Author: AIN Author

ಬೆಂಗಳೂರು : ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ನಾಯಕ- ವಿಶ್ವಗುರು ಬಸವಣ್ಣನವರ ಭಾವಚಿತ್ರ ಹಾಗೂ ವಚನ‌ ವಿವೇಕ ಕಿರುಹೊತ್ತಿಗೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆಗೊಳಿಸಿದರು. ಇದೇ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಫೆ.17 ರಂದು ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಯಲ್ಲಿ ಬಸವಣ್ಣರ ನೂತನ ಭಾವಚಿತ್ರ ಅನಾವರಣಗೊಳಿಸಲಾಗುತ್ತದೆ.‌ ಪ್ರತಿ ಭಾವಚಿತ್ರದ‌‌ ಕೆಳಗಡೆ ಸಾಂಸ್ಕೃತಿಕ ನಾಯಕ ಬಸವಣ್ಣ ಅಂತ ಬರೆಯುತ್ತೇವೆ. ಬುದ್ಧ, ಬಸವಣ್ಣ, ಗಾಂಧಿ ಹಾಗೂ ಅಂಬೇಡ್ಕರ್ ಬಗ್ಗೆ ಇಡೀ ವಿಶ್ವವೇ ಮಾತನಾಡುತ್ತದೆ. ಇವರು ನಮ್ಮ ಸಮಾಜದಲ್ಲಿ ಇರುವ ಅಂಕುಡೊಂಕು ತಿದ್ದಿ, ಆರೋಗ್ಯಕರ ಸಮಾಜ ನಿರ್ಮಾಣ ಮಾಡಿದ್ದಾರೆ ಎಂದರು. ಸುಕನ್ಯಾ ಸಮೃದ್ಧಿ ಯೋಜನೆ ಹೊಂದಿದ್ದೀರಾ: ಹಾಗಿದ್ರೆ ಈ ಕೆಲಸ ಮಾಡಲೇಬೇಕು, ಇಲ್ಲದಿದ್ರೆ ಖಾತೆ ನಿಷ್ಕ್ರೀಯ ಮೌಢ್ಯಗಳನ್ನು ಸಮಾಜದಲ್ಲಿ ನೋಡಿದ್ದೇವೆ. ಸಮಾಜದ ಬದಲಾವಣೆಗಾಗಿ ಅಸಮಾನತೆ ಹೋಗಬೇಕು. ಪ್ರತಿಯೊಬ್ಬರೂ ಸ್ವಾಭಿಮಾನದಿಂದ ಬದುಕುವ ವ್ಯವಸ್ಥೆ ನಿರ್ಮಾಣ ಆಗಬೇಕು ಎಂದು ಬಸವಣ್ಣ ಕನಸು ಕಂಡಿದ್ದರು. ಅದರಂತೆಯೇ ಬಸವಣ್ಣ ನಡೆದುಕೊಂಡಿದ್ದರು. ಇದು ಜನಪರವಾದ ಸಮಾಜ. ಆಡು ಮಾತಿನಲ್ಲೇ ಬಸವಣ್ಣ ವಚನ ರೂಪಿಸಿದ್ದವರು. ಜನರಿಗೆ…

