Author: AIN Author

ಭಾರತ ಕ್ರಿಕೆಟ್ (Team India) ತಂಡದ ಮಾಜಿ ಆಲ್‌ರೌಂಡರ್‌ ಆಟಗಾರ ಯುವರಾಜ್ ಸಿಂಗ್ (Yuvraj Singh) ಅವರು ಶೀಘ್ರವೇ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿಯೊಂದು ಹರಿದಾಡಲು ಆರಂಭವಾಗಿದೆ. ಯುವರಾಜ್ ಇತ್ತೀಚೆಗೆ ಕೇಂದ್ರ ಸಾರಿಗೆ ಖಾತೆಯ ಸಚಿವ ನಿತಿನ್ ಗಡ್ಕರಿ (Nitin Gadkari) ಅವರನ್ನು ಭೇಟಿಯಾಗಿದ್ದರು. ಈ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ವರದಿಯಾಗಿದೆ. ಇಂಗ್ಲೆಂಡ್‌ ಟೀಂಗೆ ಬಿಗ್‌ ಶಾಕ್: ಮೂರು ಪಂದ್ಯಗಳಿಂದಲೂ ಹೊರಬಿದ್ದ ಪ್ರಮುಖ ಸ್ಪಿನ್ನರ್‌ ಪಂಜಾಬ್‌ನ (Punjab) ಗುರುದಾಸ್‌ಪುರ ಕ್ಷೇತ್ರದಲ್ಲಿ ಬಿಜೆಪಿಯಿಂದ (BJP) ಲೋಕಸಭೆಗೆ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಬಿಜೆಪಿ ಸೇರ್ಪಡೆಯಾಗುವ ಬಗ್ಗೆ ಇಲ್ಲಿಯವರೆಗೆ ಯುವರಾಜ್‌ ಸಿಂಗ್‌ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ನಟ ಸನ್ನಿ ಡಿಯೋಲ್ ಹಾಲಿ ಗುರುದಾಸ್‌ಪುರ ಕ್ಷೇತ್ರದ ಸಂಸದರಾಗಿದ್ದಾರೆ. ಪಂಜಾಬ್‌ನಲ್ಲಿ ಒಟ್ಟು 13 ಲೋಕಸಭಾ ಕ್ಷೇತ್ರಗಳಿದೆ. 2019ರ ಚುನಾವಣೆಯಲ್ಲಿ ಕಾಂಗ್ರೆಸ್‌ 8 , ಬಿಜೆಪಿ 2, ಶಿರೋಮಣಿ ಅಕಾಲಿ ದಳ 2, ಆಪ್‌ 1 ಸ್ಥಾನವನ್ನು ಗೆದ್ದುಕೊಂಡಿತ್ತು. ಪಂಜಾಬ್‌ನಲ್ಲಿ…

