ತರು ಮತ್ತು ಪತ್ರಕರ್ತರು ಗಾಯಗೊಂಡಿದ್ದಾರೆ. ಅಲ್ಲದೇ ಉದ್ರಿಕ್ತರ ಗುಂಪು, ಪೊಲೀಸ್ ಠಾಣೆಯ ಹೊರಗಿನ ವಾಹನಗಳಿಗೆ ಬೆಂಕಿ ಹಚ್ಚಿದ್ದರಿಂದ ಹಿಂಸಾಚಾರ ಉಲ್ಬಣಗೊಂಡಿದ್ದು, ಕಾನೂನು ಸುವ್ಯವಸ್ಥೆ ಮತ್ತಷ್ಟು ಹದಗೆಟ್ಟಿದೆ. ಸರ್ಕಾರಿ ಜಾಗದಲ್ಲಿ ಮದರಸಾ ಮತ್ತು ಮಸೀದಿ ನಿರ್ಮಿಸಲಾಗಿದೆ.…

Read More

ಲಕ್ನೋ: ಈ ಬಾರಿಯ ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ವಿರುದ್ಧ ಸ್ಪರ್ಧಿಸುವುದಾಗಿ ಯತಿ ಕಂಟೋನ್ಮೆಂಟ್ ಪೀಠಾಧೀಶ್ವರ ಜಗದ್ಗುರು ಪರಮಹಂಸ ಆಚಾರ್ಯ (Paramhans Acharya) ಘೋಷಿಸಿದ್ದಾರೆ. ಈ ಸಂಬಂಧ ವೀಡಿಯೋ ಬಿಡುಗಡೆ ಮಾಡಿರುವ ಅವರು, ರಾಯ್ ಬರೇಲಿಯಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ರಾಯ್ ಬರೇಲಿ ಕ್ಷೇತ್ರದಿಂದ ಸೋನಿಯಾ ಗಾಂಧಿ (Sonia Gandhi) ವಿರುದ್ಧ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಈ ಮೂಲಕ ಕಾಂಗ್ರೆಸ್‌ನ (Congress) ಕೊನೆಯ ವಿಕೆಟ್ ಅನ್ನು ಉರುಳಿಸುವುದಾಗಿ ತಿಳಿಸಿದ್ದಾರೆ. https://ainlivenews.com/send-love-messages-to-your-partner-on-chocolate-day/ 1966ರ ನವೆಂಬರ್ 7ರಂದು ಕಾಂಗ್ರೆಸ್ ಅಧಿಕಾರದಲ್ಲಿತ್ತು. ಆಗ ಇಂದಿರಾ ಗಾಂಧಿ (Indira Gandhi) ಪ್ರಧಾನಿಯಾಗಿದ್ದರು. ಈ ಸಮಯದಲ್ಲಿ ನಾವು ಸಂತರು ಮತ್ತು ಋಷಿಮುನಿಗಳು ಕಾಂಗ್ರೆಸ್ ನಿಂದ ತುಂಬಾ ನೊಂದಿದ್ದೇವೆ ಎಂದಿದ್ದಾರೆ. ಧರ್ಮ ಸಾಮ್ರಾಟ್ ಸ್ವಾಮಿ ಕರ್ಪಾತ್ರಿ ಜೀ ಅವರ ನೇತೃತ್ವದಲ್ಲಿ ದೇಶದ ಮೂಲೆ ಮೂಲೆಯಿಂದ ಯುವಕರು, ರೈತರು, ತಾಯಂದಿರು, ಸಹೋದರಿಯರು ಮತ್ತು ಹಿರಿಯರು ಗೋಹತ್ಯೆ ತಡೆಯಲು ದೆಹಲಿ ಸಂಸತ್ ಭವನವನ್ನು ತಲುಪಿದ್ದರು ಆಗ ಅಲ್ಲಿ ಅವರ ಮೇಲೆ ಗುಂಡುಗಳನ್ನು…

