Author: AIN Author

ಕಂಪ್ಲಿ : ಕಂಪ್ಲಿ ತಾಲ್ಲೂಕಿನಲ್ಲಿ ಜಿಲ್ಲೆಯಲ್ಲಿ “ಸಂವಿಧಾನ ಜಾಗೃತಿ ಜಾಥಾ” ಕಾರ್ಯಕ್ರಮವು ಯಶಸ್ವಿಯಾಗಿ ನಡೆಯುತ್ತಿದ್ದು, ಬುಧವಾರರಂದು ಕಂಪ್ಲಿ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ ಮಾರ್ಗದಲ್ಲಿ ಸಂಚರಿಸಿತು. ಸಂಚಾರದಲ್ಲಿ ಸಂವಿಧಾನದ ಆಶಯ ಮತ್ತು ಮೌಲ್ಯಗಳನ್ನು ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು. ಸಂವಿಧಾನ ರಚನಾ ಸಭೆ ಹಾಗೂ ಸಂವಿಧಾನದ ಕುರಿತ ವೀಡಿಯೋ ತುಣುಕುಗಳನ್ನು ಸಾರ್ವಜನಿಕರಿಗೆ ಪ್ರದರ್ಶಿಸಲಾಯಿತು. ಸಂವಿಧಾನ ಪ್ರಸ್ತಾವನೆಯ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿ ಜಾಥಾದ ಉದ್ದಕ್ಕೂ ಸಂವಿಧಾನ ಪ್ರಸ್ತಾವನೆಯ ಪ್ರತಿಗಳನ್ನು ಹಂಚಿಕೆ ಮಾಡಲಾಯಿತು. ಜಾಥಾವನ್ನು ಪ್ರತೀ ಗ್ರಾಮಗಳಲ್ಲಿಯೂ ಕಳಶ ಹಿಡಿದು, ಪೂರ್ಣ ಕುಂಭ ಹೊತ್ತ ಮಹಿಳೆಯರು, ನೇತಾರರ ವೇಷ ಭೂಷಣಗಳನ್ನು ಧರಿಸಿದ ವಿದ್ಯಾರ್ಥಿಗಳು, ಹಲಗೆ ಮತ್ತು ಡೊಳ್ಳು ಕಲಾವಿದರು, ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು, ಗ್ರಾಮದ ಜನಪ್ರತಿನಿಧಿಗಳು, ಊರಿನ ಮುಖಂಡರು ಹಾಗೂ ಸಾರ್ವಜನಿಕರು ಅದ್ದೂರಿಯಾಗಿ ಸ್ವಾಗತಿಸಿದರು. ನಂತರ ಕಂಪ್ಲಿ ತಾಸಿಲ್ದಾರ್ ಎಸ್ ಶಿವರಾಜ್ ಶಿವಪುರ್ ಅವರ ಮಾತನಾಡಿ ರಾಜ್ಯ ಸರ್ಕಾರವು ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಹಮ್ಮಿಕೊಂಡಿರುವುದು ಶ್ಲಾಘನೀಯವಾಗಿದೆ. ನಮ್ಮ ಸಂವಿಧಾನವು ಪ್ರಪಂಚದಲ್ಲಿಯೇ…

