Author: AIN Author

ಬೆಂಗಳೂರು:- ಸಿಲಿಕಾನ್ ಸಿಟಿ ನಿವಾರಿಸಲು ಬೆಂಗಳೂರು ಸಂಚಾರ ಪೊಲೀಸರು ಶನಿವಾರದಿಂದ ಪ್ರಾಯೋಗಿಕವಾಗಿ ಸಣ್ಣ ಬದಲಾವಣೆಗಳನ್ನು ಜಾರಿಗೆ ತರಲಿದ್ದಾರೆ. ಮಾರತ್ತಹಳ್ಳಿಯ ಹೊರ ವರ್ತುಲ ರಸ್ತೆಯ ಕೆಎಲ್‌ಎಂ ಫ್ಯಾಶನ್ ಮಾಲ್ ಸರ್ವೀಸ್ ರಸ್ತೆಯಲ್ಲಿ ಕುಂದಲಹಳ್ಳಿ ಕಡೆಗೆ ಹೋಗುವ ಎಲ್ಲಾ ರೀತಿಯ ವಾಹನಗಳಿಗೆ ಬಲ ತಿರುವುಗಳನ್ನು ಪೊಲೀಸರು ನಿಷೇಧಿಸಿದ್ದಾರೆ. ಮಾರತಹಳ್ಳಿ ಸೇತುವೆಯಿಂದ ಎಡಕ್ಕೆ ಹೋಗಿ ಎಚ್‌ಎಎಲ್ ಹಳೆ ವಿಮಾನ ನಿಲ್ದಾಣ ರಸ್ತೆಗೆ ಸೇರಲು ಮತ್ತು ತುಳಸಿ ಜಂಕ್ಷನ್‌ನಲ್ಲಿ ಯು-ಟರ್ನ್ ತೆಗೆದುಕೊಂಡು ವರ್ತೂರು ಕೋಡಿ ಮತ್ತು ಕುಂದಲಹಳ್ಳಿ ಕಡೆಗೆ ಹೋಗಲು ವಾಹನ ಸವಾರರಿಗೆ ಸೂಚಿಸಲಾಗಿದೆ. ಹೂಡಿ ಜಂಕ್ಷನ್ ಮತ್ತು ಗ್ರಾಫೈಟ್ ಇಂಡಿಯಾ ರಸ್ತೆ ನಡುವಿನ ರಸ್ತೆಯ ವಿಸ್ತರಣೆಯಲ್ಲಿ, ಸುಮಧುರ ನಂದನ್ ಜಂಕ್ಷನ್‌ನ 100 ಮೀಟರ್‌ಗಳ ಒಳಗೆ ಮೂರು ತಿರುವುಗಳಿವೆ. ಈ ಕೇಂದ್ರಗಳ ಉದ್ದಕ್ಕೂ ಒಂದೇ ಸಮಯದಲ್ಲಿ ಎರಡೂ ದಿಕ್ಕಿನಲ್ಲಿ ವಾಹನಗಳು ಚಲಿಸುವುದರಿಂದ ಸಂಚಾರವನ್ನು ನಿಧಾನಗೊಳಿಸುತ್ತವೆ ಇದನ್ನು ಸಮರ್ಥವಾಗಿ ಎದುರಿಸಲು ಸಂಚಾರ ಪೊಲೀಸರು ಪ್ರಾಯೋಗಿಕವಾಗಿ ಜಂಕ್ಷನ್ ಬಳಿ ಇರುವ ಮೂರು ತಿರುವುಗಳನ್ನು ಮುಚ್ಚಿದ್ದಾರೆ. ಈಗ, ಗರುಡಾಚಾರ್ಪಾಳ್ಯದಿಂದ ಬರುವ ವಾಹನಗಳು…