Read More

ಕಲಬುರಗಿ: ಡಿ.ಕೆ.ಸು. ವಿರುದ್ದ ಗುಂಡಿಕ್ಕಿ ಕೊಲ್ಲೋ ಕಾನೂನು ತರಬೇಕು ಅನ್ನೋ ಈಶ್ವರಪ್ಪನವರು ರಾಮಾಯಣ ಹನುಮಾನ ಚಾಲಿಸಾ ಓದ್ಕೊಂಡು ಆರಾಮಾಗಿ ಮನೆಯಲ್ಲಿ ಇರಲಿ ಅಂತ ಸಚಿವ ಪ್ರಿಯಾಂಕ್ ಖರ್ಗೆ ಸಲಹೆ ಕೊಟ್ಟಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ ಅಂಥಹ ಕಾನೂನು ತಂದ್ರೆ ಬಿಜೆಪಿಯ ಅರ್ಧ ಖಾಲಿಯಾಗುತ್ತೆ ಅಂದ್ರು. ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಈ ರೀತಿ ಹೇಳಿಕೆ ಕೊಡ್ತಾರೆ. ಒಟ್ಟಾರೆ ಅವರು ಬಿಜೆಪಿ ಪಕ್ಷದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಅವರ ಪಕ್ಷದಲ್ಲೇ ಅವರಿಗೆ ಕಿಮ್ಮತ್ತಿಲ್ಲ ಅಂತ ಹೇಳಿದ್ರು. ಹೀಗಾಗಿ ಅವರಿಗೆ ನಿವೃತ್ತಿ ಕೊಡಿಸಿ ಮನೆಯಲ್ಲಿ ಕೂಡಿಸಿದ್ದಾರೆ..ಅದಕ್ಕಾಗಿ ಬೆಳಿಗ್ಗೆ ರಾಮಯಾಣ ಮಧ್ಯಾನ ಕೀರ್ತನೆ ಸಂಜೆ ಹನಮಾನ ಚಾಲೀಸ್ ಓದಲಿ ಅಂತ ವ್ಯಂಗ್ಯವಾಡಿದ್ರು.

Read More

ತುಮಕೂರು: ಪಂಚ ಗ್ಯಾರಂಟಿಗಳನ್ನ ಜಾರಿಗೊಳಿಸುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್‌ ಪರವಾದ ಅಲೆ ಹೆಚ್ಚಾಗಿದೆ. ಇತ್ತ ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳನ್ನಾದರೂ ಗೆಲ್ಲುವ ನಿಟ್ಟಿನಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ರಾಜ್ಯ ನಾಯಕರಿಗೆ ಟಾರ್ಗೆಟ್‌ ನೀಡಿದ್ದು, ಪ್ರತಿಯೊಂದು ಲೋಕಸಭಾ ಕ್ಷೇತ್ರದ ಜವಾಬ್ದಾರಿಯನ್ನ ಪ್ರತಿಯೊಬ್ಬ ಸಚಿವರಿಗೂ ಕಾಂಗ್ರೆಸ್‌ ಹೈಕಮಾಂಡ್‌ ನೀಡಿದೆ.  ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಕಂಡ ಬಳಿಕ ರಾಜ್ಯ ಕಾಂಗ್ರೆಸ್‌ನಲ್ಲಿ ಲೋಕಸಭಾ ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಹಿರಿಯ ನಾಯಕರಿಗಿಂತ ಹೆಚ್ಚಾಗಿ ಈ ಬಾರೀ ಲೋಕ ಅಖಾಡಕ್ಕೆ ಇಳಿಯಲು ಹಲವು ಯುವ ಮುಖಗಳೂ ಸಜ್ಜಾಗುತ್ತಿವೆ. ಈ ಬಾರೀ ಹೆಚ್ಚು ಸ್ಥಾನಗಳನ್ನ ಗೆಲ್ಲುವ ನಿಟ್ಟಿನಲ್ಲಿ ಹೆಚ್ಚು ಪ್ರಭಾವಿ ಸಚಿವರನ್ನ ಕಣಕ್ಕಿಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ಚಿಂತನೆ ನಡೆಸಿದೆ. ಆದರೆ, ತುಮಕೂರು ಜಿಲ್ಲಾ ಕಾಂಗ್ರೆಸ್ ನಲ್ಲಿ ಟಿಕೆಟ್ ಗಾಗಿ ಜಿದ್ದಾಜಿದ್ದಿ ಏರ್ಪಟ್ಟಿದೆ. ಮುದ್ದಹನುಮೇಗೌಡಗೆ ಟಿಕೆಟ್ ನೀಡಲು ವಿರೋಧ ವ್ಯಕ್ತಪಡಿಸಿ ಮುರುಳೀಧರ್ ಹಾಲಪ್ಪಗೆ ಲೋಕಸಭೆ ಟಿಕೆಟ್ ನೀಡಲು ಕಾರ್ಯಕರ್ತರ ಒತ್ತಾಯವಾಗಿದೆ. ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರಿನಲ್ಲಿ…

