Author: AIN Author

ಸಿಕ್ಕಿಂ:- ಕಾರುಗಳಿಗೆ ಹಾಲಿನ ಟ್ಯಾಂಕರ್​ ಡಿಕ್ಕಿ ಹೊಡೆದ ಪರಿಣಾಮ 3 ಮಂದಿ ಸಾವನ್ನಪ್ಪಿದ್ದು, 20 ಜನರಿಗೆ ಗಾಯವಾದ ಘಟನೆ ಸಿಕ್ಕಿಂನ ರಾಣಿಪೂಲ್‌ನಲ್ಲಿ ಜರುಗಿದೆ. ಡಿಕ್ಕಿಯ ರಭಸಕ್ಕೆ ಆ ಪ್ರದೇಶದಲ್ಲಿದ್ದ ಜನರು ವಾಹನಗಳಡಿ ಸಿಲುಕಿ ನುಜ್ಜುಗುಜ್ಜಾಗಿದ್ದಾರೆ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಟ್ಯಾಂಕರ್ ಒಂದು ಕಾರುಗಳಿಗೆ ಡಿಕ್ಕಿ ಹೊಡೆದ ತಕ್ಷಣವು ಆ ವಾಹನಗಳು ಜಾತ್ರೆ ನಡೆಯುತ್ತಿದ್ದ ಮೈದಾನದೊಳಗೆ ನುಗ್ಗಿತ್ತು. ಘಟನೆಯಲ್ಲಿ ಜನರು ವಾಹನದಡಿ ಸಿಲುಕಿಕೊಂಡ ಜನರನ್ನು ಹೊರತೆಗೆಯಲು ಹರಸಾಹಸ ಪಟ್ಟಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ ಹಾಲಿನ ಟ್ಯಾಂಕರ್ ಬ್ರೇಕ್ ಫೇಲ್​ ಆಗಿದ್ದರಿಂದ, ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ಗಾಯಾಳುಗಳನ್ನು ಸೆಂಟ್ರಲ್ ರೆಫರಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಅಪಘಾತದ ವೇಳೆ ಮೇಳದ ಮೈದಾನದಲ್ಲಿ ‘ತಾಂಬೋಲ’ ಆಟ ನಡೆಯುತ್ತಿದ್ದರಿಂದ ಜನರಿಂದ ತುಂಬಿ ತುಳುಕುತ್ತಿತ್ತು. ಹಾಲಿನ ಟ್ಯಾಂಕರ್ ಅದರ ಬದಿಯಲ್ಲಿ ಸಿಕ್ಕಿಂ ಹಾಲು ಒಕ್ಕೂಟದ ಲೇಬಲ್ ಅನ್ನು ಹೊಂದಿತ್ತು. ಆಘಾತಕಾರಿ ಸಿಸಿಟಿವಿ ದೃಶ್ಯಾವಳಿಗಳು ಪ್ರಭಾವದ ಕ್ಷಣವನ್ನು ಸೆರೆಹಿಡಿಯಲಾಗಿದೆ.

