Author: AIN Author

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಹಿಳೆಯರು ಮತ್ತು ಮಕ್ಕಳಿಗಾಗಿ ಅನೇಕ ಯೋಜನೆಗಳನ್ನು ನಡೆಸುತ್ತಿವೆ. ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಈ ಯೋಜನೆಗಳನ್ನು ಪ್ರಾರಂಭಿಸಲಾಗಿದೆ. ಈ ಯೋಜನೆಗಳಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯೂ ಒಂದು. ಈ ಯೋಜನೆಯನ್ನು ವಿಶೇಷವಾಗಿ ಹೆಣ್ಣುಮಕ್ಕಳಿಗಾಗಿ ಪ್ರಾರಂಭಿಸಲಾಯಿತು. ಈ ಯೋಜನೆಯಲ್ಲಿ, ಹೆಣ್ಣುಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಹೂಡಿಕೆ ಮಾಡಲಾಗುತ್ತದೆ. ಈ ಯೋಜನೆಯಲ್ಲಿ, ಸುಕನ್ಯಾ ಸಮೃದ್ಧಿ ಖಾತೆಯನ್ನು ಸಕ್ರಿಯವಾಗಿಡಲು ಕನಿಷ್ಠ ಬ್ಯಾಲೆನ್ಸ್ ಇಡುವುದು ಅವಶ್ಯಕ. ಹೂಡಿಕೆದಾರರು ಕನಿಷ್ಠ ಬ್ಯಾಲೆನ್ಸ್ ನಿರ್ವಹಿಸದಿದ್ದರೆ, ಅವರ ಖಾತೆಯನ್ನು ಸ್ಥಗಿತಗೊಳಿಸಲಾಗುತ್ತದೆ. ಖಾತೆಯನ್ನು ಮತ್ತೆ ಸಕ್ರಿಯಗೊಳಿಸಿದ್ದಕ್ಕಾಗಿ ದಂಡವನ್ನು ಪಾವತಿಸಬೇಕಾಗುತ್ತದೆ. ಕನಿಷ್ಠ ಬ್ಯಾಲೆನ್ಸ್ ಅನ್ನು ಎಷ್ಟು ಸಮಯದವರೆಗೆ ನಿರ್ವಹಿಸಬೇಕು ಮಾರ್ಚ್ 31, 2024 ರೊಳಗೆ, ಖಾತೆದಾರರು ಕನಿಷ್ಠ ಬ್ಯಾಲೆನ್ಸ್ ಅನ್ನು ನಿರ್ವಹಿಸಬೇಕು. ಅವರು ಇದನ್ನು ಮಾಡದಿದ್ದರೆ ಅವರ ಖಾತೆ ನಿಷ್ಕ್ರಿಯವಾಗಿರುತ್ತದೆ. ಖಾತೆಯನ್ನು ಮರುಪ್ರಾರಂಭಿಸಲು ಖಾತೆದಾರರು ದಂಡವನ್ನು ಪಾವತಿಸಬೇಕಾಗುತ್ತದೆ. ಕನಿಷ್ಠ ಬ್ಯಾಲೆನ್ಸ್ ಗಾಗಿ ಎಷ್ಟು ಮೊತ್ತವನ್ನು ಠೇವಣಿ ಮಾಡಬೇಕು? ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಕನಿಷ್ಠ ಬ್ಯಾಲೆನ್ಸ್ 250 ರೂ. ಖಾತೆದಾರನು ಒಂದು ಹಣಕಾಸು ವರ್ಷದಲ್ಲಿ…