Read More

ಸಾಕಷ್ಟು ಕಂಪನಿಗಳು ಮಹಿಳೆಯರಿಗೆ ಪಿರಿಯಡ್ಸ್ ಸಮಯದಲ್ಲಿ ಮನೆಯಿಂದ ಕೆಲಸ ಮಾಡಲು ಅವಕಾಶ ನೀಡುತ್ತದೆ. ಕೆಲಸಗಾರರು ಖುಷಿಯಾದ್ರೆ, ಸಂತೋಷದಿಂದ ಇದ್ರೆ ಅವರು ಸರಿಯಾಗಿ ಕೆಲಸ ಮಾಡ್ತಾರೆ. ಇದ್ರಿಂದ ಕಂಪನಿಗೆ ಲಾಭ ಸಿಗುತ್ತದೆ. ಈ ಗುಟ್ಟನ್ನು ಅರಿತಿರುವ ಬಹುತೇಕ ಕಂಪನಿಗಳು ಕೆಲಸಗಾರರ ಆರೋಗ್ಯ, ಆರ್ಥಿಕ ಸ್ಥಿತಿ ಬಗ್ಗೆಯೂ ಗಮನ ನೀಡುತ್ತದೆ. ಆರೋಗ್ಯ ವಿಮೆ ಅಥವಾ ಅನಾರೋಗ್ಯದ ಪರಿಸ್ಥಿತಿಯಲ್ಲಿ ಉದ್ಯೋಗಿಗಳಿಗೆ ಹಣದ ಸಹಾಯ ಮಾಡುವ ಕಂಪನಿಗಳೂ ಸಾಕಷ್ಟಿವೆ. ಹೆರಿಗೆ (Childbirth) ಸಮಯದಲ್ಲಿ ಮೂರು ತಿಂಗಳು ವೇತನ ಸಹಿತ ರಜೆಯನ್ನು ಕಂಪನಿಗಳು ನೀಡುವುದು ನಿಮಗೆ ಗೊತ್ತು. ಆದ್ರೆ ಈ ಕಂಪನಿ (Company) ಮಕ್ಕಳನ್ನು ಹೆರಲು ಉದ್ಯೋಗಿ (employee) ಗಳಿಗೆ ಹಣದ ಸಹಾಯ ಮಾಡುತ್ತದೆ. ಹತ್ತೋ, ಇಪ್ಪತ್ತೋ ಸಾವಿರ ಅಲ್ಲ, ಮಕ್ಕಳನ್ನು ಪಡೆಯಲು ಬಯಸಿರುವ ಉದ್ಯೋಗಿಗಳಿಗೆ ಕಂಪನಿ ಲಕ್ಷಾಂತರ ರೂಪಾಯಿ ಸಹಾಯ ಮಾಡುತ್ತದೆ. ಮಕ್ಕಳನ್ನು ಹೆರಲು ಹಣ ಸಹಾಯ : ಮಕ್ಕಳನ್ನು ಪಡೆಯಲು ಉದ್ಯೋಗಿಗಳಿಗೆ ಹಣದ ಸಹಾಯ ಮಾಡುವ ಕಂಪನಿ ಹೆಸರು ಬೋಯಂಗ್ ಗ್ರೂಪ್ ( Booyoung Group).…

Read More

ಕೆಲವರು ಟೀ ಜೊತೆ ಬನ್, ರಸ್ಕ್, ಬಿಸ್ಕೇಟ್, ಬಜ್ಜಿ ಸೇವಿಸುತ್ತಾರೆ ಇನ್ನೂ ಕೆಲವರು ಟೀ ಜೊತೆ ಸಿಗರೇಟ್ ಸೇದುತ್ತಾರೆ. ಆದರೆ ಇದರಲ್ಲಿ ಮಕ್ಕಳಿಗೂ ನಾವು ನೀಡುವುದೇನೆಂದರೆ ಬಿಸ್ಕೇಟ್ ಇಲ್ಲವೆ ರಸ್ಕ್ ನೀಡುತ್ತೇವೆ. ಟೀ ಜೊತೆ ರಸ್ಕ್ ಸೇವಿಸುವುದು ಸಹ ನಾವು ನೋಡಿರುತ್ತೇವೆ. ಆದರೆ ನಿತ್ಯ ಟೀ ಜೊತೆ ರಸ್ಕ್ ಸೇವಿಸುವುದರಿಂದ ಏನಾಗುತ್ತದೆ ಎಂದು ನಿಮಗೆ ತಿಳಿದಿದೆಯೇ..? ಈ ಕುರಿತು ನಿಮಗೆ ಯಾವ ಮಾಹಿತಿಯೂ ಇಲ್ಲ ಎಂದಾದರೆ ಈ ಕುರಿತ ಮಾಹಿತಿಯನ್ನು ತಿಳಿದುಕೊಳ್ಳಿ. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ರಸ್ಕ್ ತಿನ್ನಲು ಇಷ್ಟಪಡುತ್ತಾರೆ. ಬೆಳಗ್ಗೆ ಎದ್ದ ನಂತರ ಬಿಸಿ ಬಿಸಿ ಚಹಾ ಅಥವಾ ಕಾಫಿಯೊಂದಿಗೆ ರಸ್ಕ್ ಮಾಡುವುದು ಹೆಚ್ಚಿನವರ ದೈನಂದಿನ ಅಭ್ಯಾಸವಾಗಿದೆ. ಈ ದೀರ್ಘಕಾಲೀನ ಅಭ್ಯಾಸವು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ತಜ್ಞರು ಎಚ್ಚರಿಸುತ್ತಾರೆ. ಹಾಗಾದರೆ ನಿತ್ಯ ಟೀ ಜೊತೆ ರಸ್ಕ್ ಸೇವಿಸುವುದರಿಂದಾಗುವ ಪರಿಣಾಮವೇನು ಎಂಬುದನ್ನು ನಾವಿಂದು ನೋಡೋಣ. ರಸ್ಕ್‌ಗೆ ಹೆಚ್ಚಾಗಿ ಸಕ್ಕರೆ ಮತ್ತು ಗ್ಲುಟನ್ ಅನ್ನು ಸೇರಿಸಿರುತ್ತಾರೆ. ಅದು ರುಚಿಯಾಗಬೇಕಾದರೆ…