Read More

ಉಡುಪಿ:- ಮಂಗನ ಕಾಯಿಲೆಗೆ ಹೊಸ ವ್ಯಾಕ್ಸಿನ್​ ಬರಲಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಹೈದರಾಬಾದ್ ಸಂಸ್ಥೆ ಐಸಿಎಂಆರ್​ ಸಂಶೋಧನೆ ಮಾಡಿ ವ್ಯಾಕ್ಸಿನ್ ತಯಾರಿಸಲು ಒಪ್ಪಿಗೆ ನೀಡಿದೆ. ಮುಂದಿನ ವರ್ಷಕ್ಕೆ ಒಳ್ಳೆಯ ಚುಚ್ಚುಮದ್ದು ಸಿಗಬಹುದು ಎಂದರು. ಮಳೆಗಾಲ ಆರಂಭ ಮತ್ತು ಅಂತ್ಯದಲ್ಲಿ ಮಂಗನ ಕಾಯಿಲೆ ಹೆಚ್ಚಳವಾಗುತ್ತದೆ. ಮಾರ್ಚ್ ವರೆಗೆ ಜನರು ಬಹಳ ಎಚ್ಚರಿಕೆಯಿಂದ ಇರಬೇಕು. ರಾಜ್ಯದಲ್ಲಿ 2 ಸಾವಾಗಿದೆ, ಇಬ್ಬರು ಐಸಿಯುನಲ್ಲಿದ್ದಾರೆ. ರಾಜ್ಯದಲ್ಲಿ ಒಟ್ಟು 70 ಕೆಎಫ್​ಡಿ ಪ್ರಕರಣ ದಾಖಲಾಗಿದೆ. ಒಟ್ಟು 20 ಸಕ್ರಿಯ ಪ್ರಕರಣಗಳು ಇವೆ. ಪರಿಹಾರ ನೀಡುವ ಬಗ್ಗೆ ಸರ್ಕಾರಿ ಮಟ್ಟದಲ್ಲಿ ಚರ್ಚೆ ಮಾಡುತ್ತೇವೆ. ಸಾವು ಆಗದೆ ಇರುವ ಬಗ್ಗೆ ಮುನ್ನೆಚ್ಚರಿ ಕಾರ್ಯಕ್ರಮ ಕೈಗೊಳ್ಳುತ್ತೇವೆ. ಲಕ್ಷಣಗಳು ಬಂದ ಕೂಡಲೇ ಚಿಕಿತ್ಸೆ ಪಡೆದುಕೊಳ್ಳಿ ಎಂದರು. ರಾಜ್ಯದಲ್ಲಿ ಕೋವಿಡ್ ನಿಯಂತ್ರಣದಲ್ಲಿದೆ. ಎಳೆ ಪ್ರಾಯದ ಹೃದಯಘಾತ ಪ್ರಕರಣ‌ ಹೆಚ್ಚುತ್ತದೆ. ಹೃದಯಾಘಾತಕ್ಕೆ ಬೇರೆ ಬೇರೆ ಕಾರಣಗಳು ಇರುತ್ತದೆ. ಕ್ಯಾನ್ಸರ್, ಕಿಡ್ನಿ ಸಮಸ್ಯೆ, ಬಿಪಿ, ಶುಗರ್ ಹೆಚ್ಚಾಗಿ ಬಾಧಿಸುತ್ತಿದೆ. ಜಂಕ್ ಫುಡ್,…

