Author: AIN Author

ಇತ್ತೀಚಿನ ದಿನಗಳಲ್ಲಿ ಹಳೆಯ ಅಥವಾ ಪುರಾತನ ಕಾಲದ ನಾಣ್ಯಗಳಿಗೆ ಹಾಗೂ ಹಳೆಯ ಕರೆನ್ಸಿ ನೋಟುಗಳನ್ನು ಬೇಡಿಕೆ ಹೆಚ್ಚಿದೆ. ಕೆಲವೊಂದು ವೆಬ್ ಸೈಟ್ ಗಳು ಇಂಥ ಪುರಾತನ ಹಾಗೂ ವಿಶಿಷ್ಟ ನಾಣ್ಯಗಳು ಹಾಗೂ ನೋಟುಗಳ ಬಿಡ್ಡಿಂಗ್ ನಡೆಸುತ್ತಿದ್ದು, ಲಕ್ಷಾಂತರ ರೂ. ಗಳಿಸುವ ಅವಕಾಶವನ್ನು ನೀಡಿವೆ. ಹಾಗೆಯೇ ಒಂದು ರೂ. ಮುಖಬೆಲೆಯ ಹಳೆಯ ನಾಣ್ಯ ನಿಮ್ಮ ಸಂಗ್ರಹದಲ್ಲಿದ್ದರೆ, ಕೋಟ್ಯಂತರ ರೂಪಾಯಿ ಗಳಿಸುವ ಅವಕಾಶವಿದೆ. 1885ರಲ್ಲಿ ಬ್ರಿಟಿಷರ ಕಾಲಾವಧಿಯಲ್ಲಿ ಸಿದ್ಧಗೊಂಡ ಒಂದು ರೂ. ಮುಖಬೆಲೆಯ ನಾಣ್ಯ ಹರಾಜಿನಲ್ಲಿ 10 ಕೋಟಿ ರೂ.ಗೆ ಮಾರಾಟವಾಗಿದೆ. ಹೀಗಾಗಿ ನಿಮ್ಮ ಬಳಿಯು ಇದೇ ಮಾದರಿಯ ನಾಣ್ಯವಿದ್ರೆ ನೀವು ಕೂಡ ಆನ್ ಲೈನ್ ಹರಾಜಿನಲ್ಲಿ ಭಾಗವಹಿಸುವ ಮೂಲಕ 10 ಕೋಟಿ ರೂ. ಗಳಿಸಬಹುದು.  ನಿಮ್ಮ ಹತ್ರ ಹಳೆ ನೋಟು, ಚಿಲ್ಲರೆ ಇದ್ಯಾ? ಪ್ರಸ್ತುತ ನಾಣ್ಯಶಾಸ್ತ್ರಜ್ಞರು ನಾಣ್ಯಗಳ ಸಂಗ್ರಾಹಕರಾಗಿದ್ದಾರೆ ಮತ್ತು ನೋಟಫಿಲಿಸ್ಟ್‌ಗಳು  ಅಪರೂಪದ ನಾಣ್ಯಗಳು ಮತ್ತು ನೋಟುಗಳ ಹುಡುಕಾಟದಲ್ಲಿದ್ದಾರೆ. ನೀವು ಅಂತಹ ನಾಣ್ಯಗಳು ಅಥವಾ ನೋಟುಗಳ ಸಂಗ್ರಹವನ್ನು ಹೊಂದಿದ್ದರೆ, ನೀವು ಅವುಗಳನ್ನು ಉತ್ತಮ ಮೊತ್ತಕ್ಕೆ…

