Author: AIN Author

ಭಾರತದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಆನ್‌ಲೈನ್ ಅಥವಾ ಡಿಜಿಟಲ್ ವಹಿವಾಟುಗಳು ಹಲವು ಪಟ್ಟು ಹೆಚ್ಚಾಗಿದೆ. ಸ್ಮಾರ್ಟ್‌ಫೋನ್ ಮೂಲಕ ಡಿಜಿಟಲ್ ಪಾವತಿ ಮಾಡಿಲ್ಲ ಎನ್ನುವವರ ಸಂಖ್ಯೆ ತೀರಾ ಕಮ್ಮಿಯಾಗಿದೆ. ಆದರೆ, ಡಿಜಿಟಲ್ ಮೂಲಕ ಹಣ ಪಾವತಿ  ಕಂಡಷ್ಟು ಸುಲಭದ ಮಾತಲ್ಲ, https://ainlivenews.com/attention-students-you-will-get-scholarship-up-to-rs-25000-per-year-from-lic/ ಕೆಲವೊಮ್ಮೆ ಅದು ನಿಮ್ಮ ಪಾಲಿಗೆ ಅಷ್ಟೇ ಅಪಾಯಕಾರಿ ಸಾಬೀತಾಗಬಹುದು. UPI ಪಾವತಿ ಅನುಕೂಲಗಳು ಮತ್ತು ಅನಾನುಕೂಲತೆ ಎರಡನ್ನು ಹೊಂದಿದೆ. ಹೀಗಂತ ನೀವು ಭಯಪಡಬೇಕಾಗಿಲ್ಲ. ಕೇವಲ ಎಚ್ಚರಿಕೆ ವಹಿಸಿದತೆ ಸಾಕು. ಏಕೆಂದರೆ ಈ ವಿಷಯವು ನಿಮ್ಮ ಕಷ್ಟಪಟ್ಟು ಗಳಿಸಿದ ಹಣಕ್ಕೆ ಸಂಬಂಧಿಸಿದೆ. ನೀವು ಯುಪಿಐ ಮೂಲಕ ಹಣ ಪಾವತಿ ಮಾಡುತ್ತಿದ್ದರೆ ಈ 5 ತಪ್ಪುಗಳನ್ನು ಮಾತ್ರ ಮಾಡಬೇಡಿ. ಸಣ್ಣ ತಪ್ಪುಗಳಿಂದು ನೀವು ದೊಡ್ಡ ನಷ್ಟವನ್ನು ಅನುಭವಿಸಬೇಕಾಗಬಹುದು. ನಿಮ್ಮ ಪಿನ್ ಅನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ: UPI ಪಾವತಿಗಾಗಿ ಬಳಸಿದ 6 ಅಥವಾ 4 ಅಂಕಿಯ ಪಿನ್ ಅನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಏಕೆಂದರೆ ಪ್ರತಿ ವಹಿವಾಟಿನ ಮೊದಲು ಇದು ಸೂಕ್ತವಾಗಿ ಬರುತ್ತದೆ. ಇದು ನಿಮ್ಮನ್ನು…

