Author: AIN Author

ಭಾರತೀಯ ಆಟಗಾರರಿಗೆ ಐಪಿಎಲ್ ಹೊರತುಪಡಿಸಿ ಬೇರೆ ಯಾವುದೇ ಲೀಗ್‌ನಲ್ಲಿ ಆಡಲು ಅವಕಾಶವಿಲ್ಲ. ಆದರೆ, ಈಗೀಗ ಅನೇಕ ಭಾರತೀಯ ಆಟಗಾರರು ಟೆಸ್ಟ್ ಅಥವಾ ಇನ್ನಾವುದೇ ಸ್ವರೂಪಕ್ಕಿಂತ ಐಪಿಎಲ್‌ಗೆ ಹೆಚ್ಚು ಆಕರ್ಷಿತರಾಗಿದ್ದಾರೆ. ಆಟಗಾರರು ತಿಂಗಳ ಮೊದಲೇ ಎಲ್ಲವನ್ನೂ ಮರೆತು ಐಪಿಎಲ್ ತಯಾರಿ ಆರಂಭಿಸುತ್ತಾರೆ. ಇದೀಗ ಇಂಥ ಆಟಗಾರರನ್ನು ನಿಯಂತ್ರಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಹೊಸ ಆದೇಶ ಹೊರಡಿಸಿದೆ. ಆಟಗಾರರು ದೇಶೀಯ ಕ್ರಿಕೆಟ್ ತೊರೆದು ತಿಂಗಳ ಮೊದಲೇ ಐಪಿಎಲ್ ತಯಾರಿ ಆರಂಭಿಸುವ ಮನೋಭಾವದಿಂದ ಬಿಸಿಸಿಐ ಸಂತುಷ್ಟರಾಗಿಲ್ಲ ಎಂದು ವರದಿಯೊಂದು ಹೇಳಿದೆ. ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಆಟಗಾರರು ರಣಜಿ ಟ್ರೋಫಿಯನ್ನು ಆಡಬೇಕು ಎಂದು ಬಿಸಿಸಿಐ ಮೂಲ ತಿಳಿಸಿದೆ. ರೆಡ್ ಬಾಲ್ ಕ್ರಿಕೆಟ್ ಅದರಲ್ಲೂ ರಣಜಿ ಟ್ರೋಫಿ ಬಗ್ಗೆ ಟೀಮ್ ಇಂಡಿಯಾದ ಕೆಲವು ಆಟಗಾರರ ವರ್ತನೆಯಿಂದ ಬಿಸಿಸಿಐ ಅಧಿಕಾರಿಗಳು ಕೋಪಗೊಂಡಿದ್ದಾರೆ ಎಂದು ವರದಿಯಾಗಿದೆ. ಕೆಲವೇ ದಿನಗಳಲ್ಲಿ ಎಲ್ಲಾ ಆಟಗಾರರಿಗೆ ರಣಜಿ ಟ್ರೋಫಿಯಲ್ಲಿ ತಮ್ಮ ರಾಜ್ಯ ತಂಡಕ್ಕೆ ಆಡಲು ಬಿಸಿಸಿಐ ಸೂಚನೆ ನೀಡಲಿದೆ. ಕೆಲ ಆಟಗಾರರು…

