Author: AIN Author

ಭಾರತೀಯ ಕ್ರಿಕೆಟ್‌ನ ದಂತಕಥೆ ಸಚಿನ್‌ ತೆಂಡೂಲ್ಕರ್‌ ದಾರಿಯಲ್ಲಿಹೋಗುತ್ತಿದ್ದ ವೇಳೆ ತಮ್ಮ ಹೆಸರಿನ ಟೀ ಶರ್ಟ್‌ ಧರಿಸಿದ್ದ ದ್ವಿಚಕ್ರ ವಾಹನ ಸವಾರನನ್ನು ಹಿಂಬಾಲಿಸಿ ಆತನನ್ನು ಭೇಟಿ ಮಾಡಿದ್ದಾರೆ. ಘಟನೆಯ ವಿಡಿಯೊ ಅಂತರ್ಜಾಲದಲ್ಲಿವೈರಲ್‌ ಆಗಿದೆ. ಸಚಿನ್‌ ಅಭಿಮಾನಿ ‘ಐ ಮಿಸ್‌ ಯೂ ತೆಂಡೂಲ್ಕರ್‌’ ಎಂಬ ಬರಹವಿದ್ದ ‘ಮುಂಬೈ ಇಂಡಿಯನ್ಸ್‌’ ಐಪಿಎಲ್‌ ತಂಡದ ಜೆರ್ಸಿ ಧರಿಸಿದ್ದರು. ವಿಡಿಯೊದಲ್ಲಿಸಚಿನ್‌ ಪ್ರಯಾಣಿಸುತ್ತಿದ್ದ ಕಾರಿನ ಸನಿಹದಲ್ಲಿಯೇ ಅವರ ಅಭಿಮಾನಿ ತೆರಳಿದ್ದು ಕಂಡುಬರುತ್ತದೆ. ನಂತರ ಬೈಕಿನ ಹಿಂದೆಯೇ ಸಾಗಿದ ಸಚಿನ್‌ ಕಾರನ್ನು ಬೈಕ್‌ ಸವಾರ ಅಭಿಮಾನಿಯ ಸನಿಹಕ್ಕೆ ಕೊಂಡೊಯ್ಯುವಂತೆ ತಮ್ಮ ಚಾಲಕನಿಗೆ ಸೂಚಿಸುತ್ತಾರೆ. ಅದರಂತೆ ಕಾರು ಚಾಲಕ ಆ ಬೈಕ್‌ ಸವಾರನ ಬಳಿಗೆ ಕಾರು ಕೊಂಡೊಯ್ದಾಗ ಸಚಿನ್‌ ಕಾರಿನ ಕಿಟಕಿ ಗಾಜನ್ನು ಇಳಿಸಿತ್ತಾರೆ. ಕಾರಿವಲ್ಲಿಸಚಿನ್‌ರನ್ನು ಕಂಡ ಅಭಿಮಾನಿ ಸಂತೋಷಕ್ಕೆ ಪಾರವೇ ಇರಲಿಲ್ಲ. https://twitter.com/sachin_rt/status/1753029043270857060?ref_src=twsrc%5Etfw%7Ctwcamp%5Etweetembed%7Ctwterm%5E1753029043270857060%7Ctwgr%5E%7Ctwcon%5Es1_&ref_url=about%3Asrcdoc ಬೈಕನ್ನು ರಸ್ತೆ ಬದಿ ಬೈಕ್‌ ನಿಲ್ಲಿಸಿ ತಮ್ಮ ಕಾರಿನ ಬಳಿಗೆ ಬಂದ ಅಭಿಮಾನಿಯನ್ನು ಸಚಿನ್‌ ಮಾತನಾಡಿಸುವ ದೃಶ್ಯಾವಳಿ ವಿಡಿಯೋದಲ್ಲಿದಾಖಲಾಗಿದೆ. ಅಭಿಮಾನಿ ಭೇಟಿ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿನ್‌,…

