Author: AIN Author

ದಾವಣಗೆರೆ: ರಾಜ್ಯದಲ್ಲಿ ವಾಲ್ಮೀಕಿ ವಿಶ್ವವಿದ್ಯಾಲಯ ಆಗಲೇಬೇಕು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದ್ದಾರೆ. ವಾಲ್ಮೀಕಿ ಸಮಾಜಕ್ಕೆ ಮೀಸಲಾತಿ ಹೆಚ್ಚಳ ಮಾಡುವುದರ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ದೇಶದಲ್ಲಿ ವರ್ಣಾಶ್ರಮ ಪದ್ದತಿ ಇದೆ. ದೇಶದಲ್ಲಿ ಸಮಾನತೆ ಪ್ರತಿಪಾದನೆ ಮಾಡಿದ್ರು. ಆದರೆ ಜಾತಿ ವ್ಯವಸ್ಥೆ ಮಾತ್ರ ಜೀವಂತವಾಗಿದೆ. ವಾಲ್ಮೀಕಿ ಸಮಾಜ ದೇಶದಲ್ಲಿ ದೊಡ್ಡ ಸಮಾಜವಾಗಿದೆ ಎಂದಿದ್ದಾರೆ. https://ainlivenews.com/do-you-know-drinking-raw-milk-is-very-dangerous-for-health/ ಆಂಧ್ರಪ್ರದೇಶ ಮತ್ತು ಪಂಜಾಬ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಲ್ಮೀಕಿ ಸಮಾಜ ಇದೆ. ವಾಲ್ಮೀಕಿ ಸಮಾಜಕ್ಕೆ ಮೀಸಲಾತಿ ಹೆಚ್ಚಳ ಮಾಡುವ ವಿಚಾರದಲ್ಲಿ ಆಗಿನ ಸಿಎಂ ಕುಮಾರಸ್ವಾಮಿ ನಿರೀಕ್ಷಿತ ಪ್ರಮಾಣದಲ್ಲಿ ಸ್ಪಂದಿಸಲಿಲ್ಲ. ರಾಜ್ಯದಲ್ಲಿ ವಾಲ್ಮೀಕಿ ವಿಶ್ವವಿದ್ಯಾಲಯ ಆಗಲೇಬೇಕು. ವಾಲ್ಮೀಕಿ ಸಮಾಜಕ್ಕೆ ಅಲ್ಲ ರಾಜ್ಯಕ್ಕೆ ವಾಲ್ಮೀಕಿ ವಿವಿ ಸ್ಥಾಪನೆಗೆ ಬಜೆಟ್‌ನಲ್ಲಿ ಘೋಷಣೆ ಮಾಡಬೇಕು. ಸಿಎಂ ಸಿದ್ದರಾಮಯ್ಯ ಈ ಕೆಲಸ ಮಾಡದೇ ಇದ್ರೆ, ಯಾರು ಕೂಡಾ ಮಾಡಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