Read More

ಬೆಂಗಳೂರು: ಕಾಫಿ ಪ್ರಿಯರೇ ನಿಮಗೆ ಕಾಫಿ ಕುಡಿಯುವುದಷ್ಟೇ ಗೊತ್ತಾ ಇಲ್ವಾ ಅದು ಹೇಗೆ ಉತ್ಪತ್ತಿಯಾಗುತ್ತೆ ಎಲ್ಲಿಂದ ಬರುತ್ತೆ ಹಾಗೆ ಅದರ ಬಗ್ಗೆ ಅಧ್ಯಯನ ನಡೆಸಲು ಇಲ್ಲಿದೆ ಒಂದು ಸದಾವಕಾಶ ಇನ್ಮುಂದೆ ಬೆಂಗಳೂರಲ್ಲೇ ಶುರುವಾಗುತ್ತಿದೆ ಕಾಫಿ ತಯಾರಿಸುವ ಕೋರ್ಸ್‌  ನಿಮಗೂ ಆಸಕ್ತಿ ಇದ್ರೆ ಬಂದು ಕಲಿಯಬಹುದು. ಭಾರತೀಯ ಕಾಫಿ ಮಂಡಳಿ ಇಂಥದ್ದೊಂದು ಪ್ರಸ್ತಾಪವನ್ನು ಸರ್ಕಾರದ ಮುಂದಿಟ್ಟಿದೆ. ‘ಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ ಕಾಫಿ’ಯಲ್ಲಿ ಕಾಫಿ ಕುರಿತ ಕಿರು ಅವಧಿ ಕೋರ್ಸ್​ಗಳನ್ನು ಆರಂಭಿಸಲು ಕಾಫಿ ಮಂಡಳಿ ಉದ್ದೇಶಿಸಿದೆ. https://ainlivenews.com/good-news-for-vehicle-owners-important-information-about-hsrp-number-plate-from-state-govt/ ‘ಕಾಫಿ ಕ್ವಾಲಿಟಿ ಮ್ಯಾನೇಜ್ಮೆಂಟ್​ನಲ್ಲಿ ನಾವು ಒಂದು ವರ್ಷದ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್ ನಡೆಸುತ್ತಿದ್ದೇವೆ. ಇದಕ್ಕೆ ಬಹಳ ಬೇಡಿಕೆ ಇದೆ. ಬೆಂಗಳೂರಿನ ಕಾಫಿ ಕ್ವಾಲಿಟಿ ಇನ್ಸ್​ಟಿಟ್ಯೂಟ್​ನ್ಲಿ ಈ ಕೋರ್ಸ್ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳು ಚಿಕ್ಕಮಗಳೂರಿನಲ್ಲಿರುವ ಸೆಂಟ್ರಲ್ ಕಾಫಿ ರಿಸರ್ಚ್ ಇನ್ಸ್​ಟಿಟ್ಯೂಟ್​ಗೆ (ಸಿಸಿಅರ್​ಐ) ಮೂರು ತಿಂಗಳ ಭೇಟಿ ನೀಡಿ ಕಲಿಯಬಹುದು ಈಗ ಕಾಫಿ ಎಕ್ಸಲೆನ್ಸ್ ಸೆಂಟರ್ ಸ್ಥಾಪನೆಗೆ ಮಂಡಳಿ ಪ್ರಸ್ತಾಪ ಮಾಡಿದೆ. ವಿಶೇಷ ಕಾಫಿ ಕೇಂದ್ರ ಹಾಗೂ ಕಾಫಿ…

