Author: AIN Author

ಹಾವೇರಿ- ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು‌‌ ಮತ್ತು ಈ‌ ಕುರಿತು ಜನರಲ್ಲಿ ಅರಿವು ಮೂಡಿಸುವ ಸಮಾವೇಶವನ್ನ ಇಂದು ಅದ್ದೂರಿಯಾಗಿ ನಡೆಸಲಾಗಿದೆ. ಅದು ಉತ್ತರ ಕರ್ನಾಟಕದಲ್ಲಿಯೇ ಮೊದಲ ಬಾರಿಗೆ ಜಿಲ್ಲೆಯ ಹಾನಗಲ್ ತಾಲೂಕಿನ ಅಕ್ಕಿಆಲೂರು ಹೋಬಳಿ ಮಟ್ಟದಲ್ಲಿ ಇಂದು ಜಿಲ್ಲಾಡಳಿತವು ಆಯೋಜನೆ ಮಾಡಿತ್ತು.ಈ ಸಮಾವೇಶವನ್ನು ಶಾಸಕ ಶ್ರೀನಿವಾಸ್ ಮಾನೆ ಹಾಗೂ ಮಹಿಳಾ ಫಲಾನುಭವಿಗಳು ಉದ್ಘಾಟನೆ ಮಾಡಿ ಗ್ಯಾರಂಟಿಗಳ ಬಗ್ಗೆ ಗುಣಗಾನ ಮಾಡಿದರು.ಅಕ್ಕಿಆಲೂರಿನ ಕಾಲೇಜಿನಲ್ಲಿ ಅದ್ದೂರಿಯಾಗಿ ವೇದಿಕೆ ಹಾಕಿ ಸಾವಿರಾರು ಜನರು ಭಾಗಿಯಾಗಿ ಗ್ಯಾರಂಟಿಗಳ ಬಗ್ಗೆ ಮಾಹಿತಿ ಪಡೆದರು. ಶಕ್ತಿಯೋಜನೆ ,ಅನ್ನಭಾಗ್ಯ,ಗೃಹಲಕ್ಷ್ಮಿ ,ಗೃಹಜ್ಯೋತಿ,ಯುವನಿಧಿ ಯೋಜನೆಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಕೌಂಟರ್ ಗಳನ್ನು ತೆರೆಯಲಾಗಿತ್ತು.ಈ ವೇಳೆ ಮಾಹಿತಿ ಇರದ ಅನೇಕ ಸಾರ್ವಜನಿಕರು ಮತ್ತು ಫಲಾನುಭವಿಗಳು ನೋಂದಣಿ ಮಾಡಿಕೊಂಡು ಐದು ಗ್ಯಾರಂಟಿಗಳ ಬಳಕೆ ಅರ್ಹರಾದರು. ಇದರಿಂದ ಪ್ರಯೋಜನ ಪಡೆದ ಹಲವು ಫಲಾನುಭವಿಗಳು ಅನಿಸಿಕೆ ಅಭಿಪ್ರಾಯ ಹೇಳಿದರು. ಇದು ನಿಮಗಾಗಿ ತಂದಿರುವ ಯೋಜನೆಗಳನ್ನು ಇವುಗಳನ್ನು ಬಳಕೆ ಮಾಡಿಕೊಳ್ಳಿ ಎಂದು ಶಾಸಕ ಮಾನೆ ಎಲ್ಲರಿಗೂ ಮನವಿ ಮಾಡಿದರು.

