Author: AIN Author

ಬೆಂಗಳೂರು:- ಭಾರತದ ಮೂಲೆ ಮೂಲೆಗಳಲ್ಲಿ ಹಿಂದೂ ಯಾತ್ರಾ ಸ್ಥಳಗಳನ್ನು ಪುನರುಜೀವನಗಳೊಸತ್ತಿರುವ ಮತ್ತು ಕಾಶಿ ವಿಶ್ವನಾಥ ಮತ್ತು ಸೋಮನಾತನಂತಹ ಮಹಾನ್ ಯಾತ್ರಾಸ್ಥಳಗಳನ್ನು ಸ್ಥಾಪಿಸಿದ ಮತ್ತು ಹಿಂದೂ ಸನಾತನ ಧರ್ಮದ ರಕ್ಷಕರಾದ ಮಾಳವಾ ಪ್ರಾಂತ್ಯದ ರಾಣಿ ಪುಣ್ಯ ಶ್ಲೋಕ ಲೋಕಮತಾ ದೇವಿ ಅಹಲ್ಯಾಬಾಯಿ ಹೋಳ್ಕರ ಅವರು ಉತ್ತರಖಂಡದ ಬದರಿನಾಥ ಮತ್ತು ಕೇದಾರನಾಥ ಧಾಮಗಳ ಪುನರುಜ್ಜೀವನವನ್ನು ಮಾಡಿದ್ದಾರೆ. ಇದರ ಜೋತೆಗೆ ಅನೇಕ ಘಾಟಗಳು ಸ್ಥಾಪಿಸಿದ. ಮಾ ಅಹಲ್ಯಾ ಆಳ್ವಿಕೆಯಲ್ಲಿ ಸಮಾಜದ ಸಾಮರಸ್ಯ ಅನೇಕ ಅನುಕರಣೀಯ ದಾಖಲೆಯನ್ನು ಸ್ಥಾಪಿಸಿಲಾದ ಆದರ್ಶಗಳನ್ನು ಅನುಸರಿಸುವ ಮಹಾನ್ ವ್ಯಕ್ತಿಗಳಿಗೆ ಶಕ್ತಿ ತುಂಬಲು ದಿನಾಂಕ10/2/2024 ರಂದು ಪಿ ಎಚ್ ಅಧ್ಯಕ್ಷತೆ ವಹಿಸುವರು ಜಗದ್ಗುರು ಶಂಕರಾಚಾರ್ಯ ಸ್ವಾಮಿ ರಾಜರಾಜೇಶ್ವರ ಮಹಾರಾಜರು ಕಾರ್ಯಕ್ರಮಕ್ಕೆ ನಿರ್ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಉತ್ತಖಂಡ ಮತ್ತು ಮಹಾರಾಷ್ಟ್ರ ಮಂತ್ರಿಗಳು ಮಾಜಿ ರಾಜ್ಯಪಾಲಾರದ ಗೌರವಾನ್ವಿತ ಭಗತ್ ಸಿಂಗ್ ಕೋಶ್ಯಾರಿ ನಿರಂಜನಿ ಆಚಾರ್ಯ ಮಹಾಮಂಡಶ್ವೇರ ಶ್ರೀ ಶ್ರೀ 1008 ಕೈಲಾಶನಂದ ಗಿರಿ ಮಹಾರಾಜರು ಉಪಸ್ಥಿತರು ಸೇರಿ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ವರದಿ:- ಬಾಳು ತೇರದಾಳ