Read More

ವ್ಯಾಲಂಟೈನ್ಸ್ ವೀಕ್ ನ ಮೊದಲ ದಿನ  ರೋಸ್ ಡೇ, ಪ್ರಾಪೋಸ್ ಡೇ, ಚಾಕೋಲೇಟ್ ಡೇ, ಟೆಡ್ಡಿ ಡೇ, ಪ್ರಾಮಿಸ್ ಡೇ , ಹಗ್ ಡೇ ಪ್ರೇಮಿಗಳ ದಿನಗಳಿಗೆ ಪೂರ್ಣ ಕಲ್ಪನೆಯನ್ನು ನೀಡುವ ದಿನವಾಗಿ  ಕಿಸ್ ಡೇ ಆಗಿರುತ್ತದೆ.  ಕಿಸ್ ಡೇಯನ್ನು 7 ದಿನದಲ್ಲಿ ಆಚರಣೆ ಮಾಡಲಾಗುತ್ತದೆ. ಪ್ರೇಮಿಗಳ ಚುಂಬನ ಅವರ ಪ್ರೀತಿಗೆ ನೀಡುವ ಕೊಡುಗೆ ಹಾಗಾಗಿ ಪ್ರೇಮಿಗಳಲ್ಲಿ ಈ 7 ದಿನವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಗುತ್ತದೆ. ಕಿಸ್ ಡೇ  ಎಂದರೆ  ನಮ್ಮ ಪ್ರೀತಿಯನ್ನು ಕಿಸ್ ಮೂಲಕ  ಅರ್ಪಿಸುವ ಕಾಲವನ್ನು ಕಿಸ್ ಡೇ ಎನ್ನುತ್ತಾರೆ.  ಚುಂಬನ ದಿನವನ್ನು ವಿಭಿನ್ನವಾಗಿ ಆಚರಿಸಿಕೊಳ್ಳಬಹುದು ಕಿಸ್ ಎಂದಾಗ ಅದು ತುಟಿ-ತುಟಿಗಳಿಗೆ ಚುಂಬಿಸುವುದು ಮಾತ್ರವಲ್ಲ ಅದನ್ನು ವಿಭಿನ್ನವಾಗಿ ಆಚರಿಸಿಕೊಳ್ಳಬಹುದು. ಅದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ. ಫೆಬ್ರವರಿ 13 ಪ್ರೇಮಿಗಳ ವಾರದಲ್ಲಿ ಕಿಸ್ ಡೇಯನ್ನು ಆಚರಣೆ ಮಾಡುತ್ತಾರೆ . ಚುಂಬನಗಳು ವಿಭಿನ್ನ ಅರ್ಥಗಳನ್ನು ತಿಳಿಸುತ್ತವೆ ಎಂದು ನಿಮಗೆ ತಿಳಿದಿದೆಯೇ? ಈ ವಿವಿಧ ರೀತಿಯ ಚುಂಬನಗಳು ಮತ್ತು ಅವುಗಳ ಅರ್ಥಗಳನ್ನು…

Read More

ಪ್ರಧಾನ ಮಂತ್ರಿ ಅಟಲ್ ಪೆನ್ಷನ್ ಯೋಜನಾ ಸರ್ಕಾರದಿಂದ ನಡೆಸಲಾಗುವ ವೃದ್ಧಾಪ್ಯ ಪಿಂಚಣಿ ಯೋಜನೆಗಳಲ್ಲಿ ಒಂದು. ಎಂಟು ವರ್ಷದ ಹಿಂದೆ ಶುರುವಾದ ಈ ಯೋಜನೆ ಎಲ್ಲರಿಗೂ ಮುಕ್ತವಿದೆ. ಅಸಂಘಟಿತ ವಲಯಗಳಲ್ಲಿ ಕೆಲಸ ಮಾಡುತ್ತಿರುವ ಜನರಿಗೆ ಬಹಳ ಅನುಕೂಲವಾಗಿರುವ ಪೆನ್ಷನ್ ಸ್ಕೀಮ್ ಇದು. 18 ವರ್ಷದಿಂದ 40 ವರ್ಷದ ವಯೋಮಾನದ ಯಾವುದೇ ಭಾರತೀಯ ಪ್ರಜೆ ಅಟಲ್ ಪೆನ್ಷನ್ ಯೋಜನೆಯಲ್ಲಿ ನೊಂದಾಯಿಸಿಕೊಳ್ಳಬಹುದು.  ಕನಿಷ್ಠ 20 ವರ್ಷ ಅವಧಿಯವರೆಗೆ ಪೆನ್ಷನ್ ನಿಧಿಗೆ ಹಣ ಪೂರೈಸಬೇಕು. ಅಟಲ್ ಪೆನ್ಷನ್ ಯೋಜನೆಯ ಸದಸ್ಯರು 60 ವರ್ಷದ ಬಳಿಕ ಪ್ರತೀ ತಿಂಗಳು 1,000 ರೂನಿಂದ 5,000 ರೂವರೆಗೆ ಕನಿಷ್ಠ ಖಾತ್ರಿ ಪಿಂಚಣಿ ಪಡೆಯಬಹುದು. ಅಸಂಘಟಿತ ವಲಯದ ಕಾರ್ಮಿಕರಿಗೆ ಮತ್ತು ಆದಾಯ ತೆರಿಗೆ ಪಾವತಿಸುವವರಲ್ಲದವರಿಗೆ ಸರ್ಕಾರ ವರ್ಷಕ್ಕೆ ಒಂದು ಸಾವಿರ ರೂವರೆಗೂ ಕೊಡುಗೆ ನೀಡುತ್ತದೆ. https://ainlivenews.com/attention-students-you-will-get-scholarship-up-to-rs-25000-per-year-from-lic/ ಈ ಯೋಜನೆ ಪಡೆಯಲು ಕನಿಷ್ಠ ವಯಸ್ಸು 18 ವರ್ಷ ಇರುತ್ತದೆ. 60ರ ವಯಸ್ಸಿನವರೆಗೂ ಕೊಡುಗೆ ನೀಡುತ್ತಾ ಹೋಗಬಹುದು. 18ನೇ ವಯಸ್ಸಿನಲ್ಲಿ ಈ ಸ್ಕೀಮ್ ಪಡೆದರೆ ಒಟ್ಟು42 ವರ್ಷ ಕಾಲ…