Read More

ಹುಬ್ಬಳ್ಳಿ:- ಗಾಂಧೀಜಿ ಹತ್ಯೆಯ ಆರೋಪ ಮಾಡುತ್ತಾ ಕಾಂಗ್ರೆಸ್ ಪಕ್ಷ 30-40 ವರ್ಷಗಳ ಕಾಲ ದೇಶವನ್ನಾಳಿದೆ ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಈಶ್ವರಪ್ಪ ತಮ್ಮ ಮಾತನ್ನು ಡಿಫೆಂಡ್ ಮಾಡಿಕೊಂಡಿದ್ದಾರೆ. ಆದರೆ ತಾನು ಹೇಳುವುದೇನೆಂದರೆ ಯಾರೇ ಆಗಲಿ, ಆ ಕಡೆಯವರಾಗಲೀ ಈ ಕಡೆಯವರಾಗಲೀ ಲಕ್ಷ್ಮಣ ರೇಖೆಯನ್ನು ದಾಟಬಾರದು, ಈ ಮಾತನ್ನು ಸದಾ ಪ್ರತಿಪಾದಿಸುತ್ತಾ ಬಂದಿರುವುದಾಗಿ ಹೇಳಿದರು. ಮುಂದುವರಿದು ಮಾತಾಡಿದ ಅವರು ಗಾಂಧೀಜಿಯನ್ನು ಕೊಂದ ಆರೋಪ ಹೊರಿಸುತ್ತಲೇ ಅವರು 30-40 ವರ್ಷಗಳ ಕಾಲ ಸರ್ಕಾರ ನಡೆಸಿದ್ದಾರೆ, ಗಾಂಧಿ ಕೊಲೆ ಮತ್ತು ಬಿಜೆಪಿ ನಡುವೆ ಯಾವುದೇ ಸಂಬಂಧವಿಲ್ಲ ಅನ್ನೋದು ಬಹಳಷ್ಟು ಸಲ ಸಾಬೀತಾಗಿದೆ, ಅದು ಈಗ ಮುಗಿದುಹೋದ ಅಧ್ಯಾಯ, ಕಾಂಗ್ರೆಸ್ ಪಕ್ಷದವರು ಜನರನ್ನು ನಿರಂತರವಾಗಿ ಮೂರ್ಖರಾಗಿಸಲಾರರು ಎಂದು ಹೇಳಿದರು.

Read More

ಬೇಸಿಗೆಯಲ್ಲಿ ಅಗತ್ಯವಾದ ವಿಟಮಿನ್ ಗಳು ಮತ್ತು ಖನಿಜಾಂಶಗಳನ್ನು ಹೊಂದಿ ನಮ್ಮ ದೇಹಕ್ಕೆ ತಂಪು ನೀಡಬಲ್ಲ ಯಾವುದಾದರೊಂದು ನೈಸರ್ಗಿಕ ಪಾನೀಯ ಇದೆಯೆಂದರೆ, ಅದು ನಮ್ಮ ಮನೆಯಂಗಳದ ತೆಂಗಿನ ಮರದ ಎಳನೀರು. ಹೌದು, ಇತ್ತೀಚಿನ ಬದಲಾದ ಜೀವನ ಶೈಲಿಯಲ್ಲಿ ಬೇಸಿಗೆಯ ಸಂದರ್ಭದಲ್ಲಿ ನಾವು ನಮ್ಮ ದೇಹವನ್ನು ತಂಪು ಮಾಡಿಕೊಳ್ಳಲು ಐಸ್ ಕ್ರೀಮ್ ಗಳು ಹಾಗೂ ವಿವಿಧ ತಂಪು ಪಾನೀಯಗಳ ಮೊರೆ ಹೋಗುತ್ತೇವೆ. ಆದರೆ ಇವೆಲ್ಲಾ ಕೃತಕ ಆಹಾರ ಪದಾರ್ಥಗಳು. ದೇಹಕ್ಕೆ ಇವುಗಳಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಬದಲಾಗಿ ಆ ಕ್ಷಣಕ್ಕೆ ಸ್ವಲ್ಪ ಆರಾಮ ಎನಿಸಿದರೂ ನಂತರ ತೊಂದರೆಗಳೇ ಹೆಚ್ಚು. ಹಾಗಾಗಿ ಬೇಸಿಗೆಯ ತಾಪಮಾನವನ್ನು ಹಾಗೂ ನಮ್ಮ ದೇಹದ ಬಿಸಿಯನ್ನು ಧೈರ್ಯವಾಗಿ ಎದುರಿಸಲು ಎಳನೀರು ಕುಡಿಯುವುದು ಒಳ್ಳೆಯದು. ಆರೋಗ್ಯದ ಬಗ್ಗೆ ಜಾಗೃತಿ ಇರುವಂತಹ ಜನರು ಖಂಡಿತವಾಗಿಯೂ ದಿನಕ್ಕೊಂದು ಎಳನೀರು ಕುಡಿದೇ ಕುಡಿಯುತ್ತಾರೆ. ಅದರಲ್ಲೂ ಬೇಸಗೆ ಸಮಯದಲ್ಲಿ ಎಳನೀರು ಕುಡಿಯುತ್ತಿದ್ದರೆ ಅದರಿಂದ ದೇಹವು ನಿರ್ಜಲೀಕರಣದಿಂದ ಬಳಲುವುದು ತಪ್ಪುತ್ತದೆ. ದೇಹವನ್ನು ಹೈಡ್ರೇಟ್ ಆಗಿಡಬೇಕಾದರೆ ನೀವು ಎಳನೀರು ಕುಡಿಯಬೇಕು. ಎಳನೀರುನಿಂದ ಆಗುವ…