Read More

ಬೆಂಗಳೂರು:  ವಾಹನ ಮಾಲೀಕರಿಗೆ ಪೊಲೀಸ್‌ ಇಲಾಖೆ ಶಾಕಿಂಗ್‌ ಸುದ್ದಿ ಕೊಟ್ಟಿದೆ. ನಿರಂತರವಾಗಿ ನಿಯಮ ಉಲ್ಲಂಘಿಸಿ 50,000 ರೂ. ವರೆಗೆ ಫೈನ್‌ ಇದ್ದರೆ, ಅಂಥವರ ಮನೆಗೆ ತೆರಳಿ ಪೊಲೀಸರು ದಂಡ ವಸೂಲಿ ಮಾಡಲಿದ್ದಾರೆ. ಕೆಲವರಿಗೆ ಹೆಲ್ಮೆಟ್ ಎಂದರೆ ಅಲರ್ಜಿ. ಸಿಗ್ನಲ್ ಜಂಪ್, ತ್ರಿಪಲ್ ರೈಡಿಂಗ್ ಇನ್ನೂ ನಿಂತಿಲ್ಲ. ಇಷ್ಟೆಲ್ಲಾ ನಿಯಮಗಳ ಉಲ್ಲಂಘನೆ ಮಾಡಿದವರ ಫೈನ್‌ ಲಿಸ್ಟ್‌ ಕೂಡ ದೊಡ್ಡದಿರುತ್ತದೆ. ಇನ್ಮುಂದೆ ದಂಡ ವಸೂಲಿಗಾಗಿ ಬೆಂಗಳೂರು ನಗರ ಸಂಚಾರಿ ಪೊಲೀಸರೇ ನಿಮ್ಮ ಮನೆ ಬಾಗಿಲಿಗೆ ಬರಲಿದ್ದಾರೆ. ದಂಡದ ಮೊತ್ತ 50,000 ರೂ. ದಾಟಿದರೆ ಮನೆಗೆ ತೆರಳಿ ಹಣ ಕಟ್ಟಿಸಿಕೊಳ್ಳುತ್ತಿದ್ದಾರೆ ಪೊಲೀಸರು. ಕಳೆದ ಹತ್ತು ದಿನಗಳಿಂದ ನಗರದಲ್ಲಿ 2,681 ವಾಹನಗಳ ಮೇಲೆ 50,000 ರೂ.ಗೂ ಅಧಿಕ ದಂಡ ಇದೆ. ಈಗಾಗಲೇ ಅನೇಕ ವಾಹನ ಸವಾರರ ಮನೆಗೆ ತೆರಳಿ ದಂಡ ಕಟ್ಟಿಸಿಕೊಳ್ಳಲಾಗುತ್ತಿದೆ. ಕೆಲ ವಾಹನಗಳ ಮಾಲೀಕರು ದಂಡ ಪಾವತಿಸದೆ ಬೇರೆಯವರಿಗೆ ಮಾರಾಟ ಮಾಡಿರುವುದು ತಿಳಿದು ಬಂದಿದೆ. https://ainlivenews.com/do-you-know-drinking-raw-milk-is-very-dangerous-for-health/ ಇಂಥವರಿಗೆ ಕಾಲಾವಕಾಶ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ದಂಡ ಪಾವತಿಸದೇ…

Read More

ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಟೆಸ್ಟ್​ ಪಂದ್ಯಗಳ ಸರಣಿಯಲ್ಲಿ 1-1ರಿಂದ ಸಮಬಲ ಸಾಧಿಸಿಉವ ಉಭಯ ತಂಡಗಳು ಇದೀಗ ಮುಂಬರಲಿರುವ 3ನೇ ಟೆಸ್ಟ್​ಗೆ ಭರ್ಜರಿಯಾಗಿ ಸಿದ್ಧತೆ ನಡೆಸುತ್ತಿದೆ. ಇದೀಗ 3ನೇ ಪಂದ್ಯ ಭಾರಿ ಮಹತ್ವ ಪಡೆದುಕೊಂಡಿದೆ. ಆದರೆ ಭಾರತ ತಂಡದಲ್ಲಿನ ಕೆಲ ಗಾಯದ ಸಮಸ್ಯೆ, ಕೆಲ ಆಟಗಾರರ ಲಭ್ಯತೆಯಿಂದ ತಂಡ ಇನ್ನೂ ಪ್ರಕಟಗೊಂಡಿಲ್ಲ. ಬಿಸಿಸಿಐ ತಂಡದ ಘೋಷಣೆ ವಿಳಂಬ ಮಾಡಿದೆ. ಈ ಬೆಳವಣಿಗೆ ನಡುವೆ ಪ್ರಮುಖ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಗಾಯಗೊಂಡಿದ್ದಾರೆ. ಹೀಗಾಗಿ 3ನೇ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆ ಇದೆ. ಗಾಯಕ್ಕೆ ತುತ್ತಾಗಿರುವ ಶ್ರೇಯಸ್ ಅಯ್ಯರ್‌ಗೆ ವೈದ್ಯರು ವಿಶ್ರಾಂತಿಗೆ ಸೂಚಿಸಿದ್ದಾರೆ. https://ainlivenews.com/do-you-know-drinking-raw-milk-is-very-dangerous-for-health/ ಹೀಗಾಗಿ 3ನೇ ಟೆಸ್ಟ್ ಪಂದ್ಯದಿಂದ ಶ್ರೇಯಸ್ ಅಯ್ಯರ್ ಹೊರಗುಳಿಸುವ ಸಾಧ್ಯತೆ ಹೆಚ್ಚಿದೆ. ಈಗಾಗಲೇ ಗಾಯಗೊಂಡು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅಯ್ಯರ್ ಇದೀಗ 30 ಎಸೆತ ಎದುರಿಸುತ್ತಿದ್ದಂತೆ ಗಾಯದ ನೋವು ಕಾಣಿಸಿಕೊಳ್ಳುತ್ತಿದೆ. ಅಭ್ಯಾಸದ ವೇಳೆ ಈ ಸಮಸ್ಯೆ ಮತ್ತೆ ಕಾಣಿಸಿಕೊಂಡಿದ್ದು, ವೈದ್ಯರು ಕೆಲ ವಾರಗಳ ಕಾಲ ವಿಶ್ರಾಂತಿಗ ಸೂಚಿಸಿದ್ದಾರೆ.

