Author: AIN Author

ಬಳ್ಳಾರಿ:- ಕೇಂದ್ರ ಸರ್ಕಾರದ ವಿರುದ್ಧ ರೊಚ್ಚಿಗೆದ್ದ ಕಾಂಗ್ರೆಸ್ ಕಾರ್ಯಕರ್ತರು ಬಳ್ಳಾರಿ ಬಿಜೆಪಿ ಸಂಸದರ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ. ಎನ್ಎಸ್ಯುಐ ಕಾಂಗ್ರೆಸ್ ಕಾರ್ಯಕರ್ತರಿಂದ ಮುತ್ತಿಗೆ ಯತ್ನ ನಡೆದಿದ್ದು, ಕೂಡಲೇ ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಪೊಲೀಸರ ಜೊತೆಗೆ ವಾಗ್ವಾದ ನಡೆದಿದೆ. ಕಚೇರಿ ಒಳ ನುಗ್ಗಲು ಕೈ ಕಾರ್ಯಕರ್ತರು ಯತ್ನಿಸುತ್ತಿದ್ದು, ಹೊರ ಹಾಕಲು ಪೊಲೀಸರು ಹರಸಾಹಸಪಟ್ಟಿದ್ದಾರೆ. ಬರದ ಹಣ ರಾಜ್ಯಕ್ಕೆ ನೀಡ್ತಿಲ್ಲ, ತೆರಿಗೆ ಹಣ ನೀಡಲು ವಿಳಂಬ ಮಾಡ್ತಿರೋ ಕೇಂದ್ರ ಸರ್ಕಾರದ ವಿರುದ್ಧ ಈ ವೇಳೆ ಧಿಕ್ಕಾರ ಕೂಗಿದ್ದಾರೆ. ರಾಜ್ಯದ 26 ನಾಲಾಯಕ ಸಂಸದರ ರಾಜ್ಯಕ್ಕೇನು‌ ಉಪಯೋಗವಿಲ್ಲ ಎಂದು ಘೋಷಣೆ ಕೂಗಿದ್ದಾರೆ. ಬಳ್ಳಾರಿ ಸಂಸದ ದೇವೇಂದ್ರಪ್ಪ ನಾಪತ್ತೆಯಾಗಿದ್ದಾರೆ, ಬಳ್ಳಾರಿಯಲ್ಲಿ ಅವರನ್ನು ನೋಡಿಯೇ ಇಲ್ಲ, ಬಳ್ಳಾರಿ ಸಂಸದ ನಾಪತ್ತೆಯಾಗಿರೋ ಪ್ಲೇಕಾರ್ಡ್ ಹಿಡಿದು ಕಾಂಗ್ರೆಸ್ ನಾಯಕರು ಆಕ್ರೋಶ ಹೊರ ಹಾಕಿದ್ದಾರೆ. ಮೂರು ವರ್ಷದಿಂದ ಬಳ್ಳಾರಿಗೆ ಸಂಸದ ದೇವೇಂದ್ರಪ್ಪ ಬಂದಿಲ್ಲ,. ದೇವೇಂದ್ರಪ್ಪ ಕಚೇರಿಯೇ ಧೂಳು ಹಿಡಿದು ಹೋಗಿದೆ, ಇಂತಹವರಿಂದ ರಾಜ್ಯಕ್ಕೆ…

