Author: AIN Author

ಭಾರತೀಯ ಬಹುರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯಾಗಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ತನ್ನ ಮನೆಯಿಂದಲೇ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ಈಗಾಗಲೇ ಹಲವು ಬಾರಿ ಕಚೇರಿಗೆ ಬಂದು ಕೆಲಸ ಮಾಡುವಂತೆ ಸೂಚಿಸಿದ್ದು, ಕಚೇರಿಯಿಂದಲೇ ಕೆಲಸ ಮಾಡುವ ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಿದೆ. ಅದಾಗ್ಯೂ ಕೆಲ ಉದ್ಯೋಗಿಗಳು ಇನ್ನೂ ಮನೆಯಿಂದಲೇ ಕೆಲಸ ಮುಂದುವರೆಸಿದ್ದಾರೆ. ಇಂತಹ ಉದ್ಯೋಗಿಗಳಿಗೆ ಮಾರ್ಚ್ ಅಂತ್ಯದೊಳಗೆ ಕಚೇರಿಗೆ ಬರುವುದಕ್ಕೆ ತನ್ನ ಅಂತಿಮ ಗಡುವನ್ನು ಸಂಸ್ಥೆ ವಿಸ್ತರಿಸಿದ್ದು, ಇದು ತನ್ನ ಕೊನೆಯ ಸೂಚನೆಯಾಗಿದ್ದು, ಒಂದು ವೇಳೆ ಈ ಸೂಚನೆಯನ್ನು ಪಾಲಿಸದೇ ಹೋದಲ್ಲಿ ಕಾನೂನು ಪರಿಣಾಮ ಎದುರಿಸಿ ಎಂದು ತನ್ನ ಉದ್ಯೋಗಿಗಳಿಗೆ ಎಚ್ಚರಿಕೆ ನೀಡಿದೆ  ಎಂದು ಇಕನಾಮಿಕ್ ಟೈಮ್ಸ್ ವರದಿ ಮಾಡಿದೆ.  https://ainlivenews.com/is-it-good-if-a-lizard-falls-on-me-ominous-here-is-the-answer/ ತನ್ನ ಈ ಸೂಚನೆಯನ್ನು ಅಂತಿಮ ಕರೆ ಎಂದು ಹೇಳಿರುವ ಈ ಸಾಫ್ಟ್‌ವೇರ್ ಸಂಸ್ಥೆ ಟಿಸಿಎಸ್ ಕಳೆದ ವರ್ಷದ ಅಕ್ಟೋಬರ್‌ನಲ್ಲಿಯೇ ತನ್ನ ಉದ್ಯೋಗಿಗಳಿಗೆ ವಾರದಲ್ಲಿ ಐದು ದಿನ ಕಚೇರಿಯಿಂದಲೇ ಕೆಲಸ ಮಾಡುವುದನ್ನು ಕಡ್ಡಾಯಗೊಳಿಸಿತ್ತು. ನಾವು ತಾಳ್ಮೆಯಿಂದ ಗಮನಿಸುತ್ತಿದ್ದೇವೆ. ಉದ್ಯೋಗಿಗಳು ಕಚೇರಿಗೆ ಮರಳಬೇಕು ಎಂಬ ತಾತ್ವಿಕ ನಿಲುವನ್ನು…