Read More

ಟೀಮ್ ಇಂಡಿಯಾ ಎದುರು ಟೆಸ್ಟ್‌ ಸರಣಿ ಗೆಲುವಿನ ಕನಸು ಕಂಡಿರುವ ಇಂಗ್ಲೆಂಡ್‌ ತಂಡಕ್ಕೆ ಆಘಾತ ಎದುರಾಗಿದೆ ಈ ಬಾರಿ ಬೆನ್‌ ಸ್ಟೋಕ್ಸ್‌ ನಾಯಕತ್ವದಲ್ಲಿ ಇಂಗ್ಲೆಂಡ್‌ ಅಂಥದ್ದೇ ಐತಿಹಾಸಿಕ ಸಾಧನೆ ಮೆರೆಯಲು ಎದುರು ನೋಡುತ್ತಿತ್ತು ಎರಡೂ ಇನಿಂಗ್ಸ್‌ಗಳಲ್ಲಿ ಅನುಭವಿಸಿದ ವೈಫಲ್ಯ ಕಾರಣ 106 ರನ್‌ಗಳ ಸೋಲಿನ ಮುಖಭಂಗ ಎದುರಾಯಿತು. ಅಂದಹಾಗೆ ಈ ಪಂದ್ಯಕ್ಕೆ ಇಂಗ್ಲೆಂಡ್‌ ತಂಡ ಪ್ರಮುಖ ಸ್ಪಿನ್ನರ್‌ ಜಾಕ್‌ ಲೀಚ್‌ ಅವರ ಸೇವೆಯನ್ನು ಕಳೆದುಕೊಂಡಿತ್ತು. ಇದೀಗ ಗಾಯದಿಂದ ಗುಣಮುಖರಾಗಲು ವಿಫಲರಾಗಿರುವ ಕಾರಣ ಸರಣಿಯ ಉಳಿದ ಮೂರೂ ಪಂದ್ಯಗಳಿಂದ ಹೊರಗುಳಿಯುವಂತ್ತಾಗಿದೆ. ದ್ವಿತೀಯ ಟೆಸ್ಟ್‌ ಬಳಿಕ ಅಬುಧಾಬಿಗೆ ತೆರಳಿ ವಿಶ್ರಾಂತಿ ತೆಗೆದುಕೊಂಡಿರುವ ಇಂಗ್ಲೆಂಡ್‌ ತಂಡ ಫೆ.15ರಂದು ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್‌ ಸಂಸ್ಥೆ ಕ್ರೀಡಾಂಗಣದಲ್ಲಿ ಶುರುವಾಗಲಿರುವ ಮೂರನೇ ಟೆಸ್ಟ್‌ ಇನ್ನು ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿ ಸೆಲೆಕ್ಟರ್ಸ್‌ ಬದಲಿ ಆಟಗಾರನ ಆಯ್ಕೆ ಮಾಡುವುದು ಇನ್ನು ಬಾಕಿಯಿದೆ. ಹೈದರಾಬಾದ್‌ ಟೆಸ್ಟ್‌ನಲ್ಲಿ ಜಾಕ್‌ ಲೀಚ್ ಮಂಡಿ ಗಾಯದ ಸಮಸ್ಯೆ ನಡುವೆಯೂ ಎರಡನೇ ಇನಿಂಗ್ಸ್‌ನಲ್ಲಿ ಬ್ಯಾಟ್‌ ಮಾಡಿದ್ದರು

