Author: AIN Author

ರಾಷ್ಟ್ರೀಯ ಪಿಂಚಣಿ ಯೋಜನೆ, ಅಥವಾ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಎಂಬುದು ನಿವೃತ್ತಿಯ ಸಮಯದಲ್ಲಿ ಒಂದು ದೊಡ್ಡ ಮೊತ್ತವನ್ನು ಮತ್ತು ಅದರ ನಂತರ ಮಾಸಿಕ ಪಿಂಚಣಿಯನ್ನು ಹೊಂದುವ ಆಯ್ಕೆಯನ್ನು ನೀಡುವ ಯೋಜನೆಯಾಗಿದೆ. ಎನ್‌ಪಿಎಸ್‌ನಲ್ಲಿ ಶಿಸ್ತುಬದ್ಧ ಹೂಡಿಕೆ ವಿಧಾನವು ಕಡಿಮೆ ಹೂಡಿಕೆ ಮೊತ್ತದೊಂದಿಗೆ ಬೃಹತ್ ಮೊತ್ತವನ್ನು ರಚಿಸಲು ಸಹಾಯ ಮಾಡುತ್ತದೆ. ಕೇವಲ 10,000 ರೂಪಾಯಿಗಳ ಮಾಸಿಕ ಹೂಡಿಕೆಯು 1 ಕೋಟಿ ರೂಪಾಯಿಗಿಂತ ಹೆಚ್ಚು ಯೋಗ್ಯವಾದ ಒಟ್ಟು ಮೊತ್ತವನ್ನು ಮತ್ತು 1 ಲಕ್ಷ ರೂಪಾಯಿಗಿಂತ ಹೆಚ್ಚಿನ ಮಾಸಿಕ ಪಿಂಚಣಿಯನ್ನು ಸಂಗ್ರಹಿಸಲು ಸಹಾಯ ಮಾಡುತ್ತದೆ. NPS ಎಂದರೇನು ಮತ್ತು ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಕುರಿತು ಇನ್ನಷ್ಟು ತಿಳಿದುಕೊಳ್ಳೋಣ. NPS ಎಂದರೇನು? ಕೇಂದ್ರ ಸರ್ಕಾರವು 2004 ರಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ NPS ಅನ್ನು ಪ್ರಾರಂಭಿಸಿತು. ಉದ್ಯೋಗಿ ತಮ್ಮ ಎನ್‌ಪಿಎಸ್ ಖಾತೆಯಲ್ಲಿ ಮಾಸಿಕ ಕಂತುಗಳನ್ನು ಠೇವಣಿ ಮಾಡುತ್ತಾರೆ ಎಂಬುದು ಯೋಜನೆಯ ಮೂಲ ತತ್ವವಾಗಿದೆ. ಸರ್ಕಾರವು ಈ ಮೊತ್ತವನ್ನು ‘ಸುರಕ್ಷಿತ’ ಮತ್ತು ನಿಯಂತ್ರಿತ ಮಾರುಕಟ್ಟೆ-ಸಂಯೋಜಿತ ಹೂಡಿಕೆ ಆಯ್ಕೆಗಳಲ್ಲಿ…