Read More

ಬೆಂಗಳೂರು : ಪ್ರತೀ ವರ್ಷ ಸಾಲಮನ್ನಾ ಮಾಡೋದು ಸರಿಯಲ್ಲ, ಸಾಧ್ಯವೇ ಇಲ್ಲ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿದರು. ಸುಕನ್ಯಾ ಸಮೃದ್ಧಿ ಯೋಜನೆ ಹೊಂದಿದ್ದೀರಾ: ಹಾಗಿದ್ರೆ ಈ ಕೆಲಸ ಮಾಡಲೇಬೇಕು, ಇಲ್ಲದಿದ್ರೆ ಖಾತೆ ನಿಷ್ಕ್ರೀಯ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, 540 ಕೋಟಿ ಸುಸ್ತಿ ಇದೆ. ಅಸಲಿ ಪಾವತಿ ಮಾಡಿದ್ರೆ ಬಡ್ಡಿ ಸಮೇತ ಮನ್ನಾ ಅಂತ ಹೇಳಿದ್ದಾರೆ. ಒಬ್ಬರಿಗೇ ಮನ್ನಾ ಮಾಡ್ಕೊಂಡು ಇರೋಕೆ ಆಗುತ್ತಾ? ಬೇರೆ ರೈತರು ಏನು ಪಾಪ ಮಾಡಿದ್ದಾರೆ ಎಂದು ತಿಳಿಸಿದರು. ವಸೂಲಿ ಮಾಡಿಕೊಡೋರಿಗೆಲ್ಲಾ ಕ್ಯಾಬಿನೆಟ್ ದರ್ಜೆ ನೀಡಿದ್ದಾರೆ ಎಂಬ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಆರೋಪಕ್ಕೆ ತಿರುಗೇಟು ನೀಡಿದರು. ಮೊದಲೆಲ್ಲಾ ಜಾತ್ಯಾತೀತ ಅಂತ ಹೇಳ್ತಾ ಇದ್ದರು. ದೇವೇಗೌಡ್ರು ಏನು ಹೇಳಿದ್ರು? ಮೋದಿ ಪಿಎಂ ಅದ್ರೆ ದೇಶವನ್ನೇ ಬಿಟ್ಟು ಹೋಗ್ತೀನಿ ಅಂದಿದ್ರು. ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ತೀನಿ ಅಂದ್ರು. ಅವರು ಕಾಂಗ್ರೆಸ್, ಬಿಜೆಪಿ ಜೊತೆ ಸರ್ಕಾರ ಮಾಡಿದ್ರು, ಅವ್ರ ಅನುಭವದ ಮೇಲೆ ಹೇಳ್ತಾ ಇದ್ದಾರೆ ಎಂದು…

Read More

ಮಂಡ್ಯ: ಕುಮಾರಣ್ಣ ರಾಜ್ಯಕ್ಕೆ ಬೇಕು ಅಂತಾ ನಮ್ಮ ಶಾಸಕರು ಮತ್ತು ಮುಖಂಡರ ಕೂಗಾಗಿದೆ ಎಂದು ಜೆಡಿಎಸ್ ಯುವನಾಯಕ ನಿಖಿಲ್ ಕುಮಾರಸ್ವಾಮಿ  ತಿಳಿಸಿದ್ದಾರೆ. ಪಾಂಡವಪುರದಲ್ಲಿ ಸುದ್ದುಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದರ ಬಗ್ಗೆ ಮಾತನಾಡಿದ್ದಾರೆ. ಕುಮಾರಣ್ಣ ಅವರಿಗೆ ಹಲವು ಲೋಕಸಭಾ ಕ್ಷೇತ್ರದಲ್ಲಿ ಒತ್ತಾಯ ಇದೆ. ಎಲ್ಲಿ ಅಂತಾ ಅವರು ಸ್ಪರ್ಧೆ ಮಾಡ್ತಾರೆ. ಕುಮಾರಣ್ಣ ನಮ್ಮ ರಾಜ್ಯಕ್ಕೆ ಬೇಕು. ಅವರು ಲೋಕಸಭಾ ಸ್ಪರ್ಧೆ ಮಾಡೋದು ಬಿಡೋದು ಮುಂದೆ ಗೊತ್ತಾಗುತ್ತೆ. ಅವರ ಸ್ಪರ್ಧೆ ಬಗ್ಗೆ ನನಗೆ ಗೊತ್ತಿಲ್ಲ. ಅದು ಪಕ್ಷದ ವರಿಷ್ಠರ ತೀರ್ಮಾನ. ಅವರು ನಮ್ಮ ರಾಜ್ಯಕ್ಕೆ ಬೇಕು ಅಂತಾ ಶಾಸಕರು ಮುಖಂಡರ ಕೂಗಾಗಿದೆ ಎಂದು ಸುಳಿವು ನೀಡಿದ್ದಾರೆ.  https://ainlivenews.com/are-you-suffering-from-blood-pressure-the-benefits-of-eating-papaya-fruit/ ಕೆಲವರು ಕುಮಾರಣ್ಣ ಕೇಂದ್ರಕ್ಕೆ ಹೋಗಲಿ ಅಂತಾರೆ. ಕೆಲವರು ರಾಜ್ಯದಲ್ಲಿ ಉಳಿದುಕೊಳ್ಳಲಿ ಅಂತಾರೆ. ಅಂತಿಮವಾಗಿ ಏನ್ ಆಗುತ್ತೆ ಎನ್ನೋದು ಕಾದು ನೋಡೋಣ. ನನ್ನ ಸ್ಪರ್ಧೆಗೆ ತೆರೆ ಬಿದ್ದಿದೆ. ಏನೇ ಕೇಳಿದ್ರು ಇದೇ ಉತ್ತರ. 2019ರ ಸೋಲಿನ ಬಗ್ಗೆ ಚಿಂತಿಸಿ ಫಲ ಏನು ಇಲ್ಲ. ಮುಂದೆ…