Read More

ಬೆಂಗಳೂರು:- ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ್ದ ಡಬ್ಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಭೀಕರ ಹತ್ಯೆಯ ಎಕ್ಸ್ ಕ್ಲ್ಯೂಸಿವ್ ವಿಡಿಯೋ ಲಭ್ಯವಾಗಿದೆ. ಆರೋಪಿ ಚಾಕುವಿನಿಂದ ಇರಿದು ಹತ್ಯೆ ಮಾಡುವ ವಿಡಿಯೋ ಲಭ್ಯವಾಗಿದ್ದು, ಆರೋಪಿ ಮೊದಲು ಹರಿ ಮಾರ್ಕೆಟಿಂಗ್ ಮಾಲೀಕ ಸುರೇಶ್ ನನ್ನ ಟಾರ್ಗೆಟ್ ಮಾಡಿದ್ದ. ಸುರೇಶ್ ಚುಚ್ಚಿ ಹೊರ ಬಂದವ್ನೇ ಮಹೇಂದ್ರನ ಮೇಲೆ ಭೀಕರ ಅಟ್ಯಾಕ್ ನಡೆದಿದೆ. https://ainlivenews.com/application-invitation-from-kea-for-coaching-for-various-exams/ ಆರೋಪಿ ಬದ್ರಿ ಹಲ್ಲೆ ಮಾಡಿ ಹೋಗ್ತಾನೆ ಎಂದು ಮಹೇಂದ್ರ ಅಂದುಕೊಂಡಿದ್ದ. ಸ್ನೇಹಿತನನ್ನ ಉಳಿಸಲು ಹಂತಕನಿಂದ ತಪ್ಪಿಸಿಕೊಳ್ಳೋ ಪ್ರಯತ್ನವನ್ನು ಮಹೇಂದ್ರ ಮಾಡಲಿಲ್ಲ. ಸ್ನೇಹಿತನನ್ನ ಕೊಂದವ್ನೇ ಹೊರ ಬಂದು ಮಹೇಂದ್ರಗೆ ಮನಬಂದಂತೆ ಚಾಕುವಿನಿಂದ ಚುಚ್ಚಿದ್ದಾನೆ. ಚಾಕು ಇರಿತದ ದೃಶ್ಯ ನೋಡಿದ್ರೆ ಒಂದು ಕ್ಷಣ ಬೆಚ್ಚಿ ಬೀಳ್ತೀರಾ. ಮಹೇಂದ್ರನ ದೇಹದಿಂದ ರಕ್ತ ಸುರಿಯುತ್ತಿದ್ರು ಕೊಲೆಗಾರ ಕ್ಯಾರೇ ಅಂದಿಲ್ಲ. https://ainlivenews.com/the-contract-based-doctor-who-did-the-pre-wedding-shoot-was-fired/ ಚಾಕುವಿನಿಂದ ಮನ ಬಂದಂತೆ ಚುಚ್ಚಿ ಚುಚ್ಚಿ ಕೈಗಾಡಿಯೊಳಗೆ ಕೆಡವಿದ್ದಾರೆ. ರಕ್ತದ ಮಡುವಿನಲ್ಲಿ ಕೈಗಾಡಿಯಲ್ಲಿ ಬಿದ್ದಿದ್ದ ಮಹೇಂದ್ರ ಸಹಾಯಕ್ಕಾಗಿ ಸಾರ್ವಜನಿಕರಲ್ಲಿ ಅಂಗಲಾಚ್ತಿದ್ದ. ಎಲ್ಲವನ್ನು ನೋಡಿ ಭೀತಿಯಿಂದ ಸ್ಥಳೀಯ ಜನ…