Read More

ಯಶಸ್ವಿ ಜೈಸ್ವಾಲ್‌ ಅವರನ್ನು ಮಾಜಿ ನಾಯಕ ಸೌರವ್‌ ಗಂಗೂಲಿಗೆ ಟೀಮ್‌ ಇಂಡಿಯಾ ಮಾಜಿ ಆಲ್‌ರೌಂಡರ್‌ ಇರ್ಫಾನ್‌ ಪಠಾಣ್‌ ಹೋಲಿಸಿದ್ದಾರೆ. ಯಶಸ್ವಿ ಜೈಸ್ವಾಲ್‌ ಅವರು ಅತ್ಯುತ್ತಮ ಪ್ರದರ್ಶನ ತೋರಿದ್ದರು. ಹೈದರಾಬಾದ್‌ ಟೆಸ್ಟ್‌ನಲ್ಲಿ ಅರ್ಧಶತಕ ಸಿಡಿಸಿದ್ದ ಜೈಸ್ವಾಲ್ ವಿಶಾಖಪಟ್ಟಣಂ ಟೆಸ್ಟ್ ಪ್ರಥಮ ಇನಿಂಗ್ಸ್‌ನಲ್ಲಿ ತಮ್ಮ ಚೊಚ್ಚಲ ದ್ವಿಶತಕ ಸಿಡಿಸಿದ್ದರು Eng Vs Ind Test Series: ಕೆ.ಎಲ್‌ ರಾಹುಲ್‌ ಬಿಟ್ಟು ಮತ್ತೊಬ್ಬ ಕನ್ನಡಿಗನಿಗೆ ಮಣೆ ಹಾಕಿದ BCCI ಸ್ಟಾರ್ ಸ್ಪೋರ್ಟ್ಸ್‌ನ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಇರ್ಫಾನ್‌ ಪಠಾಣ್, ಯಂಗ್‌ ಬ್ಯಾಟರ್ ಯಶಸ್ವಿ ಜೈಸ್ವಾಲ್‌ ಮತ್ತು ಮಾಜಿ ನಾಯಕ ಸೌರವ್‌ ಗಂಗೂಲಿ ಅವರಿಗೆ ಹೋಲಿಸಿದ್ದಾರೆ. ಆಫ್‌ ಸೈಡ್‌ ಬ್ಯಾಟಿಂಗ್‌ ನೋಡಿದಾಗ ಜೈಸ್ವಾಲ್‌ ಅವರು ಗಂಗೂಲಿ ಆಟಕ್ಕೆ ಬಹಳಾ ಹತ್ತಿರದಿಂದ ಕಾಣುತ್ತಾರೆ. ಪ್ರಸ್ತುತ ಇದೇ ಆಟವನ್ನು ಜೈಸ್ವಾಲ್‌ ಮುಂದುವರಿಸಿದರೆ, ದೀರ್ಘಾವಧಿ ಭಾರತ ತಂಡದಲ್ಲಿ ಮುಂದುವರಿಯಲಿದ್ದಾರೆ ಎಂದು ಪಠಾಣ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Read More