Read More

ಬೆಂಗಳೂರು: ರಾಜ್ಯಸಭೆ,ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದು, ಟಿಕೆಟ್​ಗಾಗಿ ಕಾಂಗ್ರೆಸ್​ನಲ್ಲಿ ಲಾಭಿಗಳು ಆರಂಭಗೊಂಡಿವೆ. ಈ ನಡುವೆ, ಮುಂಬರುವ ಎರಡು ಚುನಾವಣೆಗಳಲ್ಲಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಆದ್ಯತೆ ನೀಡುವಂತೆ ಒತ್ತಡ ಬಂದಿದೆ. ಈ ಸಂಬಂಧ ಅಖಿಲ ಭಾರತ ಲಿಂಗಾಯತ ಮಹಾಸಭಾದ ಅಧ್ಯಕ್ಷರೂ ಆಗಿರುವ ಕಾಂಗ್ರೆಸ್​ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದಿದ್ದಾರೆ. ರಾಜ್ಯಸಭೆಯಲ್ಲಿ ಮೂರು ಸ್ಥಾನಗಳು ಕಾಂಗ್ರೆಸ್​ಗೆ ದೊರೆಯಲಿವೆ. ಈ ಮೂರು ಸ್ಥಾನಗಳಲ್ಲಿ ಒಂದು ಸ್ಥಾನ ವೀರಶೈವ ಲಿಂಗಾಯತ ಸಮುದಾಯದವರಿಗೆ ನೀಡಬೇಕು. ಲೋಕಸಭೆ ಚುನಾವಣೆಯಲ್ಲಿ ಸಮುದಾಯದ ಜನಸಂಖ್ಯೆ ಅನುಗುಣವಾಗಿ ವೀರಶೈವ ಲಿಂಗಾಯತರಿಗೆ ಆಧ್ಯತೆ ನೀಡಬೇಕು ಎಂದು ಶಾಮನೂರು ಶಿವಶಂಕರಪ್ಪ ಅವರು ಪತ್ರದ ಮೂಲಕ ಒತ್ತಾಯಿಸಿದ್ದಾರೆ.

Read More

ಚಿಕ್ಕಬಳ್ಳಾಪುರ:- ರಾಜ್ಯ ಸರ್ಕಾರ ರೈತ, ಬಡವರ, ದಲಿತರ ವಿರೋಧಿ ಸರ್ಕಾರವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ ಈ ಸಂಬಂಧ ಮಾತನಾಡಿದ ಅವರು,ಈ ದೇಶದಲ್ಲಿ ಸ್ವಾತಂತ್ರ್ಯ ಬಂದ ನಂತರ 60 ವರ್ಷಗಳ ಕಾಲ ಕಾಂಗ್ರೆಸ್ (Congress) ಸರ್ಕಾರ ಆಡಳಿತ ಮಾಡಿದೆ. ಅವರಿಗೆ ರೈತರ ಪರವಾಗಿ ಉತ್ತಮ ಆಡಳಿತ ನೀಡಬೇಕು ಎಂದು ಯಾವತ್ತೂ ಅನ್ನಿಸಲೇ ಇಲ್ಲ ಎಂದರು. ರಾಜ್ಯ ಸರ್ಕಾರ ರೈತ, ಬಡವರ, ದಲಿತರ ವಿರೋಧಿ ಸರ್ಕಾರವಾಗಿದೆ. ದೇಶದಲ್ಲಿ ರೈತರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಸಿಎಂ ಯಡಿಯೂರಪ್ಪನವರು. ರೈತರಿಗೆ ಪ್ರತ್ಯೇಕ ಬಜೆಟ್ ಮಂಡನೆ ಮಾಡಿದ್ದರು. ಕಾಂಗ್ರೆಸ್ʼನವರು ರೈತರ ಪರ ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. https://ainlivenews.com/are-you-suffering-from-blood-pressure-the-benefits-of-eating-papaya-fruit/ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಿದವರು, ಹೈನುಗಾರರಿಗೆ ಪ್ರೋತ್ಸಾಹ ಧನ ನೀಡಿದವರು ಯಡಿಯೂರಪ್ಪನವರು. ಕಾಂಗ್ರೆಸ್‍ನವರ ಯೋಗ್ಯತೆಗೆ ಪ್ರೋತ್ಸಾಹ ಧನ ಕೊಡಲು ಆಗುತ್ತಿಲ್ಲ. ಈ ಸರ್ಕಾರ ಯಾವಾಗ ತೊಲಗುತ್ತದೆಯೋ ಎಂದು ಜನ ಶಾಪ ಹಾಕುತ್ತಿದ್ದಾರೆ. 9 ತಿಂಗಳಾದರೂ ಅಭಿವೃದ್ಧಿ ಮಾಡದ ಶೂನ್ಯ ಸರ್ಕಾರ ಇದು. ಈ…