Read More

ಬೆಂಗಳೂರು:- KEAನಿಂದ ವಿವಿಧ ಪರೀಕ್ಷೆಗಳ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಪ್ರವೇಶಪತ್ರ ಡೌನ್‌ಲೋಡ್‌ಗೆ ಅವಕಾಶ ನೀಡಲಾಗಿದೆ. ಹಿಂದುಳಿದ ವರ್ಗಗಳ ಇಲಾಖೆ/ಸಮಾಜ ಕಲ್ಯಾಣ ಇಲಾಖೆ ಐಎಎಸ್, ಕೆಎಎಸ್, ಬ್ಯಾಂಕಿಂಗ್‌ ಪರೀಕ್ಷೆ ಬರೆಯಲು ಇಚ್ಛಿಸುವ ಅಭ್ಯರ್ಥಿಗಳಿಗೆ ತರಬೇತಿ ನೀಡಲು ಅರ್ಜಿ ಆಹ್ವಾನಿಸಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಫೆ.18ರಂದು ಪರೀಕ್ಷೆ ನಡೆಸಲಿದೆ. ಅರ್ಹ ಅಭ್ಯರ್ಥಿಗಳು ಹೆಸರು, ಜನ್ಮ ದಿನಾಂಕ, ಅರ್ಜಿ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆ ಬಳಸಿ ಪ್ರಾಧಿಕಾರದ ವೆಬ್‌ಸೈಟಿನಿಂದ ಪ್ರವೇಶಪತ್ರ ಡೌನ್‌ಲೋಡ್ ಮಾಡಿಕೊಳ್ಳಬೇಕು ಎಂದು ಕಾರ್ಯ ನಿರ್ವಾಹಕ ನಿರ್ದೇಶಕರಾದ ಎಸ್.ರಮ್ಯಾ ತಿಳಿಸಿದ್ದಾರೆ. ಜೊತೆಗೆ ಪ್ರಾಧಿಕಾರವು ಕೆಪಿಸಿಎಲ್ ಸಂಸ್ಥೆಯ ನೇಮಕಾತಿ ಸಂಬಂಧ ಫೆ.18ರಂದು ಮರುಪರೀಕ್ಷೆ ಮತ್ತು 19ರಂದು ಕನ್ನಡ ಭಾಷಾ ಪರೀಕ್ಷೆಯನ್ನು ನಡೆಸಲಿದೆ. ಹಾಗೆಯೇ ಕರ್ನಾಟಕ ರಾಜ್ಯ ಹಣಕಾಸು ನಿಗಮದ (KSFC) ಖಾಲಿ ಹುದ್ದೆಗಳಿಗೂ ನೇಮಕಾತಿಗಾಗಿ ಫೆ.17ರಂದು ಪರೀಕ್ಷೆ ನಡೆಯಲಿದೆ ಈ ಪರೀಕ್ಷೆಗಳಿಗೆ ಕೂಡ ಅರ್ಹ ಅಭ್ಯರ್ಥಿಗಳು ಪ್ರವೇಶಪತ್ರ ಡೌನ್‌ಲೋಡ್ ಮಾಡಿಕೊಳ್ಳಬೇಕು. ಹೆಚ್ಚುವರಿ ಮಾಹಿತಿಗಳ ಅವಶ್ಯಕತೆಯಿದ್ದರೆ [email protected]ಗೆ ಇ-ಮೇಲ್ ಕಳುಹಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Read More

ಚಿತ್ರದುರ್ಗ:- ಚಿತ್ರದುರ್ಗ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಿವೆಡ್ಡಿಂಗ್ ಶೂಟ್ ನಡೆಸಿದ ಗುತ್ತಿಗೆ ಆಧಾರಿತ ವೈದ್ಯನನ್ನು ವಜಾ ಮಾಡಲಾಗಿದೆ. ಡಾ.ಜಗದೀಶ್ ವಜಾಗೊಂಡ ಡಾಕ್ಟರ್. ಚಿತ್ರದುರ್ಗ ತಾಲೂಕಿನ ಭರಮಸಾಗರ ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಿವೆಡ್ಡಿಂಗ್ ಶೂಟ್ ವಿಡಿಯೋ ಮಾಡಲಾಗಿತ್ತು. ನಿಯಮ ಬಾಹಿರ ಕೃತ್ಯ, ಕರ್ತವ್ಯ ಲೋಪ ಹಿನ್ನೆಲೆ ಕೆಲಸದಿಂದ ವಜಾ ಮಾಡಲಾಗಿದೆ. ಡಿಫರೆಂಟ್ ಮತ್ತು ಯುನೀಕ್ ಆಗಿ ಪ್ರಿವೆಡ್ಡಿಂಗ್ ಶೂಟ್ ಮಾಡಿಸುವ ಭರದಲ್ಲಿ ಚಿತ್ರದುರ್ಗ ಜಿಲ್ಲಾಸ್ಪತ್ರೆಯ ಗುತ್ತಿಗೆ ಆಧಾರಿತ ವೈದ್ಯ ಡಾ.ಅಭಿಷೇಕ್​​ ಯಡವಟ್ಟು ಮಾಡಿಕೊಂಡಿದ್ದಾರೆ. ಆಪರೇಷನ್ ನಾಗಪ್ಪ’ ಶೀರ್ಷಿಕೆಯಡಿ ವ್ಯಕ್ತಿಗೆ ಆಪರೇಷನ್ ಮಾಡುತ್ತಿರುವಂತೆ ಆಪರೇಷನ್ ಥಿಯೇಟರ್​​ನಲ್ಲಿ ಡಾ.ಅಭಿಷೇಕ್ ಜೋಡಿಯ ಪ್ರಿವೆಡ್ಡಿಂಗ್ ವಿಡಿಯೋ ಶೂಟ್ ಮಾಡಲಾಗಿದೆ. ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸಾಕಷ್ಟು ವೈರಲ್​ ಆಗಿದೆ. ಜೊತೆಗೆ ಡಾ.ಅಭಿಷೇಕ್ ಜೋಡಿ ಬಗ್ಗೆ ಟೀಕೆ ಮಾಡಲಾಗಿದೆ. ಸರ್ಕಾರಿ ಆಸ್ಪತ್ರೆಯ ಆಪರೇಷನ್ ಥಿಯೇಟರ್ ದುರ್ಬಳಕೆ ಬಗ್ಗೆ ಕಿಡಿಕಾರಲಾಗಿದೆ.