Read More

ದಾವಣಗೆರೆ:- ಪಂಚ ಗ್ಯಾರಂಟಿಗಳು ಸ್ಥಗಿತಗೊಳ್ಳಲಿವೆ ಎಂಬುದರ ಕುರಿತು ಚರ್ಚೆಗಳು ಏರ್ಪಟ್ಟಿದ್ದು, ಈ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ತಳಮಟ್ಟದ ಜನರಿಗೆ ಉಪಯೋಗವಾಗುವ ಗ್ಯಾರಂಟಿ ಯೋಜನೆಗಳನ್ನು ಕೆಲವರು ಟೀಕಿಸಿದರು. ಆದರೆ ರಾಜ್ಯದ 150 ಕೋಟಿ ಮಹಿಳೆಯರು ಜೂನ್ 11 ರಿಂದ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಿದ್ದಾರೆ. ಇಂತಹ ಜನಪರ ಯೋಜನೆಗಳ ಬಗ್ಗೆ ಇಚ್ಛಾಶಕ್ತಿ ತೋರದ ಪಕ್ಷಗಳು, ಮೊದಲಿಗೆ ಯೋಜನೆಗಳನ್ನು ಜಾರಿ ಮಾಡಿ ನಂತರ ಸ್ಥಗಿತಗೊಳಿಸುತ್ತಾರೆ ಎಂದು ಟೀಕಿಸುತ್ತಾರೆ. ಆದರೆ ಈ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ರಾಜ್ಯದ 4.5 ಕೋಟಿ ಜನರಿಗೆ ಗ್ಯಾರಂಟಿ ಯೋಜನೆಗಳು ತಲುಪುತ್ತಿವೆ ಎಂದೂ ಸಹ ಮಾಹಿತಿ ನೀಡಿದರು.

Read More

ಪೀಣ್ಯ ದಾಸರಹಳ್ಳಿ:’ ಕೇಂದ್ರ ಸರ್ಕಾರ ಬಡವರ ಪರ ಸರ್ಕಾರ. ಇಡೀ ದೇಶದ 80 ಕೋಟಿ ಜನಕ್ಕೆ 5 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತಿದೆ. ಭಾರತ್ ಅಕ್ಕಿಯನ್ನು ಕನಿಷ್ಠ 29 ರೂಪಾಯಿಗೆ ನೀಡಲಾಗುತ್ತಿದೆ. ಜನರು ಇದರ ಪ್ರಯೋಜನ ಪಡೆದುಕೊಳ್ಳಬೇಕು’ ಎಂದು ಶಾಸಕ ಎಸ್. ಮುನಿರಾಜು ತಿಳಿಸಿದರು. ಮಂಜುನಾಥ ನಗರದಲ್ಲಿ ಡಾಂಬರು ರಸ್ತೆ, ಗಣಪತಿ ನಗರ, ಸೋಮಶೆಟ್ಟಿಹಳ್ಳಿಯಲ್ಲಿ ಕಾಂಕ್ರೀಟ್ ರಸ್ತೆ ಒಂದು ಕೋಟಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಸಿದ್ದರಾಮಯ್ಯ ಅವರು 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಹೇಳುತ್ತಾರೆ ಆದರೆ ಅದರಲ್ಲಿ ಕೇಂದ್ರ ಸರ್ಕಾರದ 5 ಕೆ.ಜಿ, ಉಳಿದ 5 ಕೆ.ಜಿ.ಅಕ್ಕಿಯಲ್ಲಿ 2 ಕೆ.ಜಿ. ಅಕ್ಕಿ, 3 ಕೆ.ಜಿ. ರಾಗಿ ನೀಡುತ್ತಿದ್ದಾರೆ. ಇದಲ್ಲದೆ ಕೇಂದ್ರ ಸರ್ಕಾರ ಭಾರತ್ ಅಕ್ಕಿಯನ್ನು ಬಡವರಿಗೆ ಕನಿಷ್ಠ ದರ 29 ರೂಗಗಳಿಗೆ ಮತ್ತು ಕಾಳುಗಳನ್ನು ಕನಿಷ್ಠ ದರದಲ್ಲಿ ನೀಡುತ್ತಿದೆ. ಬಜೆಟ್ ನಲ್ಲಿ 10 ವರ್ಷಗಳಲ್ಲಿ ನುಡಿದಂತೆ ನಡೆದಂತಹ ಸರ್ಕಾರ ಯಾವುದಾದರೂ ಇದ್ದರೆ ಅದು ನರೇಂದ್ರ ಮೋದಿ ನೇತೃತ್ವದ ಸರ್ಕಾರ’…

