Author: AIN Author

ರಾಗಿ ಮುದ್ದೆ, ರಾಗಿ ರೊಟ್ಟಿ, ರಾಗಿ ಉಪ್ಪಿಟ್ಟು, ರಾಗಿ ದೋಸೆ ಹೀಗೆ ಹೇಳುತ್ತಾ ಹೋದರೆ ಇದರ ಪಟ್ಟಿ ಮುಗಿಯುವುದಿಲ್ಲ. ಆದರೆ ಒಂದಕ್ಕಿಂತ ಒಂದು ಆರೋಗ್ಯಕರ. ಮಕ್ಕಳಿಂದ ಹಿಡಿದು ವಯಸ್ಸಾದವ ರವರೆಗೆ ಯಾರು ಬೇಕಾದರೂ ತಿನ್ನಬಹುದು. ಎಲ್ಲರಿಗೂ ಇಷ್ಟವಾಗುತ್ತದೆ ಕೂಡ. ಉತ್ತಮವಾದ ಆಹಾರ ಪದ್ಧತಿಯನ್ನು ಹೊಂದಬೇಕು ಎನ್ನುವವರಿಗೆ ರಾಗಿ ಬೆಸ್ಟ್. ಈಗ ಗೊಂದಲ ಬಂದಿರುವುದು ಸಕ್ಕರೆ ಕಾಯಿಲೆ ಇರುವವರಿಗೆ. ನಾವು ಕೂಡ ರಾಗಿ ತಿನ್ನಬಹುದಾ ಎಂದು. ನಿಮ್ಮ ವಿಷಯದಲ್ಲಿ ವೈದ್ಯರು ಏನು ಹೇಳುತ್ತಾರೆ ನೋಡೋಣ ಬನ್ನಿ. ಸಕ್ಕರೆ ಕಾಯಿಲೆ ಇರುವವರಿಗೆ ರಾಗಿ ಒಳ್ಳೆಯದೇ? ರಾಗಿ ಬಹಳ ಹಿಂದಿನ ಕಾಲದಿಂದ ಜನರ ಮನೆಮನೆಯ ಆಹಾರವಾಗಿದೆ. ಇದರಲ್ಲಿ ಗ್ಲೂಟನ್ ಇರುವುದಿಲ್ಲ. ಅದರಲ್ಲೂ ಕರ್ನಾಟಕದ ಮನೆ ಮಾತಾಗಿದೆ. ಬಹಳಷ್ಟು ಜನರಿಗೆ ಇದೊಂದು ಪ್ರಶ್ನೆ ಕಾಡಬಹುದು. ಎಲ್ಲಾ ಸರಿ ಸಕ್ಕರೆ ಕಾಯಿಲೆ ಇರುವವರು ರಾಗಿ ತಿನ್ನಬಹುದಾ? ಇದರಿಂದ ಆರೋಗ್ಯಕ್ಕೆ ಏನು ತೊಂದರೆ ಇಲ್ಲವೇ? ಎಂದು ಕೇಳಬಹುದು. ಆರೋಗ್ಯ ತಜ್ಞರು ಹೇಳುವ ಪ್ರಕಾರ ಆರೋಗ್ಯ ತಜ್ಞರು ಹೇಳುವ ಹಾಗೆ ಇದು…