Read More

ಬೆಂಗಳೂರು:- ಮುಂಬರುವ ಎರಡು ಚುನಾವಣೆಗಳಲ್ಲಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಆದ್ಯತೆ ನೀಡುವಂತೆ ಕೋರಿ ಅಖಿಲ ಭಾರತ ಲಿಂಗಾಯತ ಮಹಾಸಭಾದ ಅಧ್ಯಕ್ಷರೂ ಆಗಿರುವ ಕಾಂಗ್ರೆಸ್​ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದಿದ್ದಾರೆ. ರಾಜ್ಯಸಭೆಯಲ್ಲಿ ಮೂರು ಸ್ಥಾನಗಳು ಕಾಂಗ್ರೆಸ್​ಗೆ ದೊರೆಯಲಿವೆ. ಈ ಮೂರು ಸ್ಥಾನಗಳಲ್ಲಿ ಒಂದು ಸ್ಥಾನ ವೀರಶೈವ ಲಿಂಗಾಯತ ಸಮುದಾಯದವರಿಗೆ ನೀಡಬೇಕು. ಲೋಕಸಭೆ ಚುನಾವಣೆಯಲ್ಲಿ ಸಮುದಾಯದ ಜನಸಂಖ್ಯೆ ಅನುಗುಣವಾಗಿ ವೀರಶೈವ ಲಿಂಗಾಯತರಿಗೆ ಆಧ್ಯತೆ ನೀಡಬೇಕು ಎಂದು ಶಾಮನೂರು ಶಿವಶಂಕರಪ್ಪ ಅವರು ಪತ್ರದ ಮೂಲಕ ಒತ್ತಾಯಿಸಿದ್ದಾರೆ. ವೀರಶೈವ-ಲಿಂಗಾಯತರು 1999 ರ ವರೆಗೆ ಕಾಂಗ್ರೆಸ್ ಪಕ್ಷದ ಸಾಂಪ್ರದಾಯಿಕ ಬೆಂಬಲಿಗರಾಗಿದ್ದರು. ಎಸ್.ನಿಜಲಿಂಗಪ್ಪ, ಬಿ.ಡಿ.ಜತ್ತಿ, ಎಸ್.ಆರ್.ಕಂಠಿ, ವಿರೇಂದ್ರ ಪಾಟೀಲ್ ಸೇರಿದಂತೆ ಅನೇಕ ನಾಯಕರು ಇದ್ದರು. ರಾಷ್ಟ್ರ ಮತ್ತು ರಾಜ್ಯ ರಾಜಕಾರಣದಲ್ಲಿ ನಮ್ಮ ಸಮಾಜದ ಪ್ರತಿನಿಧಿಗಳಾಗಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ನಂತರದ ರಾಜಕೀಯ ಬೆಳವಣಿಗೆಗಳಲ್ಲಿ ವೀರಶೈವ- ಲಿಂಗಾಯತರ ನಾಯಕತ್ವವನ್ನು ರಾಷ್ಟ್ರ ಮತ್ತು…

Read More

ಕೋಳಿ ಸಾಕಾಣಿಕೆ ಮಾಡಬೇಕು ಎನ್ನುವ ಪ್ರತಿಯೊಬ್ಬರಿಗೂ ಉಪಯುಕ್ತವಾಗುವ ಸೂಕ್ತ ಸಲಹೆಗಳನ್ನು ಇಲ್ಲಿ ನೀಡಲಾಗಿದೆ. ಪಶುಸಂಗೋಪನೆ ಅಥವಾ ಹೈನುಗಾರಿಕೆ ಮಾಡುವಂತಹ ರೈತರಿಗೆ ಗೊತ್ತಿರಲೇಬೇಕಾದ ಕೆಲವು ಪ್ರಮುಖ ಯೋಜನೆಗಳ ಕುರಿತು ಇಲ್ಲಿದೆ ಮಾಹಿತಿ. ಇವುಗಳ ಸದುಪಯೋಗ ನೀವು ಪಡೆದುಕೊಂಡಿದ್ದೀರಾ? ಕೋಳಿ ಸಾಕಾಣಿಕೆಗೆ ಸರ್ಕಾರದಿಂದ ಉಚಿತ 25 ಲಕ್ಷ ನೀಡಲು  ನಿಮ್ಮ ಹತ್ತಿರದ ಕಚೇರಿಯಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಿ ಅರ್ಜಿ ಸಲ್ಲಿಸಿವುದು ಹೇಗೆ? ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆ ಅಡಿ ಹೊಸ ಕೋಳಿ ಫಾರ್ಮನಲ್ಲಿ ಸಬ್ಸಿಡಿ ಪಡೆಯಲು ನೀವು ಅಧಿಕೃತ ಪೋರ್ಟಲ್ (http://nlm̤udyamimitra̤com)  ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು ರೈತರು ಇಚ್ಚಿಸಿದರೆ ಸಮೀಪದ ಜಿಲ್ಲೆಯ ಪಶುಸಂಗೋಪನ ಇಲಾಖೆ ಕಚೇರಿಗೆ ತೆರಳಿ  ಕೋಳಿ ಸಾಗಾಣಿಕೆ ಬಗ್ಗೆ ಮಾಹಿತಿ ಪಡೆಯಬಹುದು!

