Author: AIN Author

ಬಾಗಲಕೋಟೆ:- ಇಂದಿನ ಆದುನಿಕ ಜಗತ್ತಿನ ಜಂಜಾಟದಲ್ಲಿ ಸಮಯದ ಕೊರತೆಯಿಂದ ಪಾಲಕರು ಮಕ್ಕಳ ಜೊತೆಗಿನ ಸಮಯವನ್ನು ಕಳೆಯದೆ ಇರುವದು ಮಕ್ಕಳ ಮಾನಸಿಕತೆಗೆ ಕಾರಣವಾಗಬಹುದು, ಈ ಹಿನ್ನೆಲೆಯಲ್ಲಿ ಮಕ್ಕಳ ಜೊತೆ ಸ್ವಲ್ಪ ಸಮಯ ಕಳೆದು ಮಕ್ಕಳನ್ನು ಸಂತೋಷ ಪಡಿಸುವದರ ಜೊತೆಗೆ ಸಾಕಾರಾತ್ಮಕ ಭಾವನೆಗಳಿಗೆ ಕಾರಣವಗಬಹುದು ಎಂದು ಶಾಂತಿನಿಕೇತನ ಶಾಲೆಯ ಶಿಕ್ಷಕಿ ಪೂಜಾ ಅವರು ಅಭಿಪ್ರಾಯ ವ್ಯಕ್ತಪಡಿಸಿದರು ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಮದಭಾವಿ ಗ್ರಾಮದ ಶಾಂತಿನಿಕೇತನ ಆಂಗ್ಲಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡಿದ್ದ ತಾಯಿಯಂದಿರ ಸಭೆಯಲ್ಲಿ ಮಾತನಾಡಿದ ಅವರು ಮಕ್ಕಳಿಗೆ ಮೊಬೈಲ್, ಟಿವಿ, ಸೀರಿಯಲ್, ಗಳಿಂದ ದೂರವಿಟ್ಟು ಅವರಲ್ಲಿಯ ಸೂಕ್ತ ಪ್ರತಿಭೆಯನ್ನು ಗುರುತಿಸಿ ಸಾಕಾರಾತ್ಮಕ ಅಂಶಗಳ ಆಗರವಾಗಿ ಮಗುವನ್ನು ಬೆಳೆಸುವದಕ್ಕೆ ಸಹಕಾರ ನೀಡಬೇಕು ಎಂಬು ಅಭಿಪ್ರಾಯ ಪಟ್ಟರು ಒಂದು ಮಗವಿನ ಎಲ್ಲಾ ರೀತಿಯ ಬೆಳವಣಿಗೆಗೆ ತಾಯಿಯ ಕೊಡುಗೆ ಆಪಾರವಾಗಿದೆ ” ಜನನಿ ತಾನೇ ಮೊದಲ ಗುರು ” ಎಂಬ ಅರ್ಥ ಬಹಳ ಸ್ತುತ್ಯವಾಗಿದೆ ಎಂದು ಶಾಲಾ ನಿರ್ದೇಶಕರೋರವರು ಅಭಿಪ್ರಾಯ ಪಟ್ಟರು ನೂರಾರು ಸಂಖ್ಯೆಯಯಲ್ಲಿ ತಾಯಿಯಂದಿರು ಸಭೆಯಲ್ಲಿ…