Read More

ಕೋಲ್ಕತ್ತಾ: ನಟಿ ಮತ್ತು ಸಂಸದೆ ಮಿಮಿ ಚಕ್ರವರ್ತಿ ಅವರು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಹೇಳಿಕೊಂಡಿದ್ದಾರೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ ರಾಜೀನಾಮೆಯನ್ನು ಇನ್ನೂ ಅಂಗೀಕರಿಸಲಾಗಿಲ್ಲ. ಪಕ್ಷದ ಸ್ಥಳೀಯ ನಾಯಕರೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ ರಾಜೀನಾಮೆ ನೀಡಿರುವುದಾಗಿ ಜಾದವ್‌ಪುರದ ಸಂಸದೆ ಹೇಳಿದ್ದಾರೆ. ನಾನು ಜಾದವ್‌ಪುರ ಅಭಿವೃದ್ಧಿಗಾಗಿ ಕನಸು ಕಂಡಿದ್ದೆ. ಆದರೆ ನಾನು ಸಾಕಷ್ಟು ಅಡೆತಡೆಗಳನ್ನು ಎದುರಿಸಿದ್ದೇನೆ. ಚಲನಚಿತ್ರದ ಹಿನ್ನೆಲೆಯಿಂದ ಬಂದವರು ಕೆಲಸ ಮಾಡುವುದಿಲ್ಲ ಎಂದು ಹೇಳುವುದು ತುಂಬಾ ಸುಲಭ ಎಂದು ಅಸಮಾಧಾನ ಹೊರಹಾಕಿದ್ದಾರೆ. https://ainlivenews.com/300-units-of-free-electricity-for-1-crore-houses-how-to-apply-online/ ಬಂಗಾಳದ ಜನಪ್ರಿಯ ಚಲನಚಿತ್ರ ತಾರೆಯಾದ ಮಿಮಿ ಚಕ್ರವರ್ತಿ, 2019 ರಲ್ಲಿ ಜಾದವ್‌ಪುರದಿಂದ ತೃಣಮೂಲ ಕಾಂಗ್ರೆಸ್ ಪಕ್ಷದಿಂದ ಲೋಕಸಭೆಗೆ ಆಯ್ಕೆಯಾದರು. ಅವರು ರಾಜಕೀಯ ಪ್ರಮುಖರಾದ ಬಿಜೆಪಿಯ ಅನುಪಮ್ ಹಜ್ರಾ ಮತ್ತು ಸಿಪಿಎಂನ ಬಿಕಾಶ್ ರಂಜನ್ ಭಟ್ಟಾಚಾರ್ಯರನ್ನು ಸೋಲಿಸಿದ್ದರು. ಬಂಗಾಳದ ಮತ್ತೊಬ್ಬ ನಟ ಸಂಸದೆ ನುಸ್ರತ್ ಜಹಾನ್ ಅವರು ಸಂದೇಶಖಾಲಿಯಲ್ಲಿ ತೃಣಮೂಲ ನಾಯಕರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ…

Read More

ನವದೆಹಲಿ: ಅನಾರೋಗ್ಯ ಕಾರಣದಿಂದ ನಾನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ ಎಂದು ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ (Sonia Gandhi) ಘೋಷಿಸಿದ್ದಾರೆ. ರಾಜಸ್ಥಾನದಿಂದ ಬುಧವಾರ ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿದ್ದಾರೆ. ಈ ಬೆಳವಣಿಗೆಯ ಒಂದು ದಿನದ ನಂತರ ಲೋಕಸಭೆಗೆ (Lok Sabha Elections) ಸ್ಪರ್ಧಿಸದಿರಲು ಕಾರಣ ಬಹಿರಂಗಪಡಿಸಿದ್ದಾರೆ. ಈ ಕುರಿತು ಅಧಿಕೃತ ಪ್ರಕಟಣೆ ಹಂಚಿಕೊಂಡಿರುವ ಅವರು, ಹೆಚ್ಚುತ್ತಿರುವ ವಯಸ್ಸಿನ ಕಾರಣ ಹಾಗೂ ಅನಾರೋಗ್ಯದಿಂದಾಗಿ ನಾನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಈ ನಿರ್ಧಾರದ ನಂತರ, ನೇರವಾಗಿ ನಿಮ್ಮ ಸೇವೆ ಮಾಡಲು ನನಗೆ ಅವಕಾಶ ಸಿಗುವುದಿಲ್ಲ. ಆದ್ರೆ ಖಂಡಿತವಾಗಿಯೂ, ನನ್ನ ಹೃದಯ ಮತ್ತು ಆತ್ಮ ಯಾವಾಗಲೂ ನಿಮ್ಮೊಂದಿಗೆ ಇರುತ್ತದೆ ಎಂದೆ ಎಂದು ಭಾವುಕರಾಗಿದ್ದಾರೆ. https://twitter.com/INCIndia/status/1758023821934883202?ref_src=twsrc%5Etfw%7Ctwcamp%5Etweetembed%7Ctwterm%5E1758023821934883202%7Ctwgr%5E96c2b24be2ae976fb68f5c9312cf0efd685b2ecf%7Ctwcon%5Es1_&ref_url=https%3A%2F%2Fpublictv.in%2Fhope-you-will-be-with-my-family-sonia-gandhi-to-rae-bareli-voters%2F ರಾಯ್‌ ಬರೇಲಿ ಕ್ಷೇತ್ರದ ಜನರೊಂದಿಗಿನ ಅವಿನಾಭಾವ ಸಂಬಂಧ ಬಹಳ ಹಳೆಯದ್ದು. ರಾಯ್ ಬರೇಲಿಯೊಂದಿಗೆ ನಮ್ಮ ಕುಟುಂಬದ ಸಂಬಂಧಗಳು ತುಂಬಾ ಆಳವಾಗಿವೆ. ಸ್ವಾತಂತ್ರ್ಯಾ ನಂತರ ನಡೆದ ಮೊದಲ ಲೋಕಸಭೆ ಚುನಾವಣೆಯಲ್ಲಿ ಫಿರೋಜ್ ಗಾಂಧಿ ಅವರನ್ನು ಕ್ಷೇತ್ರದ ಜನ ಗೆಲ್ಲಿಸಿದ್ದರು. ನಂತರ…

