Author: AIN Author

ಬೆಂಗಳೂರು:- ನಾಳೆ 15ನೇ ಬಜೆಟ್ ಅನ್ನು ಸಿಎಂ ಸಿದ್ದರಾಮಯ್ಯ ಅವರು ಮಂಡಿಸಲಿದ್ದಾರೆ. ಈ ಹಿನ್ನೆಲೆ ಸಿಎಂ ಅವರು ಇಂದು ಅಂತಿಮ ಕ್ಷಣದ ಸಿದ್ಧತೆ ವೀಕ್ಷಿಸಿದರು. ಈ ಬಜೆಟ್ ರಾಜ್ಯಕ್ಕೆ ಹೊಸ ದಿಕ್ಸೂಚಿ ಕೊಡಲಿದೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಜನರು ಅದರಲ್ಲೂ ರೈತರು ತಮಗೇನು ಘೋಷಣೆಯಾಗಲಿದೆ ಎಂದು ಕಾಯುತ್ತಿದ್ದಾರೆ. ಆದರೆ, ಯಾವುದೇ ನಿರೀಕ್ಷೆಗಳಿಲ್ಲ, ಕಿವಿಗೆ ಹೂವು ಗ್ಯಾರಂಟಿ ಎಂದು ವಿಪಕ್ಷಗಳ ನಾಯಕರು ಹೇಳುತ್ತಿದ್ದಾರೆ. ಈವರೆಗೂ ರಾಜ್ಯದ ಬಜೆಟ್ ಗಾತ್ರ 3.27 ಲಕ್ಷ ಕೋಟಿ ರೂಪಾಯಿ ದಾಟಿರಲಿಲ್ಲ. ಆದರೆ, ಈ ಬಾರಿ ಸುಮಾರು 50 ಸಾವಿರ ಕೋಟಿ ರೂಪಾಯಿ ಹೆಚ್ಚಳವಾಗಲಿದೆ. ಇದರೊಂದಿಗೆ ಈ ಬಾರಿ ಬಜೆಟ್​ ಗಾತ್ರ 3.80 ಲಕ್ಷ ಕೋಟಿ ರೂಪಾಯಿ ತಲುಪುವ ನಿರೀಕ್ಷೆಯಿದೆ. ಪಂಚ ಗ್ಯಾರಂಟಿ ಹೊರೆ ಹಾಗೂ ಬರದ ಬರೆ ಸರ್ಕಾರಕ್ಕೆ ಸವಾಲಾಗಿದೆ. ಪ್ರಸಕ್ತ ವರ್ಷದಲ್ಲಿ ರಾಜಸ್ವ ಸಂಗ್ರಹ ನಿಗದಿತ ಗುರಿ ತಲುಪದೇ ಇರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. 2024-25 ಸಾಲಿನಲ್ಲಿ ಪಂಚ ಗ್ಯಾರಂಟಿಗಳಿಗಾಗಿ ಸಮಾರು 58,000…