Read More

ಬೆಂಗಳೂರು:- ರಾಜ್ಯಕ್ಕೆ ಅಮಿತ್ ಶಾ ಎಂಟ್ರಿ ಕೊಟ್ಟಿದ್ದು, ಮೈತ್ರಿ ನಾಯಕರ ಭೇಟಿ ಇಂದೇ ನಡೆಯುತ್ತಾ? ಎಂಬ ಪ್ರಶ್ನೆ ಮೂಡಿದೆ. ಮೈತ್ರಿ ಪ್ರಾಬಲ್ಯದ ಅಂಗಳದಲ್ಲೆ ಸೀಟ್ ಬೇಡಿಕೆಯ ಒತ್ತಡ ಹೆಚ್ಚಿಸಲು ಮಾಜಿ ಸಿಎಂ ಕುಮಾರಸ್ವಾಮಿ ಮುಂದಾಗುವ ಸಾಧ್ಯತೆಗಳಿವೆ. ಅಮಿತ್ ಶಾ, ಕುಮಾರಸ್ವಾಮಿ ಭೇಟಿ ಹಾಗೂ ಮಾತುಕತೆಗೆ ಸಾಂಸ್ಕೃತಿಕ ನಗರಿ ವೇದಿಕೆ ಆದರೂ ಅಚ್ಚರಿ ಇಲ್ಲ. ಮೈತ್ರಿ ಪಾಲಿನ ಹಕ್ಕು ಮಂಡಿಸಿ ಮಾಜಿ ಸಿಎಂ ಕುಮಾರಸ್ವಾಮಿ ಅವರು ಅಮಿತ್ ಶಾ ಮುಂದೆ ರಾಜಕೀಯ ದಾಳ ಉರುಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ. https://ainlivenews.com/congress-poster-campaign-against-amit-shah-do-you-know-what-it-is-about/ ಒಟ್ಟಾರೆ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಬಂದಿರುವುದು ಮೈತ್ರಿ ನಾಯಕರ ಮಾತುಕತೆಯ ಕುತೂಹಲವನ್ನು ಹೆಚ್ಚಿಸಿದೆ ಎನ್ನಲಾಗುತ್ತಿದೆ. ರಾಜ್ಯದ 28 ಕ್ಷೇತ್ರಗಳ ಕ್ಷೇತ್ರವಾರು ಸರ್ವೆ ಮಾಡಿಸಿರೋ ಅಮಿತ್ ಶಾ ಅವರು 28 ಕ್ಷೇತ್ರಗಳಲ್ಲಿ ಸೋಲು- ಗೆಲುವಿನ ಮಾಹಿತಿ ಸಂಗ್ರಹ ಮಾಡಲಿದ್ದಾರೆ. ಯಾವ ಕ್ಷೇತ್ರ ಜೆಡಿಎಸ್‍ಗೆ ಬಿಟ್ಟು ಕೊಡಬೇಕು ಅನ್ನೋ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಿದ್ದಾರೆ.

Read More

ಬೆಂಗಳೂರು:- ಬರದಿಂದ ನಲುಗುತ್ತಿರುವ ನಾಡಿಗೆ ಬರಿಗೈಯಲ್ಲಿ ಬಂದಿರಾ? ಎಂದು ಹೇಳುವ ಮೂಲಕ ಅಮಿತ್ ಶಾ ವಿರುದ್ಧ ಕಾಂಗ್ರೆಸ್ ಪೋಸ್ಟರ್ ಅಭಿಯಾನ ಶುರುಮಾಡಿದೆ. https://ainlivenews.com/allegation-of-40-commission-high-court-is-fed-up-with-the-delay-in-the-trial/ ಮೈಸೂರು ಗ್ರಾಮಾಂತರ ಅಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್ ನೇತೃತ್ವದಲ್ಲಿ “ನನ್ನ ತೆರಿಗೆ ನನ್ನ ಹಕ್ಕು” ಘೋಷಣೆಯೊಂದಿಗೆ “ಬರದಿಂದ ನಲುಗುತ್ತಿರುವ ನಾಡಿಗೆ ಬರಿಗೈಯಲ್ಲಿ ಬಂದಿರಾ?” ಎಂಬ ಪ್ರಶ್ನೆಯೊಂದಿಗೆ ಪೋಸ್ಟರ್ ಅಭಿಯಾನ ನಡೆಸಲು ಕಾರ್ಯಕರ್ತರು ಸಜ್ಜಾಗಿದ್ದಾರೆ. https://ainlivenews.com/a-10-year-old-boy-died-of-brain-fever/ ಬೆಳಗ್ಗೆ 11 ಗಂಟೆಗೆ ಮೈಸೂರಿನ ಫೀಲ್ಡ್ ಮಾರ್ಷಲ್‌ ಕಾರ್ಯಪ್ಪ ವೃತ್ತದಲ್ಲಿ ಅಮಿತ್ ಶಾ ವಿರುದ್ಧ ಪೋಸ್ಟರ್ ಅಭಿಯಾನ ನಡೆಸಲು ಜಿಲ್ಲಾ ಕಾಂಗ್ರೆಸ್ ಪ್ಲಾನ್ ಮಾಡಿಕೊಂಡಿದೆ. ಇಷ್ಟೆಲ್ಲಾ ಆದರೂ ಅಮಿತ್ ಶಾ ಅವರನ್ನು ಕೈ ಪಡೆ ಸ್ವಾಗತ ಕೋರಿದ್ದು, ಕನ್ನಡ ನಾಡಲ್ಲಿ ಅತಿಥ್ಯಕ್ಕೆ ಬರವಿಲ್ಲ. ದ್ರೋಹಿಗಳನ್ನು ಕ್ಷಮಿಸು ಮರೆವಿಲ್ಲ ಅಂತಾ ಘೋಷ ವಾಕ್ಯ ಸಿದ್ಧಮಾಡಿದ್ದಾರೆ.