Read More

ಧಾರವಾಡ: ಅದೇಷ್ಟೋ ತಾಯಿ ತಂದಿಯಂದ್ರೂ ಮಕ್ಕಳಿಗಾಗಿ ಹರಕೆ ಗುಡಿಗಳ ಗುಂಡಾಗಳನ್ನು ಸುತ್ತವುದನ್ನು ನೋಡಿರುತ್ತೇವೆ.‌ ಆದರೆ‌ ಇಲ್ಲೊಬ್ಬಳು ತಾಯಿ ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗುತ್ತಾಳೇ ಕಾರಣಕ್ಕೆ ತಾನೇ ಹೆತ್ತು ಹೊತ್ತು‌ಬೆಳೆಸಿದ ಐದು ವರ್ಷದ ಮಗುವನ್ನು ಮಸಣಕ್ಕೆ ಕಳುಹಿಸಿದ್ದಾಳೆ.‌ ಈ ಹೃದಯ ವಿದ್ರಾವಕ ಘಟನೆ ನಡೆದಿರೋದು ಎಲ್ಲಿ ಅಂತೀರಾ ಇಲ್ಲಿದೆ ನೋಡಿ ವಿವರ….. ಈ ಫೋಟೋದಲ್ಲಿರುವ ಮಗು ಸಹನಾ ಹಿರೇಮಠ. ಐದು ವರ್ಷದ ಈ ಮಗು ತಾನು ಮಾಡದೇ ಇರೋ ತಪ್ಪಿಗೆ ಜಗತ್ತನ್ನು ತಿಳಿದುಕೊಳ್ಳುವ ಮುಂಚೆಯೇ ಶಾಶ್ವತವಾಗಿ ಕಣತಣಮುಚ್ಚಿದ್ದಾಳೆ.‌ ಹೌದು, ತನ್ನ ತಂದೆ ತಾಯಿ ಜಗಳದಿಂದ ಡೈವರ್ಸ್ ಬಳಿಕ, ತನ್ನ ಅವಳಿ ಸೋದರಿ ಜೊತೆಗೆ ತಾಯಿಯೊಂದಿಗೆ ಇದ್ದ ಸಹನಾಗೆ ತನ್ನ ತಾಯಿಯೇ ಯಮವಾಗಿ ಬಂದು ಪ್ರಣ ಕಿತ್ತುಕೊಂಡಿದ್ದಾಳೆ. ಹೌದು, ಈ ಪೋಟೋದಲ್ಲಿರೋ ಈಕೆಯೆ ಸಹನಾಳ ಪಾಪಿ ತಾಯಿ ಜ್ಯೋತಿ ಹಿರೇಮಠ. ಈಗಷ್ಟೇ ಒಂದೂವರೆ ತಿಂಗಳ ಹಿಂದೆ ತನ್ನ ಪತಿಯಿಂದ ಡೈವರ್ಸ್ ಪಡೆದಿದ್ದ ಜ್ಯೋತಿ, ಕಮಲಾಪುರದ ಹೂಗಾರ ಓಣಿಯಲ್ಲಿ ಐದು ವರ್ಷದ ಅವಳಿ ಮಕ್ಕಳೊಂದಿಗೆ ವಾಸವಿದ್ಳು.…