Read More

ಚಾಮರಾಜನಗರ:- ಜಿಲ್ಲೆಯ ಹನೂರು ತಾಲೂಕಿನ ಪಿಜಿ ಪಾಳ್ಯದಲ್ಲಿ ಪತ್ನಿ ರೀಲ್ಸ್‌ನಿಂದ ಬೇಸತ್ತು ಪತಿ ಸೂಸೈಡ್ ಮಾಡಿಕೊಂಡ ಘಟನೆ ಜರುಗಿದೆ. ಕುಮಾರ್ (33) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಕುಮಾರ್ ಪತ್ನಿ ರೂಪಾ ಗುಂಡಾಲ್ ಜಲಾಶಯಕ್ಕೆ ಹೋಗಿದ್ದ ವೇಳೆ ಸೋದರ ಮಾವ ಗೋವಿಂದ ಹಾಗೂ ಸಹೋದರಿ ದೀಪಾ ಜೊತೆಗೆ ಕರಿಮಣಿ ಮಾಲೀಕ ನೀನಲ್ಲ ಎಂಬ ಹಾಡಿಗೆ ರೀಲ್ಸ್ ಮಾಡಿದ್ದರು ಈ ರೀಲ್ಸ್ ಗೂ ಮುನ್ನಾ ಪತಿ ಕುಮಾರ್ ಹಾಗೂ ಪತ್ನಿ ರೂಪಾ ನಡುವೆ ಹಲವು ಬಾರಿ ಕೌಟುಂಬಿಕ ಕಲಹ ನಡೆದಿತ್ತು. ರೀಲ್ಸ್ ಮಾಡದಂತೆ ಹಲವು ಸಲ ಎಚ್ಚರಿಕೆ ಕೂಡ ನೀಡಿದ್ದರು. ಆದರೆ ಇದನ್ನೂ ಲೆಕ್ಕಿಸದೆ ರೂಪಾ ರೀಲ್ಸ್ ಮಾಡಿದ್ದರು. ರೂಪಾ ರೀಲ್ಸ್ ನೋಡಿದ್ದ ಕುಮಾರ್ ಸ್ನೇಹಿತರು ರೇಗಿಸಿದ್ದರು. ಇದರಿಂದ ಮನಸ್ಸಿಗೆ ಕುಮಾರ್ ಬೇಸರಗೊಂಡಿದ್ದರು. ಪತ್ನಿಯ ಬಳಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಜಗಳ ಕೂಡ ಮಾಡಿಕೊಂಡಿದ್ದರಂತೆ. ಪತ್ನಿ ರೂಪಾ ಕುಮಾರ್ ಮಾತಿಗೆ ಸೊಪ್ಪು ಹಾಕಿಲ್ಲವೆಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕುಮಾರ್ ಕುಟುಂಬಸ್ಥರು ರೂಪಾ, ಯಶೋದಾ, ಗೋವಿಂದ ಮೂವರ…

Read More

ಜೈಪುರ:- ಅಪ್ರಾಪ್ತ ವಿದ್ಯಾರ್ಥಿಯ ಮೇಲೆ ಸಹ ವಿದ್ಯಾರ್ಥಿಗಳು ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ರಾಜಸ್ಥಾನದ ಕೋಚಿಂಗ್ ಹಬ್ ಕೋಟಾದಲ್ಲಿ ಜರುಗಿದೆ ಅಪ್ರಾಪ್ತ ವಿದ್ಯಾರ್ಥಿನಿಯನ್ನು ಫ್ಲಾಟ್‌ಗೆ ಕರೆಸಿ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉಮಾ ಶರ್ಮಾ ತಿಳಿಸಿದ್ದಾರೆ. ಸಂತ್ರಸ್ತ ವಿದ್ಯಾರ್ಥಿನಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಮುಖ ಆರೋಪಿಯೊಬ್ಬನ ಪರಿಚಯವಾಗಿತ್ತು. ಈ ಘಟನೆ ಫೆಬ್ರವರಿ 10 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬಂಧಿತ ಆರೋಪಿಗಳ ವಿಚಾರಣೆ ನಡೆಸುತ್ತಿರುವ ಕೋಟ ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದಾರೆ.

Read More

ರಾಯಚೂರು:- ಬ್ರಿಟನ್ ಪ್ರಧಾನಿ ಶ್ರೀ ಋಷಿ ಸುನಕ್ ಅವರ ಪತ್ನಿ ಶ್ರೀಮತಿ ಅಕ್ಷತಾ ಸುನಕ್ ಅವರು ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿದರು – ಜಯನಗರ 5 ನೇ ಬ್ಲಾಕ್, ಬೆಂಗಳೂರು, ತಮ್ಮ ಮಕ್ಕಳು ಮತ್ತು ಪೋಷಕರೊಂದಿಗೆ ಇನ್ಫೋಸಿಸ್ ಸಂಸ್ಥಾಪಕ ಶ್ರೀ ನಾರಾಯಣ ಮೂರ್ತಿ ಮತ್ತು ಶ್ರೀಮತಿ. ಸುಧಾ ನಾರಾಯಣ ಮೂರ್ತಿ. ಅವರಿಗೆ ಶ್ರೀ ರಾಯರ ದಿವ್ಯ ದರ್ಶನ ಪಡೆಯುವ ಭಾಗ್ಯ ದೊರೆಯಿತು. ತರುವಾಯ, ಅವರು ಪೂಜ್ಯ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿಯವರನ್ನು ಭೇಟಿಯಾಗಿ ಅವರ ಆಶೀರ್ವಾದವನ್ನು ಪಡೆದರು.

