Author: AIN Author

ಗಾಂಧಿನಗರ: ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ 2011ರಲ್ಲೇ 11 ಕೋಟಿ ರೂ. ದೇಣಿಗೆ ನೀಡಿದ್ದ ಉದ್ಯಮಿ, ಸಮಾಜ ಸೇವಕ ಗೋವಿಂದ್ ಧೋಲಾಕಿಯಾ (Govind Dholakia) ಅವರನ್ನು ರಾಜ್ಯಸಭಾ ಚುನಾವಣೆಗೆ (Rajya Sabha) ಗುಜರಾತ್‌ನಿಂದ ಬಿಜೆಪಿ (BJP)  ನಾಮನಿರ್ದೇಶನ ಮಾಡಿದೆ. ಗೋವಿಂದ್ ಧೋಲಾಕಿಯಾ ಅವರು ಸೂರತ್ ಮೂಲದ ವಜ್ರ (Diamond) ಉತ್ಪಾದನೆ ಮತ್ತು ರಫ್ತು ಮಾಡುವ ಕಂಪನಿಯಾದ ಶ್ರೀ ರಾಮಕೃಷ್ಣ ಎಕ್ಸ್‌ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷರಾಗಿದ್ದಾರೆ. https://ainlivenews.com/300-units-of-free-electricity-for-1-crore-houses-how-to-apply-online/ ಕಡುಬಡತನದಲ್ಲಿ ಬಾಲ್ಯ ಕಳೆದಿದ್ದ ಇವರು ಈಗ ದೊಡ್ಡ ಉದ್ಯಮಿಯಾಗಿ ಹೊರ ಹೊಮ್ಮಿದ್ದು ವಿಶ್ವದ ಅತಿ ದೊಡ್ಡ ವಜ್ರ ಕಂಪನಿಗಳಲ್ಲಿ ಇವರ ಕಂಪನಿಯೂ ಒಂದಾಗಿದೆ. ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ರೈತ ಕುಟುಂಬದಿಂದ ನಾನು ಬಂದಿದ್ದೇನೆ. ರಾಜ್ಯಸಭಾ ಅಭ್ಯರ್ಥಿಗಳ ಪಟ್ಟಿ ಅಧಿಕೃತವಾಗಿ ಬಿಡುಗಡೆಯಾಗುವ ನಾಲ್ಕು ಗಂಟೆಗಳ ಮೊದಲು ನನ್ನ ನಾಮನಿರ್ದೇಶನದ ಬಗ್ಗೆ ನನಗೆ ತಿಳಿಯಿತು. ನನ್ನ ಹೆಸರನ್ನು ಅಂತಿಮಗೊಳಿಸುವ ಮೊದಲು ಬಿಜೆಪಿ ನಾಯಕತ್ವವು ಖಂಡಿತವಾಗಿಯೂ ಚಿಂತನೆ ನಡೆಸಿರಬೇಕು ಎಂದು ಹೇಳಿದರು.

Read More

ಉಡುಪಿ:- ಲೋಕಸಭಾ ಚುನಾವಣೆ ಹಿನ್ನೆಲೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದಲೇ ಸ್ಪರ್ಧೆ ಮಾಡಲಾಗುತ್ತದೆ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಹಲವು ಕ್ಷೇತ್ರಗಳಿಂದ ನನ್ನ ಹೆಸರು ಕೇಳಿ ಬರುತ್ತಿದೆ. ಕನಿಷ್ಠ 5-6 ಕ್ಷೇತ್ರಗಳು ನನ್ನ ಹೆಸರನ್ನು ಹೇಳುತ್ತಿವೆ. ಆದರೆ ಉಡುಪಿ-ಚಿಕ್ಕಮಗಳೂರು ನನ್ನ ಕ್ಷೇತ್ರ. ಈ ಕ್ಷೇತ್ರದ ಜನರು ನನ್ನನ್ನು ಗೆಲ್ಲಿಸಿದ್ದರು. ನಾನು ಬೇರೆ ಕ್ಷೇತ್ರಗಳಿಗೆ ಹೋಗುವ ಪ್ರಶ್ನೆಯೇ ಇಲ್ಲ. ಆದರೆ ಪಕ್ಷ ಬದಲಾವಣೆ ಬಯಸಿದಲ್ಲಿ ಅದನ್ನು ಪಾಲಿಸಿ ಪಕ್ಷದ ತೀರ್ಮಾನಕ್ಕೆ ಬದ್ಧರಾಗಿರುತ್ತೇನೆ ಎಂದು ಹೇಳಿದ್ದಾರೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ. ನನ್ನ ಅಭಿವೃದ್ಧಿ ಕಾರ್ಯಗಳ ಆಧಾರದ ಮೇಲೆ ಪ್ರಚಾರಕ್ಕೆ ಹೋಗಲು ನಿರ್ಧರಿಸಿದ್ದೇನೆ ಎಂದು ಅವರು ಹೇಳಿದ್ದಾರೆ. ಇತ್ತೀಚೆಗೆ ಕಾಂಗ್ರೆಸ್‌ಗೆ ಮರಳಿದ ಜೆಪಿ ಹೆಗಡೆಯವರನ್ನು ಉದ್ದೇಶಿಸಿ ಮಾತನಾಡಿದ ಶೋಭಾ ಕರಂದ್ಲಾಜೆ, ಯಾರು ಕಾಂಗ್ರೆಸ್‌ಗೆ ಮರಳುತ್ತಾರೋ, ಯಾರು ಬಿಜೆಪಿಯಲ್ಲಿ ಇರುತ್ತಾರೋ ಗೊತ್ತಿಲ್ಲ. ಬಿಜೆಪಿಯಿಂದ ಲಾಭ ಪಡೆದು ಹೋದವರು ಅವರೇ ನಷ್ಟ ಅನುಭವಿಸುತ್ತಾರೆ. ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವ ಸುವರ್ಣಾವಕಾಶ ನಮ್ಮ ಮುಂದಿದೆ. ಈ…

Read More

ಮುಂಬೈ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ 17ನೇ ಆವೃತ್ತಿ IPLನ ಕೆಲ ಪಂದ್ಯಗಳು ವಿದೇಶದಲ್ಲಿ ನಡೆಯಲಿವೆ ಎಂಬ ಊಹಾಪೋಹಗಳಿಗೆ ಐಪಿಎಲ್ ಮುಖ್ಯಸ್ಥ ಅರುಣ್‌ ಧುಮಾಲ್ (Arun Dhumal) ತೆರೆ ಎಳೆದಿದ್ದಾರೆ. ಈ ಬಾರಿ ಐಪಿಎಲ್ ಭಾರತದಲ್ಲೇ ನಡೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಬ್ರಾಂಡ್ ಅಂಬಾಸಿಡರ್ ಆಗಿ ನಟಿ ಕತ್ರಿನಾ ಕೈಫ್ ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿರುವ ಅವರು, ಈ ಬಾರಿ ಐಪಿಎಲ್‌ ಭಾರತದಲ್ಲೇ ನಡೆಯಲಿದೆ. ಈ ಬಗ್ಗೆ ಸರ್ಕಾರದ ಜೊತೆ ಮಾತುಕತೆ ನಡೆಸುತ್ತಿದ್ದೇವೆ. ಲೋಕಸಭೆ ಚುನಾವಣೆಗೆ (Lok Sabha Elections) ವೇಳಾಪಟ್ಟಿ ಪ್ರಕಟಗೊಳ್ಳಲು ಕಾಯುತ್ತಿದೇವೆ. ಆ ಬಳಿಕ ಐಪಿಎಲ್ ವೇಳಾಪಟ್ಟಿ ಅಂತಿಮಗೊಳಿಸುತ್ತೇವೆ ಎಂದಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮಾರ್ಚ್ ಅಂತ್ಯದ ವೇಳೆಗೆ ಟೂರ್ನಿ ಆರಂಭಗೊಳ್ಳುವ ನಿರೀಕ್ಷೆಯಿದೆ. ಏಪ್ರಿಲ್‌ನಲ್ಲಿ ಚುನಾವಣೆ ನಡೆಯಬಹುದು. ಹೀಗಾಗಿ ಸರ್ಕಾರದ ಜೊತೆ ಸಂಪರ್ಕದಲ್ಲಿದ್ದೇವೆ. ಜೊತೆಗೆ ಎಲ್ಲಾ ಪಂದ್ಯಗಳು ಭಾರತದಲ್ಲಿ ನಡೆಯುವಂತೆ ನೋಡಿಕೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ

Read More

ಕಾರವಾರ:- ಎಲ್ಲಿಯವರೆಗೆ ಇಸ್ಲಾಂ ಇರುತ್ತೋ ಅಲ್ಲಿವರೆಗೆ ಜಗತ್ತಿಗೆ ನೆಮ್ಮದಿ ಇಲ್ಲ ಎಂದು ಅನಂತಕುಮಾರ್ ಹೆಗಡೆ ಹೇಳಿದ್ದಾರೆ.ಇಸ್ಲಾಂ ಇರುವವರೆಗೆ ಜಗತ್ತಿನಲ್ಲಿ ನೆಮ್ಮದಿ ಇರುವುದಿಲ್ಲ. ಇಂತಹ ಕಾಲಘಟ್ಟದಲ್ಲಿ ಹಿಂದೂ ಧರ್ಮ, ದೇಶ ಉಳಿಯಲು ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಮಂತ್ರಿ ಆಗಬೇಕಾಗಿದೆ ಎಂದರು. ಭಾರತೀಯ ಜನತಾ ಪಕ್ಷ, ಸಂಘ ಪರಿವಾರ ಇದ್ದಲ್ಲಿ ಜಗತ್ತಿಗೆ ನೆಮ್ಮದಿ ಇರಲಿದೆ. ನಾವಿಲ್ಲದಿದ್ದರೆ ಜಗತ್ತಿಗೆ ನೆಮ್ಮದಿ ಇಲ್ಲ, ಹಿಂದುತ್ವವೇ ದೇಶದ ಉಸಿರು ಎಂದ ಅನಂತಕುಮಾರ್ ಹೆಗಡೆ, ಬಿಜೆಪಿ ಉತ್ಸಾಹ ನೋಡಿ ಲೋಕಸಭೆ ಚುನಾವಣೆ ಘೋಷಣೆಗೂ ಮುನ್ನವೇ ಕಾಂಗ್ರೆಸ್​ನವರು ಶಸ್ತ್ರ ತ್ಯಜಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ವೈಚಾರಿಕವಾಗಿ ಗೆದ್ದು ತೋರಿಸಬೇಕಿದೆ ಎಂದರು. ಈ ಹಿಂದೆ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಶ್ರೀರಾಮಮಂದಿರ ವಿಚಾರದಲ್ಲಿ ರಾಜಕೀಯ ಜಟಾಪಟಿ ಜ್ವಾಲೆಯಂತೆ ಹೊತ್ತಿ ಉರಿಯುತ್ತಿದ್ದ ನಡುವೆಯೇ “ಬಾಬ್ರಿ ಮಸೀದಿ ನಿರ್ನಾಮದಂತೆ ಭಟ್ಕಳದಲ್ಲಿಯೂ ಚಿನ್ನದ ಪಳ್ಳಿ ನೆಲಸಮವಾಗಲಿದೆ” ಎಂದು ಅನಂತಕುಮಾರ್ ಹೆಗಡೆ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಬಾಬ್ರಿ ಮಸೀದಿ ನಿರ್ನಾಮದಂತೆ ಭಟ್ಕಳದಲ್ಲಿಯೂ ಮಾಡ್ತೇವೆ, ಅದರ ಸಾಲಿಗೆ ಸಾಲಿಗೆ ಭಟ್ಕಳದ…

