ಪಾಕ್ ವಿರುದ್ಧ ಗೆದ್ದ ಬಳಿಕ ವಿರಾಟ್ ಕೊಹ್ಲಿ ದೊಡ್ಡ ಘೋಷಣೆ ಮಾಡಿದ್ದಾರೆ. ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ 111 ಎಸೆತಗಳಲ್ಲಿ 100 ರನ್ ಬಾರಿಸಿ ಮ್ಯಾನ್ ಆಫ್ ದಿ ಮ್ಯಾಚ್ ಆದ್ರು. ಪಂದ್ಯದ ನಂತರ ವಿರಾಟ್ ತಮ್ಮ ಮನದ ಮಾತುಗಳನ್ನ ಹಂಚಿಕೊಂಡ್ರು. https://ainlivenews.com/ranjana-is-the-first-wife-to-move-court-against-famous-singer-udit-narayan/ ಒತ್ತಡನೇ ಇರಲಿಲ್ಲ! ಈ ರೀತಿ ಮುಖ್ಯ ಪಂದ್ಯದಲ್ಲಿ ನನ್ನ ಬ್ಯಾಟಿಂಗ್ ನನಗೇ ಖುಷಿ ಕೊಟ್ಟಿದೆ. ರೋಹಿತ್ ಔಟ್ ಆದ್ಮೇಲೆ ಆಟ ನಿಯಂತ್ರಣ ನನ್ನ ಜವಾಬ್ದಾರಿ ಆಗಿತ್ತು. ಸ್ಪಿನ್ನರ್ ಗಳನ್ನ ಸುಮ್ನೆ ಬಿಟ್ಟು ವೇಗಿಗಳ ಮೇಲೆ ದಾಳಿ ಮಾಡೋ ಪ್ಲ್ಯಾನ್ ಮಾಡಿಕೊಂಡಿದ್ದೆ. ಅದ್ರಂತೆ ಆಟ ಆಡಿ ಗೆಲುವಿನತ್ತ ತಂಡವನ್ನು ಕೊಂಡೊಯ್ದಿದ್ದಕ್ಕೆ ತೃಪ್ತಿ ಇದೆ ಎಂದು ವಿರಾಟ್ ಹೇಳಿದ್ದಾರೆ. ಮಾರ್ಚ್ 2 ಕ್ಕೆ ಮುಂದಿನ ಪಂದ್ಯ ಇದೆ. ಅಲ್ಲಿವರೆಗೂ ಸಣ್ಣ ಬ್ರೇಕ್ ತಗೊಳ್ಳೋ ಯೋಚನೆ ನನ್ನದು. “36 ವರ್ಷ ಅಂದ್ರೆ ಸುಮ್ನಾ? 20-25 ಇದ್ದಾಗಿನ ಮಾತೇ ಬೇರೆ! ದೇಹಕ್ಕೂ ಸ್ವಲ್ಪ ವಿಶ್ರಾಂತಿ ಬೇಕಲ್ಲವೇ? ಇಲ್ಲ ಅಂದ್ರೆ ಈ ರೀತಿ ಒತ್ತಡದ ಪಂದ್ಯಗಳಲ್ಲಿ…
Author: AIN Author
ಬೆಂಗಳೂರು:ಕನ್ನಡದ ತೇಜೋವಧೆ ಮಾಡಿದವರ ವಿರುದ್ಧ ಕ್ರಮಕ ಆಗಬೇಕು ಎಂದು ಬಿವೈ ವಿಜಯೇಂದ್ರ ಆಗ್ರಹಿಸಿದರು. https://ainlivenews.com/actor-sivarajkumar-who-had-darshan-of-raya-at-mantralaya/ ಮಲೇಶ್ವರಂನಲ್ಲಿ ಮಾತನಾಡಿದ ಅವರು, ಈ ನೆಲದ ನೀರು,ಗಾಳಿ,ಅನ್ನ ಸೇವಿಸಿಕೊಂಡು ಕನ್ನಡದ ವಿರುದ್ಧ ಮಾತನಾಡುವುದನ್ನ ಯಾರು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಮೊನ್ನೆ ಬೆಳಗಾವಿಯಲ್ಲಿ ಶಾಸಕ ಬಾಳೆಕುಂದ್ರಿ ಕನ್ನಡದ ತೇಜೋವಧೆ ಮಾಡಿರುವ ಘಟನೆಯನ್ನ ಯಾರು ಸಹಿಸಿಕೊಳ್ಳಲು ಆಗಲ್ಲ. ಅನೇಕ ಕನ್ನಡಪರ ಹೋರಾಟಗಾರರ ಹೇಳಿಕೆಯನ್ನ ನೋಡಿದ್ದೇನೆ.ರಾಜ್ಯದ ವಿರುದ್ಧ ಪಿತೂರಿ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಈ ವೇಳೆ ವಿಜಯೇಂದ್ರ ಆಗ್ರಹಿಸಿದ್ದಾರೆ.