Read More

ಬೆಂಗಳೂರು:- ಬೆಂಗಳೂರು ಸೇರಿ ಹಲವೆಡೆ ತಾಪಮಾನ ದುಪ್ಪಟ್ಟಾಗಲಿದೆ. ಮುಂಬರುವ ವಾರವೂ ಬಿಸಿಲಿನ ತಾಪಮಾನ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. https://ainlivenews.com/bjp-chanakya-amit-shahs-arrival-in-mysore-accident-in-the-middle-of-the-road/ ಮುಂದಿನ 48 ಗಂಟೆಯಲ್ಲಿ ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ದಾವಣಗೆರೆ, ಮೈಸೂರು, ಮಂಡ್ಯ, ಕೋಲಾರ, ರಾಮನಗರ ಸೇರಿದಂತೆ ವಿಜಯನಗರ, ಚಾಮರಾಜನಗರ, ತುಮಕೂರು, ಚಿತ್ರದುರ್ಗದಲ್ಲೂ ಶುಷ್ಕ ವಾತಾವರಣ ಇರಲಿದೆ. ಉತ್ತರ ಒಳನಾಡಿನ ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ, ಬೀದರ್‌, ಧಾರವಾಡ, ಗದಗ ಸೇರಿದಂತೆ ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯ ಹಲವು ಕಡೆಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್‌ ಹೆಚ್ಚಾಗುವ ಸಾಧ್ಯತೆಯಿದೆ. ರಾಜ್ಯಾದ್ಯಂತ ಕೆಲವು ಕಡೆಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್‌ ಹೆಚ್ಚಾಗುವ ಸಾಧ್ಯತೆಯಿದೆ. ಇದರಿಂದಾಗಿ ಬಿಸಿಲಿನ ತೀವ್ರತೆ ಜತೆಗೆ ಧಗೆ ವಾತಾವರಣ ಇರಲಿದೆ. ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಖ್ಯವಾಗಿ ನಿರ್ಮಲ ಆಕಾಶವಿರುತ್ತದೆ. ಕೆಲವು ಕಡೆಗಳಲ್ಲಿ ಬೆಳಗಿನ ಜಾವ ಮಂಜು ಮುಸುಕುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ…

Read More

ಭಾರತದಲ್ಲಿ ಚಿನ್ನದ ಬೆಲೆ ತುಸು ಇಳಿಕೆಯಾದರೆ, ಬೆಳ್ಳಿ ಬೆಲೆ ಸ್ವಲ್ಪ ಹೆಚ್ಚಾಗಿದೆ. ಹಲವು ದೇಶಗಳಲ್ಲಿ ಚಿನ್ನದ ಬೆಲೆ ಇಂದು ಅಲ್ಪ ಏರಿಕೆ ಕಂಡಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 57,900 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 63,160 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 57,900 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 7,250 ರುಪಾಯಿಯಲ್ಲಿ ಇದೆ ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಫೆಬ್ರುವರಿ 11ಕ್ಕೆ) 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 57,900 ರೂ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 63,160 ರೂ ಬೆಳ್ಳಿ ಬೆಲೆ 10 ಗ್ರಾಂಗೆ: 725 ರೂ ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 57,900 ರೂ 24…

Read More

ಮೈಸೂರು:- ಇಂದು ಬೆಳಗ್ಗಿನ ಜಾವ ಮೈಸೂರಿಗೆ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಮೈಸೂರಿಗೆ ಆಗಮಿಸಿದ್ದಾರೆ. ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಮುಂಜಾನೆ 3 ಗಂಟೆಗೆ ವಿಶೇಷ ವಿಮಾನದ ಮೂಲಕ ಆಗಮಿಸಿದ ಅಮಿತ್ ಶಾ, ಇಲ್ಲಿಂದ ರಸ್ತೆ ಮಾರ್ಗದ ಮೂಲಕ ತೆರಳಿ ಱಡಿಸನ್ ಬ್ಲೂ ಹೋಟೆಲ್​ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಱಡಿಸನ್ ಬ್ಲೂ ಹೋಟೆಲ್​ ಸುತ್ತಮುತ್ತ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. https://ainlivenews.com/the-barbaric-murder-of-a-woman-by-strangulation/ ಅಮಿತ್ ಶಾ ಆಗಮನಕ್ಕೂ ಮುನ್ನ ಅವರು ಸಂಚರಿಸುವ ರಸ್ತೆಯಲ್ಲಿ ಕಾರು ಅಪಘಾತ ಸಂಭವಿಸಿದ ಘಟನೆ ನಡೆದಿದೆ. ಮೈಸೂರು-ನಂಜನಗೂಡು ರಸ್ತೆ ಮಧ್ಯೆ ಹಾಕಲಾಗಿದ್ದ ಬ್ಯಾರಿಕೇಡ್‌ಗೆ ಚಾಲಕನ ನಿಯಂತ್ರಣ ತಪ್ಪಿ ಕಾರು ಡಿಕ್ಕಿಯಾಗಿದೆ. ತಕ್ಷಣ ಪೊಲೀಸರು ಆ್ಯಂಬುಲೆನ್ಸ್ ಕರೆಸಿ ಗಾಯಾಳವನ್ನು ಆಸ್ಪತ್ರೆಗೆ ರವಾನಿಸಿದ್ದು, ಅಪಘಾತಕ್ಕೀಡಾಗಿದ್ದ ಕಾರನ್ನು ತೆರವುಗೊಳಿಸಿದ್ದಾರೆ. https://ainlivenews.com/background-of-bike-collision-with-car-three-spot-death/

Read More

ಸಕ್ಕರೆಗೆ ಜೇನುತುಪ್ಪವು ಒಂದು ಆರೋಗ್ಯಕರ ಪರ್ಯಾಯ. ಆದರೆ ಇತರ ಯಾವುದೇ ಆಹಾರ ಪದಾರ್ಥದಂತೆ, ಜೇನುತುಪ್ಪದ ಅತೀ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದನ್ನು ಹೂವಿನ ಮಕರಂದದಿಂದ ಜೇನುಗಳು ತಯಾರಿಸುತ್ತವೆ. ಇದು ತೂಕ ಇಳಿಸಲು ಸಹಾಯ ಮಾಡುತ್ತದೆ ಮತ್ತು ಹಲವಾರು ಇತರ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಆದರೆ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕಷಾಯ ಮತ್ತು ವಿವಿಧ ಟೀಗಳ ಸೇವನೆ ಕಾರಣ, ಕಳೆದ ಕೆಲವು ತಿಂಗಳುಗಳಿಂದ ಜೇನಿನ ಸೇವನೆಯೂ ಹೆಚ್ಚಾಗಿದೆ. ಈ ಸಿಹಿ ಮಕರಂದವನ್ನು ಅಥವಾ ಜೇನುತುಪ್ಪವನ್ನು ಸೇವಿಸುವುದರಿಂದ ಯಾವುದೇ ಅಡ್ಡ ಪರಿಣಾಮಗಳು ಸಂಭವಿಸಬಹುದು ಎಂದು ಎಂದಾದರೂ ಯೋಚಿಸಿದ್ದೀರಾ? ಅತಿಯಾಗಿ ಜೇನುತುಪ್ಪವನ್ನು ಸೇವಿಸಿದಾಗ ಸಂಭವಿಸಬಹುದಾದ ಐದು ಸಂಗತಿಗಳು ಇಲ್ಲಿವೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ ಜೇನುತುಪ್ಪದಲ್ಲಿ ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್ ಅಧಿಕ ಪ್ರಮಾಣದಲ್ಲಿವೆ. ಆದ್ದರಿಂದ ಹೆಚ್ಚು ಜೇನು ತುಪ್ಪವನ್ನು ಸೇವಿಸಿದರೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಮಧುಮೇಹಿಗಳು ಅಧಿಕ ಪ್ರಮಾಣದಲ್ಲಿ ಜೇನುತುಪ್ಪವನ್ನು ಸೇವಿಸುವುದರಿಂದ ರಕ್ತದಲ್ಲಿ ಸಕ್ಕರೆ ಮಟ್ಟ ಏರಿಕೆಯಾಗಬಹುದು, ಇದು ಅಪಾಯಕಾರಿ.. ಹೊಟ್ಟೆಯ ಸಮಸ್ಯೆ  ಹೆಚ್ಚು…