Read More

ನವದೆಹಲಿ: ಕೇಂದ್ರ ಸರ್ಕಾರ ಈ ಬಾರಿ ಮಾಜಿ ಪ್ರಧಾನಿ ಪಿ ವಿ ನರಸಿಂಹರಾವ್, ಚೌಧರಿ ಚರಣ್ ಸಿಂಗ್  ಮತ್ತು ಹಸಿರು ಕ್ರಾಂತಿಯ ಹರಿಕಾರ ಸ್ವಾಮಿನಾಥನ್‌  ಅವರಿಗೆ ಮರಣೋತ್ತರ ಭಾರತರತ್ನ ಘೋಷಿಸಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಎಕ್ಸ್ ಪೊಸ್ಟ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಮಾಜಿ ಪ್ರಧಾನಿ ಪಿ ವಿ ನರಸಿಂಹರಾವ್ ಅವರಿಗೆ ಭಾರತ ರತ್ನ ನೀಡಿ ಗೌರವಿಸಲಾಗುವುದು ಎಂದು ಹಂಚಿಕೊಳ್ಳಲು ಸಂತೋಷವಾಗಿದೆ, ಒಬ್ಬ ಪ್ರಖ್ಯಾತ ವಿದ್ವಾಂಸ ಮತ್ತು ರಾಜನೀತಿಜ್ಞರಾಗಿ, ನರಸಿಂಹ ರಾವ್ ಗರು ಭಾರತಕ್ಕೆ ವಿವಿಧ ಹುದ್ದೆಗಳಲ್ಲಿ ವ್ಯಾಪಕವಾಗಿ ಸೇವೆ ಸಲ್ಲಿಸಿದರು. https://twitter.com/narendramodi/status/1755851641176170520?ref_src=twsrc%5Etfw%7Ctwcamp%5Etweetembed%7Ctwterm%5E1755851641176170520%7Ctwgr%5Ef6d41660a5f43b5a987838538b646b27b8ace8ca%7Ctwcon%5Es1_&ref_url=https%3A%2F%2Fpublictv.in%2Fbharat-ratna-for-former-pms-charan-singh-pv-narasimha-rao-and-renowned-agricultural-scientist-ms-swaminathan%2F ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿ, ಹಲವು ವರ್ಷಗಳ ಕಾಲ ಸಂಸತ್ ಮತ್ತು ವಿಧಾನಸಭೆ ಸದಸ್ಯರಾಗಿ ಅವರು ಮಾಡಿದ ಕೆಲಸಗಳನ್ನು ಅವರು ಸಮಾನವಾಗಿ ನೆನಪಿಸಿಕೊಳ್ಳುತ್ತಾರೆ. ಅವರ ದೂರದೃಷ್ಟಿಯ ನಾಯಕತ್ವವು ಭಾರತವನ್ನು ಆರ್ಥಿಕವಾಗಿ ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿತು, ದೇಶದ ಸಮೃದ್ಧಿ ಮತ್ತು ಬೆಳವಣಿಗೆಗೆ ಭದ್ರ ಬುನಾದಿ ಹಾಕಿತು. ಪ್ರಧಾನ ಮಂತ್ರಿಯಾಗಿ ನರಸಿಂಹ ರಾವ್ ಅವರ ಅಧಿಕಾರಾವಧಿಯು ಭಾರತವನ್ನು ಜಾಗತಿಕ…

Read More

ಚಿತ್ರದುರ್ಗ:- ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಕೆಂಪಣ್ಣ 40% ಕಮಿಷನ್ ಆರೋಪ ವಿಚಾರಕ್ಕೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ನಾಗಮೋಹನ್ ದಾಸ್ ಕಮಿಷನ್ ಮಾಡಿದ್ದೇವೆ, ದಾಖಲೆ ನೀಡಲಿ. 40% ಭ್ರಷ್ಟಾಚಾರ ಇದ್ದರೆ ದಾಖಲೆ ನೀಡಲಿ ಎಂದರು. ಅಲ್ಲದೆ ಅಧಿಕಾರಿಗಳು ಕೇಳುತ್ತಾರೆ ಎಂದಿದ್ದಾರೆ. ಅಂಥವರ ವಿರುದ್ದ ಕಂಪ್ಲೀಟ್ ಡೀಟೇಲ್ಸ್‌ ನೀಡಲಿ ಎಂದು ಕೆಂಪಣ್ಣ ಹೇಳಿಕೆಗೆ ತಿರುಗೇಟು ನೀಡಿದರು. ಅನುದಾನದ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ಗೆ ಹೋಗುವ ಆಲೋಚನೆ ಇಲ್ಲ. ನಮಗೆ ಅನ್ಯಾಯ ಆಗಿರುವುದು ನಿಜ, ನಾವು 100 ರೂಪಾಯಿ ತೆರಿಗೆ ಕೊಟ್ಟರೆ 12 ರೂಪಾಯಿ ಮಾತ್ರ ಬರುತ್ತಿದೆ. ಇನ್ನುಳಿದ 88 ರೂಪಾಯಿ ಕೇಂದ್ರಕ್ಕೆ ಹೋಗುತ್ತದೆ. ಗುಜರಾತ್ ಸಿಎಂ ಆದಾಗ ತೆರಿಗೆ ನಮ್ಮ ರಾಜ್ಯದ್ದು ನಾವೇ ವಸೂಲಿ ಮಾಡುತ್ತೇವೆ ಎಂದರು. ಇದನ್ನು ಹೇಳಿದ್ದು ಮಿಸ್ಟರ್ ಮೋದಿ. ಈಗ ದೇಶ ವಿಭಜನೆ ಎಂದು ಹೇಳುತ್ತಿದ್ದಾರೆ, ಆಗ ಏನೂ ಹೇಳುತ್ತಿದ್ದರು ಎಂದು ಪ್ರಶ್ನಿಸುವ ಮೂಲಕ ವಾಗ್ದಾಳಿ ನಡೆಸಿದರು. ಇನ್ನೂ ನಮ್ಮ ಪಾಲು ನಾವು ಕೇಳಿದರೆ, ದೇಶ…