ಸಾಕಷ್ಟು ಜನರು ಹಾಸಿಗೆಯ ಮೇಲೆ ಕುಳಿತು ಮಡಿಲಲ್ಲಿ ಲ್ಯಾಪ್‌ಟಾಪ್ ಇಟ್ಟುಕೊಂಡು ಕೆಲಸಮಾಡುವ ಅಭ್ಯಾಸವನ್ನು ಹೊಂದಿರುತ್ತಾರೆ. ಈ ಸಣ್ಣ ತಪ್ಪು ನಿಮ್ಮ ಆರೋಗ್ಯದ ಅಪಾಯಕಾರಿ ಪರಿಣಾಮವನ್ನುಂಟು ಮಾಡಬಹುದು. ಲ್ಯಾಪ್‌ಟಾಪ್ ಅನ್ನು ನಿಮ್ಮ ಮಡಿಲಲ್ಲಿ ಇಟ್ಟುಕೊಂಡು ಹಾಸಿಗೆಯ ಮೇಲೆ ಕೆಲಸ ಮಾಡುವುದು ಒಂದು ಕ್ಷಣ ಪರಿಹಾರವನ್ನು ನೀಡುತ್ತದೆ. ಆದರೆ ಎರಡು ನಿಮಿಷದ ವಿಶ್ರಾಂತಿ ಭವಿಷ್ಯದಲ್ಲಿ ಎಷ್ಟು ದೊಡ್ಡ ಸಮಸ್ಯೆಯನ್ನು ತರಬಹುದು ಎಂದು ಯಾರೂ ಊಹಿಸುವುದಿಲ್ಲ. ಆದ್ದರಿಂದ ಈ ಅಭ್ಯಾಸನಿಮ್ಮ ಆರೋಗ್ಯ ಮೇಲೆ ಯಾವ ರೀತಿ ಹಾನಿಯುಂಟು ಮಾಡುತ್ತದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ. ಲ್ಯಾಪ್‌ಟಾಪ್‌ನಿಂದ ಹೊರಬರುವ ಬಿಸಿ ಗಾಳಿಯು ಚರ್ಮದ ಮೇಲೆ ಕಿರಿಕಿರಿಯನ್ನು ಉಂಟುಮಾಡಬಹುದು, ಇದನ್ನು ಟೋಸ್ಟೆಡ್ ಸ್ಕಿನ್ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ. ಆದ್ದರಿಂದ ಮಡಿಲಲ್ಲಿ ಲ್ಯಾಪ್‌ಟಾಪ್ ಇಟ್ಟುಕೊಂಡು ಹೆಚ್ಚು ಹೊತ್ತು ಕೆಲಸಮಾಡುವುದು ಚರ್ಮದ ಕಾಯಿಲೆಗಳಿಗೆ ಕಾರಣವಾಗಬಹುದು. ಮಡಿಲಲ್ಲಿ ಲ್ಯಾಪ್‌ಟಾಪ್ ಇಟ್ಟುಕೊಂಡು ಕೆಲಸಮಾಡುವುದು ಪುರುಷರಲ್ಲಿ ಫಲವತ್ತತೆಯ ಮೇಲೆ ಪರಿಣಾಮ ಬೀರುತ್ತದೆ. ಲ್ಯಾಪ್‌ಟಾಪ್‌ಗಳಿಂದ ಹೊರಬರುವ ಬಿಸಿ ಗಾಳಿಯು ವೀರ್ಯದ ಸಂಖ್ಯೆ ಮತ್ತು ಗುಣಮಟ್ಟವನ್ನು ಕಡಿಮೆ ಮಾಡುತ್ತದೆ. ನಿಮ್ಮ…