Read More

ಬೆಂಗಳೂರು:- ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸಾವಿರಾರು ಅಂಗನವಾಡಿ, ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಲಿದ್ದಾರೆ. ಸರ್ಕಾರ ರಚನೆಗೂ ಮುನ್ನ ನೀಡಿದ 6 ನೇ ಗ್ಯಾರಂಟಿ ಜಾರಿಗೆ ಆಗ್ರಹಿಸಲಾಗಿದೆ. ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ಎರಡು ದಿನಗಳ ಕಾಲ ಅಹೋರಾತ್ರಿ ಧರಣಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇಂದು ಬೆಳಗ್ಗೆ 11 ಗಂಟೆಗೆ ಆಶಾ ಕಾರ್ಯಕರ್ತೆಯರ ಪ್ರತಿಭಟನೆ ಆರಂಭವಾಗಲಿದೆ. ರಾಜ್ಯದ ಮೂಲೆ ಮೂಲೆಯಿಂದ ಪ್ರತಿಭಟನಾಕಾರರು ಆಗಮಿಸಲಿದ್ದಾರೆ. ಆಶಾ ಕಾರ್ಯಕರ್ತೆಯರ ಬೇಡಿಕೆಗಳೇನು? ಕಳೆದ ಎಂಟು ವರ್ಷಗಳಿಂದ ದುಡಿದಷ್ಟು ಪ್ರೋತ್ಸಾಹ ಧನ ಸಿಗದೇ ಆಗುತ್ತಿರುವ ವಂಚನೆ ತಡೆಗಟ್ಟಲು ಆಶಾ ಪೇಮೆಂಟ್ ಪ್ರಕ್ರಿಯೆಯಿಂದ ಆರ್​ಸಿಎಚ್ ಪೋರ್ಟಲ್ ಅನ್ನು ಡೀಲಿಂಕ್ ಮಾಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಆಶಾ ಕಾರ್ಯಕರ್ತೆಯರಿಗೆ ಮಾಸಿಕ ಕನಿಷ್ಠ 15,000 ರೂ. ಒಟ್ಟು ಪ್ರೋತ್ಸಾಹ ಧನ ನೀಡಬೇಕು. ಮೊಬೈಲ್ ಕೆಲಸಗಳನ್ನು ಒತ್ತಾಯಪೂರ್ವಕವಾಗಿ ಮಾಡಿಸಿಕೊಳ್ಳುತ್ತಿರುವುದನ್ನು ಕೈಬಿಡಿ. ಅಥವಾ ಮೊಬೈಲ್, ಡಾಟಾ ಒದಗಿಸಿ. ಮೊಬೈಲ್ ಕೆಲಸಗಳಿಗೆ ಪ್ರೋತ್ಸಾಹ ಧನ ನಿಗದಿ ಮಾಡಿ. ಯಾರಿಗೆ ಮೊಬೈಲ್ ಕೆಲಸ ಮಾಡಲು ಆಗುವುದಿಲ್ಲವೋ ಅವರಿಗೆ ಪರ್ಯಾಯ ವ್ಯವಸ್ಥೆ…

Read More

ನವದೆಹಲಿ:- ನರೇಂದ್ರ ಮೋದಿ ನೇತೃತ್ವ ಕೇಂದ್ರ ಸರ್ಕಾರದ ವಿರುದ್ಧ ಮತ್ತೆ ಅನ್ನದಾತರು ರೊಚ್ಚಿಗೆದ್ದಿದ್ದಾರೆ. ಕೃಷಿ ಉತ್ಪನ್ನಗಳ ಬೆಂಬಲ ಬೆಲೆಗೆ ಕಾನೂನು ಜಾರಿ ಸೇರಿ ಹಲವು ಬೇಡಿಕೆಗಳ ಒತ್ತಾಯಿಸಿ, ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ದೆಹಲಿ ಚಲೋಗೆ ಕರೆ ನೀಡಿವೆ. ಇದಕ್ಕೆ ದೇಶದ 200ಕ್ಕೂ ಹೆಚ್ಚು ರೈತ ಸಂಘಟನೆಗಳು ಬೆಂಬಲ ಸೂಚಿಸಿದ್ದು, ಲಕ್ಷಾಂತರ ರೈತರು ದೆಹಲಿಗೆ ಮುತ್ತಿಗೆ ಹಾಕಲು ಮುಂದಾಗಿದ್ದಾರೆ. ರೈತರ ಪ್ರತಿಭಟನೆ ಹಿನ್ನೆಲೆ ಸಿಂಘು, ಘಾಜಿಪುರ್, ಟಿಕ್ರಿ ಗಡಿಯಲ್ಲಿ ಸಂಚಾರ ನಿರ್ಬಂಧಿಸಿರುವ ಪೊಲೀಸರು ಸರ್ಪಗಾವಲು ಹಾಕಿದ್ದಾರೆ. ಬೃಹತ್ ಗಾತ್ರದ ಬ್ಯಾರಿಕೇಡ್, ಕಾಂಕ್ರಿಟ್ ಗೋಡೆ ನಿರ್ಮಿಸಿದ್ದಾರೆ. ರಸ್ತೆಯಲ್ಲಿ ಕಬ್ಬಿಣದ ಚೂಪಾದ ರಾಡ್‌ಗಳನ್ನು ಹಾಕಿದ್ದಾರೆ. ಇಂಟರ್‌ನೆಟ್ ಸ್ಥಗಿತಗೊಳಿಸಿ ದೆಹಲಿ ಸುತ್ತಲೂ ಪೊಲೀಸರು ಸುತ್ತುವರೆದಿದ್ದಾರೆ. ಉತ್ತರ ಪ್ರದೇಶದಿಂದ ದೆಹಲಿಗೆ ಸಂಪರ್ಕಿಸುವ ಘಾಜಿಪುರ ಗಡಿಯಲ್ಲಿ ಹೆದ್ದಾರಿಯಲ್ಲೇ ಸಿಮೆಂಟ್​ನಿಂದ ಹೊಸ ತಡೆಗೋಡೆ ನಿರ್ಮಿಸಿ ರೈತರನ್ನು ತಡೆಯಲು ಪ್ಲ್ಯಾನ್ ಮಾಡಲಾಗಿದೆ. ಖಾಕಿ ತಡೆಗೋಡೆ ತಂತ್ರ ಭೇದಿಸಲು, ಪಂಜಾಬ್ ರೈತರು ಸಜ್ಜಾಗಿದ್ದಾರೆ. ಟ್ರ್ಯಾಕ್ಟರ್​ಗಳನ್ನು ಮಾಡಿಫೈ ಮಾಡಿಕೊಂಡು ಹೋರಾಟಕ್ಕೆ…