Read More

ಹಾವೇರಿ: 40% ಕಮಿಷನ್ ಆರೋಪದ ತನಿಖೆ ವಿಚಾರದಲ್ಲಿ ಸರ್ಕಾರ ಕಾಲ ಹರಣ ಮಾಡುತ್ತಿರುವುದನ್ನು ಕೋರ್ಟ್ ಗಮನಿಸಿದ್ದು, ಸರಕಾರದ ಬೊಕ್ಕಸ ಖಾಲಿಯಾಗಿದೆ ಎನ್ನುವುದು ಸ್ಪಷ್ಟವಾಗಿದೆ. ನ್ಯಾಯಾಲಯವು ಸಹ ಇದನ್ನು ಹೇಳಲು ಶುರು ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಂದಿನ ಸರ್ಕಾರದ ಅವಧಿಯಲ್ಲಿ ಕೇಳಿ ಬಂದಿದ್ದ 40% ಕಮಿಷನ್ ಕುರಿತ ತನಿಖೆಯನ್ನು ಅನಗತ್ಯ ವಿಳಂಬ ಮಾಡಿತ್ತಿರುವ ಬಗ್ಗೆ ಹೈಕೋರ್ಟ್ ಗಮನಿಸಿ ಆರು ವಾರದಲ್ಲಿ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿದೆ. ಸರ್ಕಾರದಲ್ಲಿ ಹಣ ಇಲ್ಲದಿರುವುದಕ್ಕೆ ಈ ರೀತಿಯ ಕಮಿಷನ್ ಮಾಡಿಕೊಂಡು ಕುಳಿತಿದ್ದೀರಿ, ಆರು ವಾರದಲ್ಲಿ ವರದಿ ನೀಡದಿದ್ದರೆ, ಹಣ ಬಿಡುಗಡೆಗೆ ನಾವೇ ನಿರ್ದೇಶನ ನೀಡಬೇಕಾಗುತ್ತದೆ ಎಂದು ಕೋರ್ಟ್ ಹೇಳಿದೆ. ಸರಕಾರ ಈಗಲಾದರೂ ನಾಚಿಕೆ ಬಿಟ್ಟು ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರ ಮೇಲೆ ಒತ್ತಡ ಇದ್ದು, ಅವರ ಮೇಲೆ ಸರ್ಕಾರ ಒತ್ತಡ ಹೇರುತ್ತಿದೆ. ಹೀಗಾಗಿ ಅವರು ಸರ್ಕಾರದ ಪರವಾಗಿ ಮಾತನಾಡುತ್ತಿದ್ದಾರೆ. ಆ…

Read More

ಹುಬ್ಬಳ್ಳಿ: ಸಿದ್ದರಾಮಯ್ಯ ಸುಳ್ಳು ಹೇಳೋದನ್ನೆ ಕಾಯಕ ಮಾಡಿಕೊಂಡಿದ್ದಾರೆ. ಮೊದಲು NDRF ಫಂಡ್ ನಲ್ಲಿ ಇಷ್ಟು ಪ್ರಮಾಣದ ಹಣ ಕೊಡತಿಲ್ಲ. ನಾವು ಅಡ್ವಾನ್ಸ್ ಹಣ ಕೊಡ್ತೀದ್ದೇವೆ. ಯಡಿಯೂರಪ್ಪ ಅದೇ ಹಣವನ್ನು ಬರಗಾಲ ಬಂದಾಗ ಹಂಚಿಕೆ ಮಾಡಿದ್ದಾರೆ. ಸಿದ್ದರಾಮಯ್ಯ ಆರ್ಥಿಕ ದುಸ್ಥಿತಿಗೆ ತಂದು ಕೇಂದ್ರದತ್ತ ಬೊಟ್ಟು ಮಾಡ್ತೀದಾರೆ. ನಾವ ಒಂದೇ ಒಂದು ರೂಪಾಯಿ GST ಹಣ ಕೊಡೋದು ಬಾಕಿ ಇಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, NDRF ನಲ್ಲಿ ನಾವು 12 ಸಾವಿರ ಕೋಟಿ ಕೊಟ್ಟಿದ್ದೇವೆ. ಡೆವಲೂಷನ್ ಫಂಡ್ ಅವರ ಕಾಲದಲ್ಲಿ 60 ಸಾವಿರ ಕೋಟಿ. ನಮ್ಮ ಕಾಲದಲ್ಲಿ 2 ಲಕ್ಷ 36 ಸಾವಿರ ಕೋಟಿ ಕೊಟ್ಟಿದ್ದೇವೆ. ತೆರಿಗೆ ಹಂಚಿಕೆಯಲ್ಲಿ 10 ವರ್ಷದಲ್ಲಿ 81 ಸಾವಿರ ಕೋಟಿ, ನಮ್ಮ ಕಾಲದಲ್ಲಿ 2 ಲಕ್ಷ 85 ಸಾವಿರ ಕೋಟಿ ಕೊಟ್ಟಿದ್ದೇವೆ. ಇವರು ಯಾವುದೇ ಗ್ರ್ಯಾಂಟ್ ಕೊಟ್ಟಿಲ್ಲ ಅಂತೀದಾರೆ. ನಾವು ಬಡ್ಡಿ ರಹಿತ ಸಾಲ ಕೊಟ್ಟಿದ್ದೇವೆ‌. 2004…