Read More

ನವದೆಹಲಿ: ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮತ್ತು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಒಂದೇ ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ. ಸಂಸತ್‌ನಲ್ಲಿ ರಾಜ್ಯ ಬಿಜೆಪಿ ನಾಯಕರು ಒಟ್ಟಾಗಿ ಸೇರಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ, ಬಸನಗೌಡ ಪಾಟೀಲ್‌ ಯತ್ನಾಳ್, ಬಿ.ವಿ ನಾಯಕ್, ಮಾಜಿ ಸಚಿವ ರಮೇಶ್ ಜಾರಕಿಹೋಳಿ ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ.  ರಾಜ್ಯಾಧ್ಯಕ್ಷರಾದ ನಂತರ ವಿಜಯೇಂದ್ರ ಜೊತೆ ಯತ್ನಾಳ್‌ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. https://ainlivenews.com/there-will-be-no-train-traffic-on-this-route-for-two-hours-on-february-11/ ಪಕ್ಷದ ರಾಜ್ಯಮಟ್ಟದ ಕಾರ್ಯಕ್ರಮಗಳಲ್ಲೂ ಯತ್ನಾಳ್ ದೂರ ಉಳಿದಿದ್ದರು. ವಿಜಯಪುರದಲ್ಲಿ ವಿಜಯೇಂದ್ರ ಭೇಟಿ ವೇಳೆಯಲ್ಲೂ ಯತ್ನಾಳ್ ಕಾಣಿಸಿರಲಿಲ್ಲ. ಇಂದು ವಿಜಯೇಂದ್ರ ರಾಜ್ಯಾಧ್ಯಕ್ಷರಾದ ಬಳಿಕ ಯತ್ನಾಳ್ ಜೊತೆ ಮೊದಲ‌ ಮುಖಾಮುಖಿ ಭೇಟಿಯಾಗಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಜೊತೆ ಮಾತುಕತೆ ವೇಳೆ ಇದು ಆಕಸ್ಮಿಕ ಭೇಟಿಯೋ? ಇಬ್ಬರು ನಾಯಕರ ಮಧ್ಯೆ ನಡೆದ ಸಂಧಾನವೋ ಎನ್ನುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

Read More

ಬೆಂಗಳೂರು:- ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 10 ವರ್ಷದ ಬಾಲಕನೊರ್ವ ನಾಪತ್ತೆಯಾಗಿದ್ದು, ಪೋಷಕರು ಕಣ್ಣೀರು ಹಾಕುತ್ತಿದ್ದಾರೆ. ಸಿದ್ದರಾಮಪ್ಪ ಎಂಬ ಬಾಲಕ ತನ್ನ ಸ್ನೇಹಿತರೊಟ್ಟಿಗೆ ಮನೆಯ ಮುಂದೆ ಆಟವಾಡುತ್ತಿದ್ದ. ಆದರೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾನೆ. ರಾತ್ರಿ ಕಳೆದರೂ ಮನೆಗೆ ಬಾರದೇ ಇದ್ದಾಗ ಪೋಷಕರು ಹುಡುಕಾಡಿದ್ದಾರೆ. ಆದರೆ ಹುಡುಕಿ ಸುಸ್ತಾದರೆ ವಿನಃ, ಮಗನ ಸುಳಿವು ಮಾತ್ರ ಸಿಕ್ಕಿಲ್ಲ. ನಮ್ಮ ಮಗನನ್ನು ಹುಡುಕಿ ಕೊಡಿ ಎಂದು ಪರಿ ಪರಿಯಾಗಿ ಬೇಡಿಕೊಳ್ಳುತ್ತಿರುವ ಪೋಷಕರು ಕಣ್ಣೀರು ಹಾಕುತ್ತಿದ್ದಾರೆ. ತಾರಮ್ಮ ಹಾಗೂ ಭೀಮ್ಸಪ್ಪ ದಂಪತಿಯ ಪುತ್ರ ಸಿದ್ದರಾಮಪ್ಪ (10). ಯಾದಗಿರಿ ಮೂಲದ ಈ ದಂಪತಿ ಬೆಂಗಳೂರಲ್ಲಿ ಬಂದು ಗಾರೆ ಕೆಲಸ ಮಾಡಿ ಜೀವನದ ಬಂಡಿ ಸಾಗಿಸುತ್ತಿದ್ದರು. ಊರಲ್ಲಿ ಓದುತ್ತಿದ್ದ ಸಿದ್ದರಾಮಪ್ಪನನ್ನು ಕರೆತಂದು ಜತೆಗೆ ಇಟ್ಟುಕೊಂಡಿದ್ದರು. ಊರಿನ ಶಾಲೆಯಲ್ಲಿ ಟಿಸಿ ಕೊಡಲಿಲ್ಲ ಎಂದು ಬೆಂಗಳೂರಿನಲ್ಲಿ ಶಾಲೆಗೆ ಸೇರಿಸದೇ ಮನೆಯಲ್ಲಿಯೇ ಇರಿಸಿದ್ದರು. ಕಳೆದ ಜನವರಿ 24ರ ಸಂಜೆ 6.30ಕ್ಕೆ ಮಕ್ಕಳ ಜತೆಗೆ ಆಟವಾಡುತ್ತಿದ್ದ ಸಿದ್ದರಾಮಪ್ಪ ಏಕಾಏಕಿ ಕಾಣೆಯಾಗಿದ್ದಾನೆ. ಎಲ್ಲಿ ಹೋಗಿದ್ದನೋ ಎಂದು ತಿಳಿಯದೇ…

Read More

ನಟಿಯಾಗುವ ಕನಸಿಗೆ ನೀರೆರೆಯಲಿದೆ ಮಹಾನಟಿ ಕಾರ್ಯಕ್ರಮ ತನ್ನ ವಿಭಿನ್ನ ರಿಯಾಲಿಟಿ ಶೋಗಳ ಮೂಲಕ ಸಾಕಷ್ಟು ಯುವ ಪ್ರತಿಭೆಗಳನ್ನ ಕರುನಾಡಿಗೆ ಪರಿಚಯಿಸಿರುವ ಜೀ ಕನ್ನಡ ವಾಹಿನಿ, ಈ ಬಾರಿ ಮತ್ತೊಂದು ಹೊಸ ರಿಯಾಲಿಟಿ ಶೋ ಮೂಲಕ ಕರುನಾಡಿನ ಯುವ ನಾಯಕನಟಿಯರನ್ನ ಹುಡುಕುವ ಕೆಲಸ ಶುರುಮಾಡಿದೆ. ಜೀ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋಗಳಾದ ಡ್ರಾಮಾ ಜೂನಿಯರ್ಸ್‌,ಕಾಮಿಡಿ ಕಿಲಾಡಿಗಳು, ಡಿಕೆಡಿ ಮತ್ತು ಸರಿಗಮಪ ಮೂಲಕ ಈಗಾಗಲೆ ಸಾಕಷ್ಟು ನಟನಟಿಯರು ,ಗಾಯಕ ಗಾಯಕಿಯರು ಹಾಗು ಕೊರಿಯೋಗ್ರಾಫರ್‌ಗಳನ್ನ ಕರುನಾಡಿಗೆ ಕೊಟ್ಟಿರುವ ಜೀ ಕನ್ನಡ ವಾಹಿನಿ ಇದೀಗ ಮಹಾನಟಿ ಎಂಬ ಹೊಚ್ಚ ಹೊಸ ರಿಯಾಲಿಟಿ ಶೋ ಮೂಲಕ ನಿಮ್ಮೂರಿನಲ್ಲಿರುವ ನಟಿಯಾಗುವ ಕನಸು ಹೊತ್ತಿರುವ, ಅವಕಾಶ ವಂಚಿತ ಪ್ರತಿಭೆಗಳಿಗೆ ವೇದಿಕೆ ಒದಗಿಸಲು ಈ ಕಾರ್ಯಕ್ರಮವನ್ನ ಹೆಣೆದ್ದಿದ್ದು, ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಯುವ ನಾಯಕ ನಟಿಯರನ್ನ ನೀಡುವ ಕೆಲಸವನ್ನ ಈ ರಿಯಾಲಿಟಿ ಶೋ ಮಾಡಲಿದೆ. ಕರುನಾಡಿನ ಧೀಮಂತ ನಾಯಕ ನಟಿಯರ ಸಾಲಿಗೆ ಸೇರಲು ಬಯಸುವ ಎಲ್ಲಾ ಯುವ ನಾಯಕ ನಟಿಯರಿಗೆ ವೇದಿಕೆ…