Read More

ಮುಂಬರುವ T20 ವಿಶ್ವಕಪ್ 2024 ರಲ್ಲಿ ರೋಹಿತ್ ಶರ್ಮಾ (Rohit Sharma) ಭಾರತವನ್ನು ಮುನ್ನಡೆಸಲಿದ್ದಾರೆ. ಟಿ-20 ವಿಶ್ವಕಪ್‌ನಲ್ಲಿ ರೋಹಿತ್ ನಾಯಕತ್ವದಲ್ಲಿ ಭಾರತ ತಂಡ ಆಡಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ (BCCI secretary Jay Shah) ಬುಧವಾರ ಹೇಳಿದ್ದಾರೆ. ಹಾರ್ದಿಕ್ ಪಾಂಡ್ಯ ಉಪನಾಯಕನಾಗಿದ್ದು, ರಾಹುಲ್ ದ್ರಾವಿಡ್ (Rahul Dravid) ಕೋಚ್ ಆಗಲಿದ್ದಾರೆ. ಆಸೀಸ್‌ ವಿರುದ್ಧ ಟಿ20-ಐ ಸರಣಿಗೆ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ತಂಡ ಪ್ರಕಟ! ಸೌರಾಷ್ಟ್ರ ಕ್ರಿಕೆಟ್ ಸ್ಟೇಡಿಯಂಗೆ ಬಿಸಿಸಿಐನ ಮಾಜಿ ಕಾರ್ಯದರ್ಶಿ ನಿರಂಜನ್ ಶಾ (Niranjan Shah) ಅವರ ಹೆಸರಿಡುವ ಕಾರ್ಯಕ್ರಮದ ವೇಳೆ ಜಯ್ ಶಾ ಅವರು, 2023ರಲ್ಲಿ ಅಹಮದಾಬಾದ್‌ನಲ್ಲಿ ಸತತ 10 ಗೆಲುವಿನ ನಂತರ ನಾವು ವಿಶ್ವಕಪ್ ಗೆಲ್ಲಲು ಸಾಧ್ಯವಾಗಲಿಲ್ಲ, ಆದರೆ ನಾವು ಹೃದಯವನ್ನು ಗೆದ್ದಿದ್ದೇವೆ ಎಂದು ಹೇಳಿದರು. 2024ರಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಬಾರ್ಬಡೋಸ್‌ನಲ್ಲಿ ಭಾರತದ ಧ್ವಜವನ್ನು ಹಾರಿಸುವ ಭರವಸೆ ನೀಡುವುದಾಗಿ ತಿಳಿಸಿದರು. ಈ ವೇಳೆ ನಿರಂಜನ್ ಶಾ, ಮಾಜಿ ನಾಯಕ ಸುನಿಲ್ ಗವಾಸ್ಕರ್, ಅನಿಲ್…

Read More

ಕಂಪ್ಲಿ:-ಕಂಪ್ಲಿ ಪಟ್ಟಣದ ಆರಾಧ್ಯ ದೈವ ಶ್ರೀ ಅಯ್ಯಪ್ಪ ಸ್ವಾಮಿಯ ಸಾವಿರಾರು ಭಕ್ತರ ಹಾಗೂ ಶಿಷ್ಯವೃಂದವರಿಗೆ ಗುರುಗಳಾದ ಪರಮ ಪೂಜ್ಯ ಶ್ರೀ ವಸಂತ ಗುರುಸ್ವಾಮಿಗಳು ಗುರುವಾರ ರಾತ್ರಿ ಅನಾರೋಗ್ಯದಿಂದ ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಚಿಕಿತ್ಸಾ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಸಂದರ್ಭದಲ್ಲಿ ಶಿಷ್ಯವೃಂದವರು ಮಾತಾನಾಡಿ, ಗುರುಗಳು ಮೂಲತಃ ಉಡುಪಿಯರು ಇವರಿಗೆ ಮಂಗಮ್ಮ ಎಂಬ ಧರ್ಮಪತ್ನಿಯಿದ್ದು, ಇವರು ಕಂಪ್ಲಿ ಪಟ್ಟಣದಲ್ಲಿ ಸರಿ ಸುಮಾರು 38 ವರ್ಷಗಳ ಕಾಲ ಸತತವಾಗಿ ಶಬರಿ ಮಲೈ ಯಾತ್ರೆಯನ್ನು ಮಾಡಿದ್ದು, ಸುತ್ತ ಮುತ್ತನ ಸಾವಿರಾರು ಶಿಷ್ಯರಿಗೆ ಮಾಲೆಧಾರಣೆ ಮಾಡುತ್ತದ್ದಾರು, ಮತ್ತು ಅಯ್ಯಪ್ಪಸ್ವಾಮಿ ಶಾಸ್ತ್ರ ಬದ್ಧವಾದ ಪೂಜೆಯನ್ನು ಹಾಗೂ ಸತತ 38 ವರ್ಷಗಳ ಕಾಲ ಅಯ್ಯಪ್ಪನ ಸೇವೆಯನ್ನು ಮಾಡುತ್ತ, ಶಿಷ್ಯವೃದವರ ಅಪಾರ ಪ್ರೀತಿ ಅಭಿಮಾನವನ್ನು ಗಳಿಸಿದ ಗುರುಗಳು ಆಗಲಿರುವ ಎಲ್ಲ ಶಿಷ್ಯವೃಂದಕ್ಕೆ ತುಂಬಾ ನೋವುಂಟು ಮಾಡಿದೆ ಎಂದರು. ಅಂತ್ಯಸಂಸ್ಕಾರ ಶುಕ್ರವಾರ ಮಧ್ಯಾಹ್ನದ 2 ಗಂಟೆಗೆ ಕಂಪ್ಲಿ ಕೋಟೆ ಹೊಳೆ ಹತ್ತಿರ ಜರುಗಲಿದ್ದು, ಅಪಾರ ಸಂಖ್ಯೆಯ ಶಿಷ್ಯರು ಈ ಅಂತ್ಯಸಂಸ್ಕಾರಕ್ಕೆ ಪಾಲ್ಗೊಳ್ಳಲಿದ್ದಾರೆ. ಈ…