Read More

ಸೂರ್ಯೋದಯ: 06:49, ಸೂರ್ಯಾಸ್ತ್ : 06:11 ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಮಾಘಮಾಸ, ಶುಕ್ಲ ಪಕ್ಷ, ಉತ್ತರಾಯಣಂ, ಹೇಮಂತ ಋತು, ತಿಥಿ: ಪಾಡ್ಯಾ, ನಕ್ಷತ್ರ: ಧನಿಷ್ಟ, ರಾಹು ಕಾಲ: 09:00 ನಿಂದ 10:30 ತನಕ ಯಮಗಂಡ: 01:30 ನಿಂದ 03:00 ತನಕ ಗುಳಿಕ ಕಾಲ: 06:00 ನಿಂದ 07:30 ತನಕ ಅಮೃತಕಾಲ: ಬೆ.11:25 ನಿಂದ ಮ.12:50 ತನಕ ಅಭಿಜಿತ್ ಮುಹುರ್ತ: ಮ.12:07 ನಿಂದ ಮ.12:53 ತನಕ ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ. “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು” ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು. Mob. 93534 88403 ಮೇಷ : ಕೃಷಿ ಭೂಮಿ ಖರೀದಿಸುವ ಚಿಂತನೆ, ಭೂಮಿ ವಿಚಾರಕ್ಕಾಗಿ ವಾಗ್ವಾದ, ರಾಜೀ ಮಾಡಿಕೊಳ್ಳುವುದು ಉತ್ತಮ,ಸಂಗಾತಿಯಿಂದ ಒಲವಿನ ಉಡುಗೊರೆ,ಸ್ನೇಹಿತರ ಸಹಕಾರದಿಂದ ಉದ್ಯೋಗ ಲಭಿಸಲಿದೆ. ಕಠಿಣ ಶ್ರಮದಿಂದ ಸರಕಾರಿ ಉದ್ಯೋಗ ಸಿಗುತ್ತದೆ.ಕೃಷಿಕರಿಗೆ ಸರ್ಕಾರದಿಂದ ಸಹಾಯ,ಕಳೆದುಹೋದ ವಸ್ತುಗಳು ಮರಳಿ ಪಡೆಯುವಿರಿ,ಬೆಲೆಬಾಳುವ ವಸ್ತು ಹುಡುಕಾಟ,…

Read More

ದಾವಣಗೆರೆ:- ದೇಶದ್ರೋಹಿಗಳನ್ನ ಗುಂಡಿಕ್ಕಿ ಕೊಲ್ಲಬೇಕೆಂದ ಈಶ್ವರಪ್ಪಗೆ ಸಂಕಷ್ಟ ಎದುರಾಗಿದ್ದು, FIR ದಾಖಲಾಗಿದೆ. https://ainlivenews.com/the-two-mlas-clarified-the-issue-of-congress-for-jds-mlas-by-holding-a-press-conference/ ಹನುಮಂತಪ್ಪ ಎಂಬುವವರು ನೀಡಿದ ದೂರು ಆಧರಿಸಿ ಐಪಿಸಿ ಸೆಕ್ಷನ್​ 505(1)ಸಿ, 505(2), 506ರ ಅಡಿ ದಾವಣಗೆರೆಯ ಬಡಾವಣೆ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ. ಸಂಸದ ಡಿಕೆ ಸುರೇಶ್ ಹಾಗೂ ಶಾಸಕ ವಿನಯ್​ ಕುಲಕರ್ಣಿ ರೀತಿ ದೇಶದ್ರೋಹಿ ಹೇಳಿಕೆ ನೀಡಿದವರಿಗೆ ಗುಂಡಿಕ್ಕುವ ಕಾನೂನು ತನ್ನಿ ಎಂದು ಪ್ರಧಾನಿ ನರೇಂದ್ರ ಮೋದಿಗೆ ಕೆಎಸ್ ಈಶ್ವರಪ್ಪ ಆಗ್ರಹಿಸಿದ್ದರು. ಸದ್ಯ ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತಿದೆ. https://ainlivenews.com/sumalata-ambarish-joins-congress-gt-deve-gowda/