Read More

ದೇವನಹಳ್ಳಿ:- ಬೈಕ್​ಗೆ ಗುದ್ದಿ ಚಾಲಕ ವಾಹನ ಸಮೇತ ಪರಾರಿಯಾದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ನಗರ ಹೊರವಲಯದ ಕೋಲಾರ ರೋಡ್​ನಲ್ಲಿ ಜರುಗಿದೆ. ಘಟನೆಯಲ್ಲಿ ಗಾಯಾಳುವಿನ ಮೆದುಳು ಹೊರಗೆ ಬಂದಿತ್ತು. ಸ್ಥಳಿಯರು ಕೂಡಲೆ ಆ್ಯಂಬುಲೇನ್ಸ್​​ನಲ್ಲಿ ಆಸ್ವತ್ರೆಗೆ ಸಾಗಿಸಿದ್ದಾರೆ. ಹೊಸಕೋಟೆಯ ಖಾಸಗಿ ಆಸ್ವತ್ರೆಗೆ ದಾಖಲಿಸಲಾಗಿದ್ದು, ವ್ಯಕ್ತಿಯ ಗುರುತು ಪತ್ತೆಯಾಗದಿದ್ದರು ಶಸ್ತ್ರ ಚಿಕಿತ್ಸೆ ಮಾಡಿ ವೈದ್ಯ ಸುಪ್ರಿತ್ ಚಿಕಿತ್ಸೆ ನೀಡಿದ್ದಾರೆ. https://ainlivenews.com/i-am-not-a-high-command-slave-rajanna/ ಗಾಯಾಳುವನ್ನು ಮೊದಲು ಸರ್ಕಾರಿ ಆಸ್ವತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿಯ ಸಿಬ್ಬಂದಿ ಗಾಯಾಳುವಿನ ಕಂಡಿಷನ್ ಕ್ರಿಟಿಕಲ್ ಇದೆ ಚಿಕಿತ್ಸೆ ನೀಡಲು ಆಗಲ್ಲ ಎಂದು ವಾಪಸ್ ಕಳಿಸಿದ್ದರು. ಬಳಿಕ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು. ಪ್ರಯತ್ನ ಪಡೋಣವೆಂದು ವೈದ್ಯ ಸುಪ್ರಿತ್ ಶಸ್ತ್ರ ಚಿಕಿತ್ಸೆ ಮಾಡಿ ಜೀವ ಉಳಿಸಿದ್ದಾರೆ. ವೈದ್ಯನ ಕಾರ್ಯಕ್ಕೆ ಗಾಯಾಳುವಿನ ಕುಟುಂಬಸ್ಥರು ಮತ್ತು ಸಾರ್ವಜನಿಕರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸದ್ಯ ಗಾಯಾಳು ಚೇತರಿಸಿಕೊಳ್ಳುತ್ತಿದ್ದಾರೆ.

Read More

ಹಾಸನ :- ಹೈಕಮಾಂಡ್​ಗೆ ರಾಜಣ್ಣ ಕೇರ್ ಮಾಡಲ್ಲ ಎಂಬ ಬಿ.ಶಿವರಾಮ್ ಹೇಳಿಕೆಗೆ ಸ್ವತಹ ರಾಜಣ್ಣ ಅವರೇ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಯಾರೋ ಮುಖಂಡರನ್ನು ಮೆಚ್ಚಿಸೋ ನಡವಳಿಕೆ ನನಗೆ ಬೇಕಿಲ್ಲ. ನನ್ನ ನಡವಳಿಕೆಯನ್ನು ಜನರು ಮೆಚ್ಚಬೇಕು. ಹೈಕಮಾಂಡ್​ಗೆ ಹೆದರಲ್ಲ ಅನ್ನೋದು ನನ್ನಿಷ್ಟ. ನಾನು ಯಾರಿಗೆ ಹೆದರಬೇಕೋ ಅವರಿಗೆ ಮಾತ್ರ ಹೆದರುತ್ತೇನೆ. ನಾನು ಹೈಕಮಾಂಡ್​ಗೆ ನಿಷ್ಠೆ ಹೊಂದಿದ್ದೇನೆ, ಆದರೆ ಗುಲಾಮನಲ್ಲ ಎಂದರು. https://ainlivenews.com/the-driver-lost-control-and-the-lorry-full-of-sesame-overturned-a-disaster/ ದೇಶ ವಿಭಜನೆ ಹೇಳಿಕೆ ಕೊಡೋರನ್ನ ಗುಂಡಿಕ್ಕಿ ಹತ್ಯೆ ಮಾಡುವ ಕಾನೂನು ಜಾರಿಯಾಗಬೇಕೆಂಬ ಈಶ್ವರಪ್ಪ ಹೇಳಿಕೆ ವಿಚಾರವಾಗಿ ಮಾತನಾಡಿದ ರಾಜಣ್ಣ, ಅವರು ನಾನು ಡಿಕೆ ಸುರೇಶ್ ಬಗ್ಗೆ ಆರೀತಿ ಮಾತನಾಡಿಲ್ಲ ಎಂದು ಹೇಳಿದ್ದಾರೆ. ಅದೊಂದು ಮುಗಿದ ವಿಚಾರ ಎಂದರು https://ainlivenews.com/bcci-notice-to-give-rest-to-jaspreet-bumrah/ ಮಾಜಿ ಸಚಿವರ ಕಾಂಗ್ರೆಸ್ ಹಿರಿಯ ನಾಯಕ ಬಿ ಶಿವರಾಮ್ ಅವರು ತಮ್ಮ ವಿರುದ್ಧ 40 ಪರ್ಸೆಂಟ್​ಗೂ ಅಧಿಕ ಕಮಿಷನ್ ಆರೋಪದ ಬಗ್ಗೆ ಮಾತನಾಡಿದ ರಾಜಣ್ಣ, ನಾನು ಯಾರ ಬಳಿಯಾದರು ಅರ್ಧ ಪೈಸೆ ಲಂಚ ಪಡೆದ ಆರೋಪ…