Read More

ಬೆಂಗಳೂರು:- 40% ಕಮಿಷನ್​ ಆರೋಪಕ್ಕೆ ಸಂಬಂಧಿಸಿದಂಕೆ ಆದೇಶವಿದ್ದರೂ ವಿಚಾರಣೆ ವಿಳಂಬಕ್ಕೆ ಕಾರಣವೇನು ಎಂದು ಪ್ರಶ್ನಿಸುವ ಮೂಲಕ ಸರ್ಕಾರಕ್ಕೆ ಹೈಕೋರ್ಕ್​ ಪ್ರಶ್ನೆ ಮಾಡಿದೆ. ವಿಚಾರಣೆ ನಡೆಸಲು ನೇಮಕಗೊಂಡಿರುವ ನಿವೃತ್ತ ನ್ಯಾಯಮೂರ್ತಿ ಹೆಚ್​.ಎನ್​ ನಾಗಮೋಹನ್​ ದಾಸ್​ ಅವರ ಏಕ ವ್ಯಕ್ತಿ ಆಯೋಗದ ಮುಂದೆ ಏಕೆ ಒಂದೇ ಒಂದು ಪ್ರಕ್ರಿಯೆ ನಡೆದಿಲ್ಲ ಎಂಬುದನ್ನು ರಾಜ್ಯ ಸರ್ಕಾರ (Karnataka Government) ತಿಳಿಸಬೇಕು. ಇಲ್ಲವಾದಲ್ಲಿ ಸೂಕ್ತ ಆದೇಶ ಮಾಡಲಾಗುವುದು ಎಂದು ಹೈಕೋರ್ಟ್‌ (High Court) ಎಚ್ಚರಿಸಿದೆ. ರಾಜ್ಯ ಸರ್ಕಾರ ರಚಿಸಿರುವ ನಾಗಮೋಹನ್‌ ದಾಸ್‌ ಅವರ ಏಕ ವ್ಯಕ್ತಿ ಆಯೋಗ ರಚನೆ ಪ್ರಶ್ನಿಸಿ ಮೆರ್ಸಸ್‌ ನಿಕ್ಷೇಪ್‌ ಇನ್ಫ್ರಾ ಪ್ರಾಜೆಕ್ಟ್ಸ್‌ ಸೇರಿದಂತೆ ಹಲವು ಗುತ್ತಿಗೆ ಕಂಪೆನಿಗಳು ಮತ್ತು ಗುತ್ತಿಗೆದಾರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು ಮುಂದಿನ ವಿಚಾರಣೆಯ ವೇಳೆಗೆ ಸಮಿತಿಯ ಮುಂದೆ ಇದುವರೆಗೆ ಏಕೆ ಒಂದೇ ಒಂದು ಪ್ರಕ್ರಿಯೆ ನಡೆದಿಲ್ಲ ಎಂಬುದರ ಕುರಿತು ತಿಳಿಸಬೇಕು. ಒಂದೊಮ್ಮೆ ಪ್ರಕ್ರಿಯೆ ನಡೆಯದಿರುವುದನ್ನು ಸಮರ್ಥನೆ…