Read More

ಚಿತ್ರದುರ್ಗ, ಫೆ.10- ಗ್ಯಾರಂಟಿ ಯೋಜನೆಗಳ ಜಾರಿ ಬಗ್ಗೆ ರಾಜ್ಯದ ಶೇ.76 ರಷ್ಟು ಜನರು ಸಂತೃಪ್ತ ಭಾವ ವ್ಯಕ್ತಪಡಿಸಿರುವುದು ಸಮೀಕ್ಷೆಗಳಿಂದ ತಿಳಿದು ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದು ಈಗಾಗಲೆ ಸ್ಪಷ್ಟಪಡಿಸಿದ್ದಾರೆ. ಮುಂದಿನ 5 ವರ್ಷಗಳೂ ಕೂಡ ಗ್ಯಾರಂಟಿ ಯೋಜನೆಗಳು ಮುಂದುವರಿಯಲಿವೆ ಎಂದು ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು. ಹಿರಿಯೂರು ನಗರದ ನೆಹರು ಮೈದಾನ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ “ಹಿರಿಯೂರು ತಾಲ್ಲೂಕು ಹಾಗೂ ಹೋಬಳಿ ಮಟ್ಟದ ಪಂಚ ಗ್ಯಾರಂಟಿಗಳ ಈಡೇರಿಸಿದ ಸಾರ್ಥಕ ಸಮಾವೇಶ” ಉದ್ಘಾಟಿಸಿ ಅವರು ಮಾತನಾಡಿದರು. ಚುನಾವಣೆ ಸಂದರ್ಭದಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುತ್ತೇವೆ ಎಂದು ಭರವಸೆ ನೀಡಿದ್ದೆವು, ಆಗ ವಿರೋಧ ಪಕ್ಷದವರು ಇವನ್ನೆಲ್ಲ ಜಾರಿಗೊಳಿಸಲು ಆಗಲ್ಲ, ಇವರು ಸುಳ್ಳು ಹೇಳುತ್ತಿದ್ದಾರೆ ಎಂಬುದಾಗಿ ಅಪಪ್ರಚಾರ ಮಾಡಿದರು. ಆದರೆ ಜನ ಇಂತಹ ಅಪಪ್ರಚಾರವನ್ನು ಲೆಕ್ಕಿಸದೆ ನಮ್ಮನ್ನು ಆಯ್ಕೆ ಮಾಡಿದರು. ನಮ್ಮ ಸರ್ಕಾರ ಚುನಾವಣೆಗೂ ಮುನ್ನ ಜನರಿಗೆ ನೀಡಿದ ಆಶ್ವಾಸನೆಯಂತೆ…

Read More

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಲೋಕಸಭಾ ಚುನಾವಣೆಗೆ  ಮುನ್ನ ಜಾರಿಗೆ ತರುವುದಾಗಿ ಗೃಹ ಸಚಿವ ಅಮಿತ್‌ ಶಾಹೇಳಿದ್ದಾರೆ. ಖಾಸಗಿ ಮಾಧ್ಯಮವೊಂದರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿಎಎ ದೇಶದ ಕಾಯ್ದೆಯಾಗಿದೆ. ಅದನ್ನು ಖಂಡಿತವಾಗಿಯೂ ಲೋಕಸಭಾ ಚುನಾವಣೆಗೆ ಮುನ್ನವೇ ನೋಟಿಫೈ ಮಾಡಲಾಗುವುದು ಅದರಲ್ಲಿ ಯಾವುದೇ ಗೊಂದಲ ಇಲ್ಲ ಎಂದರು. ಸಿಎಎ ಕಾಂಗ್ರೆಸ್ ಸರ್ಕಾರದ  ಭರವಸೆಯಾಗಿತ್ತು. ದೇಶ ವಿಭಜನೆಯಾದಾಗ ಮತ್ತು ಆ ದೇಶದಲ್ಲಿದ್ದ ಅಲ್ಪಸಂಖ್ಯಾತರು ಕಿರುಕುಳಕ್ಕೊಳಗಾದಾಗ, ನಿರಾಶ್ರಿತರಿಗೆ ಭಾರತದಲ್ಲಿ ಆಶ್ರಯ ನೀಡಿ ಭಾರತೀಯ ಪೌರತ್ವವನ್ನು ನೀಡಲಾಗುವುದು ಎಂದು ಕಾಂಗ್ರೆಸ್ ಭರವಸೆ ನೀಡಿತ್ತು. ಈಗ ಕಾಂಗ್ರೆಸ್‌ ಆ ಭರವಸೆಯಿಂದ ಹಿಂದಕ್ಕೆ ಸರಿಯುತ್ತಿದೆ ಎಂದು ಶಾ ದೂರಿದರು. https://ainlivenews.com/do-you-know-drinking-raw-milk-is-very-dangerous-for-health/  ನಮ್ಮ ದೇಶದಲ್ಲಿ ಅಲ್ಪಸಂಖ್ಯಾತರು ಮತ್ತು ವಿಶೇಷವಾಗಿ ನಮ್ಮ ಮುಸ್ಲಿಂ ಸಮುದಾಯವನ್ನು ಪ್ರಚೋದಿಸಲಾಗುತ್ತಿದೆ. ಕಾಯ್ದೆಯಲ್ಲಿ ಯಾವುದೇ ನಿಬಂಧನೆ ಇಲ್ಲದ ಕಾರಣ ಸಿಎಎ ಯಾರ ಪೌರತ್ವವನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಸಿಎಎ ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿ ಕಿರುಕುಳಕ್ಕೊಳಗಾದ ನಿರಾಶ್ರಿತರಿಗೆ ಪೌರತ್ವ ನೀಡುವ ಕಾಯ್ದೆಯಾಗಿದೆ ಎಂದು ವಿವರಿಸಿದರು.