ಮಧ್ಯ ಪ್ರದೇಶ/ ಬೆಳಗಾವಿ:- ಮಹಾ ಕುಂಭ ಮೇಳಕ್ಕೆ ತೆರಳುತ್ತಿದ್ದಾಗಲೇ ದುರಂತ ಸಂಭವಿಸಿ ಭೀಕರ ಅಪಘಾತಕ್ಕೆ 7 ಮಂದಿ ಕನ್ನಡಿಗರು ಸಾವನ್ನಪ್ಪಿದ ಘಟನೆ ಜರುಗಿದೆ. https://ainlivenews.com/woman-working-at-bbmp-office-hangs-herself-cause-of-death/ ಮಧ್ಯ ಪ್ರದೇಶದ ಜಬಲಪೂರ ಪೆಹರಾ ಟೋಲ್ ನಾಕಾ ಬಳಿ ಬೆಳಗಿನ ಜಾವ ಕ್ರೂಸರ್ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ದುರಂತ ಸಂಭವಿಸಿದೆ. 7 ಮಂದಿ ಕನ್ನಡಿಗರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು:- ರಾಜಧಾನಿ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಮಹಿಳೆಯೋರ್ವರು ನೇಣಿಗೆ ಶರಣಾಗಿದ್ದಾರೆ. ಬಿಬಿಎಂಪಿ ಕಚೇರಿಯಲ್ಲಿ ಕೆಲಸ ಮಾಡ್ತಿದ್ದ ಮಹಿಳೆ ನಂದಿನಿ ಸೂಸೈಡ್ ಮಾಡಿಕೊಂಡಿದ್ದು, ವ್ಯಕ್ತಿಯ ಕಿರುಕುಳದ ಆರೋಪ ಮಾಡಲಾಗಿದೆ. https://ainlivenews.com/fire-accident-jewelry-shop-gutted/ ಮನೆಯಲ್ಲಿ ಯಾರೂ ಇಲ್ಲದಾಗ ನೇಣು ಬಿಗಿದುಕೊಂಡು ನಂದಿನಿ ಅತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನು ನೋಡಿ ಪೊಲೀಸರು ಬರುವ ಮುನ್ನವೇ ಕುಟುಂಬಸ್ಥರು ಮೃತದೇಹ ಕೆಳಗೆ ಇಳಿಸಿದ್ದಾರೆ. ಇನ್ನೂ ನಂದಿನಿ ಅವರು, 8 ವರ್ಷಗಳ ಹಿಂದೆ ಸೂರ್ಯ ಎಂಬಾತನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ದಂಪತಿಗೆ ಒಂದು ಹೆಣ್ಣು ಮತ್ತು ಒಂದು ಗಂಡು ಮಗು ಇದೆ. ನಂದಿನಿಗೆ ವ್ಯಕ್ತಿಯೊಬ್ಬ ಆಗಾಗ್ಗೆ ಫೋನ್ ಮಾಡಿ ಕಿರಿಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ. ಇದರಿಂದಾಗಿ ಪತಿ-ಪತ್ನಿ ನಡುವೆ ಆಗಾಗ್ಗೆ ಗಲಾಟೆ ನಡೆಯುತ್ತಿತ್ತು. ವ್ಯಕ್ತಿಯ ನಿರಂತರ ಕಿರುಕುಳದಿಂದ ಮನನೊಂದಿದ್ದ ನಂದಿನಿ ಆತ್ಮಹತ್ಯೆ ಮಾಡಿಕೊಂದಿದ್ದಾರೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ಕೊಡಗು:- ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಜ್ಯುವೆಲ್ಲರಿ ಶಾಪ್ ಧಗಧಗನೆ ಹೊತ್ತಿ ಉರಿದ ಘಟನೆ ಜರುಗಿದೆ. https://ainlivenews.com/is-it-a-habit-of-drying-clothes-on-chairs-in-your-home-too-if-so-you-must-watch-this-news/ ಇಲ್ಲಿನ ಚಂದ್ರಿಕಾ ಚಿನ್ನಾಭರಣ ಅಂಗಡಿಗೆ ಬೆಂಕಿ ಬಿದ್ದಿದ್ದು, ನೋಡು ನೋಡುತ್ತಿದ್ದಂತೆ ಮಳಿಗೆಗೆ ಬೆಂಕಿ ಆವರಿಸಿದೆ. ಕೂಡಲೇ ನೀರು ಹಾಕಿ ಬೆಂಕಿ ನಂದಿಸಲು ಸ್ಥಳೀಯರು ಪ್ರಯತ್ನ ಪಟ್ಟಿದ್ದಾರೆ. ಬಳಿಕ ಮಾಹಿತಿ ಆಧರಿಸಿ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ, ಬೆಂಕಿ ನಂದಿಸಿದ್ದಾರೆ.
ಮಳೆಗಾಲ ಬಂತೆಂದರೆ ಬಟ್ಟೆ ಒಣಗಿಸುವುದೇ ದೊಡ್ಡ ತಲೆನೋವು. ಒಗೆದ ಬಟ್ಟೆಯನ್ನು ಒಂದು ಕಡೆ ಹರವಿ, ಬಳಿಕ ಗಾಳಿಯಾಡುವ ಕಡೆ ಒಣಗಲು ಹಾಕಿದರೂ ಮರುದಿನ ನೋಡಿದರೆ ಬಟ್ಟೆ ಒದ್ದೆಯಿಂದ ಕೂಡಿರುತ್ತದೆ. ಸೂರ್ಯನ ಕಿರಣಗಳು ತಾಗದಿದ್ದರಂತೂ ಬಟ್ಟೆಯ ವಾಸನೆ ಕಿರಿಕಿರಿ ಉಂಟು ಮಾಡುತ್ತದೆ. ಮಳೆಗಾಲದಲ್ಲಿ ಮನೆಯೊಳಗೆ ಬಟ್ಟೆ ಒಣಗಿಸುವುದರಿಂದ ಕೂಡ ಕೆಲ ಅಲರ್ಜಿ ಮತ್ತು ರೋಗಗಳು ಉಂಟಾಗುತ್ತದೆ. https://ainlivenews.com/papaya-should-not-be-touched-eat-dangerous-butti/ ಕೆಲವರು ಯಾವುದೇ ಕಾಲದಲ್ಲಾಗಲಿ ಬಟ್ಟೆಯನ್ನು ಮನೆಯೊಳಗೆ ಒಣಹಾಕುತ್ತಾರೆ. ಬಹುಶಃ ಹೊರಗಡೆ ಬಟ್ಟೆ ಒಣಹಾಕಲು ಜಾಗ ಇಲ್ಲದೇ ಇರಬಹುದು. ಆದರೆ ಇನ್ನೂ ಕೆಲವರು ಹೊರಗಡೆ ಜಾಗವಿದ್ದರೂ ಮನೆಯೊಳಗೆ ಬಟ್ಟೆ ಒಣ ಹಾಕುವ ಅಭ್ಯಾಸವನ್ನು ಹೊಂದಿದ್ದಾರೆ. ಆದರೆ ಈ ಅಭ್ಯಾಸ ಎಷ್ಟು ಅಪಾಯಕಾರಿ ಎನ್ನುವುದು ನಿಮಗೆ ಗೊತ್ತಾ? ನಮ್ಮಲ್ಲಿ ಬಹುತೇಕರು ಒದ್ದೆ ಟವೆಲ್‌ನ್ನು ಕುರ್ಚಿಯ ಮೇಲೋ, ಬಾಗಿಲಿನ ಮೇಲೋ ಒಣಗಲು ಹಾಕುತ್ತೇವೆ. ಇದು ಮನೆ ತುಂಬಾ ವಿಚಿತ್ರವಾದ ವಾಸನೆಯನ್ನು ಉಂಟುಮಾಡುತ್ತದೆ ಮತ್ತು ಮನೆಯೊಳಗೆ ಒಣಗಿಸುವುದು ಆರೋಗ್ಯಕ್ಕೆ ಹಾನಿಕಾರಕ ಎಂದು ನೀವು ಹಲವು ಬಾರಿ ಕೇಳಿರಬಹುದು. ಮನೆಯಲ್ಲಿ ಬಟ್ಟೆಗಳನ್ನು…
ಪಪ್ಪಾಯಿಯು ಭಾರತದಲ್ಲಿ ವ್ಯಾಪಕವಾಗಿ ಸೇವಿಸಲ್ಪಡುವ ಒಂದು ಹಣ್ಣಾಗಿದೆ ಮತ್ತು ಹಲವರ ನೆಚ್ಚಿನ ಹಣ್ಣಾಗಿದೆ. ಆರೋಗ್ಯ ತಜ್ಞರು ಇದನ್ನು ನಿಯಮಿತವಾಗಿ ತಿನ್ನಲು ಶಿಫಾರಸು ಮಾಡುತ್ತಾರೆ, ಆದರೆ ಇದನ್ನು ಅತಿಯಾಗಿ ಸೇವಿಸುವುದರಿಂದ ದೇಹಕ್ಕೆ ಒಳ್ಳೆಯದಕ್ಕಿಂತ ಹೆಚ್ಚು ಹಾನಿಯಾಗುತ್ತದೆ ಎಂದೂ ಹೇಳಲಾಗುತ್ತದೆ. ಅಲ್ಲದೆ, ಕೆಲವು ರೀತಿಯ ಕಾಯಿಲೆಗಳು ಅಥವಾ ಅಲರ್ಜಿ ಇರುವವರು ಈ ಹಣ್ಣಿನಿಂದ ದೂರವಿರಬೇಕು. https://ainlivenews.com/pakistans-future-depends-on-the-bangladesh-vs-new-zealand-match/ ಎಲ್ಲಾ ಸೀಸನ್ನಲ್ಲಿಯೂ ಲಭ್ಯವಿರುವ ಹಣ್ಣು ಎಂದರೆ ಅದು ಪಪ್ಪಾಯಿ. ಇದು ನಾರಿನಾಂಶ, ಅಗತ್ಯ ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. ಈ ಹಣ್ಣನ್ನು ನಿಯಮಿತವಾಗಿ ತಿನ್ನುವವರಿಗೆ ಹೃದ್ರೋಗ, ಮಧುಮೇಹ ಮತ್ತು ಕ್ಯಾನ್ಸರ್ ರೋಗ ಬರುವ ಅಪಾಯ ಕಡಿಮೆ ಎಂದು ವೈದ್ಯರು ಹೇಳುತ್ತಾರೆ. ತೂಕ ನಿರ್ವಹಣೆಗೆ ಪಪ್ಪಾಯಿ ಹೆಚ್ಚು ಉಪಯುಕ್ತವಾಗಿದೆ. ಪಪ್ಪಾಯಿಯಲ್ಲಿ ಅಸಂಖ್ಯಾತ ಆರೋಗ್ಯ ಪ್ರಯೋಜನಗಳಿದ್ದರೂ, ಇದು ಕೆಲವರು ಸೇವಿಸಲು ಸೂಕ್ತವಾದ ಹಣ್ಣಲ್ಲ ಎಂದು ನಿಮಗೆ ತಿಳಿದಿದ್ಯಾ? ಹೌದು, ಪಪ್ಪಾಯಿ ತಿನ್ನುವುದರಿಂದ ಕೆಲವರ ಆರೋಗ್ಯದ ಮೇಲೆ ಅಡ್ಡಪರಿಣಾಮ ಉಂಟಾಗಬಹುದು. ಹಾಗಾದ್ರೆ ಈ ಹಣ್ಣನ್ನು ಯಾರು ತಿನ್ನಬಾರದು ಎಂಬುವುದರ ಬಗ್ಗೆ ನಾವಿಂದು…
ಇಂದು ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯ 6ನೇ ಪಂದ್ಯವು ಟೀಮ್ ಇಂಡಿಯಾದ ಸೆಮಿಫೈನಲ್ ಹಾಗೂ ಪಾಕಿಸ್ತಾನ್ ತಂಡದ ಚಾಂಪಿಯನ್ಸ್ ಟ್ರೋಫಿಯ ಭವಿಷ್ಯವನ್ನು ನಿರ್ಧರಿಸಲಿದೆ. ಅಂದರೆ ಬಾಂಗ್ಲಾದೇಶ್ ವಿರುದ್ಧದ ಈ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡ ಗೆದ್ದರೆ, ಭಾರತ ತಂಡ ಸೆಮಿಫೈನಲ್ಗೇರುವುದು ಖಚಿತವಾಗಲಿದೆ. https://ainlivenews.com/1-30-crores-for-construction-of-house-for-workers-actor-vijay-sethupathi-who-donated/ ಏಕೆಂದರೆ ಭಾರತ ತಂಡವು ಈಗಾಗಲೇ 4 ಅಂಕಗಳನ್ನು ಹೊಂದಿದ್ದು, ಇದೀಗ ನ್ಯೂಝಿಲೆಂಡ್ ಕೂಡ 4 ಪಾಯಿಂಟ್ಸ್ ಪಡೆದರೆ ಉಭಯ ತಂಡಗಳು ಗ್ರೂಪ್-ಎ ನಿಂದ ಸೆಮಿಫೈನಲ್ಗೆ ಅರ್ಹತೆ ಪಡೆಯಲಿರುವುದು ಖಚಿತವಾಗಲಿದೆ. ಅತ್ತ ಪಾಕಿಸ್ತಾನ್ ಹಾಗೂ ಬಾಂಗ್ಲಾದೇಶ್ ತಂಡಗಳು ಅಧಿಕೃತವಾಗಿ ಟೂರ್ನಿಯಿಂದ ಹೊರಬೀಳಲಿದೆ. ಇದಾಗ್ಯೂ ಮಾರ್ಚ್ 2 ರಂದು ಭಾರತ ಮತ್ತು ನ್ಯೂಝಿಲೆಂಡ್ ನಡುವೆ ಔಪಚಾರಿಕ ಪಂದ್ಯ ನಡೆಯಲಿದೆ. ಈ ಪಂದ್ಯದ ಫಲಿತಾಂಶ ಏನೇ ಹಾಗಿದ್ದರೂ ಟೀಮ್ ಇಂಡಿಯಾ ಮಾರ್ಚ್ 4 ರಂದು ಸೆಮಿಫೈನಲ್ ಆಡುವುದು ಬಹುತೇಕ ಖಚಿತ ಎನ್ನಲಾಗಿದೆ.