Read More

ತುಮಕೂರು : ಲೋಕಸಭೆ ಚುನಾವಣೆ ಬೆನ್ನಲ್ಲೇ ತುಮಕೂರು ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಈ ಬೆಳವಣಿಗೆ ಬೆನ್ನಲ್ಲೇ ಬಿಜೆಪಿ-ಜೆಡಿಎಸ್‌ ಮೈತ್ರಿಗೆ ಗೆಲ್ಲಬಲ್ಲ ಪ್ರಬಲ ಅಭ್ಯರ್ಥಿಯ ಆಯ್ಕೆ ಸವಾಲಾಗಿದೆ. ಬಿಜೆಪಿಯಿಂದ ಕಣಕ್ಕಿಳಿಯಲು ಮಾಜಿ ಸಚಿವ ವಿ. ಸೋಮಣ್ಣ ಕಸರತ್ತು ನಡೆಸುತ್ತಿರುವುದು ಗುಟ್ಟೇನಲ್ಲ. ಮಾಜಿ ಸಚಿವ ಮಾಧುಸ್ವಾಮಿ ಸ್ಪರ್ಧೆಗೆ ನಾನು ಸಿದ್ಧ ಎಂದಿದ್ದಾರೆ. ಇದರ ಬೆನ್ನಲ್ಲೆ ನನ್ನ ಕೈಗೆ ಸರ್ಕಾರ ಸಿಕ್ಕಿದ್ದರೆ ಉರ್ದು ಮಾಧ್ಯಮ ಶಿಕ್ಷಣವನ್ನೇ ರದ್ದು ಮಾಡುತಿದ್ದೆ ಎಂದು ಮಾಜಿ ಸಚಿವ ಮಾಧುಸ್ವಾಮಿ ಹೇಳಿಕೆ ನೀಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಎಸ್ಎಸ್‌ಎಲ್‌ಸಿವರೆಗೂ ಮಾತ್ರ ಉರ್ದು ಮೀಡಿಯಂ ಇರೋದು. ಪಿಯುಸಿ ಮತ್ತು ಡಿಗ್ರಿಯಲ್ಲಿ ಉರ್ದು ಮೀಡಿಯಂ ಇಲ್ಲ. ಉರ್ದು ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ನಂತರ ಏನು ಮಾಡ್ತಾರೆ ಎಂದು ಪ್ರಶ್ನಿಸಿದ್ದಾರೆ. ರಾಜ್ಯ ನಡೆಸುವವರು ಯಾರೂ ಕೂಡ ಉರ್ದು ಓದಿ ಅತಂತ್ರರಾದ ವಿದ್ಯಾರ್ಥಿಗಳ ಬಗ್ಗೆ ಯೋಚನೆ ಮಾಡಿಲ್ಲ. https://ainlivenews.com/2000-rs-didnt-come-this-could-also-be-the-reason-fix-it-now/ ಆ ಸಮುದಾಯ ಶೈಕ್ಷಣಿಕವಾಗಿ ವೈಫಲ್ಯ ಅನುಭವಿಸಲು ರಾಜಕಾರಣಿಗಳಾದ ನಾವೇ ಕಾರಣ. ಕೇರಳ ಮತ್ತು ತಮಿಳುನಾಡಿನಲ್ಲಿ ಮುಸ್ಲಿಂ…