Read More

ಚಿಕ್ಕಬಳ್ಳಾಪುರ:- ನಗರದ ಚಾಮರಾಜಪೇಟೆ ವಾರ್ಡ್‌ನಲ್ಲಿ ಬಾಡಿಗೆ ರೂಮ್‌ನಲ್ಲಿ ಕತ್ತು ಕೊಯ್ದು ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜರುಗಿದೆ. 40 ವರ್ಷದ ದೀಪಾ ಕೊಲೆಯಾದ ವಿವಾಹಿತ ಮಹಿಳೆಯಾಗಿದ್ದು, ತಮಿಳುನಾಡು ಮೂಲದ ಪ್ರಿಯಕರ ದಿವಾಕರ್‌ ಎಂಬಾತ ಕೊಲೆ ಮಾಡಿ ರೂಮ್​ಗೆ ಬೀಗ ಹಾಕಿ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ರೂಮ್​ನಿಂದ ಕೆಟ್ಟ ವಾಸನೆ ಬರುತ್ತಿರುವ ಹಿನ್ನೆಲೆ ಅನುಮಾನಗೊಂಡ ಕಟ್ಟಡದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ರೂಮ್​ ಪರಿಶೀಲಿಸಿದಾಗ ಕೊಲೆ ಪ್ರಕರಣ ಬೆಳಕಿಗೆಬಂದಿದೆ. ಸ್ಥಳಕ್ಕೆ ಚಿಕ್ಕಬಳ್ಳಾಫುರ ಎಸ್​ಪಿ ಡಿ.ಎಲ್.ನಾಗೇಶ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ರೂಮ್​ ಮಾಲಿಕರಿಂದ ಮಾಹಿತಿ ಪಡೆದಿದ್ದಾರೆ. ಮೃತ ದೀಪಾಳನ್ನು ಬಾಗೇಪಲ್ಲಿ ತಾಲೂಕಿನ ಜೂಲಪಾಳ್ಯಾಗೆ ಮದುವೆ ಮಾಡಿಕೊಡಲಾಗಿತ್ತು. ಮಕ್ಕಳ ಜೊತೆ ತವರು ಮನೆ ಚಿಕ್ಕಬಳ್ಳಾಫುರದಲ್ಲಿ ವಾಸವಿದ್ದ ದೀಪಾಳಿಗೆ ತನ್ನ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ದೀವಾಕರ್ ಜೊತೆ ಅನೈತಿಕ ಸಂಬಂಧ ಇತ್ತು ಎನ್ನುವ ಆರೋಪ ಕೇಳಿಬಂದಿದೆ. ಆಗಾಗ ಪ್ರೀಯಕರ ದಿವಾಕರ್ ರೂಮಿಗೆ ಬಂದು ಹೋಗುತ್ತಿದ್ದಳು. ಇತ್ತೀಚೆಗೆ ರೂಮ್​ಗೆ ಬಂದಿದ್ದಾಗ ಇಬ್ಬರ…

