Author: AIN Author

ಕೊನೆಗೂ ನಾವೆಲ್ಲ ಕಾಯುತ್ತಿದ್ದ ದಿನ ಬಂದಿದೆ. ಗುಲಾಬಿಗಳು, ಪ್ರಸ್ತಾಪಗಳು, ಚಾಕೊಲೇಟ್‌ಗಳು, ಟೆಡ್ಡಿ ಬೇರ್‌ಗಳು, ಭರವಸೆಗಳು, ಅಪ್ಪುಗೆಗಳು ಮತ್ತು ಚುಂಬನಗಳನ್ನು ಒಳಗೊಂಡ ದಿನ ಬಂದೇ ಬಿಡ್ತು. ನಾವು ಇಂದು ಪ್ರೇಮಿಗಳ ದಿನವನ್ನು ಸ್ವಾಗತಿಸೋಣ ಈ ವೇಳೆ ನಮ್ಮ ಸಂಗಾತಿ ಮೆಚ್ಚುವಂತೆ ಯಾವ ರೀತಿಯ ಉಡುಗೊರೆ ನೀಡಬಹುದು ಎಂಬುದು ಹಲವು ಪ್ರೇಮಿಗಳು ತಲೆಕೆಡಿಸಿಕೊಳ್ಳುವ ವಿಷಯ. ನಿಮಗೂ ಆ ಬಗ್ಗೆ ಗೊಂದಲಗಳಿದ್ದರೆ ಕೆಲವು ಸಲಹೆಗಳು ಇಲ್ಲಿವೆ. ಫೋಟೋ ಫ್ರೇಮ್: ನಿಮ್ಮ ಸಂಗಾತಿಗೆ ಪರ್ಸನಲೈಸ್ ಮಾಡಿದ ಫೋಟೋ ಫ್ರೇಮ್ ನೀಡಬಹುದು. ನಿಮ್ಮ ಪ್ರೀತಿಗೆ ಭಾವನಾತ್ಮಕ ಸ್ಪರ್ಶ ನೀಡಲು  ಕೊಡಬಹುದು ಮೆತ್ತನೆಯ ಬ್ಲಾಂಕೆಟ್: ನಿಮ್ಮ ಸಂಗಾತಿಯನ್ನು ಮೃದುವಾದ, ಮೆತ್ತನೆಯ, ಮುದ್ದಾದ ಹೊದಿಕೆಯೊಂದಿಗೆ ಬೆಚ್ಚಗಿನ ಮತ್ತು ಪ್ರೀತಿಯಿಂದ ಕಟ್ಟಿಹಾಕಬಹುದು ಫೇವರಿಟ್ ಬುಕ್ ಅಥವಾ ಸಿನಿಮಾ: ನಿಮ್ಮ ಸಂಗಾತಿಗೆ ಇಷ್ಟವಾದ ಪುಸ್ತಕ ಅಥವಾ ಸಿನಿಮಾದ ಸಿಡಿಯನ್ನು ಉಡುಗೊರೆಯಾಗಿ ನೀಡಿ. ಪೇಂಟಿಂಗ್ಸ್: ಕುಂಚಗಳೊಂದಿಗೆ ಮಾಡಿದ ಸುಂದರವಾದ ಪೇಂಟಿಂಗ್ ನೀಡಬಹುದು. ನಿಮ್ಮ ಕೈಯಾರೆ ಮಾಡಿದ ಪೇಂಟಿಂಗ್ ನೀಡಿದರೆ ಇನ್ನೂ ಒಳ್ಳೆಯದು