Read More

ಅಬುಧಾಬಿ:- ಯುಎಇ ಹಿಂದು ದೇಗುಲದ ಶಿಲೆಯಲ್ಲಿ ‘ವಸುದೈವ ಕುಟುಂಬಕಂ’ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೆತ್ತಿದ್ದಾರೆ. ಅಬುಧಾಬಿಯಲ್ಲಿ ನಿರ್ಮಾಣ ಮಾಡಲಾಗಿರುವ ದೇಶದ ಮೊದಲ ಹಿಂದೂ ದೇವಾಲಯವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದರು. ದೇಗುಲ ಲೋಕಾರ್ಪಣೆಗೂ ಮೊದಲು ಮೋದಿ ಅವರು, ಬಿಎಪಿಎಸ್ ಹಿಂದೂ ದೇವಾಲಯದಲ್ಲಿ ‘ವಸುಧೈವ ಕುಟುಂಬಕಂ’ ಸಂದೇಶವನ್ನು ಕಲ್ಲಿನ ಮೇಲೆ ಕೆತ್ತಿದ್ದಾರೆ. ಈ ಕುರಿತಾದ ವಿಡಿಯೋ ಕೂಡ ವೈರಲ್ ಆಗಿದೆ. ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಅಬುಧಾಬಿಯಲ್ಲಿ ಭವ್ಯವಾದ ಮತ್ತು ಪವಿತ್ರವಾದ ದೇವಾಲಯವು ಉದ್ಘಾಟನೆಯಾಗಿದ್ದು, ಇದೊರಂದಿಗೆ ಯುಎಇ ಮಾನವ ಇತಿಹಾಸದಲ್ಲಿ ಸುವರ್ಣ ಅಧ್ಯಾಯವನ್ನು ಬರೆದಿದೆ. ವರ್ಷಗಳ ಪರಿಶ್ರಮದಿಂದ ಈ ದೇವಾಲಯವನ್ನು ನಿರ್ಮಿಸಲಾಗಿದೆ ಮತ್ತು ಬಹುಕಾಲದ ಕನಸು ನನಸಾಗಿದೆ. ಭಗವಾನ್ ಸ್ವಾಮಿನಾರಾಯಣ ಅವರ ಆಶೀರ್ವಾದವೂ ಇದೆ. ಭಾರತದ ಮೇಲಿನ ನಿಮ್ಮ ಪ್ರೀತಿ ಮತ್ತು ಯುಎಇ ಉಜ್ವಲ ಭವಿಷ್ಯಕ್ಕಾಗಿ ನಿಮ್ಮ ದೃಷ್ಟಿಯ ಪ್ರತಿಬಿಂಬ ಎಂದು ನಾನು ಇಲ್ಲಿ ಬಿಎಪಿಎಸ್ ಮಂದಿರದ ನಿರ್ಮಾಣವನ್ನು ಪರಿಗಣಿಸುತ್ತೇನೆ. ನಿಮ್ಮ ಬೆಂಬಲವಿಲ್ಲದೆ ಇದು ಸಾಧ್ಯವಾಗುತ್ತಿರಲಿಲ್ಲ.…

Read More

ಇದು ಐಎಎಸ್ ಅಧಿಕಾರಿಯಾಗಿ ಪರಿವರ್ತನೆಗೊಂಡ ಮಾಜಿ ಶಸ್ತ್ರಚಿಕಿತ್ಸಕಿ ರೇಣು ರಾಜ್ ಅವರ ಸ್ಪೂರ್ತಿದಾಯಕ ಕಥೆ. ಕೇರಳದ ಕೊಟ್ಟಾಯಂನಿಂದ ಬಂದಿರುವ ರೇಣು ರಾಜ್ ಅವರ ಪಾಲನೆಯು ಮಧ್ಯಮ ವರ್ಗದ ಕುಟುಂಬದಲ್ಲಿ ಶುರುವಾಯಿತು. ಅವರ ತಂದೆ ಸರ್ಕಾರಿ ಕೆಲಸದಲ್ಲಿ ಇದ್ದರು. ಕೊಟ್ಟಾಯಂನ ಗೌರವಾನ್ವಿತ ಸರ್ಕಾರಿ ವೈದ್ಯಕೀಯ ಕಾಲೇಜಿನಿಂದ ವೈದ್ಯಕೀಯ ಪದವಿ ಪಡೆಯುವ ಮೊದಲು ಅವರು ಚಂಗನಾಸ್ಸೆರಿಯ ಸೇಂಟ್ ತೆರೇಸಾಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ತಮ್ಮ ಆರಂಭಿಕ ಶಿಕ್ಷಣವನ್ನು ಪಡೆದರು. ಶಸ್ತ್ರಚಿಕಿತ್ಸಕಿಯಾಗಿ ಅಭ್ಯಾಸ ಮಾಡುತ್ತಿರುವಾಗ, ರೇಣು ರಾಜ್ ಅವರು ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸುವ ನಿರ್ಧಾರ ಮಾಡಿದರಂತೆ. ಶ್ರದ್ಧೆಯಿಂದ ಪ್ರಯತ್ನ ಮತ್ತು ಸಮರ್ಪಣೆಯೊಂದಿಗೆ, ಅವರು ಈ ಪರೀಕ್ಷೆಯಲ್ಲಿ ಉತ್ತೀರ್ಣರಾದರು, ಅಷ್ಟೇ ಅಲ್ಲದೆ ತಮ್ಮ ಮೊದಲ ಪ್ರಯತ್ನದಲ್ಲಿಯೇ 2ನೇ ರ್ಯಾಂಕ್ ಸಹ ಪಡೆದರಂತೆ. ಸಾರ್ವಜನಿಕ ಸೇವೆಗೆ ರೇಣು ಅವರ ಬದ್ಧತೆಯಿಂದಾಗಿ ಅವರು ತಮ್ಮ ವೈದ್ಯಕೀಯ ವೃತ್ತಿಜೀವನವನ್ನು ತೊರೆದು ಆಡಳಿತಾತ್ಮಕ ಪಾತ್ರಗಳಿಗಾಗಿ ತಮ್ಮ ಉತ್ಸಾಹವನ್ನು ಮುಂದುವರಿಸಲು ಕಾರಣವಾಯಿತು. ಮುನ್ನಾರ್‌ನ ಸುಂದರವಾದ ಗಿರಿಧಾಮದಲ್ಲಿ ಅನಧಿಕೃತ ನಿರ್ಮಾಣಗಳು ಮತ್ತು ಭೂ ಅತಿಕ್ರಮಣಗಳ…