Read More

ಬೆಂಗಳೂರು, ಫೆ. 10: “ಈಶ್ವರಪ್ಪನವರ ಗುಂಡಿನ ಬೆದರಿಕೆಗೆ ಹೆದರುವ ರಕ್ತ ಡಿ.ಕೆ. ಸುರೇಶ್ ಅವರ ಮೈಯಲ್ಲಿ ಹರಿಯುತ್ತಿಲ್ಲ. ನಮ್ಮ ಸುದ್ದಿಗೆ ಬಂದವರಿಗೆ ಒಂದೊಂದೇ ಹಂತದಲ್ಲಿ ಸೆಟ್ಲಮೆಂಟ್ ಆಗಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದರು. ನಗರದ ಖಾಸಗಿ ಹೋಟೇಲ್ ನಲ್ಲಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಸಮಿತಿ ಸಭೆ ಸಂದರ್ಭದಲ್ಲಿ ಮಾಧ್ಯಮಗಳು, ಸಂಸದ ಡಿ ಕೆ ಸುರೇಶ್ ಅವರಿಗೆ ಗುಂಡಿಕ್ಕುವ ಸಂಬಂಧ ತಾವು ನೀಡಿದ್ದ ಹೇಳಿಕೆಗೆ ಕ್ಷಮೆ ಕೇಳುವುದಿಲ್ಲ ಎಂಬ ಈಶ್ವರಪ್ಪ ಅವರ ಹೇಳಿಕೆ ಬಗ್ಗೆ ಕೇಳಿದಾಗ ಶಿವಕುಮಾರ್ ಅವರು ಶನಿವಾರ ಉತ್ತರಿಸಿದ್ದು ಹೀಗೆ: https://ainlivenews.com/do-you-know-drinking-raw-milk-is-very-dangerous-for-health/ “ಅವರಿಗೆ ಕ್ಷಮೆ ಕೇಳಿ ಎಂದು ಯಾರೂ ಹೇಳಿಲ್ಲ. ಸದನದಲ್ಲಿ ನಮ್ಮ ತಂದೆ ಬಗ್ಗೆ ಮಾತನಾಡಿದ್ದರು. ಅದಕ್ಕೆ ಒಂದು ಸುತ್ತಿನ ಸೆಟ್ಲಮೆಂಟ್ ಮಾಡಿದ್ದೇವೆ. ಈಶ್ವರಪ್ಪ ಈಗ ಎಲ್ಲಿದ್ದಾರೆ? ನಮ್ಮ ವಿಚಾರಕ್ಕೆ ಬಂದವರಿಗೆ ಒಂದೊಂದೇ ಹಂತದಲ್ಲಿ ಸೆಟ್ಲಮೆಂಟ್ ಆಗಿದೆ. ಈಶ್ವರಪ್ಪ ಗುಂಡಿಟ್ಟು ಕೊಲ್ಲುವುದಾದರೆ ಕೊಲ್ಲಲಿ. ಅವರ ಹೇಳಿಕೆಗೆ ನಡುಗುವ ರಕ್ತ ಡಿ ಕೆ ಸುರೇಶ್ ಮೈಯಲ್ಲಿ ಹರಿಯುತ್ತಿಲ್ಲ.…