Read More

ಬೆಂಗಳೂರು: ಕೆಎಸ್ಆರ್​ಟಿಸಿ ಬಸ್​ಗಳಲ್ಲಿ ಟಿಕೆಟ್​ ತಪಾಸಣಾ ಕಾರ್ಯ ನಡೆಸಿದ ಅಧಿಕಾರಿಗಳು ಟಿಕೆಟ್ ಪಡೆಯದೇ ಪ್ರಯಾಣಿಸಿದವರಿಂದ ಭಾರಿ ದಂಡವನ್ನು ವಸೂಲಿ ಮಾಡುವ ಮೂಲಕ ಪ್ರಯಾಣಿಕರಿಗೆ ಚುರುಕು ಮುಟ್ಟಿಸಿದ್ದಾರೆ. Breaking News: ಅಕ್ರಮ ಆಸ್ತಿ ಪ್ರಕರಣ: ಡಿಸಿಎಂ ಡಿ ಕೆ ಶಿವಕುಮಾರ್ ಗೆ ಮತ್ತೊಂದು ಸಂಕಷ್ಟ 2024ರ ಜನವರಿ ತಿಂಗಳಿನಲ್ಲಿ ಕೆಎಸ್​ಆರ್​ಟಿಸಿ ವ್ಯಾಪ್ತಿಗೆ ಬರುವ ಒಟ್ಟು 44521 ಬಸ್​ಗಳಲ್ಲಿ ಅಧಿಕಾರಿಗಳು ತಪಾಸಣೆ ನಡೆಸಿ 3712 ಟಿಕೆಟ್​ ರಹಿತ ಪ್ರಯಾಣಿಕರನ್ನು ಪತ್ತೆ ಹಚ್ಚಿದ್ದಾರೆ, ಇವರಿಂದ ಒಟ್ಟು 5,71,296 ರೂಗಳ ಭಾರಿ ದಂಡವನ್ನು ವಸೂಲಿ ಮಾಡಿದ್ದಾರೆ. Traffic Control Plan: ಬೆಂಗಳೂರಿನ ಟ್ರಾಫಿಕ್ ನಿಯಂತ್ರಣಕ್ಕೆ ಹೊಸ ಫ್ಲಾನ್‌ : ಜಪಾನ್​ ತಂತ್ರಜ್ಞಾನ ಅಳವಡಿಕೆ ಇನ್ನೂ, ನಿಗಮದ ಆದಾಯ ಸೋರಿಕೆ ಬಗ್ಗೆ ತನಿಖೆ ಕೈಗೊಂಡ ತನಿಖಾಧಿಕಾರಿಗಳ ತಂಡವು ತಪಾಸಣೆ ನಡೆಸಿ ನಿಗಮಕ್ಕೆ 81,853 ಸಾವಿರ ರೂಪಾಯಿ ಆದಾಯ ಸೋರಿಕೆ ಆಗಿರೋದು ಪತ್ತೆ ಹಚ್ಚಿದೆ. ಅಕ್ರಮ ಎಸಗಿದ ತಪ್ಪಿತಸ್ತರ ವಿರುದ್ದ ನಿಗಮದ ಕಾನೂನುಗಳ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಸಾರಿಗೆ…