Read More

ನಿದ್ರಾಹೀನತೆ ಮತ್ತು ಪದೇ ಪದೇ ನಿದ್ರೆಯಿಂದ ಎಚ್ಚರವಾಗುವಂತಹ ಸಮಸ್ಯೆಯು ಜನರನ್ನು ಕಾಡುತ್ತಲಿರುವುದು. ನಿದ್ರಾಹೀನತೆ ಎಂದರೆ ರಾತ್ರಿಯಿಡಿ ಸರಿಯಾಗಿ ನಿದ್ರೆ ಬರದೇ ಇರುವುದು ಮತ್ತು ನಿದ್ರೆಯಲ್ಲಿ ಮಧ್ಯೆ ಮಧ್ಯೆ ಎಚ್ಚರವಾದರೆ ಅದಕ್ಕೆ ಕೂಡ ಕಾರಣಗಳು ಇರುವುದು. ರಾತ್ರಿ ಮೂರು ಗಂಟೆಗೆ ಪ್ರತಿನಿತ್ಯವೂ ಎಚ್ಚರವಾದರೆ ಅದು ತುಂಬಾ ಕೆಟ್ಟದು ಎಂದು ಹೆಚ್ಚಿನವರು ಭಾವಿಸುವರು. ಯಾಕೆಂದರೆ ಈ ಸಮಯದಲ್ಲಿ ಭೂತಗಳ ಬಾಧೆಯು ಹೆಚ್ಚಾಗಿರುವುದು. ಇದಕ್ಕೆ ಸ್ಪಷ್ಟವಾದ ಕಾರಣಗಳು ತಿಳಿದಲ್ಲವಾದರೂ ಜನರಲ್ಲಿ ನಿದ್ರೆ ಮತ್ತು ನಿದ್ರಾಹೀನತೆಗೆ ವಿವಿಧ ಹವ್ಯಾಸಗಳು ಇವೆ. ಕೆಲವು ಜನರು ರಾತ್ರಿ ಬೇಗ ಮಲಗುವುದನ್ನು ಅಭ್ಯಾಸ ಮಾಡಿಕೊಂಡಿರುವರು ಮತ್ತು ಇನ್ನು ಕೆಲವು ಜನರು ತಡರಾತ್ರಿ ತನಕ ನಿದ್ರೆ ಮಾಡುವುದೇ ಇಲ್ಲ. ಇದರ ಹೊರತಾಗಿ ಕೆಲವು ಜನರಿಗೆ ರಾತ್ರಿ ವೇಳ ಹಠಾತ್ ಆಗಿ ಎಚ್ಚರವಾಗುವುದು. ಮುಂಜಾನೆ 3 ಗಂಟೆಯಿಂದ 5 ಗಂಟೆ ತನಕ ಕೆಲವರಿಗೆ ನಿದ್ರೆಯಿಂದ ಎಚ್ಚರವಾಗುವುದು. ಕೆಲವರಿಗೆ ಇದು ತುಂಬಾ ವಿಚಿತ್ರವೆಂದು ಅನಿಸಿದರೂ ಅವರಿಗೆ ಪ್ರತಿನಿತ್ಯವೂ ಎಚ್ಚರವಾಗುವುದು. ಇದಕ್ಕೆ ಯಾವುದೇ ಅಲರಾಂ ಕೂಡ ಬೇಕಾಗಿಲ್ಲ.…