ಬೆಂಗಳೂರು:- ಸಿಲಿಕಾನ್ ಸಿಟಿಯ ಕೆಲ ಜನರು ಕುಡಿವ ನೀರು ವ್ಯರ್ಥಮಾಡಿದ ಹಿನ್ನಲೆ ಜಲಮಂಡಳಿ ದಂಡಾಸ್ತ್ರ ಪ್ರಯೋಗ ಮಾಡಿದೆ. ಆ ಮೂಲಕ ಬೇಸಿಗೆ ಆರಂಭದಲ್ಲೇ ಬೆಂಗಳೂರು ಜನತೆಗೆ ಜಲಮಂಡಳಿ ಶಾಕ್ ನೀಡಿದೆ. https://ainlivenews.com/rain-news-rain-forecast-in-these-districts-of-karnataka/ ಕುಡಿಯುವ ನೀರು ವ್ಯರ್ಥ ಮಾಡಿದವರಿಗೆ ಜಲಮಂಡಳಿ ದಂಡಾಸ್ತ್ರ ಪ್ರಯೋಗ ಮಾಡಿದೆ. 112 ಕೇಸ್ ದಾಖಲಾಗಿದ್ದು, 5.60 ಲಕ್ಷ ರೂ ದಂಡ ವಸೂಲಿ ಮಾಡಲಾಗಿದೆ. ಕುಡಿವ ನೀರು ವ್ಯರ್ಥಮಾಡದಂತೆ BWSSB ಇತ್ತೀಚೆಗೆ ಸುತ್ತೋಲೆ ಹೊರಡಿಸಿತ್ತು. ಆ ಮೂಲಕ ಇದೀಗ ಆದೇಶ ಉಲ್ಲಂಘಿಸಿದವರಿಂದ ತಲಾ 5 ಸಾವಿರ ರೂ. ದಂಡ ವಸೂಲಿ ಮಾಡಲಾಗಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಕಾಯ್ದೆ-1964ರ ಕಲಂ 33 ಮತ್ತು 34 ರ ಅನುಸಾರ ಬೆಂಗಳೂರು ನಗರದಲ್ಲಿ ಕುಡಿಯುವ ನೀರನ್ನು ವಾಹನಗಳ ಸ್ವಚ್ಚತೆಗೆ, ಕೈದೋಟಕ್ಕೆ, ಕಟ್ಟಡ ನಿರ್ಮಾಣಕ್ಕೆ, ಮನೋರಂಜಕವಾಗಿ ಕಾರಂಜಿಯಂತಹ ಆಕರ್ಷಕ ವ್ಯವಸ್ಥೆಗೆ, ಸಿನಿಮಾ ಮಂದಿರ ಮತ್ತು ಮಾಲುಗಳಲ್ಲಿನ ಕುಡಿಯುವ ನೀರಿನ ಹೊರತು ಇನ್ನಿತರೆ ಬಳಕೆಗೆ, ರಸ್ತೆ ನಿರ್ಮಾಣ ಮತ್ತು ಸ್ವಚ್ಛತೆಗೆ ಕುಡಿಯುವ ನೀರಿನ ಬಳಕೆ…
ಬೆಂಗಳೂರು:- ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. https://ainlivenews.com/rohit-sharma-breaks-world-record-in-champions-trophy/ ಉತ್ತರ ಕನ್ನಡದಲ್ಲಿ ಒಣಹವೆ ಮುಂದುವರೆಯಲಿದೆ. ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಒಣಹವೆ ಮುಂದುವರೆಯಲಿದೆ. ಬೆಂಗಳೂರಿನಲ್ಲಿ ಶುಭ್ರ ಆಕಾಶವಿದೆ. ಎಚ್ಎಎಲ್ನಲ್ಲಿ 33.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 18.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ 33.2 ಡಿಗ್ರಿನ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.7 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್ನಲ್ಲಿ 32.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.3 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಜಿಕೆವಿಕೆಯಲ್ಲಿ 32.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 18.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.