Read More

ವಿಜಯಪುರ:- ಪ್ರಿನ್ಸಿಪಾಲ್‌ಗಾಗಿ ವಿದ್ಯಾರ್ಥಿಗಳ ಪ್ರತಿಭಟನೆ ನಡೆಸಿದ ಘಟನೆ ವಿಜಯಪುರ ಜಿಲ್ಲೆಯ ಮನಗೂಳಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಎದುರು ಜರುಗಿದೆ. ಪ್ರಿನ್ಸಿಪಾಲ್ ಸಚಿನ ಪಾಟೀಲ ಬೇಕು ಎಂದು ಘೋಷಣೆ ಕೂಗಿದ ವಿದ್ಯಾರ್ಥಿಗಳು, ತಮ್ಮ ಪ್ರೀತಿಯ ಪ್ರಿನ್ಸಿಪಾಲ್ ವರ್ಗಾವಣೆ ಮಾಡಿದನ್ನು ಖಂಡಿಸಿ ಆಕ್ರೋಶ ಹೊರ ಹಾಕಿದ್ದಾರೆ. ಹಳೆ ಪ್ರಿನ್ಸಿಪಾಲ್ ಸಚಿನ ಪಾಟೀಲ ಬೇಕೆ ಬೇಕು ಎಂದು ಆಗ್ರಹಿಸಿದ್ದಾರೆ. ಬಡ ವಿದ್ಯಾರ್ಥಿಗಳು, ಕಾಲೇಜಿನ ಅಭಿವೃದ್ಧಿಗಾಗಿ ಕೆಲಸ ಮಾಡಿದ್ದಾರೆ. ಅದಕ್ಕಾಗಿ ಸಚಿನ‌ ಪಾಟೀಲ ಅವರನ್ನೇ ಮುಂದು ವರೆಸುವಂತೆ ವಿದ್ಯಾರ್ಥಿಗಳು ಒತ್ತಾಯ ಮಾಡಿದ್ದಾರೆ