Read More

ಔಷಧಿಗಳು ಮಾತ್ರ ಪರಿಹಾರವನ್ನು ನೀಡುತ್ತವೆ ಎಂಬುದು ನಂಬಿಕೆ. ಆದರೆ ಆರೋಗ್ಯ ತಜ್ಞರ ಪ್ರಕಾರ ಕಾಳುಮೆಣಸಿನ ಸೇವನೆಯಿಂದ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಬಹುದು. ನಾವು ದಿನನಿತ್ಯ ಬಳಸುವ ಸಾಂಬಾರು ಪದಾರ್ಥಗಳನ್ನು ಪ್ರಾಚೀನ ಕಾಲದಿಂದಲೂ ಔಷಧಿಯಾಗಿ ಬಳಸಲಾಗುತ್ತಿದೆ. ಈ ಮಸಾಲೆಗಳು ಪ್ರಮುಖ ರೋಗಗಳಿಂದ ನಮ್ಮನ್ನು ರಕ್ಷಿಸುತ್ತವೆ. ಕರಿಮೆಣಸು ರಕ್ತವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಸಾಮಾನ್ಯ ರಕ್ತದೊತ್ತದ 120/80 ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ 140/90 ಆಗಿದ್ದರೆ ರಕ್ತದೊತ್ತಡ ಕ್ರಮೇಣ ಹೆಚ್ಚುತ್ತಿದೆ ಎಂದರ್ಥ. ಈ ವೇಳೆ ವೈದ್ಯರನ್ನು ತಕ್ಷಣ ಕಾಣಬೇಕು. ನಿಮ್ಮ ಬಿಪಿಯನ್ನು ನೀವು ನಿಯಂತ್ರಿಸಲು ಸಾಧ್ಯವಾಗದಿದ್ದರೆ, ನೀವು ಹೃದಯಾಘಾತ ಮತ್ತು ಪಾರ್ಶ್ವವಾಯುಗಳಂತಹ ತೊಡಕುಗಳಿಂದ ಬಳಲಬಹುದು. ಈ ಸಮಸ್ಯೆಯಿಂದ ಪರಿಹಾರ ಪಡೆಯಲು ಕರಿಮೆಣಸನ್ನು ನಿಯಮಿತವಾಗಿ ತೆಗೆದುಕೊಳ್ಳಬೇಕು. ಈ ಕಾಳುಮೆಣಸನ್ನು ಸೇವಿಸುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಇದು ಕ್ಯಾಲ್ಸಿಯಂ, ಕಬ್ಬಿಣ, ಕ್ಯಾರೋಟಿನ್ ಮತ್ತು ಥೈಮೋನ್‌ನಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಇದರ ಸೇವನೆಯು ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಸಹ ಸುಧಾರಿಸುತ್ತದೆ. ಇದಿಷ್ಟೇ ಅಲ್ಲದೆ, ಕೀಲು ನೋವು, ನೆಗಡಿ,…