Read More

ಬೆಂಗಳೂರು:- ನಗರದ ಸ್ಯಾಂಕಿ ಕೆರೆಯಲ್ಲಿ ಅಪರಿಚಿತ ವ್ಯಕ್ತಿ ಶವ ಪತ್ತೆ ಕೇಸ್ ಗೆ ಸಂಬಂಧಿಸಿದಂತೆ ಮೃತ ವ್ಯಕ್ತಿಯ ಗುರುತನ್ನು ಸದಾಶಿವ ನಗರ ಪೊಲೀಸರು ಪತ್ತೆ ಹಚ್ಚಿದ್ದಾರೆ. 6೦ ವರ್ಷದ ನಾರಾಯಣಸ್ವಾಮಿ, ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ ಎನ್ನಲಾಗಿದೆ. ಕಳೆದ ಮೂರು ದಿನದ ಹಿಂದೆ ನಾರಾಯಣ ಸ್ವಾಮಿ ಮಿಸ್ಸಿಂಗ್ ಆಗಿದ್ದ. ಈ ಬಗ್ಗೆ ನಾರಾಯಣ ಸ್ವಾಮಿ ಕುಟುಂಬಸ್ಥರು ಬಸವೇಶ್ವರ ನಗರ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ನೀಡಿದ್ದರು. ತಂದೆ-ಮಗನ ನಡುವೆ ಹಣಕಾಸಿನ ವಿಚಾರಕ್ಕೆ ವೈಮನಸ್ಸಿತ್ತು ಜೊತೆಗೆ ಕಾಯಿಲೆಯಿಂದ ಬಳಲುತ್ತಿದ್ದ ನಾರಾಯಣ ಸ್ವಾಮಿ, ಈ ವಿಚಾರಗಳಿಂದ ಮಾನಸಿಕವಾಗಿ ಕುಗ್ಗಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.

Read More

ಕೋಲಾರ:- ಕೆಜಿಎಫ್​ನ ಸಂಜಯ್​ಗಾಂಧಿ ನಗರದಲ್ಲಿ ಗಂಡನ ವಿರುದ್ದ ಹೆಂಡತಿ ವರದಕ್ಷಿಣೆ ಕಿರುಕುಳ ದೂರು ನೀಡಿದ ಹಿನ್ನೆಲೆಯಲ್ಲಿ ಗಂಡನೇ ಹೆಂಡತಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜರುಗಿದೆ. ಕಳೆದ ಆರು ವರ್ಷಗಳ ಹಿಂದೆ ಕೆಜಿಎಫ್​ನ ಸಂಜಯ್​ಗಾಂಧಿ ನಗರದ ಪವಿತ್ರ ಹಾಗೂ ಕೋರಮಂಡಲ್​ ಏರಿಯಾದ ಲೋಕೇಶ್​ ಎಂಬುವವರು ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದರು. ಜೊತೆಗೆ ಇಬ್ಬರು ಮಕ್ಕಳು ಕೂಡ ಇದ್ದರು. ಹೀಗೆ ಸಂಸಾರ ನಡೆಯಬೇಕಾದರೆ ಕಳೆದ ಕೆಲವು ವರ್ಷಗಳಿಂದ ಪವಿತ್ರ ಪತಿ ಲೋಕೇಶ್,​ ಹೆಂಡತಿಗೆ ಕಿರುಕುಳ ನೀಡಲು ಶುರುಮಾಡಿದ್ದಾನೆ. ಹಣಕ್ಕಾಗಿ ಹೆಂಡತಿ ಪವಿತ್ರಾ ಮೇಲೆ ಹಲ್ಲೆ ಮಾಡೋದು, ಹಣ ತರದೆ ಇದ್ದಾಗ ತನ್ನ ತಾಯಿಯ ಮನೆಗೆ ಕಳಿಸುವುದು ಮಾಡುತ್ತಿದ್ದ. ಇನ್ನು ಲೋಕೇಶ್​ ಮಾತ್ರ ಬೇರೆ ಬೇರೆ ಮಹಿಳೆಯರ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದ. ಜೊತೆಗೆ ಅವರ ಜೊತೆಗಿನ ಪೋಟೋಗಳನ್ನು ತನ್ನ ಹೆಂಡತಿಗೆ ಹಾಕಿ ಹಿಂಸೆ ನೀಡುತ್ತಿದ್ದ. ಇದರಿಂದ ಬೇಸತ್ತ ಪವಿತ್ರ, ಕಳೆದ ಎರಡು ವರ್ಷಗಳ ಹಿಂದೆ ಉರಿಗಾಂ ಪೊಲೀಸ್​ ಠಾಣೆಗೆ ವರದಕ್ಷಿಣೆ ಕಿರುಕುಳ ದೂರು ನೀಡಿದ್ದಳು.…