Read More

ಬೆಂಗಳೂರು:- ಲಕ್ಷ ಲಕ್ಷ ಶುಲ್ಕ ಪಡೆದು ವಿದ್ಯಾರ್ಥಿಗಳಿಗೆ ದೋಖಾ ಮಾಡಿರುವ ಆರೋಪ ಸಿಲಿಕಾನ್ ಸಿಟಿ ಬೆಂಗಳೂರಿನ ಪ್ರತಿಷ್ಟಿತ ಕಾಲೇಜು ವಿರುದ್ಧ ಕೇಳಿ ಬಂದಿದೆ. ಹೀಗಾಗಿ ಸಿಂಧಿ ಇನ್ಸ್ ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ವಿರುದ್ಧ ವಿದ್ಯಾರ್ಥಿಗಳು ತಿರುಗಿ ಬಿದ್ದಿದ್ದಾರೆ. ಶಿಕ್ಷಕರ ಜೊತೆ ವಾಗ್ವಾದ ನಡೆಸಿದ ವಿದ್ಯಾರ್ಥಿಗಳು ಮೋಸ ಮಾಡಿದ್ದಾರೆಂದು ಆಕ್ರೋಶ ಹೊರ ಹಾಕಿದ್ದಾರೆ. https://ainlivenews.com/is-your-skin-changing-like-this-then-its-cancer/ ಆರೋಪ ಏನು? ನಗರದ ಹೆಬ್ಬಾಳದ ಸಿಂಧಿ ಇನ್ಸ್ ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ನಲ್ಲಿ MBAಗೆ 82 ಸ್ಟೂಡೆಂಟ್ಸ್ ಅಡ್ಮಿಷನ್ ಆಗಿದ್ದು, ₹4,25,000 ಶುಲ್ಕ ಪೀಕಿದ್ದಾರೆ. ಕಾಲೇಜು ಶುಲ್ಕ ಕಟ್ಟುವ ವೇಳೆ ವಿದೇಶಿ ಟ್ರಿಪ್, ಲ್ಯಾಪ್ ಟಾಪ್, ಪ್ಲೇಸ್ ಮೆಂಟ್,ಇಂಟೆನ್ಷಿಪ್ ವ್ಯವಸ್ಥೆ ಮಾಡ್ತಿವಿ ಅಂತ ಭರವಸೆ ನೀಡಿದರು. ಆದರೆ ಇದೀಗ ಎಂಬಿಎ ಕ್ಲಾಸ್ ಮುಗಿದಿದ್ದು ವಿದೇಶಿ ಟ್ರಿಪ್ ಇಲ್ಲ, ಲ್ಯಾಪ್ ಟಾಪ್ ಇಲ್ಲ. ಕಡೆಯ ಪಕ್ಷ ಜಾಬ್ ಬಿಡಿ,ಇಂಟರ್ನ್ ಶಿಪ್ ವ್ಯವಸ್ಥೆ ಮಾಡಿಲ್ಲವೆಂದು ಆಕ್ರೋಶ ಹೊರ ಹಾಕಿದ್ದಾರೆ. ಪ್ರಿನ್ಸಿಪಾಲ್ ಚೇಂಬರ್ ಗೆ ನುಗ್ಗಿ ಗಲಾಟೆ ಮಾಡಿರುವ…