Read More

ಬೆಂಗಳೂರು:- ನಾನು ರಾಮನ ಶ್ಲೋಕ ಹೇಳುತ್ತೇನೆ, ನೀವು ಹೇಳುತ್ತೀರಾ ಎಂದು ವಿಪಕ್ಷ ನಾಯಕ ಅಶೋಕ್​ಗೆ ಶಾಸಕ ರವಿ ಗಣಿಗ ಸವಾಲು ಹಾಕಿದ್ದಾರೆ. ವಿಧಾನಸಭೆಯಲ್ಲಿ ಶ್ರೀರಾಮನ ವಿಚಾರವಾಗಿ ವಿಪಕ್ಷ ನಾಯಕ ಅಶೋಕ್ ಮತ್ತು ಶಾಸಕ ರವಿ ಗಣಿಗ ನಡುವೆ ಜಟಾಪಟಿ ನಡೆದಿದ್ದು, ಈ ವೇಳೆ ವಿಪಕ್ಷ ನಾಯಕನಿಗೆ ಕಾಂಗ್ರೆಸ್ ಶಾಸಕ ಹೀಗೊಂದು ಸವಾಲ್ ಹಾಕಿದ ಸನ್ನಿವೇಶ ಜರುಗಿದೆ ರಾಮಮಂದಿರ ವಿಚಾರವಾಗಿ ಚರ್ಚೆ ನಡೆಯುತ್ತಿದ್ದಾಗ ಶ್ಲೋಕ ಹೇಳಿದ ರವಿ ಗಣಿಗ, ಶ್ರೀ ರಾಮ ರಾಮ ರಾಮೇತಿ ರಮೇ ರಮೇ ಮನೋರಮೇ ಸಹಸ್ರನಾಮ ತತ್ತುಲ್ಯಂ ರಾಮ ನಾಮ ವರಾನನೇ ಇದನ್ನು ನೀವು ಒಮ್ಮೆ ಹೇಳಿ ನೋಡೋಣ ಎಂದು ಪದೇ ಪದೇ ಹೇಳಿ ವಿಪಕ್ಷ ನಾಯಕರ ಕಾಲೆಳೆದರು. ಅಶೋಕ್ ಮಾತ್ರ ಅವರ ಮಾತು ಕೇಳಿಯೂ ಕೇಳದಂತೆ ಮಾತು ಮುಂದುವರಿಸಿದರು. ಇನ್ನೂ ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಮ ರಾಜಕೀಯ ಜೋರಾಗುತ್ತಿದೆ. ರಾಮ-ಸೀತೆ ಬಗ್ಗೆ ಕೆಟ್ಟದಾಗಿ ಯಾರೂ ಮಾತಾಡಬಾರದು. ಕೆಟ್ಟದಾಗಿ ಮಾತಾಡಿದ್ದರೆ ಅದು ಕಡತಕ್ಕೆ ಹೋಗಬಾರದು. ರಾಮನನ್ನ ನಾವು ಪೂಜೆ…