Read More

ಕೋಲಾರ:- ಕೋಲಾರ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ ಸ್ಪೋಟಕ ಹೇಳಿಕೆ ನೀಡಿದ್ದು, ಜೆಡಿಎಸ್​​ ಪಕ್ಷದ ಇಬ್ಬರು ಶಾಸಕರು ಲೋಕಸಭಾ ಚುನಾವಣೆ ಮುನ್ನವೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕೈ ಹಿಡಿಯಲಿದ್ದಾರೆ ಎಂದಿದ್ದಾರೆ. ಇದರೊಂದಿಗೆ ಲೋಕಸಭಾ ಚುನಾವಣೆಯ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್​ ಹಾಗೂ ಬಿಜೆಪಿಗೆ ಮಾಸ್ಟರ್​ ಸ್ಟ್ರೋಕ್ ಕೊಡಲು ಸಿದ್ಧತೆ ನಡೆದಿದೆ ಎಂಬ ಮಾಹಿತಿ ರಿವೀಲ್ ಆಗಿದೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಕೊತ್ತೂರು ಮಂಜುನಾಥ್, ಇಬ್ಬರು ಜೆಡಿಎಸ್ ಶಾಸಕರನ್ನ ಕೋಲಾರದ ಹಿರಿಯ ರಾಜಕಾರಣಿಯೊಬ್ಬರು ಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷರ ಬಳಿ ಕರೆದುಕೊಂಡು ಹೋಗಿದ್ದಾರೆ. ಮುಳಬಾಗಲು ಜೆಡಿಎಸ್ ಶಾಸಕ ಸಮೃದ್ದಿ ಮಂಜುನಾಥ್ ಮತ್ತು ಶ್ರೀನಿವಾಸಪುರ ಜೆಡಿಎಸ್ ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ಅವರು ಸಿಎಂ ಬಳಿ ಹೋಗಿದ್ದಾರೆ. ಇಬ್ಬರ ಕಾಂಗ್ರೆಸ್ ಸೇರ್ಪಡೆಗೆ ಸಿಎಂ ಹಾಗು ಡಿಸಿಎಂ ಅವರು ಮಾಜಿ ಸ್ಪೀಕರ್‌ ರಮೇಶ್ ಕುಮಾರ್ ಅಭಿಪ್ರಾಯ ಕೇಳಿದ್ದಾರೆ. ಇಬ್ಬರು ಜೆಡಿಎಸ್ ಶಾಸಕರು ಕಾಂಗ್ರೆಸ್ ಸೇರಲು ಸಿದ್ಧರಿದ್ದಾರೆ. ಲೋಕಸಭಾ ಚುನಾವಣೆಗೆ ಮುನ್ನವೇ ಸೇರಿಸಿಕೊಳ್ಳುವಂತೆ ಹೇಳಿದ್ದಾರಂತೆ. ಲೋಕಸಭಾ…

Read More

ಈರುಳ್ಳಿಯನ್ನು ಹಸಿಯಾಗಿ ಸೇವಿಸುವುದರಿಂದ ಆರೋಗ್ಯದ ಮೇಲೆ ಯಾವ ರೀತಿಯ ಪ್ರಯೋಜನಗಳಿವೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ. ಪ್ರಪಂಚದಾದ್ಯಂತದ ಅಡುಗೆ ಮನೆಗಳಲ್ಲಿ ಬಳಸುವ ವಸ್ತುಗಳಲ್ಲಿ ಈರುಳ್ಳಿ (Onion) ಬಹಳ ಮುಖ್ಯವಾದುದಾಗಿದೆ. ಈರುಳ್ಳಿ ರುಚಿಯ ಜೊತೆಗೆ ಅನೇಕ ಆರೋಗ್ಯ ಪ್ರಯೋಜನಗಳನ್ನು ಕೂಡ ಹೊಂದಿದೆ. ಈರುಳ್ಳಿ ಅನೇಕ ಪೌಷ್ಟಿಕಾಂಶವನ್ನು ಒದಗಿಸುತ್ತದೆ. ಈರುಳ್ಳಿಯನ್ನು ಹಸಿಯಾಗಿ ತಿಂದರೂ, ಬೇಯಿಸಿದರೂ ಅದರಿಂದ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಿವೆ. ನಮ್ಮ ಆಹಾರದಲ್ಲಿ ನಿಮ್ಮ ಆಹಾರದಲ್ಲಿ ಹಸಿ ಈರುಳ್ಳಿಯನ್ನು (Raw Onion Benefits) ಸೇರಿಸಿಕೊಳ್ಳುವುದರಿಂದ ಆಗುವ ಉಪಯೋಗಗಳ ಬಗ್ಗೆ ಮಾಹಿತಿ ಇಲ್ಲಿದೆ. ರಕ್ತದ ಸಕ್ಕರೆಯ ಮಟ್ಟ ನಿಯಂತ್ರಿಸುತ್ತದೆ: ಈರುಳ್ಳಿಯು ಮಧುಮೇಹಿಗಳಿಗೆ ಒಳ್ಳೆಯದು. ಏಕೆಂದರೆ ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವ ಮತ್ತು ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುವ ರಾಸಾಯನಿಕವನ್ನು ಹೊಂದಿರುತ್ತದೆ. ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತದೆ: ಈರುಳ್ಳಿಯ ಉತ್ಕರ್ಷಣ ನಿರೋಧಕಗಳು ವಯಸ್ಸಾದ ನೋಟವನ್ನು ಕಡಿಮೆ ಮಾಡುತ್ತದೆ. ಇದು ಸ್ವತಂತ್ರ ರಾಡಿಕಲ್​ಗಳಿಂದ ಉಂಟಾಗುವ ಹಾನಿಯಿಂದ ಚರ್ಮವನ್ನು ರಕ್ಷಿಸುವ ಮೂಲಕ ಆರೋಗ್ಯಕರ ಮೈಬಣ್ಣವನ್ನು ಹೆಚ್ಚಿಸುತ್ತದೆ. ತೂಕ ಇಳಿಸಲು ಸಹಕಾರಿ: ಈರುಳ್ಳಿ ಕಡಿಮೆ…