Read More

ಮನೆಯ ಮುಂದೆ ಸುಂದರವಾಗಿ ರಂಗೋಲಿ ಬಿಡಿಸುವುದರಿಂದ ಮನೆಯ ಅಂದ ಇನ್ನೂ ಹೆಚ್ಚುತ್ತದೆ. ರಂಗೋಲಿ ಹಾಕುವುದರಿಂದ ನಕಾರಾತ್ಮ ಶಕ್ತಿಗಳು ಮನೆಯೊಳಗೆ ಬರುವುದಿಲ್ಲ ಎಂಬುವುದು ನಂಬಿಕೆ. ರಂಗೋಲಿಯನ್ನು ಹಾಕುವ ದೊಡ್ಡ ಪ್ರಯೋಜನವೆಂದರೆ ಅದನ್ನು ಹಾಕುವಾಗ ನೀವು ತುಂಬಾ ಸಕಾರಾತ್ಮಕ ಭಾವನೆಯನ್ನು ಅನುಭವಿಸುತ್ತೀರಿ ಮತ್ತು ಈ ಪ್ರಕ್ರಿಯೆಯು ನಿಮ್ಮ ಒತ್ತಡವನ್ನು ನಿವಾರಿಸುತ್ತದೆ. ಮತ್ತು ತಾಳ್ಮೆ ವೃದ್ಧಿಸುತ್ತದೆ. ಹಬ್ಬ, ಮದುವೆ, ವ್ರತ, ಉಪನಯನ, ರಥೋತ್ಸವಗಳಲ್ಲಿ ತಳಿರು ತೋರಣಗಳು ಹಾಗೂ ರಂಗೋಲಿ ಹಿಂದೂ ಧರ್ಮದಲ್ಲಿ ಅವಿಚ್ಛಿನ್ನ ಅಂಗಗಳಾಗಿವೆ. ರಂಗೋಲಿ ಶುಭದ ಸಂಕೇತ ಹೀಗಾಗಿ ಇದನ್ನು ವ್ಯಕ್ತಿ ಮೃತಪಟ್ಟಾಗ ಆತನ ಪುಣ್ಯಕಾರ್ಯ ಮುಗಿಯುವವರೆಗೆ ಹಾಕುವಂತಿಲ್ಲ. ಕಪ್ಪುಬಣ್ಣ ಬಳಸಿ ರಂಗೋಲಿ ಹಾಕುವುದು ನಿಷಿದ್ಧ. ರಂಗೋಲಿ ದಾಟಿ ಭೂತ, ಪ್ರೇತಗಳು ಮನೆಯೊಳಗೆ ಪ್ರವೇಶಿಸುವುದಿಲ್ಲವೆಂಬ ನಂಬಿಕೆ ಇದೆ. ರಂಗೋಲಿ ತುಳಿಯುವುದು ನಿಷಿದ್ಧ. ರಂಗವಲ್ಲಿಯನ್ನು ಸೂರ್ಯೋದಯಕ್ಕೆ ಮುಂಚೆ ಹಾಕಬೇಕು. ಒಂದು ಎಳೆಯಿಂದ ರಂಗೋಲಿ ಹಾಕಬಾರದು. ಕನಿಷ್ಠ ಪಕ್ಷ ಎರಡು ಎಳೆಗಳಾದರೂ ಇರಬೇಕು ಅಥವಾ ಸಮಸಂಖ್ಯೆಯಲ್ಲಿ ಗೀರುಗಳನ್ನು ಹಾಕಿ ರಂಗೋಲಿ ಬಿಡಿಸಬೇಕು, ಮನೆಯ ಮುಂದೆ ಬಾಗಿಲಿನ ಮಧ್ಯದಲ್ಲಿ…