Read More

ಮುಂಬರುವ ಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಹಿಟ್​ ಮ್ಯಾನ್ ರೋಹಿತ್ ಶರ್ಮಾ ಅವರೇ ನಾಯಕರಾಗಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಈ ಕುರಿತು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅಧಿಕೃತಪಡಿಸಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ರೋಹಿತ್ ಶರ್ಮಾ ಅವರ ನಾಯಕತ್ವದಲ್ಲಿ ಭಾರತ 2024ರ ಟಿ-20 ವಿಶ್ವಕಪ್ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದ್ದಾರೆ. ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಬ್ರಾಂಡ್ ಅಂಬಾಸಿಡರ್ ಆಗಿ ನಟಿ ಕತ್ರಿನಾ ಕೈಫ್ ಜಯ್ ಶಾ ಹೇಳಿಕೆಯಿಂದ ರೋಹಿತ್ ಶರ್ಮಾ ಹಾಗೂ ಹಾರ್ದಿಕ್ ಪಾಂಡ್ಯ ಇಬ್ಬರಲ್ಲಿ ಯಾರು ನಾಯಕ ಎಂಬ ಬಗ್ಗೆ ಸ್ಪಷ್ಟನೆ ಲಭಿಸಿದೆ. ಹಾರ್ದಿಕ್ ಪಾಂಡ್ಯ ಉಪನಾಯಕನ ಜವಾಬ್ದಾರಿ ನಿಭಾಯಿಸಲಿದ್ದಾರೆ. ಈ ಬಗ್ಗೆ ಬಿಸಿಸಿಐ ಅಧಿಕೃತ ಹೇಳಿಕೆ ನೀಡಬೇಕಿದೆ. ಈಗಾಗಲೇ ಮುಂಬೈ ಇಂಡಿಯನ್ಸ್​ ತಂಡದ ನಾಯಕತ್ವದಿಂದ ರೋಹಿತ್ ಶರ್ಮಾ ಅವರನ್ನು ಕೆಳಗಿಳಿಸಿ ಹಾರ್ದಿಕ್ ಪಾಂಡ್ಯಗೆ ನಾಯಕತ್ವದ ಜವಾಬ್ದಾರಿ ನೀಡಿರುವುದು ಗೊತ್ತೇ ಇದೆ. ಈ ಬಾರಿ ಐಪಿಎಲ್ ಭಾರತದಲ್ಲಿ ಡೌಟ್​? ಐಪಿಎಲ್​ಗೆ ಭಾರತದಲ್ಲಿ ಭಾರಿ ಕ್ರೇಜ್ ಇದೆ. ಎರಡು ತಿಂಗಳು ನಡೆಯುವ ಚುಟುಕು ಕ್ರಿಕೆಟ್ ದೇಶದಲ್ಲಿ…

