Author: AIN Author

ಆರ್​ಸಿಬಿ ತಂಡದಲ್ಲಿದ್ದ ಪ್ರಮುಖ ವೇಗಿ ರೀಸ್ ಟೋಪ್ಲಿ ಈ ಬಾರಿಯ ಐಪಿಎಲ್​ನಿಂದ ಹೊರಗುಳಿಯುವುದು ಬಹುತೇಕ ಖಚಿತವಾಗಿದ್ದು, ಹೀಗಾಗಿ RCB ತಂಡದಲ್ಲಿ ಮಹತ್ವದ ಬದಲಾವಣೆ ಆಗಲಿದೆ. ಗಾಯದ ಸಮಸ್ಯೆಯ ಕಾರಣ ರೀಸ್ ಟೋಪ್ಲಿಗೆ ಫ್ರಾಂಚೈಸಿ ಲೀಗ್ ಕ್ರಿಕೆಟ್ ಆಡದಂತೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಸೂಚಿಸಿದೆ. ಹೀಗಾಗಿಯೇ ಅವರು ಪಾಕಿಸ್ತಾನ್ ಸೂಪರ್ ಲೀಗ್​ನಿಂದ ಹೊರಗುಳಿದ್ದಾರೆ. ಇದರ ಬೆನ್ನಲ್ಲೇ ಟೋಪ್ಲಿಗೆ ಐಪಿಎಲ್ ಆಡಲು ನಿರಾಕ್ಷೇಪಣಾ ಪ್ರಮಾಣಪತ್ರ ದೊರೆಯುವುದು ಅನುಮಾನ ಎನ್ನಲಾಗಿತ್ತು. ಇದೀಗ ಟೋಪ್ಲಿ ಬದಲಿಗೆ ಆರ್​ಸಿಬಿ ಮತ್ತೋರ್ವ ಆಟಗಾರನಿಗೆ ಮಣೆಹಾಕಿದೆ ಎಂದು ತಿಳಿದು ಬಂದಿದೆ. ಪ್ರಸ್ತುತ ಮಾಹಿತಿ ಪ್ರಕಾರ, ರೀಸ್ ಟೋಪ್ಲಿ ಬದಲಿ ಆಟಗಾರನಾಗಿ ಕ್ರಿಸ್ ಜೋರ್ಡನ್ ಅವರನ್ನು ​ಆರ್​ಸಿಬಿ ಫ್ರಾಂಚೈಸಿ ಆಯ್ಕೆ ಮಾಡಿಕೊಂಡಿದೆ. ಅದರಂತೆ ಐಪಿಎಲ್ ಸೀಸನ್-17 ರಲ್ಲಿ ಆರ್​ಸಿಬಿ ಪರ ಇಂಗ್ಲೆಂಡ್ ಆಟಗಾರ ಜೋರ್ಡನ್ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಕ್ರಿಸ್ ಜೋರ್ಡನ್ 1.50 ಕೋಟಿ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದರು. ಇದಾಗ್ಯೂ ಅವರ ಖರೀದಿಗೆ ಯಾವುದೇ ಫ್ರಾಂಚೈಸಿ…