Read More

ಕುಂಭ ಸಂಕ್ರಾಂತಿ ಸೂರ್ಯೋದಯ: 06:47, ಸೂರ್ಯಾಸ್ತ: 06:12 ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಮಾಘ ಮಾಸ, ಶುಕ್ಲ ಪಕ್ಷ, ಉತ್ತರಾಯಣಂ, ಶಿಶಿರ್ ಋತು, ತಿಥಿ: ಚೌತಿ, ನಕ್ಷತ್ರ: ಉತ್ತರಾಭದ್ರ, ರಾಹು ಕಾಲ: 03:00 ನಿಂದ 04:30 ತನಕ ಯಮಗಂಡ: 09:00 ನಿಂದ 10:30 ತನಕ ಗುಳಿಕ ಕಾಲ: 12:00 ನಿಂದ 01:30 ತನಕ ಅಮೃತಕಾಲ: ಬೆ.8:15 ನಿಂದ ಬೆ.9:42 ತನಕ ಅಭಿಜಿತ್ ಮುಹುರ್ತ: ಮ.12:07 ನಿಂದ ಮ.12:53 ತನಕ ಮೇಷ ರಾಶಿ: ಷೇರು ಮಾರುಕಟ್ಟೆಯಲ್ಲಿ ನಷ್ಟ ಸಂಭವಿಸಿರುವ ಹಣದ ಬಗ್ಗೆ ಚಿಂತೆ,ಹಣ ಹೂಡಿಕೆ ಮಾಡಲು ಸರಿಯಾದ ಸಮಯವಲ್ಲ, ಮನೆಯಲ್ಲಿ ತಯಾರಿಸಿ ವ್ಯಾಪಾರ-ವಹಿವಾಟು ಮಾಡುವವರಿಗೆ ಅಧಿಕ ಲಾಭ,ಇಂಟೀರಿಯರ್ ಡಿಸೈನರ್ ಉದ್ಯೋಗದಲ್ಲಿ ಧನಲಾಭ. ಆರ್ಥಿಕ ಸಂಕಷ್ಟದಲ್ಲಿ ಇದ್ದವರಿಗೆ ಅನಿರೀಕ್ಷಿತ ಧನಲಾಭ. ಸಂತಾನ ಪ್ರಾಪ್ತಿ. ಸಂಗೀತ, ಹಿನ್ನೆಲೆ ಗಾಯನ, ನಟನೆ, ನಟ-ನಟಿಯರಿಗೆ, ಸಾಹಸ ಕಲಾವಿದರಿಗೆ ಸನ್ಮಾನಗಳು ಹಾಗೂ ಬೇಡಿಕೆ ಹೆಚ್ಚಾಗಲಿದೆ. ಶಿಕ್ಷಕರಿಗೆ ಅಪರೂಪದ ಮಹತ್ವಾಕಾಂಕ್ಷೆ ಕಾರ್ಯ ಯಶಸ್ವಿ. ಹೋಟೆಲ್ ಉದ್ಯಮದವರಿಗೆ ಆರ್ಥಿಕ ಚೇತರಿಕೆ.…