Read More

ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಬೇಸಿಗೆಯ ಬೇಗೆ ಈಗಲೇ ಶುರುವಾಗಿದೆ. ಒಂದು ಕಡೆ ರಣಭೀಕರ ಬಿಸಿಲು ರಾಜಧಾನಿ‌ ಮಂದಿಗೆ ನೆತ್ತಿ ಸುಡ್ತಿದೆ.‌ ಮತ್ತೊಂದು ಕಡೆ ಜೀವಜಲಕ್ಕಾಗಿ ಪರದಾಟ ಶುರುವಾಗಿದೆ. ಕುಡಿಯುವ ನೀರಿಗೂ ಹಾಹಾಕಾರ ಬಂದೊದಗಿದೆ. ಬೆಂಗಳೂರಿನ ವಿವಿಧ ಭಾಗಗಳಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಬೆಳಗ್ಗೆ ಹಾಗೂ ಸಂಜೆ ಸಮಯದಲ್ಲಿ ಮಾತ್ರ ನೀರು ಬರ್ತಿದ್ದು, ಜನ ಪರದಾಡ್ತಿದ್ದಾರೆ ಸುಕನ್ಯಾ ಸಮೃದ್ಧಿ ಯೋಜನೆ ಹೊಂದಿದ್ದೀರಾ: ಹಾಗಿದ್ರೆ ಈ ಕೆಲಸ ಮಾಡಲೇಬೇಕು, ಇಲ್ಲದಿದ್ರೆ ಖಾತೆ ನಿಷ್ಕ್ರೀಯ ಕಾವೇರಿ ನೀರು ಬರ್ತಿಲ್ಲ…ಬೋರ್ ವೆಲ್ ಕೂಡ ವರ್ಕ್ ಆಗ್ತಿಲ್ಲ..ಅತ್ತ ಟ್ಯಾಂಕರ್ ನೀರಿಗೆ ಮೊರೆಹೋದ್ರೆ ರೇಟ್ ಕೈಗೆಟಕುತ್ತಿಲ್ಲ. ಇಂತಹ ಪರಿಸ್ಥಿತಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಿರ್ಮಾಣವಾಗಿದೆ. ಇದರ ನಡುವೆ ಕುಡಿಯುವ ನೀರಿಗೂ ಸಂಕಟ ಶುರುವಾಗಿದೆ. ಬಹುತೇಕ ಜನರಿಗೆ ಆಸರೆಯಾಗಿದ್ದು ಬಿಬಿಎಂಪಿಯ ಶುದ್ದ ಕುಡಿಯುವ ನೀರಿನ ಘಟಕದಲ್ಲಿ‌ಯೂ ನೀರಿನ ಕೊರತೆ ಎದುರಾಗಿದೆ. ಬಹುತೇಕ ಫ್ಲಾಂಟ್ ಗಳ ಮುಂದೆ ನೀರಿಲ್ಲ ಸಹಕರಿಸಿ ಎಂಬ ಬೋರ್ಡ್ ರಾರಾಜಿಸ್ತಿವೆ. ಈ ದೃಶ್ಯ ನೋಡಿ ಇದು ಆರ್.ಆರ್. ನಗರದ…

