Author: AIN Author

ಕಲಬುರಗಿ: ಕಲ್ಯಾಣ ಕರ್ನಾಟಕದ ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರ ಎಂದೇ ಹೆಸರಾಗಿರುವ ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ನಾಲವಾರದ ಶ್ರೀ ಕೋರಿಸಿದ್ದೇಶ್ವರನ ಮಠದಲ್ಲಿ ತನಾರತಿ ಉತ್ಸವ ಜೋರಾಗಿ ನಡೆಯಿತು.. ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಸಲ್ಲಿಸುವ ಭಕ್ತರು ಅವತ್ರಮಾಸೆಯ ದಿನ ಬಂದು ತಲೆ ಮೇಲೆ ಆರತಿ ಹೊತ್ತು ಐದು ಸುತ್ತು ಪ್ರದಕ್ಷಿಣೆ ಹಾಕುತ್ತಾರೆ. ಈ ಪದ್ದತಿಗೆ ತನುವಿನ ಆರತಿ ಅಂದ್ರೆ ತನಾರತಿ ಅಂತ ಕರೆಯುತ್ತಾರೆ.. ಈ ಉತ್ಸವಕ್ಕೆ ಮಠದ ಪೀಠಾಧಿಪತಿ ಶ್ರೀ ತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಚಾಲನೆ ನೀಡಿದ್ರು.ಹೀಗೆ ಅಮವಾಸೆ ದಿನ ದೀಪೋತ್ಸವ ಮರುದಿನ ರಥೋತ್ಸವ ನಡೆಯುವುದು ಸಂಪ್ರದಾಯ.. ಇಂತಹ ಭಕ್ತಿಭಾವದ ಜಾತ್ರೆಗೆ ಅಪಾರ ಜನಸ್ತೋಮ ಸಾಕ್ಷಿಯಾಗೋದು  ವಿಶೇಷ..

Read More

ಧಾರವಾಡ: ಕಳೆದ ಐದಾರು ದಿನಗಳಿಂದ ವಿದ್ಯಾಕಾಶಿಯಲ್ಲಿ ನಡೆದ ಹತ್ಯೆ ಪ್ರಕರಣಗಳಿಂದ ಬೆಚ್ಚಿಬಿದ್ದ ಧಾರವಾಡ ಜನತೆಗೆ ಧೈರ್ಯ ಹೇಳುವ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿಗಳು ನೈಟ್ ಗಸ್ತು ಹೆಚ್ಚು ಮಾಡಿದ್ದು, ಈ ವೇಳೆ ವಿವಿಧ ಹುದ್ದೆಗಳಿಗೆ ಧಾರವಾಡದಲ್ಲಿ ತರಭೇತಿ ಪಡೆಯಲು ಬಂದಿದ್ದ ಯುವಕರಿಗೆ ಪೊಲೀಸ್ ಅಧಿಕಾರಿಗಳು ಜನರಲ್ ನಾಲೆಡ್ಜ್ ಪಾಠ ಮಾಡಿದ್ದಾರೆ. ನಗರದ ಸಪ್ತಾಪುರ ಬಳಿ ಗಸ್ತಿಗಾಗಿ ಬಂದಿದ್ದ ಉಪನಗರ ಪೊಲೀಸ್‌ ಠಾಣೆಯ ಸಿಪಿಐ ದಯಾನಂದ ಶೆಗುಣಸಿ ಅವರು ವಿವಿಧ ಹುದ್ದೆಗಳ ತರಬೇತಿಗೆ ಬಂದಿದ್ದ ಯುವಕರಿಗೆ ಕರೆಂಟ್ ಅಫೇರ್ಸ್ ಜೊತೆಗೆ ಸಾಮನ್ಯ ಜ್ಞಾನದ ಬಗ್ಗೆ ತಿಳಿ ಹೇಳಿ ಮಾದರಿಯಾಗಿದ್ದಾರೆ. ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ ಸೂಚನೆ ಮೇರೆಗೆ ಕಳೆದ ಶುಕ್ರವಾರದಿಂದ ನಗರದಲ್ಲಿ ಪೊಲೀಸರು ಗಸ್ತು ಹೆಚ್ಚು ಮಾಡಿದ್ದು, ಬ್ಯೂಸಿ ಸೆಡ್ಯೂಲ್ ನಡುವೆಯೂ ಯುವಕರಿಗೆ ಓದಿನ ಕುರಿತು ಹಾಗೂ ಪರೀಕ್ಷೆ ತಯಾರಿ ಕುರಿತು ಕೆಲವು ಟಿಪ್ಸ್‌ಗಳನ್ನು ನೀಡಿ ಯುಥ್ ಪ್ರಂಡ್ಲಿ ಪೊಲೀಸ್ ಅಧಿಕಾರಿಯಾಗಿದ್ದಾರೆ. ಇನ್ನೂ ಯುವಕರು ಕೂಡಾ ಪೊಲೀಸ್ ಅಧಿಕಾರಿ ದಯಾನಂದವರ…