Read More

ಹುಬ್ಬಳ್ಳಿ; ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಇಂಗಳಗಿ ಹಾಗೂ ಹೀರೇಬೂದಿಹಾಳ ಗ್ರಾಮಗಳಲ್ಲಿ ಕಡೆಲೆ ಬೆಳೆ ಅಣೆವಾರಿ ಸಮೀಕ್ಷೆ ಮಾಡುವಲ್ಲಿ ಗ್ರಾಮ ಲೆಕ್ಕಾಧಿಕಾರಿ ಹಾಗೂ ಸಿಬ್ಬಂದಿ ವರ್ಗ ಸರಿಯಾಗಿ ಮಾಡಿಲ್ಲ ಕೂಡಲೇ ಇನ್ನೊಂದು ಸಲ ಆಣೇವಿಲೇವಾರಿ ಮಾಡಿ ನ್ಯಾಯ ಕೊಡಬೇಕು ಹಾಗೂ ನಿರ್ಲಕ್ಷ್ಯ ಮಾಡಿದ ಗ್ರಾಮ ಲೆಕ್ಕಾಧಿಕಾರಿ ಹಾಗೂ ವಿಮೆ ಕಂಪನಿಯ ಸಿಬ್ಬಂದಿ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಇಂಗಳಗಿ ಹಾಗೂ ಹಿರೇಬೂದಿಹಾಳ ಗ್ರಾಮಗಳ ರೈತರುಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ವತಿಯಿಂದಬೃಹತ್ ಪ್ರತಿಭಟನೆ ಮಾಡಿದರು. ನಗರದ ತಹಸ್ದೀಲಾರ ಕಚೇರಿ ಮುಂದೆ ಪ್ರತಿಭಟನೆ ಮಾಡಿ ಇಂಗಳಗಿ ಹಾಗೂ ಹಿರೇ ಬೂದಿಹಾಳ ಗ್ರಾಮದ ರೈತರಿಗೆ ಅನ್ಯಾಯ ಆಗಿದ್ದು ಕೂಡಲೇ ನ್ಯಾಯ ಕೊಡಬೇಕು ಎಂದು ತಹಸ್ದೀಲಾರ ಮೂಲಕ ಮುಖ್ಯಮಂತ್ರಿ ಹಾಗೂ ಕೃಷಿ ಸಚಿವರಿಗೆ ಮನವಿ ಮಾಡಿದರು. ಇಂಗಳಗಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರು ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಪ್ರಭುಗೌಡ ಸಂಕ್ಯಾಗೌಡಶ್ಯಾನಿ, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ…

Read More

ಬೆಂಗಳೂರು:- ಕರ್ನಾಟಕ ವಿಧಾನಪರಿಷತ್ ನ ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆ ಫೆಬ್ರವರಿ 14ರ ಸಂಜೆ 5ರಿಂದ 16ರ ಮಧ್ಯರಾತ್ರಿ 12 ಗಂಟೆವರೆಗೂ ಹಾಗೂ, ಫೆಬ್ರವರಿ 20ರ ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆವರೆಗೂ ಮಧ್ಯ ನಿಷೇಧ ಮಾಡಿ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ. ಪೊಲೀಸ್ ಆಯುಕ್ತರ ಆದೇಶದ ವಿರುದ್ಧ ಬೃಹತ್ ಬೆಂಗಳೂರು ಹೋಟೆಲ್ ಗಳ ಸಂಘ ಅಸಮಾಧಾನ ಹೊರ ಹಾಕಿದೆ. ನಾಲ್ಕು ದಿನ ಉದ್ಯಮ ಮುಚ್ಚಿದ್ದರೆ ಸುಮಾರು 450 ಕೋಟಿ ರೂಪಾಯಿ ಲಾಸ್ ಆಗಲಿದೆ. 14ರಂದು ಪ್ರೇಮಿಗಳ ದಿನ ಹಿನ್ನೆಲೆ ಈಗಾಗಲೇ ಸಕಲ ತಯಾರಿ ನಡೆದಿದೆ. ಕಾರ್ಮಿಕರ ಸಂಬಳ, ಕಟ್ಟಡ ಬಾಡಿಗೆ ಮುಂತಾದ ಖರ್ಚು ವೆಚ್ಚ ಸರಿದೂಗಿಸಲು ಕಷ್ಟವಾಗಲಿದೆ. ಅಂದಾಜು ಕೇವಲ 16 ಸಾವಿರ ಮತ ಚಲಾವಣೆ ಆಗುವ ಒಂದು ಕ್ಷೇತ್ರಕ್ಕೆ ನಾಲ್ಕು ದಿನ ಉದ್ಯಮ ಸ್ಥಗಿತ ಆದರೆ ಹೇಗೆ..? ಎಂದು ಪ್ರಶ್ನಿಸಿದ್ದಾರೆ. ಹೀಗಾಗಿ ಆದೇಶ ಪುನರ್ ಪರಿಶೀಲನೆ ಮಾಡುವಂತೆ ಪೊಲೀಸ್ ಆಯುಕ್ತರಿಗೆ ಹೋಟೆಲ್ ಗಳ ಸಂಘ ಪತ್ರ ಬರೆದಿದೆ.