Read More

ಚಳಿಗಾಲದಲ್ಲಿ ನೀವು ಸಿಹಿತಿಂಡಿಗಳನ್ನು ಸೇವಿಸಿದರೂ ಅಥವಾ ಬಿಸಿನೀರು ಮತ್ತು ತಣ್ಣೀರನ್ನು ಕುಡಿದರೂ ಹಲ್ಲು ನೋವು ಬರುತ್ತದೆ. ಒಸಡುಗಳು ಸಹ ತುಂಬಾ ನೋವಿನಿಂದ ಕೂಡಿರುತ್ತದೆ. ಇದಕ್ಕೆ ಮುಖ್ಯ ಕಾರಣವೆಂದರೆ ಚಳಿಗಾಲದಲ್ಲಿ ಶೀತ ವಾತಾವರಣದಲ್ಲಿ ಹಲ್ಲುಗಳು ಮತ್ತು ಒಸಡುಗಳು ಸೂಕ್ಷ್ಮವಾಗುತ್ತವೆ. ಈ ಹಲ್ಲಿನ ಸಮಸ್ಯೆಗಳನ್ನು ಅಡುಗೆಮನೆ ಸಲಹೆಗಳಿಂದ ಸಾಧ್ಯವಾದಷ್ಟು ನಿವಾರಿಸಬಹುದು. * ಯಾವುದೇ ಸಿಹಿಯನ್ನು ಸೇವಿಸಿದ ನಂತರ ಹಲ್ಲುನೋವು ಉಂಟಾಗುತ್ತದೆ. ಈ ಕಾರಣದಿಂದಾಗಿ, ತಿನ್ನುವಾಗ ಆಹಾರವನ್ನು ಜಗಿಯುವುದು ತುಂಬಾ ಕಷ್ಟ.ಇಂತಹ ಸಮಸ್ಯೆಗಳಿಗೆ ಮುಖ್ಯ ಕಾರಣ ನಾವು ಬಳಸುವ ಟೂತ್ ಪೇಸ್ಟ್ ಎಂದು ದಂತವೈದ್ಯರು ಹೇಳುತ್ತಾರೆ. ಅನೇಕ ಜನರು ತಮ್ಮ ಹಲ್ಲುಗಳನ್ನು ಬಿಳಿಯಾಗಿಸಲು ಟೂತ್‌ ಪೇಸ್ಟ್‌ ನೊಂದಿಗೆ 5 ರಿಂದ 10 ನಿಮಿಷಗಳ ಕಾಲ ಹಲ್ಲುಜ್ಜುತ್ತಾರೆ. ಕೆಲವೊಮ್ಮೆ ಒಸಡುಗಳ ಊತದಂತಹ ಅಸಹನೀಯ ನೋವು ಸಹ ಸಂಭವಿಸಬಹುದು. ಅಂತಹ ಸಮಯದಲ್ಲಿ, ಕೆಲವು ಸಂದರ್ಭಗಳಲ್ಲಿ, ಅವುಗಳನ್ನು ಮನೆಮದ್ದುಗಳಿಂದ ಪರಿಶೀಲಿಸಬಹುದು. ಸ್ವಲ್ಪ ಬೆಚ್ಚಗಿನ ನೀರಿನಲ್ಲಿ ಉಪ್ಪನ್ನು ಸೇರಿಸಿ ಉಗುಳುವುದರಿಂದ ತ್ವರಿತವಾಗಿ ಹಲ್ಲು ನೋವಿನಿಂದ ವಿಶ್ರಾಂತಿ ಪಡೆಯಬಹುದು. * ದಿನಾ ಒಂದು…