Read More

ಗದಗ: ಗದಗನ ಸರ್ಕಾರಿ ಜಿಮ್ಸ್ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ರೋಗಿಗಳಿಗೆ ಚಿಕಿತ್ಸೆ ನೀಡಿ, ಆರೈಕೆ‌ ಮಾಡಿ ಅಂದ್ರೆ ರೀಲ್ಸ್‌‌ ನಲ್ಲಿ ಮುಳುಗಿದ್ದಾರೆ. ಹೌದು ವೈದ್ಯಕೀಯ ವಿದ್ಯಾರ್ಥಿಗಳು ಚಲಚಿತ್ರದ ಹಾಡಿಗೆ ರೀಲ್ಸ್​​ ಮಾಡುವ ಮೂಲಕ ಪೇಚಿಗೆ ಸಿಲುಕಿಕೊಂಡಿದ್ದಾರೆ. ಹೌದು ವೈದ್ಯಕೀಯ ವಿದ್ಯಾರ್ಥಿಗಳು ನಟ ರವಿಚಂದ್ರ ಅವರ ಪ್ರೇಮಲೋಕ ಚಿತ್ರದ “ಹಲೋ ಮೈ ಲವ್ಲಿ ಲೇಡಿ ಹೂ ಆರ್​ ಯು” ಹಾಡಿಗೆ ಮತ್ತು ಹಿಂದಿ ಚಿತ್ರ ಹಾಡಿಗೆ ಇನ್ಸ್ಟಾಗ್ರಾಮ್​​ನಲ್ಲಿ ರೀಲ್ಸ್ ಮಾಡಿದ್ದಾರೆ.  ಇದನ್ನು ಕಂಡ ಸಾರ್ವಜನಿಕರು ರೋಗಿಗಳ ಆರೈಕೆ ಮಾಡಬೇಕಾದವರು ಈ ರೀತಿ ಆಸ್ಪತ್ರೆಯಲ್ಲಿ ರೀಲ್ಸ್​ ಮಾಡುತ್ತಾ ಕುಳಿತರೆ ಹೇಗೆ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಮ್ಸ್ ಆಸ್ಪತ್ರೆಯ ಕಾರಿಡಾರ್​ನಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ರೀಲ್ಸ್ ಮಾಡಿರುವ ವಿಡಿಯೋ ಸಾಮಾಜಿ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ವಿದ್ಯಾರ್ಥಿಗಳು ಆಸ್ಪತ್ರೆ ಒಳಗೆ ಎಲ್ಲೆಂದರಲ್ಲಿ ರೀಲ್ಸ್ ಮಾಡಿದ್ದಾರೆ. ಈ ರೀಲ್ಸ್​ಗಳನ್ನು ಕಂಡ ನೆಟ್ಟಿಗರು ನಿಮ್ಮ ಹುಚ್ಚಾಟಕ್ಕೆ ಬೇರೆ ಜಾಗ ಸಿಗಲಿಲ್ವಾ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Read More

ನಾವು ದೇವರಿಗೆ ಬೆಳಗುವ ದೀಪವು ಸಕಾರಾತ್ಮಕತೆಯ ಸಂಕೇತವಾಗಿದೆ. ದೀಪದ ಬೆಳಕು ಹೇಗೆ ಕತ್ತಲೆಯನ್ನು ದೂರಾಗಿಸಿ, ಬೆಳಕನ್ನು ಚೆಲ್ಲುತ್ತದೆಯೋ ಹಾಗೇ, ಮನೆಯಲ್ಲಿನ ಋಣಾತ್ಮಕತೆಯನ್ನು ದೂರಾಗಿಸಿ, ಗುಣಾತ್ಮಕತೆಯನ್ನು ಹೆಚ್ಚಾಗಿಸುತ್ತದೆ. ಮನೆಯ ನಕಾರಾತ್ಮಕತೆಯನ್ನು ದೂರಾಗಿಸಲು ನಾವು ಮನೆಯಲ್ಲಿ ದೀಪವನ್ನು ಬೆಳಗಬೇಕೆಂದು ಹೇಳಲಾಗುತ್ತದೆ. https://ainlivenews.com/try-this-home-remedy-for-toothache-which-is-more-painful-in-winter/ ದೇವರಿಗೆ ನಾವು ಕೆಲವೊಮ್ಮೆ ತುಪ್ಪದ ದೀಪವನ್ನು ಹಚ್ಚುತ್ತೇವೆ. ಇನ್ನು ಕೆಲವೊಮ್ಮೆ ಎಣ್ಣೆಯ ದೀಪವನ್ನು ಹಚ್ಚುತ್ತೇವೆ. ಆದರೆ, ತುಪ್ಪದ ದೀಪವನ್ನು ಯಾವಾಗ ಬೆಳಗಬೇಕು..? ಎಣ್ಣೆಯ ದೀಪವನ್ನು ಯಾವಾಗ ಬೆಳಗಬೇಕು ಎಂಬುದರ ಕುರಿತು ಜನರಲ್ಲಿ ಸಾಕಷ್ಟು ಗೊಂದಲಗಳಿವೆ. ಈ ಗೊಂದಲಗಳಿಗೆ ನಾವು ಈ ಲೇಖನದ ಮೂಲಕ ಪರಿಹಾರ ನೀಡುತ್ತೇವೆ. ಯಾವ ದೀಪವನ್ನು ಬೆಳಗಿಸುವುದು ಮಂಗಳಕರ..? ಹಿಂದೂ ಧರ್ಮದಲ್ಲಿ, ದೇವರು ಮತ್ತು ದೇವತೆಗಳ ಮುಂದೆ ತುಪ್ಪ ಮತ್ತು ಎಣ್ಣೆ ದೀಪಗಳನ್ನು ಬೆಳಗಿಸಲಾಗುತ್ತದೆ. ಶಾಸ್ತ್ರಗಳ ಪ್ರಕಾರ ದೇವರ ಬಲಭಾಗದಲ್ಲಿ ತುಪ್ಪದ ದೀಪವನ್ನು ಹಚ್ಚಬೇಕು ಮತ್ತು ದೇವರ ಎಡಭಾಗದಲ್ಲಿ ಎಣ್ಣೆಯ ದೀಪವನ್ನು ಹಚ್ಚಬೇಕು. ಅಂದರೆ ನೀವು ದೇವರಿಗೆ ದೀಪವನ್ನು ಹಚ್ಚಿಡುವಾಗ ನಿಮ್ಮ ಬಲಭಾಗಕ್ಕೆ ಎಣ್ಣೆಯ ದೀಪವನ್ನು ಮತ್ತು ನಿಮ್ಮ…