Read More

ಚುನಾವಣಾ ಬಾಂಡ್‌ ಯೋಜನೆಯ ಕುರಿತು ಸುಪ್ರೀಂಕೋರ್ಟ್​ ಮಹತ್ವದ ತೀರ್ಪು ನೀಡಿದೆ. ಈ ಯೋಜನೆಯು ಸಂವಿಧಾನ ಬಾಹಿರವಾಗಿದೆ. ಅನುಚ್ಛೇದ 19 ಕಲಂ 1 (ಎ) ಅನ್ನು ಇದು ಉಲ್ಲಂಘಿಸುತ್ತದೆ. ಹೀಗಾಗಿ ಬಾಂಡ್​ಗಳನ್ನು ರದ್ದು ಮಾಡಬೇಕು ಎಂದು ಆದೇಶಿಸಿದೆ. ಚುನಾವಣಾ ಬಾಂಡ್​ ಎಂದರೇನು?  ಇದು ಜನಸಾಮಾನ್ಯರು, ಕಾರ್ಪೊರೇಟ್ ಸಂಸ್ಥೆಗಳು ರಾಜಕೀಯ ಪಕ್ಷಗಳಿಗೆ ನೀಡುವ ಒಂದು ವಿಧದ ದೇಣಿಗೆ ಕ್ರಮ. 1,000 ರೂ, 10,000 ರೂ, 1 ಲಕ್ಷ ರೂ, 10 ಲಕ್ಷ ರೂ, 1 ಕೋಟಿ ರೂ ಇತ್ಯಾದಿ ಮುಖಬೆಲೆಗಳಲ್ಲಿ ಬಾಂಡ್​ಗಳನ್ನು ಖರೀದಿಸಬಹುದು. ಈ ಬಾಂಡ್​ಗಳು ಅನಾಮಧೇಯವಾಗಿರುತ್ತವೆ. ಅಂದರೆ, ಇದನ್ನು ಖರೀದಿಸಿದ ವ್ಯಕ್ತಿ ಅಥವಾ ಸಂಸ್ಥೆಯ ಹೆಸರು ಬಹಿರಂಗ ಇರುವುದಿಲ್ಲ. ಯಾವ ರಾಜಕೀಯ ಪಕ್ಷಕ್ಕೆ ದೇಣಿಗೆ ಕೊಡಲಾಗಿದೆ ಆ ಪಕ್ಷ ಹೆಸರೂ ಬಹಿರಂಗ ಇರುವುದಿಲ್ಲ. ಗಮನಿಸಿ: ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಇನ್ನೂ ಹಣ ಬಂದಿಲ್ಲವೇ: ಈ ಕೂಡಲೇ ಈ ಕೆಲಸ ಮಾಡಿ ನೋಡಿ! ಯೋಜನೆಯಲ್ಲಿರುವುದು ಏನೇನು? ಅನಾಮಧೇಯ ವ್ಯಕ್ತಿಗಳಿಂದ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಬಹುದು.…

Read More

ಬೆಂಗಳೂರು:- ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಸಂಘಟನೆಗಳು ಇಂದು ಗ್ರಾಮೀಣ ಭಾರತ ಬಂದ್​ ಗೆ ಕರೆ ನೀಡಿದೆ. ಹರಿಯಾಣದ ಶಂಭು ಗಡಿಯಲ್ಲಿ ಠಿಕಾಣಿ ಹೂಡಿರೋ ರೈತರು ಯಾವುದೇ ಕಾರಣಕ್ಕೂ ಹಿಂದೆ ಸರಿಯೋದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ರೈತರ ಮನವೊಲಿಸಲು ಕೇಂದ್ರ ಸರ್ಕಾರ ಸಭೆ ಮೇಲೆ ಸಭೆ ಮಾಡುತ್ತಾ ಕಸರತ್ತು ನಡೆಸ್ತಿದೆ. ರೈತರ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿರುವ ಹೊತ್ತಲ್ಲೇ ಇಂದು ದೇಶಾದ್ಯಂತ ಗ್ರಾಮೀಣ ಬಂದ್‌ಗೆ (Rural India Bandh) ಕರೆ ನೀಡಲಾಗಿದೆ. ಬಂದ್ ಪರಿಣಾಮ ಕರ್ನಾಟಕದಲ್ಲಿ (Karnataka) ಹೇಗಿರಬಹುದು ಎಂಬ ಮಾಹಿತಿ ಇಲ್ಲಿದೆ ಬೆಳಗ್ಗೆ 6 ಗಂಟೆಯಿಂದ ಸಂಜೆ 6ರವರೆಗೆ ಬಂದ್ ರಾಜಕೀಯೇತರ ಸಂಘಟನೆಗಳಾದ ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ಕಿಸಾನ್ ಮಜ್ದೂರ್ ಮೋರ್ಛಾ ಸಂಘಟನೆಗಳು ಇಂದು ಗ್ರಾಮೀಣ ಭಾರತ್ ಬಂದ್‌ಗೆ ಕರೆ ನೀಡಿವೆ. ಇಂದು ಬೆಳಗ್ಗೆ 6 ರಿಂದ ಸಂಜೆ 4ರವರೆಗೆ ಗ್ರಾಮೀಣ ಭಾರತ್ ಬಂದ್‌ ಕರೆ ನೀಡಲಾಗಿದೆ. ದೇಶಾದ್ಯಂತ ವಿವಿಧ ರೈತ ಸಂಘಟನೆಗಳು ರಸ್ತೆ ತಡೆ ಮೂಲಕ…