Read More

ದಾವಣಗೆರೆ: ಸಂಸದ ಡಿಕೆ ಸುರೇಶ್ ಹಾಗೂ ವಿನಯ್ ಕುಲಕರ್ಣಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ (KS Eshwarappa) ಅವರ ವಿರುದ್ಧ ದಾವಣಗೆರೆಯ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾವಣಗೆರೆಯಲ್ಲಿ (Davanagere) ನಡೆದ ಬಿಜೆಪಿಯ ನೂತನ ಜಿಲ್ಲಾಧ್ಯಕ್ಷರ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿದ್ದ ಕೆ.ಎಸ್ ಈಶ್ವರಪ್ಪ, ಕಾಂಗ್ರೆಸ್ ನಾಯಕರನ್ನ (Congress Leaders) ಟೀಕಿಸುವ ಭರದಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ್ದರು. https://ainlivenews.com/do-you-know-drinking-raw-milk-is-very-dangerous-for-health/ ಈಶ್ವರಪ್ಪ ಅವರ ಹೇಳಿಕೆ ಖಂಡಿಸಿ ಕಾಂಗ್ರೆಸ್ ಮುಖಂಡ ಹನುಮಂತ ಅವರು `ಪ್ರಾಣ ಬೆದರಿಕೆ ಹಾಗೂ ಪ್ರಚೋದನಕಾರಿ’ ಹೇಳಿಕೆ ಅಡಿಯಲ್ಲಿ ದೂರು ದಾಖಲಿಸಿದ್ದರು. ಕೈ ಮುಖಂಡನ ದೂರು ಆಧರಿಸಿ ಪೊಲೀಸರು ಐಪಿಸಿ ಸೆಕ್ಷನ್ 505 (1) (C), 505 (2), ಮತ್ತು 506 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