Read More

ಮಂಗನ ಬಾವು (ಪರೊಟಿಟಿಸ್ ಎಂದೂ ಹೆಸರಾಗಿದೆ) ಗಂಭೀರವಾದ ವೈರಾಣು ಕಾಯಿಲೆ. ಇದರಿಂದ ಪರೊಟಿಡ್ ಗ್ರಂಥಿಗಳು ದೊಡ್ಡದಾಗಿ ನೋವು ಉಂಟಾಗುವುದು. ಈ ಗ್ರಂಥಿಗಳು ಕಿವಿಯ ಕೆಳಗೆ ಮತ್ತು ಮುಂಭಾಗದಲ್ಲಿ ಇರುತ್ತವೆ ಮತ್ತು ಜೊಲ್ಲುರಸ ಅಥವ ಉಗುಳನ್ನು ಉತ್ಪಾದಿಸುವುದು .. ಕಾರಣ ಏನು ? ಮಂಗನ ಬಾವು ವೈರಾಣುವಿನಿಂದ ಹರಡುವ ಒಂದು ಸಾಂಕ್ರಾಮಿಕ ರೋಗ. ಸೊಂಕಿತ ಜೊಲ್ಲಿನ ಮೂಲಕ ಒಬ್ಬರಿಂದ ಒಬ್ಬರಿಗೆ ಹರಡುವುದು. 2 ರಿಂದ 12 ವರ್ಷದವರೆಗಿನ ಮಕ್ಕಳಿಗೆ ಸೋಂಕು ತಗುಲುವ ಸಂಭವ ಹೆಚ್ಚು. ವಯಸ್ಕರಲ್ಲಿ ಪರಾಟಿಡ್ ಗ್ರಂಥಿಯ ಜೊತೆಗೆ ಅದರ ಅಂಗಗಳಾದ ತರಡು ಬೀಜಗಳು, ಪ್ಯಾಂಕ್ರಿಯಾಸ್, ಮತ್ತು ನರಮಂಡಲಗಳು ತೋಂದರೆಗೆ ಒಳಗಾಗುತ್ತವೆ. ರೋಗವು ಗುಪ್ತಾವಸ್ಥೆಯಲ್ಲರುವ ಸೋಂಕು ತಗುಲಿ ಅದು ಹೊರಬರುವ ಅವಧಿ ಸಾಧಾರಣವಾಗಿ 2 ರಿಂದ 24 ದಿನಗಳು. ಲಕ್ಷಣಗಳು ಯಾವುವು ? ಪರಾಟಿಡ್ ಗ್ರಂಥಿಯ ನೋವು ಸಹಿತ ಬಾವು ,ಮೊದಲಲ್ಲಿ ಒಂದು ಕಡೆ 3 ರಿಂದ 5 ದಿನಗಳಲ್ಲಿ ಎರಡೂ ಗ್ರಂಥಿಗಳು ಬತುಕೊಳ್ಳುವವು. ಆಹಾರವನ್ನು ನುಂಗುವಾಗ ಮತ್ತು ಅಗಿಯುವಾಗ ನೋವು…

Read More

ಬೆಂಗಳೂರು: ಜಮ್ಮು ಕಾಶ್ಮೀರದ ಪುಲ್ವಾಮ ಬಳಿ ಉಗ್ರರ ದಾಳಿಗೆ ಬಲಿಯಾದ 44 ಮಂದಿ ಸಿಆರ್​ಪಿಎಫ್​ ಉತಾತ್ಮ ಯೋಧರಿಗೆ ಫೆ.14 ರಂದು ಬುಧವಾರ 5ನೇ ವರ್ಷದ ಶ್ರದ್ದಾಂಜಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ರಾಜ್ಯ ಕೇಂದ್ರೀಯ ಅರೆ ಸೇನಾ ಪಡೆಗಳ ಮಾಜಿ ಯೋಧರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಯಲಹಂಕಾದ ಸಿಆರ್​ಪಿಎಫ್​ ಪರೇಡ್​ ಮೈದಾನದಲ್ಲಿ 5 ನೇ ವರ್ಷದ ಶ್ರದ್ದಾಂಜಲಿ ಕಾರ್ಯಕ್ರಮ ನಡೆಯಲಿದೆ. ಹುತಾತ್ಮರಾದ 44 ಮಂದಿ ವೀರ ಯೋಧರಿಗೆ ಶ್ರದ್ದಾಂಜಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. 2019, ಫೆ. 14 ರಂದು ಕಾಶ್ಮೀರದ ಬಳಿ ಇರುವ ಪುಲ್ವಾಮದಲ್ಲಿ ಕಾರ್ಯನಿರತರಾಗಿ ಬೆಂಗಾವಲು ಪಡೆಗಳ ವಾಹನದಲ್ಲಿ ತೆರಳುತ್ತಿದ್ದ ವಾಹನಗಳ ಮೇಲೆ ಉಗ್ರರು ನಡೆಸಿದ ಆತ್ಮಾಹುತಿ ದಾಳಿಯಲ್ಲಿ 44 ಮಂದಿ ಅರೆಸೇನಾ ಪಡೆಯ ಸಿಆರ್​ಪಿಎಫ್​ ಯೋಧರು ಹುತಾತ್ಮರಾದರು. ಇವರ ಸ್ಮರಣಾರ್ಥ ಕೇಂದ್ರೀಯ ಅರೆಸೇನಾ ಪಡೆಗಳ ಮಾಜಿ ಯೋಧರಿಂದ ಶ್ರದ್ದಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್​  ಹಾಗು ವಿವಿಧ ಗಣ್ಯರು ಭಾಗವಹಿಸಲಿದ್ದಾರೆ.