Read More

ಬೆಂಗಳೂರು ಫೆ 10: ಜ್ಞಾನಾರ್ಜನೆಗೆ ಪುಸ್ತಕಗಳ ಓದು ಬಹಳ ಅಗತ್ಯ. ಉಳಿದೆಲ್ಲಾ ಜ್ಞಾನ ಮೂಲಗಳಿಗಿಂತ ಪುಸ್ತಕ ಓದಿನ ಮೂಲದ ಜ್ಞಾನಾರ್ಜನೆ ಬಹಳ ಪರಿಣಾಮಕಾರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು‌ ನುಡಿದರು. ವೀರಲೋಕ ಪ್ರಕಾಶನ ಆಯೋಜಿಸಿದ್ದ ಪುಸ್ತಕ ಸಂತೆಯನ್ನು ಉದ್ಘಾಟಿಸಿ ಮಾತನಾಡಿದರು.‌ https://ainlivenews.com/do-you-know-drinking-raw-milk-is-very-dangerous-for-health/ ಪುಸ್ತಕ ಮತ್ತು ಪತ್ರಿಕೆಗಳನ್ನು ಕೊಂಡು ಓದುವ ಅಭಿರುಚಿ ಮತ್ತು ಕಾಳಜಿಯನ್ನು ಬೆಳೆಸಿಕೊಳ್ಳಿ ಎಂದು ನೆರೆದಿದ್ದ ಓದುಗರಿಗೆ ಕರೆ ನೀಡಿದರು. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ರಾಮಲಿಂಗಾರೆಡ್ಡಿ, ಲೇಖಕರಾದ ಬರಗೂರು ರಾಮಚಂದ್ರಪ್ಪ, ಮಾಜಿ ಸಂಸದ ಉಗ್ರಪ್ಪ ಮತ್ತು ಸಂಪಾದಕರಾದ ವಿಶ್ವೇಶ್ವರ ಭಟ್ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.