Read More

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಚುನಾವಣೆಯಲ್ಲಿ ಸ್ಪರ್ಧಿಸಲು ತಮ್ಮ ಪುತ್ರ ಮೃಣಾಲ್ ಅವರಿಗೆ ಟಿಕೆಟ್ ನೀಡಬೇಕೆಂದು ನಾನು ಹೇಳಿಲ್ಲ. ಆದರೆ, ಕ್ಷೇತ್ರದ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ. ಗೆಲುವಿನ ಸಾಮರ್ಥ್ಯದ ಮಾನದಂಡದ ಮೇಲೆ ಅಭ್ಯರ್ಥಿ ಆಯ್ಕೆಯಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ” ತಮ್ಮ ಪುತ್ರ ಮೃಣಾಲ್ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವುದು ಅಥವಾ ಬಿಡುವುದು ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ. ಈ ಹಿಂದೆ ನನ್ನ ತಮ್ಮ ಚನ್ನರಾಜ ಹಟ್ಟಿಹೊಳಿಯವರು ಎಂಎಲ್ಸಿ ಆಗುವ ವೇಳೆಯಲ್ಲೂ ಜಿಲ್ಲೆಯ ಮುಖಂಡರು ಹಾಗೂ ಜನರ ಒತ್ತಾಸೆ ಇತ್ತು ” ಎಂದು ಹೇಳಿದರು. https://ainlivenews.com/what-is-the-meaning-of-which-color-teddy-bear-doll-here-is-the-information/ ” ಈಗಲೂ ಜಿಲ್ಲೆಯ ಜನರ ಅಪೇಕ್ಷೆಯಂತೆ, ಎಲ್ಲಾ ಸಮುದಾಯಗಳ ಮುಖಂಡರು, ತಮ್ಮ ಪುತ್ರ ಸ್ಪರ್ಧಿಸಬೇಕೆಂದು ಅಪೇಕ್ಷೆ ಪಡುತ್ತಿದ್ದಾರೆ. ಆದರೆ, ಅಂತಿಮವಾಗಿ ಹೈಕಮಾಂಡ್ ಯಾವ ನಿರ್ಧಾರ ಕೈಗೊಳ್ಳುತ್ತದೆಯೋ ಗೊತ್ತಿಲ್ಲ. ಹೈಕಮಾಂಡ್ ನಿರ್ಧಾರಕ್ಕೆ ನಾವೆಲ್ಲ ತಲೆಬಾಗುತ್ತೇವೆ ” ಎಂದರು.