Read More

ಹುಬ್ಬಳ್ಳಿ: ಸಿದ್ದರಾಮಯ್ಯ ಅವರದ್ದು ನಿವೃತ್ತಿ ಸಮಯ, ನಿವೃತ್ತಿ ಆಗ್ಲೇಬೇಕು. ಜನಾನೇ ಅವರನ್ನು ಮನೆಗೆ ಕಳಿಸಲು ತೀರ್ಮಾನ ಮಾಡಿದ್ದಾರೆ. ಸಿದ್ದರಾಮಯ್ಯನವರ ಡ್ರಾಮಾ ಕಂಪನಿ ಟೀಮ್ ದೆಹಲಿಗೆ ಬಂದಿತ್ತು. ಮೋದಿಯವರು ರಾಜ್ಯಕ್ಕೆ ಅತೀ ಹೆಚ್ಚು ಅನುದಾನ ಕೊಟ್ಟಿದ್ದಾರೆ. ಕಾಂಗ್ರೆಸ್‌ನವರ ಗ್ಯಾರಂಟಿಗಳಿಗೆ ವಾರಂಟಿ ಇಲ್ಲ ಎಂದು ಕೋಲಾರ ಸಂಸದ ಎಸ್.ಮುನಿಸ್ವಾಮಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಕಾಂಗ್ರೆಸ್ ಅಳಿವಿನಂಚಿನಲ್ಲಿದೆ, ಹೀಗಾಗಿ ಗಿಮಿಕ್ ಮಾಡ್ತಿದ್ದಾರೆ. ರಾಜ್ಯದಲ್ಲಿ 28ಕ್ಕೆ 28 ಗೆದ್ದೇ ಗೆಲ್ತೀವಿ. ಮನೆಗೆ ನೀರು ಬರದಿದ್ದರೂ ಮೋದಿ ಮೇಲೆ ಹಾಕ್ತಾರೆ. ಒಂದೇ ಸಮುದಾಯಕ್ಕೆ ಹತ್ತು ಸಾವಿರ ಕೊಡ್ತೇನೆ ಅಂತಾರೆ. ದೇಶ ಒಡೆಯುವ ಕೆಲಸ ಮಾಡ್ತಿದ್ದಾರೆ ಎಂದರು. ಬೆಂಗಳೂರಿನವರು ಕೇವಲ ಬೆಂಗಳೂರು ಅಭಿವೃದ್ಧಿ ಆಗಲಿ ಎಂದರೆ ಇತರರು ಏನು ಮಾಡಬೇಕು..? ಮೋದಿಯವರು ಕರ್ನಾಟಕದ ಪರವಿದ್ದಾರೆ, ಅಭಿವೃದ್ಧಿಗೆ ಎಲ್ಲಾ ಸಹಾಯ ಮಾಡಿದ್ದಾರೆ. ಸಿದ್ದರಾಮುಯ್ಯ ಸುಮ್ಮನೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಚುನಾವಣೆ ಬರ್ಲಿ, ಸಿದ್ದರಾಮಯ್ಯ ಮನೆಗೆ…

Read More

ಹುಬ್ಬಳ್ಳಿ; ಮುಖ್ಯಮಂತ್ರಿ ಸಿದ್ದರಾಮಯ್ಯಾ ಸಿದ್ದರಾಮಯ್ಯ ನಂತಹ ಸೂಗಲಾಡಿ ಇನ್ನೊಬ್ಬರು ಇಲ್ಲ ಎಂದು ಬಿಜೆಪಿ ಎಸ್ಸಿ ರಾಜ್ಯಾಧ್ಯಕ್ಷ, ಎಂಎಲ್ ಸಿ ಚಲವಾದಿ ನಾರಾಯಣಸ್ವಾಮಿ ಆರೋಪಿಸಿದರು. ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ದಲಿತರ ಮೇಲೆ ಅವರಿಗೆ ಕಾಳಜಿ ಇಲ್ಲ ಸಿದ್ದರಾಮಯ್ಯ ಬಂದು ಕಾಂಗ್ರೆಸ್‌ ಪಕ್ಷದಲ್ಲಿನ ದಲಿತರನ್ನ ಸರ್ವನಾಶ ವಾಗಿ ಹೋದರು ಎಂದರು. ಇನ್ನು ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಪ್ರಧಾನಿ ಹುದ್ದೆಗೆ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ಖರ್ಗೆ ಅವರ ಹೆಸರನ್ನು ಪ್ರಧಾನಮಂತ್ರಿ ಸೂಚನೆ ಮಾಡಿಲ್ಲ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೂಚನೆ ಮಾಡಿರುವುದು ಟಿಎಂಸಿ ಲೀಡರ್ ಮಮತಾ ಬ್ಯಾನರ್ಜಿ ಅದು ಕಾಂಗ್ರೆಸ್ಸಿಗೆ ಇರುಸು ಮರುಸು ತಂದಿದೆ ಕಾಂಗ್ರೆಸ್ನವರು ಅವರನ್ನು ಮಾಡಲಿಕ್ಕೆ ಇಚ್ಛೆ ಇಲ್ಲ. ಎರಡು ಮೂರು ಸಲ ಖರ್ಗೆಗೆ ಅವಕಾಶ ಇತ್ತು ಯಾಕೆ ಅವರಮ್ನ ಸಿಎಂ ಮಾಡಲಿಲ್ಲನಮಗೆ ರಾಹುಲ್ ಗಾಂಧಿ ಬೇಕು ಅನ್ನೋದನ್ನ ಹೇಳಿದ್ದಾರಲ್ಲ ಆ ಮೂಲಕ ಖರ್ಗೆ ಅವರನ್ನ ವಿರುದ್ಧ ಮಾಡಿದ್ದಾರೆ. ಅಷ್ಟೇ ಅಲ್ಲ ಖರ್ಗೆ ಅವರನ್ನ ಅವರನ್ನೇನಾದರೂ…