Read More

ಬೆಂಗಳೂರು:- ನಾಳೆಯಿಂದ ಅಧಿವೇಶನದಲ್ಲಿ ಯಾವೆಲ್ಲಾ ವಿಷಯಗಳನ್ನ ಪ್ರಸ್ತಾಪಿಸಿ ಸರ್ಕಾರವನ್ನು ಕಟ್ಟಿಹಾಕಬೇಕೆಂದು ಬಿಜೆಪಿ ಇಂದು ಶಾಸಕಾಂಗ ಸಭೆ ನಡೆಸಿದ್ದು, ಕೆಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದೆ. ಶಾಸಕಾಂಗ ಪಕ್ಷದ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಲೋಕಸಭೆ ಚುನಾವಣೆಯ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಿಎಂ ಬೊಮ್ಮಾಯಿ. ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ವಿಧಾನಸಭೆ ವಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ್ ಸೇರಿದಂತೆ ಇನ್ನುಳಿದ ಶಾಸಕರು ಹಾಜರಿದ್ದರು. ಆದ್ರೆ, ಸಭೆಗೆ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಎಸ್.ಟಿ.ಸೋಮಶೇಖರ್, ಅರೆಬೈಲ್ ಶಿವರಾಮ್ ಹೆಬ್ಬಾರ್, ರಮೇಶ್ ಜಾರಕಿಹೊಳಿ ಗೈರಾಗಿದ್ದಾರೆ. ಮುಂದೆ ಲೋಕಸಭಾ ಚುನಾವಣೆ ಇರುವುದರಿಂದ ಈ ಅಧಿವೇಶನವನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಲು ತೀರ್ಮಾನಿಸಿದ್ದು, ಸರ್ಕಾರದ ಲೋಷದೋಷಗಳನ್ನ ಸದನದಲ್ಲಿ ಚರ್ಚಿಸುವ ಮೂಲಕ ಜನರಿಗೆ ತಲುಪಿಸಲು ತೀರ್ಮಾನಿಸಿದೆ. ಇನ್ನು ಪಕ್ಷದಲ್ಲಿನ ಅಸಮಾಧಾನ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಚರ್ಚೆಗಳು ನಡೆದಿವೆ. ಅದರಲ್ಲೂ ಮುಖ್ಯವಾಗಿ ಸರ್ಕಾರದ ವಿರುದ್ಧ ಗುತ್ತಿಗೆದಾರರ ಸಂಘ…

Read More

ಬಾಗಲಕೋಟೆ:- ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ವಿದ್ಯುತ್ ತಂತಿಗೆ ತಗುಲಿ ಕಿಡಿ ಹೊತ್ತಿದ್ದು, ಕಿಡಿಯಿಂದ ಮೂರು ಮನೆಗಳಿಗೆ ಬೆಂಕಿಗಾಹುತಿಯಾಗಿದೆ. ಮನೆಯ ಎಲ್ಲಾ ವಸ್ತುಗಳು, ಹಣ ಬಂಗಾರ ಸುಟ್ಟು ಕರಕಲಾಗಿದ್ದು, ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಹನಗಂಡಿ ಗ್ರಾಮದ ಸರದಾರ ಗುಡ್ಡ ಪ್ರದೇಶದಲ್ಲಿ ಘಟನೆ ಜರುಗಿದೆ ತಿಪ್ಪಣ್ಣ ಪುಟಾಣಿ, ಸಿದ್ರಾಮ ಕಿತ್ತೂರ. ಗಂಗಪ್ಪ ಕಿತ್ತೂರು ಎಂಬುವರ ತಗಡಿನ ಶೆಡ್ ಮನೆಗಳಿಗೆ ಬೆಂಕಿ ತಗುಲಿದೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ರಬಕವಿ ಬನಹಟ್ಟಿ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಪ್ರಕಾಶ ಕುಂಬಾರ ಬಾಗಲಕೋಟೆ