Read More

ಮುಂಬೈ: ಟೀಂ ಇಂಡಿಯಾ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್ ಪತ್ನಿ ಸಫಾ ಬೇಗಂ ಜತೆ 8ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡು ಭಾವನಾತ್ಮಕ ಪೋಸ್ಟ್ ಹಾಕಿದ್ದಾರೆ. ಈ ಪೋಸ್ಟ್ ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಇದೇ ಮೊದಲ ಬಾರಿಗೆ ತಮ್ಮ ಪತ್ನಿಯ ಮುಖವನ್ನು ಅನಾವರಣ ಮಾಡಿರುವ ಇರ್ಫಾನ್ ಪಠಾಣ್, “ಎಲ್ಲಾ ಪಾತ್ರಗಳನ್ನು ಕರಗತಮಾಡಿಕೊಂಡಿರುವ ಒಂದು ಆತ್ಮ. ನನ್ನ ಮೂಡ್ ಬೂಸ್ಟರ್, ಕಾಮಿಡಿಯನ್, ಕೀಟಲೆ ಮಾಡುವ, ನಿರಂತರ ಒಡನಾಡಿ ಹಾಗೂ ನನ್ನ ಮುದ್ದು ಮಕ್ಕಳ ತಾಯಿ. ಈ ಅದ್ಭುತ ಪಯಣದಲ್ಲಿ ಹಲವು ಅವಿಸ್ಮರಣೀಯ ನೆನಪುಗಳನ್ನು ಕಟ್ಟಿಕೊಟ್ಟ ನನ್ನ ಪ್ರೀತಿಯ ಮಡದಿಗೆ 8ನೇ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಎಂದು ಇರ್ಫಾನ್ ಪಠಾಣ್ ಬರೆದುಕೊಂಡಿದ್ದಾರೆ.  https://ainlivenews.com/what-is-the-meaning-of-which-color-teddy-bear-doll-here-is-the-information/ ಹಲವು ಮಾಧ್ಯಮಗಳ ವರದಿಯ ಪ್ರಕಾರ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ವೀಕ್ಷಕವಿವರಣೆಗಾರನಾಗಿ ಗಮನ ಸೆಳೆಯುತ್ತಿರುವ ಇರ್ಫಾನ್ ಪಠಾಣ್ ಇದೇ ಮೊದಲ ಬಾರಿಗೆ ತಮ್ಮ ಪತ್ನಿಯ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಅನಾವರಣ ಮಾಡಿದ್ದಾರೆ. ಈ ಹಿಂದೆ ಇರ್ಫಾನ್ ಪಠಾಣ್…

