Author: AIN Author

ರಥ ಸಪ್ತಮಿ,ಭೀಷ್ಮ ಅಷ್ಟಮಿ ಸೂರ್ಯೋದಯ: 06:46, ಸೂರ್ಯಾಸ್ತ : 06:14 ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಮಾಘ ಮಾಸ , ಶುಕ್ಲ ಪಕ್ಷ, ಉತ್ತರಾಯಣಂ, ಶಿಶಿರ ಋತು, ತಿಥಿ: ಸಪ್ತಮಿ, ನಕ್ಷತ್ರ: ಭರಣಿ, ರಾಹು ಕಾಲ: 10:30 ನಿಂದ 12:00 ತನಕ ಯಮಗಂಡ: 03:00 ನಿಂದ 04:30 ತನಕ ಗುಳಿಕ ಕಾಲ: 07:30 ನಿಂದ 09:00 ತನಕ ಅಮೃತಕಾಲ: ಇಲ್ಲ ಅಭಿಜಿತ್ ಮುಹುರ್ತ: ಮ.12:07 ನಿಂದ ಮ.12:53 ತನಕ ಮೇಷ ರಾಶಿ: ದೊಡ್ಡ ವ್ಯವಹಾರ ಪ್ರಾರಂಭಿಸುವ ಚಿಂತನೆ. ನಿರುದ್ಯೋಗಿಗಳಿಗೆ ಒಳ್ಳೆಯ ಜನರ ಪರಿಚಯದಿಂದ ಉದ್ಯೋಗದ ಭಾಗ್ಯ ಸಿಗಲಿದೆ. ಕೆಲವು ಬಂಧುಗಳ ಕಿರಿಕಿರಿಯಾಗುತ್ತದೆ ಅವರನ್ನು ದೂರವಿಡಿ.ಪ್ರೀತಿಸಿ ಮದುವೆಯಾದ ಸಮರಸ ಜೀವನ ಕ್ಷೀಣಿಸುತ್ತದೆ. ಪತಿ ಪತ್ನಿ, ಸಂಗಾತಿ, ಸ್ನೇಹಿತರ ಒಡನಾಟ ಸಂಬಂಧವನ್ನು ವೃದ್ಧಿಯಾಗುವುದು. ಜೀವನದಲ್ಲಿ ಸಂತೋಷ ಅರಳುವುದು. ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ,…

Read More

ರಷ್ಯಾ:- ಅತಿ ಶೀಘ್ರದಲ್ಲೇ ರೋಗಿಗಳಿಗೆ ಕ್ಯಾನ್ಸರ್ ಲಸಿಕೆ ಲಭ್ಯ ಆಗಲಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ. ವೈದ್ಯ ವಿಜ್ಞಾನ ಲೋಕಕ್ಕೆ ರಷ್ಯಾ ಸಿಹಿ ಸುದ್ದಿ ನೀಡಿದೆ. ರಷ್ಯಾದ ವಿಜ್ಞಾನಿಗಳು ಕ್ಯಾನ್ಸರ್‌ಗೆ ಲಸಿಕೆ ಕಂಡು ಹಿಡಿಯುವ ಅಂತಿಮ ಹಂತದಲ್ಲಿದೆ ಎಂದಿದ್ದಾರೆ. ಹೊಸ ತಲೆಮಾರಿನ ಇಮ್ಯುನೋಮಾಡ್ಯುಲೇಟರಿ ಔಷಧಗಳನ್ನು ಜನಪ್ರಿಯವಾಗಿ ಕ್ಯಾನ್ಸರ್ ಲಸಿಕೆ ಎಂದು ಕರೆಯಲಾಗುತ್ತದೆ. ಈ ಔಷಧವನ್ನು ಅಭಿವೃದ್ಧಿಪಡಿಸುವ ಅಂತಿಮ ಹಂತದಲ್ಲಿ ನಮ್ಮ ವಿಜ್ಞಾನಿಗಳು ಇದ್ದಾರೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಟೆಲಿವಿಷನ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ ವೈಯಕ್ತಿಕವಾಗಿ ರೋಗಿಗಳಿಗೆ ಚಿಕಿತ್ಸೆ ನೀಡಲು ಈ ಪದ್ದತಿಯು ಪರಿಣಾಮಕಾರಿಯಾಗಲಿದೆ. ಶೀಘ್ರದಲ್ಲೇ ಈ ಚಿಕಿತ್ಸೆ ಜಾರಿಗೆ ಬರುವ ನಿರೀಕ್ಷೆ ಇದೆ ಎಂದು ಭವಿಷ್ಯದ ತಂತ್ರಜ್ಞಾನ ಕುರಿತಾಗಿ ಮಾಸ್ಕೋನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುಟಿನ್ ಹೇಳಿದ್ದಾರೆ. ಆದರೆ ಸ್ಪಷ್ಟವಾಗಿ ಯಾವ ವಿಧದ ಕ್ಯಾನ್ಸರ್ ವಿರುದ್ಧ ರಷ್ಯಾ ವಿಜ್ಞಾನಿಗಳು ಲಸಿಕೆ ಕಂಡು ಹಿಡಿದಿದ್ದಾರೆ ಅನ್ನೋ ಮಾಹಿತಿಯನ್ನು ಪುಟಿನ್ ವಿವರಿಸಿಲ್ಲ. ಹಾಗೆ ನೋಡಿದರೆ ವಿಶ್ವದ ಹಲವು ದೇಶಗಳು ಹಾಗೂ…