Read More

ಮೂರ್ತಿ ಚಿಕ್ಕದಾದರೂ ಕೀರ್ತಿ ಎನ್ನುವ ಗಾದೆ ಮಾತಿನಂತೆ ತುಂಬೆ ಗಿಡವು ನೋಡುವುದಕ್ಕೆ ಸಣ್ಣದಾಗಿ ಕಂಡರೂ ಆರೋಗ್ಯದ ವಿಚಾರದಲ್ಲಿ ದೊಡ್ಡದು. ಎಲ್ಲಾ ತರಹದ ಮಣ್ಣಿನಲ್ಲೂ ಮತ್ತು ವಾತಾವರಣದಲ್ಲೂ ಬೆಳೆಯುವ ತುಂಬೆಗಿಡದಲ್ಲಿ ಉತ್ತಮ ಔಷಧೀಯ ಗುಣಗಳಿವೆ. 10 ಮಿಲಿ ತುಂಬೆಗಿಡದ ರಸದ ಜೊತೆ 5 ಗ್ರಾಂ ಕರಿಮೆಣಸಿನ ಪುಡಿಯನ್ನು ಬೆರೆಸಿ ನಿಯಮಿತವಾಗಿ ಸೇವಿಸಿದರೆ ವಿಷಮಜ್ವರವು ಕಡಿಮೆಯಾಗುತ್ತದೆ. Be Alert: ಪೋಷಕರೆ ಎಚ್ಚರ : ರಾಜ್ಯದಲ್ಲಿ ಹೆಚ್ಚಾಗುತ್ತಿದೆ ಮಂಗನಬಾಹು ಕಾಯಿಲೆ! ಲಕ್ಷಣಗಳು ಯಾವುವು ? -ತಲೆನೋವು , ತಲೆ ಭಾರ ಮತ್ತು ಮೂಗು ಕಟ್ಟಿದಲ್ಲಿ , ತುಂಬೆಗಿಡದ ಖಾಂಡವನ್ನು ನೀರಿನಲ್ಲಿ ಕುದಿಸಿ ಅದರ ಹಬೆಯನ್ನು ತೆಗೆದುಕೊಂಡರೆ, ತಲೆನೋವು, ತಲೆ ಭಾರ ಕಡಿಮೆಯಾಗುತ್ತದೆ. ನಿಗದಿತ-ನಿಯಮಿತ ಪ್ರಮಾಣದಲ್ಲಿ ತುಂಬೆಗಿಡದ ರಸಕ್ಕೆ ಅಕ್ಕಿತೊಳೆದ ನೀರನ್ನು ಬೆರೆಸಿ ಸೇವಿಸಿದರೆ ಮತ್ತು ಅದೇ ಮಿಶ್ರಣದಿಂದ ಕಣ್ಣನ್ನು ತೊಳೆಯುತ್ತಿದ್ದರೆ ಕಣ್ಣಿನ ಸಮಸ್ಯೆ ದೂರವಾಗುತ್ತದೆ. -ದೇಹದಲ್ಲಿ ಯಾವುದೇ ತರಹದ ಊತವಿದ್ದಲ್ಲಿ ತುಂಬೆ ಸೊಪ್ಪಿನ ಕಷಾಯದಿಂದ ಶಾಕವನ್ನು ಕೊಟ್ಟರೆ ಊತ ಕಡಿಮೆಯಾಗುತ್ತದೆ. – 15 ಮಿಲಿ ತುಂಬೆಗಿಡದ ಕಷಾಯಕ್ಕೆ…