Read More

ಬೆಂಗಳೂರು: ಈ ವರ್ಷದ ಸಾಲು ಸಾಲು ಪರೀಕ್ಷೆಗೆ ಮಕ್ಕಳು ಸಿದ್ಧತೆ ನಡೆಸುತ್ತಿದ್ದಾರೆ.. ಸತತವಾಗಿ ಓದುವ ಕಾರಣದಿಂದ ಮಕ್ಕಳಿಗ ತಲೆ ನೋವು, ದೃಷ್ಟಿ ಸಮಸ್ಯೆ, ಕಣ್ಣಿನ ಸಮಸ್ಯೆ ಹೆಚ್ಚಾಗಿ ಕಾಣ ಬರುತ್ತಿದೆ ಎಂದು ವರದಿಯಾಗಿದೆ.. ಈ ಸಮಸ್ಯೆಗಳನ್ನು ಪೋಷಕರು ಯಾವ ರೀತಿಯಲ್ಲಿ ಎದುರಿಸಬಹುದೆಂದು ತಜ್ಞರು ಸೂಚಿಸಿದ್ದಾರೆ. ಹಾಗಿದ್ದರೆ ಏನೆಲ್ಲಾ ಮಾಹಿತಿ ನೀಡಿದ್ದಾರೆ ಎಂದು ನೋಡೋಣ ಬನ್ನಿ.. ಸಾಲು ಸಾಲು ಪರೀಕ್ಷೆಗಳು ಬರುವ ಹೊತ್ತಲ್ಲೇ ಮಕ್ಕಳಲ್ಲಿ ಕಣ್ಣಿನ ಸಮಸ್ಯೆ ಕಾಣಿಸಿಕೊಂಡಿದೆ. ಸಿಲಿಕಾನ್ ಸಿಟಿ ಬೆಂಗಳೂರಿನ ಮಕ್ಕಳಲ್ಲಿ ಇತ್ತೀಚೆಗೆ ಹೆಚ್ಚಾಗಿ ಕಣ್ಣಿನ ಸಮಸ್ಯೆಗಳು ಕಂಡು ಬರುತ್ತಿವೆ. ಇದರಿಂದ ಪೋಷಕರಲ್ಲಿ ಆತಂಕ ಉಂಟಾಗಿದೆ. ಪರೀಕ್ಷೆ ಸಮಯದಲ್ಲಿ ಮಕ್ಕಳು ಕಣ್ಣಿನ ಸಮಸ್ಯೆಗಳನ್ನು ಎದುರಿಸುತ್ತಿದ್ದು ಕಲಿಕೆ ಮೇಲೆ ಪ್ರಭಾವ ಬೀಳುತ್ತಿದೆ. ಈ ಹಿನ್ನಲೆ ಪರೀಕ್ಷೆಯ ಸಮಯದಲ್ಲಿ ಮಕ್ಕಳು ಎದುರಿಸುವ, ದೃಷ್ಟಿಗೆ ಸಂಬಂಧಿಸಿದ ಸವಾಲುಗಳ ತಜ್ಞರು ಸಲಹೆ ನೀಡಿದ್ದಾರೆ.. https://ainlivenews.com/what-is-the-meaning-of-which-color-teddy-bear-doll-here-is-the-information/ ಕಣ್ಣಿನ ಚಿಕಿತ್ಸೆಗೆ ಬರುವ ಮಕ್ಕಳಲ್ಲಿ SSLC & PUC ಮಕ್ಕಳೇ ಹೆಚ್ಚು. ದಿನಕ್ಕೆ 8 ರಿಂದ 10 SSLC ಮತ್ತು…

Read More

ನವದೆಹಲಿ: ಇಂದಿನ ಲೋಕಸಭೆ ಮತ್ತು ರಾಜ್ಯಸಭಾ ಕಲಾಪಕ್ಕೆ ಕಡ್ಡಾಯವಾಗಿ ಹಾಜರಾಗುವಂತೆ ಬಿಜೆಪಿ (BJP) ಸದಸ್ಯರಿಗೆ ವಿಪ್ (Whip) ಜಾರಿ ಮಾಡಲಾಗಿದೆ. ಅಯೋಧ್ಯೆಯ ರಾಮಮಂದಿರ (Ayodhya Ram Mandir) ನಿರ್ಮಿಸಿದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಅಭಿನಂದಿಸಿ ಸಂಸತ್ತಿನ ಉಭಯ ಸದನಗಳು ನಿರ್ಣಯ ಅಂಗೀಕರಿಸಲಿವೆ. ಬಿಜೆಪಿ ಸಂಸದ ಸತ್ಯಪಾಲ್‌ ಸಿಂಗ್‌ ಮತ್ತು ಶಿವಸೇನೆ ಸಂಸದ ಶ್ರೀಕಾಂತ್‌ ಅವರು ರಾಮಮಂದಿರದ ಬಗ್ಗೆ ಚರ್ಚೆ ಆರಂಭಿಸಲಿದ್ದಾರೆ. ವಿರೋಧ ಪಕ್ಷಗಳು ಈ ಚರ್ಚೆಗೆ ಹೇಗೆ ಪ್ರತಿಕ್ರಿಯಿಸಲಿದೆ ಎನ್ನುವುದು ಸದ್ಯದ ಕುತೂಹಲ. ರಾಮನು ಭಾರತದ ಸಂಕೇತ, ರಾಮ ಭಾರತದ ಸಂಸ್ಕೃತಿಯ ಪ್ರತೀಕ, ರಾಮ ಏಕ ಭಾರತ ಶ್ರೇಷ್ಠ ಭಾರತದ ಪ್ರತೀಕ ಎಂಬ ನಿರ್ಣಯಗಳು ಅಂಗೀಕಾರವಾಗುವ ಸಾಧ್ಯತೆ ಇದೆ. https://ainlivenews.com/what-is-the-meaning-of-which-color-teddy-bear-doll-here-is-the-information/ ಯುಪಿಎ (UPA) ಅವಧಿ ಆರ್ಥಿಕ ವೈಫಲ್ಯದ ಬಗ್ಗೆ ನಿರ್ಮಲಾ ಸೀತಾರಾಮನ್‌ ಲೋಕಸಭೆಯಲ್ಲಿ ಮಂಡಿಸಿದ ಶ್ವೇತ ಪತ್ರದ (White Paper) ಬಗ್ಗೆ ಇಂದು ರಾಜ್ಯಸಭೆಯಲ್ಲಿ ಚರ್ಚೆ ನಡೆಯಲಿದೆ. ಶುಕ್ರವಾರ ಅಂತ್ಯವಾಗಬೇಕಿದ್ದ ಬಜೆಟ್ ಅಧಿವೇಶನವನ್ನು ಕೇಂದ್ರ ಸರ್ಕಾರ ಒಂದು…