Read More

ಜಿರಳೆಗಳು ಎಂದರೆ ಎಂತಹ ಧೈರ್ಯವಂತರಿಗೂ ಭಯ. ಮನೆಯಲ್ಲಿ ಜಿರಳೆಗಳು ಹೆಚ್ಚಾದರೆ ಕಾಯಿಲೆ ಕೂಡ ಹೆಚ್ಚಾದಂತೆ ಎಂದು ಹೇಳುತ್ತಾರೆ. ಮನೆಯಲ್ಲಿ ಮಕ್ಕಳು ಮತ್ತು ವಯಸ್ಸಾದವರು ಇದ್ದರೆ ಅವರ ಬಗ್ಗೆ ಎಚ್ಚರಿಕೆ ವಹಿಸಬೇಕು. ಜಿರಳೆಗಳು ಅಡ್ಡಾಡಿದ ಆಹಾರ ಸೇವನೆ ಮಾಡಬಾರದು, ಏಕೆಂದರೆ ಅದರಿಂದ ಹತ್ತಾರು ಕಾಯಿಲೆಗಳು ಬರುವ ಸಾಧ್ಯತೆ ಇರುತ್ತದೆ. ಹೀಗಾಗಿ ಜಿರಳೆಗಳ ನಿವಾರಣೆ ಮಾಡುವುದು ಅತ್ಯಗತ್ಯವಾಗಿದೆ.  ಬೋರಿಕ್ ಆಸಿಡ್ ಜಿರಳೆಗಳನ್ನು ಕೆರಳಿಸಲು ಅತ್ಯುತ್ತಮ ಪರಿಹಾರಗಳಲ್ಲಿ ಒಂದಾಗಿದೆ.  ಬೋರಿಕ್ ಆಸಿಡ್ ಅನ್ನು ಹೆಚ್ಚಿನ ದೈನಂದಿನ ಅಗತ್ಯ ಅಂಗಡಿಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ನೀವು ಮಾಡಬೇಕಾಗಿರುವುದು ಇಷ್ಟೇ, ಜಿರಳೆ ಸಂಪರ್ಕಕ್ಕೆ ಬರುವ ಮೂಲೆ ಮತ್ತು ಮೂಲೆಯಲ್ಲಿ ಸ್ವಲ್ಪ ಬೋರಿಕ್ ಆಮ್ಲದ ಪುಡಿಯನ್ನು ಹಾಕಿದರೆ ಸಾಕು.  ಬೇಕಿಂಗ್ ಸೋಡಾ ಕೂಡ ಜಿರಳೆಯನ್ನು ದೂರ ಮಾಡಲು ಸಹಾಯ ಮಾಡುತ್ತದೆ. ಸಕ್ಕರೆ ಮತ್ತು ಬೇಕಿಂಗ್ ಸೋಡಾಗಳ ಸಂಯೋಜನೆಯು ಜಿರಳೆಗಳ ಸಂತಾನೋತ್ಪತ್ತಿಯನ್ನು ತಡೆಗಟ್ಟುವ ಅತ್ಯುತ್ತಮ ಮಾರ್ಗಗಳಲ್ಲಿ ಒಂದಾಗಿದೆ. ನೀವು ಮಾಡಬೇಕಾಗಿರುವುದು ಇಷ್ಟೇ, ಈ ಜಿರಳೆಗಳು ನಿಮ್ಮ ಮನೆಯಲ್ಲಿ ಹಾದು ಹೋಗುವ ಸ್ಥಳವನ್ನು ಕಂಡುಕೊಂಡು…