Read More

ಬೆಂಗಳೂರು: ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಅವರು ಕಾಂಗ್ರೆಸ್ ಅಭ್ಯರ್ಥಿ ಪರ ಬಹಿರಂಗ ಪ್ರಚಾರ ಮಾಡಿದ್ದು, ಇದರಿಂದ ಬಿಜೆಪಿ ಮುಜುಕ್ಕರಕ್ಕೊಳಗಾಗಿದೆ ಯಶವಂತಪುರ ವಿಧಾನಸಭಾ ಕ್ಷೇತ್ರದ ಶಿಕ್ಷಕರ (Teacher) ಜೊತೆ ಸೋಮವಾರ ಸೋಮಶೇಖರ್ ಸಭೆ ನಡೆಸಿದ್ದರು. ಈ ವೇಳೆ ಪುಟ್ಟಣ್ಣಗೆ ಮತ ನೀಡುವಂತೆ ಪ್ರಚಾರ ಮಾಡಿದ್ದಾರೆ. ಸೋಮವಾರದಿಂದ ವಿಧಾನಸಭಾ ಅಧಿವೇಶನ ಆರಂಭವಾಗಿದ್ದು ಶಾಸಕಾಂಗ ಪಕ್ಷದ ಸಭೆಗೆ ಗೈರಾಗಿ ಪುಟ್ಟಣ್ಣ ಪರ ಪತಯಾಚನೆ ಮಾಡಿದ್ದಕ್ಕೆ ಬಿಜೆಪಿ ನಾಯಕರು ಗರಂ ಆಗಿದ್ದಾರೆ ಸೋಮಶೇಖರ್‌ ಅವರು ಬಿಜೆಪಿಗೆ ಮುಜುಗರ ಮಾಡುತ್ತಿರುವುದು ಇದು ಹೊಸದೆನಲ್ಲ. ಈ ಹಿಂದೆ ಗೃಹಲಕ್ಷ್ಮಿ ಯೋಜನೆ ಜಾರಿ ಸಂಬಂಧ ಕ್ಷೇತ್ರದ ಬೆಂಬಲಿಗರು, ಆಪ್ತರು ಹಾಗೂ ಕಾರ್ಯಕರ್ತರ ಸಭೆಯನ್ನು ಸೋಮಶೇಖರ್‌ ಕರೆದಿದ್ದರು. ಈ ಹಿಂದೆ ಡಿಸಿಎಂ ಡಿಕೆ ಶಿವಕುಮಾರ್‌ ಅವರನ್ನು ಗುಣಗಾನವನ್ನು ಮಾಡಿದ್ದ ಎಸ್.ಟಿ.ಸೋಮಶೇಖರ್ ಪುಟ್ಟಣ್ಣ ಪರ ಪ್ರಚಾರ ಮಾಡುವ ಮೂಲಕ ಕಾಂಗ್ರೆಸ್ ಸೇರುವ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಮುಂದೆ ಇರಿಸಿದ್ರಾ ಎಂಬ ಪ್ರಶ್ನೆ ಎದ್ದಿದೆ

Read More

ಮಂಡ್ಯ:- ಲೋಕಸಭಾ ಚುನಾವಣೆಗೋ ಕೇವಲ ತಿಂಗಳು ಬಾಕಿ ಇದ್ದು, ತೀವ್ರ ಕುತೂಹಲ ಕೆರಳಿಸಿದ್ದ ಮಂಡ್ಯ ಕಣದಿಂದ ನಿಖಿಲ್ ಹಿಂದೆ ಸರಿದಿದ್ದಾರೆ. ಹಾಗಿದ್ರೆ ಮಂಡ್ಯ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಯಾರು? ಎಂಬ ಪ್ರಶ್ನೆ ಎದ್ದಿದೆ. ಅಭ್ಯರ್ಥಿ ಆಯ್ಕೆ ಮತ್ತೆ ದಳಪತಿಗಳಿಗೆ ಗೊಂದಲವಾಗಿದೆ. ಮಂಡ್ಯ ಲೋಕಸಭಾ ಅಖಾಡದಿಂದ ನಿಖಿಲ್ ಹಿಂದೆ ಸರಿದ ಹಿನ್ನಲೆ ಇದೀಗ ಹೆಚ್​ಡಿ ಕುಮಾರಸ್ವಾಮಿ ಅವರ ಬಳಿಗೆ ನಾಯಕರು ಹೋಗಲಿದ್ದಾರೆ. ಕುಮಾರಸ್ವಾಮಿ ಅವರೇ ಅಭ್ಯರ್ಥಿ ಆಗಬೇಕೆಂದು ದಳಪತಿಗಳು ಒತ್ತಡ ಹಾಕಲಿದ್ದಾರೆ. ನೀವು ಬನ್ನಿ ಇಲ್ಲ ನಿಖಿಲ್ ಮನವೊಲಿಸಿ ಎಂದು ಕುಮಾರಸ್ವಾಮಿಗೆ ಮನವಿ ಮಾಡಲಿದ್ದಾರೆ. ಮಂಡ್ಯದಿಂದ ಮಾಜಿ ಸಚಿವರಾದ ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಮಾಜಿ ಶಾಸಕ ಸುರೇಶ್‌ಗೌಡ ಟಿಕೆಟ್ ಆಕಾಂಕ್ಷಿತರು. ಮೂವರಲ್ಲಿ ಒಬ್ಬರು ಸ್ಪರ್ಧೆ ಮಾಡಿ ನಾವು ಇರ್ತೀವಿ ಎಂದು ಕುಮಾರಸ್ವಾಮಿ ಅವರು ಹೇಳುವ ಸಾಧ್ಯತೆ ಇದೆ. ಇಲ್ಲ ನಿಖಿಲ್ ಮನವೊಲಿಸಲು ಪ್ರಯತ್ನ ಮಾಡುವ ಸಾಧ್ಯತೆ ಇದೆ. ಅಥವಾ ತಾವೇ ಮಂಡ್ಯ ಅಖಾಡಕ್ಕೆ ಪ್ರವೇಶ ಮಾಡ್ತಾರಾ ಎಂಬುವುದನ್ನು ಕಾದು ನೋಡಬೇಕಿದೆ. ಲೋಕಸಭೆಗೆ ಸ್ಪರ್ಧಿಸದಿರಲು ನಿಖಿಲ್…