Read More

ಕಂಪ್ಲಿ: ಕಂಪ್ಲಿ ತಾಲೂಕಿನ ತಹಸೀಲ್ದಾರ್ ಕಚೇರಿ ಆವರಣದಲ್ಲಿ  ಗುರುವಾರ ಸಂತ ಸೇವಾಲಾಲ್ ಅವರ ೨೮೫ ನೆಯ ಜಯಂತಿ ಆಚರಣೆ ಮಾಡಲಾಯಿತು. ತಹಶೀಲ್ದಾರ್ ಎಸ್ ಶಿವರಾಜ್   ಸೇವಾಲಾಲ್ ಅವರ ಭಾವಚಿತ್ರ ಕ್ಕೆ ಪೂಜೆ ಸಲ್ಲಿಸಿದರು.  ಈ ಸಂದರ್ಭದಲ್ಲಿ ಉಪ ತಹಸೀಲ್ದಾರ್ ರವೀಂದ್ರನಾಥ್ ಕುಮಾರ್ ಕಂಪ್ಲಿ ತಹಸೀಲ್ದಾರ್ ಸಿಬ್ಬಂದಿಗಳು ಹಾಗೂ ಬಂಜಾರ ಸಮುದಾಯದ ಹಿರಿಯ ಮುಖಂಡರು ಅಧ್ಯಕ್ಷರು ಉಪಾಧ್ಯಕ್ಷರು ಈ ಸೇವಾಲಾಲ್ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು .

Read More

ಬೆಂಗಳೂರು: ಪೌರ ಕಾರ್ಮಿಕರಿಗೆ ವಿಧಾನಸಭೆ ಕಲಾಪ ವೀಕ್ಷಿಸಲು ಅವಕಾಶ ಕಲ್ಪಿಸಿಕೊಟ್ಟ ಸ್ಪೀಕರ್ ಯು.ಟಿ.ಖಾದರ್ ಅವರಿಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿನಂದನೆ ಸಲ್ಲಿಸಿದರು. ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ವಿಷಯ ಪ್ರಸ್ತಾಪಿಸಿ ಮಾತನಾಡಿದ ಅವರು, ಸದನಕ್ಕೆ ಮಂಗಳಮುಖಿಯರು, ಪೌರ ಕಾರ್ಮಿಕರನ್ನು ಆಹ್ವಾನಿಸಿ, ಅವರಿಗೆ ಗೌರವ ಸಲ್ಲಿಸುವ ಕೆಲಸ ಮಾಡಿದ್ದೀರಿ, ಅವರ ಸಮಸ್ಯೆಗಳಿಗೆ ಸಂಪೂರ್ಣ ಪರಿಹಾರ ಕಂಡು ಕೊಳ್ಳಲು ಚರ್ಚೆಗೆ ಅವಕಾಶ ಕಲ್ಪಿಸಿದ್ದೀರಿ. ನಗರದ ಕಸ ತೆಗೆದು ಹಾಕುವುದು ಎಷ್ಡು ಕಷ್ಟ ಅನ್ನುವುದು ಅವರ ಸ್ಥಾನದಲ್ಲಿ ಇದ್ದುಯೋಚನೆ ಮಾಡಿದಾಗ ಗೊತ್ತಾಗುತ್ತದೆ ಎಂದರು. Electoral Bonds: ಚುನಾವಣಾ ಬಾಂಡ್ ಯೋಜನೆ ರದ್ದುಗೊಳಿಸಿ ಮಹತ್ವದ ತೀರ್ಪು ನೀಡಿದ ಸುಪ್ರೀಂ ನಾನು ಮುಖ್ಯಮಂತ್ರಿ ಆಗಿದ್ದಾಗ 11 ಸಾವಿರ ಪೌರ ಕಾರ್ಮಿಕರನ್ನು ಕಾಯಂ ಮಾಡಿದೆ. ಅದರ ಪ್ರಕ್ರಿಯೆ ಈಗ ಮುಂದುವರೆದಿದೆ. ಆದರೆ, ಅದು ವೇಗವಾಗಿ ಆಗಬೇಕು. ಇಲ್ಲದಿದ್ದರೆ ಅವರನ್ನು ವಿಧಾನಸೌಧಕ್ಕೆ ಕರೆಯಿಸಿ ಕೂಡಿಸುವುದರಲ್ಲಿ ಅರ್ಥವಿಲ್ಲ. ಇನ್ನೂ 34 ಸಾವಿರ ಜನರ ಕಾಯಂ ಮಾಡಬೇಕಿದೆ. ನಾವು ಅಧಿಕಾರದಲ್ಲಿದ್ದಾಗ…