Read More

ಕಿರುತರೆ ನಟನ ವಿರುದ್ಧ ವಂಚನೆ ಆರೋಪ ಕೇಳಿ ಬಂದಿದ್ದು, ರವಿಕಿರಣ್ ವಿರುದ್ಧ ಸುಬ್ರಹ್ಮಣ್ಯ ಪುರ ಪೊಲೀಸ್ ಠಾಣೆ ದೂರು ದಾಖಲಾಗಿದೆ. ‌ ರವಿಕಿರಣ್ ವಿರುದ್ಧ ಟೆಲಿವಿಷನ್ ಕಲ್ಚರಲ್ ಅಂಡ್ ಸ್ಫೋಟ್ಸ್ ಕ್ಲಬ್ ಸದಸ್ಯರು ದೂರು ನೀಡಿದ್ದಾರೆ. ಹಲವು ವರ್ಷಗಳಿಂದ ಕ್ಲಬ್ ನ ಕಾರ್ಯದರ್ಶಿಯಾಗಿರುವ ರವಿಕಿರಣ್, ಈ ವೇಳೆ ಕ್ಲಬ್ ನ ಹಣ ಅವ್ಯವಹಾರ ಮಾಡಿರುವ ಆರೋಪ ಕೇಳಿ ಬಂದಿದೆ. ಪ್ರಶ್ನೆ ಮಾಡಿದ್ದಕ್ಕೆ ಇಂದು ಕ್ಲಬ್ ನಲ್ಲಿ ಗಲಾಟೆ ನಡೆದಿದೆ. ಆ ಬಳಿಕ ಪೊಲೀಸರಿಗೆ ಸದಸ್ಯರು ಮಾಹಿತಿ ನೀಡಿದ್ದಾರೆ. ಸದ್ಯ ಸುಬ್ರಹ್ಮಣ್ಯ ಪುರ ಪೊಲೀಸ್ ಠಾಣೆಗೆ ಕಲಾವಿದರು ದೂರು ಕೊಟ್ಟಿದ್ದು, ತನಿಖೆ ಮುಂದುವರಿದಿದೆ.

Read More

ಕೋಲಾರ:- ಪ್ರಧಾನಿ ಮೋದಿ ಜಾತಿ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆ ವಿಚಾರವಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ ನೀಡಿದ್ದಾರೆ. ರಾಹುಲ್ ಗಾಂಧಿಗೆ ಬುದ್ಧಿ ಇಲ್ಲ ಎಂದರು. ಮೋದಿ ಜಾತಿ ಬಗ್ಗೆ ಮಾತಾಡಿ ಈಗಾಗಲೇ ಎರಡು ವರ್ಷ ಶಿಕ್ಷೆ ಆಗಿದೆ. ಕಾಂಗ್ರೆಸ್ ಸರ್ಕಾರ ಇದ್ದಾಗ ಮೋದಿ ಜಾತಿ ಒಬಿಸಿಗೆ ಸೇರಿದೆ. ಯಾರೋ ಬರೆದು ಕೊಟ್ಟಿದ್ದನ್ನು ರಾಹುಲ್ ಗಾಂಧಿ ಹೇಳಿದ್ದಾರೆ. ಬೇರೆ ವಿಚಾರ ಹೇಳಿ ಕೊಡುವವರೆಗೂ ಇದನ್ನೇ ಹೇಳುತ್ತಾರೆ ಎಂದರು. ಬಿಜೆಪಿ-ಜೆಡಿಎಸ್ ಮೈತ್ರಿ ನಡುವೆ ಟಿಕೆಟ್ ಹಂಚಿಕೆ ಬಗ್ಗೆ ಮಾತನಾಡಿದ ಜೋಶಿ, ಲೋಕಸಭೆ ಚುನಾವಣೆಗೆ ಕ್ಷೇತ್ರ ಹಂಚಿಕೆ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ. ಸಮಿತಿ ಮುಂದೆ ಚರ್ಚೆ ಮಾಡಿ ತೀರ್ಮಾನ ಮಾಡಲಾಗುತ್ತದೆ ಎಂದರು. ಕೋಲಾರ ಬಿಜೆಪಿಯ ಬಲವಾದ ಕ್ಷೇತ್ರ. ಜೆಡಿಎಸ್​ಗೆ ಕೋಲಾರ ಬಿಟ್ಟು ಕೊಡುವ ಬಗ್ಗೆ ತೀರ್ಮಾನ ಆಗಿಲ್ಲ. ಹೆಚ್​ಡಿ ದೇವೇಗೌಡರ ಜೊತೆ ಮಾತನಾಡಿ ತೀರ್ಮಾನ ಮಾಡಲಾಗುತ್ತದೆ ಎಂದರು. ಇನ್ನೂ ತಿನ್ನಲು ನಾನು, ಯುದ್ಧಕ್ಕೆ ನೀವು ಹೋಗಿ ಅಂತಾ ಸಿದ್ದರಾಮಯ್ಯ…