Read More

ಮುಂದಿನ ಮೂರು ಟೆಸ್ಟ್‌ ಪಂದ್ಯಗಳಿಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾರತ ತಂಡವನ್ನು ಪ್ರಕಟಿಸಿದೆ. ಆರಂಭಿಕ ಎರಡು ಪಂದ್ಯಗಳನ್ನು ಆಡಿದ್ದ ಬಹುತೇಕ ಅದೇ ಆಟಗಾರರನ್ನು ಉಳಿಸಿಕೊಂಡಿದೆ. ವೈಯಕ್ತಿಕ ಕಾರಣಗಳಿಂದ ಆರಂಭಿಕ ಎರಡು ಪಂದ್ಯಗಳಿಗೆ ಅಲಭ್ಯರಾಗಿದ್ದ ವಿರಾಟ್‌ ಕೊಹ್ಲಿ, ಇನ್ನುಳಿದ ಮೂರೂ ಪಂದ್ಯಗಳಿಂದಲೂ ದೂರ ಉಳಿಯಲು ನಿರ್ಧರಿಸಿದ್ದಾರೆ ಹಾಗೂ ಬಿಸಿಸಿಐ ಕೂಡ ಹಿರಿಯ ಆಟಗಾರನ ನಿರ್ಧಾರಕ್ಕೆ ಬೆಂಬಲ ಸೂಚಿಸಿದೆ. ಇವರ ಸ್ಥಾನಕ್ಕೆ 27ರ ಪ್ರಾಯದ ಆಕಾಶ್ ದೀಪ್‌ಗೆ ಅವಕಾಶವನ್ನು ನೀಡಲಾಗಿದೆ. ಆಕಾಶ ದೀಪ್ ಒಬ್ಬ ವೇಗದ ಬೌಲರ್. ಇಂಗ್ಲೆಂಡ್ ವಿರುದ್ಧದ ಕೊನೆಯ 3 ಟೆಸ್ಟ್ ಪಂದ್ಯಗಳ ಭಾರತ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಪಡೆಯಬಹುದಾಗಿದೆ. ಭಾಗವಾಗಿರಬಹುದು. 27ರ ವರ್ಷದ ವೇಗದ ಬೌಲರ್ ಆಕಾಶ್ ದೀಪ್ ಇಂಗ್ಲೆಂಡ್ ಲಯನ್ಸ್ ವಿರುದ್ಧದ ಮೂರು ಅನಧಿಕೃತ ಟೆಸ್ಟ್‌ ಪಂದ್ಯಗಳಿಂದ 13 ವಿಕೆಟ್‌ಗಳನ್ನು ಪಡೆದಿದ್ದರು. ಬಿಹಾರದಲ್ಲಿ ಜನಿಸಿದ್ದ ಆಕಾಶ್ ದೀಪ್ ಬಂಗಾಳದ ಪರವಾಗಿ ದೇಶಿ ಕ್ರಿಕೆಟ್ ಆಡುತ್ತಿದ್ದಾರೆ. ಆಕಾಶ್ 29 ಪ್ರಥಮ ದರ್ಜೆ ಪಂದ್ಯಗಳಲ್ಲಿ 103…