Read More

ಜಸ್​ಪ್ರೀತ್ ಬುಮ್ರಾಗೆ ರೆಸ್ಟ್ ನೀಡುವಂತೆ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಗೆ BCCI ಖಡಕ್ ಸೂಚನೆ ನೀಡಿದೆ ಇಂಗ್ಲೆಂಡ್ ವಿರುದ್ಧದ ಕೊನೆಯ 3 ಪಂದ್ಯಗಳಿಗೆ ಭಾರತ ತಂಡವನ್ನು (India Squad) ಘೋಷಿಸಲಾಗಿದೆ. 17 ಸದಸ್ಯರ ಈ ತಂಡದಲ್ಲಿ ಉಪನಾಯಕನಾಗಿ ಜಸ್​ಪ್ರೀತ್ ಬುಮ್ರಾ (Jasprit Bumrah) ಕಾಣಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ 3ನೇ ಟೆಸ್ಟ್ ಪಂದ್ಯದ ವೇಳೆ ಬುಮ್ರಾ ವಿಶ್ರಾಂತಿ ಕಾರಣ ಹೊರಗುಳಿಯಲಿದ್ದಾರೆ ಎನ್ನಲಾಗಿತ್ತು ಆದರೀಗ ರಾಜ್​ಕೋಟ್​ನಲ್ಲಿ ನಡೆಯಲಿರುವ ಮೂರನೇ ಪಂದ್ಯದಲ್ಲಿ ಜಸ್​ಪ್ರೀತ್ ಬುಮ್ರಾ ಕಣಕ್ಕಿಳಿಯುವುದು ಖಚಿತ. ಆದರೆ 4ನೇ ಪಂದ್ಯದ ವೇಳೆ ಅವರಿಗೆ ವಿಶ್ರಾಂತಿ ನೀಡುವಂತೆ ಬಿಸಿಸಿಐ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್​ಗೆ ಸೂಚಿಸಿದೆ. ಏಕೆಂದರೆ ಮೊಹಮ್ಮದ್ ಶಮಿಯ ಅಲಭ್ಯತೆಯ ನಡುವೆ ಜಸ್​ಪ್ರೀತ್ ಬುಮ್ರಾ ಟೀಮ್ ಇಂಡಿಯಾ ಬೌಲಿಂಗ್ ಲೈನಪ್​ ಅನ್ನು ಮುನ್ನಡೆಸುತ್ತಿದ್ದಾರೆ. ಅದರಲ್ಲೂ ಇಂಗ್ಲೆಂಡ್ ವಿರುದ್ಧದ ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ಬುಮ್ರಾ ಹೆಚ್ಚಿನ ಓವರ್​ಗಳನ್ನು ಎಸೆದಿದ್ದರು. ಇದೀಗ ಅವರ ಮೇಲಿನ ಒತ್ತಡವನ್ನು ಕಡಿಮೆಗೊಳಿಸಲು ಬಿಸಿಸಿಐ 4ನೇ ಟೆಸ್ಟ್ ಪಂದ್ಯದ ವೇಳೆ ಬುಮ್ರಾಗೆ ವಿಶ್ರಾಂತಿ ನೀಡಲಿದೆ.…