Read More

ವಸಂತ ಪಂಚಮಿ, ಸೂರ್ಯೋದಯ: 06:47, ಸೂರ್ಯಾಸ್ತ : 06:13 ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಮಾಘ ಮಾಸ , ಶುಕ್ಲ ಪಕ್ಷ, ಉತ್ತರಾಯಣಂ, ಶಿಶಿರ ಋತು, ತಿಥಿ: ಪಂಚಮಿ, ನಕ್ಷತ್ರ: ರೇವತಿ, ರಾಹು ಕಾಲ: 12:00 ನಿಂದ 01:30 ತನಕ ಯಮಗಂಡ: 07:30 ನಿಂದ 09:00 ತನಕ ಗುಳಿಕ ಕಾಲ: 10:30 ನಿಂದ 12:00 ತನಕ ಅಮೃತಕಾಲ: ಬೆ.8:30 ನಿಂದ ಬೆ.9:59 ಅಭಿಜಿತ್ ಮುಹುರ್ತ:ಇಲ್ಲ ಮೇಷ ರಾಶಿ ಅಡುಗೆ ಗುತ್ತಿಗೆದಾರರಿಗೆ ಧನಲಾಭ, ಕುರಿ ಕೋಳಿ ಸಾಕಾಣಿಕೆ ಉದ್ಯಮದವರಿಗೆ ಆರ್ಥಿಕ ಚೇತರಿಕೆ,ಗಂಡು ಸಂತಾನ ಜನನ ಮನೆಯಲ್ಲಿ ಸಂತಸ ವಾತಾವರಣ, ನಿಮ್ಮ ಕುಟುಂಬಕ್ಕೆ ಹೊಸ ಸದಸ್ಯ ಸೇರ್ಪಡೆ, ವಾಹನ ಚಾಲನೆ ಜಾಗೃತಿ ವಹಿಸಿ,ಮೊದಲನೇ ಬಾರಿ ಗರ್ಭಿಣಿಯಾದ ಹೆಣ್ಣುಮಕ್ಕಳು ಎಚ್ಚರದಿಂದಿರಬೇಕು, ಇವರಿಗೆ ಕುಟುಂಬ ವರ್ಗದಿಂದ ಕಾಳಜಿ ಮಾಡುವುದು ಉತ್ತಮ, ವಿಶ್ರಾಂತಿ ಅವಶ್ಯಕವಾಗಿದೆ, ವಿಚ್ಛೇದನ ಪಡೆದ ಮತ್ತು ವಿಧವಾ ಎರಡನೇ ಮದುವೆ ಚರ್ಚೆ ನಡೆಯಲಿದೆ, ಕೆಲವರಿಗೆ ಅತ್ತೆ ಮತ್ತು ಸೊಸೆ ಮಧ್ಯೆ ಇಲ್ಲಸಲ್ಲದ…

Read More

ಶಿವಮೊಗ್ಗ:- ಇದು ಮಲೆನಾಡಿನ ಸುಂದರಿಯ ಕಥೆ. ಆಕೆ ಶಿವಮೊಗ್ಗದಲ್ಲಿ ಮದುವೆಯಾಗಿ ಮೋಸ ಮಾಡಿದ್ದಾಳೆ ಎಂದು ಆಕೆಯ ಗಂಡನಾಗಿದ್ದವನು ಆರೋಪ ಮಾಡಿದ್ದಾನೆ. ಮಲೆನಾಡಿನ ಹುಡುಗರೇ ಎಚ್ಚರ.. ಈ ಹುಡುಗಿ ಹಣಕ್ಕಾಗಿ ಮದುವೆಯಾಗಿ ನಂತರ ಮೋಸ ಮಾಡ್ತಾಳೆ ಎಂದು ಆರೋಪಿಸಿದ್ದಾನೆ. ಶಿವಮೊಗ್ಗ ನಗರ ಸಂಕೇತ್ ಎಂಬ ಯುವಕ ತನಗೆ ಸನ್ನಿಧಿಯಿಂದ ಮೋಸವಾಗಿದೆ ಎಂದು ಆರೋಪಿಸಿದ್ದಾನೆ. ಮದುವೆಯಾಗಿ ಕೆಲವು ದಿನವೂ ಸರಿಯಾಗಿ ಸಂಸಾರ ಮಾಡಿಲ್ಲ. ಈಗ ಬರೋಬ್ಬರಿ 20 ಲಕ್ಷ ರೂ. ಮೋಸ ಮಾಡಿದ್ದಾಳೆ ಎಂದು ಆರೋಪಿಸಿದ್ದಾನೆ. ಸಂಕೇತ್‌ ಮತ್ತು ಸನ್ನಿಧಿಯ ಮದುವೆ 2023ರ ಫೆಬ್ರವರಿಯಲ್ಲಿ ನಡೆದಿತ್ತು. ಅಂದರೆ ಒಂದು ವರ್ಷದ ಹಿಂದೆ ಅವರಿಬ್ಬರು ಒಂದಾಗಿದ್ದರು. ಆದರೆ, ಅವರ ಖುಷಿಯ ದಿನಗಳು ಒಂದೆರಡು ತಿಂಗಳಿಗಷ್ಟೇ ಸೀಮಿತವಾಗಿತ್ತು. ಒಂದೆರಡು ತಿಂಗಳು ಸಂಸಾರ ಮಾಡಿ ಕೈ ಕೊಟ್ಟ ಈ ಸುಂದರಿ ನೀನು ಕೀಳು ಜಾತಿಯವನೆಂದು ಆರೋಪ ಮಾಡಿ ದೂರ ಮಾಡಿದ್ದಾಳಂತೆ. ಈಗ ಬೇರೊಬ್ಬ ಹುಡುಗನ ಜತೆ ಓಡಾಡುತ್ತಿದ್ದಾಳಂತೆ. ಸಂಕೇತ್‌ನನ್ನು ಮದುವೆಯಾಗುವ ಮುನ್ನವೂ ಕೆಲವು ತಿಂಗಳ ಕಾಲ ಆಕೆ ಪ್ರೀತಿಸಿದ್ದಳು.…