Read More

ಬೆಂಗಳೂರು: ರೈತರು ನೀಡಿದ ಹಕ್ಕೊತ್ತಾಯಗಳನ್ನು  ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಕೇಂದ್ರದ ಬಿಜೆಪಿ ಸರ್ಕಾರ ಜಾರಿ ಮಾಡಿರುವ ರೈತ ವಿರೋಧಿ “ಭೂ ಸುಧಾರಣಾ ಕಾಯ್ದೆ 2020″ಕ್ಕೆ ತಿದ್ದುಪಡಿ ತರಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ  ಭರವಸೆ ನೀಡಿದರು.ಕರ್ನಾಟಕ ರಾಜ್ಯ ರೈತ ಸಂಘ ಫ್ರೀಡಂ ಪಾರ್ಕ್ ನಲ್ಲಿ ರೈತ ನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ 88ನೇ ಜನ್ಮ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ರೈತ ಸಮಾವೇಶವನ್ನು ಉದ್ಘಾಟಿಸಿದ ಬಳಿಕ ರೈತ ಪರ ಬಜೆಟ್ ರೂಪಿಸಲು ರೈತ ಸಂಘ ನೀಡಿದ ಹಕ್ಕೊತ್ತಾಯಗಳನ್ನು ಸ್ವೀಕರಿಸಿ ಮಾತನಾಡಿದರು. ನಂಜುಂಡಸ್ವಾಮಿಯವರು ಸಂಘಟಿಸಿದ ಸ್ಟಡಿ ಸರ್ಕಲ್ ಮೂಲಕ ಹಲವು ವಿಚಾರಗಳ ಒಳನೋಟ ದೊರೆಯಿತು. ಸಮಾಜವಾದಿ ಆರ್ಥಿಕತೆ, ಸಮಾಜವಾದಿ ರಾಜಕಾರಣದ ಬಗ್ಗೆ ಸ್ಪಷ್ಟತೆ ಸಿಕ್ಕಿತು. ಈ ಸ್ಟಡಿ ಸರ್ಕಲ್ ಗೆ ಬಹಳ ಮಂದಿ ಉಪನ್ಯಾಸಕರು, ಪ್ರೊಫೆಸರ್ ಗಳು, ಸಾಹಿತಿಗಳು ಬರುತ್ತಿದ್ದರು. ಇವರೆಲ್ಲರ ಮಾರ್ಗದರ್ಶನ ನನಗೆ ಅನುಕೂಲವಾಯಿತು ಎಂದರು.ನಂಜುಂಡಸ್ವಾಮಿಯವರು ಕಡೆಯವರೆಗೂ ರೈತರ ಪರವಾಗಿ ಕ್ರಿಯಾಶೀಲವಾಗಿದ್ದರು. https://ainlivenews.com/do-you-know-drinking-raw-milk-is-very-dangerous-for-health/  ಸಮಾಜವಾದಿ ಆಶಯಗಳ ಪರವಾಗಿದ್ದ ಇವರು ಬೆಳೆಸಿದ ರೈತ ಚಳವಳಿ ರೈತರ…

Read More

ಮುಂಬೈ: ಇಂಗ್ಲೆಂಡ್‌ ವಿರುದ್ಧ ಮುಂದೆ ನಡೆಯಲಿರುವ ಮೂರು ಟೆಸ್ಟ್‌ ಕ್ರಿಕೆಟ್‌ಗೆ ಭಾರತ ತಂಡದ ಸದಸ್ಯರ ಪಟ್ಟಿ ಬಿಡುಗಡೆಯಾಗಿದ್ದು ವಿರಾಟ್‌ ಕೊಹ್ಲಿ ಟೂರ್ನಿಯಿಂದ ಸಂಪೂರ್ಣವಾಗಿ ಹೊರಗುಳಿದಿದ್ದಾರೆ. ಮೊದಲ ಎರಡು ಪಂದ್ಯಗಳಿಗೆ ವೈಯಕ್ತಿಕ ಕಾರಣ ನೀಡಿದ್ದ ಕೊಹ್ಲಿ ಮುಂದಿನ ಮೂರು ಪಂದ್ಯಗಳನ್ನು ಆಡುವುದು ಅನುಮಾನ ಎಂದು ಹಿಂದೆಯೇ ವರದಿಯಾಗಿತ್ತು. ಈಗ ಈ ಸುದ್ದಿ ಅಧಿಕೃತವಾಗಿದೆ. ಕೊಹ್ಲಿ ಅವರ ನಿರ್ಧಾರವನ್ನು ನಾವು ಗೌರವಿಸುತ್ತೇವೆ ಎಂದು ಬಿಸಿಸಿಐ (BCCI) ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. https://ainlivenews.com/david-warner-wrote-a-special-record-he-is-the-3rd-player-in-the-world-to-reach-this-milestone/ ಗಾಯಗೊಂಡು ಎರಡನೇ ಟೆಸ್ಟ್‌ ಪಂದ್ಯದಿಂದ ಹೊರಗುಳಿದಿದ್ದ ಕೆ.ಎಲ್​ ರಾಹುಲ್ (KL Rahul)​ ಮತ್ತು ರವೀಂದ್ರ ಜಡೇಜಾ (Ravindra Jadeja) ಮತ್ತೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಫಿಟ್‌ನೆಸ್‌ ಪರೀಕ್ಷೆಯಲ್ಲಿ ಪಾಸ್‌ ಆದರೆ ಮಾತ್ರ ಆಡುವ 11 ಮಂದಿಯಲ್ಲಿ ಸ್ಥಾನ ಪಡೆಯಲಿದ್ದಾರೆ. ಬೆನ್ನು ಮತ್ತು ತೊಡೆ ಸಂದು ಗಾಯದಿಂದ ಬಳಲುತ್ತಿರುವ ಶ್ರೇಯಸ್​ ಅಯ್ಯರ್​ (Shreyas Iyer) ಹೊರಬಿದ್ದಿದ್ದಾರೆ.  ಫೆ.15 ರಿಂದ ರಾಜ್‌ಕೋಟ್‌ನಲ್ಲಿ ಮೂರನೇ ಟೆಸ್ಟ್‌ ನಡೆದರೆ ಫೆ.23 ರಿಂದ ರಾಂಚಿಯಲ್ಲಿ 4ನೇ ಟೆಸ್ಟ್‌…