Read More

ಬೆಂಗಳೂರು:- ಸ್ಪೀಕರ್ ಯು.ಟಿ ಖಾದರ್ ಅವರ ಪ್ರಯಾಣಕ್ಕೆ ಇದೀಗ ಐಶಾರಾಮಿ ಕಾರು ಬಂದಿದೆ. ಹೌದು, ಸ್ಪೀಕರ್ ಯು.ಟಿ ಖಾದರ್ ಅವರ ಪ್ರಯಾಣಕ್ಕೆ ಸಚಿವಾಲಯದಿಂದ ವಿಶೇಷ ಕಾರಿನ‌ ಸೌಲಭ್ಯವನ್ನು ಕಲ್ಪಿಸಲಾಗಿದೆ. ಈ ಐಶಾರಾಮಿ ಫಾರ್ಚೂನರ್ ಕಾರು ಹಲವು ವಿಶೇಷತೆಗಳನ್ನು ಕೂಡಾ ಹೊಂದಿದೆ. ಕಪ್ಪು ಬಣ್ಣದ ಫಾರ್ಚೂನರ್( ಇ ) ಕಾರಿನ ದರ 33.43 ಲಕ್ಷ ( ಪೆಟ್ರೋಲ್) ಹಾಗೂ ಡೀಸಿಲ್ ಕಾರಿನ ದರ 35.93 ರಿಂದ 51.44 ಲಕ್ಷ ಆಗುತ್ತದೆ. ಆದರೆ ಈ ಫಾರ್ಚೂನರ್ ಗೆ ವಿಶೇಷ ವಿನ್ಯಾಸ ಮಾಡಿರುವುದರಿಂದ ಒಟ್ಟು 41 ಲಕ್ಷ ವೆಚ್ಚದ್ದು ಎನ್ನಲಾಗಿದೆ. ಸಚಿವಾಲಯದಿಂದ ನೀಡಲಾದ ವಿಶೇಷ ಐಶಾರಾಮಿ ಕಾರು, 360 ಡಿಗ್ರಿ ಕ್ಯಾಮೆರಾ ಹಾಗೂ ಪ್ರಯಾಣದ ಸಂದರ್ಭದಲ್ಲಿ ಸ್ಪೀಕರ್‌ ಖಾದರ್ ಮುಖಕ್ಕೆ ಬೆಳಕು‌‌ ನೀಡುವ ವಿಶೇಷ ಎಲ್ ಇ ಡಿ ಲೈಟ್ ಸೌಲಭ್ಯ ಹೊಂದಿದೆ. ಕಾರಿನ ಮುಂಭಾಗ ಹಾಗೂ ಹಿಂಭಾಗದಲ್ಲಿ ಗಂಡಭೇರುಂಡ ಲಾಂಛನ ಹೊಂದಿದೆ. ರಾಜ್ಯಪಾಲರಿಗೆ ಹೊರತಾಗಿ ಸ್ಪೀಕರ್ ಗೆ ಮಾತ್ರ ಇದನ್ನು ಹಾಕಲು ಅವಕಾಶ ಇದೆ.