Read More

ಬೆಂಗಳೂರು:- ಹಸಿರು ಶಾಲನ್ನು ದೇಶಕ್ಕೆ ವಿಸ್ತರಿಸಿದ್ದು ಕರ್ನಾಟಕ ಎಂದು ರಾಕೇಶ್ ಟಿಕಾಯತ್ ಅಭಿನಂದನೆ ಸಲ್ಲಿಸಿದ್ದಾರೆ. ರವೀಂದ್ರ ಕಲಾಕ್ಷೇತ್ರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಂಟಿಯಾಗಿ ಆಯೋಜಿಸಿದ್ದ ‘ನಮ್ಮ ಎಂಡಿಎನ್’ ಪ್ರೊ.ಎಂ.ಡಿ.ನಂಜುಂಡಸ್ವಾಮಿಯವರ 88ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದೇಶದ ಎಲ್ಲ ಹೋರಾಟಗಳಿಗೆ ಪ್ರೇರಣೆ ನೀಡುವ ನೆಲ ಕರ್ನಾಟಕ. ಮೊದಲಿಗೆ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಬಳಕೆಯಲ್ಲಿದ್ದ ರೈತರ ಹಸಿರು ಶಾಲುಗಳು ಇಂದು ದೇಶಾದ್ಯಂತ ವಿಸ್ತರಿಸಿವೆ. ರೈತ ಹೋರಾಟದ ಪ್ರಮುಖ ಲಾಂಛನವಾಗಿ ಬಳಕೆಯಾಗುತ್ತಿರುವ ಹಸಿರು ಶಾಲನ್ನು ದೇಶಕ್ಕೆ ನೀಡಿದ್ದು ಕರ್ನಾಟಕ. ಕರ್ನಾಟಕದಲ್ಲಿ ಹಸಿರು ಪ್ರಜ್ಞೆಯ್ನನು (ರೈತ ಹೋರಾಟ) ಜಾಗೃತಗೊಳಿಸಿದ ಶ್ರೇಯಸ್ಸು ರೈತಚೇತನ ಪ್ರೊ.ಎಂ.ಡಿ.ನಂಜುಂಡಸ್ವಾಮಿಯವರಿಗೆ ಸಲ್ಲುತ್ತದೆ. ಆ ಕಾರಣಕ್ಕೆ ದೇಶದ ರೈತ ಸಮುದಾಯದ ಪರವಾಗಿ ನಂಜುಂಡಸ್ವಾಮಿಯವರಿಗೆ ಮತ್ತು ಕರ್ನಾಟಕಕ್ಕೆ ಧನ್ಯವಾದ ಸಲ್ಲಿಸಲು ಬಯಸುತ್ತೇನೆ ಎಂದು ಟಿಕಾಯತ್ ತಿಳಿಸಿದರು. ರೈತ ವಿರೋಧಿ ಬಹುರಾಷ್ಟ್ರೀಯ ಕಂಪನಿ ಪಾಲಿಸಿಗಳ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿದ್ದ ನಂಜುಂಡಸ್ವಾಮಿಯವರು ಆ ಕಾಲದಲ್ಲೇ ರೈತರ ಪರವಾಗಿ ಹೋರಾಟ…