ಬೆಂಗಳೂರು: ಕೆಲ ದಿನಗಳ ಹಿಂದೆ ಟೊಮೆಟೋ, ಈರುಳ್ಳಿ ಶತಕ ಬಾರಿಸಿದ್ದವು. ಆದರೆ ಇದೀಗ ಗ್ರಾಹಕರಿಗೆ ಬೆಳ್ಳುಳ್ಳಿ ಶಾಕ್ ಎದುರಾಗಿದೆ. ಬೆಳ್ಳುಳ್ಳಿ ಕೆ.ಜಿಗೆ ನೂರಲ್ಲ, ಇನ್ನೂರಲ್ಲ ಬರೋಬ್ಬರಿ ಅರ್ಧ ಸಾವಿರವಾಗಿದೆ. ರಸಂ, ಸಾಂಬರ್, ಗೋಬಿ, ನಾನ್‍ವೆಜ್ ಹೀಗೆ ಟೇಸ್ಟಿ ಟೇಸ್ಟಿಯಾದ ಅಡುಗೆ ಮಾಡಬೇಕಾದ್ರೂ ಬೆಳ್ಳುಳ್ಳಿ ಬೇಕೇ ಬೇಕು. ಬೆಳ್ಳುಳ್ಳಿ ಹಾಕೋದ್ರಿಂದ ಈ ಅಡುಗೆಗಳ ಟೇಸ್ಟ್ ಹೆಚ್ಚಾಗುತ್ತೆ. ಮಾರ್ಕೆಟ್‍ನಲ್ಲಿ ಬೆಳ್ಳುಳ್ಳಿ ಸೌಂಡ್ ಮಾಡುತ್ತಿದೆ. ಈ ವರ್ಷ ಸರಿಯಾಗಿ ಮಳೆಯಾಗದ ಕಾರಣ ಬೆಳ್ಳುಳ್ಳಿ ಬೆಲೆ ಸರಿಯಾಗಿ ಬಂದಿಲ್ಲ. ಪೂರೈಕೆಯಲ್ಲಿ ಕೊರತೆ ಉಂಟಾಗಿದೆ. ಬೆಳ್ಳುಳ್ಳಿ ಕೆ.ಜಿಗೆ ಹಾಪ್ ಕಾಮ್ಸ್‍ನಲ್ಲಿ 500ರ ಗಡಿ ದಾಟಿದೆ. ಬಿಡಿಸಿದ ಬೆಳ್ಳುಳ್ಳಿ 540 ರೂ. ಆಗಿದ್ರೆ, ಉಂಡೆ ಬೆಳ್ಳುಳ್ಳಿಗೆ ಕೆ.ಜಿಗೆ 492 ರೂ. ಇದೆ. ಬೆಳ್ಳುಳ್ಳಿ ಬೆಲೆ ಏರಿಕೆಗೆ ಪ್ರಮುಖ ಕಾರಣವೆಂದರೆ ಈ ವರ್ಷ ಸರಿಯಾದ ಮಳೆಯಾಗಿಲ್ಲ. ಅಕಾಲಿಕ ಮಳೆ, https://ainlivenews.com/do-you-know-drinking-raw-milk-is-very-dangerous-for-health/ ಹವಾಮಾನ ವೈಪರೀತ್ಯ ಹಿನ್ನೆಲೆ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಇಷ್ಟು ದಿನಗಳ ಕಾಲ ನಾಸಿಕ್, ಪೂನಾದಿಂದ ಬರುತ್ತಿದ್ದ ಬೆಳ್ಳುಳ್ಳಿಯ ರಫ್ತು ಕಡಿಮೆಯಾಗಿದೆ. ರಾಜ್ಯದಲ್ಲಿ ಬೆಳಗಾವಿ…

Read More

ಮಂಗಳೂರು: ನಾವು ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ ಎನ್ನುತ್ತಿದ್ದೇವೆ ಆದರೆ ಹರೀಶ್ ಪೂಂಜಾ  ಉದ್ದೇಶವೇ ಬೇರೆ ಇದೆ. ರಾಜ್ಯಕ್ಕೆ ಅನ್ಯಾಯ ಆಗುತ್ತಿರುವ ಸತ್ಯಾಂಶವನ್ನ ಅವರು ಒಪ್ಪಿಕೊಳ್ಳಬೇಕು. ಅದನ್ನು ಒಪ್ಪಿಕೊಳ್ಳದೇ ಮೊಂಡುವಾದ ಪ್ರದರ್ಶನ ಮಾಡಿದ್ರೆ ಏನ್ ಹೇಳೋದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, https://ainlivenews.com/do-you-know-drinking-raw-milk-is-very-dangerous-for-health/ ಬಿಜೆಪಿ ಶಾಸಕ ಹರೀಶ್ ಪೂಂಜಾ `ಹಿಂದೂಗಳ ತೆರಿಗೆ, ಹಿಂದೂಗಳ ಹಕ್ಕು’ ಅಭಿಯಾನಕ್ಕೆ ಕರೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯಕ್ಕೆ ಬರುವ ತೆರಿಗೆ ಪ್ರಮಾಣದಲ್ಲಿ ಯಾವುದೇ ವೃದ್ಧಿಯಾಗಿಲ್ಲ. ಈ ವಿಚಾರ ಪೂಂಜಾ ಮಾತನಾಡಬೇಕು. ಇದರಲ್ಲೂ ಅವರು ಜನರನ್ನು ಒಡೆಯಲು ಹೊರಟಿರುವುದು ದುರ್ದೈವದ ವಿಚಾರ. ಇವರದ್ದೆಲ್ಲಾ ಇದೇ ಕುತಂತ್ರ, ಧರ್ಮದ ಹೆಸರಿನಲ್ಲಿ ಅನ್ಯಾಯದ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