Read More

ಬೆಂಗಳೂರು : ಬೆಂಗಳೂರಿನ ಟ್ರಾಫಿಕ್ ನಿಯಂತ್ರಣಕ್ಕೆ ಜಪಾನ್​ ತಂತ್ರಜ್ಞಾನ ಅಳವಡಿಕೆ ಮಾಡಲಾಗಿದ್ದು ಸುಗಮ ಸಂಚಾರ ನಿರ್ವಹಣೆಗಾಗಿ ಇತ್ತೀಚೆಗೆ ಬೆಂಗಳೂರಿನ ಹಲಸೂರು ಬಳಿಯ ಕೆನ್ಸಿಂಗ್ಟನ್ ರಸ್ತೆ ಮತ್ತು ಮರ್ಫಿ ರಸ್ತೆಯ ಜಂಕ್ಷನ್​​ಗಳಲ್ಲಿ ಜಪಾನೀಸ್ ತಂತ್ರಜ್ಞಾನ ಮೋಡರೇಟೊ ಆಧರಿಸಿದ ಹೊಸ ಟ್ರಾಫಿಕ್ ಸಿಗ್ನಲಿಂಗ್ ವ್ಯವಸ್ಥೆಯನ್ನು ಆರಂಭಿಸಲಾಗಿದೆ. Breaking News: ಅಕ್ರಮ ಆಸ್ತಿ ಪ್ರಕರಣ: ಡಿಸಿಎಂ ಡಿ ಕೆ ಶಿವಕುಮಾರ್ ಗೆ ಮತ್ತೊಂದು ಸಂಕಷ್ಟ ಇದು ವಾಹನಗಳು ಮತ್ತು ಪಾದಚಾರಿಗಳನ್ನು ನಿಯಂತ್ರಿಸಲು ನೆರವಾಗುತ್ತಿದೆ. ಪ್ರತಿ ಜಂಕ್ಷನ್‌ನಲ್ಲಿರುವ ವಾಹನಗಳ ದಟ್ಟಣೆಯ ಆಧಾರದ ಮೇಲೆ ಸಿಗ್ನಲ್ ಸಮಯವನ್ನು ಕ್ರಿಯಾತ್ಮಕವಾಗಿ ಹೊಂದಿಸುವ ಮೂಲಕ ಸಂಚಾರ ನಿರ್ವಹಣೆಯ ದಕ್ಷತೆಯನ್ನು ಹೆಚ್ಚಿಸುವ ಗುರಿಯನ್ನು ಇದು ಹೊಂದಿದೆ. ಈ ಅತ್ಯಾಧುನಿಕ ಟ್ರಾಫಿಕ್ ಸಿಗ್ನಲ್‌ಗಳ ಅಳವಡಿಕೆ ವಿವಿಧ ಕಾರಣಗಳಿಂದಾಗಿ ತುಸು ವಿಳಂಬವಾಗಿತ್ತು. ಇದೀಗ ಅವು ಎಂಜಿ ರಸ್ತೆ, ಹೊಸೂರು ರಸ್ತೆ ಮತ್ತು ಹಳೆ ಮದ್ರಾಸ್ ರಸ್ತೆಯಲ್ಲಿರುವ 28 ಪ್ರಮುಖ ಜಂಕ್ಷನ್‌ಗಳಲ್ಲಿ ಕಾರ್ಯನಿರ್ವಹಿಸಲು ಸಿದ್ಧವಾಗಿವೆ.