Read More

ಹುಬ್ಬಳ್ಳಿ :- ಜೆಡಿಎಸ್ ಕೋರ್ ಕಮಿಟಿ ರಾಜ್ಯಾಧ್ಯಕ್ಷ ಜಿ.ಟಿ ದೇವೇಗೌಡ ಹೊಸ ಬಾಂಬ್‌ ಸಿಡಿಸಿದ್ದು, ಮಂಡ್ಯ ಸಂಸದೆ ಸುಮಲತಾ ಕಾಂಗ್ರೆಸ್ ಸೇರ್ತಾರೆ ಎಂದು ಹೇಳಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಗೆ ಸುಮಲತಾ ಅವರು ಬಿಜೆಪಿಯಿಂದ ಸ್ಪರ್ಧೆ ಮಾಡಿದ್ರೆ, ನಾವು ಬೆಂಬಲ ನೀಡುತ್ತೇವೆ. ಆದ್ರೆ ಅವರು ಕಾಂಗ್ರೆಸ್‌ ಸೇರುವ ಸಾಧ್ಯತೆಗಳಿವೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ ಸುಮಲತಾ ಕಾಂಗ್ರೆಸ್ ಸೇರಿದರೆ ನಮ್ಮ ಬೆಂಬಲ ಇಲ್ಲ. ಸುಮಲತಾ ಪರವಾಗಿ ಟಿಕೆಟ್ ಕೇಳಿದ ನಾರಾಯಣಗೌಡ ಇದೀಗ ಸಿದ್ದರಾಮಯ್ಯ ಮನೇಲಿ ಕೂತಿದ್ದಾರೆ. ಹೀಗಾಗಿ ಸುಮಲತಾ ಕಾಂಗ್ರೆಸ್‌ಗೆ ಹೋಗಬಹುದು ಎಂದು ಹೇಳಿದ್ದಾರೆ. ಇನ್ನೂ ಈ ಬಾರಿ ದೇವೇಗೌಡರ ಕುಟುಂಬದ ಇಬ್ಬರು ಸ್ಪರ್ಧೆ ಮಾಡ್ತಾರೆ. ಕುಮಾರಸ್ವಾಮಿ ಮತ್ತು ಪ್ರಜ್ವಲ್ ರೇವಣ್ಣ ಇಬ್ಬರು ಅಭ್ಯರ್ಥಿಗಳಾಗಬಹುದು. ಬಿಜೆಪಿ – ಜೆಡಿಎಸ್ ಮೈತ್ರಿಯಲ್ಲಿ ನಾವು 6 ರಿಂದ 8 ಕ್ಷೇತ್ರ ಕೇಳಿದ್ದೇವೆ ತುಮಕೂರು, ಹಾಸನ, ಮಂಡ್ಯ, ಮೈಸೂರು, ಕೋಲಾರ, ಬೆಂಗಳೂರು ಉತ್ತರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಕ್ಷೇತ್ರ ಕೇಳಿದ್ದೇವೆ ಎಂದು ತಿಳಿಸಿದ್ದಾರೆ.

Read More

ಕೋಲಾರ:- ಜೆಡಿಎಸ್ ನ ಇಬ್ಬರು ಶಾಸಕರು ಕಾಂಗ್ರೆಸ್ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಮಂಜುನಾಥ್ ಹೇಳಿಕೆಗೆ ಶಾಸಕ ಕೊತ್ತೂರು ಮಂಜುನಾಥ್ ಸ್ಫೋಟಕ ಹೇಳಿಕೆ ನೀಡಿದ್ದರು. ಶಾಸಕರಾದ ವೆಂಕಟಶಿವಾರೆಡ್ಡಿ ಮತ್ತು ಸಮೃದ್ದಿ ಮಂಜುನಾಥ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಯಾವುದೇ ಕಾರಣಕ್ಕೂ ಕಾಂಗ್ರೆಸ್​ ಸೇರಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಆದಿಯಾಗಿ ಯಾರೆಲ್ಲಾ ಆಹ್ವಾನ ನೀಡಿದ್ದಾರೋ ಅವರ ಹೆಸರನ್ನು ಬಹಿರಂಗಪಡಿಸಿದ್ದಾರೆ ಈ ಬಗ್ಗೆಕೋಲಾರದಲ್ಲಿ ಮಾತನಾಡಿದ ಮುಳಬಾಗಿಲು ಜೆಡಿಎಸ್​​ ಶಾಸಕ ಸಮೃದ್ಧಿ ಮಂಜುನಾಥ್​, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸೋತು ತೋಟದಲ್ಲಿ ಇದ್ದಾರೆ. ತೋಟದಲ್ಲಿ ಕುಳಿತು ಈ ಸ್ಕೆಚ್ ಹಾಕಿದ್ದಾರೆ. ಜೆಡಿಎಸ್​ನಿಂದ ಎಂಪಿ ಸ್ಪರ್ಧೆಗೆ ಆಫರ್ ಇದೆ, ಆದ್ರೆ ಫೈನಲ್ ಮಾಡಿಲ್ಲ. ಕಾಂಗ್ರೆಸ್ ಶಾಸಕರಾದ ಎಸ್.ಎನ್.ನಾರಾಯಣಸ್ವಾಮಿ, ನಂಜೇಗೌಡ, ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಸುರೇಶ್ ನನಗೆ ಆಹ್ವಾನ ನೀಡಿದ್ದಾರೆ. JDSನ 19 ಶಾಸಕರು ನೆಮ್ಮದಿಯಾಗಿ ಇದ್ದೇವೆ. ಸಿಎಂ ಹಾಗೂ ಡಿಕೆಶಿ ಕೂಡ ಪಕ್ಷ ಸೇರ್ಪಡೆಗೆ ನನಗೆ ಆಹ್ವಾನ ನೀಡಿದ್ದಾರೆ. ಮೂರ್ನಾಲ್ಕು ತಿಂಗಳ ಹಿಂದೆ ದೆಹಲಿಗೆ…