Read More

ಬೆಂಗಳೂರು:- ಚಾಲಕನ ನಿಯಂತ್ರಣ ತಪ್ಪಿ ಎಳ್ಳು ತುಂಬಿದ ಲಾರಿ ಪಲ್ಟಿ ಹೊಡೆದ ಘಟನೆ ಎಲೆಕ್ಟ್ರಾನಿಕ್ ಸಿಟಿ- ಹೊಸೂರು ರಸ್ತೆಯಲ್ಲಿ ಜರುಗಿದೆ. https://ainlivenews.com/i-am-not-a-mandya-aspirant-nikhil-kumaraswamy/ ಸುಮಾರು 10 ಅಡಿ ಕೆಳಗೆ ಲಾರಿ ಬಿದ್ದಿದ್ದು, ಭಾರೀ ಅನಾಹುತ ತಪ್ಪಿದೆ. ಘಟನೆಯಲ್ಲಿ ಲಾರಿ ಚಾಲಕ, ಕ್ಲೀನರ್ ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಬೆಳಗಿನ ಜಾವ 3. 30 ರ ಸಮಯಕ್ಕೆ ಘಟನೆ ಜರುಗಿದೆ. ಅಂಡರ್ ಪಾಸ್ ನಲ್ಲಿ ಗಾಡಿಗಳು ಸಂಚರಿಸುತ್ತಿದ್ರೆ ದೊಡ್ಡ ಅನಾಹುತವಾಗುತ್ತಿತ್ತು. ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

Read More

ಬೆಂಗಳೂರು:- ನಾನು ಮಂಡ್ಯ ಆಕಾಂಕ್ಷಿ ಅಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ನಾನು ಮಂಡ್ಯ ಕ್ಷೇತ್ರದ ಆಕಾಂಕ್ಷಿ ಅಲ್ಲ. ನಾನು ಇದನ್ನು ಹಿಂದೆಯೂ ಹೇಳಿದ್ದೆ. ನಾನು ಯೂ ಟರ್ನ್ ಹೊಡೆಯುವ ಗಿರಾಕಿ ಅಲ್ಲ ಎಂದರು. https://ainlivenews.com/virat-kohli-when-is-king-kohlis-comeback-here-is-the-detail/ ಈಗ ನಾನು ಮಂಡ್ಯ ಆಕಾಂಕ್ಷಿ ಅಲ್ಲ. 2019 ರಲ್ಲಿ ಅಭ್ಯರ್ಥಿ ಆಗಿದ್ದೆ, ಸೋತಿದ್ದೆ. ಈಗಲೂ ನನ್ನ ಸ್ಪರ್ಧೆಗೆ ಸಹಜವಾಗಿ ಮಂಡ್ಯ ಮುಖಂಡರ ಒತ್ತಾಯ ಇದೆ. ಕಳೆದ ನಾಲ್ಕು ದಿನಗಳಿಂದಲೂ ನಾನು ಗಮನಿಸುತ್ತಿದ್ದೇನೆ. ನಾನು ಯೂ ಟರ್ನ್ ಹೊಡೆಯಲ್ಲ. ನನ್ನ ನಿರ್ಧಾರದಲ್ಲಿ ನನಗೆ ಸ್ಪಷ್ಟತೆ ಇದೆ. ನಾನು ಮಂಡ್ಯ ಆಕಾಂಕ್ಷಿ ಅಲ್ಲ ಎಂದರು https://ainlivenews.com/2nd-and-4th-saturday-allowed-for-vehicle-traffic-inside-cubbon-park/ ನೀವು ಬರಬೇಕು, ಚುನಾವಣೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮಂಡ್ಯ ಮುಖಂಡರು, ಕಾರ್ಯಕರ್ತರು ಕರೆದರು. ಈ ಒತ್ತಡದ ಕಾರಣವಾಗಿ ನಾನು ಮಂಡ್ಯ ಭಾಗದಲ್ಲಿ ಓಡಾಡಿದ್ದೆ. ಮೈತ್ರಿ ಬಲಪಡಿಸಬೇಕು. ಮತ್ತೆ ಮೋದಿಯವರು ಪ್ರಧಾನಿ ಆಗಬೇಕು. ನನ್ನ ಗಮನ 28 ಕ್ಷೇತ್ರಗಳ ಕಡೆಯೂ ಇರುತ್ತದೆ ಎಂದು ಹೇಳಿದರು