Read More

ಕಲಬುರ್ಗಿ:- ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ಮಾಡುತ್ತಿದ್ದ ಲಾರಿ ಪತ್ತೆ ಮಾಡುವಲ್ಲಿ ಕಲಬುರಗಿ ಪೋಲೀಸರು ಸಕ್ಸಸ್ ಆಗಿದ್ದಾರೆ. ಆಳಂದ ತಾಲೂಕಿನ‌ ಖಜೂರಿ ಗಡಿಯಲ್ಲಿ ದಾಳಿ ಮಾಡಿದ ಪೋಲೀಸರು ಅಕ್ಕಿ ಸಮೇತ ಲಾರಿ ಹಿಡಿದಿದ್ದಾರೆ. ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಲಾಗಿದೆ. ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಸುಮಾರು 20 ಕ್ಕೂ ಅಧಿಕ ಟನ್ ಪಡಿತರ ಅಕ್ಕಿ ವಶಪಡಿಸಿ ಕೇಸ್ ದಾಖಲಿಸಿದ್ದಾರೆ.

Read More

ತುಮಕೂರು:- ಮಾರಕಾಸ್ತ್ರಗಳಿಂದ ಕೊಚ್ಚಿ ಅತಿಥಿ ಶಿಕ್ಷಕನ ಭೀಕರ ಕೊಲೆ ನಡೆದಿರುವ ಘಟನೆ ಜಿಲ್ಲೆ ಕುಣಿಗಲ್ ತಾಲ್ಲೂಕಿನ ಹೇರೂರು ಗ್ರಾಮದಲ್ಲಿ ಜರುಗಿದೆ. 47 ವರ್ಷದ ಮರಿಯಪ್ಪ ಕೊಲೆಯಾದ ಅತಿಥಿ ಶಿಕ್ಷಕ ಎನ್ನಲಾಗಿದೆ. ಕುಣಿಗಲ್ ತಾಲ್ಲೂಕಿನ ಕಸಬಾ ಹೋಬಳಿಯ ಕುಳ್ಳಿನಂಜಯ್ಯಪಾಳ್ಯದ ನಿವಾಸಿಯಾಗಿದ್ದ ಮರಿಯಪ್ಪ, ಮೋದೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅತಿಥಿ ಶಿಕ್ಷಕನಾಗಿ ಕೆಲಸ ನಿರ್ವಹಿಸುತ್ತಿದ್ದ. ಇಂದು ಬೆಳಗ್ಗಿನಜಾವ ಯಾರೋ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೈ ಕತ್ತರಿಸಿ ಕೊಲೆ ಮಾಡಿದ್ದಾರೆ. ತಲೆಭಾಗಕ್ಕೆ ಬಲವಾಗಿ ಹೊಡೆದು ಭೀಕರ ಕೊಲೆ ಮಾಡಲಾಗಿದೆ. ಸ್ಥಳಕ್ಕೆ ಎಎಸ್ ಪಿ ಮರಿಯಪ್ಪ, ಕುಣಿಗಲ್ ಡಿವೈಎಸ್ ಪಿ ಓ‌ಂಪ್ರಕಾಶ್ ಹಾಗೂ ಇನ್ಸ್ಪೆಕ್ಟರ್ ನವೀನ್ ಗೌಡ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಘಟನೆ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕುಣಿಗಲ್ ಪೊಲೀಸರಿಂದ ತನಿಖೆ ಮುಂದುವರಿದಿದೆ.