Read More

ಫೆಬ್ರವರಿ 13 ವ್ಯಾಲೆಂಟೈನ್ಸ್ ಡೇಯಂತೆ ಹೆಚ್ಚು ಗಮನ ಸೆಳೆಯುವ ದಿನವಾಗಿದೆ. ಆದರೆ ಈ ದಿನ ಸುರಕ್ಷಿತ ಲೈಂಗಿಕತೆಯನ್ನು ಉತ್ತೇಜಿಸುವಲ್ಲಿ ಮತ್ತು ಲೈಂಗಿಕವಾಗಿ ಹರಡುವ ಸೋಂಕುಗಳ (STIs) ಹರಡುವಿಕೆಯನ್ನು ತಡೆಗಟ್ಟುವಲ್ಲಿ ಇದು ಮಹತ್ವದ ಪ್ರಾಮುಖ್ಯತೆಯನ್ನು ಹೊಂದಿದೆ. ನಾವು ಅಂತಾರಾಷ್ಟ್ರೀಯ ಕಾಂಡೋಮ್ ದಿನದ ಬಗ್ಗೆ ತಿಳಿದುಕೊಳ್ಳಬೇಕು. ಈ ದಿನವನ್ನು ಪ್ರತಿವರ್ಷವೂ ಫೆಬ್ರವರಿ 13ರಂದು ಆಚರಿಸಲಾಗುತ್ತದೆ ಮತ್ತು ಕಾಂಡೋಮ್‌ಗಳನ್ನು ರಕ್ಷಣೆಯ ಸಾಧನವಾಗಿ ಬಳಸುವ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಆರೋಗ್ಯಕರ ಲೈಂಗಿಕ ಅಭ್ಯಾಸಗಳನ್ನು ಉತ್ತೇಜಿಸಲು ಮೀಸಲಿಡಲಾಗುತ್ತದೆ. ಆದರೆ ಈ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲು ಫೆಬ್ರವರಿ 13 ಅನ್ನೇ ಏಕೆ ಆಯ್ಕೆ ಮಾಡಲಾಗಿದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಇದರ ಹಿಂದಿನ ಇತಿಹಾಸವೇನು? ಅಂತಾರಾಷ್ಟ್ರೀಯ ಕಾಂಡೋಮ್ ದಿನದ ಮಹತ್ವದ ಬಗ್ಗೆ ಇಲ್ಲಿ ತಿಳಿಯಿರಿ ಅಂತಾರಾಷ್ಟ್ರೀಯ ಕಾಂಡೋಮ್ ದಿನದ ಇತಿಹಾಸ: ಕಾಂಡೋಮ್‌ಗಳು ರಕ್ಷಣೆಗೆ ತಡೆಗೋಡೆ ವಿಧಾನವಾಗಿದೆ. ಗರ್ಭಾವಸ್ಥೆಯನ್ನು ತಪ್ಪಿಸಲು ಸಹಾಯ ಮಾಡುತ್ತವೆ. ಸುರಕ್ಷಿತ ಲೈಂಗಿಕ ಅಭ್ಯಾಸಗಳ ಬಗ್ಗೆ ಜಾಗೃತಿ ಮೂಡಿಸಲು, ಅಂತಾರರಾಷ್ಟ್ರೀಯ ಕಾಂಡೋಮ್ ದಿನವನ್ನು ಪ್ರತಿ ವರ್ಷ ಫೆಬ್ರವರಿ…