Read More

ಕಲಬುರಗಿ: ಮಲ್ಲಿಕಾರ್ಜುನ್ ಖರ್ಗೆ ಹೊಟ್ಟೆಯಲ್ಲಿ ಪ್ರಿಯಾಂಕ್ ಕೆಟ್ಟ ಹುಳ ಹುಟ್ಟಿರುವಂತಿದೆ ಮಾಜಿ ಡಿಸಿಎಂ ಈಶ್ವರಪ್ಪ ಹೇಳಿಕೆ ಸಚಿವ ಪ್ರಿಯಾಂಕ್ ಖರ್ಗೆ ಖಾರವಾಗಿ ಕೌಂಟರ್ ಕೊಟ್ಟಿದ್ದಾರೆ.. ಕಲಬುರಗಿಯಲ್ಲಿಂದು ಮಾತನಾಡಿದ ಪ್ರಿಯಾಂಕ್ ಖರ್ಗೆ ಈಶ್ವರಪ್ಪ ಸಂಸ್ಕೃತಿ ಬಹಳ ಚೆನ್ನಾಗಿ ಎದ್ದು ತೋರಿಸುತ್ತೆ ಈಶ್ವರಪ್ಪ ಏನಾದರು ಬಾಯಿ ಬಡಿದುಕೊಳ್ಳಲಿ ಎಲ್ಲಾದರೂ ಬಟ್ಟೆ ಹರಿದುಕೊಳ್ಳಲಿ ನಾನೇಕೆ ಚಿಂತೆ ಮಾಡ್ಲಿ ನಾನು ಕೆಟ್ಟ ಹುಳನೋ ಒಳ್ಳೆ ಹುಳ ತಗೊಂಡು ನಿಮಗ್ಯಾಕೆ ಅಂದ್ರು. ಮಾತ್ರವಲ್ಲ ನಮ್ಮ ತಂದೆ ತಾಯಿ ತಾನೆ ನನಗೆ ಸಂಭಾಳಿಸ್ತಿರೋದು, ಚಿತ್ತಾಪುರದ ಕ್ಷೇತ್ರದ ಜನರು ನನ್ನ ಆಶಿರ್ವಾದ ಮಾಡಿರೋದು, ನಿಮಗ್ಯಾಕೆ ಬಿಜೆಪಿಯವರು ಆಶಿರ್ವಾದ ಮಾಡ್ತಿಲ್ಲ ಅದನ್ನ ಹೇಳಿ ಅಂತ ಕೌಂಟರ್ ಕೊಟ್ರು.. ಸಿಎಂ ಅವರು ಹೇಳಿದ ಹಾಗೆ ಇವರ ಮೆದುಳಿಗೆ & ನಾಲಿಗೆ ಕನೆಕ್ಷನ್ ಇಲ್ಲ. ನಿಮ್ಮ ಹಿರಿತನಕ್ಕೆ ಗೌರವ ಕೊಟ್ಟು ನೀವು ಅಂತಾ ಮಾತಾಡ್ತಿದ್ದೆನೆ ತಿಳ್ಕೊಳ್ಳಿ ಅಂತ ತಿರುಗೇಟು ಕೊಟ್ರು.

Read More

ತುಮಕೂರು: ತುಮಕೂರು ಜಿಲ್ಲೆಯಲ್ಲಿ ಗೊಲ್ಲ ಸಮುದಾಯದ ಮೈಲಿಗೆ ಸಂಪ್ರದಾಯ ನಿಲ್ಲುವಂತೆ ಕಾಣಿಸುತ್ತಿಲ್ . ಊರಾಚೆ ಇರಿಸಿ ನವಜಾತ ಶಿಶು ಸಾವನ್ನಪ್ಪಿದರೂ ಕೂಡ ಈ ಸಮುದಾಯ‌ ಇನ್ನೂ ಎಚ್ಚೆತ್ತುಕೊಂಡಿಲ್ಲ. ಮತ್ತೆ  ತುಮಕೂರಲ್ಲಿ ಗೊಲ್ಲ‌ ಸಮುದಾಯದಿಂದ ಮೌಡ್ಯಾಚರಣೆ ಮುಂದುವರೆದಿದೆ. ಒಂದು ತಿಂಗಳ ಹಸುಗೂಸು ಹಾಗೂ ಬಾಣಂತಿಯನ್ನ ಊರಾಚೆ ಇರಿಸಿದ್ದ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕುಂಟನಹಟ್ಟಿ ಗೊಲ್ಲರಹಟ್ಟಿಯಲ್ಲಿ ನಡೆದಿದೆ. https://ainlivenews.com/do-you-know-drinking-raw-milk-is-very-dangerous-for-health/ ಬಾಲಮ್ಮ 25 ವರ್ಷದ ಬಾಣಂತಿ ಹಾಗೂ ಒಂದು ತಿಂಗಳ ಮಗುವನ್ನ ಗ್ರಾಮಸ್ಥರು ಗ್ರಾಮದ ಹೊರಗಿಟ್ಟಿ ದ್ದರು. ವಿಷಯ ತಿಳಿಯುತ್ತಿದ್ದಂತೆ ಗ್ರಾಮಕ್ಕೆ ಶಿರಾ ಜೆಎಮ್ ಎಫ್ ಸಿ ನ್ಯಾಯಾಧೀಶರಾದ ಗೀತಾಂಜಲಿ ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ರೀತಿಯ ಮೌಡ್ಯಾಚರಣೆ ನೆಪದಲ್ಲಿ ಶೋಷಣೆ ಮಾಡಿದರೆ ಕಾನೂನು ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಬಳಿಕ ಬಾಣಂತಿ ಮಗುವನ್ನ ನ್ಯಾಯಾಧೀಶರು ಮನೆ ಸೇರಿಸಿದರು.