Read More

ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಕೆಂಪಣ್ಣ ಆರೋಪ ಮಾಡಿದ ವಿಚಾರ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲೂ 40% ಕಮಿಷನ್ ಕೇಳುವ ಆರೋಪ ಕೆಂಪಣ್ಣ ಬಳಿ ಏನಾದ್ರೂ ದಾಖಲೆ ಇದ್ರೆ ಕೊಡಲಿ ಹಾಗೆ  ಆ ರೀತಿ ಏನಾದರೂ ಇದ್ರೆ ದಾಖಲೆ ಕೊಡಲಿ ಎಂದು ಹೇಳಿದರು. ಈಗಾಗಲೇ ನಾವು ತನಿಖೆಗೆ ಆಯೋಗವನ್ನು ರಚನೆ ಮಾಡಿದ್ದೇವೆ ಕಂಪಣ್ಣ ಹತ್ತಿರ ಕಮಿಷನ್ ಕೇಳಿರುವ ಬಗ್ಗೆ ದಾಖಲೆ ಇದ್ರೆ ಕೊಡಲಿ ದಾಖಲೆಗಳಿದ್ದರೆ ತನಿಖೆ ಮಾಡ್ತಿರುವ ಅಯೋಗಕ್ಕೆ ನೀಡಲಿ ಸಣ್ಣತಪ್ಪು ಆಗಿದ್ರೂ ದಾಖಲೆ ನೀಡಲಿ ಎಂದ ಪ್ರಿಯಾಂಕ್ ಖರ್ಗೆ ಕಮಿಷನ್ ಆರೋಪದ ಬಗ್ಗೆ ಹೇಳಿದರು ಹಾಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯೆ ನೀಡಿ, ನಮ್ಮ ಸರ್ಕಾರದಲ್ಲಿ ಯಾವುದೇ ಭ್ರಷ್ಟಾಚಾರ ಆಗಿಲ್ಲ -ಸಾರಿಗೆ ಸಚಿವ ಬಿಜೆಪಿಯವರಿಗೆ ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಬೊಮ್ಮಾಯಿ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರ -ರಾಮಲಿಂಗಾರೆಡ್ಡಿ ನನ್ನ ಜೀವನದಲ್ಲೇ ಅಂತಹ ಸರ್ಕಾರ ನೋಡಿರಲಿಲ್ಲ ಎಂದ ಸಚಿವ ಮೂರು ವರ್ಷದಲ್ಲಿ 3…

Read More

ಚಿಕ್ಕೋಡಿ: ಹಿಡಕಲ ಗ್ರಾಮದಿಂದ ಖಣದಾಳ ಹಾಗೂ ಅಳಗವಾಡಿ ಗ್ರಾಮಕ್ಕೆ ತಲುಪುವ ರಸ್ತೆ ಕಾಮಗಾರಿಗೆ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಅವರಿಂದ ಗುದ್ದಲಿ ಪೂಜೆ ನೇರವೇರಿಸಲಾಯಿತು. ಸುಮಾರು 2 ಕೋಟಿ ರೂಪಾಯಿ ವೆಚ್ಚ ದಲ್ಲಿ ನಿರ್ಮಾಣವಾಗುತ್ತಿರುವ ರಸ್ತೆಗಳ ಸುಧಾರಣೆಗಾಗಿ ಚಾಲನೆ ದೊರತಿದ್ದು, ರಸ್ತೆಗಳು ಉತ್ತಮ ಗುಣಮಟ್ಟ ಹೊಂದಬೇಕು ಎಂದು ಗುತ್ತಿಗೆದಾರರಿಗೆ ಶಾಸಕ ಸೂಚನೆ ನೀಡಿದರು.

Read More