Read More

ಪ್ರತಿಯೊಬ್ಬರ ಜೀವನದಲ್ಲೂ ಕಚಗುಳಿ ಇಟ್ಟಂಥ ಮನಸ್ಸಿನಲ್ಲಿ ಏನೋ ಒಂಥರಾ ಅನುಭವ ನೀಡುವ ಆಕರ್ಷಣೆ ಎಂದೂ ಮರೆಯಲಾಗದು ಮೊದಲ ಪ್ರೀತಿ ಈ ಪದ ಕೇಳುವಾಗಲೇ ಒಂದು ರೀತಿಯ ಕಚಗುಳಿ ಇಟ್ಟಂತೆ ಅನುಭವ ಪ್ರತಿಯೊಬ್ಬರ ಜೀವನದಲ್ಲಿ ಪ್ರೀತಿ ಹುಟ್ಟಿರುತ್ತದೆ ಹಾಗೆ ಪ್ರೀತಿಗೆ ವಯಸ್ಸು ಇಲ್ಲ ಕೆಲವೊಬ್ಬರ ಜೀವನದಲ್ಲಿ ಶಾಲಾ ದಿನಗಳಲ್ಲಿ ಪ್ರೀತಿ ಹುಟ್ಟಿರುತ್ತದೆ ಇನ್ನು ಕೆಲವರ ಜೀವನದಲ್ಲಿ ಕಾಲೇಜು ಮೂರು ದಿನಗಳಲ್ಲಿ ಮೊದಲ ಪ್ರೀತಿ ಹುಡುಗ ಹುಡುಗಿಯರ ಅದೇ ಅರಿಯದ ವಯಸ್ಸಿನಲ್ಲಿ ಆಗುವ ಈ ಮೊದಲ ಪ್ರೀತಿ ಮರುಭೂಮಿಯಲ್ಲಿ ಮಳೆ ಬಂದಂತೆ ಆಕಾಶದಲ್ಲಿ ಮಿನುಗುತ್ತಿರುವ ನಕ್ಷತ್ರಗಳು ಕೈಗೆ ಸಿಗುವಂತೆ ಮತ್ತು ಅಮಾಸೆ ಕತ್ತಲಂತಾದ ಮನಸ್ಸಿಗೆ ಬೆಳದಿಂಗಳನ್ನು ನೀಡುವ ಚಂದಿರನಂತೆ ಈ ಮೊದಲ ಪ್ರೀತಿ ಅನುಭವ ನೀಡುತ್ತದೆ . ನನಗೆ ಪ್ರೀತಿ ಎಂದರೆ ಏನ್ನು ತಿಳಿದೇ ಇರಲಿಲ್ಲ ಪ್ರೀತಿ ಯಾವ ರೀತಿ ಆಗುತ್ತದೆ ಎಂದು ತಿಳಿದೇ ಇರಲಿಲ್ಲ ತಿಳಿಯದ ವಯಸ್ಸಿನಲ್ಲಿ ಬಂದು ಹೋದ ಗೆಳತಿ ! ಈ ಗೆಳತಿ ಬಗ್ಗೆ ತಿಳಿಯಲು ನಿಮ್ಮ ಕುತೂಹಲ ಇದೇ…