Read More

ನವದೆಹಲಿ:- ಕೇಂದ್ರ ಸೇವೆಗೆ ರಾಜ್ಯದ ಐಪಿಎಸ್ ಅಧಿಕಾರಿ ವರ್ಗಾವಣೆಗೆ ಮಾಡಲಾಗಿದೆ. ಐಪಿಎಸ್ ಅಧಿಕಾರಿ ರಾಹುಲ್ ಕುಮಾರ್ ಶಹಪುರ್ ವಾಡ್ ಅವರನ್ನು ಎನ್ ಐಎ ಎಸ್ ಪಿಯಾಗಿ ವರ್ಗಾವಣೆ ಮಾಡಿ ಕೇಂದ್ರ ಸರ್ಕಾರದಿಂದ ಆದೇಶ ಹೊರಡಿಸಿದೆ.

Read More

ದೆಹಲಿ:- ಚಿಕ್ಕಬಳ್ಳಾಪುರ ಲೋಕ ಸಭಾ ಕ್ಷೇತ್ರದಿಂದ ಮಾಜಿ ಸಚಿವ ಡಾ ಕೆ ಸುಧಾಕರ್ ಪಕ್ಷದ ಅಭ್ಯರ್ಥಿಯಾಗುವ ಬಯಕೆ ವ್ಯಕ್ತಪಡಿಸಿದ್ದರೆ ತಪ್ಪೇನೂ ಇಲ್ಲ ಎಂದು ಬಿವೈ ವಿಜಯೇಂದ್ರ ಹೇಳಿದರು. ಹಿಂದೆ ಅವರು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಿ ಸರ್ಕಾರ ರಚಿಸಲು ಕಾರಣವಾಗಿದ್ದರು. ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಬಹಳ ದುರ್ಬಲವಾಗಿತ್ತು. ಆದರೆ ಸುಧಾಕರ್ ಬಿಜೆಪಿಯಿಂದ ವಿಧಾನ ಸಭೆಗೆ ಆಯ್ಕೆಯಾಗಿ ಕ್ಷೇತ್ರದಲ್ಲಿ ಪಕ್ಷ ನೆಲೆ ಕಂಡುಕೊಳ್ಳುವಂತೆ ಮಾಡಿದ್ದರು. ಆದರೆ ಕಳೆದ ಬಾರಿಯ ಚುನಾವಣೆಯಲ್ಲಿ ಅವರಿಗೆ ಸೋಲುಂಟಾಯಿತು, ರಾಜಕಾರಣದಲ್ಲಿ ಏರುಪೇರು ಇದ್ದಿದ್ದೇ ಎಂದು ವಿಜಯೇಂದ್ರ ಹೇಳಿದರು. ಲೋಕ ಸಭಾ ಚುನಾವಣೆಯಲ್ಲಿ ಅವರು ಚಿಕ್ಕಬಳ್ಳಾಪುರದ ಅಭ್ಯರ್ಥಿಯಾಗಲಿದ್ದಾರೆ ಅಂತ ತಾನ್ಯಾವತ್ತೂ ಹೇಳಿಲ್ಲ, ಎಲ್ಲ ಕ್ಷೇತ್ರಗಳಲ್ಲಿ ಕಾರ್ಯಕರ್ತರ ಅಭಿಪ್ರಾಯಗಳನ್ನು ಸಂಗ್ರಹಿಸಿ ವರಿಷ್ಠರು ಅಭ್ಯರ್ಥಿಗಳ ಹೆಸರುಗಳನ್ನು ಅಂತಿಮಗೊಳಿಸಲಿದ್ದಾರೆ ಎಂದು ವಿಜಯೇಂದ್ರ ಹೇಳಿದರು.