Read More

ದಿನಾ ರಾತ್ರಿ ಮಲಗುವ ಮುನ್ನ ಲವಂಗ ಹಾಕಿ ಕಾಯಿಸಿದ ನೀರನ್ನ ಕುಡಿಯುವುದರಿಂದ ಎಷ್ಟೆಲ್ಲ ಆರೋಗ್ಯಕರ ಲಾಭಗಳು ಅಂತ ನೋಡಿ . ಲವಂಗದಲ್ಲಿ ಹೆಚ್ಚು anti inflammatoŗy anti bactirial ಗುಣಗಳು ಹಾಗೂ ಮಿನರಲ್ಸ್‌ ಇರೋದ್ರಿಂದ  ದೇಹಕ್ಕೆ ತಂಪನ್ನು ಶುಚಿಯಾಗಿ ಇಡುತ್ತದೆ. ಗಮನಿಸಿ: ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಇನ್ನೂ ಹಣ ಬಂದಿಲ್ಲವೇ: ಈ ಕೂಡಲೇ ಈ ಕೆಲಸ ಮಾಡಿ ನೋಡಿ! ಹಾಗಾದ್ರೆ ಇಲ್ಲಿದೆ ನೋಡಿ ದೇಹಕ್ಕೆ ಆಗುವ ಪ್ರಯೋಜನಗಳು 1. ವೇಟ್ ಲಾಸ್ ಅಥವಾ ಬೆಲ್ಲಿ ಫ್ಯಾಟ್ ಲಾಸ್ಟ್ ಮಾಡೋಕೆ ಸಹಾಯ ಮಾಡುತ್ತೆ 2.ಜೀರ್ಣಕ್ರಿಯೆಗೆ ಒಳ್ಳೆಯದು , ಹಾಗೆ ಲಿವರ್ ಹೆಲ್ತ್ ಗೂ ಒಳ್ಳೆಯದು 3.ಬ್ಲಡ್ ಶುಗರ್ ಲೆವೆಲ್ ರೆಗ್ಯುಲೇಟ್ ಮಾಡುತ್ತೆ 4.ಮಲಬದ್ಧತೆ ಆಮ್ಲಿಯತೆ ,ಉರಿಮೂತ್ರ,  ಗ್ಯಾಸ್ಟ್ರಿಕ್ ಇತರ ಹೊಟ್ಟೆಯ ಸಮಸ್ಯೆಗಳು ನಿವಾರಿಸಲು ಸಹಾಯ ಮಾಡುತ್ತದೆ 5.ದೇಹಕ್ಕೆ ಹಾನಿ ಉಂಟು ಮಾಡುವ ಫ್ರೀ ರಾಡಿಕಲ್ ಜೊತೆ ಹೋರಾಡಿ ರೋಗ ನಿರೋಧಕ ಶಕ್ತಿಯನ್ನು ಜಾಸ್ತಿ ಮಾಡುತ್ತದೆ. 6.ಬಾಯಿಯ ದುರ್ವಾಸನೆ  ಬರಲು ಕಾರಣವಾಗುವ ಬ್ಯಾಕ್ಟೀರಿಯಗಳು ನಾಶವಾಗುತ್ತವೆ…

Read More