Read More

ದಾವಣಗೆರೆ:- ನಗರದ ಎಸ್ಎಸ್ ಲೇಔಟ್ ನಲ್ಲಿ ಚೆನ್ನಾಗಿ ಓದು ಎಂದಿದ್ದಕ್ಕೆ 13 ವರ್ಷದ ಬಾಲಕ ಮನೆಬಿಟ್ಟು ಎಸ್ಕೇಪ್ ಆದ ಘಟನೆ ಜರುಗಿದೆ. 13 ವರ್ಷದ ಸಾತ್ವಿಕ್ ಮನೆ ಬಿಟ್ಟ ಹೋಗಿದ್ದಾನೆ. SSNPS ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ ಸಾತ್ವಿಕ್​​ಗೆ ತಂದೆ ಚೆನ್ನಾಗಿ ಓದಿಕೋ ಎಂದಿದ್ದಾರಂತೆ. ಇಷ್ಟಕ್ಕೆ ಸಾತ್ವಿಕ್ ಮನೆಬಿಟ್ಟು ಹೋಗಿದ್ದಾನೆ. ಫೆಬ್ರವರಿ 6ಕ್ಕೆ ಮನೆ ಬಿಟ್ಟು ಓಡಿ ಹೋಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ದಾವಣಗೆರೆ ರೇಲ್ವೆ ನಿಲ್ದಾಣದಲ್ಲಿ ಟಿಕೆಟ್ ಪಡೆದು ಹುಬ್ಬಳ್ಳಿ ಟ್ರೈನ್​ ಹತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ತಂದೆ ಹುಬ್ಬಳ್ಳಿಗೆ ತೆರಳಿ ಗಲ್ಲಿ ಗಲ್ಲಿಗಳಲ್ಲಿ ಹುಡುಕಾಡುತ್ತಿದ್ದಾರೆ. ಸಾತ್ವಿಕ್ ಮನೆ ಬಿಟ್ಟು ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೊದಲಿಗೆ ಸಾತ್ವಿಕ್ ಮನೆಯಿಂದ ನೇರವಾಗಿ ದಾವಣಗೆರೆ ರೈಲ್ವೇ ನಿಲ್ದಾಣ ಆಗಮಿಸಿ ಟಿಕೆಟ್​ ಪಡೆದು ಹುಬ್ಬಳ್ಳಿ ರೈಲು ಹತ್ತಿದ್ದಾನೆ. ದಾವಣಗೆರೆ ರೇಲ್ವೆ ನಿಲ್ದಾಣ, ಹುಬ್ಬಳ್ಳಿ ರೈಲ್ವೆ ನಿಲ್ದಾಣ ಸೇರಿದಂತೆ ಕೆಲ ಬೇರೆ ಸ್ಥಳದಲ್ಲಿನ ಚಲನವಲನ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಈ ಹಿನ್ನೆಲೆಯಲ್ಲಿ ತಂದೆ ಹನುಮಂತ,…