Read More

ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರವನ್ನು ಬಿಡುಗಡೆ ಮಾಡಿವೆ. ಗೋವಾ, ಹರಿಯಾಣ, ಕೇರಳ, ಸೇರಿದಂತೆ ಕೆಲವು ರಾಜ್ಯಗಳಲ್ಲಿ ಇಂಧನ ಬೆಲೆ ಏರಿಕೆಯಾಗಿದೆ. ಪೆಟ್ರೋಲ್ ಮಹಾರಾಷ್ಟ್ರದಲ್ಲಿ 0.23 ಪೈಸೆ, ಪಂಜಾಬ್‌ನಲ್ಲಿ 0.27 ಪೈಸೆ ಮತ್ತು ರಾಜಸ್ಥಾನದಲ್ಲಿ 0.17 ಪೈಸೆಯಷ್ಟು ಕಡಿಮೆಯಾಗಿದೆ. ಆದರೆ, ದೇಶದ ನಾಲ್ಕು ಮಹಾನಗರಗಳಾದ ದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ಚೆನ್ನೈನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಮಹಾನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ – ದೆಹಲಿ ಪೆಟ್ರೋಲ್ 96.72 ರೂ. ಮತ್ತು ಡೀಸೆಲ್ 89.62 ರೂ. – ಮುಂಬೈ ಪೆಟ್ರೋಲ್ 106.31 ರೂ. ಮತ್ತು ಡೀಸೆಲ್ 94.27 ರೂ. – ಚೆನ್ನೈ ಪೆಟ್ರೋಲ್ ರೂ. 102.63 ಮತ್ತು ಡೀಸೆಲ್ ರೂ. 94.24 ರೂ. -ಬೆಂಗಳೂರು ಪೆಟ್ರೋಲ್ 101.94 ರೂ. ಡೀಸೆಲ್ 87.89 ರೂ. https://ainlivenews.com/what-is-the-meaning-of-which-color-teddy-bear-doll-here-is-the-information/ ಹೊಸ ದರಗಳು – ನೋಯ್ಡಾದಲ್ಲಿ ಪೆಟ್ರೋಲ್ 97 ರೂ. ಮತ್ತು ಡೀಸೆಲ್ ಲೀಟರ್‌ಗೆ 90.14 ರೂ. ಆಗಿದೆ. – ಗಾಜಿಯಾಬಾದ್‌ನಲ್ಲಿ ಡೀಸೆಲ್ ಬೆಲೆ ಲೀಟರ್‌ಗೆ 96.58 ರೂ. ಮತ್ತು…