Read More

ಶಿವಮೊಗ್ಗ:- ಇಲ್ಲಿನ ತೀರ್ಥಹಳ್ಳಿಯಲ್ಲಿ ಒಂದೇ ದಿನ 6 ಜನರಿಗೆ ಮಂಗನ ಕಾಯಿಲೆ ಬಂದಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ. 6 ಮಂದಿಯನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ರೋಗಿಗಳ ಸಂಪರ್ಕಕ್ಕೆ ಬಂದ 42 ಜನರ ರಕ್ತ ತಪಾಸಣೆ ಮಾಡಲಾಗಿದೆ. ತಾಲೂಕು ಆಸ್ಪತ್ರೆಗೆ ಜಿಲ್ಲಾ ವೈದ್ಯಾಧಿಕಾರಿ ರಾಜೇಶ್ ಸುರಗಿಹಳ್ಳಿ ಭೇಟಿ ನೀಡಿ, ಪಾಸಿಟಿಟ್ ಬಂದ ಆರು ರೋಗಿಗಳ ಆರೋಗ್ಯ ವಿಚಾರಿಸಿದರು. “ಆತಂಕ ಪಡುವ ಅಗತ್ಯವಿಲ್ಲ. ಸೂಕ್ತ ಚಿಕಿತ್ಸೆಯ ವ್ಯವಸ್ಥೆ ಆಸ್ಪತ್ರೆಯಲ್ಲಿ ಮಾಡಲಾಗಿದೆ. ಧೈರ್ಯದಿಂದ ಇರಿ” ಎಂದು ರೋಗಿಗಳಿಗೆ ಧೈರ್ಯ ತುಂಬಿದರು. ಶಿವಮೊಗ್ಗ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 32 ಮಂಗನ ಕಾಯಿಲೆ ಪ್ರಕರಣಗಳು ವರದಿಯಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಅಂದರೆ ಫೆ.08ರ ವರೆಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಂಬತ್ತು ಜನರು ಮಂಗನ ಕಾಯಿಲೆಯಿಂದ ಬಳಲುತ್ತಿದ್ದರು. ಜಿಲ್ಲೆಯಲ್ಲಿ ಪತ್ತೆಯಾದ ಒಟ್ಟು ಒಂಬತ್ತು ಮಂಗನ ಕಾಯಿಲೆ ಪ್ರಕರಣಗಳ ಪೈಕಿ ಓರ್ವ ಸೋಂಕಿತ ಮೃತಪಟ್ಟಿದ್ದರು. ಇನ್ನು ಇಲ್ಲಿ ಪತ್ತೆಯಾದ ಮಂಗನ ಕಾಯಿಲೆ ಪ್ರಕರಣಗಳಲ್ಲಿ ಅತಿ ಹೆಚ್ಚು ಪ್ರಕರಣಗಳು ಒಎಲ್‌ವಿ…

Read More

ಗದಗ:- ಜಿಲ್ಲೆ ರೋಣ ತಾಲೂಕಿನ ಹಿರೇಹಾಳ ಗ್ರಾಮದಲ್ಲಿ ಮರಳು ದಂಧೆಗೆ ಕಾಂಗ್ರೆಸ್​​ ಮುಖಂಡ ಡಾ. ಶಶಿಧರ್ ಹಟ್ಟಿ ಬಲಿಯಾದ ಘಟನೆ ಜರುಗಿದೆ. ಶಶಿಧರ್ ಡೆತ್​ನೋಟ್ ಬರೆದಿಟ್ಟು ಸೋಮವಾರ ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರು ಲುಂಗಿಯಿಂದ ನೇಣು ಬಿಗಿದುಕೊಂಡು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದಕ್ಕೂ ಮುನ್ನ ಮರಳು ದಂಧೆಕೋರ, ಕಾಂಗ್ರೆಸ್ ಮುಖಂಡ ಶರಣಗೌಡ ಪಾಟೀಲ್ ಹೆಸರನ್ನು ಡೆತ್​ನೋಟ್​ನಲ್ಲಿ ಉಲ್ಲೇಖಿಸಿದ್ದಾರೆ. ಎಲ್ಲಾ ಲೆಕ್ಕ ಕೊಟ್ಟರೂ ಶರಣಗೌಡ ಪದೇಪದೇ ಕಿರುಕುಳ ನೀಡುತ್ತಿದ್ದಾರೆ. ಹೀಗಾಗಿ ಮನನೋಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಉಸ್ತುವಾರಿ ಸಚಿವ ಹೆಚ್​​ಕೆ ಪಾಟೀಲರಿಗೆ ಹೇಳಿ ಶರಣಗೌಡಗೆ ಕಠಿಣ ಶಿಕ್ಷೆ ಕೊಡಿಸಿ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ರೋಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಸ್ಥಳಕ್ಕೆ ರೋಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಂಗ್ರೆಸ್ ಮುಖಂಡ ಶರಣಗೌಡ ಪಾಟೀಲ್:-