Read More

ಪಪ್ಪಾಯಿ ಹಣ್ಣಿನಲ್ಲಿ ದೇಹಕ್ಕೆ ಅಗತ್ಯವಿರುವ ವಿಟಮಿನ್ ಎ, ಸಿ, ಇ, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ತಾಮ್ರ ಸಮೃದ್ಧವಾಗಿದೆ. ಪ್ರತಿದಿನ ಈ ಹಣ್ಣನ್ನು ಸೇವಿಸುವುದರಿಂದ ದೇಹಕ್ಕೆ ಬೇಕಾದ ಆಮ್ಲ ಬಿಡುಗಡೆಯಾಗುತ್ತದೆ. ಪ್ರತಿದಿನ ಬೆಳಗಿನ ಉಪಾಹಾರದಲ್ಲಿ ಪಪ್ಪಾಯಿ ಹಣ್ಣನ್ನು ಸೇವಿಸುವುದರಿಂದ ಹಸಿವಿನ ಸಮಸ್ಯೆ ಕಡಿಮೆಯಾಗುತ್ತದೆ. ಪಪ್ಪಾಯಿ ಹಣ್ಣಿನಲ್ಲಿ ಅನೇಕ ಕಿಣ್ವಗಳಿವೆ. ಇದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ ಎನ್ನುತ್ತಾರೆ ತಜ್ಞರು. ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ತಿನ್ನುವುದರಿಂದ ಜೀರ್ಣಾಂಗ ವ್ಯವಸ್ಥೆ ಸುಧಾರಿಸುತ್ತದೆ. ಪಪ್ಪಾಯಿ ಹಣ್ಣಿನಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಪಪ್ಪಾಯಿಯಲ್ಲಿರುವ ಪ್ರೋಟೀನ್ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ ಮತ್ತು ಅಜೀರ್ಣದ ಅಪಾಯವನ್ನು ಕಡಿಮೆ ಮಾಡುತ್ತದೆ. ಊಟದ ನಂತರ ಎರಡು ಗಂಟೆ ಬಳಿಕ ಪಪ್ಪಾಯಿ ತಿಂದರೆ ಸಕ್ಕರೆ ಮಟ್ಟದಲ್ಲಿನ ಸ್ಪೈಕ್‌ಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಧಿಕ ತೂಕ ಇರುವವರು ಪಪ್ಪಾಯಿ ಸೇವಿಸುವುದು ತುಂಬಾ ಒಳ್ಳೆಯದು ಎನ್ನುತ್ತಾರೆ ತಜ್ಞರು. ಪಪ್ಪಾಯಿ ಹಣ್ಣನ್ನು ಸೇವಿಸುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಮಹಿಳೆಯರು ಪಪ್ಪಾಯಿ ಹಣ್ಣನ್ನು ಸೇವಿಸುವುದರಿಂದ ಮುಟ್ಟಿನ ಸಮಸ್ಯೆ ಕಡಿಮೆಯಾಗುತ್ತದೆ. ಪಪ್ಪಾಯಿ ಹಣ್ಣು ಆರೋಗ್ಯಕರ…