Read More

ಬೀದರ್: ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ವನ್ಯ ಜೀವಿಗಳ ಅಂಗಾಂಗಗಳನ್ನು ಇಟ್ಟು ಕೊಂಡಿರುವರಿಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ವನ್ಯಜೀವಿ ಅಂಗಾಂಗಗಳನ್ನು ಹಿಂದಿರುಗಿಸಲು ಕೊನೆಯ ಡೆಡ್ ಲೈನ್  ನೀಡಿದ್ದಾರೆ. ಏಪ್ರಿಲ್ 10ರ ಒಳಗೆ ಹುಲಿ, ಚಿರತೆ ಮತ್ತು ಆನೆಗಳ ಕೊಂಬು, ಹಲ್ಲು, ಕೂದಲು ಸೇರಿದಂತೆ ಎಲ್ಲಾ ವನ್ಯಜೀವಿ ಅಂಗಾಂಗಗಳನ್ನು ಹಿಂತಿರುಗಿಸಲು ಕೊನೆಯದಾಗಿ ಗಡುವು ನೀಡಿದ್ದಾರೆ. ಪ್ರಮಾಣ ಪತ್ರ ಇಲ್ಲದೆ ಅಕ್ರಮವಾಗಿ ವನ್ಯಜೀವಿ ಅಂಗಾಂಗಗಳನ್ನು ಇಟ್ಟುಕೊಳ್ಳುವುದು ಶಿಕ್ಷಾರ್ಹ ಅಪರಾಧ. 1973 ಹಾಗೂ 2003 ರಲ್ಲಿ ವನ್ಯಜೀವಿ ಅಂಗಾಂಗಗಳ ವಾಪಸ್‌ಗೆ ಅವಕಾಶ ನೀಡಲಾಗಿತ್ತು. ಆದರೆ ಇನ್ನೂ ವಾಪಸ್ ಮಾಡದೇ ಇರುವುದು ದೊಡ್ಡ ಅಪರಾಧ. ಮೌಢ್ಯತೆ ಹಾಗೂ ನಂಬಿಕೆಗಾಗಿ ಕೆಲವು ಮುಗ್ದ ಜನರು ಇನ್ನೂ ಇಟ್ಟುಕೊಂಡಿದ್ದಾರೆ. https://ainlivenews.com/what-is-the-meaning-of-which-color-teddy-bear-doll-here-is-the-information/ ಇಂತಹ ಮುಗ್ದ ಜನರಿಗೆ ಶಿಕ್ಷೆಯಾಗಬಾರದು ಎಂದು ನಮ್ಮ ಸರ್ಕಾರ ಏಪ್ರಿಲ್ 10 ರಂದು ಕೊನೆಯ ಬಾರಿ ವಾಪಸ್ ಮಾಡುವಂತೆ ಅವಕಾಶ ನೀಡಿದೆ. ಜನರು ತಮ್ಮ ಬಳಿ ಇರುವ ಅಂಗಾಗಳನ್ನು ಸಮೀಪದಲ್ಲಿರುವ ಅರಣ್ಯ ಕಚೇರಿಗೆ ನೀಡಬೇಕು ಎಂದು…

Read More

ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಕಾರ್ ಟಚ್ ಆಯ್ತು ಎಂದು ರಸ್ತೆಯಲ್ಲಿ ಗಲಾಟೆ ಮಾಡಿ ಕ್ಯಾಬ್ ಚಾಲಕ ಪ್ಯಾಂಟ್ ಬಿಚ್ಚಲು ಮುಂದಾಗಿದ್ದಾನೆ. ಹೌದು ನಿನ್ನೆ ರಾತ್ರಿ ನಗರದ ಹೆಬ್ಬಾಳ ಸಿಗ್ನಲ್ ಬಳಿ ಎರಡು ಕಾರುಗಳ ನಡುವೆ ಟಚ್ ಆಗಿತ್ತು. ಈ ವೇಳೆ ಕಾರಿನಿಂದ ಕೆಳಗೆ ಇಳಿದ ಕ್ಯಾಬ್ ಡ್ರೈವರ್ , ಮತ್ತೊಂದು ಕಾರಿನಲ್ಲಿದ್ದವರ ಅವಾಚ್ಯವಾಗಿ ನಿಂದಿಸಿ ಹಲ್ಲೆಗೆ ಮುಂದಾಗಿದ್ದಾನೆ. https://twitter.com/Gauthamazad/status/1755958630288069077?t=gmuhupe0oY2U9lq4CDSouQ&s=08 ಅಷ್ಟೇ ಅಲ್ಲದೇ ಕಾರಿನಲ್ಲಿದ್ದ ಫ್ಯಾಮಿಲಿ ಮುಂದೆಯೇ ಪ್ಯಾಂಟ್ ಬಿಚ್ಚಿ ಅಸಭ್ಯವಾಗಿ ವರ್ತಿಸಲು ಮುಂದಾಗಿ ದ್ದಾನೆ. ಚಾಲಕನ ವರ್ತನೆ ವಿರುದ್ಧ ಇತರೆ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದು, ಅಸಭ್ಯ ವರ್ತನೆಯ ವೀಡಿಯೋಗಳನ್ನು ತೆಗೆದ ದೂರುದಾರ ನಗರ ಪೊಲೀಸ್ ಆಯುಕ್ತರಿಗೆ ಟ್ಯಾಗ್ ಮಾಡಿ ಕ್ರಮಕ್ಕೆ ಒತ್ತಾಯಿ ಸಿದ್ದಾರೆ. ಕೊಡಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪರಿಶೀಲನೆ ನಡೆಸಿದ್ದಾರೆ.  