Read More

ಅಂಚೆ ಇಲಾಖೆಯಲ್ಲಿದೆ ಬರೋಬ್ಬರಿ 98,083 ಹುದ್ದೆ ಖಾಲಿ ಇದ್ದು, 10ನೇ ತರಗತಿ ಪಾಸಾದವರೂ ಅರ್ಜಿ ಸಲ್ಲಿಸಬಹುದು. ಸರ್ಕಾರಿ ಉದ್ಯೋಗ ಹೊಂದಬೇಕು ಎಂದು ಕನಸು ಕಾಣುತ್ತಿರುವವರಿಗೆ ಗುಡ್‌ನ್ಯೂಸ್‌ ಇಲ್ಲಿದೆ. ಭಾರತೀಯ ಅಂಚೆ ಇಲಾಖೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ದೇಶಾದ್ಯಂತ ಬರೋಬ್ಬರಿ 98,083 ಹುದ್ದೆಗಳು ಖಾಲಿ ಇದ್ದು, 10ನೇ ತರಗತಿ ತೇರ್ಗಡೆಯಾದವರೂ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಸದ್ಯ ಅಧಿಕೃತ ಅಧಿಸೂಚನೆ ಇನ್ನೂ ಬಿಡುಗಡೆಯಾಗಿಲ್ಲ. ಅದಾದ ಬಳಿಕವಷ್ಟೇ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕದ ಬಗ್ಗೆ ಮಾಹಿತಿ ಲಭಿಸಲಿದೆ. ಪರೀಕ್ಷೆ ಮೂಲಕ ಈ ನೇಮಕಾತಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ (Job Alert). ಹುದ್ದೆಗಳ ವಿವರ ಜಿಡಿಎಸ್‌ (Gramin Dak Sevak), ಪೋಸ್ಟ್‌ಮ್ಯಾನ್‌, ಎಂಟಿಎಸ್‌, ಪೋಸ್ಟಲ್‌ ಅಸಿಸ್ಟಂಟ್‌, ಮೇಲ್‌ ಗಾರ್ಡ್‌, ಸೋರ್ಟಿಂಗ್‌ ಅಸಿಸ್ಟಂಟ್‌ ಸೇರಿದಂತೆ ವಿವಿಧ ಹುದ್ದೆಗಳಿವೆ. ಕರ್ನಾಟಕದಲ್ಲಿ ಒಟ್ಟು 5,731 ಹುದ್ದೆಗಳಿವೆ. ರಾಜ್ಯದಲ್ಲಿ ಎಂಟಿಎಸ್‌ – 1,754, ಪೋಸ್ಟ್‌ಮ್ಯಾನ್ – 3,887 ಮತ್ತು ಮೇಲ್ ಗಾರ್ಡ್ – 90…