Read More

Amazon ಕೂಪನ್ ಆಫರ್‌ನೊಂದಿಗೆ ಬಜೆಟ್ ವಿಭಾಗದಲ್ಲಿ ಪ್ರತಿಯೊಂದು ಪವರ್ಫುಲ್ ಬ್ರ್ಯಾಂಡ್‌ನಿಂದ ಪವರ್ಫುಲ್ ವಿಶೇಷಣಗಳನ್ನು ಹೊಂದಿರುವ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಲಾಗಿದೆ. ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ನಿಮ್ಮ ಕೈಗೆಟಕುವ ಬೆಲೆಗೆ 5G ಸ್ಮಾರ್ಟ್‌ಫೋನ್‌ಗಳ ಈ ವಿಭಾಗದಲ್ಲಿ ಲಭ್ಯವಿದೆ. ಈ ಬೆಲೆಯಲ್ಲಿ ನೀವು Redmi, POCO, Realme, Samsung ಮತ್ತು Lava ಫೋನ್‌ಗಳನ್ನು ಖರೀದಿಸಬಹುದು. ಈ ವರ್ಷ ನೀವು ಸುಮಾರು ಹತ್ತು ಸಾವಿರದೊಳಗೆ ಲಭ್ಯವಿರುವ ಅತ್ಯುತ್ತಮ 5G ಉನ್ನತ ಸ್ಮಾರ್ಟ್‌ಫೋನ್‌ಗಳ ಪಟ್ಟಿಯನ್ನು ನೀಡಿದ್ದೇವೆ. 5G Phones Under 10000: Redmi 13C ಈ ಜನಪ್ರಿಯ ಸ್ಮಾರ್ಟ್ಫೋನ್ 6.74 ಇಂಚಿನ HD + ಡಿಸ್ಪ್ಲೇ ಜೊತೆಗೆ 90Hz ರಿಫ್ರೆಶ್ ದರವನ್ನು ಹೊಂದಿದೆ. ಮತ್ತು 8GB RAM MediaTek Helio G85 ಪ್ರೊಸೆಸರ್‌ನೊಂದಿಗೆ ಲಭ್ಯವಿದೆ. ಇದರ ಟ್ರಿಪಲ್ ಕ್ಯಾಮೆರಾ ಸೆಟಪ್ 50MP+2MP+2MP ಸೆನ್ಸರ್‌ಗಳನ್ನು ಹೊಂದಿದೆ ಮತ್ತು ಇದು 5MP ಸೆಲ್ಫಿ ಕ್ಯಾಮೆರಾದೊಂದಿಗೆ ಬರುತ್ತದೆ. ಈ ಸ್ಮಾರ್ಟ್ಫೋನ್ ಈಗ ಅಮೆಜಾನ್‌ನಲ್ಲಿ ಆರಂಭಿಕ ರೂಪಾಂತರವನ್ನು ಕೇವಲ ₹7,999 ರೂಗಳಿಗೆ ಖರೀದಿಸಬಹುದು. POCO M6 Pro…

Read More

ಶೇಂಗಾವನ್ನು ನೇರವಾಗಿ ಸೇವಿಸುವುದಕ್ಕಿಂತ ನೆನಸಿಟ್ಟು ತಿನ್ನವುದರಿಂದ ಆರೋಗ್ಯ ಪ್ರಯೋಜನಗಳು ಹೆಚ್ಚಾಗುತ್ತವೆ. ಶೇಂಗಾದಲ್ಲಿ (Peanut) ಮೊನೊಸಾಚುರೇಟೆಡ್ ಮತ್ತು ಬಹುಅಪರ್ಯಾಪ್ತ ಕೊಬ್ಬುಗಳು ಸಮೃದ್ಧವಾಗಿವೆ. ಅವು ಹೃದಯಕ್ಕೆ ಆರೋಗ್ಯಕರ ಕೊಬ್ಬುಗಳಾಗಿವೆ. ಅವು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಮತ್ತು ಹೃದ್ರೋಗದ ಅಪಾಯವನ್ನು (Heart Problem) ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಶೇಂಗಾದಲ್ಲಿರುವ ರೆಸ್ವೆರಾಟ್ರೊಲ್‌ನಂತಹ ಹೆಚ್ಚಿನ ಮಟ್ಟದ ಉತ್ಕರ್ಷಣ ನಿರೋಧಕಗಳು ಹೃದಯರಕ್ತನಾಳದ ಆರೋಗ್ಯಕ್ಕೆ ಕೊಡುಗೆ ನೀಡುತ್ತವೆ. ಈ ಶೇಂಗಾವನ್ನು ನೀರಿನಲ್ಲಿ ನೆನೆಸಿಟ್ಟು ಸೇವಿಸುವುದರಿಂದ ಆರೋಗ್ಯಕ್ಕೆ ಹಲವು ರೀತಿಯ ಪ್ರಯೋಜನಗಳಿವೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿದ ಶೇಂಗಾವನ್ನು ತಿನ್ನುವುದರಿಂದ ಆಗುವ 7 ಪ್ರಯೋಜನಗಳು ಇಲ್ಲಿವೆ… ಶೇಂಗಾ ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲವಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಇದರಿಂದ ಹಲವಾರು ರೋಗಗಳು ಮತ್ತು ಸೋಂಕುಗಳನ್ನು ನಿಯಂತ್ರಿಸಬಹುದು. ಖಾಲಿ ಹೊಟ್ಟೆಯಲ್ಲಿ ನೆನೆಸಿದ ಶೇಂಗಾ ತಿನ್ನುವುದರಿಂದ ಜೀರ್ಣಕ್ರಿಯೆಯ ಆರೋಗ್ಯವನ್ನು ಉತ್ತೇಜಿಸುತ್ತದೆ, ಗ್ಯಾಸ್, ಅಜೀರ್ಣ, ಮಲಬದ್ಧತೆ ಮತ್ತು ಅಸಿಡಿಟಿ ಸಮಸ್ಯೆಗಳನ್ನು ನಿವಾರಿಸುತ್ತದೆ. ಪ್ರತಿದಿನ ಬೆಳಿಗ್ಗೆ ನೆನೆಸಿದ ಶೇಂಗಾ ತಿನ್ನುವುದರಿಂದ ರಕ್ತ ಪರಿಚಲನೆ…