Read More

ಮೈಸೂರು:- ಮಾಂಸದೂಟ ಮಾಡಿ ಸುತ್ತೂರು ಮಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ವಿಚಾರವಾಗಿ ಹೆಚ್ ಸಿ ಮಹದೇವಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಬಿಜೆಪಿಯವರಿಗೆ ಜನರ ಮೂಲಭೂತ ಹಕ್ಕುಗಳ ಅರಿವಿಲ್ಲ. ಸಂವಿಧಾನದ ಆಶಯ ಗೊತ್ತಿಲ್ಲದವರು ಈ ರೀತಿ ಮಾತನಾಡುತ್ತಿದ್ದಾರೆ. ನಮಗೆ ಬಿಜೆಪಿಯವರೇನು ಕೋಳಿ ಕೂದಿದ್ರಾ?, ಮರಿ ಮಾಂಸ ತಂದಿದ್ರಾ? ಅಥವಾ ಲಿವರ್ ಫ್ರೈ ಮಾಡಿ ಕೊಟ್ಟಿದ್ರಾ ಎಂದು ಪ್ರಶ್ನಿಸಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಬಿಜೆಪಿಯವರು, ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡಬೇಕು. ಅದು ಬಿಟ್ಟು ಈ ರೀತಿ ಬೇಜವಾಬ್ದಾರಿಯುತ ಹೇಳಿಕೆ ನೀಡಬಾರದು ಎಂದು ವಾಗ್ದಾಳಿ ನಡೆಸಿದರು. ಇನ್ನೂ ನಮ್ಮ ತೆರಿಗೆ ನಮ್ಮ ಹಕ್ಕು ಎಂದು ಕೇಂದ್ರದ ವಿರುದ್ಧ ರಾಜ್ಯ ಸರ್ಕಾರದ ಪ್ರತಿಭಟನೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಭಾಗಿಯಾಗಿ, ಬಳಿಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜು ಖರ್ಗೆ ಅವರ ನಿವಾಸದಲ್ಲಿ ಆಯೋಜಿಸಲಾಗಿದ್ದ ಭೋಜನಕೂಟದಲ್ಲಿ ಮಾಂಸದ ಊಟ ಮಾಡಿ, ನಂತರ ನೇರವಾಗಿ ದೆಹಲಿಯಿಂದ ಮೈಸೂರಿಗೆ ಬಂದ ಸಿಎಂ, ಅಲ್ಲಿಂದ ಹೆಲಿಕಾಪ್ಟರ್​ ಮೂಲಕ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿ ನಡೆದ…