Read More

ಬೆಂಗಳೂರು:- ನಿಯಮ ಮೀರಿ ವಾಹನ ಚಲಾಯಿಸಿ ಅಪಘಾತ ಮಾಡಿದ ಆರು ಅಪ್ರಾಪ್ತ ವಯಸ್ಕರ ಪೋಷಕರಿಗೆ ತಲಾ 25 ಸಾವಿರ ರೂ. ದಂಡ ವಿಧಿಸಲಾಗಿದೆ. ಈ ಎಲ್ಲ ಅಪಘಾತಗಳು 2022-23 ರಲ್ಲಿ ಬೆಂಗಳೂರಿನ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಯಾವುದೂ ಮಾರಣಾಂತಿಕವಾಗಿಲ್ಲ. ಈ ಆರು ಅಪ್ರಾಪ್ತ ವಯಸ್ಕರ ಪೋಷಕರು ನ್ಯಾಯಾಲಯದ ಮುಂದೆ ಹಾಜರಾಗಿದ್ದು, ಅಪ್ರಾಪ್ತರಿಗೆ ತಮ್ಮ ವಾಹನಗಳನ್ನು ಚಲಾಯಿಸಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಕೋರ್ಟ್​ ತಲಾ 25,000 ರೂ. ದಂಡವನ್ನು ವಿಧಿಸಿದೆ. ಪೋಷಕರು ಈಗ ಒಟ್ಟು 1.5 ಲಕ್ಷ ರೂ. ದಂಡವನ್ನು ಪಾವತಿಸಿದ್ದಾರೆ. ಅಪ್ರಾಪ್ತ ವಯಸ್ಕರಿಗೆ ವಾಹನ ಚಲಾಯಿಸಲು ಅವಕಾಶ ನೀಡಿದರೆ ವಾಹನ ಮಾಲೀಕರಿಗೆ ದಂಡ ವಿಧಿಸಲಾಗುತ್ತದೆ. ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳ ಸುತ್ತಮುತ್ತ ಇಂತಹ ಅನೇಕ ಪ್ರಕರಣಗಳನ್ನು ನೋಡಿದ್ದೇವೆ. ನಿಯಮ ಉಲ್ಲಂಘಿಸಿದ್ದಕ್ಕಾಗಿ ವಾಹನ ಮಾಲೀಕರ ವಿರುದ್ಧ ಕೇಸ್​ ಬುಕ್ ಮಾಡಿದ್ದೇವೆ. ಅಪ್ರಾಪ್ತ ಮಕ್ಕಳಿಗೆ ವಾಹನಗಳನ್ನು ಓಡಿಸಲು ನೀಡಬೇಡಿ” ಎಂದು ಸಂಚಾರಿ ಪೊಲೀಸ್ ಅಧಿಕಾರಿಯೊಬ್ಬರು ವಾಹನ ಮಾಲೀಕರಿಗೆ ಮನವಿ ಮಾಡಿದರು.