Read More

ರಾಮನಗರ:- ಜಿಲ್ಲೆಯ ಹಾರೋಹಳ್ಳಿಯ ಇಂಡಸ್ಟ್ರಿಯಲ್ ಏರಿಯಾ ಬಳಿ ಕಾರಿಗೆ ಬೈಕ್ ಡಿಕ್ಕಿ ಯಾಗಿ ಮೂವರು ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ಜರುಗಿದೆ. ದಯಾನಂದ್ ಸಾಗರ್ ಆಸ್ಪತ್ರೆಗೆ ಮೂವರ ಮೃತದೇಹ ಸ್ಥಳಾಂತರ ಮಾಡಲಾಗಿದ್ದು, ಮೃತರ ಗುರುತು ಪರಿಚಯ ಪರಿಶೀಲನೆ ಮಾಡಲಾಗುತ್ತಿದೆ. ಕಾರು ಮಾಲೀಕನನ್ನು ವಶಕ್ಕೆ ಪಡೆದು ಪೊಲೀಸರು ಮಾಹಿತಿ ಪಡೆಯುತ್ತಿದ್ದಾರೆ. ಹಾರೋಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಮೃತ ಮೂವರು ಉತ್ತರ ಭಾರತದ ಮೂಲದವರು ಎನ್ನಲಾಗುತ್ತಿದೆ

Read More

​ಮೈಸೂರು:- ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರು ಆಗಿರುವ ಡಿಕೆ ಶಿವಕುಮಾರ್ ಅವರು ಮೈಸೂರು ಸುತ್ತೂರು ಮಠದ ಗದ್ದುಗೆ ದರ್ಶನ ಪಡೆದಿದ್ದಾರೆ. https://ainlivenews.com/eshwarappa-is-a-bit-of-an-extremist-in-our-party-sadananda-gowda/ ಜಿಲ್ಲೆಯ ನಂಜನಗೂಡು ತಾಲೂಕಿನ ಸುತ್ತೂರು ಗ್ರಾಮದ ಸುತ್ತೂರು ಜಗದ್ಗುರು ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಶನಿವಾರ ಭಾಗವಹಿಸಿ ಸುತ್ತೂರು ಮಠದ ಗದ್ದುಗೆ ದರ್ಶನ ಪಡೆದಕೊಂಡಿದ್ದಾರೆ. ಉಪ ಮುಖ್ಯಮಂತ್ರಿಯನ್ನು ಸುತ್ತೂರು ದೇಶೀಕೇಂದ್ರ ಸ್ವಾಮೀಜಿಗಳು ಬರಮಾಡಿಕೊಂಡರು. ಇತ್ತ ಡಿಕೆ ಶಿವಕುಮಾರ್​ ವೇದಿಕೆಗೆ ಆಗಮಿಸುತ್ತಿದ್ದಂತೆ ಜೈಶ್ರೀರಾಮ್ ಎಂದು ಘೋಷಣೆ ಕೂಗಲಾಗಿದೆ. ಸಿರಿಗೆರೆ ಮಠದ ಶಿವಮುರ್ತಿ ಶಿವಾಚಾರ್ಯಶ್ರೀ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​, ಶಾಸಕರಾದ ದರ್ಶನ್ ಧ್ರುವನಾರಾಯಣ, ಗಣೇಶ್ ಪ್ರಸಾದ್ ಉಪಸ್ಥಿತರಿದ್ದು, ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ನಡೆಯಿತು.