Read More

ರನ್ ಮಷಿನ್ ಹಾಗೂ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಣ 5 ಪಂದ್ಯಗಳ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ. ಮೊದಲೆರಡು ಟೆಸ್ಟ್ ಪಂದ್ಯಗಳಿಗೆ ಅಲಭ್ಯರಾಗಿದ್ದ ಕೊಹ್ಲಿ ಇದೀಗ ಉಳಿದಿರುವ 3 ಪಂದ್ಯಗಳಿಂದ ಕೂಡ ಹಿಂದೆ ಸರಿದಿದ್ದಾರೆ. ವೈಯುಕ್ತಿಕ ಕಾರಣಗಳಿಂದಾಗಿ ಅವರು ಸಂಪೂರ್ಣ ಸರಣಿಗೆ ಅಲಭ್ಯರಾಗಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ. https://ainlivenews.com/the-statement-of-dividing-the-country-is-treasonous/ ಇದರ ಬೆನ್ನಲ್ಲೇ ಕಿಂಗ್ ಕೊಹ್ಲಿ ಮತ್ತೆ ಕಣಕ್ಕಿಳಿಯುವುದು ಯಾವಾಗ? ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಈ ಪ್ರಶ್ನೆಗೆ ಸದ್ಯದ ಉತ್ತರ ಜೂನ್ ಮೊದಲ ವಾರದಲ್ಲಿ. ಅಂದರೆ ವಿರಾಟ್ ಕೊಹ್ಲಿ ಮತ್ತೆ ಭಾರತ ತಂಡದ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲು ಜೂನ್​ ತಿಂಗಳವರೆಗೆ ಕಾಯಲೇಬೇಕು. ಏಕೆಂದರೆ ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಯು ಮಾರ್ಚ್​ 11 ಕ್ಕೆ ಮುಗಿಯಲಿದೆ. ಈ ಸರಣಿಯ ಬಳಿಕ ಟೀಮ್ ಇಂಡಿಯಾ ಯಾವುದೇ ಪಂದ್ಯವಾಡುತ್ತಿಲ್ಲ. ಬದಲಾಗಿ ಭಾರತ ತಂಡದ ಆಟಗಾರರು ವಿಶ್ರಾಂತಿ ಪಡೆಯಲಿದ್ದಾರೆ. ಇದರ ಬೆನ್ನಲ್ಲೇ ಐಪಿಎಲ್​ ಕೂಡ ಶುರುವಾಗಲಿದೆ. ಅಂದರೆ ವಿರಾಟ್ ಕೊಹ್ಲಿ ಐಪಿಎಲ್​ ಮೂಲಕ…