Read More

ಶಿವಮೊಗ್ಗ: ಮಲ್ಲಿಕಾರ್ಜುನ ಖರ್ಗೆಯಂತವರ ಹೊಟ್ಟೆಯಲ್ಲಿ ಪ್ರಿಯಾಂಕ್ ಖರ್ಗೆ ಅಂತಹ ಕೆಟ್ಟ ಹುಳ ಹುಟ್ಟಿದೆ ಎಂದು ಹೇಳುವ ಮೂಲಕ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆಯನ್ನು (Priyank Kharge) ಕಾಂಗ್ರೆಸ್ ನವರು ಅಂತಾ ಕರೆಯಲು ಇಷ್ಟಪಡಲ್ಲ. ಇವರು ಯಾರೂ ಕಾಂಗ್ರೆಸ್ ನವರಲ್ಲ. ಕಾಂಗ್ರೆಸ್ ಹೆಸರಿನಲ್ಲಿ ಅಧಿಕಾರ ಹಂಚಿಕೊಂಡಿರುವವರು ಎಂದರು. https://ainlivenews.com/do-you-know-drinking-raw-milk-is-very-dangerous-for-health/ ಜೈಲಿಗೆ ಹೋಗಲ್ಲ: ಮುಖ್ಯಮಂತ್ರಿ, ಸುರ್ಜೇವಾಲಾ ಅವರಿಗೆ 10 ಸಾವಿರ ದಂಡ ಕಟ್ಟಿ ಅಂತಾ ಕೋರ್ಟ್ ಹೇಳಿದೆ. ನಾನು ದಂಡ ಕಟ್ಟುವ ಪ್ರಸಂಗ ಬಂದಿಲ್ಲ. ಡಿಸಿಎಂ ಡಿಕೆಶಿ ತಿಹಾರ್ ಜೈಲಿಗೆ ಹೋಗಿ ಬಂದಿದ್ದಾರೆ. ಸುರೇಶ್ ಕೊಟ್ಟಿರುವ ಹೇಳಿಕೆ ಸರಿ ಇದೆಯಾ ಅಂತಾ ಸ್ಪಷ್ಟಪಡಿಸಲಿ. ನಾನು ಬೇಕಾದಷ್ಟು ಹೇಳಿಕೆ ಕೊಟ್ಟಿದ್ದೇನೆ. ಒಂದೇ ಒಂದು ರೂಪಾಯಿ ಪೆನಾಲ್ಟಿ ಕಟ್ಟಿಲ್ಲ. ಒಂದೇ ಒಂದು ದಿನ ಜೈಲಿಗೆ ಹೋಗಿಲ್ಲ ಎಂದು ತಿಳಿಸಿದರು.