Read More

ಬೆಂಗಳೂರು:- ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯವಾಗಿದೆ. ಒಂದು ವೇಳೆ ಸರ್ಕಾರಿ ಕಚೇರಿ ಸೇರಿದಂತೆ ಅಂಗಡಿ ಮುಂಗಟ್ಟಗಳ ಫಲಕದಲ್ಲಿ ಕನ್ನಡ ಬಳಕೆ ಇಲ್ಲವಾದದ್ದು ಕಂಡು ಬಂದರೆ ಜನರು ದೂರು ನೀಡಬಹುದಾಗಿದೆ. ಇಂದು ವಿಧಾನಸಭೆಯಲ್ಲಿ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ವಿಧೇಯಕ -2024ವನ್ನು ಅಂಗೀಕರಿಸಲಾಯಿತು. ಕನ್ನಡ ಭಾಷೆಯ ಬಳಕೆ ಕುರಿತು ಯಾವುದೇ ವ್ಯಕ್ತಿ ದೂರು ನೀಡಲು ʼಕನ್ನಡ ಕಣ್ಗಾವಲುʼ ಎಂಬ ಆಪ್ ಅನ್ನು ರೂಪಿಸಲಾಗುತ್ತಿದೆ. ಇಲ್ಲಿಗೆ ಬರುವ ದೂರುಗಳನ್ನು ಸಂಬಂಧಪಟ್ಟ ಸಮಿತಿಗಳಿಗೆ ಕಳುಹಿಸಲಾಗುವುದು. ಆ ದೂರುಗಳ ಬಗ್ಗೆ ಶೀಘ್ರವೇ ಕ್ರಮವಹಿಸುವಂತೆ ವ್ಯವಸ್ಥೆ ರೂಪಿಸಲಾಗುತ್ತಿದೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು. ಕರ್ನಾಟಕ ವಿಧಾನ ಸಭೆಯು ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ವಿಧೇಯಕ -2024 ವನ್ನು ಇಂದು ಅಂಗೀಕರಿಸಿತು. ಅದರಂತೆ ಇನ್ನು ಮುಂದೆ ರಾಜ್ಯ ಸರ್ಕಾರದ ಇಲಾಖೆಗಳು, ಉದ್ಯಮಗಳು, ಸ್ವಾಯತ್ತ ಸಂಸ್ಥೆಗಳು, ಸಹಕಾರ ಮತ್ತು ಸಾರ್ವಜನಿಕ ಉದ್ಯಮಗಳು, ಬ್ಯಾಂಕುಗಳು, ಇತರ ಹಣಕಾಸು ಸಂಸ್ಥೆಗಳು, ಖಾಸಗಿ ಕೈಗಾರಿಕೆಗಳು ಮತ್ತು ವಿಶ್ವವಿದ್ಯಾಲಯಗಳ ಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ…

Read More

ಬೆಂಗಳೂರು:- ಡೋಂಟ್‌ ವರಿ, ನಾನು ಆರೋಗ್ಯವಾಗಿದ್ದೇನೆ ಎಂದು ಹೇಳುವ ಮೂಲಕ ಅನಾರೋಗ್ಯ ಸುದ್ದಿಗೆ ದೇವೇಗೌಡರ ಸ್ಪಷ್ಟನೆ ನೀಡಿದ್ದಾರೆ. ಹಿರಿಯ ರಾಜಕಾರಣಿಯಾಗಿರುವ ಎಚ್‌.ಡಿ ದೇವೇಗೌಡರಿಗೆ ಗುರುವಾರ ಮುಂಜಾನೆ ಸಣ್ಣ ಪ್ರಮಾಣದ ಆರೋಗ್ಯ ವ್ಯತ್ಯಯ (Health Problem) ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಗೆ (Manipal Hospital) ದಾಖಲಿಸಲಾಗಿತ್ತು. 90 ವರ್ಷದ ದೇವೇಗೌಡರಿಗೆ ಗುರುವಾರ ಬೆಳಗ್ಗೆ ಉಸಿರಾಟ ಸಮಸ್ಯೆ (Breathing Problem) ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಕೂಡಲೇ ಅವರನ್ನು ಮಣಿಪಾಲ್‌ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಶ್ವಾಸಕೋಶ ತಜ್ಞ ಡಾ.ಸತ್ಯನಾರಾಯಣ ಅವರು ಪರೀಕ್ಷೆ ನಡೆಸಿ ಚಿಕಿತ್ಸೆಗಾಗಿ ದಾಖಲಿಸಿಕೊಂಡರು ಎನ್ನಲಾಗಿದೆ. ಆದರೆ, ಅವರ ಅನಾರೋಗ್ಯಕ್ಕೆ ಸಂಬಂಧಿಸಿ ಕೆಲವು ಮಾಧ್ಯಮಗಳಲ್ಲಿ ಅತಿರಂಜಿತ ವರದಿಗಳು ಪ್ರಕಟಗೊಂಡ ಹಿನ್ನೆಲೆಯಲ್ಲಿ ಅವರೇ ಸ್ಪಷ್ಟೀಕರಣ ನೀಡಿದ್ದಾರೆ. ದೇವೇಗೌಡರು ಆರೋಗ್ಯವಾಗಿಯೇ ಇದ್ದಾರೆ. ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಹೀಗಾಗಿ ಆತಂಕ ಪಡುವ ಅಗತ್ಯ ಇಲ್ಲ ಎಂದು ಮಣಿಪಾಲ್‌ ಆಸ್ಪತ್ರೆಯ ವೈದ್ಯರೂ ಮಾಹಿತಿ ನೀಡಿದ್ದಾರೆ. ಅವರು ಆಹಾರ ಸೇವನೆ ಮಾಡುತ್ತಿದ್ದಾರೆ, ಅವರ ಉಸಿರಾಟವೂ ಸಹಜ ಸ್ಥಿತಿಗೆ ಬರುತ್ತಿದೆ ಎಂದು…