Read More

ಬೆಳಗಾವಿ:- ಹೌದು ಇಲ್ಲಿ ಯಾವುದೇ ಮುಂಜಾಗ್ರತೆ ಕ್ರಮ ಇಲ್ಲದೇ ಹಾವು ಹಿಡಯಲು ಹರಸಾಹಸ ಪಡುತ್ತಿರುವ ತಾಂವಶಿ ಗ್ರಾಮದ ಯುವಕ.. ಕಡಲೆ ರಾಶಿ ಮಾಡುತ್ತಿರುವ ವೇಳೆಯಲ್ಲಿ ಹೊಲದಲ್ಲಿ ಹಾವು ಪ್ರತಕ್ಷವಾಗಿದೆ.. ಯಾವುದೇ ಮುಂಜಾಗ್ರತೆ ಕ್ರಮ ಇಲ್ಲದೇ ಹಾವು ಹಿಡಿಯಲು ಹುಚ್ಚಾಟ ಮಾಡುತ್ತಿರುವ ಯುವಕನ ಸಾಹಸಕ್ಕೆ ನೋಡುಗರು ದಂಗಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಕಾಗವಾಡ ವ್ಯಾಪ್ತಿಯ ತಾಂವಶಿ ಗ್ರಾಮದ ಯುವಕ ಮಹೇಶ ಅಥಣಿ ಎಂಬಾತ ಹಾವು ಹಿಡಿಯುವ ವಿದ್ಯೆ ಕಲಿಯದೇ ಹಾವು ಹಿಡಿಯುವ ಹುಚ್ಚಾಟ ಮೆರೆದಿದ್ದಾನೆ.

Read More

ಬೆಂಗಳೂರು:- ಪೌರ ಕಾರ್ಮಿಕರಿಗೆ ನಿವೇಶನ ನೀಡುವ ಸುದ್ದಿ ಸತ್ಯಕ್ಕೆ ದೂರವಾದದ್ದು ಎನ್ನುವುದನ್ನು ಬಿಬಿಎಂಪಿ ಸ್ಪಷ್ಟಪಡಿಸಿದೆ. ಇದೊಂದು ಮೋಸದ ಜಾಲವಾಗಿದ್ದು ಯಾರೂ ಈ ಮೋಸದ ಬಲೆಗೆ ಬೀಳಬಾರದು ಎಂದು ಪಾಲಿಕೆ ಮನವಿ ಮಾಡಿದೆ. ಬಿವಿಎಂಪಿ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಪಾಲಿಕೆ ವತಿಯಿಂದ ನಿವೇಶನ ದೊರಕಿಸಿಕೊಡುವುದಾಗಿ ಅಪಪ್ರಚಾರ ನಡೆಸುವ ಕೆಲಸ ಕೆಲವು ದಿನಗಳಿಂದ ನಡೆದಿದೆ. ಈ ಬಗ್ಗೆ ಇದೀಗ ಬಿಬಿಎಂಪಿ ಸ್ಪಷ್ಟನೆ ನೀಡಿದೆ. ಮನೆ ದೊರಕಿಸಿಕೊಡುವ ನೆಪದಲ್ಲಿ ಹಣ ವಸೂಲಿ ಮಾಡುತ್ತಿರುವ ಪ್ರಕರಣ ಬಗ್ಗೆ ಪಾಲಿಕೆ ತನ್ನ ಹೇಳಿಕೆ ಬಿಡುಗಡೆ ಮಾಡಿದೆ. ಇದು ಅನಾಮಧೇಯ ವ್ಯಕ್ತಿಗಳು ಪಾಲಿಕೆಯ ಹೆಸರನ್ನು ದುರ್ಬಳಕೆ ಮಾಡಿಕೊಂಡು ಈ ರೀತಿ ಮಾಡುತ್ತಿದ್ದಾರೆ ಎನ್ನುವುದನ್ನು ಸ್ಪಷ್ಟವಾಗಿ ಹೇಳಿದೆ. https://ainlivenews.com/gadag-james-hospital-is-now-a-reel-spot/ ಪೌರಕಾರ್ಮಿಕರಿಗೆ ಪಾಲಿಕೆ ವತಿಯಿಂದ ಯಾವುದೇ ನಿವೇಶನಗಳನ್ನು ನೀಡುವ ಯೋಜನೆಯನ್ನು ಪ್ರಸ್ತುತ ಕೈಗೆತ್ತಿಕೊಂಡಿಲ್ಲ ಎನ್ನುವುದನ್ನು ಬಿಬಿಎಂಪಿ ಹೇಳಿಕೆ ಮೂಲಕ ಸ್ಪಷ್ಟಪಡಿಸಿದೆ. ನಿವೇಶನ ಹಂಚಿಕೆ ಕುರಿತು ಪಾಲಿಕೆಯಿಂದ ಯಾವುದೇ ಅಧಿಕೃತವಾಗಿ ಅಧಿಸೂಚನೆ ಹೊರಡಿಸಲಾಗಿರುವುದಿಲ್ಲ ಎಂದು ಪಾಲಿಕೆ ತಿಳಿಸಿದೆ. ಇಂತಹ ಯಾವುದೇ ಆಮಿಷಗಳಿಗೆ/ಸುಳ್ಳು…

Read More