Read More

ಲೈಂಗಿಕ್ರ ಕ್ರಿಯೆ ಬಗ್ಗೆ ಮಾತನಾಡಲು ಭಾರತದಲ್ಲಿ ಮಡಿವಂತಿಕೆ ಜಾಸ್ತಿ. ಆದರೆ, ಸಂತಾನೋತ್ಪತ್ತಿಗೆ ಅನಿವಾರ್ಯವಾದ, ಮನುಷ್ಯನ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿಡುವ ಈ ಕ್ರಿಯೆ ಪ್ರತಿಯೊಬ್ಬರಿಗೂ ಅಗತ್ಯವೆಂಬುವುದೂ ಎಲ್ಲರಿಗೂ ಗೊತ್ತು.  ಈ ಬಗ್ಗೆ ಮಡಿವಂತಿಕೆ ಏನೇ ಇದ್ದರೂ, ಅರಿವಿನ ಅಗತ್ಯವೂ ಇದೆ. ಲೈಂಗಿಕ ಆರೋಗ್ಯ ಪ್ರತಿಯೊಬ್ಬರಿಗೂ ಅತ್ಯಗತ್ಯ. ‘ಸೆಕ್ಸ್‌ನಲ್ಲಿ ಸಕ್ರಿಯವಾಗಿ, ನಿಯಮಿತವಾಗಿ, ಒಳ್ಳೆ ಮನಸ್ಸಿನಿಂದ ಭಾಗಿಯಾದರೆ ಹೃದ್ರೋಗವೇ ಬರುವುದಿಲ್ಲ,’ ಎಂದು ಸಂಶೋಧನೆಯೊಂದು ದೃಢಪಡಿಸಿದೆ. ಮೂಳೆ ಹಾಗೂ ಮಾಂಸ ಖಂಡಗಳ ಬಲಗೊಳುತ್ವೆ: ಸೆಕ್ಸ್ ವ್ಯಾಯಾಮದ ಒಂದು ಒಳ್ಳೆ ವಿಧಾನ. ಅಷ್ಟೆ ಅಲ್ಲ ಅದೊಂದು ಶಾರೀರಿಕ ಕ್ರಿಯೆ. ಲೈಂಗಿಕ ಕ್ರಿಯೆಯಲ್ಲಿ ತೊಡಗಿದಾಗ ಶರೀರದಲ್ಲಿ ಆಗುವಂತಹಾ ಬದಲಾವಣೆಗಳು ವರ್ಕ್‌ಔಟ್‌ ಮಾಡುವಾಗಲೂ ಆಗುತ್ತದೆ. ಅಂದ್ರೆ ಸೆಕ್ಸ್ ಹಾಗೂ ವರ್ಕ್ ಔಟ್ ಒಂದೇ ನಾಣ್ಯದ ಎರಡು ಮುಖಗಳು. ಪ್ರತಿದಿನ ಸೆಕ್ಸ್ ಮಾಡೋದ್ರಿಂದ ದೇಹಕ್ಕೆ ಒಂದು ಒಳ್ಳೆ ವ್ಯಾಯಾಮ. ಜೊತೆಗೆ ಮೂಳೆ ಹಾಗೂ ಮಾಂಸ ಖಂಡಗಳು ಬಲಗೊಳ್ಳುತ್ತವೆ. ಸೆಕ್ಸ್‌ ಮಾಡೋದರಿಂದ ಮೂಳೆಗಳು ಗಟ್ಟಿಯಾಗುವುದಲ್ಲದೆ ಮಾಂಸಖಂಡಗಳೂ ಬಲಗೊಳ್ಳುತ್ತವೆ. ಸೆಕ್ಸ್ ನೋವು ನಿವಾರಣೆಯ…