Read More

ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ 3 ಪಂದ್ಯಗಳ ಟಿ20-ಐ ಸರಣಿಗೆ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ಬಲಿಷ್ಠ 14 ಸದಸ್ಯರ ತಂಡವನ್ನು ಪ್ರಕಟಿಸಿದೆ.  2022ರ ಚುಟುಕು ವಿಶ್ವಕಪ್ ನಂತರ ಆಸ್ಟ್ರೇಲಿಯಾದ ಅನುಭವಿ ವೇಗಿಗಳಾದ ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್ ಹಾಗೂ ಜಾಸ್ ಹೇಝಲ್ ವುಡ್ ಟಿ20-ಐ ತಂಡಕ್ಕೆ ಮರಳಿದ್ದಾರೆ. ಮೂರನೇ ಮಗುವಿನ ನಿರೀಕ್ಷೆಯಲ್ಲಿರುವ ಬ್ಲ್ಯಾಕ್ ಕ್ಯಾಪ್ಸ್ ನಾಯಕ ಕೇನ್ ವಿಲಿಯಮ್ಸನ್ ಹಾಗೂ ಗಾಯದ ಸಮಸ್ಯೆಗೆ ಒಳಗಾಗಿರುವ ಡೇರಿಲ್ ಮಿಚೆಲ್‌ಗೆ ಸರಣಿಯಿಂದ ವಿಶ್ರಾಂತಿ ನೀಡಿದ್ದು, ಯುವ ಆಟಗಾರರಾದ ರಚಿನ್ ರವೀಂದ್ರ ಹಾಗೂ ಜಾಸ್ ಕ್ಲಾರ್ಕ್ಸನ್ ಗೂ 14 ಸದಸ್ಯರ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ. ಪವರ್ ಫುಲ್ ಆಲ್ ರೌಂಡರ್ ಆಗಿರುವ ಕ್ಲಾರ್ಕ್ಸನ್ ಆಸ್ಟ್ರೇಲಿಯಾ ಸರಣಿ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಲು ಹೊರಟಿದ್ದಾರೆ. ಆಸ್ಟ್ರೇಲಿಯಾ ಸರಣಿಗೂ ಮುನ್ನವೇ ನ್ಯೂಜಿಲೆಂಡ್ ಗಾಯದ ಸಮಸ್ಯೆ ಅನುಭವಿಸುತ್ತಿದ್ದು, ಪಾದದ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಡೇರಿಲ್ ಮಿಚೆಲ್ ಜೊತೆಗೆ ವಿವಿಧ ಗಾಯದ ಸಮಸ್ಯೆಗೆ ಒಳಗಾಗಿರುವ ಮಿಚೆಲ್ ಬ್ರೇಸ್ ವೆಲ್ ಹಾಗೂ…

Read More

ರಕ್ತ ಪರೀಕ್ಷೆಯಿಂದಲೇ 6 ತಿಂಗಳೊಳಗೆ ಸಂಭವಿಸಲಿರುವ ಹೃದಯಾಘಾತ ಪತ್ತೆ ಸಾಧ್ಯ ಎಂದು ಅಧ್ಯಯನ ಒಂದು ಹೇಳಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ ಹೃದಯ ರಕ್ತನಾಳದ ಕಾಯಿಲೆಗಳಿಂದ ಪ್ರತಿ ವರ್ಷ ಸುಮಾರು 17.9 ಮಿಲಿಯನ್ ಸಾವುಗಳು ವರದಿಯಾಗುತ್ತವೆ. ಐದು CVD ಸಾವುಗಳಲ್ಲಿ ನಾಲ್ಕಕ್ಕಿಂತ ಹೆಚ್ಚು ಹೃದಯಾಘಾತ ಮತ್ತು ಪಾರ್ಶ್ವವಾಯುಗಳಿಂದ ಉಂಟಾಗುತ್ತದೆ ಮತ್ತು ಈ ಸಾವುಗಳಲ್ಲಿ ಮೂರನೇ ಒಂದು ಭಾಗವು 70 ವರ್ಷಕ್ಕಿಂತ ಕಡಿಮೆ ವಯಸ್ಸಿನ ಜನರಲ್ಲಿ ಅಕಾಲಿಕವಾಗಿ ಸಂಭವಿಸುತ್ತದೆ. ಆದ್ದರಿಂದ, ಹೃದಯಾಘಾತವನ್ನು ತಡೆಯಲು ಸಹಾಯ ಮಾಡುವ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದು ಮುಖ್ಯವಾಗಿದೆ. ನಮ್ಮ ಆಹಾರ, ಜೀವನಶೈಲಿ, ನಿದ್ರೆ ಮತ್ತು ಇತರ ಅಂಶಗಳು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆದಾಗ್ಯೂ, ಹೃದಯಾಘಾತದ ಅಪಾಯವನ್ನು ಹೆಚ್ಚಿಸುವ ಇತರ ಅಂಶಗಳನ್ನು ಪರಿಶೀಲಿಸುವುದು ಸಹ ಮುಖ್ಯವಾಗಿದೆ. ನಿಮಗೆ ಹೃದಯಾಘಾತದ ಅಪಾಯವಿದೆ ಎಂದು ನಿಮಗೆ ತಿಳಿದಿದ್ದರೆ, ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುವ ಕೆಲವು ಕ್ರಮಗಳನ್ನು ನೀವು ತೆಗೆದುಕೊಳ್ಳಬಹುದು. ಸ್ವೀಡನ್‌ನ ಉಪ್ಸಲಾ ವಿಶ್ವವಿದ್ಯಾನಿಲಯದ ಸಂಶೋಧಕರು…