Read More

ಕೆಲವರಿಗೆ ಕಾಲಕಾಲಕ್ಕೆ ತಲೆನೋವು ಕೂಡ ಬರುತ್ತದೆ. ತಲೆನೋವನ್ನು ಗುಣಪಡಿಸಲು ಪ್ರಯತ್ನಿಸುವಾಗ ನಾವೆಲ್ಲರೂ ಅದರ ಕಾರಣದ ಬಗ್ಗೆ ಯೋಚಿಸುವುದಿಲ್ಲ. ದೇಹದಲ್ಲಿ ಕೆಲವು ಪೋಷಕಾಂಶಗಳು ಮತ್ತು ವಿಟಮಿನ್‌ಗಳ ಕೊರತೆಯು ತಲೆನೋವಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ ಎಂದು ನಿಮಗೆ ತಿಳಿದಿದೆಯೇ? ನಿಮ್ಮ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳು ಸಿಗುವಂತೆ ನೋಡಿಕೊಳ್ಳುವ ಮೂಲಕ ಸ್ವಲ್ಪ ಮಟ್ಟಿಗೆ ತಲೆನೋವು ತಡೆಯಬಹುದು. ಹೇಗೆ ಎಂದು ನೋಡೋಣ. ವಿಟಮಿನ್ ಡಿ ಕೊರತೆ: ವಿಟಮಿನ್ ಡಿ ದೇಹಕ್ಕೆ ಅತ್ಯಗತ್ಯ. ಕಡಿಮೆ ವಿಟಮಿನ್ ಡಿ ಮಟ್ಟಗಳು ತಲೆನೋವಿಗೆ ಕಾರಣವಾಗಬಹುದು. ಈ ವಿಟಮಿನ್ ಕೊರತೆಯು ಮೈಗ್ರೇನ್ ತಲೆನೋವಿಗೆ ಕಾರಣವಾಗುತ್ತದೆ. ಸೂರ್ಯನ ಬೆಳಕು ವಿಟಮಿನ್ ಡಿ ಯ ಅತ್ಯುತ್ತಮ ಮೂಲವಾಗಿದೆ. ನಿಮ್ಮ ಚರ್ಮವು ಸೂರ್ಯನ ಬೆಳಕಿಗೆ ಒಡ್ಡಿಕೊಂಡಾಗ ಕೊಲೆಸ್ಟ್ರಾಲ್ ವಿಟಮಿನ್ ಡಿ ಆಗಿ ಬದಲಾಗುತ್ತದೆ. ಸೂರ್ಯನ UVB ಪ್ರೋಟಾನ್‌ಗಳು ಚರ್ಮದ ಕೋಶಗಳಲ್ಲಿನ ಕೊಲೆಸ್ಟ್ರಾಲ್‌ನಲ್ಲಿ ಪ್ರತಿಫಲಿಸುತ್ತದೆ. ಅವರು ವಿಟಮಿನ್ ಡಿ ಸಂಶ್ಲೇಷಣೆಗೆ ಅಗತ್ಯವಾದ ಶಕ್ತಿಯನ್ನು ಒದಗಿಸುತ್ತಾರೆ. ತಲೆನೋವನ್ನು ತಡೆಗಟ್ಟಲು ಮತ್ತು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ವಿಟಮಿನ್ ಡಿ ಅತ್ಯಗತ್ಯ. ಹಗಲಿನಲ್ಲಿ…

Read More

ವಿಜಯಪುರ :- ನಗರದ ಗೋಳಗುಮ್ಮಟ ಏರಿಯಾದಲ್ಲಿ ಮೆದುಳು ಜ್ವರಕ್ಕೆ ಬಾಲಕ ಬಲಿಯಾದ ಘಟನೆ ನಡೆದಿದೆ. ರಜಿತ್ ಮಿಥುನ್ ಅಳ್ಳಿಮೋರೆ ಮೃತ ಬಾಲಕ. ಕಳೆದ ವಾರದ ಹಿಂದೆ ರಜಿತ್ ತೀವ್ರ ಜ್ವರದಿಂದ ಬಳಲುತ್ತಿದ್ದ. ಚಿಕಿತ್ಸೆಗಾಗಿ ಮಹಾರಾಷ್ಟ್ರದ ಸೊಲ್ಲಾಪುರ ಆಸ್ಪತ್ರೆಗೆ ರಜಿತ್ ನನ್ನ ದಾಖಲಿಸಲಾಗಿತ್ತು. ಜ್ವರ ನೆತ್ತಿಗೆ ಏರಿ ಮೆದುಳಲ್ಲಿ ಕಾಣಿಸಿಕೊಂಡ ಬಾವು ಬಂದಿತ್ತು. ಕಾರಣ ಚಿಕಿತ್ಸೆ ಫಲಿಸದೆ ಬಾಲಕನಿಂದು ಸಾವನ್ನಪ್ಪಿದ್ದಾನೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ

Read More

ಗದಗ:- ಗದಗ (Gadag) ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (GIMS) ಸಂಸ್ಥೆಯ ಆವರಣದಲ್ಲಿ ರೀಲ್‌ಗಳನ್ನು ಮಾಡಿದ 38 ವೈದ್ಯಕೀಯ ವಿದ್ಯಾರ್ಥಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳ ಹೌಸ್‌ಮ್ಯಾನ್‌ಶಿಪ್ ಪೋಸ್ಟಿಂಗ್ (ಪ್ರಾಯೋಗಿಕ ತರಬೇತಿ) ಅನ್ನು 10 ದಿನಗಳವರೆಗೆ ವಿಸ್ತರಿಸುವ ಮೂಲಕ ಶಿಕ್ಷೆ ವಿಧಿಸಲಾಗಿದೆ. https://ainlivenews.com/countdown-to-valentines-day-beer-wine-whiskey/ ಜನಪ್ರಿಯ ಹಿಂದಿ, ಕನ್ನಡ ಮತ್ತು ತೆಲುಗು ಸಿನಿಮಾ ಹಾಡುಗಳಿಗೆ ನೃತ್ಯ ಸೇರಿದಂತೆ ಹಲವಾರು ರೀಲ್‌ಗಳನ್ನು ವೈದ್ಯಕೀಯ ವಿದ್ಯಾರ್ಥಿಗಳು ಆಸ್ಪತ್ರೆ ಆವರಣದಲ್ಲೇ ಮಾಡಿದ್ದರು. ಈ ರೀಲ್ಸ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಮೂಲಕ ನೆಟ್ಟಿಗರ ಟೀಕೆಗೆ ಕಾರಣವಾಗಿತ್ತು. ಆಸ್ಪತ್ರೆ ಆವರಣ, ಲ್ಯಾಬ್ ಮತ್ತು ಆಪರೇಷನ್ ಥಿಯೇಟರ್ ಅನ್ನು ಮನರಂಜನಾ ವಿಡಿಯೋ ಚಿತ್ರೀಕರಣಕ್ಕೆ ಬಳಸಿಕೊಂಡಿದ್ದಕ್ಕೆ ವಿದ್ಯಾರ್ಥಿಗಳ ವಿರುದ್ಧ ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಿದ್ದರು. https://ainlivenews.com/bjp-chanakya-amit-shahs-arrival-in-mysore-accident-in-the-middle-of-the-road/ ಆಸ್ಪತ್ರೆಯ ಆವರಣದಲ್ಲಿ ಸಂಜೆ ಮತ್ತು ರಾತ್ರಿ ವೇಳೆ ವಿದ್ಯಾರ್ಥಿಗಳು ರೀಲ್ಸ್ ಚಿತ್ರೀಕರಣ ಮಾಡುತ್ತಿದ್ದರೂ ಅಧಿಕಾರಿಗಳ ಗಮನಕ್ಕೆ ಬಂದಿಲ್ಲ. ವಿದ್ಯಾರ್ಥಿಗಳು ತಮ್ಮ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ವೀಡಿಯೊಗಳನ್ನು ಪೋಸ್ಟ್ ಮಾಡಿದ ನಂತರ, ಅವು ವೈರಲ್ ಆಗಿ ಅಧಿಕಾರಿಗಳ ಗಮನ…