Read More

ಬೆಂಗಳೂರು:- ಅತಿಥಿ ಶಿಕ್ಷಕರಿಗೆ ಕಳೆದ 6 ತಿಂಗಳಿನಿಂದ ವೇತನ ಸಿಗದೇ ಸಂಕಷ್ಟಕ್ಕೊಳಗಾಗಿದ್ದಾರೆ. ಶಿಕ್ಷಣ ಇಲಾಖೆಯು 2023-24ನೇ ಸಾಲಿನಲ್ಲಿ 2 ಹಂತದಲ್ಲಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡಿದೆ.ಮೊದಲ ಹಂತದಲ್ಲಿ ಜೂನ್‌ನಲ್ಲಿ 33 ಸಾವಿರ ಶಿಕ್ಷಕರು ಮತ್ತು 2ನೇ ಹಂತದಲ್ಲಿ ಆಗಸ್ಟ್‌ನಲ್ಲಿ 10 ಸಾವಿರ ಸೇರಿ ಒಟ್ಟು 43 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಮೊದಲ ಹಂತದಲ್ಲಿ ನೇಮಕವಾಗಿರುವ ಶಿಕ್ಷಕರಿಗೆ ಸರಿಯಾದ ಸಮಯಕ್ಕೆ ವೇತನವನ್ನು ಪಾವತಿ ಮಾಡಲಾಗುತ್ತಿದೆ. ಆದರೆ, 2ನೇ ಹಂತದಲ್ಲಿ ನೇಮಕವಾಗಿರುವ ಶಿಕ್ಷಕರು ನೇಮಕವಾದ ಅಂದಿನಿಂದ ಈ ವರೆಗೂ ವೇತನವನ್ನೇ ನೋಡಿಲ್ಲ. 6 ತಿಂಗಳಿನಿಂದ ವೇತನ ನೀಡದಿರುವ ಕಾರಣ ಸಾಕಷ್ಟು ಸಮಸ್ಯೆಯಾಗಿ ಪರಿಣಮಿಸಿದೆ. ಪ್ರಾಥಮಿಕ ಶಾಲಾ ಶಿಕ್ಷಕರಿಗೆ 10 ಸಾವಿರ ರೂ. ಮತ್ತು ಪ್ರೌಢಶಾಲಾ ಶಿಕ್ಷಕರಿಗೆ 10,500 ರೂ.ಗಳನ್ನು ಸರ್ಕಾರವು ನೀಡುತ್ತಿದೆ. ಅತಿಥಿ ಶಿಕ್ಷಕರ ಗೌರವ ಧನ ಕೊಡುತ್ತಿರುವುದೇ ಕಡಿಮೆ. ಅದನ್ನೂ ನೀಡದಿದ್ದರೆ ಏನು ಮಾಡುವುದು ಎಂಬುದನ್ನು ಸರ್ಕಾರವೆ ತಿಳಿಸಬೇಕು ಎನ್ನತ್ತಾರೆ ಅತಿಥಿ ಶಿಕ್ಷಕರು ಒತ್ತಾಯಿಸಿದ್ದಾರೆ. ಬೇಡಿಕೆ ಈಡೇರಿಸಿಲ್ಲ: ಕಳೆದ 6 ತಿಂಗಳ ಹಿಂದೆ ಬೆಂಗಳೂರಿನಲ್ಲಿ…