Read More

ಬೆಂಗಳೂರು: ನಾಳೆ ಸಿಎಂ ಸಿದ್ದರಾಮಯ್ಯ ಬಜೆಟ್​ ಮಂಡನೆ ಮಾಡಲಾಗಿದೆ. ಈ ಸಲದ ಬಜೆಟ್​ ಮೇಲೆ ಭಾರೀ ನಿರೀಕ್ಷೆಗಳಿವೆ. ಹೌದು, ಇನ್ನು ಎರಡು ತಿಂಗಳಲ್ಲಿ ದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಈ ಸಂದರ್ಭದಲ್ಲಿ ಎಲ್ಲಾ ರಾಜ್ಯಗಳಿಗೂ ಈ ಚುನಾವಣೆ ಮಹತ್ವದ್ದಾಗಿದೆ. ಕೇಂದ್ರದಲ್ಲಿ ಪ್ರಸ್ತುತ ಎನ್ ಡಿ ಎ ಸರ್ಕಾರವಿದ್ದು ರಾಜ್ಯದ 28 ಲೋಕಸಭಾ ಸ್ಥಾನಗಳಲ್ಲಿ ಬಹುತೇಕ ಬಿಜೆಪಿ ಸಂಸದರಿದ್ದಾರೆ. Electoral Bonds: ಚುನಾವಣಾ ಬಾಂಡ್ ಯೋಜನೆ ರದ್ದುಗೊಳಿಸಿ ಮಹತ್ವದ ತೀರ್ಪು ನೀಡಿದ ಸುಪ್ರೀಂ ಮುಂಬರುವ ಚುನಾವಣೆಯಲ್ಲಿ ರಾಜ್ಯದಿಂದ ಕಾಂಗ್ರೆಸ್ ಗೆ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ತವಕದಲ್ಲಿರುವ ರಾಜ್ಯ ಆಡಳಿತಾರೂಢ ಕಾಂಗ್ರೆಸ್ ಜನರನ್ನು ಸೆಳೆಯಲು ಹಲವು ತಂತ್ರಗಳನ್ನು ಮಾಡುತ್ತಿದೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಳೆ ಮಂಡಿಸುತ್ತಿರುವ 15ನೇ ಬಜೆಟ್ ಮಹತ್ವದ್ದಾಗಿದೆ. ನಾಳೆ ಫೆ.16ರ ಬೆಳಗ್ಗೆ 10.15ಕ್ಕೆ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಬಜೆಟ್ ಮಂಡನೆ ಮಾಡಲಿದ್ದಾರೆ. ಬಜೆಟ್ ನೇರ ಪ್ರಸಾರ ಸರ್ಕಾರದ ಮಾಧ್ಯಮದಲ್ಲಿ ನೇರ ಪ್ರಸಾರವಾಗಲಿದೆ. ಬಜೆಟ್​​ ಮಂಡನೆ ಮುನ್ನ ಸಿದ್ದರಾಮಯ್ಯ ಅವರು…