Read More

ಬೆಂಗಳೂರು:- ಪ್ರೇಮಿಗಳ ದಿನಾಚರಣೆ ಅಂದಮೇಲೆ ಪಾರ್ಟಿ ಜೋರಾಗಿಯೇ ಇರುತ್ತೆ. ಹೀಗಿದ್ದಾಗಲೇ ಪ್ರೇಮಿಗಳಿಗೆ ಮೊದಲ ಶಾಕ್ ಸಿಕ್ಕಿದೆ, ಅದು ಏನೆಂದರೆ ಪ್ರೇಮಿಗಳ ದಿನದಂದು ಅಂದ್ರೆ ಫೆಬ್ರವರಿ 14ರಿಂದ 16 ರವರೆಗೆ ಎಣ್ಣೆ ಸಿಗೋದೆ ಇಲ್ಲವಂತೆ. ಇದಕ್ಕೆ ಕಾರಣ ಏನು ಅನ್ನೋದಕ್ಕಿಂತ ಮೊದಲು ಈ ಕ್ರಮದ ವಿರುದ್ಧ ಇದೀಗ ಹೋಟೆಲ್ ಮಾಲೀಕರ ಸಂಘ ರೊಚ್ಚಿಗೆದ್ದಿದ್ದು ಏಕೆ? ಅನ್ನೋದನ್ನ ತಿಳಿಯೋಣ ಬನ್ನಿ.ಅಷ್ಟಕ್ಕೂ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ವಿಧಾನ ಪರಿಷತ್ ಚುನಾವಣೆ ಇರುವ ಹಿನ್ನೆಲೆ ಫೆಬ್ರವರಿ 14 ರಿಂದ 16 ರವರೆಗೆ ಮದ್ಯ ಮಾರಾಟ ಬ್ಯಾನ್ ಆಗಿದೆ. ಆದರೆ ಇದೇ ವಿಚಾರ ಈಗ ದೊಡ್ಡ ಬೆಂಕಿ ಹೊತ್ತಿಸಿದೆ, ಅದರಲ್ಲೂ ಹೋಟೆಲ್ ಮಾಲೀಕರ ಸಂಘ & ಚುನಾವಣೆ ನಡುವೆ ಈಗ ಹೊಸ ತಿಕ್ಕಾಟ ಶುರುವಾಗಿದೆ. ಇದೀಗ ಈ ಆದೇಶವನ್ನು ಮರುಪರಿಶೀಲಿಸಬೇಕು ಎಂದು, ಬೆಂಗಳೂರು ಪೊಲೀಸ್ ಆಯುಕ್ತರು ಮತ್ತು ಮುಖ್ಯ ಚುನಾವಣಾ ಆಯುಕ್ತರಿಗೆ ಬೃಹತ್ ಬೆಂಗಳೂರು ಹೋಟೆಲ್ ಮಾಲೀಕರ ಸಂಘ ಪತ್ರವನ್ನ ಬರೆದಿದೆ. https://ainlivenews.com/the-temperature-has-doubled-in-many-parts-of-the-state/ ಹಾಗಾದ್ರೆ ಫೆಬ್ರವರಿ 14 ರಂದು…