Read More

ಮುಂಬೈ:- ಅಯೋಧ್ಯೆಗೆ ತೆರಳುತ್ತಿದ್ದ ಆಸ್ತಾ ವಿಶೇಷ ರೈಲಿಗೆ ಮಹಾರಾಷ್ಟ್ರದ ನಂದೂರ್‌ಬಾರ್ ಬಳಿ ಕಲ್ಲು ತೂರಾಟ ನಡೆದಿದೆ. ಭಾನುವಾರ ತಡರಾತ್ರಿ ಈ ಘಟನೆ ಜರುಗಿದೆ ವಿಶೇಷ ರೈಲಿಗೆ ಭಾನುವಾರ ರಾತ್ರಿ 8 ಗಂಟೆಗೆ ಚಾಲನೆ ನೀಡಲಾಗಿತ್ತು. ಒಟ್ಟು 1,340 ಪ್ರಯಾಣಿಕರಿದ್ದರು ರೈಲಿನಲ್ಲಿದ್ದರು. ರಾತ್ರಿ 10:45 ಕ್ಕೆ ನಂದೂರ್ಬಾರ್ ಬಳಿ ರೈಲಿಗೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದು, ಪ್ರಯಾಣಿಕರ ಆತಂಕಕ್ಕೆ ಕಾರಣವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ ದಾಳಿಯ ಸಮಯದಲ್ಲಿ ಕೆಲವು ಪ್ರಯಾಣಿಕರು ತಕ್ಷಣ ಎಚ್ಚೆತ್ತು ಕಿಟಕಿಯ ಗಾಜನ್ನು ಮುಚ್ಚಿದ್ದಾರೆ. ಆದರೂ ಕೆಲವು ಕಲ್ಲುಗಳು ಕೋಚ್‌ನೊಳಗೆ ನುಗ್ಗಿವೆ ಎಂದು ನಂದೂರ್‌ಬಾರ್‌ನ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿವೈಎಸ್‌ಪಿ) ಸಂಜಯ್ ಮಹಾಜನ್ ತಿಳಿಸಿದ್ದಾರೆ. ನಂದೂರ್ಬಾರ್ ರೈಲ್ವೆ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಮಹಾಜನ್ ಹೇಳಿದ್ದಾರೆ. ಪ್ರಾಥಮಿಕ ತನಿಖೆಯ ನಂತರ ಪೊಲೀಸರು ತಡರಾತ್ರಿ ನಂದೂರ್ಬಾರ್ ರೈಲು ನಿಲ್ದಾಣದಿಂದ ರೈಲನ್ನು ಕಳುಹಿಸಿದ್ದಾರೆ ಎಂದು ಡಿವೈಎಸ್ಪಿ ತಿಳಿಸಿದ್ದಾರೆ.

Read More

ಬೆಂಗಳೂರು: ಈ ತಿಂಗಳ ಅಂದರೆ ಫೆಬ್ರವರಿ ಕೊನೆಯಲ್ಲಿ ರಾಜ್ಯದ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟವಾಗುವ ಸಾಧ್ಯತೆಯಿದ್ದು, MP ಟಿಕೆಟ್ ಯಾರಿಗೆ ಸಿಗಲಿದೆ ಎಂಬ ಕುತೂಹಲ ಮೂಡಿದೆ. 14- 16 ಕ್ಷೇತ್ರಗಳ ಮೊದಲ ಪಟ್ಟಿ ಬಿಡುಗಡೆಯಾಗಲಿದ್ದು, ಈ ಪಟ್ಟಿಯಲ್ಲಿ ಬಹುತೇಕ ಹಾಲಿಗಳಿಗೆ ಟಿಕೆಟ್‌ ಸಿಗಲಿದೆ. ಬಿಜೆಪಿ ಲೋಕಸಭೆ ತಯಾರಿ ಮಧ್ಯೆ ಮೊದಲ ಪಟ್ಟಿ ಪ್ರಕಟಿಸುವ ಬಗ್ಗೆ ಗೃಹ ಸಚಿವ ಅಮಿತ್‌ ಶಾ ಸುಳಿವು ನೀಡಿದ್ದಾರೆ. ಗೆಲುವು ಸ್ಪಷ್ಟ ಇರುವ ಕ್ಷೇತ್ರಗಳ ಅಮಿತ್ ಶಾ ವರದಿ ಪಡೆದಿದ್ದು ಮೊದಲ ಪಟ್ಟಿಯಲ್ಲಿ ಬಹುತೇಕ ಗೆಲ್ಲುವ ಹಾಲಿ ಸಂಸದರಿಗೆ ಟಿಕೆಟ್ ಸಿಗಲಿದೆ. ಹೊಸ ಮುಖ, ಅಚ್ಚರಿ ಅಭ್ಯರ್ಥಿ ಹೆಸರು ಎರಡು ಮತ್ತು ಮೂರನೇ ಪಟ್ಟಿಯಲ್ಲಿ ಪ್ರಕಟವಾಗಲಿದೆ. ಕರ್ನಾಟಕ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಕೊನೆ ಗಳಿಗೆಯಲ್ಲಿ ಕೆಲ ಕ್ಷೇತ್ರಗಳಿಗೆ ಟಿಕೆಟ್‌ ಪ್ರಕಟಿಸಿದ್ದರಿಂದ ಬಿಜೆಪಿಗೆ ಹಿನ್ನಡೆಯಾಗಿತ್ತು. ಸೋಲಿನ ಬಳಿಕ ನಡೆದ ಆತ್ಮಾವಲೋಕನ ಸಭೆಯಲ್ಲೂ ಈ ವಿಷಯ ಚರ್ಚೆಯಾಗಿತ್ತು. ಈ ಕಾರಣಕ್ಕೆ ಈ ಬಾರಿ ಬಹಳ ಬೇಗ ಎಲ್ಲಾ ಕ್ಷೇತ್ರಗಳಲ್ಲಿ…