Read More

ಇನ್ನೇನು ಬೇಸಿಗೆ ಬಂತು. ಈ ಬಾರಿಯ ಬೇಸಿಗೆ ಹಿಂದೆಲ್ಲ ಸಲಕ್ಕಿಂತಲೂ ಹೆಚ್ಚು ಹಾಟ್, ಹೆಚ್ಚು ಬಿಸಿಯಾಗಿರುವ ಲಕ್ಷಣಗಳು ಕಾಣಿಸುತ್ತಿವೆ. ಯಾಕೆಂದರೆ ಮರಗಳು ಕಡಿಮೆಯಾಗಿವೆ. ನೆರಳೇ ಇಲ್ಲ. ಬಿಲ್ಡಿಂಗ್‌ಗಳು ಜಾಸ್ತಿಯಾಗಿವೆ. ಮಣ್ಣಿನ ನೆಲಗಳೆಲ್ಲಾ ಕಾಂಕ್ರೀಟ್ ಆಗಿವೆ. ಕಟ್ಟಡಗಳೂ ಗಾಜು ಹೊದ್ದಿವೆ. ಹೀಗಾಗಿ ವಾತಾವರಣವೆಲ್ಲ ಧಗೆ, ಧಗೆ. ಅದು ಸರಿ, ಮನೆಯಲ್ಲಿ ನಿಮಗೆ ಏರ್ ಕಂಡಿಷನರ್ ಅಥವಾ ಏರ್ ಕೂಲರ್ ಬಳಸುವಷ್ಟು ಶಕ್ತಿ ಇಲ್ಲವೆಂದರೆ, ಲಾವಂಚ ಬಳಸಿ ಮನೆಯನ್ನು ಕೂಲ್ ಕೂಲ್ ಆಗಿ ಇಟ್ಟುಕೊಳ್ಳಬಹುದು. ಅದು ಹೇಗೆ ನಿಮಗೆ ಗೊತ್ತೇ? ಹೀಗೆ ಮಾಡಿ: – ಮನೆಯ ಕಿಟಕಿಗಳಿಗೆ ಲಾವಂಚದ ಹುಲ್ಲನ್ನು ಕಟ್ಟಿ. ದಿನಕ್ಕೆರಡು ಬಾರಿ ತಣ್ಣಿರನ್ನು ಅದಕ್ಕೆ ಸಿಂಪಡಿಸಿ. ಮನೆ ವಾತಾನುಕೂಲಕ್ಕಿಂತಲೂ ತಂಪಾಗಿರುತ್ತದೆ. – ಕುಡಿಯುವ ನೀರಿನ ಪಾತ್ರೆ ಅಥವಾ ಹೂಜಿಗೆ, ಲಾವಂಚದ ಹುಲ್ಲು ಅಥವಾ ಬೇರನ್ನು ಹಾಕಿ ಅರ್ಧ ಗಂಟೆ ಇಡಿ. ತಂಪಾಗಿ, ಶುದ್ಧವಾಗಿ ರುಚಿಕರವಾಗಿಯೂ ಇರುತ್ತದೆ. – ನೆನೆಸಿಟ್ಟ ಲಾವಂಚದ ಮೇಲೆ ತರಕಾರಿ, ಹಣ್ಣು ಇಟ್ಟರೆ ಪ್ರಜ್ಜೇ ಬೇಡ. ತಂಪಾಗಿ ಕೆಡದೇ…