Read More

ಕಾರವಾರ:- ದಲಿತರಿಗೆ ಮೀಸಲಾಗಿದ್ದ ಹಣವನ್ನು ಸರ್ಕಾರ ಬಾಚಿಕೊಳ್ಳುತ್ತಿದೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ. ಸರಕಾರದಿಂದ ಜನರಿಗೆ ಫ್ರೀ ಬಸ್ ಟಿಕೆಟ್ ಸಿಕ್ಕಿರಬಹುದು, ಆದರೆ ಬಸ್ ಸಿಗಲ್ಲ, ಹೊಸ ಬಸ್ ಕೂಡಾ ಬರುವುದಿಲ್ಲ. ಜನರ‌ ಮನೆಯ ಕಾರುಗಳು ಕೂಡಾ ಓಡಾಡಲು ಉತ್ತಮ ರಸ್ತೆಗಳು ದೊರೆಯುವುದಿಲ್ಲ. ಕಳೆದ ಎಂಟು ತಿಂಗಳಲ್ಲಿ ಕಾಂಗ್ರೆಸ್ ಸರಕಾರದಿಂದ ಯಾವುದೇ ಒಂದು ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನಡೆದಿಲ್ಲ. ಪ್ರಧಾನಿ ಮೋದಿ ದೇಶವನ್ನು 100 ವರ್ಷ ಮುಂದಕ್ಕೆ ಕೊಂಡೊಯ್ಯಲು ಪ್ರಯತ್ನಿಸಿದರೆ, ಕರ್ನಾಟಕ 50 ವರ್ಷ ಹಿಂದೆ ಹೋಗುತ್ತಿದೆ ಎಂದರು. ಮಧು ಬಂಗಾರಪ್ಪ ದುರದೃಷ್ಠವಶಾತ್ ನಮ್ಮ ಶಿಕ್ಷಣ ಸಚಿವರು. ಇತ್ತೀಚೆಗೆ ಪರೀಕ್ಷೆಯ ವೇಳಾಪಟ್ಟಿಯಲ್ಲಿ ಶುಕ್ರವಾರ ಬಿಟ್ಟು ಉಳಿದೆಲ್ಲಾ ದಿನಗಳಲ್ಲಿ ಬೆಳಗ್ಗೆ ಪರೀಕ್ಷೆಯಿತ್ತು. ಇದನ್ನು ಪ್ರಶ್ನಿಸಿದಕ್ಕೆ ನನ್ನ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಪ್ರಶ್ನೆ ಕೇಳಬಾರದಂತಹ ಧಮನ ನೀತಿಯನ್ನು ಸರಕಾರ ಪಾಲಿಸುತ್ತಿದೆ. ಕಾಂಗ್ರೆಸಿನವರು ಮಾತೆತ್ತಿದರೆ ಪ್ರಜಾಪ್ರಭುತ್ವ, ಕಾನೂನು, ನ್ಯಾಯ ಅಂತಾರೆ. ಆದರೆ, ಬಾಬಾ ಸಾಹೇಬ್ ಅಂಬೇಡ್ಕರ್‌ಗೆ ಗೌರವ ಕೊಡುವಂತಹ ಯಾವುದೇ ಪ್ರಕ್ರಿಯೆ ನಡೆಸಲ್ಲ ಎಂದರು.…