Read More

ಶಿವಮೊಗ್ಗ: ಬಿಜೆಪಿ ನಾಯಕರಿಗೆ ಕಿತಾಪತಿ ಮಡೋದು ಬಿಟ್ಟರೆ ಬೇರೇನೂ ಗೊತ್ತು ಎಂದು ಮಧು ಬಂಗಾರಪ್ಪ ಪ್ರಶ್ನೆ ಮಾಡಿದ್ದಾರೆ. ರಾಜ್ಯ ಭೀಕರ ಬರದಿಂದ ತತ್ತರಿಸಿರುವಾಗ ಕರ್ನಾಟಕ ಸರ್ಕಾರ ಮಂತ್ರಿಗಳಿಗಾಗಿ ಐಷಾರಾಮಿ ಕಾರು ಕೊಂಡಿರುವುದಕ್ಕೆ ಬಿಜೆಪಿ ನಾಯಕರು ತೀವ್ರ ಆಕ್ಷೇಪಣೆ ಎತ್ತಿರುವ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯೆ ನೀಡಿದರು. https://ainlivenews.com/300-units-of-free-electricity-for-1-crore-houses-how-to-apply-online/ ಬರಗಾಲ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯವರು 10 ಕೇಜಿ ಅಕ್ಕಿ ಕೋಡೋದನ್ನ ನಿಲ್ಲಿಸಿದ್ದಾರಾ? ಮಹಿಳೆಯರಿಗೆ ರೂ. 2,000 ಕೊಡೋದನ್ನು ನಿಲ್ಲಿಸಿದ್ದಾರಾ? ಶಕ್ತಿ ಯೋಜನೆ ನಿಂತಿದೆಯಾ? ಬರ ಅಂತ ಯಾವ ಯೋಜನೆಯನ್ನೂ ಸರ್ಕಾರ ನಿಲ್ಲಿಸಲ್ಲ, 35-40 ಕಾರುಗಳನ್ನು ಖರೀದಿಸಿದರೆ, ಖಜಾನೆ ಖಾಲಿಯಾಗುತ್ತದೆ ಅಂತ ಬಿಜೆಪಿ ನಾಯಕರು ಹೇಳುತ್ತಾರೆ, ಇಂಥ ಕಿತಾಪತಿ ಮಡೋದನ್ನು ಬಿಟ್ಟರೆ ಬೇರೇನೂ ಅವರಿಗೆ ಗೊತ್ತಿಲ್ಲ ಎಂದು ಮಧು ಬಂಗಾರಪ್ಪ ಹೇಳಿದರು.

Read More

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್  ಎಲ್ಲಾ ಸ್ಥಾನಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ (ಹೇಳಿದ್ದಾರೆ. ಈ ಮೂಲಕ ಅವರು ಮುಂದಿನ ದಿನಗಳಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಗೆ ಸೇರುವ ಸುಳಿವು ನೀಡಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, I.N.D.I.A ಒಕ್ಕೂಟದ ಜೊತೆ ಸೀಟು ಹಂಚಿಕೆಯ ಮಾತುಕತೆ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಇತರ ರಾಜಕೀಯ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲ್ಲ. ಬದಲಾಗಿ ತನ್ನ ಸ್ವಂತ ಬಲದ ಮೇಲೆ ಏಕಾಂಗಿಯಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದೆ ಎಂದು ಸ್ಪಷ್ಟಪಡಿಸಿದರು. https://ainlivenews.com/300-units-of-free-electricity-for-1-crore-houses-how-to-apply-online/ ಅಟಲ್ ಬಿಹಾರಿ ವಾಜಪೇಯಿಅವರು ಚುಕ್ಕಾಣಿ ಹಿಡಿದಾಗ ನ್ಯಾಷನಲ್ ಕಾನ್ಫರೆನ್ಸ್ ಎನ್‌ಡಿಎ ಭಾಗವಾಗಿತ್ತು. ಕಳೆದ ತಿಂಗಳು ಜಮ್ಮು ಪ್ರದೇಶದ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ನ ಹಲವಾರು ಪ್ರಮುಖ ನಾಯಕರು ಬಿಜೆಪಿಗೆ ಸೇರ್ಪಡೆಗೊಂಡರು. 2019 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಅಬ್ದುಲ್ಲಾ ಅವರ ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ತಲಾ ಮೂರು…