Read More

ಹುಬ್ಬಳ್ಳಿ:- ಅಪರಿಚಿತ ವ್ಯಕ್ತಿಯೋರ್ವನ ದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಗರದ ಕಿಮ್ಸ ಹಿಂಭಾಗದಲ್ಲಿ ಜರುಗಿದೆ. ಕಳೆದ ಐದಾರು ತಿಂಗಳ ಹಿಂದೆ ವ್ಯಕ್ತಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಎಸಿಪಿ ಹಾಗೂ ವಿದ್ಯಾನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತನಿಖೆ ಬಳಿಕ ಸತ್ಯಾಂಶ ಬೆಳಕಿಗೆ ಬರಲಿದೆ.

Read More

ಬೆಂಗಳೂರು:- ಕಣ್ಣು ಕುಕ್ಕುವ ಎಲ್​ಇಡಿ ಜಾಹೀರಾತುಗಳಿಂದ ವಾಹನ ಸವಾರರಿಗೆ ಕಿರಿಕಿರಿ ಉಂಟಾಗಿದ್ದು, ಸರ್ಕಾರ, ಬಿಬಿಎಂಪಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ವಕೀಲೆ ದೀಕ್ಷಾ ಅಮೃತೇಶ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಮತ್ತು ಟಿ.ಜಿ.ಶಿವಶಂಕರೇಗೌಡ ಅವರಿದ್ದ ವಿಭಾಗೀಯ ಪೀಠವು ನೋಟಿಸ್​ ಜಾರಿ ಮಾಡಿ, ವಿಚಾರಣೆಯನ್ನು ಮುಂದೂಡಿತು. ಅಲ್ಲದೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್ಪಿಸಿಬಿ), ಬಿಬಿಎಂಪಿ ಮುಖ್ಯ ಆಯುಕ್ತರು, ಬೆಂಗಳೂರು ನಗರ ಪೊಲೀಸ್ ಆಯುಕ್ತರು ಹಾಗೂ ಮಲ್ಲೇಶ್ವರ ಸಂಚಾರ ಉತ್ತರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಿ, ಆಕ್ಷೇಪಣೆ ಸಲ್ಲಿಸಲು ಸೂಚನೆ ನೀಡಿತು ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಅಮೃತೇಶ್ ವಾದ ಮಂಡಿಸಿ, ”ಮಲ್ಲೇಶ್ವರದ ಸಂಪಿಗೆ ರಸ್ತೆಯ ವೆಂಡಿ, ಎವಿಆರ್ ಸ್ವರ್ಣ ಮಹಲ್, ಓರಾ ಮತ್ತು ತನಿಷ್ಕ್ ಮತ್ತಿತರ ಚಿನ್ನಾಭರಣ ಮಳಿಗೆಗಳು ಹೆಚ್ಚಿನ ಹೊಳಪಿನ ಎಲ್ಇಡಿ ನಾಮಫಲಕ ಹಾಗೂ ಜಾಹೀರಾತು ಫಲಕ ಅಳವಡಿಸಿವೆ. ನೆಲದ ಮಟ್ಟದಿಂದ ಬಹು ಎತ್ತರಕ್ಕೆ ಮುಖ್ಯರಸ್ತೆಗೆ…

Read More