Read More

ಬೆಳಗಾವಿ:- ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಗ್ರಾಮದ ಯಲ್ಲಾಲಿಂಗೇಶ್ವರ ಮಠದ ಆವರಣದಲ್ಲಿ. ಹೌದು, ಪ್ರತಿವರ್ಷದಂತೆ ಈ ವರ್ಷವೂ ಅದ್ದೂರಿಯಾಗಿ ಯಲ್ಲಾಲಿಂಗ ದೇವರ ಜಾತ್ರೆ ನೆರವೇರಿದೆ. ಈ ಬಾರಿ ವಿಶೇಷ ಅಂದ್ರೇ ಹತ್ತು ಸಾವಿರ ಮಹಿಳೆಯರು ಹೊತ್ತು ತರ್ತಿದ್ದ ರೊಟ್ಟಿ ಬುತ್ತಿಯನ್ನ ತ್ರಿವರ್ಣ ಧ್ವಜದ ಬಣ್ಣದಲ್ಲಿನ ಬಟ್ಟೆ ಕಟ್ಟಿಕೊಂಡು ಸಾಲಾಗಿ ಬಂದು ದೇವರಿಗೆ ಅರ್ಪಣೆ ಮಾಡಿರುವುದು. ಈ ಮೂಲಕ ಹೊಸ ಸಾಧನೆಯನ್ನೂ ಯಲ್ಲಾಲಿಂಗ ಮಹರಾಜರ ಭಕ್ತರು ಮಾಡಿದ್ದಾರೆ. ಯಲ್ಲಾಲಿಂಗ ಮಹರಾಜರ 38ನೇ ಪುಣ್ಯಸ್ಮರಣೆ ಕಾರ್ಯಕ್ರಮ ಹಾಗೂ ಜಾತ್ರಾ ಮಹೋತ್ಸವ ಹಿನ್ನೆಲೆ ಮುಗಳಖೋಡ ಗ್ರಾಮದ ಸುತ್ತಮುತ್ತ ಹತ್ತು ಗ್ರಾಮದ ಮಹಿಳೆಯರು ಜಾತ್ರೆಗೂ ಮುನ್ನ ಎರಡು ವಾರಗಳ ಕಾಲ ನಿರಂತರವಾಗಿ ರೊಟ್ಟಿಯನ್ನ ಮಾಡ್ತಾರೆ. ಹತ್ತು ಸಾವಿರ ಮಹಿಳೆಯರು ಒಂದು ಕೋಟಿಗಿಂತ ಹೆಚ್ಚು ರೊಟ್ಟಿಯನ್ನ ತಂದು ಮಠಕ್ಕೆ ಅರ್ಪಣೆ ಮಾಡುತ್ತಾರೆ. ಇನ್ನು ಇಲ್ಲಿ ಬರೀ ರೊಟ್ಟಿ ಮಾತ್ರ ತರುವುದಿಲ್ಲ, ರೊಟ್ಟಿ ಜತೆಗೆ ವಿವಿಧ ತೆರನಾದ ಪಲ್ಯಗಳು, ಶೇಂಗಾ ಚಟ್ನಿ, ಹೋಳಿಗೆ ಚಕ್ಕುಲಿ ಸೇರಿ ಹಲವು ಖಾದ್ಯಗಳನ್ನ…