Read More

ರಾಮನಗರ:- ಜಿಲ್ಲೆಯ ಯರೇಹಳ್ಳಿ ಗ್ರಾಮದಲ್ಲಿ ಪ್ರಪಂಚಕ್ಕೆ ಹಾಲುಣಿಸುವ ಗೋಮಾತೆಗೆಯೇ ನಾಯಿಯೊಂದು ಹಾಲುಣಿಸಿದ ಘಟನೆ ಜರುಗಿದೆ. ಸಾವಿತ್ರಮ್ಮ ಎಂಬುವವರಿಗೆ ಸೇರಿದ ಈ ಕರು, ನಾಯಿಯ ಬಳಿ ಹಾಲು ಕುಡಿದಿದೆ. ನಾಯಿ ಹಾಗೂ ಕರುವಿನ ಬಾಂಧವ್ಯಕ್ಕೆ ಅಚ್ಚರಿಗೊಂಡ ಗ್ರಾಮಸ್ಥರು, ನಾಯಿ ಬಳಿ ಕರು ಹಾಲು ಕುಡಿಯುವ ವೀಡಿಯೋವನ್ನು ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಫುಲ್​ ವೈರಲ್ ಆಗಿದೆ ಎನ್ನಲಾಗಿದೆ.

Read More

ಬೆಂಗಳೂರು:- ಗ್ಯಾರಂಟಿಗಳ ಹೆಸರಿನಲ್ಲಿ ಸರ್ಕಾರದ ಲೂಟಿ ಜಾತ್ರೆ ಎಂದು ಹೇಳುವ ಮೂಲಕ ಮಾಜಿ ಸಿಎಂ HD ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಐದು ಗ್ಯಾರಂಟಿಗಳ ಪ್ರಚಾರ ಮತ್ತು ಸಮೀಕ್ಷೆಗಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ಜನರ ತೆರಿಗೆ ಹಣವನ್ನು ಮನಸೋ ಇಚ್ಛೆ ಪೋಲು ಮಾಡುತ್ತಿದೆ.‌ ಗ್ಯಾರಂಟಿಗಳ ಪ್ರಚಾರಕ್ಕೆ ಕೋಟ್ಯಂತರ ರೂಪಾಯಿ ಸುರಿಯುತ್ತಿರುವ ಸ‌ರ್ಕಾರವು, ಬೇಕು ಬೇಕಾದವರಿಗೆ, ಶಾಸಕರ ಕುಟುಂಬಕ್ಕೆ ಸಮೀಕ್ಷೆಯ ಹೆಸರಿನಲ್ಲಿ ಹಣ ಕೊಟ್ಟಿದೆ ಎಂದು ವಿಧಾನಸಭೆ ಅಧಿವೇಶನದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ವಿಧಾನಸಭೆಯಲ್ಲಿ ಗುರುವಾರ ರಾಜ್ಯಪಾಲರ ಭಾಷಣಾ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗಿಯಾಗಿ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ, ʼದ ಪಾಲಸಿ ಪ್ರಂಟ್‌ʼ ಎನ್ನುವ ದಿಕ್ಕಿಲ್ಲದ ಸಂಸ್ಥೆಗೆ ಸಮೀಕ್ಷೆ ಮಾಡುವುದಕ್ಕೆ 7.20 ಕೋಟಿ ರೂ. ಮೊತ್ತದ ಗುತ್ತಿಗೆ ಕೊಡಲಾಗಿದೆ. ಆದರೆ, ಕಂಪನಿಯ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಅದರ ಹಿಂದೆ ಮುಂದೆ ಯಾರಿದ್ದಾರೆ ಎನ್ನುವುದೂ ತಿಳಿದಿಲ್ಲ. ಆದರೂ, ಸರ್ಕಾರ ಇಷ್ಟು ಪ್ರಮಾಣದಷ್ಟು ಹಣವನ್ನು ಆ ಕಂಪನಿಗೆ ಕೊಟ್ಟಿದೆ.…