Read More

ಕಲಬುರ್ಗಿ:- ಸಂಸದ ಡಿಕೆ ಸುರೇಶ್ ದೇಶ ವಿಭಜನೆ ಹೇಳಿಕೆ ವಿಚಾರಕ್ಕೆ ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಗರಂ ಆಗಿದ್ದಾರೆ.. ಕಲಬುರಗಿಯಲ್ಲಿಂದು ಮಾತನಾಡಿದ ಮುತಾಲಿಕ್ ದೇಶ ತುಂಡು ಮಾಡೋದು ದೇಶ ದ್ರೋಹ ಹೇಳಿಕೆ ದೇಶ ತುಂಡು ಮಾಡೋಕೆ ನಿಮಗೆ ಯಾರು ಹಕ್ಕು ಕೊಟ್ಟಿದ್ದಾರೆ ಅಂದ್ರು.ಆರ್ಥಿಕತೆ ಹೆಸರಲ್ಲಿ ದೇಶ ತುಂಡು ಮಾಡೋದು ಅಂದ್ರೆ ಏನರ್ಥ ಹಾಗಿದ್ರೆ ಆಗ ಹೋರಾಟ ಯಾಕೆ ಮಾಡಬೇಕಾಗಿತ್ತು ಆಗ ಹೋರಾಟ ಮಾಡಿದ ನೀವು ಇವಾಗ ದೇಶ ಒಡೆಯೋದಕ್ಕಾ ಈಗ ದಕ್ಷಿಣ ಭಾರತ ಒಡೆಯೋದು ಅಂದ್ರೆ ಏನು ಹೇಳಿಕೆ ನಿಮ್ಮದು ಅಂತ ಕಿಡಿ ಕಾರಿದ್ರು.. ಈಶ್ವರಪ್ಪ ಒಬ್ಬ ದೇಶಭಕ್ತನಾಗಿ ನೋವು ತಡೆಯದೇ ಹೇಳಿದ್ದಾರೆ ನಾನು ಈಶ್ವರಪ್ಪನವರು ಹೇಳಿರೋ ವಿಚಾರವನ್ನ ಬೆಂಬಲಿಸುತ್ತೇನೆ ಅಂದ್ರು..

Read More

ಬೆಂಗಳೂರು:- 2 ಮತ್ತು 4ನೇ ಶನಿವಾರ ಕಬ್ಬನ್ ಪಾರ್ಕ್​​ನೊಳಗೆ ವಾಹನ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಫೆಬ್ರವರಿ 8 ರಂದು ತೋಟಗಾರಿಕಾ ಇಲಾಖೆ ಆದೇಶ ನೀಡಿದ್ದು, ಪ್ರವಾಸಿಗರು ಹಾಗೂ ಆ ಭಾಗದಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಸಂತಸ ನೀಡಿದೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಮತ್ತು ಸುಗಮ ಸಂಚಾರಕ್ಕಾಗಿ ಕಬ್ಬನ್ ಪಾರ್ಕ್ ಆವರಣದೊಳಗೆ ಹೈಕೋರ್ಟ್‌ನಿಂದ ಸಿದ್ದಲಿಂಗಯ್ಯ ವೃತ್ತ ಮತ್ತು ಸಿದ್ದಲಿಂಗಯ್ಯ ವೃತ್ತದಿಂದ ಹೈಕೋರ್ಟ್​ ಭಾಗದವರೆಗೆ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಮೂರು ತಿಂಗಳ ಕಾಲ ಪ್ರಾಯೋಗಿಕ ಆಧಾರದ ಮೇಲೆ ಈ ಅವಕಾಶ ನೀಡಲಾಗಿದೆ. ಕಬ್ಬನ್ ಪಾರ್ಕ್ ಒಳಗೆ ಸಂಚಾರಕ್ಕೆ ಅವಕಾಶ ನೀಡುವುದರಿಂದ ಹೊರಗಿನ ರಸ್ತೆಗಳಲ್ಲಿನ ಟ್ರಾಫಿಕ್ ಸಮಸ್ಯೆಗಳನ್ನು ಪರಿಹರಿಸಲು ಸಹಾಯವಾಗಲಿದೆ ಎಂದು ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಅನುಚೇತ್ ಅವರು ಆದೇಶದಲ್ಲಿ ತಿಳಿಸಿದ್ದಾರೆ. ಕಬ್ಬನ್ ಪಾರ್ಕ್‌ನೊಳಗೆ ಸಂಚಾರಕ್ಕೆ ಸಾಕಷ್ಟು ಸ್ಥಳಾವಕಾಶವಿದೆ ಎಂದು ಅನುಚೇತ್ ಹೇಳಿದ್ದಾರೆ. ಕೆಲವು ವರ್ಷಗಳಿಂದ ಕಬ್ಬನ್ ಪಾರ್ಕ್‌ನೊಳಗೆ ಭಾನುವಾರ, ಎರಡನೇ ಮತ್ತು ನಾಲ್ಕನೇ ಶನಿವಾರ ಮತ್ತು ಇತರ ಸಾರ್ವತ್ರಿಕ ರಜಾದಿನಗಳಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿತ್ತು