Read More

ಬೆಂಗಳೂರು: ಪ್ರೇಮಿಗಳ ದಿನಾಚರಣೆ ಅಂದಮೇಲೆ ಪಾರ್ಟಿ ಜೋರಾಗಿಯೇ ಇರುತ್ತೆ. ಹೀಗಿದ್ದಾಗಲೇ ಪ್ರೇಮಿಗಳಿಗೆ ಮೊದಲ ಶಾಕ್ ಸಿಕ್ಕಿದೆ, ಅದು ಏನೆಂದರೆ ಪ್ರೇಮಿಗಳ ದಿನದಂದು ಅಂದ್ರೆ ಫೆಬ್ರವರಿ 14ರಿಂದ 16 ರವರೆಗೆ ಎಣ್ಣೆ ಸಿಗೋದೆ ಇಲ್ಲವಂತೆ. ಇದಕ್ಕೆ ಕಾರಣ ಏನು ಅನ್ನೋದಕ್ಕಿಂತ ಮೊದಲು ಈ ಕ್ರಮದ ವಿರುದ್ಧ ಇದೀಗ ಹೋಟೆಲ್ ಮಾಲೀಕರ ಸಂಘ ರೊಚ್ಚಿಗೆದ್ದಿದ್ದು ಏಕೆ? Valentine’s Day: ಪ್ರೇಮಿಗಳ ದಿನದ ಮಹತ್ವ, ಇದರ ಇತಿಹಾಸ ಇಲ್ಲಿದೆ! ಅಷ್ಟಕ್ಕೂ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ವಿಧಾನ ಪರಿಷತ್ ಚುನಾವಣೆ ಇರುವ ಹಿನ್ನೆಲೆ ಫೆಬ್ರವರಿ 14 ರಿಂದ 16 ರವರೆಗೆ ಮದ್ಯ ಮಾರಾಟ ಬ್ಯಾನ್ ಆಗಿದೆ. ಆದರೆ ಇದೇ ವಿಚಾರ ಈಗ ದೊಡ್ಡ ಬೆಂಕಿ ಹೊತ್ತಿಸಿದೆ, ಅದರಲ್ಲೂ ಹೋಟೆಲ್ ಮಾಲೀಕರ ಸಂಘ & ಚುನಾವಣೆ ನಡುವೆ ಈಗ ಹೊಸ ತಿಕ್ಕಾಟ ಶುರುವಾಗಿದೆ. ಇದೀಗ ಈ ಆದೇಶವನ್ನು ಮರುಪರಿಶೀಲಿಸಬೇಕು ಎಂದು, ಬೆಂಗಳೂರು ಪೊಲೀಸ್ ಆಯುಕ್ತರು ಮತ್ತು ಮುಖ್ಯ ಚುನಾವಣಾ ಆಯುಕ್ತರಿಗೆ ಬೃಹತ್ ಬೆಂಗಳೂರು ಹೋಟೆಲ್ ಮಾಲೀಕರ ಸಂಘ ಪತ್ರವನ್ನ…

Read More

ಚಾಮರಾಜನಗರ:- ರೈತ ಮಕ್ಕಳಿಗೆ ಹೆಣ್ಣು ಸಿಗಲಿ ಎಂದು ಅಂಚೆದೊಡ್ಡಿ ಗ್ರಾಮಸ್ಥರು ಮಾದಪ್ಪನ ಸನ್ನಿಧಾನಕ್ಕೆ ಪಾದಯಾತ್ರೆ ಕೈಗೊಂಡಿದ್ದಾರೆ. ಹಿರಿಯರ ಸೂಚನೆಯಂತೆ ಅಂಚೆದೊಡ್ಡಿಯ ಗ್ರಾಮದ ಜನರು ಪಾದಯಾತ್ರೆ ಕೈಗೊಂಡಿದ್ದಾರೆ. ಈ ಪೈಕಿ ಹೆಚ್ಚಿನವರು ರೈತ ಮಕ್ಕಳಿಗೆ ಹೆಣ್ಣು ಸಿಗಲಿ ಎಂದು ಹರಕೆ ಹೊತ್ತವರೇ ಹೆಚ್ಚು. ಪಾದಯಾತ್ರಿಕರು ಸನ್ನಿಧಾನದಲ್ಲಿ ಮಾದಪ್ಪನಿಗೆ ವಿವಿಧ ಸೇವೆ ಸಲ್ಲಿಸಲಿದ್ದಾರೆ. ಇತ್ತೀಚಿಗೆ ರೈತರ ಮಕ್ಕಳಿಗೆ ಹೆಣ್ಣು ಸಿಗುತ್ತಿಲ್ಲ ಅನ್ನೋ ಕಾರಣಕ್ಕೆ ಪಾದಯಾತ್ರೆ ನಡೆಸಲಾಗುತ್ತಿದೆ.