Read More

ಬೆಂಗಳೂರು:- 48 ಗಂಟೆ ಅವಧಿಯಲ್ಲಿ ಮದ್ಯ ಮಾರಾಟ ನಿಷೇಧಿಸಿದ್ದ ಕ್ರಮವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ವಿಧಾನಪರಿಷತ್ ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ದಿನಕ್ಕೂ ಹಿಂದಿನ 48 ಗಂಟೆ ಅವಧಿಯಲ್ಲಿ ಮದ್ಯ ಮಾರಾಟ ನಿಷೇಧಿಸಿದ್ದ ಜಿಲ್ಲಾಧಿಕಾರಿಯ ಕ್ರಮವನ್ನು ಎತ್ತಿಹಿಡಿದಿರುವ ಹೈಕೋರ್ಟ್, ಕೇವಲ ಮತ ಎಣಿಕೆ ಹಾಗೂ ಮತದಾನ ದಿನಕ್ಕೆ ಸೀಮಿತಗೊಳಿಸಿದ್ದ ಏಕ ಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಿದೆ. ಮಧ್ಯಮಾರಾಟ ನಿಷೇಧ ಒಂದು ದಿನಕ್ಕೆ ಸೀಮಿತಗೊಳಿಸಿ ಆದೇಶವನ್ನು ಪ್ರಶ್ನಿಸಿ ಸರ್ಕಾರ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ಸೋಮಶೇಖರ್ ಹಾಗೂ ಉಮೇಶ ಅಡಿಗ ಅವರಿದ್ದ ವಿಭಾಗೀಯ ಪೀಠ, ಏಕ ಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಿದೆ. ವಿಚಾರಣೆ ವೇಳೆ ಸರ್ಕಾರದ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಪ್ರತೀಮಾ ಹೊನ್ನಾಪುರ, ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 135(ಸಿ) ಪ್ರಕಾರ ಯಾವುದೇ ಚುನಾಚಣೆ ಘೋಷಣೆ ಆದರೂ, ಚುನಾವಣೆಗೂ ಮುನ್ನ 48 ಗಂಟೆಗಳ ಕಾಲ ಮದ್ಯಮಾರಾಟಕ್ಕೆ ನಿರ್ಬಂಧ ವಿಧಿಸಬೇಕು…

Read More

ಪ್ರಸಿದ್ಧ ಐಷಾರಾಮಿ ಫೋನ್‌ಗಳನ್ನು ಪರಿಚಯಿಸುವ ಕ್ಯಾವಿಯರ್ (Caviar) ಇದೀಗ ಐಫೋನ್‌ 15 ಪ್ರೊ ಮ್ಯಾಕ್ಸ್‌ (Apple iPhone 15 Pro Max) ಫೋನಿನ ಲಕ್ಸುರಿ ಕಸ್ಟಮ್ ಆವೃತ್ತಿಯನ್ನು ಪರಿಚಯಿಸಿದ್ದು, ಇದನ್ನು ‘ಗಾರ್ಡನ್ ಆಫ್ ಈಡನ್’ ಎಂದು ಕರೆಯಲಾಗಿದೆ. ಇನ್ನು ಈ ಫೋನ್‌ ಹೈ ಎಂಡ್ ಮಾಡೆಲ್‌ ಬೆಲೆಯು ಬರೋಬ್ಬರಿ 50 ಲಕ್ಷಕ್ಕೂ ಹೆಚ್ಚಿದೆ ಎಂದು ವರದಿ ಆಗಿದೆ. ಹಾಗೆಯೇ ಈ ಹೊಸ ಕಸ್ಟಮ್ ಐಫೋನ್ ಶ್ರೇಣಿಯ ಆರಂಭಿಕ ಬೆಲೆಯು 7.9 ಲಕ್ಷ ರೂ. ಗಳಿಂದ ಪ್ರಾರಂಭವಾಗುತ್ತದೆ. ಈ ಫೋನ್‌ ಸರಣಿಯು ವಜ್ರಗಳು, ರತ್ನದ ಕಲ್ಲುಗಳು ಮತ್ತು Swarovski ಸ್ಫಟಿಕಗಳಿಂದ ಅಲಂಕರಿಸಲ್ಪಟ್ಟಿದೆ. ಈ ಸಂಗ್ರಹದ ಪ್ರಮುಖವಾದ ಪ್ಯಾಂಥರ್ ಗೋಲ್ಡ್ 18K, ಸಂಪೂರ್ಣವಾಗಿ 18K ಚಿನ್ನದಿಂದ ರಚಿಸಲಾದ ಚಾಸಿಸ್ ಅನ್ನು ಪಡೆದುಕೊಂಡಿದೆ. ಇದರ ಸೊಗಸಾದ ಪ್ಯಾಂಥರ್ ಬಾಸ್-ರಿಲೀಫ್ ಕಪ್ಪು ವಜ್ರಗಳಿಂದ ಅಲಂಕರಿಸಲ್ಪಟ್ಟಿದೆ, ಹಾಗೆಯೇ ಒಟ್ಟು ಪ್ರಭಾವಶಾಲಿ 159 ವಜ್ರಗಳನ್ನು ಹೊಂದಿದೆ. ಅದೇ ರೀತಿ ಈ ಫೊನಿನ ಆರ್ಕಿಡ್ red calfskin ಹೊಂದಿದೆ, 24K ಚಿನ್ನದ…