Read More

ಬೆಂಗಳೂರು:- ಫೆ. 25ರಂದು ನಡೆಯಲಿರುವ ಪೊಲೀಸ್ ಕಾನ್‍ಸ್ಟೇಬಲ್ ಪರೀಕ್ಷೆ ಹಿನ್ನಲೆ ಪುರುಷ, ಮಹಿಳೆ ಮತ್ತು ತೃತೀಯ ಲಿಂಗ ಪುರುಷ ಅಭ್ಯರ್ಥಿಗಳಿಗೆ ವಸ್ತ್ರಸಂಹಿತೆ ಜಾರಿ ಮಾಡಲಾಗಿದೆ. ಬೆಂಗಳೂರು ನಗರದಲ್ಲಿ 63 ಪರೀಕ್ಷಾ ಕೇಂದ್ರಗಳಲ್ಲಿ 34180 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಹಾಲ್ ಟಿಕೆಟ್​ ಡೌನ್ಲೋಡ್ ಮಾಡಿಕೊಂಡು ಪರೀಕ್ಷೆಗೆ ಹಾಜರಾಗಲು ಸೂಚನೆ ನೀಡಲಾಗಿದೆ. ನಿಗದಿತ ದಿನಾಂಕದಂದು ಲಿಖಿತ ಪರೀಕ್ಷಗೆ ಹಾಜರಾಗಲು ಸೂಚಿಸಲಾಗಿದೆ. ಸದರಿ ಲಿಖಿತ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಕಡ್ಡಾಯವಾಗಿ ಕೆಳಕಂಡ ವಸ್ತ್ರ ಸಂಹಿತೆಯನ್ನು ಪಾಲಿಸುವಂತೆ ಸೂಚಿಸಲಾಗಿದೆ. # ಪುರುಷ ಮತ್ತು ತೃತಿಯಲಿಂಗ ಪುರುಷ ಅಭ್ಯರ್ಥಿಗಳು ಅರ್ಧ ತೋಳಿನ ಶರ್ಟ್‌ಗಳನ್ನು ಕಡ್ಡಾಯವಾಗಿ ಧರಿಸುವುದು ಹಾಗೂ ಸಾಧ್ಯವಾದಷ್ಟು ಕಾಲರ್ ರಹಿತ ಶರ್ಟ್‌ಗಳನ್ನು ಧರಿಸುವುದು. ಜಿಪ್ ಪ್ಯಾಕೆಟ್‌ಗಳು, ದೊಡ್ಡ ಬಟನ್​ಗಳು ಇರುವ ಶರ್ಟ್‌ಗಳನ್ನು ಧರಿಸುವಂತ್ತಿಲ್ಲ. # ಜೀನ್ಸ್ ಪ್ಯಾಂಟ್ ಮತ್ತು ಹೆಚ್ಚಿನ ಜೇಬುಗಳಿರುವ ಪ್ಯಾಂಟ್‌ಗಳನ್ನು ಧರಿಸುವಂತ್ತಿಲ್ಲ. # ಪರೀಕ್ಷಾ ಕೇಂದ್ರದೊಳಗೆ ಹೂಗಳನ್ನು ನಿಷೇಧಿಸಲಾಗಿದ್ದು, ಅಭ್ಯರ್ಥಿಗಳು ತೆಳುವಾದ ಅಡಿಭಾಗವಿರುವ ಪಾದರಕ್ಷೆಗಳನ್ನು (ಚಪ್ಪಲಿ) ಧರಿಸುವುದು. # ಕುತ್ತಿಗೆ ಸುತ್ತಾ ಯಾವುದೇ ಲೋಹದ…