Read More

ಬಳ್ಳಾರಿ: ಜಿಲ್ಲೆಯಲ್ಲಿ ಸಂವಿಧಾನ ಜಾಗೃತಿ ಜಾಥಾವು ಯಶಸ್ವಿಯಾಗಿ ನಡೆಯುತ್ತಿದ್ದು, ಗುರುವಾರದಂದು ಸಿರುಗುಪ್ಪ ತಾಲ್ಲೂಕಿನ ಕೊಂಚಿಗೇರಿ, ಶಾನವಾಸಪುರ, ಎಚ್.ಹೊಸಳ್ಳಿ ಹಾಗೂ ಕರೂರು ಗ್ರಾಮಗಳ ಗ್ರಾಮ ಪಂಚಾಯಿತಿಗಳ ಮಾರ್ಗದಲ್ಲಿ ಸಂಚರಿಸಿತು. ಕೊಂಚಿಗೇರಿ ಗ್ರಾಮದಲ್ಲಿ ಎತ್ತಿನ ಬಂಡಿಗಳು, ಮಹಾನ್ ನೇತಾರರ ವೇಷಭೂಷಣ ಧರಿಸಿದ ವಿದ್ಯಾರ್ಥಿಗಳೊಂದಿಗೆ ಜಾಥಾವನ್ನು ಸ್ವಾಗತಿಸಿದ್ದು ವಿಶೇಷವಾಗಿ ಕಂಡುಬಂದಿತು. ಕೊಂಚಿಗೇರಿ ಗ್ರಾಮದ ವೃತ್ತದಲ್ಲಿ 50 ಮೀಟರ್ ಉದ್ದದ ರಾಷ್ಟ್ರಧ್ವಜವನ್ನು ಗೌರವಪೂರ್ವಕವಾಗಿ ಹಿಡಿದು ಸಂವಿಧಾನದ ಪ್ರಸ್ತಾವನೆಯನ್ನು ವಾಚನ ಮಾಡಿದ್ದು ನೋಡುಗರ ಕಣ್ಮನ ಸೆಳೆಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿದ್ದನ ಗೌಡ, ಉಪಾಧ್ಯಕ್ಷರಾದ ಕವಿತಾ ಉಪಸ್ಥಿತರಿದ್ದರು. ಕರೂರು ಗ್ರಾಮದಲಿಯ್ಲೂ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಕರೂರು ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ ವಿದ್ಯಾರ್ಥಿಗಳು 50 ಮೀಟರ್ ಉದ್ದದ ರಾಷ್ಟ್ರಧ್ವಜವನ್ನು ಗೌರವಪೂರ್ವಕವಾಗಿ ಹಿಡಿದು ಸಂವಿಧಾನದ ಪ್ರಸ್ತಾವನೆಯನ್ನು ವಾಚನ ಮಾಡಿದ್ದು ನೋಡುಗರ ಮನಸೂರೆಗೊಂಡಿತು. ಎಚ್.ಹೊಸಳ್ಳಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಶ್ರೀಶೈಲಪ್ಪ ಅವರು ಮಾತನಾಡಿ, ಸಂವಿಧಾನದಿಂದಾಗಿ ನಮ್ಮ ಜೀವನವು ಸುಗಮವಾಗಿ, ಸುಸೂತ್ರವಾಗಿ ನಡೆಯುತ್ತಿದೆ. ಹಿಂದುಳಿದವರ, ದಲಿತರ ಅಭಿವೃದ್ಧಿಗೆ ಕಾರಣವಾಗಿದೆ ಎಂದು ಹೇಳಿದರು. ಸಂವಿಧಾನ…

Read More

ಹುಬ್ಬಳ್ಳಿ: ಹಜರತ್ ಗರೀಬ್ ನವಾಜ್ ಅವರ ಸ್ಮರಣೆಯನ್ನು ದುರ್ಗದ ಬೈಲ್ ಆಟೋ ನಿಲ್ದಾಣದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ವಿಜೃಂಭಣೆಯಿಂದ ಆಚರಿಸಲಾಯಿತು ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಮಾಡಲಾಯಿತು ಇದೇ ಸಂದರ್ಭದಲ್ಲಿ ಆಟೋ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷರಾದ ಶೇಖರಯ್ಯ ಮಠಪತಿಯವರು ಅಲ್ಲಿನ ಅಧ್ಯಕ್ಷರಾದ ಬಾಬರ್ ಜಮಖಾನೆ ಅವರನ್ನು ಸನ್ಮಾನಿಸಿ ಶುಭ ಕೋರಿದರು ಸದಸ್ಯರಾದ ಗುರು ಬೆಟಗೇರಿ ಮುರುಳಿ ಇಂಗಳಹಳ್ಳಿ ಮಹಾವೀರ್ ಬಿಲಾನ ಕಲ್ಲಪ್ಪ ಅಣ್ಣಿಗೇರಿ ಅಜೀಮ್ ಇಮ್ರಾನ್ ಅಬ್ದುಲ್ ಖಾದರ್ ಸುಲೇಮಾನ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು

Read More