Read More

ಬೆಂಗಳೂರು:- ಸಂವಿಧಾನದ ಜಾಗೃತಿ ಜಾಥಾದ ಅಂಗವಾಗಿ ರಾಜ್ಯ ಸರ್ಕಾರ ರೀಲ್ಸ್‌ ಮಾಡಿ ಬಹುಮಾನ ಗೆಲ್ಲಿ ಎನ್ನುವ ಸುವರ್ಣಾವಕಾಶವನ್ನು ನೀಡಿದೆ.ಸಂವಿಧಾನದ ಅರಿವು ಕೇವಲ ಪುಸ್ತಕಗಳಲ್ಲಿ ಅಥವಾ ಶಾಲಾ ಕಾಲೇಜುಗಳಿಗಷ್ಟೇ ಸೀಮಿತವಾಗಿರದೇ ಪ್ರತಿಯೊಬ್ಬರಿಗೂ ತಲುಪಬೇಕು ಎನ್ನುವ ಉದ್ದೇಶದಿಂದ ಸರ್ಕಾರ ಸಾಮಾಜಿಕ ಜಾಲತಾಣದ ಮೊರೆ ಹೋಗಿದ್ದು, ಈಗಿನ ತಾಂತ್ರಿಕ ಯುಗಕ್ಕೆ ತಕ್ಕಂತೆ ರೀಲ್ಸ್ ಮಾಡಿ ಬಹುಮಾನ ಗೆಲ್ಲಿ ಎಂದು ಘೋಷಿಸಿದೆ.? ಸಂವಿಧಾನದ ಜಾಗೃತಿ ಜಾಥಾದ ಅಂಗವಾಗಿ ರೀಲ್ಸ್‌ ಮಾಡಿ ಬಹು ದೊಡ್ಡ ಮೊತ್ತದ ನಗದು ಬಹುಮಾನ ಪಡೆಯಬಹುದಾಗಿದೆ. 30 ರಿಂದ 40 ಸೆಕೆಂಡ್​ಗಳಷ್ಟೇ ಹೊಂದಿರುವ ವಿಡಿಯೋದಲ್ಲಿ ಸಂವಿಧಾನದ ಜಾಗೃತಿ ಜಾಥಾದ ಬಗ್ಗೆ ಅರಿವು ಮೂಡಿಸಬೇಕಾಗಿದೆ. ರೀಲ್ಸ್ ಮಾಡಿ ಬಹುಮಾನ ಗೆಲ್ಲಿ ಸ್ಫರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ 50,000 ರೂಪಾಯಿ, ದ್ವಿತೀಯ ಬಹುಮಾನ 25,000 ರೂಪಾಯಿ ಹಾಗೂ ತೃತೀಯ ಬಹುಮಾನ 15,000 ರೂಪಾಯಿ ನಗದು ಬಹುಮಾನ ಸಿಗಲಿದೆ ಎಂದು ಸರ್ಕಾರ ತಿಳಿಸಿದೆ ರೀಲ್ಸ್‌ನಲ್ಲಿ ಏನಿರಬೇಕು?ನೀವು ಮಾಡುವ ರೀಲ್ಸ್ ಈ ಕೆಳಗಿನ ಅಂಶಗಳನ್ನು ಒಳಗೊಂಡಿರಬೇಕು.*ಮೂಲಭೂತ ಕರ್ತವ್ಯಗಳು*ಮೂಲಭೂತ ಹಕ್ಕುಗಳು*ಸಂವಿಧಾನದ ಮಹತ್ವ*ಪೀಠಿಕೆಯ…

Read More