Read More

ಚಿಕ್ಕಬಳ್ಳಾಪುರ:- ರಾಜ್ಯ ಸರ್ಕಾರ ರೈತ, ಬಡವರ, ದಲಿತರ ವಿರೋಧಿ ಸರ್ಕಾರವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ ಈ ಸಂಬಂಧ ಮಾತನಾಡಿದ ಅವರು,ಈ ದೇಶದಲ್ಲಿ ಸ್ವಾತಂತ್ರ್ಯ ಬಂದ ನಂತರ 60 ವರ್ಷಗಳ ಕಾಲ ಕಾಂಗ್ರೆಸ್ (Congress) ಸರ್ಕಾರ ಆಡಳಿತ ಮಾಡಿದೆ. ಅವರಿಗೆ ರೈತರ ಪರವಾಗಿ ಉತ್ತಮ ಆಡಳಿತ ನೀಡಬೇಕು ಎಂದು ಯಾವತ್ತೂ ಅನ್ನಿಸಲೇ ಇಲ್ಲ ಎಂದರು. ರಾಜ್ಯ ಸರ್ಕಾರ ರೈತ, ಬಡವರ, ದಲಿತರ ವಿರೋಧಿ ಸರ್ಕಾರವಾಗಿದೆ. ದೇಶದಲ್ಲಿ ರೈತರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಸಿಎಂ ಯಡಿಯೂರಪ್ಪನವರು. ರೈತರಿಗೆ ಪ್ರತ್ಯೇಕ ಬಜೆಟ್ ಮಂಡನೆ ಮಾಡಿದ್ದರು. ಕಾಂಗ್ರೆಸ್‍ನವರು ರೈತರ ಪರ ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಿದವರು, ಹೈನುಗಾರರಿಗೆ ಪ್ರೋತ್ಸಾಹ ಧನ ನೀಡಿದವರು ಯಡಿಯೂರಪ್ಪನವರು. ಕಾಂಗ್ರೆಸ್‍ನವರ ಯೋಗ್ಯತೆಗೆ ಪ್ರೋತ್ಸಾಹ ಧನ ಕೊಡಲು ಆಗುತ್ತಿಲ್ಲ. ಈ ಸರ್ಕಾರ ಯಾವಾಗ ತೊಲಗುತ್ತದೆಯೋ ಎಂದು ಜನ ಶಾಪ ಹಾಕುತ್ತಿದ್ದಾರೆ. 9 ತಿಂಗಳಾದರೂ ಅಭಿವೃದ್ಧಿ ಮಾಡದ ಶೂನ್ಯ ಸರ್ಕಾರ ಇದು. ಈ…

Read More