Read More

ಬಳ್ಳಾರಿ: ಶಾಸಕ ಭರತ್ ರೆಡ್ಡಿ ಮನೆ ಮೇಲೆ ಎರಡನೇ ದಿನವೂ ಇಡಿ ದಾಳಿ ಮುಂದುವರಿದಿದೆ. ಶನಿವಾರ ಬೆಳಗ್ಗೆ 6:30ಕ್ಕೆ ಭರತ್ ರೆಡ್ಡಿ ಮನೆ ಮೇಲೆ ಇ.ಡಿ ಅಧಿಕಾರಿಗಳು ದಾಳಿ ಮಾಡಿದ್ದರು. 24 ಗಂಟೆಗಳಾದರೂ ಇ.ಡಿ ಅಧಿಕಾರಿಗಳ ಪರಿಶೀಲನೆ ಮುಗಿಯಲೇ ಇಲ್ಲ. ದಿನವಿಡೀ ನಡೆದ ದಾಳಿಯಲ್ಲಿ ಮಹತ್ವದ ದಾಖಲೆಗಳನ್ನು ಅಧಿಕಾರಿಗಳು ಕಲೆ ಹಾಕಿದ್ದಾರೆ. ಅಲ್ಲದೇ ಭರತ್ ಅಪ್ತರು ಮತ್ತು ಸಂಬಂಧಿಕರ ಮನೆ ಮತ್ತು ಕಚೇರಿಗಳ ಮೇಲೂ ಇ.ಡಿ ದಾಳಿ ನಡೆಸಿದೆ. ಭರತ್ ಅವರ ಚಿಕ್ಕಪ್ಪ ಪ್ರತಾಪ್ ರೆಡ್ಡಿ, ಆಪ್ತರಾದ ರತ್ನ ಬಾಬು ಮತ್ತು ಸತೀಶ್ ರೆಡ್ಡಿ ಮನೆಗಳಲ್ಲೂ ಶೋಧ ಕಾರ್ಯ ನಡೆಸಿದ್ದಾರೆ. ಇಂದು ಇನ್ನಷ್ಟು ಆಪ್ತರು ಮತ್ತು ಸಂಬಂಧಿಗಳ ಮನೆ ಮೇಲೆ ದಾಳಿ ನಡೆಸುವ ಸಾಧ್ಯತೆಗಳಿವೆ. https://ainlivenews.com/traitors-should-be-shot-dead-k-venkatesh-reacts-to-ks-eshwarappas-statement/ ಅದಾಯಕ್ಕಿಂತಲೂ ಅಧಿಕ ಆಸ್ತಿ ಸಂಪಾದನೆ ಆರೋಪದ ಹಿನ್ನೆಲೆಯಲ್ಲಿ ಇ.ಡಿ ದಾಳಿ ನಡೆಸಿದೆ. ಚುನಾವಣೆಗೂ ಮುನ್ನ ಸೆಂಟ್ರಲ್ ಐ.ಟಿ ತಂಡ ದಾಳಿ ನಡೆಸಿತ್ತು. ಬಳಿಕ ಐಟಿಯಿಂದ ಇ.ಡಿಗೆ ಪ್ರಕರಣ ವರ್ಗಾವಣೆಯಾದ ಹಿನ್ನೆಲೆ ನಿನ್ನೆ ತಡರಾತ್ರಿವರೆಗೂ ಭರತ್…

Read More