Read More

ಬೆಂಗಳೂರು: ಕಾಂಗ್ರೆಸ್ ಸರ್ಕಾರದಲ್ಲಿ ಹಣವಿಲ್ಲದೆ ದಲಿತರ ಹಣವನ್ನು ಬೇರೆ ಯೋಜನೆಗಳಿಗೆ ಬಳಸಲಾಗುತ್ತಿದೆ. ರಾಜ್ಯಪಾಲರ ಭಾಷಣದಲ್ಲಿ ಏನು ಹೇಳಿಸಬೇಕೆಂದು ತಿಳಿಯದೆ ಕೇಂದ್ರ ‌ಸರ್ಕಾರದ ಯೋಜನೆಗಳನ್ನೂ ತಮ್ಮದೇ ಎಂದು ಬಿಂಬಿಸಿಕೊಂಡಿದ್ದಾರೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ ದೂರಿದರು. ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದಡಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದಲ್ಲಿ ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯುತ್ತಿದೆ. ಸಚಿವರು ದಾರಿ ಕಾಣದಂತಾಗಿದ್ದು, ಸರ್ಕಾರ ಕೆಟ್ಟು ದುರಸ್ತಿಯಾಗದೆ ಸ್ಥಗಿತಗೊಂಡಿದೆ. ಹಣವನ್ನು ಸಮಾನವಾಗಿ ಹಂಚಬೇಕೆನ್ನುವುದು ಸರ್ಕಾರದ ಉದ್ದೇಶವಂತೆ. ಆದರೆ ತುಳಿತಕ್ಕೊಳಗಾದ ದಲಿತರಿಗೆ ಮೀಸಲಿಟ್ಟ 11,400 ಕೋಟಿ ರೂಪಾಯಿಯನ್ನು ಬೇರೆ ಕಡೆಗೆ ಬಳಸಿದ್ದಾರೆ. ಹಿಂದುಳಿದವರ ಚಾಂಪಿಯನ್‌ ಎಂದು ಹೇಳಿಕೊಂಡು ಈ ರೀತಿ ಮಾಡುತ್ತಿದ್ದಾರೆ. ಇಂತಹ ಘನ ಕಾರ್ಯಕ್ಕೆ ಆ ಹಣ ಬಳಸಿದ್ದೇವೆ ಎಂದು ಸ್ಪಷ್ಟಪಡಿಸಲಿ ಎಂದು ಆಗ್ರಹಿಸಿದರು. ಇನ್ನೂ ಐವತ್ತು ಗ್ಯಾರಂಟಿಯಾದರೂ ಮಾಡಿ. ಆದರೆ ಗ್ಯಾರಂಟಿ ಹೆಸರಲ್ಲಿ ಜನರಿಗೆ ಮೋಸ ಮಾಡಬೇಡಿ. ಮಕ್ಕಳು ಬಸ್ಸಿಲ್ಲದೆ ಜೆಸಿಬಿ, ಕಲ್ಲು ತುಂಬಿಕೊಂಡ ಲಾರಿಯಲ್ಲಿ ಪ್ರಯಾಣಿಸುತ್ತಿದ್ದಾರೆ. ಬಸ್ಸುಗಳಿಲ್ಲದೆ, ರೂಟ್‌ಗಳನ್ನು ರದ್ದು ಮಾಡಿ ಜನರಿಗೆ…