Read More

ಬಿಗ್ ಬಾಸ್‌ನಿಂದ ಹೊರ ಬಂದ ಮೇಲೆ ಅಭಿಮಾನಿಗಳು ತಮ್ಮದೇ ಆದ ರೀತಿಯಲ್ಲಿ ಸ್ಪರ್ಧಿಗಳಿಗೆ ಅಭಿಮಾನ ತೋರಿಸುತ್ತಿದ್ದಾರೆ. ಹೀಗಾಗಿ ಈ ಬಾರಿಯ ಬಿಗ್‌ ಬಾಸ್‌ ಸ್ಪರ್ಧಿಗಳು ಸಖತ್‌ ಹೈಪ್ ಕ್ರಿಯೆಟ್‌ ಮಾಡಿದ್ದು, ಕಳೆದರೆಡು ವಾರದಿಂದ ನಿರಂತವಾಗಿ ಸುದ್ದಿಯಲ್ಲಿದ್ದಾರೆ.ಈ ಬಾರಿಯ ಬಿಗ್‌ ಬಾಸ್‌ ಮನೆಯ ನಿಜವಾದ ಅವಕಾಶವನ್ನು ಬಳಸಿಕೊಂಡವರು ಯಾರು ಎಂದು ಪ್ರಶ್ನಿಸಿದರೆ, ಎಲ್ಲರ ಬಾಯಲ್ಲೂ ಬರುವ ಏಕೈಕ ಉತ್ತರ ಅದು ಡ್ರೋನ್‌ ಪ್ರತಾಪ್‌. ಹಲವರ ಅಸಮಾಧಾನದ ನಡುವೆ ಬಿಗ್‌ ಬಾಸ್‌ ಮನೆಗೆ ಹೋಗಿದ್ದ ಡ್ರೋನ್‌ ಪ್ರತಾಪ್‌, ಮನೆಯಿಂದ ಹೊರ ಬರುವಾಗ ಕೋಟ್ಯಂತರ ಜನರ ಮನಸ್ಸು ಗೆದ್ದಿದ್ದರು. ಅದರ ಫಲ ಶ್ರುತಿ ಡ್ರೋನ್‌ ಪ್ರತಾಪ್‌ ಬಿಗ್‌ ಬಾಸ್‌ ಕನ್ನಡ ಸೀಜನ್‌ 10 ರ ರನ್ನರ್‌ ಅಪ್‌ ಆಗಿ ಹೊರ ಹೊಮ್ಮಿದರು. ಈ ಬಾರಿಯ ಬಿಗ್‌ ಬಾಸ್‌ ಡ್ರೋನ್‌ ಪ್ರತಾಪ್‌ ಗೆಲ್ಲಬೇಕು ಎಂದು ಎರಡು ಕೋಟಿಗೂ ಅಧಿಕ ಜನ ವೋಟ್‌ ಮಾಡಿದ್ದರು. ಪ್ರತಾಪ್‌ ರನ್ನರ್‌ ಅಪ್‌ ಆದರೂ ಕೂಡ ಜನರ ಪ್ರೀತಿ ಮತ್ತಷ್ಟು ಹೆಚ್ಚಾಗಿದ್ದು, ಬಿಗ್‌…