Read More

ಕೊಪ್ಪಳ:- ರಾಜ್ಯದಲ್ಲಿ ಅವಧಿಗೂ ಮೊದಲೇ ಬೇಸಿಗೆ ಆರಂಭವಾಗಿದೆ. ಅದರಲ್ಲೂ ಬಿಸಿಲನಾಡು ಅಂತ ಕರೆಸಿಕೊಳ್ಳುವ ಕೊಪ್ಪಳ ಜಿಲ್ಲೆಯಲ್ಲಿ ಬೇಸಿಗೆಯ ಬಿಸಿಲು ಈಗಾಗಲೇ ನೆತ್ತಿ ಸುಡುತ್ತಿದೆ. ಇನ್ನು ಬೇಸಿಗೆ ಆರಂಭಕ್ಕೆ ಮುನ್ನವೇ ಕೊಳವೆ ಬಾವಿಗಳು ಬತ್ತಿಹೋಗಿವೆ. ಹೀಗಾಗಿ ರೈತರು ಬೆಳೆ ಉಳಿಸಿಕೊಳ್ಳಲು ಇದೀಗ ಪ್ರತಿನಿತ್ಯ ಸಾವಿರಾರು ರೂಪಾಯಿ ಖರ್ಚು ಮಾಡಿ, ಟ್ಯಾಂಕರ್ ನೀರಿನ ಮೊರೆ ಹೋಗುತ್ತಿದ್ದಾರೆ. https://ainlivenews.com/mlas-house-was-raided-in-the-early-morning-on-4-sides-inspection/#google_vignette ಅಡವಿಬಾವಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ರೈತರು ಕೃಷಿಗಾಗಿ ಕೊರೆಸಿದ್ದ ಕೊಳವೆಬಾವಿಗಳು ಬೇಸಿಗೆ ಆರಂಭದಲ್ಲಿಯೇ ಬತ್ತಿವೆ. ನಾಲ್ಕಾರು ಹೊಸ ಬೋರವೆಲ್ ಕೊರಿಸಿದ್ರು ಕೂಡಾ ಎಲ್ಲಿಯೂ ನೀರು ಬರ್ತಿಲ್ಲಾ. ಇದು ರೈತರ ಆತಂಕವನ್ನು ಹೆಚ್ಚಿಸಿದೆ. ಯಾಕಂದ್ರೆ ಅಡವಿಬಾವಿ ಸೇರಿದಂತೆ ಸುತ್ತಮುತ್ತಲಿನ ನೂರಾರು ರೈತರು ದ್ರಾಕ್ಷಿ ಬೆಳೆಯನ್ನು ಬೆಳೆದಿದ್ದಾರೆ. https://ainlivenews.com/bangaloreans-ask-here-from-now-on-helmets-are-mandatory-for-even-6-year-old-children/ ಇದೀಗ ದ್ರಾಕ್ಷಿ ಕಾಯಿಯಾಗಿದ್ದು, ಹಣ್ಣಾಗುವ ಹಂತದಲ್ಲಿದೆ. ಈ ಸಮಯದಲ್ಲಿ ದ್ರಾಕ್ಷಿಗೆ ಚೆನ್ನಾಗಿ ನೀರು ಬಿಟ್ಟರೆ, ಉತ್ತಮವಾದ ಫಸಲು ಬರುತ್ತದೆ. ಆದ್ರೆ ಇದೇ ಸಮಯದಲ್ಲಿ ಕೊಳವೆಬಾವಿಗಳು ಬತ್ತಿರುವುದರಿಂದ, ದ್ರಾಕ್ಷಿ ಬೆಳೆಗೆ ನಿಗದಿತ ಪ್ರಮಾಣದಲ್ಲಿ ನೀರು ಪೂರೈಕೆ ಮಾಡಲಿಕ್ಕಾಗದೇ ರೈತರು ಪರದಾಡುತ್ತಿದ್ದಾರೆ.…