Read More

ಬೆಂಗಳೂರು:- ಸರ್ಕಾರಿ ವಸತಿ ಶಾಲೆಯಲ್ಲಿ ಧಾರ್ಮಿಕ ಹಬ್ಬಗಳ ಆಚರಣೆ ನಿರ್ಬಂಧ ಮಾಡಿದ ಆದೇಶ ವಾಪಸ್ ಮಾಡಲಾಗಿದೆ. ವಸತಿ ಶಾಲೆಗಳಲ್ಲಿ ಧಾರ್ಮಿಕ ಹಬ್ಬಗಳ ಆಚರಣೆಗೆ ನಿರ್ಬಂಧಿಸಿ ರಾಜ್ಯ ಸರ್ಕಾರದ ಅಂಗ ಸಂಸ್ಥೆಯಾಗಿರುವ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘವು ಸುತ್ತೋಲೆ ಹೊರಡಿಸಿತ್ತು. ಇದಕ್ಕೆ ವಿರೋಧಗಳು ವ್ಯಕ್ತವಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಇದೀಗ ತನ್ನ ನಿರ್ಬಂಧ ಆದೇಶವನ್ನು ವಾಪಸ್ ಪಡೆದಿದೆ. ವಸತಿ ಶಾಲೆ, ಕಾಲೇಜುಗಳಲ್ಲಿ ಧಾರ್ಮಿಕ ಹಬ್ಬ ಆಚರಣೆಗೆ ರಾಜ್ಯ ಸರ್ಕಾರ ಬ್ರೇಕ್ ಹಾಕಿರುವುದಕ್ಕೆ ಹಿಂದೂ ಪರ ಹೋರಾಟಗಾರ ಮೋಹನಗೌಡ ಆಕ್ರೋಶ ವ್ಯಕ್ತಪಡಿಸಿದ್ದರು. ಹಿಂದೂ ವಿದ್ಯಾರ್ಥಿಗಳಲ್ಲಿ ನಾಸ್ತಿಕ ಮನೋಭಾವ ಮೂಡಿಸುವ ಕೆಲಸವಾಗುತ್ತಿದೆ ಎಂದು ಕಿರಿಕಾರಿದ್ದರು. ಇನ್ನು ಸರ್ಕಾರದ ಸುತ್ತೋಲೆಗೆ ಹಿಂದೂ ಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇದರ ತಾರಕಕ್ಕೇರುತ್ತಿದ್ದಂತೆಯೇ ಎಚ್ಚೆತ್ತ ಸರ್ಕಾರ ಸುತ್ತೋಲೆಯನ್ನು ವಾಪಸ್ ಪಡೆದುಕೊಂಡಿದೆ. ಸರ್ಕಾರಿ ವಸತಿ ಶಾಲೆ ಮತ್ತು ಕಾಲೇಜುಗಳಲ್ಲಿ ಧಾರ್ಮಿಕ ಹಬ್ಬಗಳನ್ನು ಆಚರಣೆ ಮಾಡಬಾರದು. ನಿಗದಿತ ರಾಷ್ಟ್ರೀಯ ಹಬ್ಬ, ನಾಡಹಬ್ಬ ಮತ್ತು ಜಯಂತಿಗಳನ್ನು ಆಚರಿಸಬಹುದು.…