Read More

ದೊಡ್ಮನೆ ಕುಡಿ ವಿನಯ್ ರಾಜ್ ಕುಮಾರ್ ಹಾಗೂ ಸಿಂಪಲ್ ಸುನಿ ಜೋಡಿಯ ಒಂದು ಸರಳ ಪ್ರೇಮಕಥೆಗೆ ಭರಪೂರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ನಿನ್ನೆ ರಾಜ್ಯಾದ್ಯಂತ ಬಿಡುಗಡೆಯಾದ ಚಿತ್ರಕ್ಕೆ ಎಲ್ಲೆಡೆಯಿಂದ‌ ಮೆಚ್ಚುಗೆ ಸಿಗುತ್ತಿದೆ. ಸುನಿ ಅವರ ನಿರೂಪಣೆ ಶೈಲಿ, ಕಾಮಿಡಿ ಟೈಮ್, ಎಮೋಷನ್, ನಾಯಕ ವಿನಯ್, ನಾಯಕಿಯಾರದ ಸ್ವಾತಿಷ್ಠ,‌ ಮಲ್ಲಿಕಾ ಅಮೋಘ ಅಭಿನಯ, ವೀರ್ ಸಮರ್ಥ್ ಅವರ ಟ್ಯೂನ್ ಸಿನಿರಸಿಕರಿಗೆ ಕನೆಕ್ಟ್ ಆಗುತ್ತಿದೆ. ವಿಮರ್ಷಕರಿಂದ ಹಾಗೂ ಪ್ರೇಕ್ಷಕರಿಂದ ಒಳ್ಳೆ ಅಭಿಪ್ರಾಯ ಪಡೆದುಕೊಳ್ಳುತ್ತಿರುವ ಒಂದು ಸರಳ ಪ್ರೇಮಕಥೆ ಸಿನಿಮಾದ ಕ್ರೇಜ್ ನಿಧಾನವಾಗಿ ಗಾಂಧಿನಗರವನ್ನು ಆವರಿಸಿಕೊಳ್ಳುತ್ತಿದೆ. ಪ್ರೇಮಕಥೆಯನ್ನು ಗುನುಗಿದ ಬಸ್ ಜನ ಹಿತಾನುಭವ, ಮನರಂಜನೆಯ ರಸದೌತಣ ನೀಡುತ್ತಿರುವ ಒಂದು ಸರಳ ಪ್ರೇಮಕಥೆ ಸಿನಿಮಾವನ್ನು ಬೆಂಗಳೂರಿನ ಗೊರಗುಂಟೆಪಾಳ್ಯ ಗೋಲ್ಡನ್ ಗ್ರ್ಯಾಂಡ್ ಅಪಾರ್ಟ್ಮೆಂಟ್ ಜನ ಬಸ್ ನಲ್ಲಿ ಒರಿಯನ್ ಮಾಲ್ ಗೆ ಆಗಮಿಸಿ ಸಿನಿಮಾ ನೋಡಿದ್ದಾರೆ. ಚಿತ್ರದ ಪೋಸ್ಟರ್ ಹಿಡಿದು ಗುನುಗುನುಗು ಎಂದು ಹಾಡು ಹೇಳಿ ಸರಳ ಪ್ರೇಮಕಥೆ ಜೈಕಾರ ಹಾಕಿದ್ದಾರೆ. ಇದಪ್ಪ ದೊಡ್ಮನೆ ಕುಡಿ ಸಿನಿಮಾ ಕ್ರೇಜ್ ಎನ್ನುತ್ತಿದೆ…

Read More