Read More

ಧಾರವಾಡ: ಹೊಸ ಯಲ್ಲಾಪುರದ ರುದ್ರ ಭೂಮಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗ ಡದ ಜನರಿಗೆ ಸ್ಮಶಾನ ಭೂಮಿ ಹದ್ದುಬಸ್ತು ಮಾಡಿಕೊಡುವಂತೆ ಧಾರವಾಡ ಜಿಲ್ಲಾ ಮಹಿಳಾ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಧಾರವಾಡ ಜಿಲ್ಲಾ ಮಹಿಳಾ ಪ್ರಧಾನ ಸಂಚಾಲಕಿ ಶಕುಂತಲಾ ವಾಲಿಕಾರ ಅವರ ನೇತೃತ್ವದಲ್ಲಿ ಹೋರಾಟ ಮಾಡಲಾಯಿತು. ಧಾರವಾಡದ ಹೊಸ ಎಲ್ಲಾಪುರದಲ್ಲಿ ಇರುವಂತಹ ರುದ್ರ ಭೂಮಿಯು ಸಂಪೂರ್ಣ ವಾಗಿ ಹದಗೆಟ್ಟಿದ್ದು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ ಹೆಣ ಹೂಳಲು ಸ್ಥಳವೇ ಇಲ್ಲದಂತಾಗಿದ್ದು ದಲಿತರಿಗೆ ಹೆಣ ಹೂಳಲು ಎಲ್ಲಿಂದ ಎಲ್ಲಿಯವರೆಗೆ ಇದೆ ಎಂದು ಅರಿಯಲು ಸ್ಮಶಾನದಲ್ಲಿ ಸ್ಥಳವನ್ನು ಹದಬಸ್ಸು ಮಾಡಿಕೊಡಲು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ವರದಿ, ಮಾರುತಿ ಲಮಾಣಿ

Read More

ಬೆಂಗಳೂರು:- ಈಶ್ವರಪ್ಪ ಸ್ವಲ್ಪ ಉಗ್ರವಾದಿ, ಆದ್ರೆ ಗುಂಡು ಹಾರಿಸುವಷ್ಟು ಉಗ್ರರಲ್ಲ ಎಂದು ಮಾಜಿ ಸಿಎಂ ಸದಾನಂದ ಗೌಡ ಹೇಳಿಕೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಈಶ್ವರಪ್ಪನವರು ನಮ್ಮ ಪಕ್ಷದಲ್ಲಿ ಸ್ವಲ್ಪ ಉಗ್ರವಾದಿ. ಯಾವುದೇ ವಿಚಾರ ಬಂದಾಗ ಆಕ್ರೋಶಭರಿತರಾದ್ರೆ ಏನಾದರೂ ಮಾತನಾಡಿಬಿಡ್ತಾರೆ. ಹಾಗೇಯೇ ಬಾಯಿತಪ್ಪಿ ಹೇಳಿರಬಹುದು ಎಂದು ನಾನು ಭಾವಿಸುತ್ತೇನೆ. ಆದ್ರೆ ಒಬ್ಬ ಹಿರಿಯ ರಾಜಕಾರಣಿಯಾಗಿ ಹಾಗೆ ಹೇಳಬಾರದಿತ್ತು ಎಂದರು. ʻದೇಶದ್ರೋಹ ಹೇಳಿಕೆ ನೀಡುವವರನ್ನು ಗುಂಡಿಕ್ಕಿಕೊಲ್ಲುವ ಕಾನೂನು ತನ್ನಿʼ ಎಂಬ ಈಶ್ವರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಈಶ್ವರಪ್ಪ ಅವರು ಹಾಗೆ ಹೇಳಬಾರದಿತ್ತು. ಸ್ವಲ್ಪ ವ್ಯತ್ಯಾಸವಾಗಿದೆ. ಆದ್ರೆ ಅವರು ಗುಂಡು ಹಾರಿಸುವಷ್ಟು ಉಗ್ರರಲ್ಲ. ದೇಶ ವಿಭಜನೆ ಬಂದಾಗ ಕ್ರೋದ ಬರುತ್ತದೆ. ಆದ್ದರಿಂದ ಉದ್ವೇಗದಲ್ಲಿ ಮಾತನಾಡಿದ್ದಾರೆ. ಇದನ್ನು ಡಿ.ಕೆ ಸುರೇಶ್‌ ಅವರು ಬಿಡಬೇಕು. ಅದೇ ರೀತಿ ಏನೂ ಸಿಗದೇ ಇದ್ದಾಗ ಈ ರೀತಿ ಹಿಡಿದುಕೊಂಡು ನೇತಾಡುವುದನ್ನು ಬಿಡಬೇಕು ಎಂದು ನಾನು ಆಗ್ರಹಿಸುತ್ತೇನೆ ಎಂದಿದ್ದಾರೆ.

Read More