Read More

ಹುಬ್ಬಳ್ಳಿ: ‍ಪತ್ರಿಕಾ ಮಾರಾಟಗಾರರ ಹಿತದೃಷ್ಟಿಯಿಂದ ₹ 5 ಕೋಟಿಯ ಕ್ಷೇಮ ನಿಧಿ ಸ್ಥಾಪಿಸಲು ಕೋರಿ ಹುಬ್ಬಳ್ಳಿ ಪತ್ರಿಕಾ ಮಾರಾಟಗಾರರ ಸಂಘದ ಸದಸ್ಯರು ಬುಧವಾರ ತಹಶೀಲ್ದಾರ್‌ರಿಗೆ ಮನವಿಪತ್ರ ಸಲ್ಲಿಸಿದರು. ಈ ಸಲ ಮಂಡನೆಯಾಗುವ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರಿಕಾ ಮಾರಾಟಗಾರರು ಮತ್ತು ವಿತರಕರ ಬೇಡಿಕೆಗೆ ಸ್ಪಂದಿಸಬೇಕು. ಕ್ಷೇಮ ನಿಧಿ ಸ್ಥಾಪನೆ, ಸಮುದಾಯ ಭವನ ನಿರ್ಮಾಣಕ್ಕೆ ಜಾಗ ಕಲ್ಪಿಸಬೇಕು ಮತ್ತು ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಒದಗಿಸಬೇಕು’ ಎಂದು ಸಂಘದ ಸದಸ್ಯರು ಕೋರಿದರು. ಸಂಘದ ಅಧ್ಯಕ್ಷ ಮನೋಹರ ಪರ್ವತಿ, ಉಪಾಧ್ಯಕ್ಷ ಹನುಮಂತ ಮೆಣಸಿನಕಾಯಿ, ಕಾರ್ಯದರ್ಶಿ ರಮೇಶ್ ಜಿತುರಿ, ಸಹಕಾರ್ಯದರ್ಶಿ ಅರುಣ್ ತೋಡಕರ, ಸಿ.ಎಸ್.ಹಿರೇಮಠ, ಮುಷ್ತಾಕ್ ಅಹಮದ್ ಬಿಫಾರಿ, ವಿನಯ ಡಗೆ, ವಿನೋದ ರತನ್, ಆನಂದ ರಶ್ಮಿ, ಮಲ್ಲೇಶಪ್ಪ ಅಣಿ, ಮಂಜು ಅಂಬಿಗೇರ, ಎಸ್ ಬಿ ಅಂಬಿಗೇರ, ಸಂತೋಷ್ ಕಲ್ಲಣ್ಣವರ್, ಶಿವಾಜಿ ತಡಸ, ಶ್ರೀಕಾಂತ್ ಹಳ್ಳಿಕೇರಿ, ರಫಿಕ್ ನರಗುಂದಕರ, ಐ.ಎಸ್.ಹಿರೇಮಠ್, ಶಿವಾನಂದ್ ಹೆಂಡಸಗಿರಿ, ಮಂಜು ಕುಬಸದ‌ ಮತ್ತು ಇತರರ ಉಪಸ್ಥಿತರಿದ್ದರು.

Read More