Read More

ಚಿತ್ರದುರ್ಗ : ರಾಜ್ಯ ಕಾಂಗ್ರೆಸ್ ಸರ್ಕಾರದ ಮೇಲೆ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಕೆಂಪಣ್ಣ 40 % ಕಮಿಷನ್ ಸರ್ಕಾರವೆಂದು ಆರೋಪ ಮಾಡಿದ್ದಕ್ಕೆ, ನಾಗಮೋಹನ್ ದಾಸ್ ಕಮಿಷನ್ ಮಾಡಿದ್ದೇವೆ, ದಾಖಲೆ ನೀಡಲಿ ಎಂದು ಕೆಂಪಣ್ಣ ಆರೋಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ಭಗೀರಥ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 40% ಭ್ರಷ್ಟಾಚಾರ ಇದ್ದರೆ ದಾಖಲೆ ನೀಡಲಿ, ಅಲ್ಲದೆ ಅಧಿಕಾರಿಗಳು ಕೇಳುತ್ತಾರೆ ಎಂದಿದ್ದಾರೆ, ಅಂಥವರ ವಿರುದ್ದ ದೂರು ನೀಡಲಿ ಎಂದರು. ಅನುದಾನದ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಗೆ ಹೋಗುವ ಆಲೋಚನೆ ಇಲ್ಲ. ನಮಗೆ ಅನ್ಯಾಯ ಆಗಿರುವುದು ನಿಜ.ನಾವು 100 ರೂ.ತೆರಿಗೆ ಕೊಟ್ಟರೆ 12 ರೂ ಮಾತ್ರ. ಇನ್ನುಳಿದ 88 ರೂ. ಕೇಂದ್ರಕ್ಕೆ ಹೋಗುತ್ತದೆ. ಗುಜರಾತ್ ಸಿಎಂ ಆದಾಗ ತೆರಿಗೆ ನಮ್ಮ ರಾಜ್ಯದ್ದು, ನಾವೇ ವಸೂಲಿ ಮಾಡುತ್ತೇವೆ ಎಂದರು. ಇದನ್ನ ಹೇಳಿದ್ದು ಮಿಸ್ಟರ್ ಮೋದಿ. ಈಗ ದೇಶ ವಿಭಜನೆ ಎಂದು ಹೇಳುತ್ತಿದ್ದಾರೆ, ಆಗ ಏನೂ ಹೇಳುತ್ತಿದ್ದರು. ನಮ್ಮ ಪಾಲು ನಾವು ಕೇಳಿದ್ರೆ,…

Read More

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಆರೋಗ್ಯ ಇಲಾಖೆ ವೈದ್ಯ ಡಾ.ಅಭಿಷೇಕ್ ಯಡವಟ್ಟು ಮಾಡಿರುವ ದೃಶ್ಯ ವೈರಲ್ ಆಗಿದೆ. ಭರಮಸಾಗರ ಸರ್ಕಾರಿ ಆಸ್ಪತ್ರೆಯ ವೈಧ್ಯ ಡಾ.ಅಭಿಷೇಕ್  ಅಪರೇಷನ್ ಥಿಯೇಟರ್ ನಲ್ಲಿ ಪ್ರೀವೆಡ್ಡಿಂಗ್ ವಿಡಿಯೋ ಶೂಟ್ ಮಾಡಿರುವ ವಿಡಿಯೋ ವೈರಲ್ ಆಗಿದೆ. ಚಿತ್ರದುರ್ಗ ಜಿಲ್ಲೆಯ ಭರಮಸಾಗರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ನಡೆದಿದೆ.  ವ್ಯಕ್ತಿಗೆ ಆಪರೇಷನ್ ಮಾಡುತ್ತಿರುವಂತೆ ಮದುವೆ ಆಗುವ ಯುವತಿ ಜೊತೆ ಫೋಟೋ ಶೂಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು, ಡಾ.ಅಭಿಷೇಕ್ ಸರ್ಕಾರಿ ಆಸ್ಪತ್ರೆಯ ಆಪರೇಷನ್ ಥಿಯೇಟರ್ ದುರ್ಬಳಕೆ ಮಾಡಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Read More