Read More

ಪುರುಷರಲ್ಲಿ ಮತ್ತು ಮಹಿಳೆಯರಲ್ಲಿ ಹೃದಯಾಘಾತದ ಲಕ್ಷಣಗಳು ಬೇರೆ ಬೇರೆಯಾಗಿರುತ್ತವೆ ಎಂಬ ವಿಷಯ ನಿಮಗೆ ಗೊತ್ತಾ? ಜಗತ್ತಿನಲ್ಲಿ ಸಂಭವಿಸುತ್ತಿರುವ ಒಟ್ಟು ಸಾವಿನ ಪ್ರಮಾಣದಲ್ಲಿ ಶೇ. 32ರಷ್ಟು ಸಾವು ಹೃದಯಾಘಾತದಿಂದ ಉಂಟಾಗುತ್ತಿದೆ. ಈ ಒಟ್ಟು ಸಾವುಗಳಲ್ಲಿ ಶೇ. 85ರಷ್ಟು ಸಾವಿಗೆ ಹೃದಯಾಘಾತ ಮತ್ತು ಪಾರ್ಶ್ವವಾಯು ಕಾರಣ ಎಂದು ವಿಶ್ವ ಆರೋಗ್ಯ ಸಂಸ್ಥೆಯ (WHO) ವರದಿ ಹೇಳುತ್ತದೆ. ಹೀಗಾಗಿ, ಹೃದಯಾಘಾತದ (Heart Attack) ಲಕ್ಷಣಗಳನ್ನು ಅರ್ಥ ಮಾಡಿಕೊಳ್ಳುವುದು ಅನಿವಾರ್ಯವಾಗುತ್ತದೆ. ಇದರಿಂದ ಹೃದಯಾಘಾತಕ್ಕೊಳಗಾದ ರೋಗಿಗೆ ತ್ವರಿತವಾಗಿ ವೈದ್ಯಕೀಯ ಸಹಾಯವನ್ನು ನೀಡಿ, ಜೀವಗಳನ್ನು ಉಳಿಸಬಹುದು. ಹೃದಯಾಘಾತ ಎಂಬುದು ಹೃದಯದ ಒಂದು ಭಾಗಕ್ಕೆ ರಕ್ತದ ಹರಿವು ನಿರ್ಬಂಧಿಸಿದಾಗ ಸಂಭವಿಸುತ್ತದೆ. ಸಾಮಾನ್ಯವಾಗಿ ಪರಿಧಮನಿಯ ಅಪಧಮನಿಯಲ್ಲಿ ಹೆಪ್ಪುಗಟ್ಟುವಿಕೆಯಿಂದ ಇದು ಸಂಭವಿಸುತ್ತದೆ. ಈ ಅಡಚಣೆಯು ಹೃದಯದ ಸ್ನಾಯುವಿನ ಆಮ್ಲಜನಕ ಮತ್ತು ಪೋಷಕಾಂಶಗಳನ್ನು ಕಸಿದುಕೊಳ್ಳುತ್ತದೆ. ಇದು ಅಂಗಾಂಶ ಹಾನಿ ಅಥವಾ ಸಾವಿಗೆ ಕಾರಣವಾಗುತ್ತದೆ. ಹೃದಯಾಘಾತದ ಸಾಮಾನ್ಯ ರೋಗಲಕ್ಷಣಗಳೆಂದರೆ ಎದೆ ನೋವು ಅಥವಾ ಅಸ್ವಸ್ಥತೆ, ಉಸಿರಾಟದ ತೊಂದರೆ, ವಾಕರಿಕೆ, ತಲೆತಿರುಗುವಿಕೆ ಮತ್ತು ಬೆವರುವಿಕೆ. ಹೃದಯದ ತೊಂದರೆಯನ್ನು ಕಡಿಮೆ…

Read More

ಹಸಿ ಪಪ್ಪಾಯಿ ಹೊಟ್ಟೆಗೆ ತುಂಬಾ ಆರೋಗ್ಯಕರವಾಗಿದೆ. ಆದರೆ ಹಸಿ ಪಪ್ಪಾಯಿ ತಿನ್ನುವವರು ಬಹಳ ಕಡಿಮೆ. ಹೌದು, ಪಪ್ಪಾಯಿ ಹಣ್ಣಾಗಿರಲಿ ಅಥವಾ ಹಸಿಯಾಗಿರಲಿ ದೇಹಕ್ಕೆ ಒಳ್ಳೆಯದು. ಹಸಿರು ಪಪ್ಪಾಯಿಯು ವಿಟಮಿನ್ ಇ, ಸಿ ಮತ್ತು ಅಮೈನೋ ಆಮ್ಲಗಳಲ್ಲಿ ಸಮೃದ್ಧವಾಗಿದೆ. ಚರ್ಮವನ್ನು ಆರೋಗ್ಯವಾಗಿಡಲು ಇದು ಅವಶ್ಯಕವಾಗಿದೆ. ಈ ಹಣ್ಣು ಸುಕ್ಕುಗಳು, ಕಲೆಗಳು ಮತ್ತು ವಯಸ್ಸಾದ ಚಿಹ್ನೆಗಳು, ಉರಿಯೂತ, ಕಿರಿಕಿರಿ ಇತ್ಯಾದಿಗಳನ್ನು ಸರಿಪಡಿಸುವ ವಯಸ್ಸಾದ ವಿರೋಧಿ ಗುಣಗಳನ್ನು ಹೊಂದಿದೆ. ಅಂತಹ ಸಮಯದಲ್ಲಿ ನೀವು ಹಸಿ ಪಪ್ಪಾಯಿ ಪೇಸ್ಟ್ ಅನ್ನು ಚರ್ಮಕ್ಕೆ ಅನ್ವಯಿಸಬಹುದು. ನೀವು ತರಕಾರಿಗಳು, ಸಲಾಡ್‌ಗಳು, ಸೂಪ್‌ಗಳು ಇತ್ಯಾದಿಗಳನ್ನು ತಯಾರಿಸಬಹುದು ಮತ್ತು ಕುಡಿಯಬಹುದು. ಹಸಿ ಪಪ್ಪಾಯಿಯಲ್ಲಿ ಫೈಬರ್ ಹೇರಳವಾಗಿದೆ. ನಂತರ ಇಂತಹ ಸಮಯದಲ್ಲಿ ನಿಯಮಿತವಾಗಿ ಸೇವಿಸುವುದರಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ. ಬೌಲ್ ಆವೇಗ ಉತ್ತಮವಾಗಿದೆ. ಇದರಿಂದ ಮಲಬದ್ಧತೆ ಸಮಸ್ಯೆ ಇರುವುದಿಲ್ಲ. ಹೊಟ್ಟೆಯಲ್ಲಿ pH ಸಮತೋಲನವನ್ನು ಕಾಪಾಡುತ್ತದೆ. ಹಾಗಾಗಿ ಹಸಿ ಪಪ್ಪಾಯಿಯನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವ ಮೂಲಕ ಹೊಟ್ಟೆ ಮತ್ತು ಜೀರ್ಣ ಸಂಬಂಧಿ ಸಮಸ್ಯೆಗಳನ್ನು ತಪ್ಪಿಸಬಹುದು. ಹಸಿ ಪಪ್ಪಾಯಿಯಲ್ಲಿ…