Read More

ಬಳ್ಳಾರಿ :- ಇಲ್ಲಿನ ಶಾಸಕರ ಮನೆ ಸೇರಿದಂತೆ 4 ಕಡೆ ಬೆಳ್ಳಂಬೆಳಗ್ಗೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರಿನಿಂದ ಹತ್ತಾರು ಅಧಿಕಾರಿಗಳು, ಸಿಬ್ಬಂದಿ ತಂಡ, ಆಗಮಿಸಿ ಬೆಳಿಗ್ಗೆ 6.30ಯಿಂದ ನಾಲ್ಕು ಕಡೆ ಏಕಾಏಕಿ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರಿನ ಪಾಸಿಂಗ್ ವಾಹನಗಳಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಹಿಂದೆ ಹುಟ್ಟು ಹಬ್ಬದ ದಿನದಂದು ಇಡೀ ಬಳ್ಳಾರಿ ನಗರದ ಮನೆ ಮನೆಗೆ ಕುಕ್ಕರ್ ಶಾಸಕ ಭರತ ರೆಡ್ಡಿ ನೀಡಿದ್ದರು. ಚುನಾವಣೆಗೂ‌ ಮುನ್ನ ನೀಡಿದ ಕುಕ್ಕರ್ ಸಾಕಷ್ಟು ಸದ್ದು ಮಾಡಿತ್ತು. https://ainlivenews.com/bangaloreans-ask-here-from-now-on-helmets-are-mandatory-for-even-6-year-old-children/ ತಾಲ್ಲೂಕಿನ ತಳಕು ಹೋಬಳಿಯ ಓಳಾಪುರ ಗ್ರಾಮದ ಕೆ.ಜಿ.ಜಯಣ್ಣ ಮತ್ತು ಸಹೋದರರು ತಮ್ಮ ಜಮೀನಿನ ಪಹಣ ಮತ್ತು ಇತರೆ ದಾಖಲಾತಿಗಳನ್ನು ಸಿದ್ಧ ಪಡಿಸಿಕೊಡುವಂತೆ ತಾಲ್ಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕ ಗಂಗಯ್ಯ ಹದಿನೈದು ಸಾವಿರ ಲಂಚ ಕೇಳಿದ್ದು, ಆಪೈಕಿ ಹತ್ತು ಸಾವಿರವನ್ನು ಕಾರಿನ ಚಾಲಕ ಕಿರಣ್ ಮೂಲಕ ಪಡೆಯುವ ಸಂದರ್ಭದಲ್ಲಿ ಲೋಕಾಯುಕ್ತ ದಾಳಿಗೆ ಒಳಗಾಗಿದ್ದಾರೆ. https://ainlivenews.com/the-life-of-the-old-lives-in-the-poverty-stricken-derelict-house/ ಜಿಲ್ಲಾ ಲೋಕಾಯುಕ್ತ…

Read More