Read More

ಬೆಂಗಳೂರು: ಕನ್ನಡಿಗರ ಶ್ರಮದ ತೆರಿಗೆ ಹಣದಲ್ಲಿ ಕಾಂಗ್ರೆಸ್ ಜಾಹೀರಾತು ನೀಡುತ್ತಿದೆ ಎಂದು ಆರೋಪಿಸಿರುವ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‍ರವರಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸರಣಿ ಟ್ವೀಟ್‍ಗಳ ಮೂಲಕ ಕೆಲವು ಪ್ರಶ್ನೆಗಳನ್ನಿಟ್ಟಿದ್ದಾರೆ. ದಿನದ 24 ಗಂಟೆ ಟಿವಿಯಲ್ಲಿ ಹಾಗೂ ದಿನಪತ್ರಿಕೆ ಗಳಲ್ಲಿ ಮೋದಿ ಗ್ಯಾರಂಟಿ ಎಂಬ ಜಾಹೀರಾತು ಪ್ರಸಾರ ಮಾಡಲು, ವೆಚ್ಚ ಮಾಡುತ್ತಿರುವ ದುಡ್ಡು ಯಾರ ಶ್ರಮದ ತೆರಿಗೆ ಹಣ? ಮೋದಿಯವರು ಅವರ ಪಿತ್ರಾರ್ಜಿತ ಆಸ್ತಿಯಿಂದ ಜಾಹೀರಾತುಗಳಿಗೆ ದುಡ್ಡು ನೀಡುತ್ತಿದ್ದಾರೆಯೇ? ಮೋದಿಯವರು `ಮೋದಿ ಗ್ಯಾರಂಟಿ’ ಎಂಬ ಜಾಹೀರಾತಿಗೆ ಸಾವಿರಾರು ಕೋಟಿ ರೂ. ಖರ್ಚು ಮಾಡುತ್ತಿರುವ ಹಣ ಜನರ ಶ್ರಮದ ತೆರಿಗೆ ಹಣವೇ ಅಲ್ಲವೆ ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. https://ainlivenews.com/do-you-know-drinking-raw-milk-is-very-dangerous-for-health/ ದೇಶದ ಹಣಕಾಸು ಸ್ಥಿತಿಯ ಬಗ್ಗೆ ಲೋಕಸಭೆಯಲ್ಲಿ ಶ್ವೇತಪತ್ರ ಮಂಡಿಸಿರುವ ನಿರ್ಮಲಾರವರೆ, ಮೋದಿ ಸರ್ಕಾರ ಕೇವಲ ಜಾಹೀರಾತುಗಳಿಗಾಗಿಯೇ ಸಾವಿರಾರು ಕೋಟಿ ರೂ. ಖರ್ಚು ಮಾಡುತ್ತಿರುವ ಬಗ್ಗೆ ಶ್ವೇತಪತ್ರದಲ್ಲಿ ಯಾಕೆ ಉಲ್ಲೇಖವಿಲ್ಲ? ಜಾಹೀರಾತುಗಳಿಗೆ ಖರ್ಚು ಮಾಡುತ್ತಿರುವುದು ಸರ್ಕಾರದ ಹಣವೋ ಅಥವಾ ಮೋದಿಯವರ ಅತ್ಯಾಪ್ತ…