Read More

ಮಹಾರಾಷ್ಟ್ರ: ಅಸಾಮಾನ್ಯ ಸೊಳ್ಳೆ ಸುಂಟರಗಾಳಿಗಳು ಸುತ್ತುತ್ತಿರುವುದು ಮಹಾರಾಷ್ಟ್ರದ ಪುಣೆಯ ಮುತಾ ನದಿಯ ಮೇಲೆ ಕಂಡುಬಂದಿದೆ. ಈ ಘಟನೆಯು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನಗರದ ನೈಟೈ ಲೈಫ್ ಈಗ ಇನ್ನೂ ಹೆಚ್ಚು ಝೇಂಕರಿಸುತ್ತಿದೆ ಎಂದು ನೆಟ್ಟಿಗರು ಹಾಸ್ಯ ಸಿಡಿಸುತ್ತಿದ್ದಾರೆ. ಹೌದು, ಪುಣೆಯ ಸ್ಕೈಲೈನ್‌ನಲ್ಲಿ ಗುಯ್‌ಗುಡುತ್ತಾ ಸೊಳ್ಳೆಗಳು ಸುಂಟರಗಾಳಿಯಾಗಿ ಕೇಶವನಗರ ಮತ್ತು ಖಾರಾಡಿ ಸ್ಥಳದ ಮೇಲೆ ಹಾರಿದವು.  ಘಟನೆಯ ವೀಡಿಯೊಗಳು ವೈರಲ್ ಆಗಿವೆ. ಭಯಭೀತರಾದ ನೆಟಿಜನ್‌ಗಳು ಫ್ಲೇಮ್‌ಥ್ರೋವರ್‌ಗಳಿಗೆ ಕರೆ ನೀಡಿದ್ದಾರೆ.  https://twitter.com/PuneCityLife/status/1756368177741861347?ref_src=twsrc%5Etfw%7Ctwcamp%5Etweetembed%7Ctwterm%5E1756368177741861347%7Ctwgr%5E0e673b2b10892d41723d2dd51c216df6d9f77b9c%7Ctwcon%5Es1_&ref_url=https%3A%2F%2Fstatic.asianetnews.com%2Ftwitter-iframe%2Fshow.html%3Furl%3Dhttps%3A%2F%2Ftwitter.com%2FPuneCityLife%2Fstatus%2F1756368177741861347%3Fref_src%3Dtwsrc5Etfw ಇಂತಹ ಸೊಳ್ಳೆ ‘ಸುಂಟರಗಾಳಿಗಳು’ ಮಹಾರಾಷ್ಟ್ರದಲ್ಲಿ ಹೊಸ ದೃಶ್ಯವಲ್ಲವಾದರೂ, ಪುಣೆಯಂತಹ ನಗರ ಪರಿಸರದಲ್ಲಿ ಮುತಾ ನದಿಯ ಮೇಲೆ ಅವು ಸುತ್ತುತ್ತಿರುವುದನ್ನು ನೋಡುವುದು ಅಪರೂಪ. ಇತ್ತೀಚಿನ ಹವಾಮಾನ ಪರಿಸ್ಥಿತಿಗಳು ಕೀಟಗಳಿಗೆ ಅನುಕೂಲಕರ ಸಂತಾನೋತ್ಪತ್ತಿಯನ್ನು ಸೃಷ್ಟಿಸಿವೆ ಎಂದು ವರದಿಯಾಗಿದೆ.

Read More