Read More

ಬೆಂಗಳೂರು:  ನಮ್ಮ ಬೆಂಗಳೂರು ನಮ್ಮ ಹೆಮ್ಮೆ ಅಂತಾರೆ .. ಡಿಸಿಎಂ ಡಿಕೆ ಶಿವಕುಮಾರ್ ಬೆಂಗಳೂರು ಗ್ರಾಂಡ್ ಬೆಂಗಳೂರು ಮಾಡಕ್ಕೆ ಹೊರಟಿದ್ದಾರೆ . ಆದ್ರೆ ಕೆಲವೊಂದು ಜಾಗಗಳ್ಗೆ ಹೋದೆ ಮಾತ್ರ ಅಲ್ಲಿ ಅವ್ಯವಸ್ಥೆಗಳ ಆಗರ ಆಗಿರುತ್ತೆ .. ನಿಲ್ಲುವುದಕ್ಕೂ ಆದೆ ಇರೋಕು ಆದೆ ಹೇಗಪ್ಪ ವಾಸ ಮಾಡುವುದು ಎಂದು ಚಂದ್ರು ಜನರು ಗೋಗರೆದಿದ್ದಾರೆ.. ಅದು ಯಾಕೆ ಅಂತೀರಾ ಈ ಸ್ಟೋರಿ ನೋಡಿ. Electoral Bonds: ಚುನಾವಣಾ ಬಾಂಡ್ ಯೋಜನೆ ರದ್ದುಗೊಳಿಸಿ ಮಹತ್ವದ ತೀರ್ಪು ನೀಡಿದ ಸುಪ್ರೀಂ ಒಂದೆಡೆ ಜನರ ಆಕ್ರೋಶ ಮತ್ತೊಂದೆಡೆ ಓಪನ್ ಆಗಿರುವಂತಹ ಫುಟ್ಪಾತ್ ..ಇಲ್ಲಿ ಬಂದ್ರೆ ಸಾಕು ಯಾವಾಗಲೂ ಮೂಗು ಮುಚ್ಕೊಂಡು ಓಡಾಡುವಂತಹ ಪರಿಸ್ಥಿತಿ ..ಎಷ್ಟೇ ಬಾರಿ ಕಂಪ್ಲೇಂಟ್ ಮಾಡಿದ್ದರೂ ಕೂಡ ಕ್ಯಾರೆ ಅನ್ನದ ಬಿಬಿಎಂಪಿ ಅಧಿಕಾರಿಗಳು ..ತೆರೆದಿರುವ ಫುಟ್ಪಾತ್ ಯಿಂದ ಅದೆಷ್ಟು ಸಮಸ್ಯೆ ಆಗುತ್ತಿದೆ ..ರಾತ್ರಿ ಆದರೆ ಸಾಕು ಸೊಳ್ಳೆಯ ಕಾಟ ,ಹೊರಗೆ ಬಂದರೆ ಸಾಕು ದುರ್ವಸನೆ.. ಗೊತ್ತಿಲ್ಲದೆ ಮಕ್ಕಳು ಕೂಡ ಹಲವಾರು ಬಾರಿ ಇಲ್ಲಿ ಬಿದ್ದಿದ್ದಾರೆ. .…

Read More

ಬೆಂಗಳೂರು: ಮಾಜಿ ಪ್ರಧಾನಿ, ಜೆಡಿಎಸ್​ ವರಿಷ್ಠ ಎಚ್​ಡಿ ದೇವೇಗೌಡ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. Electoral Bonds: ಚುನಾವಣಾ ಬಾಂಡ್ ಯೋಜನೆ ರದ್ದುಗೊಳಿಸಿ ಮಹತ್ವದ ತೀರ್ಪು ನೀಡಿದ ಸುಪ್ರೀಂ ಉಸಿರಾಟ ಸಮಸ್ಯೆಯಿಂದಾಗಿ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಿದ್ದು, ಸದ್ಯಕ್ಕೆ ದೇವೇಗೌಡರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳಿಂದ ತಿಳಿದುಬಂದಿದೆ. ದೇವೇಗೌಡರಿಗೆ ಇಂದು ಬೆಳಿಗ್ಗೆ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿದ್ದು, ಕೂಡಲೇ ಅವರನ್ನು ಮಣಿಪಾಲ್‌ ಆಸ್ಪತ್ರೆಗೆ ಕರೆದುಕೊಂಡೊ ಹೋಗಿ ಅಲ್ಲಿ ಅಡ್ಮಿಟ್‌ ಮಾಡಲಾಗಿದೆ. ಎಚ್‌ಡಿ ದೇವೇಗೌಡ ಅವರಿಗೆ 90 ವರ್ಷ ಪೂರ್ಣಗೊಂಡಿವೆ. ಆದರೂ ಸಹ ಅವರು ಸಕ್ರಿಯ ರಾಜಕಾರಣದಲ್ಲಿದ್ದು, ಸದ್ಯ ಅವರು ಲೋಕಸಭೆ ಚುನಾವಣೆಯ ಪ್ರಚಾರ, ಸಭೆಗಳನ್ನು ನಡೆಸುತ್ತಿದ್ದಾರೆ.

Read More