Read More

ಭಾರತೀಯ ಕ್ರಿಕೆಟ್‌ನ ದಂತಕಥೆ ಸಚಿನ್‌ ತೆಂಡೂಲ್ಕರ್‌ ದಾರಿಯಲ್ಲಿಹೋಗುತ್ತಿದ್ದ ವೇಳೆ ತಮ್ಮ ಹೆಸರಿನ ಟೀ ಶರ್ಟ್‌ ಧರಿಸಿದ್ದ ದ್ವಿಚಕ್ರ ವಾಹನ ಸವಾರನನ್ನು ಹಿಂಬಾಲಿಸಿ ಆತನನ್ನು ಭೇಟಿ ಮಾಡಿದ್ದಾರೆ. ಘಟನೆಯ ವಿಡಿಯೊ ಅಂತರ್ಜಾಲದಲ್ಲಿವೈರಲ್‌ ಆಗಿದೆ. ಸಚಿನ್‌ ಅಭಿಮಾನಿ ‘ಐ ಮಿಸ್‌ ಯೂ ತೆಂಡೂಲ್ಕರ್‌’ ಎಂಬ ಬರಹವಿದ್ದ ‘ಮುಂಬೈ ಇಂಡಿಯನ್ಸ್‌’ ಐಪಿಎಲ್‌ ತಂಡದ ಜೆರ್ಸಿ ಧರಿಸಿದ್ದರು. ವಿಡಿಯೊದಲ್ಲಿಸಚಿನ್‌ ಪ್ರಯಾಣಿಸುತ್ತಿದ್ದ ಕಾರಿನ ಸನಿಹದಲ್ಲಿಯೇ ಅವರ ಅಭಿಮಾನಿ ತೆರಳಿದ್ದು ಕಂಡುಬರುತ್ತದೆ. ನಂತರ ಬೈಕಿನ ಹಿಂದೆಯೇ ಸಾಗಿದ ಸಚಿನ್‌ ಕಾರನ್ನು ಬೈಕ್‌ ಸವಾರ ಅಭಿಮಾನಿಯ ಸನಿಹಕ್ಕೆ ಕೊಂಡೊಯ್ಯುವಂತೆ ತಮ್ಮ ಚಾಲಕನಿಗೆ ಸೂಚಿಸುತ್ತಾರೆ. ಅದರಂತೆ ಕಾರು ಚಾಲಕ ಆ ಬೈಕ್‌ ಸವಾರನ ಬಳಿಗೆ ಕಾರು ಕೊಂಡೊಯ್ದಾಗ ಸಚಿನ್‌ ಕಾರಿನ ಕಿಟಕಿ ಗಾಜನ್ನು ಇಳಿಸಿತ್ತಾರೆ. ಕಾರಿವಲ್ಲಿಸಚಿನ್‌ರನ್ನು ಕಂಡ ಅಭಿಮಾನಿ ಸಂತೋಷಕ್ಕೆ ಪಾರವೇ ಇರಲಿಲ್ಲ. https://twitter.com/sachin_rt/status/1753029043270857060?ref_src=twsrc%5Etfw%7Ctwcamp%5Etweetembed%7Ctwterm%5E1753029043270857060%7Ctwgr%5E%7Ctwcon%5Es1_&ref_url=about%3Asrcdoc ಬೈಕನ್ನು ರಸ್ತೆ ಬದಿ ಬೈಕ್‌ ನಿಲ್ಲಿಸಿ ತಮ್ಮ ಕಾರಿನ ಬಳಿಗೆ ಬಂದ ಅಭಿಮಾನಿಯನ್ನು ಸಚಿನ್‌ ಮಾತನಾಡಿಸುವ ದೃಶ್ಯಾವಳಿ ವಿಡಿಯೋದಲ್ಲಿದಾಖಲಾಗಿದೆ. ಅಭಿಮಾನಿ ಭೇಟಿ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿನ್‌,…

Read More

ಬೆಂಗಳೂರು:- ಬೆಂಗಳೂರು ಸೇರಿ ಹಲವೆಡೆ ತಾಪಮಾನ ದುಪ್ಪಟ್ಟಾಗಲಿದೆ. ಮುಂಬರುವ ವಾರವೂ ಬಿಸಿಲಿನ ತಾಪಮಾನ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. https://ainlivenews.com/bjp-chanakya-amit-shahs-arrival-in-mysore-accident-in-the-middle-of-the-road/ ಮುಂದಿನ 48 ಗಂಟೆಯಲ್ಲಿ ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ದಾವಣಗೆರೆ, ಮೈಸೂರು, ಮಂಡ್ಯ, ಕೋಲಾರ, ರಾಮನಗರ ಸೇರಿದಂತೆ ವಿಜಯನಗರ, ಚಾಮರಾಜನಗರ, ತುಮಕೂರು, ಚಿತ್ರದುರ್ಗದಲ್ಲೂ ಶುಷ್ಕ ವಾತಾವರಣ ಇರಲಿದೆ. ಉತ್ತರ ಒಳನಾಡಿನ ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ, ಬೀದರ್‌, ಧಾರವಾಡ, ಗದಗ ಸೇರಿದಂತೆ ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯ ಹಲವು ಕಡೆಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್‌ ಹೆಚ್ಚಾಗುವ ಸಾಧ್ಯತೆಯಿದೆ. ರಾಜ್ಯಾದ್ಯಂತ ಕೆಲವು ಕಡೆಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್‌ ಹೆಚ್ಚಾಗುವ ಸಾಧ್ಯತೆಯಿದೆ. ಇದರಿಂದಾಗಿ ಬಿಸಿಲಿನ ತೀವ್ರತೆ ಜತೆಗೆ ಧಗೆ ವಾತಾವರಣ ಇರಲಿದೆ. ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಖ್ಯವಾಗಿ ನಿರ್ಮಲ ಆಕಾಶವಿರುತ್ತದೆ. ಕೆಲವು ಕಡೆಗಳಲ್ಲಿ ಬೆಳಗಿನ ಜಾವ ಮಂಜು ಮುಸುಕುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ…

Read More