Read More

ಬೆಳಗಾವಿ:- ಕೂಡಲಸಂಗಮದಲ್ಲಿ ವಚನಗಳ ವಿವಿ ಸ್ಥಾಪನೆ ಆಗಬೇಕು ಎಂದು ಬಸವ ಜಯಮೃತ್ಯುಂಜಯ ಶ್ರೀ ಹೇಳಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬಸವಣ್ಣನವರ ಲಿಂಗೈಕ್ಯೆ ಆಗಿದ್ದು ಕೂಡಲಸಂಗಮದಲ್ಲಿ. ಹೀಗಾಗಿ ಕೂಡಲಸಂಗಮದಲ್ಲಿ ವಚನಗಳ ವಿಶ್ವವಿದ್ಯಾಲಯ ಸ್ಥಾಪನೆ ಕುರಿತು ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು. ಕೂಡಲಸಂಗಮದಲ್ಲಿ ವಚನಗಳ ವಿಶ್ವವಿದ್ಯಾಲಯ ಸ್ಥಾಪನೆ ಆಗಬೇಕು. ನಾಳಿನ ಬಜೆಟ್ ಅಧಿವೇಶನದಲ್ಲಿ ಈ ಕುರಿತು ಘೋಷಣೆ ಆಗಬೇಕು. ಬಸವಣ್ಣನವರ ವಚನಗಳನ್ನ ಅಧ್ಯಯನ ಪ್ರಾರಂಭ ಮಾಡಿದ್ದು ಕೂಡಲಸಂಗಮದಲ್ಲಿ. ಕೂಡಲಸಂಗಮದಲ್ಲಿಯೇ ಧರ್ಮ ಸ್ಥಾಪನೆಯಾಗಿದೆ. ಬಸವಣ್ಣನವರ ಲಿಂಗೈಕ್ಯೆ ಆಗಿದ್ದು ಕೂಡಲಸಂಗಮದಲ್ಲಿ. ಹಾಗಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ‌ ಮಾಡಿಕೊಳ್ಳುತ್ತೇನೆ ಎಂದರು. ಕೂಡಲಸಂಗಮದ ಶಾಸಕ ಕಾಶಪ್ಪನವರ ಅವರಿಗೂ ತಿಳಿಸಿದ್ದೇನೆ. ಕೂಡಲಸಂಗಮ ಅಭಿವೃದ್ಧಿ ಇನ್ನೂ ಆಗಿಲ್ಲ. ಬೆಳಗಾವಿಯ ಬೆಳವಡಿ ಮಲ್ಲಮ್ಮನ‌ ಹೆಸರಿನಲ್ಲಿ ಪ್ರಾಧಿಕಾರ ರಚನೆ ಮಾಡಬೇಕು. ಫೆಬ್ರವರಿ 27, 28 ರಂದು ಬೆಳವಾಡಿಯಲ್ಲಿ ಮಲ್ಲಮ್ಮನ ಉತ್ಸವ ಇದೆ. ಹಾಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಾಧಿಕಾರ ಘೋಷಣೆ ಮಾಡಿ ಉತ್ಸವದಲ್ಲಿಯೇ ಲೋಕಾರ್ಪಣೆ ಮಾಡಬೇಕು. ಬೆಳಗಾವಿಯ ಎಲ್ಲ ಸಚಿವರು, ಶಾಸಕರನ್ನು ಮನವಿ…

Read More

ಬೆಂಗಳೂರು:- ನಗರದ ಕ್ಯಾಷ್ ಪಾರ್ಮಸಿಯಲ್ಲಿ ಫೆ.15 ನೇ ತಾರೀಕು ಮಹಿಳಾ ಪೊಲೀಸ್ ಸಿಬ್ಬಂದಿ ಮೊಬೈಲ್ ಕಸಿದು ಎಸ್ಕೇಪ್ ಆಗುತಿದ್ದವನನ್ನು ಹೊಯ್ಸಳ ಸಿಬ್ಬಂದಿ ಬೆನ್ನತ್ತಿ ಹಿಡಿದ ಘಟನೆ ಜರುಗಿದೆ. ಅಶೋಕನಗರ ಸಂಚಾರಿ ಠಾಣೆಯ ಮಹಿಳಾ ಪೇದೆ ಷಾಜಿಯಾ ತಬಸುಂ ಅವರು ಜಂಕ್ಷನ್​ನಲ್ಲಿ ಸಂಜೆ 5 ಗಂಟೆಯ ಸುಮಾರಿಗೆ ಕರ್ತವ್ಯ ನಿರ್ವಹಿಸುತಿದ್ದರು. ಈ ವೇಳೆ ಆಕೆಯ ಮೊಬೈಲ್ ಕಸಿದು ಎಸ್ಕೇಪ್ ಆಗುತಿದ್ದ ದುಷ್ಕರ್ಮಿಯನ್ನು ಸ್ಥಳದಲ್ಲೇ ಇದ್ದ ಹೊಯ್ಸಳ ಸಿಬ್ಬಂದಿ ಅಲರ್ಟ್ ಆಗಿ ಸಿನಿಮೀಯ ರೀತಿಯಲ್ಲಿ ಸುಮಾರು ದೂರು ದುಷ್ಕರ್ಮಿಯನ್ನು ಹಿಂಬಾಲಿಸಿ ಹಿಡಿದಿದ್ದಾರೆ. ಮೊಬೈಲ್ ಕಳ್ಳನ ಚೇಸ್ ಮಾಡಿ ಹಿಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೊಯ್ಸಳ ಸಿಬ್ಬಂದಿಯ ಕೆಲಸಕ್ಕೆ ಹಿರಿಯ ಅಧಿಕಾರಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.

Read More