Read More

ನವದೆಹಲಿ:- ಕರೋನಾ ನಂತರ ವಿಮಾ ಪ್ರೀಮಿಯಂ ಕೂಡ ಹೆಚ್ಚಾಗಿದ್ದು, ಇದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ಕೆಲವು ಅಗ್ಗದ ವಿಮಾ ಪಾಲಿಸಿಗಳನ್ನು ಲಭ್ಯವಾಗುವಂತೆ ಮಾಡುತ್ತಿದೆ. ಕೇಂದ್ರ ಸರ್ಕಾರ ಪರಿಚಯಿಸಿದ ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ. ಪ್ರಧಾನ ಮಂತ್ರಿ ಜೀವನ ಜ್ಯೋತಿ ಯೋಜನೆಯ ವಾರ್ಷಿಕ ಪ್ರೀಮಿಯಂ ಕೇವಲ ರೂ. 436. ಮಾಸಿಕ ನೋಡಿದರೆ ಕೇವಲ 36 ರೂ. ಜನರಿಗೆ ಕಡಿಮೆ ವೆಚ್ಚದಲ್ಲಿ ಜೀವ ವಿಮಾ ರಕ್ಷಣೆಯನ್ನು ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಆದರೆ ಈ ಯೋಜನೆಯನ್ನು ಪ್ರಾರಂಭಿಸಿದಾಗ, ಕೇವಲ ರೂ.330 ಪ್ರೀಮಿಯಂನೊಂದಿಗೆ ಪಾಲಿಸಿಯನ್ನು ನೀಡಲಾಯಿತು. ಈಗ ಆ ಪ್ರೀಮಿಯಂ ಅನ್ನು ರೂ.436ಕ್ಕೆ ಹೆಚ್ಚಿಸಲಾಗಿದೆ. ಈ ಯೋಜನೆಯು ಕುಟುಂಬಕ್ಕೆ ರೂ. ಕೇಂದ್ರ ಸರ್ಕಾರ 2 ಲಕ್ಷದವರೆಗೆ ಆರ್ಥಿಕ ನೆರವು ನೀಡುತ್ತದೆ. ಈ ಪಾಲಿಸಿಯನ್ನು ಖರೀದಿಸಲು, ನಿಮ್ಮ ಕನಿಷ್ಠ ವಯಸ್ಸು 18 ವರ್ಷಗಳು. ಆದರೆ ಗರಿಷ್ಠ ವಯೋಮಿತಿಯನ್ನು 55 ವರ್ಷಕ್ಕೆ ನಿಗದಿಪಡಿಸಲಾಗಿದೆ. ಈ ಯೋಜನೆಗಳು ಜೂನ್ 1 ರಿಂದ ಮೇ 31 ರವರೆಗೆ ಜಾರಿಯಾಗಲಿವೆ. ಆದರೆ…