Read More

ಬಳ್ಳಾರಿ: ಚರಂಡಿಯಲ್ಲಿ ಎರಡು ದಿನದ ನವಜಾತ ಶಿಶು ಮೃತದೇಹ ಪತ್ತೆಯಾಗಿರುವ ಘಟನೆ ಬಳ್ಳಾರಿಯ ರಾಜೋತ್ಸವ ನಗರದಲ್ಲಿ ನಡೆದಿದೆ. 2 ದಿನದ ಹಿಂದೆ ಜನನವಾದ ಗಂಡು ಶಿಶುವಾಗಿದ್ದು, ಚರಂಡಿಯಲ್ಲಿದ್ದ ಶಿಶುವಿನ ಮೃತ ದೇಹ ಸ್ಥಳೀಯರು ಹೊರ ತೆಗೆದಿದ್ದಾರೆ. ಮಗುವಿನ ಪೋಷಕರು ಪತ್ತೆಯಾಗದ ಹಿನ್ನೆಲೆ ಸ್ಥಳಕ್ಕೆ ಬ್ರೂಸ್ ಪೇಟ್ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More

ಬೆಂಗಳೂರು: ಆಸ್ತಿ ತೆರಿಗೆ ಬಾಕಿ ಹಿನ್ನೆಲೆಯಲ್ಲಿ ಈವರೆಗೆ ಮಂತ್ರಿ ಮಾಲ್ ಗೆ ಸಂಕಷ್ಟ ಎದುರಾಗಿದ್ದನ್ನು ನೋಡಿದ್ದೇವೆ. ಇದೀಗ ಖ್ಯಾತ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಗೆ ಬಿಬಿಎಂಪಿ ಬಿಗ್ ಶಾಕ್ ನೀಡಿದ್ದು, ತಮ್ಮ ಮಾಲ್ ಗೆ ಬೀಗ ಜಡೆದಿದ್ದಾರೆ.. ಅದ್ಯಾಕೆ ಅಂತೀರಾ ಈ ಸ್ಟೋರಿ ನೋಡಿ.. ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ದೊಡ್ಡ ದೊಡ್ಡ ವಾಣಿಜ್ಯ ಕಟ್ಟಡಗಳ ವಿರುದ್ಧ ಪಾಲಿಕ ಕ್ರಮ ಕೈಗೊಳ್ಳುತ್ತಿದೆ. ನೋಟಿಸ್​ ನೀಡಿದರು ತೆರಿಗೆ ಕಟ್ಟದ ಅಂಗಡಿಗಳು, ವಾಣಿಜ್ಯ ಮಳಿಗೆಗಳಿಗೆ ಬೀಗಮುದ್ರೆ ಹಾಕುತ್ತಿದೆ. ಇದೀಗ ಕೋಟ್ಯಂತರ ರೂಪಾಯಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ರಾಕ್​ಲೈನ್​ ಮಾಲ್​​ಗೂ ಬೀಗಮುದ್ರೆ ಹಾಕಿದೆ. Gruha Lakshmi Scheme: ಅರ್ಜಿ ಸಲ್ಲಿಸಿದ್ರೂ 2000 ರೂ. ಬಂದಿಲ್ಲವೇ..? ಇದು ಕೂಡ ಕಾರಣ ಆಗಿರಬಹುದು.! ಈಗಲೇ ಸರಿಪಡಿಸಿ ನಟ, ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್ ಒಡೆತನದ ಟಿ.ದಾಸರಹಳ್ಳಿಯ ಪ್ರಶಾಂತ್ ನಗರದಲ್ಲಿರುವ ರಾಕ್​​ಲೈನ್​​ ಮಾಲ್​ 2011 ರಿಂದ 2023ರವರೆಗೆ 11.51 ಕೋಟಿ ರೂ. ಆಸ್ತಿ…