Read More

ತೊಂಡೆಕಾಯಿಯಲ್ಲಿರುವ ಅತ್ಯದ್ಭುತ ಆರೋಗ್ಯ ಪ್ರಯೋಜನಗಳನ್ನು ತಿಳಿದುಕೊಂಡರೆ ತೊಂಡೆಕಾಯಿ ವಿರುದ್ಧ ಮುಖ ತಿರುಗಿಸಿಕೊಂಡು ಹೋಗಿದ್ದವರು ಸಹ ವಾಪಸ್ ಬಂದು ಕಾಸು ಕೊಟ್ಟು ಖರೀದಿ ಮಾಡುತ್ತಾರೆ. ಹೌದು, ತೊಂಡೆಕಾಯಿಯಲ್ಲಿ ನಮ್ಮ ದೇಹಕ್ಕೆ ಬೇಕಾದ ಅಗಾಧವಾದ ಪೌಷ್ಟಿಕ ಸತ್ವಗಳು ಸೇರಿವೆ. ಜೊತೆಗೆ ಸಾಕಷ್ಟು ಆರೋಗ್ಯ ಪ್ರಯೋಜನಗಳು ಕೂಡ ಉಂಟಾಗುತ್ತವೆ. ತೊಂಡೆಕಾಯಿ ಆರೋಗ್ಯಕ್ಕೆ ಬಹಳ ಒಳ್ಳೆಯದು ಸಾಧಾರಣವಾಗಿ ಬಳ್ಳಿಯ ರೀತಿ ಹಬ್ಬುವ ತೊಂಡೆಕಾಯಿ ಗಿಡ ನಮ್ಮ ಭಾರತ, ಆಫ್ರಿಕಾ ಮತ್ತು ಏಷ್ಯಾ ಖಂಡಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಹಾಗಾಗಿ ಇಲ್ಲಿನ ಜನರು ಬಹಳ ಹಿಂದಿನ ಕಾಲದಿಂದ ತಮ್ಮ ತಮ್ಮ ಔಷಧೀಯ ಪದ್ಧತಿಗಳಲ್ಲಿ ತೊಂಡೆಕಾಯಿಯ ಬಳ್ಳಿ, ಎಲೆ, ಬೇರು ಮತ್ತು ಕಾಯಿಗಳನ್ನು ಗಿಡಮೂಲಿಕೆಯ ರೀತಿ ಸಾಕಷ್ಟು ಆರೋಗ್ಯ ಸಮಸ್ಯೆಗಳಿಗೆ ಪರಿಹಾರವಾಗಿ ಬಳಸುತ್ತಾ ಬಂದಿದ್ದಾರೆ. ತೊಂಡೆಕಾಯಿಯ ಎಲೆಗಳು ಹೃದಯದ ಆಕಾರದಲ್ಲಿ ಮಧ್ಯಮ ಗಾತ್ರದಲ್ಲಿದ್ದು, ತೊಂಡೆಕಾಯಿಗಳು ಸುಮಾರು 4 ಇಂಚುಗಳಿಗಿಂತ ಕಡಿಮೆ ಬೆಳೆಯುತ್ತವೆ. ಆದರೆ ಇವುಗಳ ಅಪಾರವಾದ ನೈಸರ್ಗಿಕ ಲಾಭಗಳಿಂದ ಜನರು ಮಾರುಹೋಗಿದ್ದಾರೆ. ತೊಂಡೆಕಾಯಿ ತಿನ್ನುವುದರಿಂದ ಆರೋಗ್ಯಕ್ಕೆ ಏನು ಲಾಭ? ಸೇವಿಸಿದ…

Read More