Read More

ಬೆಂಗಳೂರು: ಕಾಂಗ್ರೆಸ್  ಸರ್ಕಾರದಿಂದ ನಗರದ ಅಭಿವೃದ್ಧಿಗಾಗಿ ದುಡ್ಡು ಬಿಡುಗಡೆ ಮಾಡುವಂತೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ (Tejasvi Surya)  ಡಿಸಿಎಂ ಡಿಕೆ.ಶಿವಕುಮರ್‌ಗೆ  (D.K. Shivakumar) ಪತ್ರ ಬರೆದಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಬೆಂಗಳೂರು ಅಭಿವೃದ್ಧಿಗೆ ದುಡ್ಡು ಬಿಡುಗಡೆ ಮಾಡುವಂತೆ ಬಿಜೆಪಿ ನಾಯಕರು ಒತ್ತಡ ನೀಡುತ್ತಿದ್ದಾರೆ. ಈ ಹಿಂದೆ ಇದೇ ವಿಚಾರವಾಗಿ ಶಾಸಕ ಮುನಿರತ್ನ ಮನವಿ ಮಾಡಿದ್ದರು. ಈಗ ತೇಜಸ್ವಿ ಸೂರ್ಯ ಡಿಕೆಶಿಗೆ ಪತ್ರ ಬರೆದಿದ್ದಾರೆ Breaking News: ಅಕ್ರಮ ಆಸ್ತಿ ಪ್ರಕರಣ: ಡಿಸಿಎಂ ಡಿ ಕೆ ಶಿವಕುಮಾರ್ ಗೆ ಮತ್ತೊಂದು ಸಂಕಷ್ಟ ನಗರದ ಸಂಚಾರ ದೃಷಿಯಿಂದ ಬಹುಮುಖ್ಯ ಪ್ರದೇಶವಾಗಿರುವ ಬನಶಂಕರಿಯಲ್ಲಿ ಬಿಎಂಟಿಸಿ ಬಸ್ ನಿಲ್ದಾಣ ಮತ್ತು ಮೆಟ್ರೋ ನಿಲ್ದಾಣಗಳ ನಡುವೆ ಸಾರ್ವಜನಿಕರ ಸಂಚಾರಕ್ಕೆ ಬಹಳ ತೊಂದರೆಯಾಗುತ್ತಿದೆ. ಇವುಗಳ ಮಧ್ಯೆ ದಿನನಿತ್ಯ ಸಂಚಾರ ಮಾಡುವ ಜನರಿಗಾಗಿ ಸ್ಕೈವಾಕ್‌ ನಿರ್ಮಾಣ ಮಾಡಬೇಕು. ಸ್ಕೈವಾಕ್‌ ನಿರ್ಮಾಣಕ್ಕೆ ಸರ್ಕಾರದಿಂದ ದುಡ್ಡು ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ

Read More

ಬೆಂಗಳೂರು: ಅತ್ತ ದೆಹಲಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದರೆ ಇತ್ತ ಬೆಂಗಳೂರಿನಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೂ ಪ್ರತಿಭಟನೆಯ ಬಿಸಿ ತಟ್ಟಲಿದೆ. ವಿಧಾನಮಂಡಲದ ಬಜೆಟ್ ಅಧಿವೇಶನದ ಸಂದರ್ಭದಲ್ಲಿಯೇ ಆಶಾ ಕಾರ್ಯಕರ್ತೆಯರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಫ್ರೀಡಂ ಪಾರ್ಕ್​​ನಲ್ಲಿ ಆಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ..‌ ಇದೇ 16ರಂದು ಸಿಎಂ ಸಿದ್ದರಾಮಯ್ಯ ರಾಜ್ಯ ಬಜೆಟ್ ಮಂಡನೆ ಮಾಡಲಿದ್ದು, ಇದಕ್ಕೂ ಮೊದಲೇ ಕಾಂಗ್ರೆಸ್ ಸರ್ಕಾರಕ್ಕೆ ಪ್ರತಿಭಟನೆಯ ಬಿಸಿ ತಟ್ಟಲಿದೆ. ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸಾವಿರಾರು ಅಂಗನವಾಡಿ, ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಲಿದ್ದಾರೆ. ಸರ್ಕಾರ ರಚನೆಗೂ ಮುನ್ನ ನೀಡಿದ 6 ನೇ ಗ್ಯಾರಂಟಿ ಜಾರಿಗೆ ಆಗ್ರಹಿಸಲಾಗಿದೆ. ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ಎರಡು ದಿನಗಳ ಕಾಲ ಅಹೋರಾತ್ರಿ ಧರಣಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.. ಇಂದು ಬೆಳಗ್ಗೆ 11 ಗಂಟೆಗೆ ಆಶಾ ಕಾರ್ಯಕರ್ತೆಯರ ಪ್ರತಿಭಟನೆ ಶುರುವಾಗಿದ್ದು ,ರಾಜ್ಯದ ಮೂಲೆ ಮೂಲೆಯಿಂದ ಪ್ರತಿಭಟನಾಕಾರರು ಆಗಮಿಸಲಿದ್ದಾರೆ. ಅಹೋರಾತ್ರಿ ಧರಣಿ ಮಾಡುವ ಮೂಲಕ ತನ್ನ ಬೇಡಿಕೆಯನ್ನು ಈಡೇರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡರು..

Read More