Read More

ಮಂಡ್ಯ: ಬೆಂಗಳೂರು -ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಡಿವೈಡರ್ ಹಾರಿ ಎದುರಿಗೆ ಬರುತ್ತಿದ್ದ ಕಾರಿಗೆ ಮತ್ತೊಂದು ಕಾರು ಡಿಕ್ಕಿಯಾಗಿ ಕಾರಿನಲ್ಲಿ ಇದ್ದ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಶ್ರೀರಂಗಪಟ್ಟಣ ತಾಲ್ಲೂಕಿನ ಟಿ.ಎಂ.ಹೊಸೂರು ಗ್ರಾಮದ ಬಳಿ ಘಟನೆ ನಡೆದಿದೆ. ಮೈಸೂರು ಕಡೆಗೆ ಹೋಗುತ್ತಿದ್ದ ಸ್ವಿಫ್ಟ್ ಕಾರು ಮತ್ತು ಬೆಂಗಳೂರು ಕಡೆಗೆ ತೆರಳುತ್ತಿದ್ದ ವರ್ಣಾ ಕಾರು ನಡುವೆ ಅಪಘಾತ ಸಂಭವಿಸಿದೆ. ವರ್ಣಾ ಕಾರು ಡಿವೈಡರ್ ಹಾರಿ ಎದುರಿಗೆ ಬಂದ ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಮೂವರಿಗೆ ಗಂಭೀರ ಗಾಯವಾಗಿದೆ. ಗಾಯಗೊಂಡವರನ್ನು ಮೈಸೂರು ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More

ಬೆಂಗಳೂರು: ನಮ್ಮ ಮೆಟ್ರೋ ಬೆಂಗಳೂರಿನಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ಮಾರ್ಗಗಳ ವಿಸ್ತರಣೆ ಕೂಡಾ ಆಗುತ್ತಿದೆ. ಲಕ್ಷಾಂತರ ಜನಕ್ಕೆ ನಮ್ಮ ಮೆಟ್ರೋದಿಂದ ಅನುಕೂಲ ಆಗಿದೆ. ಹೀಗಾಗಿರುವಾಗಲೇ ನಮ್ಮ ಮೆಟ್ರೋ ಸಾಕಷ್ಟು ಅಪ್‌ ಗ್ರೇಡ್‌ ಆಗುತ್ತಿದೆ. ಶೀಘ್ರದಲ್ಲೇ ನಮ್ಮ ಮೆಟ್ರೋ ಹಳಿಗಳಿಗೆ ಚಾಲಕ ರಹಿತ ಮೆಟ್ರೋ ರೈಲು ಕಾರ್ಯಾಚರಣೆ ಮಾಡಲಾಗಿದೆ. ಬಹಳ ಕಾತುರದಿಂದ ಕಾಯುತ್ತಿದ್ದ ಬೆಂಗಳೂರು ಜನತೆಗೆ ಇದೀಗ ಸಿಹಿಸುದ್ದಿಯೊಂದು ಬಂದಿದ್ದು, ಚೀನಾದಿಂದ ಹಳದಿ ಮೆಟ್ರೋ ಕೊನೆಗೂ ಬೆಂಗಳೂರಿನ ಹೆಬ್ಬಗೋಡಿ ಡಿಪೋಗೆ ತಲುಪಿದೆ.ಇಂದು ಬೆಳಗ್ಗಿನ ಜಾವ 3:30ರ ಸುಮಾರಿಗೆ 6 ರೈಲಿನ ಕೋಚ್‌ಗಳು ಸುರಕ್ಷಿತವಾಗಿ ಹೆಬ್ಬಗೋಡಿ ಡಿಪೋಗೆ ತಲುಪಿರುವುದಾಗಿ ನಮ್ಮ ಮೆಟ್ರೋ ಟ್ವಿಟ್ಟರ್ ಖಾತೆಯಲ್ಲಿ ಅಧಿಕೃತವಾಗಿ ತಿಳಿಸಿದೆ. Gruha Lakshmi Scheme: ಅರ್ಜಿ ಸಲ್ಲಿಸಿದ್ರೂ 2000 ರೂ. ಬಂದಿಲ್ಲವೇ..? ಇದು ಕೂಡ ಕಾರಣ ಆಗಿರಬಹುದು.! ಈಗಲೇ ಸರಿಪಡಿಸಿ ಎಲೆಕ್ಟ್ರಾನಿಕ್ ಸಿಟಿ ಮೆಟ್ರೋ ಮಾರ್ಗಕ್ಕಾಗಿ ಚೀನಾದಿಂದ ಈ ರೈಲಿನ ಬೋಗಿಗಳನ್ನು ತರಿಸಲಾಗಿದೆ.ನಾಲ್ಕು ತಿಂಗಳ ಕಾಲ 37 ಪರೀಕ್ಷೆಗಳು ನಡೆಯಲಿದ್ದು, ಒಟ್ಟು 45 ದಿನಗಳವರೆಗೆ ಸಿಗ್ನಲಿಂಗ್ ಪರೀಕ್ಷೆಗಳು…

Read More