Read More

ಗದಗ: ಕೆ.ಎಸ್​.ಈಶ್ವರಪ್ಪ ಹೇಳಿಕೆ ವಿಚಾರವಾಗಿ ಗದಗನಲ್ಲಿ ಸಚಿವ ಎಚ್ ಕೆ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಅವರಿಗೆ ಒಂದು ಸಲಹೆ ಮಾಡಿದೆ. ಪ್ರಜಾಪ್ರಭುತ್ವದಲ್ಲಿ ಗುಂಡಿಕ್ಕಿ ಕೊಲ್ಲಿರಿ, ಕೊಡ್ಲೀಲೆ ಹೊಡೀರಿ, ಕುಡುಗೋಲು ತಗೋಳಿ ಎಲ್ಲಾ ಈಶ್ವರಪ್ಪರಂತ ಎತ್ತರದ ವ್ಯಕ್ತಿಗಳಿಗೆ, ಅನುಭವಸ್ತ ವ್ಯಕ್ತಿಗಳಿಗೆ ಸೂಕ್ತವಾಗಿರೋದಲ್ಲ, ಶೋಭೆ ತರೋದಿಲ್ಲ. ಪ್ರಜಾಪ್ರಭುತ್ವ ಇಂತಹ ಮಾತುಗಳಿಂದ ಅಶಕ್ತಗೊಳ್ಳುತ್ತದೆ. ಅದನ್ನ ಮಾಡಬೇಡಿ ಅಂತ ವಿನಂತಿ ಮಾಡಿದೆ. ಮಿತೃತ್ವವನ್ನ ಬಳಸಿಕೊಂಡು 24 ತಾಸಿನಲ್ಲಿ ಅವರು ವಾಪಸ್ ಪಡೀಬೇಕು ಅಂತಾ ಅವರಿಗೆ ಸಲಹೆ ಮಾಡಿದ್ದೆ. ಕಾನೂನು ಕ್ರಮ ಕೈಗೊಳ್ಳಲಿ ಅಂತಾ ಅವರು ಪ್ರತಿಕ್ರಿಯೆ ಮಾಡಿದ್ದಾರೆ, ಅದನ್ನ ಸಂಬಂಧಪಟ್ಟವರು ಗಮನಿಸ್ತಾರೆ ಎಂದು ಹೇಳಿದರು.

Read More

ಕಲಬುರಗಿ: ಎಲ್ಲ ರೀತಿಯ ವ್ಯವಸ್ಥೆಯೊಂದಿಗೆ ನಿರ್ಮಾಣವಾಗಿರುವ ಕಲಬುರಗಿಯ ಟ್ರಾಮಾ ಸೆಂಟರ್ ಇವತ್ತು ಲೋಕಾರ್ಪಣೆಯಾಯಿತು. 110 ಬೆಡ್ ಇರುವ ಈ ಟ್ರಾಮಾ ಸೆಂಟರನ್ನು ಸಚಿವ ಪ್ರಿಯಾಂಕ್ ಖರ್ಗೆ ಉದ್ಘಾಟಿಸಿದ್ರು. ಜಿಲ್ಲಾಸ್ಪತ್ರ ಅಂಗಳದಲ್ಲಿ ನಿರ್ಮಾಣ ಮಾಡಿರುವ ತುರ್ತು ಚಿಕಿತ್ಸಾ ಘಟಕಗಳ ಕೇಂದ್ರ ಬಡವರ ಪಾಲಿಗೆ ಸಂಜೀವಿನಿ ಆಗಲಿದ್ದು, ಇನ್ನೊಂದು ಯಾವುದೇ ಅಂಬುಲೆನ್ಸ್ ಗಳು ಖಾಸಗಿ ಆಸ್ಪತ್ರೆಗೆ ತೆರಳದೇ ಮೊದಲು ಈ ಟ್ರಾಮಾ ಸೆಂಟರ್ ಗೆ ತರಬೇಕು ಅಂತ ಸರ್ಕಾರ ಸೂಚಿಸಿದೆ. ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದವರಿಗೆ ಸಂಪೂರ್ಣ ಉಚಿತವಾಗಿ ಚಿಕಿತ್ಸೆ ದೊರೆಯಲಿದೆ. ಕೆಲವೊಂದು ನಿಗದಿತ ಶುಲ್ಕ ಭರಿಸಿದರೆ ಉಳಿದವರಿಗೂ ಚಿಕಿತ್ಸಾ ಸೌಲಭ್ಯ ಸಿಗಲಿದೆ. ಸುತ್ತಮುತ್ತಲ ಜಿಲ್ಲೆಗಳ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಅಂತ ಜಿಲ್ಲಾಡಳಿತ ತಿಳಿಸಿದೆ.

Read More