Read More

ಬೆಂಗಳೂರು: ಸಂಬಂಧಿಕರ ಸಾವಿನ ಕಾರ್ಯಕ್ಕೆ ಹೋಗ್ತಿದ್ದ ವೃದ್ದೆಯೊಬ್ಬರು ದಾರುಣ ಸಾವು ಕಂಡಿದ್ದಾರೆ. ಸೂರ್ಯ ಉದಯಿಸೋ ವೇಳೆ ರಸ್ತೆ ದಾಟುತ್ತಿದ್ದ ಮಹಿಳೆಗೆ ಅಪರಿಚಿತ ವಾಹನ‌ ಡಿಕ್ಕಿ ಹೊಡೆದು ಪ್ರಾಣವನ್ನೇ ತೆಗೆದು ಪರಾರಿಯಾಗಿದೆ. ಅಷ್ಟಕ್ಕೂ ಈ ಘಟನೆ ನಡೆದಿದ್ದಲ್ಲಿ ಅಂತ ಹೇಳ್ತೀವಿ ನೋಡಿ.. ಈ ಫೋಟೋದಲ್ಲಿರುವ ವೃದ್ಧೆ ಹೆಸರು ಆಶಾರಾಣಿ.. ವಯಸ್ಸು ೬೦ ದಾಟಿತ್ತು. ಯಶವಂತಪುರ ಸಮೀಪದ ಮಹಾಲಕ್ಷ್ಮಿ ಲೇಔಟ್ ನಲ್ಲಿ  ಕುಟುಂಬ ಸಮೇತ ವಾಸವಾಗಿದ್ರು. ಆದ್ರೆ ಇಂದು ಬೆಳಿಗ್ಗೆ ಸಂಬಂದಿಕರ ಸಾವಿನ ಕಾರ್ಯಕ್ಕೆ ಹೋಗ್ತಿದ್ದ ಆಶಾರಾಣಿ ಹಿಟ್ ಆ್ಯಂಡ್ ರನ್’ಗೆ ಬಲಿಯಾಗಿದ್ದಾರೆ.. ಹೌದು.. ಮೈಸೂರಿನ ತಿ.ನರಸೀಪುರದಲ್ಲಿ ಆಶಾರಾಣಿಯವರ ಸಂಬಂಂದಿಕರೊಬ್ಬರು ಸಾವನ್ನಪ್ಪಿದ್ರು. ಅವರ ಸಾವಿನ ಕಾರ್ಯಕ್ಕೆ ಹೋಗಲು ಆಶಾರಾಣಿ ಇಂದು ಬೆಳಿಗ್ಗೆ ೫.೩೦ ರ ಸುಮಾರಿಗೆ ಮಹಾಲಕ್ಷ್ಮಿ ಲೇಔಟ್ ಮೆಟ್ರೋ ಸ್ಟೇಷನ್ ಬಳಿ ಬಂದಿದ್ರು. https://ainlivenews.com/do-you-know-drinking-raw-milk-is-very-dangerous-for-health/ ಆದ್ರೆ ಮೈಸೂರು ಕಡೆ ಹೋಗುವ ಬಸ್ ಹತ್ತಲು ರಸ್ತೆ ದಾಟುತ್ತಿದ್ದ ಆಶಾರಾಣಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಇದರಿಂದ ಕೆಳಗೆ ಬಿದ್ದ ಆಶಾರಾಣಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.…

Read More