Read More

ಬೆಂಗಳೂರು: CRPF, BSF ಮತ್ತು CISFನಂತಹ ಅರೆಸೇನಾ ಪಡೆಗಳ ಕಾನ್‌ಸ್ಟೆಬಲ್‌ ನೇಮಕಾತಿ ಪರೀಕ್ಷೆ, ಇದೇ ಮೊದಲ ಬಾರಿಗೆ ಕನ್ನಡ ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ ನಡೆಯಲಿದೆ. ಫೆಬ್ರವರಿ 20ರಿಂದ ಮಾರ್ಚ್ 7ರವರೆಗೆ ಪರೀಕ್ಷೆಗಳು ನಡೆಸಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯ ಮಾಹಿತಿ ನೀಡಿದೆ. ದೇಶದಾದ್ಯಂತ ಸುಮಾರು 128 ನಗರಗಳಲ್ಲಿ 48 ಲಕ್ಷ ಆಕಾಂಕ್ಷಿಗಳು ಪರೀಕ್ಷೆಗೆ ಹಾಜರಾಗಲಿದ್ದು. ಹಿಂದಿ ಮತ್ತು ಇಂಗ್ಲಿಷ್ ಜೊತೆಗೆ ಕನ್ನಡ, ಅಸ್ಸಾಮಿ, ಗುಜರಾತಿ, ಮಲಯಾಳಂ, ತಮಿಳು, ತೆಲುಗು, ಒಡಿಯ, ಉರ್ದು, ಪಂಜಾಬಿ, ಮಣಿಪುರಿ ಮತ್ತು ಕೊಂಕಣಿ ಭಾಷೆಗಳಲ್ಲಿ ಪ್ರಶ್ನೆ ಪತ್ರಿಕೆಯನ್ನು ಸಿದ್ಧಪಡಿಸಲಾಗಿದೆ. ಇನ್ನು, ಪ್ರಾದೇಶಿಕ ಭಾಷೆಗಳಲ್ಲೂ ಇಂತಹ ನೇಮಕಾತಿ ಪರೀಕ್ಷೆಗಳನ್ನು ನಡೆಸುವುದಾಗಿ ಕಳೆದ ವರ್ಷದ ಏಪ್ರಿಲ್‌ನಲ್ಲಿ ಘೋಷಿಸಲಾಗಿತ್ತು ಎಂದು ತಿಳಿಸಿದೆ. ಕೇಂದ್ರೀಯ ಪಡೆಗಳಲ್ಲಿ ಸ್ಥಳೀಯ ಯುವಜನರ ಭಾಗವಹಿಸುವಿಕೆ ಹೆಚ್ಚಿಸಬೇಕು ಮತ್ತು ಪ್ರಾದೇಶಿಕ ಭಾಷೆಗಳಿಗೆ ಉತ್ತೇಜನ ನೀಡಬೇಕು ಎಂಬ ಗೃಹ ಸಚಿವ ಅಮಿತ್ ಶಾ ಅವರ ಆಶಯದಿಂದಾಗಿ ಈ ‘ಐತಿಹಾಸಿಕ ನಿರ್ಧಾರ’ ತೆಗೆದುಕೊಳ್ಳಲಾಗಿತ್ತು.

Read More