Read More

ಬೆಂಗಳೂರು:- ಆಸ್ತಿ ತೆರಿಗೆ ಪಾವತಿಸದವರಿಗೆ ಬಿಬಿಎಂಪಿ ಶಾಕ್ ನೀಡಿದ್ದು, ಕಾರು, ಶಾಲಾ ಬಸ್ ಜಪ್ತಿ ಮಾಡಿದೆ. ತೆರಿಗೆ ಬಾಕಿ ಇರಿಸಿಕೊಂಡಿರುವವರಿಂದ ಸಂಗ್ರಹಿಸುವ ಉದ್ದೇಶದೊಂದಿಗೆ ಎಸ್​​ಒಪಿ (ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನ) ಜಾರಿಗೊಳಿಸಿದ ಮೂರು ತಿಂಗಳ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಬಿಬಿಎಂಪಿಯ ಯಲಹಂಕ ವಿಭಾಗದಲ್ಲಿ ನಾಲ್ಕು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಾಹನಗಳನ್ನು ಜಪ್ತಿ ಮಾಡಿದ ಕೆಲವೇ ಗಂಟೆಗಳ ನಂತರ, ಆಸ್ತಿ ಮಾಲೀಕರು ಬಾಕಿಯ ಶೇ 50 ರಷ್ಟನ್ನು ಪಾವತಿಸಲು ಮತ್ತು ನಮ್ಮ ನೋಟಿಸ್ ವಿರುದ್ಧ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ ಎಂದು ಹಿರಿಯ ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಳೆದ ಆರು ತಿಂಗಳಲ್ಲಿ ಬಿಬಿಎಂಪಿ 10,603 ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳನ್ನು ಸೀಲ್ ಮಾಡಿದೆ. ಆದರೆ, ವಶಪಡಿಸಿಕೊಂಡ ವಾಹನಗಳನ್ನು ಇಡಲು ಸೂಕ್ತ ಸ್ಥಳಾವಕಾಶ ಇಲ್ಲದ ಕಾರಣ ಚರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿಲ್ಲ. ಬಿಬಿಎಂಪಿ ಕಾಯ್ದೆಯಡಿ, ಸ್ಥಿರ ಮತ್ತು ಚರಾಸ್ತಿಗಳನ್ನು ವಶಪಡಿಸಿಕೊಳ್ಳಲು ಅವಕಾಶವಿದೆ. ನಾವು ಜನರಿಗೆ ತೊಂದರೆ ನೀಡಲು ಬಯಸುವುದಿಲ್ಲ. ಆದ್ದರಿಂದ ತೆರಿಗೆಯನ್ನು ವಂಚಿಸಿದವರ ಮನೆಗೆ…

Read More