Read More

ಸ್ತನ ಕ್ಯಾನ್ಸರ್ ಇರುವವರ ಸ್ತನದ ಸುತ್ತಲಿನ ಚರ್ಮದ ವಿನ್ಯಾಸದಲ್ಲಿ ಹಲವು ಬದಲಾವಣೆಗಳು ಕಂಡುಬರುತ್ತದೆಯಂತೆ. ಚರ್ಮದಲ್ಲಿ ಹೊಂಡಗಳು ಕಂಡುಬರುತ್ತದೆ. ಕಿತ್ತಳೆ ಸಿಪ್ಪೆಯಂತೆ ಅಲ್ಲಲ್ಲಿ ಚಿಕ್ಕ ಚಿಕ್ಕ ರಂಧ್ರಗಳು ಕಾಣಿಸಿಕೊಳ್ಳುತ್ತದೆಯಂತೆ. ಹಾಗೇ ಎದೆಯಲ್ಲಿ ಊತ ಕಂಡುಬರುತ್ತದೆಯಂತೆ. ಅಲ್ಲದೇ ಎದೆಯ ಭಾಗದ ಚರ್ಮವು ಕೆಂಪು, ಗುಲಾಬಿ ಅಥವಾ ನೇರಳೆಬಣ್ಣಕ್ಕೆ ಬದಲಾಗುತ್ತದೆಯಂತೆ. https://ainlivenews.com/searching-for-job-in-bangalore-2/ ಅಲ್ಲದೇ ಮೊಲೆ ತೊಟ್ಟು ಮತ್ತು ಅದರ ಸುತ್ತಲಿನ ಪ್ರದೇಶದಲ್ಲಿ ದದ್ದುಗಳು ಮತ್ತು ಚರ್ಮ ಕೆಂಪಾಗಿರುವುದು ಕಂಡುಬರುತ್ತದೆಯಂತೆ. ಅಲ್ಲದೇ ಕೆಲವು ಸಂಶೋಧನೆಯಲ್ಲಿ ತಿಳಿಸಿದ ಪ್ರಕಾರ ಸ್ತನ ಕ್ಯಾನ್ಸರ್ ಕೆಲವೊಮ್ಮೆ ಚರ್ಮದಲ್ಲಿ ಗಡ್ಡೆಗಳನ್ನು ಉಂಟುಮಾಡುವುದಿಲ್ಲ. ಬದಲಾಗಿ ಚಿಕ್ಕ ಚಿಕ್ಕ ಗುಳ್ಳೆಗಳಲ್ಲಿ ಕಂಡುಬರುತ್ತದೆಯಂತೆ.

Read More